Tag: power

  • ಬೆಂಗಳೂರಿನಲ್ಲಿ ಶನಿವಾರ, ಭಾನುವಾರ ವಿದ್ಯುತ್ ವ್ಯತ್ಯಯ – ನಿಮ್ಮ ನಗರ ಇದ್ಯಾ ಚೆಕ್‌ ಮಾಡಿ

    ಬೆಂಗಳೂರಿನಲ್ಲಿ ಶನಿವಾರ, ಭಾನುವಾರ ವಿದ್ಯುತ್ ವ್ಯತ್ಯಯ – ನಿಮ್ಮ ನಗರ ಇದ್ಯಾ ಚೆಕ್‌ ಮಾಡಿ

    ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಹೂಡಿ ಸ್ಟೇಷನ್ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

    ಎಲ್ಲೆಲ್ಲಿ ವ್ಯತ್ಯಯ?
    ಹುಡಿ ವಿಲೇಜ್, ತಿಗಳರಪಾಳ್ಯ, ಸೀತಾರಾಮಪಾಳ್ಯ, ಬಸವನಗರ, ಸೊನ್ನೆಹಳ್ಳಿ, ಎನ್‌ಜಿಎಫ್‌ ಕೈಗಾರಿಕಾ ಪ್ರದೇಶ, ಶಿವರಾಜ್ ಫ್ಯಾಕ್ಟರಿ, ಇಎಸ್ಐ ರಸ್ತೆ, ವಿಎಸ್ಎನ್ಎಲ್ ಡೇಟಾ ಸೆಂಟರ್, ಪುರವ ಪಾರ್ಕ್ ವಿಲಾಸ್, ಶಿವಗಂಗಾ ಲೇಔಟ್, ಅನುಗ್ರಹ ಲೇಔಟ್, ಚಿನ್ನಪ್ಪ ಲೇಔಟ್, ಔಟರ್ ರಿಂಗ್ ರಸ್ತೆ, ರಾಮಕೃಷ್ಣ ರೆಡ್ಡಿ ಲೇಔಟ್, ಗರುಡಾಚಾರ್ ಪಾಳ್ಯ, ಲಕ್ಷ್ಮೀ ಸಾಗರ, ಮಹೇಶ್ವರಮ್ಮ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

    ಪೀಣ್ಯ ವ್ಯಾಪ್ತಿಯಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ
    ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಪೀಣ್ಯ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವಿ: ಡಿಕೆಶಿ

    ಎಲ್ಲೆಲ್ಲಿ ವ್ಯತ್ಯಯ?
    ಹೆಚ್. ಎಮ್.ಟಿ ರಸ್ತೆ, ಆಆರ್‌ಎನ್‌ಎಸ್‌ ಅಪಾರ್ಟ್‌ಮೆಂಟ್‌, ಸಿಎಂಟಿಐ, ಬರ‍್ಲಿಂಗಪ್ಪ ಗಾರ್ಡನ್‌, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಟೆಲಿಫೋನ್ ಎಕ್ಸ್ಚೇಂಜ್, 6ನೇ ಕ್ರಾಸ್, ರಿಲಯನ್ಸ್ ಕಮ್ಯುನಿಕೇಷನ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ. ಇದನ್ನೂ ಓದಿ: ಡಾ. ವಿಷ್ಣು ಅಭಿಮಾನ ಸ್ಮಾರಕ ಪುತ್ಥಳಿ ನಿರ್ಮಾಣಕ್ಕೆ ಚಾಲನೆ

    ಮಲಯಾಳಿ ಅತಿಥಿ ಗೃಹ ರಸ್ತೆ, ಕೆಎಚ್‌ಬಿ ಲೇಔಟ್, ರಾಜೇಶ್ವರಿನಗರ, ಆಕಾಶ್ ಥೀಟರ್ ರಸ್ತೆ, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ. ಭಿರವೇಶ್ವರ ನಗರ, ಬ್ಯಾಂಕ್ ಕಾಲೋನಿ, 6ನೇ ಮುಖ್ಯ ರಸ್ತೆ, ವಿ 5ನೇ ಮುಖ್ಯ ರಸ್ತೆ, ಯುಕೊ ಬ್ಯಾಂಕ್ ರಸ್ತೆ, 7ನೇ ಮುಖ್ಯ ರಸ್ತೆ, 3ನೇ ಹಂತ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, ಇಎಸ್ಐಸಿ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶ

    ನೆಲಗೆದರನಹಳ್ಳಿ ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

    ಕೆಂಪಯ್ಯ ಗಾರ್ಡನ್‌, ತಿಗಳರಪಾಳ್ಯ ಮುಖ್ಯ ರಸ್ತೆ, ಮಾರುತಿ ಇಂಡಸ್ಟ್ರಿಯಲ್ ಎಸ್ಟೇಟ್, ನೆಲಿಕಾಗಡರನಹಳ್ಳಿ, ಹೆಚ್ ಎಂ ಟಿ ಲೇಔಟ್, ಶಿವಪುರ, ಗೃಹಲಕ್ಷ್ಮಿ ಲೇಔಟ್, ಶಿವಪುರ ಬೆಳ್ಮಾರ್ ಲೇಔಟ್, ವಿನಾಯಕನಗರ, 8ನೇ ಮೈಲ್ ರಸ್ತೆ, ಜಾಲಹಳ್ಳಿ ಕ್ರಾಸ್, ಕೆ.ಎಲ್.ಎ.ಪಿ.ಎಲ್. ಆಂಟಿಬಯೋಟಿಕ್ಸ್ ಪ್ರೈವೇಟ್ ಲಿಮಿಟೆಡ್, ರುಕ್ಮಿಣಿನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯತ್ಯಯ ಉಂಟಾಗಲಿದೆ.

  • ಅರ್ಧದಷ್ಟು ವಿದ್ಯುತ್‌ ಸರಬರಾಜು ಕಡಿತ – ಬಾಂಗ್ಲಾಗೆ ಅದಾನಿ ಪವರ್‌ ಶಾಕ್‌

    ಅರ್ಧದಷ್ಟು ವಿದ್ಯುತ್‌ ಸರಬರಾಜು ಕಡಿತ – ಬಾಂಗ್ಲಾಗೆ ಅದಾನಿ ಪವರ್‌ ಶಾಕ್‌

    ನವದೆಹಲಿ: ಅದಾನಿ ಪವರ್‌ನ (Adani Power) ಅಂಗ ಸಂಸ್ಥೆಯಾದ ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್ (APJL) ಬಾಂಗ್ಲಾದೇಶಕ್ಕೆ (Bangladesh) ತನ್ನ ವಿದ್ಯುತ್ ಸರಬರಾಜನ್ನು ಅರ್ಧದಷ್ಟು ಕಡಿಮೆ ಮಾಡಿದೆ.

    846 ದಶಲಕ್ಷ ಡಾಲರ್‌ ಹಣವನ್ನು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಅದಾನಿ ಕಂಪನಿ ಬಾಂಗ್ಲಾದೇಶಕ್ಕೆ ವಿದ್ಯುತ್‌ ಸರಬರಾಜನ್ನು ಕಡಿತಗೊಳಿಸಿದೆ.

