Tag: Power Bill

  • ಬರೋಬ್ಬರಿ ಏಳೂವರೆ ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಕಂಡು ದಂಗಾದ ಮನೆ ಮಾಲೀಕ!

    ಬರೋಬ್ಬರಿ ಏಳೂವರೆ ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಕಂಡು ದಂಗಾದ ಮನೆ ಮಾಲೀಕ!

    ಮಂಗಳೂರು: ಸರ್ಕಾರ ಉಚಿತ ವಿದ್ಯುತ್ (200 Unit Free Electricity) ಕೊಡೋಕೆ ಮುಂದಾಗಿರೋ ನಡುವೆ ಮಂಗಳೂರಿನ ಉಳ್ಳಾಲ ನಿವಾಸಿಯೋರ್ವರಿಗೆ ಬರೋಬ್ಬರಿ 7 ಲಕ್ಷದ 71 ಸಾವಿರ ಬಿಲ್ (Electricity Bill) ಬಂದು ಶಾಕ್ ಕೊಟ್ಟಿದೆ.

    ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ (Sadashiva Acharya) ಅವರಿಗೆ ಪ್ರತಿ ತಿಂಗಳು ಮೂರು ಸಾವಿರದಷ್ಟು ವಿದ್ಯುತ್ ಬಿಲ್ ಬರುತ್ತಿದ್ದು, ಇದೀಗ ಮೇ ತಿಂಗಳ ಹೊಸ ಬಿಲ್ ಬಂದಿದ್ದು ಅದರಲ್ಲಿ 99,338 ಯುನಿಟ್ ವಿದ್ಯುತ್ ಖರ್ಚಾಗಿದೆ ಎಂದು ಬರೋಬ್ಬರಿ 7 ಲಕ್ಷದ 71 ಸಾವಿರದ 72 ರೂ. ಎಂದು ನಮೂದಾಗಿದೆ.

    ಬಿಲ್ ಮೊತ್ತ ನೋಡಿ ಶಾಕ್ ಆದ ಸದಾಶಿವ ಆಚಾರ್ಯ ಅವರು ಬಿಲ್ ರೀಡರ್ ಬಳಿ ಕೇಳಿದ್ದು, ಅದನ್ನೆಲ್ಲ ಮೆಸ್ಕಾಂ ಕಚೇರಿ (MESCOM Office) ಗೆ ಕೇಳಿ ಎಂದಿದ್ದಾರೆ. ಬಿಲ್ ರೀಡರ್ ನ ಎಡವಟ್ಟಿನಿಂದಾಗಿ ಈ ರೀತಿ ಬಿಲ್ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.  ಇದನ್ನೂ ಓದಿ: ಗೃಹಲಕ್ಷ್ಮಿಗೆ ಅರ್ಜಿ ಸ್ವೀಕಾರ ಪ್ರಕ್ರಿಯೆ ವಿಳಂಬ- ನಾಲ್ಕೈದು ದಿನದ ಬಳಿಕ ಆದೇಶವೆಂದ ಸಚಿವೆ

    ಕಾಂಗ್ರೆಸ್‍ನ ಗ್ಯಾರಂಟಿ (Congress Guarantee) ಯೋಜನೆಗಳಲ್ಲಿ 200 ಯುನಿಟ್ ಉಚಿತ ವಿದ್ಯುತ್ ಯೋಜನೆಯೂ ಒಂದಾಗಿದೆ. ಆದರೆ ಸದ್ಯ ಈ ಯೋಜನೆಯಲ್ಲಿ ಜನ ಸಾಕಷ್ಟು ಗೊಂದಲಕ್ಕೀಡಾಗಿದ್ದಾರೆ. ಕೆಲವಡೆ ಇನ್ನೂ ಕೂಡ ವಿದ್ಯುತ್ ಬಿಲ್‍ಗಳು ಮಾಲೀಕರ ಮನೆ ಸೇರಿಲ್ಲ. ಇನ್ನೂ ಕಲವೆಡೆಗಳಲ್ಲಿ ವಿದ್ಯುತ್ ಬಿಲ್ ನಲ್ಲಿ ಏರಿಕೆ ಕಂಡು ಜನ ಬಿದಿಗಿಳಿದಿದ್ದಾರೆ. ವಿದ್ಯುತ್ ದರ ಏರಿಕೆ ಮಾಡಿರುವುದಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಬಟನೆ ನಡೆಸುತ್ತಿದ್ದಾರೆ.

