ಹುಬ್ಬಳ್ಳಿ: ಜಿಲ್ಲೆಯಲ್ಲಿ ಕನ್ನಡ ಗೊತ್ತಿಲ್ಲ ಎನ್ನುವರ ಧಿಮಾಕು ಹೆಚ್ಚಾಗಿದೆ. ನನಗೆ ಕನ್ನಡ ಬರಲ್ಲ. ಏನು ಮಾಡ್ತೀಯಾ ಎಂದು ಮಹಾನಗರ ಪಾಲಿಕೆ ಪೌರ ಕಾರ್ಮಿಕನ ಜೊತೆಗೆ ಪ್ರತಿಷ್ಠಿತ ಬಟ್ಟೆ ಅಂಗಡಿ ಸಿಬ್ಬಂದಿ ಮೊಂಡುತನ ತೋರಿದ್ದಾನೆ.
ಹುಬ್ಬಳ್ಳಿಯ (Hubballi) ಕೊಪ್ಪಿಕರ ರಸ್ತೆಯಲ್ಲಿ ಪಾಲಿಕೆಯ ಆಟೋ ಟಿಪ್ಪರ್ ಚಾಲಕ ಮತ್ತು ಮಿನಿಸ್ಟರ್ ವೈಟ್ ಬಟ್ಟೆ ಅಂಗಡಿ ಸಿಬ್ಬಂದಿ ಜೊತೆಗೆ ಈ ಗಲಾಟೆ ನಡೆದಿದೆ. ಕಸ ಹಾಕಲು ಬಂದ ಶಾಪ್‌ನ ಸಿಬ್ಬಂದಿ ಬಳಿ ಪೌರ ಕಾರ್ಮಿಕರೊಬ್ಬರು ಕನ್ನಡ ಮಾತನಾಡಲು ಬರಲ್ವ ಎಂದು ಕೇಳಿದ್ದಾನೆ. ಇದನ್ನೂ ಓದಿ: `ಪರಮ್ ಸುಂದರಿ’ ಪ್ರೀಮಿಯರ್‌ನಲ್ಲಿ ಪರಮ ಸುಂದರಿಯಾಗಿ ಮಿಂಚಿದ ಜಾನ್ವಿ
ಈ ವೇಳೆ ಸಿಬ್ಬಂದಿ ನನಗೆ ಕನ್ನಡ ಬರಲ್ಲ, ಏನು ಮಾಡ್ತೀಯಾ ಎಂದು ಅವಾಜ್ ಹಾಕಿದ್ದಾನೆ. ಹುಬ್ಬಳ್ಳಿಗೆ ಬಂದು ಇಷ್ಟು ವರ್ಷವಾದರೂ ಕನ್ನಡ ಬರಲ್ವ? ಕನ್ನಡದಲ್ಲಿ ಮಾತನಾಡಲು ಬರದಿದ್ದರೇ ಕನ್ನಡದಲ್ಲಿ ಮಾತನಾಡುವವರನ್ನು ಕಸ ಹಾಕಲು ಕಳುಹಿಸಿ ಶಾಪ್ ಸಿಬ್ಬಂದಿಯನ್ನು ಪೌರ ಕಾರ್ಮಿಕರು ತರಾಟೆಗೆ ತೆಗೆದುಕೊಂಡಿದ್ದಾನೆ. ಇದನ್ನೂ ಓದಿ: ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು, ಮಾವೋವಾದಿ, ಜಿಹಾದಿಗಳಿದ್ದಾರೆ: ಚಕ್ರವರ್ತಿ ಸೂಲಿಬೆಲೆ
ಬಟ್ಟೆ ಶಾಪ್‌ನ ಮುಂಭಾಗವೇ ಪೌರ ಕಾರ್ಮಿಕ ಹಾಗೂ ಬಟ್ಟೆ ಶಾಪ್‌ನ ಸಿಬ್ಬಂದಿ ನಡುವೆ ಕೆಲಹೊತ್ತು ವಾಗ್ವಾದ ನಡೆದಿದೆ.
