Tag: pourakarmika

  • 18,000 ಬದಲಿಗೆ 8,000 ರೂ. ವೇತನ – ಗುತ್ತಿಗೆದಾರನಿಂದ ಬೇಸತ್ತು ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ

    18,000 ಬದಲಿಗೆ 8,000 ರೂ. ವೇತನ – ಗುತ್ತಿಗೆದಾರನಿಂದ ಬೇಸತ್ತು ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ

    ಧಾರವಾಡ: 18,000 ರೂ. ಬದಲಿಗೆ 8,000 ರೂ. ವೇತನ ನೀಡುತ್ತಿದ್ದುದ್ದಕ್ಕೆ ಮನನೊಂದ ಪೌರಕಾರ್ಮಿಕರೊಬ್ಬರು (Pourakarmika) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.

    ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಕೃಷ್ಣ ವಗ್ಗೆಣ್ಣವರ ಎಂಬುವವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಡಿವೋರ್ಸ್ ವಿವಾದ – ಕೋರ್ಟ್‍ನಲ್ಲೇ ಪತ್ನಿಗೆ ಚಾಕು ಇರಿದ ಪತಿ

    ಇವರಿಗೆ ಸರ್ಕಾರ ತಿಂಗಳಿಗೆ 18,000 ರೂ. ವೇತನ ನೀಡುತ್ತದೆ. ಆದರೆ ಮಹಾನಗರ ಪಾಲಿಕೆಗೆ ಬರುವ ಈ ವೇತನವನ್ನು ಗುತ್ತಿಗೆದಾರ ಕಡಿತ ಮಾಡಿ, ಕೇವಲ 8,000 ರೂ. ಹಣವನ್ನು ಮಾತ್ರ ನೀಡುತ್ತಿದ್ದ. ರಜೆ ಮಾಡಿದರೆ ಆ ಸಂಬಳದಲ್ಲೂ ಕಡಿತಗೊಳಿಸಿ ಹಣ ನೀಡುತ್ತಿದ್ದ.

    ಇದರಿಂದ ಮನನೊಂದು ಪೌರಕಾರ್ಮಿಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪಾಲಿಕೆ ನಾಮ ನಿರ್ದೇಶಿತ ಸದಸ್ಯ ತುಳಸಪ್ಪ ಪೂಜಾರ ಆರೋಪಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಪೌರ ಕಾರ್ಮಿಕನಿಗೆ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಕಳೆದ 15 ವರ್ಷಗಳಿಂದ ಧಾರವಾಡದ 17ನೇ ವಾರ್ಡ್ನಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಕೃಷ್ಣ ಅವರಿಗೆ ಗುತ್ತಿಗೆದಾರ ಕೆಲ ತಿಂಗಳಿನಿಂದ ವೇತನವನ್ನೇ ನೀಡಿರಲಿಲ್ಲ. ಜೊತೆಗೆ ಕಿರುಕುಳ ಸಹ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.

    ಈ ಬಗ್ಗೆ ಪಾಲಿಕೆಯ ಮೇಯರ್ ಜ್ಯೋತಿ ಪಾಟೀಲ್ ಪ್ರತಿಕ್ರಿಯಿಸಿ, ಮಹಾನಗರ ಪಾಲಿಕೆಯಿಂದ ಪ್ರತಿ ತಿಂಗಳು ಹೊರ ಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಿಗೆ 18,000 ಸಾವಿರ ವೇತನವನ್ನ ನೇರವಾಗಿ ಅವರ ಅಕೌಂಟ್‌ಗೆ ಜಮೆ ಮಾಡುತ್ತದೆ. ಆದರೆ ಗುತ್ತಿಗೆದಾರ ಸಾಕಷ್ಟು ಪೌರ ಕಾರ್ಮಿಕರಿಗೆ ಇದೇ ರೀತಿಯಾಗಿ ಪ್ರತಿ ತಿಂಗಳು ವೇತನ ಕಡಿಮೆ ಕೊಟ್ಟು ತೊಂದರೆ ಕೊಡುತ್ತಿದ್ದಾನೆ. ಸಂಬAಧಪಟ್ಟ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

  • ಪೌರಕಾರ್ಮಿಕ ನೇಮಕಾತಿಯಲ್ಲಿ ವಿಶೇಷ ಷರತ್ತು ಅನ್ವಯ…!

    ಪೌರಕಾರ್ಮಿಕ ನೇಮಕಾತಿಯಲ್ಲಿ ವಿಶೇಷ ಷರತ್ತು ಅನ್ವಯ…!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೌರ ಕಾರ್ಮಿಕರು ರಜೆ ಹಾಕಿದ್ರೆ ಸಂಬಳವೇ ಕಟ್- ರೆಸ್ಟ್‌ಲೆಸ್ ವರ್ಕರ್ಸ್‍ಗೆ ಇದೆಂಥಾ ಅನ್ಯಾಯ..?