    ಗುರುವಾರ ರಾತ್ರಿಯಿಂದ ವಿದ್ಯುತ್‌ ಕಡಿತದಿಂದಾಗಿ ಬಾಂಗ್ಲಾದೇಶಲ್ಲಿ 1,600 ಮೆಗಾವ್ಯಾಟ್‌ಗಳನ್ನು (MW) ವಿದ್ಯುತ್ ಕೊರತೆಯಾಗಿದೆ. 1,496 MW ಅದಾನಿ ಸ್ಥಾವರವು ಈಗ ಅರ್ಧ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೇವಲ 700 MW ವಿದ್ಯುತ್‌ ಮಾತ್ರ ಉತ್ಪಾದಿಸುತ್ತದೆ.

    ಅದಾನಿ ಪವರ್ ತನ್ನ ಪೂರೈಕೆಯನ್ನು ಅರ್ಧದಷ್ಟು ಕಡಿಮೆಗೊಳಿಸುವುದರಿಂದ ಕೈಗಾರಿಕೆ, ವ್ಯವಹಾರಗಳು ಮತ್ತು ಗೃಹ ಬಳಕೆಯ ಮನೆಗಳಿಗೂ ಸಮಸ್ಯೆಯಾಗುತ್ತಿದೆ. ಇದನ್ನೂ ಓದಿ: ವಕ್ಫ್ ಆಸ್ತಿಯನ್ನು ಅಲ್ಲಾನ ಆಸ್ತಿ ಅಂತೀವಿ – ಜಮೀರ್

    ಬಾಂಗ್ಲಾದೇಶದ ಪವರ್ ಡೆವಲಪ್‌ಮೆಂಟ್ ಬೋರ್ಡ್ (PDB) ತನ್ನ ಬಾಕಿಗಳನ್ನು ಪಾವತಿಸಲು ಕೆಲಸ ಮಾಡುತ್ತಿದೆ. ಬಾಂಗ್ಲಾದೇಶ ಕೃಷಿ ಬ್ಯಾಂಕ್ ಅದಾನಿ ಪವರ್‌ಗೆ 170.03 ಮಿಲಿಯನ್ ಡಾಲರ್‌ ಸಾಲದ ಪತ್ರವನ್ನು ನೀಡಲು ಒಪ್ಪಿಕೊಂಡಿದ್ದರೂ, ಸೀಮಿತ ಡಾಲರ್ ಲಭ್ಯತೆಯಿಂದಾಗಿ ಅದನ್ನು ಪಾವತಿಸಲು ಸಾಧ್ಯವಾಗಲಿಲ್ಲ.

     ದಂಗೆಯ ಬಳಿಕ ಬಾಂಗ್ಲಾದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಬಾಂಗ್ಲಾದೇಶ ಬ್ಯೂರೋ ಆಫ್​ ಸ್ಟಾಟಿಸ್ಟಿಕ್ಸ್​ ಪ್ರಕಾರ ಗ್ರಾಹಕ ಹಣದುಬ್ಬರ 12 ವರ್ಷಕ್ಕಿಂತ ಹೆಚ್ಚಾಗಿದ್ದು, ಶೇ. 11.6ಕ್ಕೆ ತಲುಪಿದೆ. ಅದರಲ್ಲೂ ಆಹಾರ ಹಣದುಬ್ಬರವು ಕಳೆದ 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 14 ಪ್ರತಿಶತವನ್ನು ಮೀರಿದೆ. ಹಣದುಬ್ಬರ ನಿಯಂತ್ರಿಸಲು ಬಾಂಗ್ಲಾ ಕೇಂದ್ರ ಬ್ಯಾಂಕ್‌ ರೆಪೋ ದರವನ್ನು 10% ಏರಿಕೆ ಮಾಡಿದೆ.

     

  • ದೆಹಲಿ ಏರ್‌ಪೋರ್ಟ್‌ನಲ್ಲಿ ಕೈಕೊಟ್ಟ ಕರೆಂಟ್!

    ದೆಹಲಿ ಏರ್‌ಪೋರ್ಟ್‌ನಲ್ಲಿ ಕೈಕೊಟ್ಟ ಕರೆಂಟ್!

    ನವದೆಹಲಿ: ನೀರಿನ ಸಮಸ್ಯೆಯ ಜೊತೆಗೆ ರಾಷ್ಟ್ರರಾಜಧಾನಿಯಲ್ಲಿ ವಿದ್ಯುತ್ ಸಮಸ್ಯೆಯೂ (Power outage at Delhi Airport) ಉಲ್ಬಣಿಸಿದಂತೆ ಕಾಣುತ್ತಿದೆ. ವಿದ್ಯುತ್ ಸಮಸ್ಯೆಯ ಪರಿಣಾಮ ನೇರವಾಗಿ ದೆಹಲಿ ಏರ್‌ಪೋರ್ಟ್ ಮೇಲೆ ಬೀರಿದೆ.

    ಇಂದು ಮಧ್ಯಾಹ್ನ 2 ಗಂಟೆಗೆ ಟರ್ಮಿನಲ್ ಮೂರರಲ್ಲಿ ವಿದ್ಯುತ್ ಕೈಕೊಟ್ಟು, ಕೌಂಟರ್ ಗಳು ಬಂದ್ ಆಗಿದ್ದವು. ಇ-ಗೇಟ್‍ಗಳು ಕೆಲಸ ಮಾಡಲಿಲ್ಲ. ಲಗೇಜ್ ಸ್ವೀಕಾರ ಕೇಂದ್ರ ಸ್ಥಗಿತಗೊಂಡಿತ್ತು. ಇದರಿಂದ ಸುಮಾರು ಒಂದು ಗಂಟೆ ಕಾಲ ಪ್ರಯಾಣಿಕರು ಪರದಾಡಿದ್ರು.

    ಹೆಚ್ಚಿನ ಎಸಿ ಲೋಡ್‌ನಿಂದಾಗಿ, ಪೂರ್ಣ-ಪವರ್‌ಗೆ ಮರಳಲು ಒಂದೆರಡು ನಿಮಿಷಗಳನ್ನು ತೆಗೆದುಕೊಂಡಿತು. ಏರ್‌ಪೋರ್ಟ್ ಆಡಳಿತ ಮಂಡಳಿ ಸಮಸ್ಯೆಯನ್ನು ಹರಸಾಹಸ ಮಾಡಿ ಸರಿಪಡಿಸಿತು. ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಅದೃಷ್ಟವಶಾತ್ ವಿಮಾನಗಳ ಟೇಕ್ ಆಫ್, ಲ್ಯಾಂಡಿಂಗ್, ಎಟಿಸಿ ನಿರ್ವಹಣೆ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ. ಇದನ್ನೂ ಓದಿ: ದೆಹಲಿಯಲ್ಲಿ ನೀರಿಗೆ ಹಾಹಾಕಾರ – ಜಲಮಂಡಳಿ ಕಚೇರಿ ಧ್ವಂಸಗೊಳಿಸಿದ ಪ್ರತಿಭಟನಾಕಾರರು

  • ಶಕ್ತಿ ಹೇಳಿಕೆಗೆ ಮೋದಿ ವಾಗ್ದಾಳಿ ಬೆನ್ನಲ್ಲೇ ರಾಹುಲ್‌ ಗಾಂಧಿ ಸ್ಪಷ್ಟನೆ

    ಶಕ್ತಿ ಹೇಳಿಕೆಗೆ ಮೋದಿ ವಾಗ್ದಾಳಿ ಬೆನ್ನಲ್ಲೇ ರಾಹುಲ್‌ ಗಾಂಧಿ ಸ್ಪಷ್ಟನೆ

    ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನ ಭಾರೀ ವಿವಾದ ಸೃಷ್ಟಿಸಿರುವ ‘ಶಕ್ತಿ’ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸ್ಪಷ್ಟನೆ ನೀಡಿದ್ದಾರೆ.

    ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ರಾಗಾ, ಮೋದಿ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದಾರೆ. ಅವರು ನನ್ನ ಹೇಳಿಕೆಗಳನ್ನು ತಿರುಚಿ, ಅದರ ಅರ್ಥ ಬದಲಾಯಿಸಲು ಪ್ರಯತ್ನಿಸುತ್ತಾರೆ. ಯಾಕೆಂದರೆ ನಾನು ಸತ್ಯವನ್ನೇ ನುಡಿದಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಎಕ್ಸ್‌ನಲ್ಲೇನಿದೆ..?: ಮೋದಿಯವರು ನನ್ನ ಮಾತುಗಳನ್ನು ಇಷ್ಟಪಡುವುದಿಲ್ಲ. ಅವರು ಯಾವಾಗಲೂ ನನ್ನ ಹೇಳಿಕೆಗಳನ್ನು ಯಾವುದೋ ಒಂದು ರೀತಿಯಲ್ಲಿ ತಿರುಚಿ ಅವುಗಳ ಅರ್ಥವನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ನಾನು ಗಾಢವಾದ ಸತ್ಯವನ್ನು ಹೇಳಿದ್ದೇನೆ ಎಂದು ಅವರಿಗೆ ಕೂಡ ತಿಳಿದಿದೆ. ನಾನು ಹೇಳಿದ ಶಕ್ತಿ, ನಾವು ಹೋರಾಡುತ್ತಿರುವ ಶಕ್ತಿ, ಆ ಶಕ್ತಿಯ ಮುಖವಾಡ ಮೋದಿಯವರಾಗಿದ್ದಾರೆ. ಅಂತಹ ಶಕ್ತಿಯೇ ಇಂದು ಭಾರತದ ಧ್ವನಿಯನ್ನು ಸೆರೆಹಿಡಿದಿದೆ.

    ಭಾರತದ ಸಂಸ್ಥೆಗಳು, ಸಿಬಿಐ, ಐಟಿ, ಇಡಿ, ಚುನಾವಣಾ ಆಯೋಗ, ಮಾಧ್ಯಮಗಳು, ಭಾರತೀಯ ಉದ್ಯಮ ಮತ್ತು ಭಾರತದ ಸಂಪೂರ್ಣ ಸಾಂವಿಧಾನಿಕ ರಚನೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಧಿಕಾರಕ್ಕಾಗಿ ನರೇಂದ್ರ ಮೋದಿಯವರು ಭಾರತೀಯ ಬ್ಯಾಂಕ್‌ಗಳ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡುತ್ತಾರೆ. ಆದರೆ ಭಾರತೀಯ ರೈತ ಕೆಲವೇ ಕೆಲವು ಸಾವಿರ ರೂಪಾಯಿಗಳ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

    ಅದೇ ಅಧಿಕಾರವನ್ನು ಭಾರತದ ಬಂದರುಗಳು, ಭಾರತದ ವಿಮಾನ ನಿಲ್ದಾಣಗಳನ್ನು ನೀಡಲಾಗುತ್ತದೆ. ಆದರೆ ಭಾರತದ ಯುವಕರಿಗೆ ಅಗ್ನಿವೀರನ ಉಡುಗೊರೆಯನ್ನು ನೀಡಲಾಗುತ್ತದೆ. ಅದು ಅವರ ಧೈರ್ಯವನ್ನು ಕಸಿಯುತ್ತದೆ. ಅದೇ ಶಕ್ತಿಗೆ ಹಗಲಿರುಳು ಸೆಲ್ಯೂಟ್ ಹೊಡೆಯುತ್ತಲೇ ದೇಶದ ಮಾಧ್ಯಮಗಳು ಸತ್ಯವನ್ನು ಹತ್ತಿಕ್ಕುತ್ತವೆ.

    ಶಕ್ತಿಯ ಗುಲಾಮ ನರೇಂದ್ರ ಮೋದಿಯವರು ದೇಶದ ಬಡವರ ಮೇಲೆ GST ಹೇರುತ್ತಾರೆ. ಹಣದುಬ್ಬರವನ್ನು ನಿಯಂತ್ರಿಸದೆ, ಆ ಶಕ್ತಿಯನ್ನು ಹೆಚ್ಚಿಸಲು ದೇಶದ ಆಸ್ತಿಯನ್ನು ಹರಾಜು ಹಾಕುತ್ತಾರೆ. ನಾನು ಆ ಶಕ್ತಿಯನ್ನು ಗುರುತಿಸುತ್ತೇನೆ. ಆ ಶಕ್ತಿಯನ್ನು ನರೇಂದ್ರ ಮೋದಿಯವರೂ ಗುರುತಿಸಿದ್ದಾರೆ. ಅವರು ಯಾವುದೇ ರೀತಿಯ ಧಾರ್ಮಿಕ ಶಕ್ತಿಯಲ್ಲ, ಅವರು ಅಧರ್ಮ, ಭ್ರಷ್ಟಾಚಾರ ಮತ್ತು ಸುಳ್ಳುತನದ ಶಕ್ತಿ. ಆದ್ದರಿಂದಲೇ ನಾನು ಅವರ ವಿರುದ್ಧ ದನಿ ಎತ್ತಿದಾಗಲೆಲ್ಲ ಮೋದಿಯವರು ಮತ್ತು ಅವರ ಸುಳ್ಳಿನ ಯಂತ್ರ ಕೆರಳುತ್ತದೆ ಎಂದು ರಾಗಾ ಸುದೀರ್ಘವಾಗಿ ಬರೆದುಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಇವಿಎಂ, ಇಡಿ, ಸಿಬಿಐ, ಐಟಿ ಇಲಾಖೆಯಲ್ಲಿ ರಾಜನ ಆತ್ಮ ನೆಲೆಸಿದೆ- ಮೋದಿ ವಿರುದ್ಧ ರಾಗಾ ವಾಗ್ದಾಳಿ