  • ವಿದ್ಯುತ್ ಬಿಲ್ ವಸೂಲಿಗೆ ಬಂದವರ ಮೇಲೆ ಚಪ್ಪಲಿಯಿಂದ ಹಲ್ಲೆ!

    ವಿದ್ಯುತ್ ಬಿಲ್ ವಸೂಲಿಗೆ ಬಂದವರ ಮೇಲೆ ಚಪ್ಪಲಿಯಿಂದ ಹಲ್ಲೆ!

    ಕೊಪ್ಪಳ: 200 ಯುನಿಟ್ ಕರೆಂಟ್ ಫ್ರೀ (Free Electricity) ಕೊಡ್ತೀವಿ ಅಂತ ಕಾಂಗ್ರೆಸ್ ಸರ್ಕಾರ ಹೇಳಿದ್ದು, ಜನ ಇದನ್ನೇ ನೆಪ ಮಾಡಿಕೊಂಡು ಕರೆಂಟ್ ಬಿಲ್ ಕಟ್ಟಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಅಂತೆಯೇ ಇದೀಗ ಕೊಪ್ಪಳದಲ್ಲಿ ವಿದ್ಯುತ್ ಬಿಲ್ ಕಲೆಕ್ಟ್ ಮಾಡಲು ಬಂದವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

    ಕುಕನಪಳ್ಳಿ ಗ್ರಾಮದ ಚಂದ್ರಶೇಖರಯ್ಯ ಎಂಬವರು ಕಳೆದ ಆರು ತಿಂಗಳಿನಿಂದ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಲೈನ್ ಮ್ಯಾನ್ ಮಂಜುನಾಥ ಬಿಲ್ ವಸೂಲಾತಿಗೆ ತೆರಳಿದ್ದರು. ಈ ವೇಳೆ ವಿದ್ಯುತ್ ಬಿಲ್ (Electricity Bill) ಕಟ್ಟಲ್ಲ, ಕರೆಂಟ್ ಫ್ರೀ ಎಂದು ಹೇಳಿದ್ದಾರೆ, ಅಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಲಾಗಿದೆ.

    ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಮಂಜುನಾಥ್ ಅವರು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಾಂಗ್ರೆಸ್‌ ಗ್ಯಾರಂಟಿ ನೆನಪಿಸಿ ಬಸ್ ಪ್ರಯಾಣಕ್ಕೆ ಟಿಕೆಟ್ ದುಡ್ಡು ಕೊಡದ ಅಜ್ಜಿ: ಕಂಗಾಲಾದ ಕಂಡಕ್ಟರ್

     

  • ನಾವು ಕರೆಂಟ್ ಬಿಲ್ ಕಟ್ಟಲ್ಲ, ಅದ್ಯಾವ್ ನನ್ಮಗ ಬರ್ತಾನೋ ಬರಲಿ- ಬೆಸ್ಕಾಂ ಸಿಬ್ಬಂದಿಗೆ ವೃದ್ಧೆ ಅವಾಜ್

    ನಾವು ಕರೆಂಟ್ ಬಿಲ್ ಕಟ್ಟಲ್ಲ, ಅದ್ಯಾವ್ ನನ್ಮಗ ಬರ್ತಾನೋ ಬರಲಿ- ಬೆಸ್ಕಾಂ ಸಿಬ್ಬಂದಿಗೆ ವೃದ್ಧೆ ಅವಾಜ್

    ತುಮಕೂರು: ನಾವು ಕರೆಂಟ್ ಬಿಲ್ ಕಟ್ಟಲ್ಲ. ಅದ್ಯಾವ್ ನನ್ಮಗ ಬರ್ತಾನೋ ಬರಲಿ ಎಂದು ಬೆಸ್ಕಾಂ (BESCOM) ಸಿಬ್ಬಂದಿಗೆ ವೃದ್ಧೆ ಅವಾಜ್ ಹಾಕಿದ ಪ್ರಸಂಗ ನಡೆದಿದೆ.

    ಜಿ.ಪರಮೇಶ್ವರ್ (G Parameshwar) ಕ್ಷೇತ್ರ ಕೊರಟಗೆರೆ ತಾಲೂಕಿನ ಟಿ.ಗೊಲ್ಲಹಳ್ಳಿಯಲ್ಲಿ ಘಟನೆ ನಡೆದಿದೆ. ಬೆಸ್ಕಾ ಸಿಬ್ಬಂದಿಯು ಮೇ ತಿಂಗಳ ಬಿಲ್ ಕೊಡಲು ತೆರಳಿದ್ದ. ಈ ವೇಳೆ ವೃದ್ಧೆ, ಕಾಂಗ್ರೆಸ್ (Congress) ನವರು ಫ್ರೀ ಕೊಡ್ತಿನಿ ಅಂದಿದ್ರು. ಈಗ ನೀವು ಬಿಲ್ ಕೇಳೋಕೆ ಬಂದಿದ್ರಾ?. ನಾವು ಬಿಲ್ ಕಟ್ಟಲ್ಲ. ರಾಹುಲ್ ಗಾಂಧಿ (Rahul Gandhi), ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್ (DK Shivakumar) ರನ್ನು ಕೇಳಿ ಎಂದು ಕಿಡಿಕಾರಿದ್ದಾರೆ.

