Tag: poura karmikas

  • ಬೆಡ್ ಸಿಗದೆ ಕೊರೊನಾಗೆ ಪೌರ ಕಾರ್ಮಿಕ ಮಹಿಳೆ ಸಾವು

    ಬೆಡ್ ಸಿಗದೆ ಕೊರೊನಾಗೆ ಪೌರ ಕಾರ್ಮಿಕ ಮಹಿಳೆ ಸಾವು

    – ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದ ಪೌರ ಕಾರ್ಮಿಕ ಮಹಿಳೆ ಸಾವು
    – ಐದಾರು ಆಸ್ಪತ್ರೆ ಅಲೆದರೂ ಸಿಗಲಿಲ್ಲ ಬೆಡ್, ಕೊನೆಯುಸಿರೆಳೆದ ವಾರಿಯರ್

    ಬೆಂಗಳೂರು: ಕೊರೊನಾ ವೈರಸ್ ಭಯ, ಲಾಕ್‍ಡೌನ್ ನಡುವೆಯೂ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದ ಪೌರ ಕಾರ್ಮಿಕ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ 5-6 ಆಸ್ಪತ್ರೆಗಳಿಗೆ ಅಲೆದಾಡಿದರೂ, ಬೆಡ್ ಸಿಕ್ಕಿಲ್ಲ. ಹೀಗಾಗಿ ಕೊರೊನಾ ವಾರಿಯರ್ ಕೊನೆಯುಸಿರೆಳೆದಿದ್ದಾರೆ.

    ಹೆಬ್ಬಾಳದ ವಿಶ್ವನಾಥ ನಾಗನಹಳ್ಳಿಯ 30 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಕಲಿದ್ದು, ಚಿಕಿತ್ಸೆಗಾಗಿ ಮಹಿಳೆ ಐದಾರು ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದರೂ ಎಲ್ಲಿಯೂ ಬೆಡ್ ಸಿಕ್ಕಿಲ್ಲ. ಐದು ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲ ಎಂದು ಹೇಳಿ ಕಳುಹಿಸಲಾಗಿದೆ. ಕೊನೆಯದಾಗಿ ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದು, ಆಗಲೇ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಹೀಗಾಗಿ ಇಂದು ಬೆಳಗ್ಗೆ ಪೌರ ಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದಾರೆ.

    ತೀವ್ರ ಉಸಿರಾಟದ ಸಮಸ್ಯೆಯಿಂದ ಮಹಿಳೆ ಅಸ್ವಸ್ಥವಾಗಿದ್ದರು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮಹಿಳೆ ಸಾವನ್ನಪ್ಪಿದ್ದಾರೆ. ಎಷ್ಟೇ ಬಾರಿ ಬಿಬಿಎಂಪಿಗೆ ಕರೆ ಮಾಡಿ ಬೆಡ್ ವ್ಯವಸ್ಥೆ ಮಾಡಿ, ಅಂಬುಲೆನ್ಸ್ ವ್ಯವಸ್ಥೆ ಮಾಡಿ ಎಂದು ಅಂಗಲಾಚಿದರೂ ಮಹಿಳೆಗೆ ಬೆಡ್ ವ್ಯವಸ್ಥೆ ಸಿಕ್ಕಿಲ್ಲ. ಇದೀಗ ಮಹಿಳೆ ಸಾವನ್ನಪ್ಪಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಆಸ್ಪತ್ರೆಯ ಮುಂದೆ ಕುಟುಂಬಸ್ಥರು ಕಿಡಿಕಾರಿದ್ದಾರೆ.

    ಕೊರೊನಾ ಟೈಮ್‍ನಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡಿದ ಪೌರಕಾರ್ಮಿಕ ಮಹಿಳೆ ಕೊರೊನಾಗೆ ಬಲಿಯಾಗಿದ್ದಕ್ಕೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪೌರಕಾರ್ಮಿಕರು ಹೆಲ್ತ್ ವಾರಿಯರ್ಸ್ ಅಂತಾ ಹೂಮಳೆ ಸುರಿಸುವ ಬಿಬಿಎಂಪಿ, ಕೊರೊನಾ ಬಂದಾಗ ಆಸ್ಪತ್ರೆಗಾಗಿ ಸುತ್ತಾಡಿಸುತ್ತದೆ. ಆದರೆ ಅವರ ಪ್ರಾಣ ಹೋಗುತ್ತಿದೆ ಎಂದಾಗ ಬಿಬಿಎಂಪಿ ಆಸ್ಪತ್ರೆ ವ್ಯವಸ್ಥೆ ಕಲ್ಪಿಸಲಾಗಿಲ್ಲ.