    ರಾಹುಲ್‌ ಹೇಳಿದ್ದೇನು..?: ಭಾನುವಾರ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ತಮ್ಮ ಭಾರತ್‌ ಜೋಡೋ ಯಾತ್ರೆಯ ಸಮಾರೋಪದಲ್ಲಿ ಮಾತನಾಡುತ್ತಾ ರಾಹುಲ್‌ ಗಾಂಧಿಯವರು, ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಪ್ರಶ್ನಿಸಲು ‘ಶಕ್ತಿ’ ಎಂದು ಕರೆದಿದ್ದರು. ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪದವಿದೆ. ನಾವು ಒಂದು ಶಕ್ತಿ (ರಾಜ್ಯದ ಶಕ್ತಿ) ವಿರುದ್ಧ ಹೋರಾಡುತ್ತಿದ್ದೇವೆ. ಆ ಶಕ್ತಿ ಎಂದರೇನು ಮತ್ತು ಅದು ನಮಗೆ ಏನು ನೀಡುತ್ತದೆ? ಇವಿಎಂಗಳ ಆತ್ಮ ಮತ್ತು ಸಮಗ್ರತೆಯನ್ನು ರಾಜನಿಗೆ (ಮೋದಿ) ವ್ಯಾಪಾರ ಮಾಡಲಾಗಿದೆ. ಇದು ಸತ್ಯ. ಇವಿಎಂಗಳು ಮಾತ್ರವಲ್ಲದೆ ದೇಶದ ಪ್ರತಿಯೊಂದು ಸ್ವಾಯತ್ತ ಸಂಸ್ಥೆಗಳು, ಇಡಿ, ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆಯು ಕೇಂದ್ರಕ್ಕೆ ವ್ಯಾಪಾರ ಮಾಡಿದೆ ಎಂದು ಹೇಳಿಕೆ ನೀಡಿದ್ದರು.

    ಮೋದಿ ಹೇಳಿದ್ದೇನು..?: ರಾಹುಲ್‌ ಶಕ್ತಿ ಹೇಳಿಕೆಗೆ ಇಂದು ಕರ್ನಾಟಕದ ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಹಿಂದೂ ಸಮಾಜ ಅಂತ್ಯ ಮಾಡಲು ಇಂಡಿಯಾ ಸಂಕಲ್ಪ ಮಾಡಿದೆ. ಈ ಬಗ್ಗೆ ನಿನ್ನೆ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ಘೋಷಣೆ ಮಾಡಿದ್ದಾರೆ. ನಾನು ಹಿಂದೂ ಧರ್ಮದ ಮೂಲಕ ಬಂದಿದ್ದೇನೆ. ನಾನು ಈಗಲೂ ಶಕ್ತಿ ಉಪಾಸನೆ ಮಾಡುತ್ತೇನೆ. ನನ್ನ ದೇಹದ ಕಣ…ಕಣದಲ್ಲಿ ಹಿಂದೂ ಧರ್ಮವಿದೆ. ನಿನ್ನೆ ಹಿಂದೂ ಶಕ್ತಿಯ ವಿನಾಶ ಮಾಡುವ ಸಂಕಲ್ಪ ಮಾಡಿದ್ದಾರೆ. ಅದು ಶಿವಾಜಿ ಮಹಾರಾಜರ ಭೂಮಿಯಲ್ಲಿ ಘೋಷಣೆ ಮಾಡಿದ್ದಾರೆ. ಹಿಂದೂ ಸಮಾಜಕ್ಕಾಗಿ ಹೋರಾಡಿದ ಶಿವಾಜಿ ಭೂಮಿಯಲ್ಲಿಯೇ ಘೋಷಣೆ ಆಗಿದೆ. ಬಾಲಠಾಕ್ರೆಯ ಕುಟುಂಬಸ್ಥರು ಕೂಡ ಅಲ್ಲಿ ಇದ್ದರು. ನನಗೆ ಇದು ತುಂಬಾ ಬೇಸರ ತಂದಿದೆ ಎಂದಿದ್ದರು. ಆ ಬಳಿಕ ರಾಗಾ ಎಕ್ಸ್‌ ಮೂಲಕ ಸ್ಪಷ್ಟನೆ ನೀಡಿದರು.

  • ನಾನೊಬ್ಬ ಕ್ರಿಶ್ಚಿಯನ್ ಧರ್ಮಸ್ಥಳದಲ್ಲಿ ಆಣೆ ಮಾಡಿದ್ರೆ ಯಾರು ನಂಬುತ್ತಾರೆ?: ಕೆ.ಜೆ ಜಾರ್ಜ್

    ನಾನೊಬ್ಬ ಕ್ರಿಶ್ಚಿಯನ್ ಧರ್ಮಸ್ಥಳದಲ್ಲಿ ಆಣೆ ಮಾಡಿದ್ರೆ ಯಾರು ನಂಬುತ್ತಾರೆ?: ಕೆ.ಜೆ ಜಾರ್ಜ್

    – ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಪೂರೈಸಲು ಕ್ರಮ
    – ಹೆಚ್‍ಡಿಕೆ ಆರೋಪ ತಳ್ಳಿ ಹಾಕಿದ ಸಚಿವ ಜಾರ್ಜ್

    ನವದೆಹಲಿ: ನಾನೊಬ್ಬ ಕ್ರಿಶ್ಚಿಯನ್ ಧರ್ಮಸ್ಥಳದಲ್ಲಿ (Dharmasthala) ಆಣೆ ಮಾಡಿದರೆ ಯಾರು ನಂಬುತ್ತಾರೆ?. ಆತ್ಮಸಾಕ್ಷಿಯೇ ನನ್ನ ದೇವರು ಅದರ ಆಣೆಗೂ ನಾನು ಯಾವುದೇ ಹಣ ಪಡೆದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ (K J George) ಸ್ಪಷ್ಟಪಡಿಸಿದರು.

    ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ಆರೋಪಗಳಿಗೆ ತಿರುಗೇಟು ನೀಡಿದರು. ಹೆಚ್.ಡಿ ಕುಮಾರಸ್ವಾಮಿ ವರ್ಗಾವಣೆ ದಂಧೆ ಅದಕ್ಕಾಗಿ ಹಣಪಡೆದ ಆಣೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಾರ್ಜ್, ನಾನು 1989 ರಲ್ಲಿ ಮೊದಲ ಬಾರಿ ಮಂತ್ರಿಯಾದವನು, ಕುಮಾರಸ್ವಾಮಿ ಸಂಪುಟದಲ್ಲೂ ಮಂತ್ರಿಯಾಗಿದ್ದೇನೆ. ನನ್ನ ಅವಧಿಯಲ್ಲಿ ನಾನು ವರ್ಗಾವಣೆ, ಪ್ರಮೋಷನ್ ಗೆ ಹಣ ಪಡೆದಿಲ್ಲ. ನನ್ನ ಗಮನಕ್ಕೆ ಬಾರದೆ ಆಗುವ ಘಟನೆಗಳಿದ್ದರೆ ನಾನು ಕ್ರಮ ಕೈಗೊಳ್ಳುವೆ, ಸರ್ಕಾರದ ಮೇಲೆ ಆಪಾದನೆ ದಾಖಲೆಗಳಿದ್ದರೆ ನೀಡಲಿ. ನಾನೊಬ್ಬ ಕ್ರಿಶ್ಚಿಯನ್ ಧರ್ಮಸ್ಥಳದಲ್ಲಿ ಆಣೆ ಮಾಡಿದರೆ ಯಾರು ನಂಬುತ್ತಾರೆ? ಆತ್ಮಸಾಕ್ಷಿ ನನ್ನ ದೇವರು ಅದರ ಆಣೆಗೂ ನಾನು ಯಾವುದೇ ಹಣ ಪಡೆದಿಲ್ಲ ಸ್ಪಷ್ಟಪಡಿಸಿದರು.

    ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಇಲ್ಲ, ಸ್ವಲ್ಪ ಪ್ರಮಾಣದಲ್ಲಿ ಕೊರತೆ ಇದೆ. ಅದನ್ನು ಸರಿದೂಗಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ವಿದ್ಯುತ್ ಖರೀದಿಯಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಆರೋಪ ಆಧಾರ ರಹಿತ. ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಿಂದ ವಿದ್ಯುತ್ ಕೊರತೆಯಾಗಿಲ್ಲ. ಈ ಬಾರಿ ಮಳೆಯಾಗದ ಕಾರಣ ಜಲ ವಿದ್ಯುತ್ ಕೊರತೆಯಾಗಿದೆ. ಗಾಳಿಯೂ ಸರಿಯಾಗಿ ಬೀಸದ ಹಿನ್ನೆಲೆ ಪವನ ಶಕ್ತಿಯೂ ಕಡಿಮೆಯಾಗಿದೆ. ಕಲ್ಲಿದ್ದಲು ವಿದ್ಯುತ್ ಗುಣಮಟ್ಟದ ಕಾರಣದಿಂದ ಕಡಿಮೆಯಾಗಿದೆ. ಈ ಹಿನ್ನೆಲೆ ವಿದ್ಯುತ್ (Electricity) ಕೊರತೆ ಎದುರಿಸುತ್ತಿದ್ದೇವೆ ಎಂದರು. ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾದ್ರೆ ಅಮರಣಾಂತ ಉಪವಾಸ ಮಾಡ್ತೀನಿ: ಹೆಚ್‌ಡಿಕೆ ಪ್ರತಿಜ್ಞೆ

    ಇದರ ಜೊತೆಗೆ ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದ ಹಿನ್ನೆಲೆ ಪಂಪಸೆಟ್‍ಗಳ ಮೇಲಿನ ಅವಲಂಬನೆ ಹೆಚ್ಚಿದೆ. ಈ ಹಿನ್ನೆಲೆ ಕೃಷಿ ವಲಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದೆ. ಕಮರ್ಷಿಯಲ್ ಮತ್ತು ಕೊರೊನಾ ಬಳಿಕ ಕೈಗಾರಿಕೆಗಳ ಉತ್ಪಾದನೆ ಹೆಚ್ಚಿದ್ದು, ಈ ವಲಯಗಳಲ್ಲೂ ವಿದ್ಯುತ್ ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿದೆ. ಗೃಹ ಜ್ಯೋತಿಯಿಂದ ಹೆಚ್ಚಿನ ಹೊರೆ ಎನ್ನುವುದು ಸರಿಯಲ್ಲ. ವಿದ್ಯುತ್ ಕೊರತೆ ಸರಿದೂಗಿಸಲು ಧರ್ಮಲ್ ಪ್ಲ್ಯಾಂಟ್‍ಗಳನ್ನು ನಿರ್ವಹಣೆ ಮಾಡಬೇಕಿತ್ತು. ಅದಾಗ್ಯೂ ಉತ್ಪಾದನೆಗೆ ಚಾಲನೆ ನೀಡಲಾಗಿದೆ. ಬೇಡಿಕೆಯನ್ನು ಪೂರೈಸಲು ವಿದ್ಯುತ್ ಮಾರುಕಟ್ಟೆಯಿಂದ 700-800 ಎಂಡಬ್ಲ್ಯೂ ಖರೀದಿಸಲಾಗುತ್ತಿದೆ. ಪಂಜಾಬ್ ನಿಂದ 300 ಎಂಡಬ್ಲ್ಯೂ ಉತ್ತರ ಪ್ರದೇಶದಿಂದ 500 ಎಂಡಬ್ಲ್ಯೂ ಇಂಧನ ವಿನಿಯಮದಡಿಯಲ್ಲಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

    ಪ್ರಸುತ್ತ ಕೇಂದ್ರ ಸರ್ಕಾರದ NTPC ಕೂಡ್ಗಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದ 2400 ಒW ಪೈಕಿ ಕರ್ನಾಟಕದ ಪಾಲು 1250 MW ವಿದ್ಯುತ್ ಇದೆ. ಇದರಲ್ಲಿ 1100 MW ಈಗಾಗಲೇ ನೀಡಲಾಗುತ್ತಿದೆ. ಬಾಕಿ 150 MW ವಿದ್ಯುತ್ ಕೇಂದ್ರ ಸರ್ಕಾರದ ಮೂಲಕ ದೆಹಲಿಗೆ ನೀಡುತ್ತಿದೆ. ಅದನ್ನು ನೀಡಲು ಕೇಳಿದ್ದು, ಡಿಸೆಂಬರ್ 1 ರಿಂದ ನೀಡುವ ಭರವಸೆ ನೀಡಿದ್ದಾರೆ. ಸರ್ಕಾರದಿಂದ ಸರ್ಕಾರ ವಿದ್ಯುತ್ ಪಡೆಯಲಾಗುತ್ತಿದೆ. ಇರದಲ್ಲಿ ಅಕ್ರಮ ಹೇಗೆ ಸಾಧ್ಯತೆ ಎಂದು ಪ್ರಶ್ನಿಸಿದರು.

    ಕಲ್ಲಿದ್ದಲು ಆಮದಿನಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಪ್ರತಿಕ್ರಿಯಿಸಿ, ದೇಶಿಯ ಕಲ್ಲಿದ್ದಲು ವಿದ್ಯುತ್ ಉತ್ಪಾದನೆ ಪ್ರಮಾಣ 50% ರಷ್ಟಿದೆ ಈ ಹಿನ್ನಲೆ ಆಮದು ಮಾಡಿಕೊಂಡ 10% ಕಲ್ಲಿದ್ದಲು ಮಿಶ್ರಣ ಮಾಡಿ ಬಳಕೆಗೆ ಸೂಚಿಸಿದೆ. ಇದರಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಬಹುದು. ಇದರಿಂದ 700 MW ವಿದ್ಯುತ್ ಉತ್ಪಾದನೆಯಾಗುತ್ತಿದೆ. KTPP ಕಾಯ್ದೆಗಳ ಅಡಿಯಲ್ಲಿ ಕಲ್ಲಿದ್ದಲು ಖರೀದಿಯಾಗುತ್ತಿದ್ದು ಅಕ್ರಮದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

    ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರಿಗೆ ಐದು ಗಂಟೆ ನಿರಂತರ ವಿದ್ಯುತ್ ನೀಡಲಾಗುತ್ತಿದೆ. ಭತ್ತ ಮತ್ತು ಕಬ್ಬು ಬೆಳೆಗಳು ಎಲ್ಲಿ ಕಟಾವಿಗೆ ಬಂದಿವೆಯೋ ಅಲ್ಲಿ ಏಳು ಗಂಟೆಗಳ ವಿದ್ಯುತ್ ನೀಡಲು ಸೂಚಿಸಿದೆ. ಕೆಲವು ಭಾಗದಲ್ಲಿ ಐದು ಗಂಟೆ ವಿದ್ಯುತ್ ಸಿಗುತ್ತಿಲ್ಲ ಎನ್ನುವ ಆರೋಪಗಳಿದೆ ಇದಕ್ಕೆ ತಾಂತ್ರಿಕ ಕಾರಣಗಳು ಇರಬಹುದು ಸ್ಥಳೀಯ ಎಸ್ಕಾಂಗಳಿಗೆ ದೂರು ನೀಡಿ ಸರಿಪಡಿಸಿಕೊಳ್ಳಬಹುದು ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಒಣಗ್ತಿರೋ ಬೆಳೆ- ಸರ್ಕಾರದ ವಿರುದ್ಧ ರೈತ ಆಕ್ರೋಶ

    ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಒಣಗ್ತಿರೋ ಬೆಳೆ- ಸರ್ಕಾರದ ವಿರುದ್ಧ ರೈತ ಆಕ್ರೋಶ

    ಯಾದಗಿರಿ: ರಾಜ್ಯದಲ್ಲಿ ಭೀಕರ ಬರಗಾಲದ ನಡುವೆ ಇದೀಗ ಅನ್ನದಾತರಿಗೆ ಅನಧಿಕೃತ ವಿದ್ಯುತ್ ಲೋಡ್ ಶೆಡ್ಡಿಂಗ್ (Load Shedding) ಶಾಕ್ ನೀಡಿದೆ.

    ಅನಧಿಕೃತ ಲೋಡ್ ಶೆಡ್ಡಿಂಗ್ ನಿಂದ ಯಾದಗಿರಿ (Yadagiri) ಜಿಲ್ಲೆಯ ರೈತರ ಕಂಗಾಲಾಗಿದ್ದು, ಐಪಿಸೆಟ್ ಗೆ ಕೇವಲ 3 ಗಂಟೆ 3 ಫೇಸ್ ವಿದ್ಯುತ್ ಪೂರೈಕೆಯಿಂದ ಮಾಡಲಾಗ್ತಿದೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಬೆಳೆಗಳು ಒಣಗುತ್ತಿರೋದ್ರಿಂದ ಸಾಲದ ಸುಳಿಗೆ ಸಿಲುಕುವ ಭೀತಿಯಲ್ಲಿ ರೈತರಿದ್ದಾರೆ.

    ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಾಕಲವಾರ್ ಗ್ರಾಮದ ರೈತ ಚನ್ನಪ್ಪ ತನ್ನ ಜಮೀನಿನಲ್ಲೇ ನಿಂತು, ಬೆಳೆ ಒಣಗುತ್ತಿರೋದನ್ನ ಕಣ್ಣಾರೆ ಕಂಡು ತನ್ನ ನೋವು ತೊಡಿಕೊಂಡಿದ್ದಾನೆ. ರೈತರ ಗೋಳು ಯಾರಿಗೆ ಅರ್ಥವಾಗ್ತದೆ. 6 ಗಂಟೆ ವಿದ್ಯುತ್ ಕೊಟ್ಟು ವೊಲ್ಟೇಜ್ ಸಮಸ್ಯೆ ಮಾಡ್ತಿದ್ದಾರೆ. ಇದರಿಂದಾಗಿ ಬೆಳೆಗೆ ನೀರು ಹರಿಸಲು ಆಗುತ್ತಿಲ್ಲ. ಬರಗಾಲದಿಂದ ತತ್ತರಿಸಿ ರೈತರು ಸಾಯುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರ ಬಗ್ಗೆ ಅಸಭ್ಯ ಮಾತು – ಪತಿಯಿಂದ ದೂರಾದ ಇಟಲಿ ಪ್ರಧಾನಿ

    ರೈತರ ಗೋಳು ಸಿಎಂ ಸೇರಿದಂತೆ ಯಾರಿಗೂ ಅರ್ಥ ಆಗೋದಿಲ್ಲ. ರೈತರು ಬದುಕು ನಡೆಸಲು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ ಅಂತಾ ರೈತ ಚನ್ನಪ್ಪ ಒತ್ತಾಯಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯದಲ್ಲಿ ತೀವ್ರಗೊಂಡ ವಿದ್ಯುತ್ ಅಭಾವ- ಸರ್ಕಾರದಿಂದ ಸದ್ದಿಲ್ಲದೇ ಲೋಡ್ ಶೆಡ್ಡಿಂಗ್

    ರಾಜ್ಯದಲ್ಲಿ ತೀವ್ರಗೊಂಡ ವಿದ್ಯುತ್ ಅಭಾವ- ಸರ್ಕಾರದಿಂದ ಸದ್ದಿಲ್ಲದೇ ಲೋಡ್ ಶೆಡ್ಡಿಂಗ್

    – ಕರೆಂಟ್‍ಗಾಗಿ ಅನ್ನದಾತರಿಂದ ಪ್ರೊಟೆಸ್ಟ್

    ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಅಭಾವ ತೀವ್ರಗೊಂಡಿದ್ದು, ರಾಜ್ಯ ಸರ್ಕಾರ ಸದ್ದಿಲ್ಲದೇ ಅನಧಿಕೃತ ಲೋಡ್ ಶೆಡ್ಡಿಂಗ್ (LoadShedding) ಜಾರಿ ಮಾಡಿದೆ.

    ವಿದ್ಯುತ್ ಅಭಾವದ ನಡ್ವೆಯೂ ಎಲ್ಲಾ ಎಸ್ಕಾಂಗಳು (Escom) ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿದೆ. ಆದರೆ ಕೃಷಿಕರನ್ನು ಸಂಪೂರ್ಣ ಕಡೆಗಣಿಸಿದೆ. ಗ್ರಾಮೀಣ ಭಾಗ ಮಾತ್ರವಲ್ಲದೇ ನಗರ ಪ್ರದೇಶಗಳಲ್ಲಿಯೂ ಲೋಡ್‍ಶೆಡ್ಡಿಂಗ್ ಶುರುವಾಗಿದೆ. ಲೋಡ್‍ಶೆಡ್ಡಿಂಗ್ ವಿರುದ್ಧ ರಾಜ್ಯದ ರೈತರು ರೊಚ್ಚಿಗೆದ್ದಿದ್ದಾರೆ.

    ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಹಾಸನ, ಚಾಮರಾಜನಗರ, ಬೆಳಗಾವಿಯ ಚಿಕ್ಕೋಡಿ ಸೇರಿ ಹಲವೆಡೆ ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ಕರೆಂಟ್ ಪೂರೈಸಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅನಧಿಕೃತ ಲೋಡ್‌ಶೆಡ್ಡಿಂಗ್ – ಗ್ರಾಮೀಣ, ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

    ಯಾವ ಜಿಲ್ಲೆಯಲ್ಲಿ ಎಷ್ಟು ಗಂಟೆ ಲೋಡ್ ಶೆಡ್ಡಿಂಗ್..?
    ಮಂಡ್ಯ ನಗರ:- 1 – 1.5 ಗಂಟೆ
    ಮಂಡ್ಯ ಗ್ರಾಮಾಂತರ:- 16 ಗಂಟೆ
    ರಾಯಚೂರು ನಗರ:- 5 – 8 ಗಂಟೆ
    ರಾಯಚೂರು ಗ್ರಾಮಾಂತರ:- 7 – 8 ಗಂಟೆ

