Tag: Pouch Milk

  • ಮದರ್ ಡೈರಿ ಶಾಕ್‌ – ಇಂದಿನಿಂದ ಪ್ರತಿ ಲೀಟರ್‌ ಹಾಲಿನ ದರ 2 ರೂ. ಹೆಚ್ಚಳ!

    ಮದರ್ ಡೈರಿ ಶಾಕ್‌ – ಇಂದಿನಿಂದ ಪ್ರತಿ ಲೀಟರ್‌ ಹಾಲಿನ ದರ 2 ರೂ. ಹೆಚ್ಚಳ!

    ನವದೆಹಲಿ: ಅಮುಲ್‌ ಹಾಲಿನ ದರ ಏರಿಕೆ ಬೆನ್ನಲ್ಲೇ ಮದರ್ ಡೈರಿ (Mother Dairy) ಸಹ ಹಸು ಹಾಗೂ ಎಮ್ಮೆ ಹಾಲು ಸೇರಿದಂತೆ ವಿವಿಧ ಮಾದರಿಯ ಹಾಲಿನ ಬೆಲೆಯನ್ನು (Milk Prices) ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಿದೆ.

    ಜೂನ್‌ 3ರಿಂದಲೇ (ಇಂದು) ನಿಗದಿತ ಬೆಲೆ ಜಾರಿಗೆ ಬರಲಿದೆ ಎಂದು ಮದರ್ ಡೈರಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸಕ್ತ ವರ್ಷದಲ್ಲಿ ಇದು ಮೊದಲ ಬಾರಿಗೆ ಬೆಲೆ ಏರಿಕೆಯಾಗಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್‌ ಟಾಪ್‌ ಕಮಾಂಡರ್ಸ್‌

    ಯಾವ ಮಾದರಿಯ ಹಾಲಿಗೆ ಎಷ್ಟು ಬೆಲೆ ಏರಿಕೆ?
    ಟೋಕನ್‌ ಮಿಲ್ಕ್‌ 52 ರೂ. ನಿಂದ 54 ರೂ.ಗೆ ಹೆಚ್ಚಿಸಲಾಗಿದೆ. ಇನ್ನುಳಿದಂತೆ ಟೋನ್ಡ್‌ ಮಿಲ್ಕ್‌ (ಟೆಟ್ರಾ ಪ್ಯಾಕ್‌) 54 ರೂ. ನಿಂದ 56 ರೂ.ಗೆ, ಹಸುವಿನ ಹಾಲು 56 ರಿಂದ 58 ರೂ.ಗೆ, ಕೆನೆ ಹಾಲು 66 ರೂ. ನಿಂದ 68 ರೂ.ಗೆ. ಎಮ್ಮೆ ಹಾಲು 70 ರೂ. ನಿಂದ 72 ರೂ. ಹಾಗೂ ಡಬಲ್‌ ಟೋನ್ಡ್‌ ಪ್ಯಾಕೆಟ್‌ ಹಾಲಿನ ದರ 48 ರೂ. ನಿಂದ 50 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್‌ ಡೌನ್‌, ಹೂಡಿಕೆದಾರರ ಆಕ್ರೋಶ

    ದೆಹಲಿ ಎನ್‌ಸಿಆರ್‌ನಲ್ಲಿ ಪ್ರತಿದಿನ ಸುಮಾರು 35 ಲಕ್ಷ ಲೀಟರ್‌ ತಾಜಾ ಹಾಲು ಮಾರಾಟ ಮಾಡುತ್ತಿರುವ ಮದರ್‌ ಡೈರಿ 2023ರ ಫೆಬ್ರವರಿಯಲ್ಲಿ ಕೊನೆಯಬಾರಿಗೆ ಹಾಲಿನ ದರವನ್ನು ಹೆಚ್ಚಿಸಿತ್ತು.