  • 19 ಮಂದಿ ಪೌರ ಕಾರ್ಮಿಕರಿಗೆ ಕೊರೊನಾ- ಬೆಂಗ್ಳೂರು ಒನ್ ಅಧಿಕಾರಿಗೂ ಸೋಂಕು

    19 ಮಂದಿ ಪೌರ ಕಾರ್ಮಿಕರಿಗೆ ಕೊರೊನಾ- ಬೆಂಗ್ಳೂರು ಒನ್ ಅಧಿಕಾರಿಗೂ ಸೋಂಕು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರುತ್ತಿದೆ. ಸಾರಿಗೆ ಸಿಬ್ಬಂದಿ, ಪೊಲೀಸರು, ಡಾಕ್ಟರ್ಸ್, ನರ್ಸ್ ಆಯ್ತು ಇದೀಗ ಬಿಬಿಎಂಪಿಗೂ ಕೊರೊನಾ ಸೋಂಕು ವಕ್ಕರಿಸಿದೆ.

    ಬೆಂಗಳೂರಲ್ಲಿ 19 ಜನ ಪೌರ ಕಾರ್ಮಿಕರಿಗೆ ಸೋಂಕು ತಗುಲಿದೆ. ನ್ಯಾಷನಲ್ ಕಾಲೇಜ್ ಗ್ರೌಂಡ್‍ನಲ್ಲಿ ಕೆಲಸ ಮಾಡುತ್ತಿದ್ದ 19 ಜನ ಪೌರಕಾರ್ಮಿಕರಲ್ಲಿ 7 ಜನ ಪಾದರಾಯನಪುರ ನಿವಾಸಿಗಳು ಅಂತ ಹೇಳಲಾಗ್ತಿದೆ.

    ಸೋಂಕಿತ ಪಾದರಾಯನಪುರದ ನಿವಾಸಿಗಳನ್ನ ಹಜ್ ಭವನಕ್ಕೆ ಶಿಷ್ಟ್ ಮಾಡಲಾಗಿದೆ. ಉಳಿದ 12 ಜನರ ನಿವಾಸಗಳ ಪತ್ತೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಅಷ್ಟೇ ಅಲ್ಲ ಬಸವನಗುಡಿಯ ಬೆಂಗಳೂರು ಒನ್‍ನಲ್ಲಿ ಕೆಲಸ ಮಾಡ್ತಿದ್ದ ಅಧಿಕಾರಿ ಬಿಬಿಎಂಪಿಯ ರೆವಿನ್ಯೂ ಇನ್ಸ್ ಪೆಕ್ಟರ್‍ಗೆ ಕೊರೋನಾ ಪಾಸಿಟಿವ್ ಬಂದಿದೆ. ಬೆಂಗಳೂರು ಒನ್‍ಗೆ ಭೇಟಿ ಕೊಟ್ಟವರಿಗೆ ಢವ ಢವ ಶುರುವಾಗಿದೆ.

    ನಿನ್ನೆ ಬಿಡಿಗಡೆ ಮಾಡಿದ ಹೆಲ್ತ್ ಬುಲೆಟಿನಲ್ಲಿ 445 ಮಂದಿಗೆ ಸೋಂಕು ದೃಢವಾಗಿದ್ದು, 10 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಎಂದಿನಂತೆ ಬೆಂಗಳೂರಿನಲ್ಲಿ ಅತಿ ಹೆಚ್ಚು 144 ಮಂದಿಗೆ ಸೋಂಕು ಬಂದಿದೆ. ರಾಜ್ಯದಲ್ಲಿ ಒಟ್ಟು 11,005ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 246 ಮಂದಿ ಬಿಡುಗಡೆಯಾಗಿದ್ದಾರೆ. 445 ಮಂದಿಯಲ್ಲಿ 65 ಅಂತರಾಜ್ಯ ಪ್ರಯಾಣಿಕರಿದ್ದರೆ, 21 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಿದ್ದಾರೆ. ಐಸಿಯುನಲ್ಲಿರುವ ರೋಗಿಗಳ ಸಂಖ್ಯೆ 178ಕ್ಕೆ ಏರಿಕೆಯಾಗಿದೆ.