    ಬಾಗಲಕೋಟೆ:- ಕನಿಷ್ಟ 2 ಗಂಟೆ
    ತುಮಕೂರು ನಗರ:- 3-4 ಗಂಟೆ
    ತುಮಕೂರು ಗ್ರಾಮಾಂತರ:- 5-6 ಗಂಟೆ
    ಚಾಮರಾಜನಗರ ನಗರ:- 1 ಗಂಟೆ
    ಚಾಮರಾಜನಗರ ಗ್ರಾಮೀಣ :- 4 -5 ಗಂಟೆ

    ಚಿತ್ರದುರ್ಗ ನಗರ:- 1 – 1.5 ಗಂಟೆ
    ಚಿತ್ರದುರ್ಗ ಗ್ರಾಮಾಂತರ:- 3-4 ಗಂಟೆ
    ಹಾವೇರಿ ನಗರ:- 1 – 1.5 ಗಂಟೆ
    ಹಾವೇರಿ ಗ್ರಾಮಾಂತರ:- 3- 4 ಗಂಟೆ

    ಬಳ್ಳಾರಿ ನಗರ:- 4 ಗಂಟೆ
    ಬಳ್ಳಾರಿ ಗ್ರಾಮಾಂತರ:- 10 ಗಂಟೆ
    ಶಿವಮೊಗ್ಗ:- ಮಧ್ಯಾಹ್ನದ ವೇಳೆ ಮಾತ್ರ
    ರಾಮನಗರ ನಗರ:- 1-2 ಗಂಟೆ
    ರಾಮನಗರ ಗ್ರಾಮಾಂತರ:- 4-5ಗಂಟೆ

    ಚಿಕ್ಕಬಳ್ಳಾಪುರ ನಗರ:- 3-4 ಗಂಟೆ
    ಚಿಕ್ಕಬಳ್ಳಾಪುರ ಗ್ರಾಮಾಂತರ:- 7-8 ಗಂಟೆ
    ದಾವಣಗೆರೆ ನಗರ:- 1.30 ಗಂಟೆ
    ದಾವಣಗೆರೆ ಗ್ರಾಮಾಂತರ:- 4-5 ಗಂಟೆ

    ಯಾದಗಿರಿ ನಗರ:- 2 ಗಂಟೆ
    ಯಾದಗಿರಿ ಗ್ರಾಮಾಂತರ:- 6 ಗಂಟೆ
    ಬೀದರ್ ನಗರ:- 1 ಗಂಟೆ
    ಬೀದರ್ ಗ್ರಾಮಾಂತರ:- 2- 3 ಗಂಟೆ
    ಕೋಲಾರ:- 3 ಗಂಟೆ

    ಮಳೆ ಇಲ್ಲ, ಬೆಳೆಯಿಲ್ಲ, ಎಲ್ಲ ಕಡೆ ಬರದ ತಾಂಡವ. ಅಂತರ್ಜಲ ಬತ್ತಿ ಬೋರ್‍ವೆಲ್‍ಗಳು ಬತ್ತುತ್ತಿವೆ. ಬರುವ ಅಲ್ಪಸ್ವಲ್ಪ ನೀರನ್ನು ಕೃಷಿಗೆ ಬಳಸಬೇಕೆಂದರೆ ವಿದ್ಯುತ್ ಕಣ್ಣು ಮುಚ್ಚಾಲೆ ಆಟ ಆಡ್ತಿದೆ. ಸಿಂಗಲ್ ಫೇಸ್ ಕೂಡ ತೆಗೆದ ಕಾರಣ ತೋಟದ ಮನೆಗಳಲ್ಲಿ ಕತ್ತಲು ಆವರಿಸುತ್ತಿದೆ. ವಿದ್ಯುತ್ ಕಾಟ ಹಳ್ಳಿ ಜನರನ್ನು ಕಂಗಾಲಾಗುವಂತೆ ಮಾಡಿದೆ. ಸರ್ಕಾರದ ವಿರುದ್ಧ ಅನ್ನದಾತರು ಹಿಡಿ ಶಾಪವನ್ನು ಹಾಕಿದ್ದಾರೆ. 7 ಗಂಟೆ ವಿದ್ಯುತ್ ಕೊಡದಿದ್ರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಹೋಗಲಿ. ಇಲ್ಲದಿದ್ರೆ ಇತರ ಗ್ಯಾರಂಟಿಗಳಿಗೆ ಹಣ ಕೊಟ್ಟಂತೆ ರೈತರ ಪಂಪ್‍ಸೆಟ್‍ಗಳಿಗೂ ಹಣ ನಿಗದಿ ಮಾಡಿ ಕೊಡಲಿ ಅಂತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರೆಂಟ್ ಕಟ್ ಮಾಡಿದ್ದಕ್ಕೆ ಡಿಸಿಎಂ ಮನೆಗೆ ಬಾಂಬ್ ಬೆದರಿಕೆ ಹಾಕಿದ ಭೂಪ

    ಕರೆಂಟ್ ಕಟ್ ಮಾಡಿದ್ದಕ್ಕೆ ಡಿಸಿಎಂ ಮನೆಗೆ ಬಾಂಬ್ ಬೆದರಿಕೆ ಹಾಕಿದ ಭೂಪ

    ಮುಂಬೈ: ತನ್ನ ಮನೆಯಲ್ಲಿ ವಿದ್ಯುತ್ (Power) ಕಡಿತಗೊಂಡಿದ್ದರಿಂದ ಕೋಪಗೊಂಡ ವ್ಯಕ್ತಿಯೊಬ್ಬ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಮನೆಗೆ ಕರೆ ಮಾಡಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಹಾಕಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ (Nagpur) ನಡೆದಿದೆ.

    ನಾಗ್ಪುರ ಪೊಲೀಸ್ ನಿಯಂತ್ರಣ ಕೊಠಡಿಗೆ ವ್ಯಕ್ತಿಯೊಬ್ಬ ಕರೆ ಮಾಡಿ ದೇವೇಂದ್ರ ಫಡ್ನವಿಸ್ ಮನೆಯ ಹೊರಗೆ ಬಾಂಬ್ ಇಟ್ಟಿರುವುದಾಗಿ ತಿಳಿಸಿ ಏಕಾಏಕಿ ಸಂಪರ್ಕ ಕಡಿತಗೊಳಿಸಿದ್ದಾನೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು (Police) ತನಿಖೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕರೆ ಮಾಡಿದ 30 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ದೇಶದಲ್ಲಿ SDPIನವರೇ ಅಲ್ಪಸಂಖ್ಯಾತರ ವಿರೋಧಿಗಳು, ಅದೊಂದು ದೇಶದ್ರೋಹಿ ಸಂಘಟನೆ: ಸಿಎಂ

    ಘಟನೆಗೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಯು ತನ್ನ ಮನೆಯಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂದ ಕೋಪಗೊಂಡು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮನೆಯಲ್ಲಿ ಮಂಗಳವಾರ ಬಾಂಬ್ ಇಡಲಾಗಿದೆ ಎಂದು ಸುಳ್ಳು ಕರೆ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 5 ವರ್ಷದ ಹಿಂದೆ ಹೆಂಡತಿ, ಈಗ ತನ್ನ ಮಗನನ್ನೇ ಕೊಂದ ಪಾಪಿ

