Tag: pouch

  • ಆರ್ಡರ್ ಮಾಡಿದ್ದು ಕವರ್, ಬಂದಿದ್ದು ಒರಿಜಿನಲ್ ಪಾಸ್‌ಪೋರ್ಟ್‌!

    ಆರ್ಡರ್ ಮಾಡಿದ್ದು ಕವರ್, ಬಂದಿದ್ದು ಒರಿಜಿನಲ್ ಪಾಸ್‌ಪೋರ್ಟ್‌!

    ತಿರುವನಂತಪುರಂ: ಆರ್ಡರ್ ಮಾಡಿದ ವಸ್ತುಗಳ ಬದಲಾಗಿ ಗ್ರಾಹಕರಿಗೆ ಬೇರೆ ವಸ್ತುಗಳನ್ನು ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಇದೀಗ ಪಾಸ್‍ಪೋರ್ಟ್ ಕವರ್ ಆರ್ಡರ್ ಮಾಡಿದೆ ಒರಿಜಿನಲ್ ಪಾಸ್‌ಪೋರ್ಟ್‌ ಡೆಲಿವರಿಯಾಗಿದೆ. ಈ ಘಟನೆ ವಯನಾಡು ಜಿಲ್ಲೆಯ ಕಣಿಯಂಬೆಟ್ಟ ಎಂಬಲ್ಲಿ ನಡೆದಿದೆ.

    ನಡೆದಿದ್ದೇನು: ಮಿಥುನ್ ಕಳೆದ ಅಕ್ಟೋಬರ್ 30ರಂದು ಆನ್ಲೈನ್‍ನಲ್ಲಿ ಪಾಸ್‌ಪೋರ್ಟ್‌ ಕವರ್ ಆರ್ಡರ್ ಮಾಡಿದ್ದರು. ನವೆಂಬರ್ 1 ರಂದು ಆರ್ಡರ್ ಮಾಡಿದ್ದ ಕವರ್‍ನ ಪಾರ್ಸೆಲ್ ತಲುಪಿದೆ. ಪಾರ್ಸೆಲ್ ತೆರೆದು ನೋಡಿದರೆ ಅದರಲ್ಲಿ ಪಾಸ್‍ಪೋರ್ಟ್ ಕವರ್ ಜೊತೆಗೆ ಬೇರೆ ವ್ಯಕ್ತಿಯ ಪಾಸ್‌ಪೋರ್ಟ್‌ ಕೂಡ ಬಂದಿದೆ. ಕೂಡಲೇ ಅವರು ಕಸ್ಟಮರ್ ಕೇರ್‍ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

     

    ಬಳಿಕ ಮಿಥುನ್ ಬಾಬು ಪಾಸ್‌ಪೋರ್ಟ್‌ಅನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸುವ ಪ್ರಯತ್ನ ಆರಂಭಿಸಿದ್ದಾರೆ. ಪಾಸ್‌ಪೋರ್ಟ್‌ನಲ್ಲಿರುವ ವಿವರಗಳ ಪ್ರಕಾರ, ಅದು ತ್ರಿಶೂರ್‍ನ ಮೊಹಮ್ಮದ್ ಸಾಲಿಹ್ ಎಂಬುವರಿಗೆ ಸೇರಿದ್ದೆಂದು ಗೊತ್ತಾಗಿದೆ. ಪಾಸ್‌ಪೋರ್ಟ್‌ನಲ್ಲಿ ಫೋನ್‍ನಂಬರ್‍ನಂತಹ ವಿವರಗಳಿಲ್ಲ. ಹೀಗಿದ್ದರೂ ಮಿಥುನ್, ಸಾಲಿಹ್ ಅವರ ಮಾಹಿತಿ ಸಂಗ್ರಹಿಸಿ ಸಂಪರ್ಕಿಸಿದ್ದಾರೆ. ಶೀಘ್ರವೇ ತಮ್ಮ ಪಾಸ್‌ಪೋರ್ಟ್‌ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ


    ಸಾಲಿಹ್ ಮೊದಲು ಪಾಸ್‌ಪೋರ್ಟ್‌ ಕವರ್ ಆರ್ಡರ್ ಮಾಡಿದ್ದಾರೆ. ಕವರ್ ಬಂದಾಗ ಅದರಲ್ಲಿ ತನ್ನ ಪಾಸ್‌ಪೋರ್ಟ್‌ ಇಟ್ಟು ಚೆಕ್ ಮಾಡಿದ್ದಾರೆ. ಇಷ್ಟವಾಗದಿದ್ದಾಗ ಕವರ್ ವಾಪಸ್ ಕಳಿಸಿದ್ದಾರೆ. ಆದರೆ ಪಾಸ್‌ಪೋರ್ಟ್‌ ಅನ್ನು ಕವರ್‍ನಲ್ಲೇ ಬಿಟ್ಟು ವಾಪಸ್ ಮಾಡಿರಬಹದು ಎಂದು ಮಿಥುನ್ ಬಾಬು ಹೇಳಿದ್ದಾರೆ. ಕವರ್ ವಾಪಸ್ ಪಡೆದಿದ್ದ ಅಮೆಜಾನ್ ಅದನ್ನು ಪರಿಶೀಲನೆ ಮಾಡದೆ ಬೇರೆ ಆರ್ಡರ್ ಬಂದಾಗ ಅದನ್ನು ಮತ್ತೊಬ್ಬ ಗ್ರಾಹಕನಿಗೆ ಕಳುಹಿಸಿದ್ದಾಗ ಇಂಥಹ ಎಡವಟ್ಟು ಆಗಿದೆ.