    ಸರ್ಕಾರ ಬಂದರೆ ಕರೆಂಟ್ ಫ್ರೀ ಅಂದಿದ್ರು. ಈಗ ನೀವು ಬಿಲ್ ಕೇಳಬೇಡಿ. ಇನ್ಮೆಲಿಂದ ನಮ್ಮೂರಿಗೆ ಬಿಲ್ ಕೇಳೋಕೆ ಬರಬೇಡಿ ಎಂದು ವೃದ್ಧೆ ಮತ್ತು ಮಹಿಳೆಯರು ಬೆಸ್ಕಾಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಬಿಲ್‌ ನೀಡಲು ಬಂದ ಸಿಬ್ಬಂದಿಗೆ ಮಹಿಳೆ ಹಿಗ್ಗಾಮುಗ್ಗ ಕ್ಲಾಸ್‌

  • ವಿದ್ಯುತ್ ಬಿಲ್‍ನಲ್ಲಿ ಅಕ್ರಮ, ಮೂವರ ಅಮಾನತು: ಸುನಿಲ್ ಕುಮಾರ್

    ವಿದ್ಯುತ್ ಬಿಲ್‍ನಲ್ಲಿ ಅಕ್ರಮ, ಮೂವರ ಅಮಾನತು: ಸುನಿಲ್ ಕುಮಾರ್

    ಬೆಂಗಳೂರು: ವಿದ್ಯುತ್ ಬಿಲ್ ನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

    ಮುಳಬಾಗಿಲು ಉಪವಿಭಾಗದ ಮೆಹಬೂಬ್ ಪಾಷ, ಕಿರಿಯ ಸಹಾಯಕ, ಗಾಯತ್ರಮ್ಮ ,ಕಿರಿಯ ಸಹಾಯಕಿ ಹಾಗೂ ಸುಜಾತಮ್ಮ, ಕಿರಿಯ ಸಹಾಯಕಿ ಈ ಮೂವರು ಅಮಾನತಿಗೊಳಗಾದ ಸಿಬ್ಬಂದಿಯಾಗಿದ್ದಾರೆ.

    ಇವರು ಪ್ರತಿ ಮಾಹೆ ಗ್ರಾಹಕರಿಗೆ ವಿದ್ಯುತ್ ಬಿಲ್ಲು ವಿತರಿಸುವ ವೇಳೆಯಲ್ಲಿ ಕೆಲವು ಬಿಲ್ಲುಗಳನ್ನು ಮಾರ್ಪಾಟು ಮಾಡಿ ಅದರ ಮೊತ್ತವನ್ನು ಕಡಿಮೆ ಮಾಡಿ ಆ ಮೂಲಕ ಬೆಸ್ಕಾಂಗೆ ಬರಬೇಕಾದ ವಾಸ್ತವಿಕ ಆದಾಯದಲ್ಲಿ ನಷ್ಟ ಉಂಟಾಗಲು ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಮೇಲೆ ಕೋಲಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಕೂಡ ದಾಖಲಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

    ತಾವು ಇಲಾಖೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಅಕ್ರಮ ಎಸಗಿ ಆ ಮೂಲಕ ಇಲಾಖೆಗೆ ನಷ್ಟವುಂಟು ಮಾಡುವ ಯಾವುದೇ ಅಧಿಕಾರಿ, ಸಿಬ್ಬಂದಿ ಇರಲಿ ಅವರ ಮೇಲೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೆರಡು ದಿನ ಮಳೆ- ಹವಾಮಾನ ಇಲಾಖೆ ಮುನ್ಸೂಚನೆ