ಮೈಸೂರು: ಪ್ರಧಾನಿ ಮೋದಿ (Narendra Modi) ಅವರ 73ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಜಿಲ್ಲಾ ಬಿಜೆಪಿ (BJP) ವತಿಯಿಂದ ಸೇವಾ ಪಾಕ್ಷಿಕವಾಗಿ ಪೌರಕಾರ್ಮಿಕರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಪೌರಕಾರ್ಮಿಕರ ಪಾದಪೂಜೆ ಮಾಡಿದರು. ನಗರದ ಕುರುಬಾರಹಳ್ಳಿಯ ಪೌರಕಾರ್ಮಿಕರ ಕಾಲೋನಿಯಲ್ಲಿ ಈ ಪಾದಪೂಜೆ ನಡೆಯಿತು. ಸಂಸದರಿಗೆ ಶಾಸಕ ಶ್ರೀವತ್ಸ, ಮೇಯರ್ ಶಿವಕುಮಾರ್ ಸಾಥ್ ನೀಡಿದರು. ಇದನ್ನೂ ಓದಿ: ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಟೆಂಡರ್: ತಂಗಡಗಿ ಲೇವಡಿ
ಪೌರಕಾರ್ಮಿಕರಿಗೆ ಪಾದಪೂಜೆ ಮಾಡುವ ಮೂಲಕ ಸೇವಾ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು, ಒಂದು ವಾರಗಳ ಕಾಲ ವಿವಿಧ ಸೇವಾ ಕಾರ್ಯ ಮಾಡಲು ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದಾರೆ.
ಬೆಂಗಳೂರು: ಎಲ್ಲ ಸಂದರ್ಭಗಳಲ್ಲಿಯೂ ನಗರದ ಸ್ವಚ್ಛತೆ, ಆರೋಗ್ಯವನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿರುವ ಪೌರಕಾರ್ಮಿಕರು ಮತ್ತು ಅವರ ಕುಟುಂಬದ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬೇಕೆಂದು ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರು ಡಾ. ಸಿಸ್ಟರ್ ಅರ್ಪಣಾ ಹೇಳಿದರು.
ಬೆಂಗಳೂರು ಮೌಂಟ್ ಕಾರ್ಮೆಲ್ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಮೈಕ್ರೊ ಜೋನ್ ವಿಭಾಗವು ಐಎಸ್‍ಆರ್‍ಸಿ ಜೊತೆ ಸೇರಿ ಆಯೋಜಿಸಲಾಗಿದ್ದ ‘ಸ್ವಚ್ಛತೆಯ ಹರಿಕಾರರಿಗೊಂದು ಸಲಾಂ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾಲೇಜು ಹಾಗೂ ವಿದ್ಯಾರ್ಥಿಗಳು ಸಮುದಾಯದ ಅಭಿವೃದ್ಧಿಯಲ್ಲಿ ತೋರಬೇಕಾದ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿದ್ಯಾರ್ಥಿನಿಯರಿಗೆ ಹಾಗೂ ಪೌರ ಕಾರ್ಮಿಕರಿಗೆ ವಿವರಿಸಿದರು.
ಕಾಲೇಜಿನ ಗಣ್ಯರೊಂದಿಗೆ ಪೌರಕಾರ್ಮಿಕರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ಪೌರಕಾರ್ಮಿಕರ ದೈನಂದಿನ ಜೀವನವನ್ನು ಹಾಗೂ ಅವರು ಎದುರಿಸುವ ಸವಾಲುಗಳನ್ನು ಕಿರು ನಾಟಕ, ಸಂಗೀತ, ಮೈಮ್ ಮೂಲಕ ಅತ್ಯಾಕರ್ಷಕವಾಗಿ ಪ್ರದರ್ಶಿಸಿದರಲ್ಲದೆ ಪೌರಕಾರ್ಮಿಕರ ಮಹತ್ವವನ್ನು ಅವರಿಗೆ ಮನಮುಟ್ಟುವ ರೀತಿಯಲ್ಲಿ ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಸೂಕ್ಷ್ಮಾಣು ಜೀವವಿಜ್ಞಾನದ ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಛತೆ ಮತ್ತು ಸಾಮೂಹಿಕ ಸ್ವಚ್ಛತೆಯನ್ನು ಪಾಲಿಸುವುದರಿಂದ ವೈರಸ್ ಮತ್ತು ಬ್ಯಾಕ್ಟೀರಿಯಗಳಿಂದ ಹೇಗೆ ದೂರವಿರಬಹುದು ಎಂಬುದರ ಕುರಿತು ಅರಿವು ಮೂಡಿಸಿದರು. ನಗರವನ್ನು ಸ್ವಚ್ಛವಾಗಿರಿಸಲು ಪೌರಕಾರ್ಮಿಕರು ನೀಡುತ್ತಿರುವ ಉತ್ತಮ ಸೇವೆಗೆ ವಿದ್ಯಾರ್ಥಿನಿಯರು ನೃತ್ಯ ಹಾಗೂ ಹಾಡುವ ಮೂಲಕ ಧನ್ಯವಾದ ಅರ್ಪಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡಣೆ ವರದಿ ಸಲ್ಲಿಕೆ – ಯಾವ ಪ್ರದೇಶಕ್ಕೆ ಎಷ್ಟು ಸೀಟು?