    ಪೌರ ಕಾರ್ಮಿಕರು ರಜೆ ಹಾಕಿದ್ರೆ ಸಂಬಳವೇ ಕಟ್- ರೆಸ್ಟ್‌ಲೆಸ್ ವರ್ಕರ್ಸ್‍ಗೆ ಇದೆಂಥಾ ಅನ್ಯಾಯ..?

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತೀ ಹೆಚ್ಚು ವಿಶ್ರಾಂತಿಯೇ ಪಡೆಯದೇ ಕರ್ತವ್ಯ ಮಾಡುವವರಲ್ಲಿ ಅಗ್ರ ಗಣ್ಯರು ಅಂದ್ರೆ ಪಾಲಿಕೆ ಪೌರಕಾರ್ಮಿಕರು. ಇವರಿಗೆ ಒಂದು ವೀಕಾಫ್ ಇರಲ್ಲ. ಸಣ್ಣ ಜ್ವರ, ಮನೆಯಲ್ಲಿ ಯಾರಾದ್ರೂ ಸತ್ರು ಅಂತ ರಜೆ ಹಾಕಿದ್ರೆ ಮುಗಿತು ಸಂಬಳ ಕಟ್.

    ಅಚ್ಚರಿಯೆನ್ನಿಸಿದ್ರು ನಿಜ. ಇವರು ವಾರದ 7 ದಿನ ಪಕ್ಕಾ ಕೆಲಸಕ್ಕೆ ಹಾಜರಾಗುತ್ತಾರೆ. ಇದಕ್ಕೆ ಸಾಕ್ಷಿ ರಸ್ತೆಗಳು, ಮನೆಯಿಂದ ಖಾಲಿ ಆಗುವ ಕಸವೇ ಸಾಕ್ಷಿ. ಹೀಗಿರುವಾಗ ಅನಿವಾರ್ಯತೆ ಎಲ್ಲರಿಗೂ ಇರುತ್ತೆ. ಅಪ್ಪಿ ತಪ್ಪಿ ಒಂದು ದಿನ ರಜೆ ಹಾಕಿದರೂ ಸಂಬಳಕ್ಕೆ ಕತ್ತರಿ. ಬಯೋ ಮೆಟ್ರಿಕ್ ಹಾಕದಿದ್ದರೆ ಸಂಬಳ ಕೊಡಲ್ಲ. ಗಂಡನ ಸಾವಿನ ಹಿನ್ನೆಲೆಯಲ್ಲಿ ತಿಂಗಳು ರಜಾ ಹಾಕಿದ್ರು ಸಂಬಳ ಒಂದೂ ದಿನದು ಕೊಡದೇ ಕಟ್ ಮಾಡುತ್ತಾರೆ.

    ಈ ಕಾಟ ಬಿಬಿಎಂಪಿಗೆ ಸೀಮಿತವಾಗಿಲ್ಲ. ಅದು ಪಿಡಬ್ಲ್ಯೂಡಿ ಸ್ವಚ್ಛತಾ ಸಿಬ್ಬಂದಿಗೂ ಇದೆ. ಶಕ್ತಿಸೌಧ ಸುತ್ತಮುತ್ತ ಸ್ವಚ್ಛತೆ ಮಾಡುವ ಸಿಬ್ಬಂದಿಗೆ ಕೂಡ ಇದೇ ಗತಿ. ಹಾಗಂತ ಇವರಿಗೆ ಮತ್ತೊಂದು ಐಡಿಯಾ ಮಾಡಿದ್ದಾರೆ. ಈ ಪ್ರಕಾರ ಬುಧವಾರ, ಭಾನುವಾರ 11 ಗಂಟೆವರೆಗೂ ಕೆಲಸ ಆಮೇಲೆ ರಜೆ ಅಂತಾ ಹೇಳಿದ್ದಾರೆ. ಹೀಗಾಗಿ ಒಂದು ಊರು, ಒಂದ್ ಫಂಕ್ಷನ್, ನೆಂಟರ ಮನೆಗೆ ಒಂದು ದಿನ ಹೋಗಿಲ್ಲ, ಉಳಿದಿಲ್ಲ. ಇದು ಬಿಟ್ಟು ಕಾಯಿಲೆ ಬಂದರೂ ರಜೆ ಹಾಕುವಂತಿಲ್ಲ. ಅದಕ್ಕೂ ರೂಲ್ಸ್ ಇದೆ. ಅದುವೇ ಇಎಸ್‍ಐ ಹೋಗಿ ಆರೋಗ್ಯ ಸಂಬಂಧ ಚೀಟಿ ಪಡೆಯಬೇಕು. ಆಮೇಲೆ ಬೇಕಾದರೆ ಬೇರೆ ಯಾವುದೇ ಸಣ್ಣ ಪುಟ್ಟ ಆಸ್ಪತ್ರೆ ತೊರಿಸಬಹುದು. ಮನೆ ಹತ್ತಿರ ಗೊತ್ತು ಅಂತಾ ಹೋಗಿ ತೋರಿಸಿ ಚೀಟಿ ಕೊಟ್ಟರೆ ಒಪ್ಪುವ ಮಾತೇ ಇಲ್ಲ. ರಜೆಗೆ ಸಂಬಳ ಕಟ್ ಇಲ್ಲ ಸಜೆ ಫಿಕ್ಸ್.