    ಪ್ರಸ್ತುತ ಈ ಮೂವರು ಸಿಬ್ಬಂದಿ ಬೇರೆ, ಬೇರೆ ಐಪಿ ವಿಳಾಸಗಳ ಗಣಕಯಂತ್ರಗಳಲ್ಲಿ ಐಡಿಗಳನ್ನು ಉಪಯೋಗಿಸಿ ವಂಚನೆ ಎಸಗಿರುವುದು ದೃಢವಾಗಿರುವುದರಿಂದ ಹಾಗೂ 8 ಆರ್ ಆರ್ ಸಂಖ್ಯೆಗಳಲ್ಲಿ ಒಟ್ಟು 444966-00 ಗಳಷ್ಟು ಮೊತ್ತ ಕಂಪನಿಗೆ ನಷ್ಟವಾಗಿರುವುದರಿಂದ ಇವರ ಮೇಲೆ ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಜೊತೆಗೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯನ್ನು ಸಹ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮನೆಯಂಗಳಕ್ಕೆ ಬಂದ ಹಾವು ಹಿಡಿದು ರಕ್ಷಿಸಿದ ಆರರ ಪೋರಿ

  • ಕೊರೊನಾ ಜೊತೆಗೆ ಹೊಡೀತು ಕರೆಂಟ್ ಶಾಕ್- ಸರಾಸರಿ ಬದಲಿಗೆ ಒನ್ ಟು ಡಬಲ್ ಬಿಲ್

    ಕೊರೊನಾ ಜೊತೆಗೆ ಹೊಡೀತು ಕರೆಂಟ್ ಶಾಕ್- ಸರಾಸರಿ ಬದಲಿಗೆ ಒನ್ ಟು ಡಬಲ್ ಬಿಲ್

    – ಗ್ರಾಹಕರಿಗೆ ಬರೆ, ಸರ್ಕಾರದ ವಸೂಲಿಗೆ ಜನಾಕ್ರೋಶ

    ಬೆಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರ ಬೇಕಾಬಿಟ್ಟಿ ವಿದ್ಯುತ್ ಬಿಲ್ ಶಾಕ್ ಕೊಟ್ಟಿದೆ. ಸರಾಸರಿ ಬಳಕೆ ಆಧಾರದ ಮೇಲೆ ವಿದ್ಯುತ್ ಸರಬರಾಜು ಕಂಪನಿಗಳು ಅವೈಜ್ಞಾನಿಕ ವಿದ್ಯುತ್ ಬಿಲ್ ವಸೂಲಿಗೆ ಇಳಿದಿವೆ.

    ದುರ್ಭಿಕ್ಷ ಕಾಲದಲ್ಲಿ ಅಧಿಕ ಮಾಸ ಎಂಬಂತೆ ಗ್ರಾಹಕರ ಮೇಲೆ ಬರೆ ಎಳೆಯುವ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಮಾರ್ಚ್ ತಿಂಗಳ ಬಿಲ್ ನೀಡಿರಲಿಲ್ಲ. ಮೇ ತಿಂಗಳಿನಲ್ಲಿ ಎರಡೂ ತಿಂಗಳ ಅಂದ್ರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಬಿಲ್ ನೀಡಿವೆ. ಹಿಂದಿನ ಮೂರು ತಿಂಗಳ ಸರಾಸರಿ ಆಧಾರದ ಮೇಲೆ ಬಿಲ್ ನೀಡಿರುವುದು ಅವೈಜ್ಞಾನಿಕ ಎಂದು ಸಾವಿರಾರು ಗ್ರಾಹಕರು ಆರೋಪಿಸುತ್ತಿದ್ದಾರೆ.