ಇದೇ ಸಂದರ್ಭದಲ್ಲಿ ಅವರಿಗೆ ವೈಯಕ್ತಿಕ ಸ್ವಚ್ಛತೆ ಕಾಪಾಡಲು ಪೂರಕವಾದ ಕಿಟ್ ಹಾಗೂ ಕುಕ್ಕರ್‍ಗಳನ್ನು, ಬ್ಯಾಗ್‍ಗಳನ್ನು ವಿತರಿಸಲಾಯಿತು. ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ದೀಪ ಬೆಳಗಿದರಲ್ಲದೇ, ತಮ್ಮನ್ನು ಅಧ್ಯಯನ ಮಾಡಿ ದಿನ ಪೂರ್ತಿಯ ಚಟುವಟಿಕೆಗಳನ್ನು ನಮಗೆ ತೋರಿಸಿ ಸಂತಸ ನೀಡಿದ ಹಾಗೂ ಕೋವಿಡ್ ಸಮಯದಲ್ಲೂ ನಾವು ನೀಡಿದ ಸೇವೆಯನ್ನು ಸ್ಮರಿಸಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸೆಲ್ಯೂಟ್ ಹೊಡೆದು ಚಪ್ಪಾಳೆ ಹೊಡೆದು ಗೌರವಿಸಿದ ವಿದ್ಯಾರ್ಥಿಗಳ ಬಗ್ಗೆ ಅತೀವ ಸಂತಸ ವ್ಯಕ್ತ ಪಡಿಸಿದರು.
ನಮಗೆ ನಾವು ನೀಡಿದ ಸೇವೆ ಸಾರ್ಥಕ ಎಂದು ಅನಿಸಿದ ಕ್ಷಣ ಇದೆಂದು ಪೌರಕಾರ್ಮಿಕರಾದ ಮಿಶಾ ಅಭಿಪ್ರಾಯ ಪಟ್ಟರು. ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಡಾ. ಸರಯೂ ಮೋಹನ್ ಅವರು ಮಾತನಾಡಿ ಪೌರಕಾರ್ಮಿಕರಿಲ್ಲದ ಸಮಾಜವನ್ನು ಊಹಿಸಲು ಅಸಾಧ್ಯವಾದುದು. ನಗರವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುವ ಅವರ ಜೀವನವೂ ಸುಂದರ ಹಾಗೂ ಆರೋಗ್ಯ ಪೂರ್ಣವಾಗಿರಲಿ ಎಂದು ಹಾರೈಸಿದರು.
ಪೌರಕಾರ್ಮಿಕರು ತಮ್ಮ ಆರೋಗ್ಯದ ಜೊತೆಗೆ ತಮ್ಮ ಕುಟುಂಬದವರ ಹಿತವನ್ನು ಗಮನದಲ್ಲಿರಿಸಿ ರೋಗ ಮುಕ್ತವಾಗಿ ಬದುಕಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಅದ್ಭುತವಾಗಿ ವಿವಿಧ ಮಾದರಿಗಳ ಮೂಲಕ ತೋರಿಸಿ ಕೊಟ್ಟಿದ್ದಾರೆ. ತನ್ಮೂಲಕ ಈ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇಂದು ನಾವು ನೀಡಿದ ಕಾರ್ಯಕ್ರಮ ಸಾರ್ಥಕವಾಗಲಿದೆ ಎಂದರು. ಇದನ್ನೂ ಓದಿ: ಅಶ್ವತ್ಥ ನಾರಾಯಣ್ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡುತ್ತಿದ್ದಾರೆ: ಎಸ್.ಟಿ.ಸೋಮಶೇಖರ್
ಮೌಂಟ್ ಕಾರ್ಮೆಲ್ ಕಾಲೇಜು ಸಮಾಜಕ್ಕೆ ಪೂರಕವಾದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೆಂದೇ ಐಎಸ್‍ಆರ್‍ಸಿ ಸಂಯೋಜಕರು ರಜನಿ ಕೋರ, ನೇತೃತ್ವದಲ್ಲಿ ವಿಭಾಗವನ್ನು ರಚಿಸಿದೆ ಪ್ರತಿ ವಿಭಾಗಗಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಐಎಸ್‍ಆರ್‍ಸಿ ಪ್ರೇರೇಪಿಸುತ್ತದಲ್ಲದೇ ವಿದ್ಯಾರ್ಥಿಗಳಿಗೆ ಸಾಮಾಜಿಕ ಜೀವನದ ಬಗ್ಗೆ ಹೊಸ ದೃಷ್ಟಿಯನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದರು.