  • ಪೌರ ಕಾರ್ಮಿಕರಿಗಾಗಿ ಕ್ಯಾನ್ಸರ್ ಜಾಗೃತಿ ವಾಕಥಾನ್

    ಪೌರ ಕಾರ್ಮಿಕರಿಗಾಗಿ ಕ್ಯಾನ್ಸರ್ ಜಾಗೃತಿ ವಾಕಥಾನ್

    ಬೆಂಗಳೂರು: ಸ್ವಚ್ಛ, ಸ್ವಾಸ್ತ್ಯ, ಸುಂದರ ಬೆಂಗಳೂರು ನಿರ್ಮಾಣಕ್ಕಾಗಿ ಟೊಂಕಕಟ್ಟಿ ಶ್ರಮಿಸುತ್ತಿರುವ ನಮ್ಮ ಪೌರಕಾರ್ಮಿಕರಿಗಾಗಿ ಬಿಬಿಎಂಪಿ ಆವರಣದಿಂದ ವಾಕಥಾನ್ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು. ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲೇ ಈ ವಾಕಥಾನ್ ಆಯೋಜಿಸಲಾಗಿತ್ತು. ವಿಶೇಷವಾಗಿ ಪೌರ ಕಾರ್ಮಿಕರಿಗಾಗಿಯೇ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಸಹ ಆಯೋಜನೆ ಮಾಡಲಾಗಿತ್ತು.

    “ಸಂಕಲ್ಪ” ಚೇಸ್ ಕ್ಯಾನ್ಸರ್ ಫೌಂಡೇಶನ್ ಆ್ಯಂಡ್ ರೀಸರ್ಚ್ ಟ್ರಸ್ಟ್, ನವೋದಯನ್ಸ್ ನವೋದಯ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಈ ಜಾಗೃತಿ ವಾಕಥಾನ್ ಅನ್ನು ಆಯೋಜನೆ ಮಾಡಲಾಗಿತ್ತು. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು “ಕ್ಯಾನ್ ವಾಕ್” 2020ಕ್ಕೆ ಚಾಲನೆ ನೀಡಲು ಸಚಿವ ಡಾ. ಸುಧಾಕರ್ ಬಂದಿದ್ದರು. ಸಚಿವ ಡಾ. ಸುಧಾಕರ್ ಕೆ, ಬಿಗ್ ಬಾಸ್ 7 ನೇ ಆವೃತ್ತಿಯ ವಿನ್ನರ್ ಶೈನ್ ಶೆಟ್ಟಿ ಸೇರಿ ಹಲವರು ವಾಕಥಾನ್ ಅಲ್ಲಿ ಭಾಗವಹಿಸಿದ್ದು ವಿಷೇಶವಾಗಿತ್ತು.

    ನಂತರ ಮಾತನಾಡಿದ ಸಚಿವ ಡಾ. ಕೆ ಸುಧಾಕರ್ ಕ್ಯಾನ್ಸರ್ ಜೊತೆ ಹೋರಾಡಬೇಕು ಎಂದರೆ ಮೊದಲಿಗೆ ಅದರ ಬಗ್ಗೆ ಅರಿವಿರಬೇಕು. ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಬೇಕು. ಜನರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಈ ರೀತಿಯ ಕಾರ್ಯಕ್ರಮದ ಅಗತ್ಯವಿದೆ. ಯುವ ಜನತೆ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿದ್ದು ಶ್ಲಾಘನೀಯ. ವೈದ್ಯಕೀಯ ಸಚಿವನಾಗಿ, ಸ್ವತಃ ವೈದ್ಯನಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಖುಷಿಯಾಗಿದೆ ಎಂದರು.