    ಕಳೆದ ಕೆಲವು ತಿಂಗಳಲ್ಲಿ ಹಾಲಿನ ಸಂಗ್ರಹಣೆಗೆ ಹೆಚ್ಚಿನ ಬೆಲೆ ಪಾವತಿಸಿದ್ದರೂ ದರ ಏರಿಕೆ ಮಾಡಿರಲಿಲ್ಲ. ಇತ್ತೀಚೆಗೆ ಕೆಲವೆಡೆ ಬಿಸಿಲಿನ ತಾಪ ಏರಿಕೆಯಿಂದ ಹಾಲಿನ ಉತ್ಪಾದನೆ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಬೆಲೆ ಏರಿಕೆ ಮಾಡಿರುವುದಾಗಿ ಮದರ್‌ ಡೈರಿ ಹೇಳಿದೆ. ಇದನ್ನೂ ಓದಿ: Election Results – ಟ್ರೆಂಡ್‌ ಬೇಗನೇ ಗೊತ್ತಾದ್ರೂ ತಡವಾಗಲಿದೆ ಅಧಿಕೃತ ಫಲಿತಾಂಶ

  • ಇಂದಿನಿಂದ ಮತ್ತೆ ಅಮುಲ್ ಹಾಲಿನ ಬೆಲೆ ಏರಿಕೆ

    ಇಂದಿನಿಂದ ಮತ್ತೆ ಅಮುಲ್ ಹಾಲಿನ ಬೆಲೆ ಏರಿಕೆ

    ಗಾಂಧಿನಗರ: ಅಮುಲ್ ಬ್ರ‍್ಯಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF) ಮತ್ತೆ ಹಾಲಿನ ಬೆಲೆ ಏರಿಕೆ ಮಾಡಿದೆ.

    ಹಾಲಿನ ಬೆಲೆ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿದೆ. ದರ ಪರಿಕ್ಷರಣೆಯ ನಂತರ ಅಮುಲ್ ಗೋಲ್ಡ್ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 66 ರೂ. ಆಗಿದೆ. ಅಮುಲ್ ತಾಜಾ 1 ಲೀಟರ್‌ಗೆ 54 ರೂ. ಹಾಗೂ ಅಮುಲ್ ಎ2 ಎಮ್ಮೆ ಹಾಲಿನ ದರ ಪ್ರತಿ ಲೀಟರ್‌ಗೆ 70 ರೂ.ಗಳಿಗೆ ಏರಿಕೆ ಕಂಡಿದೆ. ಈ ದರ ಫೆ.3ರಿಂದಲೇ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    ಜಿಸಿಎಂಎಂಎಫ್ 2022ರ ಅಕ್ಟೋಬರ್‌ನಲ್ಲಿ ಗೋಲ್ಡ್, ತಾಜಾ ಹಾಗೂ ಶಕ್ತಿ ಬ್ರ್ಯಾಂಡ್‌ಗಳ ಹಾಲಿನ ಬೆಲೆಯನ್ನು 2 ರೂ. ಹೆಚ್ಚಿಸಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿ20 ಶೃಂಗಸಭೆ – ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ No Fly Zone ಜಾರಿ

    ಇದೀಗ ಫೆ.3ರಿಂದ ಜಾರಿಗೆ ಬರುವಂತೆ ಅಮುಲ್ ಪ್ಯಾಕೆಟ್ ಹಾಲಿನ ಬೆಲೆಯನ್ನು ಪರಿಷ್ಕರಿಸಿದೆ. ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಆಗಿರುವುದು ಹಾಗೂ ದನಗಳ ಮೇವಿನ ವೆಚ್ಚ ಏರಿಕೆಯಾಗಿರುವುದರಿಂದ ಹಾಲಿನ ದರ ಹೆಚ್ಚಿಸಲಾಗಿದೆ ಎಂದು ಅಮಲ್ ಹೇಳಿದೆ. ಇದನ್ನೂ ಓದಿ: `ಕಲಾತಪಸ್ವಿ’ ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ವಿಶ್ವನಾಥ್ ನಿಧನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k