ಉಪ ಪ್ರಾಂಶುಪಾಲರಾದ ಡಾ. ಚಾರ್ಮೈನ್ ಜೆರೋಮ್, ಕ್ಯಾಂಪಸ್ ಸಂಯೋಜಕರಾದ ಡಾ.ಸಿಸ್ಟರ್ ಸಜಿತ ಮತ್ತು ಡಾ.ಲೇಖಾ ಜಾರ್ಜ್, ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಡಾ. ಸರಯೂ ಮೋಹನ್, ಮೈಕ್ರೊ ಜೋನ್ ಸಂಯೋಜಕರು ಅನು ಮರಿಯಮ್ ಕುರಿಯನ್, ಐಎಸ್‍ಆರ್‍ಸಿ ಸಂಯೋಜಕರು ರಜನಿ ಕೋರ, ಮೈಕ್ರೋ ಬಯಾಲಜಿ ಕಾರ್ಯದರ್ಶಿ ಋತು ಫರ್ನಾಂಡಿಸ್, ಸಹ ಕಾರ್ಯದರ್ಶಿ ರಚನಾ ಬಿ.ಆರ್ ಉಪಸ್ಥಿತರಿದ್ದರು.
ಬಳ್ಳಾರಿ: ಜಿಲ್ಲೆಯ ಸಂಡೂರು ಪುರಸಭೆಯ ಪೌರ ಕಾರ್ಮಿಕರಾದ ಗಿರಿಯಪ್ಪರವರ ಮಗ ಯಾಹನ್ ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.98.88 ಅಂಕಗಳನ್ನು ಪಡೆದು ಸಂಡೂರು ತಾಲೂಕಿಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.
ಸಂಡೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪೌರ ಕಾರ್ಮಿಕನ ಮಗ ಯಾಹನ್ ಅವರಿಗೆ ಸಂಡೂರು ಪುರಸಭೆ ಅನುದಾನದ ಅಡಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ಲ್ಯಾಪ್ ಟಾಪ್ ವಿತರಿಸಿಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಕುಲ್ ಅವರು ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಮೇಶ್ ಬಿ.ಎಸ್, ಸಂಡೂರು ಪುರಸಭೆಯ ಮುಖ್ಯಾಧಿಕಾರಿ ಎಸ್.ಸತ್ಯನಾರಾಯಣರಾವ್ ಹಾಗೂ ವಿದ್ಯಾರ್ಥಿಯ ತಂದೆ-ತಾಯಿ ಹಾಜರಿದ್ದರು.
ಹುಬ್ಬಳ್ಳಿ: ಕೊರೊನಾ ಹರಡುವ ಭೀತಿ ಹಾಗೂ ಲಾಕ್‍ಡೌನ್ ಘೋಷಣೆಯಾದರೂ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೇ ಕಾರ್ಯನಿರ್ವಹಿಸಿ ಹೃದಯಾಘಾತದಿಂದ ಸಾವನ್ನಪ್ಪಿದ ಪೌರಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಲ್ಲಾ ಎಸ್‍ಸಿ, ಎಸ್‍ಟಿ ಪೌರಕಾರ್ಮಿಕರ ಸಂಘಟನೆಯ ವತಿಯಿಂದ ಹು-ಧಾ ಮಹಾನಗರ ಪಾಲಿಕೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಲಾಯಿತು.