  • ವಿದ್ಯುತ್ ಸ್ಪರ್ಶಿಸಿ ಬೆಸ್ಕಾಂ ಲೈನ್‍ಮ್ಯಾನ್ ಸಾವು- ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

    ವಿದ್ಯುತ್ ಸ್ಪರ್ಶಿಸಿ ಬೆಸ್ಕಾಂ ಲೈನ್‍ಮ್ಯಾನ್ ಸಾವು- ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

    ರಾಮನಗರ: ವಿದ್ಯುತ್ ಸ್ಪರ್ಶಿಸಿ ಬೆಸ್ಕಾಂ ಲೈನ್ ಮ್ಯಾನ್ (BESCOM Lineman) ಸಾವನ್ನಪ್ಪಿರುವ ಘಟನೆ ಮಾಗಡಿ ತಾಲೂಕಿನ ಕಳ್ಳಿಪಾಳ್ಯ ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ಮುದ್ದೆ ಬಿಹಾಳ ಗ್ರಾಮದ ನಿವಾಸಿ ಬೆಸ್ಕಾಂ ಲೈನ್ ಮ್ಯಾನ್ ಶರಣ ಬಸಪ್ಪ (30) ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಕಳ್ಳಿಪಾಳ್ಯ ಗ್ರಾಮದ ವಿದ್ಯುತ್ ಟಿಸಿಯಲ್ಲಿ ಫೀಜ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶಿಸಿದೆ.

    ಫೀಜ್ ಅಳವಡಿಸುವ ಮುನ್ನಾ ಎಲ್‍ಸಿ ತೆಗೆಯುವಂತೆ ಕುದೂರು ಬೆಸ್ಕಾಂ ಜೆಇ ನವೀನ್ ಕುಮಾರು ಗಮನಕ್ಕೆ ತಂದರೂ ಜೆಇ ನವೀನ್ ಕುಮಾರ್ ನಿರ್ಲಕ್ಷ್ಯದಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತಪಟ್ಟ ಒಂದು ಗಂಟೆ ಕಳೆದರೂ ಮೃತದೇಹವನ್ನು ಕೊಂಡೊಯ್ಯಲು ಅಂಬುಲೆನ್ಸ್ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

    ಈ ಘಟನೆಗೆ ಜೆಇ ನವೀನ್ ಕುಮಾರ್ ನಿರ್ಲಕ್ಷ್ಯವೇ ಕಾರಣ ಎಂದು ಗಂಭೀರ ಆರೋಪ ಕೇಳಿ ಬಂದಿದ್ದು, ಸೂಕ್ತ ಕ್ರಮ ಜರಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೀರ್ಘಕಾಲದ ಅನಾರೋಗ್ಯ- ಆಸ್ಪತ್ರೆ ಬಿಲ್ ನೋಡಿ ಯುವಕ ಆತ್ಮಹತ್ಯೆ

  • ಮತ್ತೆ ಕರೆಂಟ್ ಶಾಕ್‍ಗೆ ಸಜ್ಜು- ಹೋಟೆಲ್ ಉದ್ಯಮದಿಂದ ವ್ಯಾಪಕ ಆಕ್ರೋಶ

    ಮತ್ತೆ ಕರೆಂಟ್ ಶಾಕ್‍ಗೆ ಸಜ್ಜು- ಹೋಟೆಲ್ ಉದ್ಯಮದಿಂದ ವ್ಯಾಪಕ ಆಕ್ರೋಶ

    ಬೆಂಗಳೂರು: ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ (Power Bill) ಏರಿಕೆಯ ಶಾಕ್ ಎದುರಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಫೆ. 13 ರಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದ್ದು, ಮತ್ತೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ಹೊಟೇಲ್ ಉದ್ಯಮಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

    ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಏರಿಕೆಯ ಶಾಕ್ ತಟ್ಟಲಿದೆ. ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ದರ ಪರಿಷ್ಕರಣೆ ಕೋರಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಾಳೆಯಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದ್ದು, ಮತ್ತೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಈ ನಿರ್ಣಯಕ್ಕೆ ಬೃಹತ್ ಬೆಂಗಳೂರು ಹೊಟೇಲ್‍ಗಳ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೊಂದು ಅವೈಜ್ಞಾನಿಕ ನಿರ್ಣಯ. ಗ್ರಾಹಕರ ಮೇಲೆ ಹೊರೆ ಹಾಕೋದು ಸಮಂಜಸವಲ್ಲ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಂದ್ಯಶ್ರೇಷ್ಠ ಜಡೇಜಾಗೆ ಬಿಸಿ ಮುಟ್ಟಿಸಿದ ICC

    ಎಸ್ಕಾಮ್‍ಗಳು ಪ್ರತಿ ಯುನಿಟ್ ಗೆ ಒಂದೂವರೆ ರೂಪಾಯಿಯಿಂದ 2 ರೂಪಾಯಿ ತನಕ ವಿದ್ಯುತ್ ದರ ಏರಿಕೆ ಕೋರಿ ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ನಾಳೆಯಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದ್ದು, ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಪರಿಗಣಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ ತನ್ನ ನಿರ್ಧಾರ ಪ್ರಕಟಿಸಲಿದೆ. ಈಗಾಗಲೇ ಡಿಜಿಟಲ್ ಮೀಟರ್‍ಗಳ ಅಳವಡಿಕೆಯಿಂದಲೂ ವಿದ್ಯುತ್ ಬಿಲ್ ದುಪ್ಪಟ್ಟು ಬರ್ತಿದ್ದು, ಇದಕ್ಕೂ ಸಾರ್ವಜನಿಕರಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

    ಕಳೆದ ವರ್ಷ ರಾಜ್ಯದಲ್ಲಿ ಎರಡು ಬಾರಿ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು. ಕಳೆದ ಏಪ್ರಿಲ್‍ನಲ್ಲಿ ಪ್ರತಿ ಯುನಿಟ್ ಗೆ 35 ಪೈಸೆ, ಸೆಪ್ಟೆಂಬರ್ ನಲ್ಲಿ ಇಂಧನ ಹೊಂದಾಣಿಕೆ ಹಿನ್ನಲೆ ಪ್ರತಿ ಯುನಿಟ್‍ಗೆ 24 ಪೈಸೆಯಿಂದ 43 ಪೈಸೆವರೆಗೆ ಏರಿಕೆ ಮಾಡಲಾಗಿತ್ತು. ಡಿಜಿಟಲ್ ಮೀಟರ್‍ಗಳ ಅಳವಡಿಕೆಯಿಂದಲೂ ವಿದ್ಯುತ್ ದರ ಹೆಚ್ಚೆಚ್ಚು ಬರ್ತಿತ್ತು. ಇದ್ರಿಂದ ಗ್ರಾಹಕರು ಕೂಡ ಆಕ್ರೋಶಗೊಂಡಿದ್ದು, ಯಾವ್ದೇ ಕಾರಣಕ್ಕೂ ವಿದ್ಯುತ್ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಬಾರದು ಅಂತ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k