    16800 ಖಾಯಂ ಪೌರಕಾರ್ಮಿಕರಿಲ್ಲವಾದ್ರೆ ನಿಜ ರಸ್ತೆ, ಚರಂಡಿ, ಮನೆ ಕಸ ಕ್ಲಿಯರ್ ಆಗಲ್ಲ ಒಪ್ಪಿಕೊಳ್ಳೋನ. ಆದರೆ ಹಾಗಂತ ಕಾಯಿಲೆ, ಜ್ವರಕ್ಕೂ ಚಿಕಿತ್ಸೆ ಪಡೆದಾಗ ಚೀಟಿ ಕೊಟ್ರು ಸಂಬಳ ಕೊಡದ ಈ ಸ್ಥಿತಿ ಯಾರಿಗೂ ಬೇಡ. ಅದಕ್ಕೆ ಪೌರಕಾರ್ಮಿಕರ ತ್ಯಾಗಕ್ಕೆ ಸರಿ ಸಾಟಿಯೇ ಇಲ್ಲ. ಒಟ್ಟಿನಲ್ಲಿ ಇನ್ನಾದರೂ ಪಾಲಿಕೆ ಅವರ ರಜೆ ಹಾಗೂ ಕಾಯಿಲೆ ಸಂಬಂಧಿತ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ: ಎಂಟಿಬಿ ನಾಗರಾಜ್‌

    ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ: ಎಂಟಿಬಿ ನಾಗರಾಜ್‌

    ಬೆಂಗಳೂರು: ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 5300 ಮಂದಿ ಪೌರ ಕಾರ್ಮಿಕರ ಹುದ್ದೆಯನ್ನು ಭರ್ತಿ ಮಾಡಲಾಗುವುದು ಹಾಗೂ ನೇರ ಪಾವತಿ ವೇತನ ಪಡೆಯುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಮುಂದಿನ 3 ವರ್ಷಗಳಲ್ಲಿ ಹಂತ ಹಂತವಾಗಿ ಖಾಯಂಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಚಿವ ಎಂಟಿಬಿ ನಾಗರಾಜ್ , ಸರ್ಕಾರ ಪೌರ ಕಾರ್ಮಿಕರ ಪರ ಸಹಾನುಭೂತಿ ಹೊಂದಿದ್ದು, ಅವರ ಬೇಡಿಕೆಗಳನ್ನು ಈಡೇರಿಸಲು ಬದ್ದವಾಗಿದೆ. ಹಾಗಾಗಿ, ಪೌರಕಾರ್ಮಿಕ ಸಂಘಟನೆಗಳು ಜುಲೈ 1 ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿದರು.

     

     

    ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್‌ ರವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ನಿರ್ಣಯಿಸಿರುವಂತೆ ಪೌರಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೇರ ಪಾವತಿ ವೇತನ ಪಡೆಯುತ್ತಿರುವ ಪೌರ ಕಾರ್ಮಿಕ ಸೇವೆಯನ್ನು ಮುಂದಿನ 3 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಖಾಯಂಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆರ್ಥಿಕ ಇಲಾಖೆಯು ಈಗಾಗಲೇ 5300 ಪೌರಕಾರ್ಮಿಕರ ನೇಮಕಾತಿಗೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸಚಿವರು ಸೂಚಿಸಿದರು.
    ಇದನ್ನೂ ಓದಿ: ಒಬ್ಬ ಹೇಡಿ ಮಾಡಿದ ಕೃತ್ಯಕ್ಕೆ ಇಡೀ ಸಮುದಾಯವನ್ನು ವಿರೋಧಿಸುವುದು ಸರಿಯಲ್ಲ: ಅಬ್ದುಲ್ ರಜಾಕ್