ಪ್ರಕಾಶ ಹನುಮಂತಪ್ಪ ಚಿಕ್ಕತುಂಬಳ ಅವರು ಮೃತಪಟ್ಟಿದ್ದು, ವಾರ್ಡ್ ನಂ.54ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಮೃತನ ಕುಟುಂಬಕ್ಕೆ ಪರಿಹಾರ ನೀಡಿ, ಕೆಲಸ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸರ್ಕಾರದಿಂದ 50 ಲಕ್ಷ ರೂ. ಪರಿಹಾರ ಹಾಗೂ ಕುಟುಂಬಸ್ಥರಿಗೆ ಪಾಲಿಕೆಯಲ್ಲಿ ಕೆಲಸ ನೀಡುವಂತೆ ಸಂಘಟನೆ ಒತ್ತಾಯಿಸಿದೆ.
ಪೌರ ಕಾರ್ಮಿಕ ಸಾವನ್ನಪ್ಪಿದರೂ ಸೌಜನ್ಯಕ್ಕೂ ಪಾಲಿಕೆ ಅಧಿಕಾರಿಗಳು ಆಗಮಿಸಿಲ್ಲ. ಸಂಘಟನೆಯಿಂದ ಪ್ರತಿಭಟನೆ ನಡೆಸಿದರೂ ಕ್ಯಾರೆ ಎಂದಿಲ್ಲ. ಅಧಿಕಾರಿಗಳು ನಿಷ್ಕಾಳಜಿ ತೋರಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಪೌರ ಕಾರ್ಮಿಕರ ಅನುಪಸ್ಥಿತಿಯಲ್ಲಿ ಸಚಿವ ಸುರೇಶ್ ಕುಮಾರ್ ತಮ್ಮ ಮನೆಯ ಮಂದಿನ ರಸ್ತೆಯ ಕಸವನ್ನು ಗುಡಿಸಿದ್ದಾರೆ.
ತಮ್ಮ ಮನೆಯ ಮುಂದಿನ ರಸ್ತೆಯ ಕಸ ಗುಡಿಸುವ ಲಿಂಗಮ್ಮ ಅವರ ಕಾಲಿಗೆ ಪಟ್ಟಾಗಿತ್ತು. ಹೀಗಾಗಿ ಇಂದು ಗಂಗಮ್ಮನವರು ಕೆಲಸಕ್ಕೆ ಗೈರಾಗಿದ್ದರು. ರಸ್ತೆಯಲ್ಲಿ ಕಸ ಇರೋದನ್ನು ಗಮನಿಸಿದ ಸಚಿವರು ಪತ್ನಿ ಜೊತೆ ಸೇರಿ ಕಸವನ್ನು ಗುಡಿಸಿದ್ದಾರೆ.
ಈ ಕುರಿತು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿರುವ ಸಚಿವರು, ಇಂದು ಬೆಳಗ್ಗೆ ವಾಕಿಂಗ್ ಕಡಿಮೆ ಮಾಡಿ ನಮ್ಮ ಮನೆಯ ಮುಂದಿನ ಅರ್ಧ ರಸ್ತೆಯನ್ನು ನನ್ನ ಪತ್ನಿ ಜೊತೆಗೂಡಿ ಗುಡಿಸಿದಾಗ ವ್ಯಾಯಾಮ ಮತ್ತು ಆನಂದ ಎರಡರ ಲಾಭವೂ ಆಯಿತು. ನಮ್ಮ ರಸ್ತೆಯ ಪೌರ ಕಾರ್ಮಿಕಿ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದೆ. ಆಕೆಯ ಭಾರ ಸ್ವಲ್ಪವಾದರೂ ಕಡಿಮೆಯಾಗಲಿ ಎಂಬ ಉದ್ದೇಶದಿಂದ ಕಸ ಗುಡಿಸಿದೆ. ನಾವೆಲ್ಲರೂ ಆಗಾಗ ಈ ಕೆಲಸ ಮಾಡಬಹುದಲ್ಲವೇ? ಸ್ವಚ್ಛತೆ ಕೇವಲ ಒಂದು ಕಾರ್ಯಕ್ರಮವಾಗುವುದರ ಜೊತೆಗೆ ಕಾರ್ಯವೂ ಆದರೆ ಉತ್ತಮ ಎಂದಿದ್ದಾರೆ.