    ವಿದ್ಯುತ್ ನಿಗಮ ಮಾರ್ಚ್, ಏಪ್ರಿಲ್ ಬಿಲ್ ಸೇರಿಸಿ ಬಿಲ್ ಕೊಡುತ್ತಿದೆ. 2 ತಿಂಗಳ ಬಿಲ್ ಅಂದರೆ ಮಾಮೂಲಿನ 2 ಪಟ್ಟು ಅಂತಿದ್ದವರಿಗೆ ಶಾಕ್ ಆಗಿದೆ. 2 ಪಟ್ಟು ಬದಲಿಗೆ ನೂರಾರು ರೂಪಾಯಿ ಹೆಚ್ಚಾಗಿ ಬಿಲ್ ಬಂದಿದೆ. ತಿಂಗಳ ಸರಾಸರಿ ವಿದ್ಯುತ್ ಬಿಲ್ 500 ರೂಪಾಯಿ ಬರುತ್ತಿತ್ತು. ಆದರೆ ಈಗ 700, 800, 1400 ರೂಪಾಯಿವರೆಗೆ ಬಿಲ್ ಬಂದಿದೆ. ಮೀಟರ್ ರೀಡಿಂಗ್ ಮಾಡದೆ ಸರಾಸರಿಯಲ್ಲಿ ಬಿಲ್ ಹಾಕಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯುತ್ ನಿಗಮವು ಸಾಫ್ಟ್‌ವೇರ್ ಸಮಸ್ಯೆಯಿಂದ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂದು ಹೇಳಿದೆ. ಇತ್ತ ಬಿಲ್ ಲೋಪ-ದೋಷ ಶೀಘ್ರದಲ್ಲೇ ಸರಿಪಡಿಸ್ತೇವೆ ಅಂತ ಅಧಿಕಾರಿಗಳ ಸಬೂಬು ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಇದೇ ಸಮಸ್ಯೆ ಉಂಟಾಗಿದೆ. ಕೆಲವರು ಲಾಕ್‍ಡೌನ್ ಆರಂಭದಲ್ಲೇ ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದಾರೆ. ಸುಮಾರು ಒಂದೂವರೆ ತಿಂಗಳು ಕರೆಂಟೇ ಬಳಸಿಲ್ಲ. ಆದರೂ ಅವರಿಗೆಲ್ಲಾ ಡಬಲ್, ತ್ರಿಬಲ್ ಬಿಲ್ ಬಂದುಬಿಟ್ಟಿದೆ.

    ಬೆಂಗಳೂರು ಗ್ರಾಹಕ ಕೃಷ್ಣಪ್ಪ ಅವರಿಗೆ ಫೆಬ್ರವರಿನಲ್ಲಿ 2,397 ರೂ. ಬಿಲ್ ಬಂದಿತ್ತು. ಏಪ್ರಿಲ್ ಬಿಲ್ ಬಂದಿಲ್ಲ. ಆದರೂ ಪೇಟಿಎಂ ಮೂಲಕ ಅವರು 2,263 ರೂ. ಕಟ್ಟಿದ್ದಾರೆ. ಈಗ 5,409 ರೂ. ಬಿಲ್ ಬಂದಿದೆ.

    ಕರೆಂಟ್ ಶಾಕ್ ಮರ್ಮ:
    * ವಿದ್ಯುತ್ ಬಳಕೆ ಸ್ಲ್ಯಾಬ್ ಆಧಾರದಲ್ಲಿ ಬಿಲ್ ಕೊಡ್ತಿವೆ
    * ವಿದ್ಯುತ್ ಬಳಕೆ ಆಧರಿಸಿ ಬರುವ ಯೂನಿಟ್ ಮೇಲೆ ಸ್ಲ್ಯಾಬ್, ಶುಲ್ಕ ನಿಗದಿ
    * ಉದಾ: ತಿಂಗಳಿಗೆ 30 ಯೂನಿಟ್ ಬಳಕೆಗೆ ಪ್ರತಿ ಯೂನಿಟ್‍ಗೆ 3.75 ರೂ. ಇದ್ದರೆ, 70 ಯೂನಿಟ್‍ವಗಿನ ಬಳಕೆಗೆ ಪ್ರತಿ ಯೂನಿಟ್‍ಗೆ 5.20 ರೂಪಾಯಿ
    * 100 ಯೂನಿಟ್‍ವರೆಗಿನ ಬಳಕೆಗೆ ಪ್ರತಿ ಯೂನಿಟ್‍ಗೆ 6.75 ರೂ.
    * 100 ಯೂನಿಟ್ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ 7.80 ರೂ. ಇದೆ.
    * ಆದರೆ, ಮೀಟರ್ ರೀಡಿಂಗ್ ಸಂದರ್ಭದಲ್ಲಿ 2 ತಿಂಗಳು ಒಟ್ಟಾಗಿ ಬಿಲ್ ಮಾಡ್ತಿದ್ದಾರೆ.
    * ಇದೇ ಡಬಲ್, ತ್ರಿಬಲ್ ಬಿಲ್ ಬರ್ತಿರೋದಕ್ಕೆ ಕಾರಣ
    * ಕಂಪ್ಯೂಟರ್ ಸಾಫ್ಟ್‍ವೇರ್ ಈ ಬಿಲ್‍ಗಳನ್ನು ಸರಾಸರಿ ಆಧಾರದ ಮೇಲೆ ಜನರೇಟ್ ಮಾಡ್ತಿದೆ.
    * ಸ್ಲ್ಯಾಬ್ ವಿಚಾರ ಸಂಬಂಧ ಸಾಫ್ಟ್‍ವೇರ್‍ನಲ್ಲಿ ಗೊಂದಲ ಆಗಿರೋ ಸಾಧ್ಯತೆ ಇದೆ.