    ಪೌರಕಾರ್ಮಿಕರು ಮತ್ತು ಸ್ವಚ್ಛತಾ ನೌಕರರ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಪ್ರಸ್ತುತ ಜಾರಿಯಲ್ಲಿರುವ ಆರೋಗ್ಯ ವಿಮೆ ಸೌಲಭ್ಯವನ್ನು ಎಲ್ಲಾ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ನೌಕರರಿಗೂ ಅನ್ವಯವಾಗುವಂತೆ ವಿಸ್ತರಿಸುವ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಸಚಿವ ಎಂಟಿಬಿ ನಾಗರಾಜ್ ನಿರ್ದೇಶನ ನೀಡಿದರು. 2018 ರಲ್ಲಿ ರಚಿಸಲಾಗಿರುವ ಪೌರ ಕಾರ್ಮಿಕರ ನೇಮಕಾತಿ ವಿಶೇಷ ನಿಯಮಾವಳಿಗಳನ್ನು ಪುನರ್ ಪರಿಶೀಲಿಸಲು ಅನುಕೂಲವಾಗುವಂತೆ ಈಗಾಗಲೇ ಕರ್ತವ್ಯದಲ್ಲಿರುವ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರ ಸೇವಾ ವಿವರಗಳನ್ನು ಒಂದು ವಾರದ ಒಳಗಾಗಿ ಸಂಗ್ರಹಿಸಿ ಅಗತ್ಯ ಶಿಫಾರಸ್ಸುಗಳೊಂದಿಗೆ ಕಡತ ಮಂಡಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಪೌರ ಕಾರ್ಮಿಕರ ಇನ್ನುಳಿದ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಆದೇಶಿಸಿದರು. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಅಜಯ್‌ ನಾಗಭೂಷಣ್, ಪೌರಾಡಳಿತ ಇಲಾಖೆ ನಿರ್ದೇಶಕಿ ಅರ್ಚನಾ, ಜಂಟಿ ನಿರ್ದೇಶಕ ಶಿವಸ್ವಾಮಿ ಪಾಲ್ಗೊಂಡಿದ್ದರು.

    Live Tv

  • ಡ್ರೈನೇಜ್ ರಿಪೇರಿ ವೇಳೆ ಕುಸಿದು ಬಿದ್ದ ಮಣ್ಣು- ಪೌರ ಕಾರ್ಮಿಕ ಅಸ್ವಸ್ಥ

    ಡ್ರೈನೇಜ್ ರಿಪೇರಿ ವೇಳೆ ಕುಸಿದು ಬಿದ್ದ ಮಣ್ಣು- ಪೌರ ಕಾರ್ಮಿಕ ಅಸ್ವಸ್ಥ

    ವಿಜಯಪುರ: ಡ್ರೈನೇಜ್ ರಿಪೇರಿ ವೇಳೆ ಮಣ್ಣು ಕುಸಿದು ಬಿದ್ದ ಕಾರಣ ಡ್ರೈನೇಜ್ ಒಳಗೆ ಪೌರ ಕಾರ್ಮಿಕ ಸಿಲುಕಿದ ಘಟನೆ ವಿಜಯಪುರದ ಇಂಡಿ ಪಟ್ಟಣದ 17ನೇ ವಾರ್ಡ್ ನಲ್ಲಿ ನಡೆದಿದೆ.

    ಡ್ರೈನೇಜ್‍ ಗುಂಡಿ ತೊಡುವ ಕೆಲಸ ಮಾಡುವ ವೇಳೆ ಮಣ್ಣು ಕುಸಿದು ಮೈಮೇಲೆ ಬಿದ್ದ ಕಾರಣ ಪೌರ ಕಾರ್ಮಿಕ ಅಶೋಕ್ ಕಡಿಮನಿ (42) ಅಸ್ವಸ್ಥಗೊಂಡು ಪರದಾಡಿದ್ದಾರೆ. ಅಸ್ವಸ್ಥಗೊಂಡಿದ್ದನ್ನು ಕಂಡ ಸ್ಥಳದಲ್ಲಿದ್ದ ಇತರೆ ಪೌರ ಕಾರ್ಮಿಕರು ಮಣ್ಣು ತಗೆದು ಅಶೋಕ ಅವರನ್ನು ಹೊರತೆಗೆದಿದ್ದಾರೆ. ಈ ವೇಳೆ ಕಾರ್ಮಿಕನ ಪ್ರಜ್ಞೆ ತಪ್ಪಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಕಾರ್ಮಿಕನನ್ನು ತುರ್ತು ಚಿಕಿತ್ಸೆಗಾಗಿ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೌರ ಕಾರ್ಮಿಕರ ಸಮಯ ಪ್ರಜ್ಞೆಯಿಂದಾಗಿ ಅಶೋಕ್‍ನನ್ನು ಆಸ್ಪತ್ರೆ ಸಾಗಿಸಲಾಗಿದೆ. ಇಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.