Tag: Pothholes

  • ಎಂಜಿನಿಯರ್‌ಗಳನ್ನೇ ಬದಲಿಸುತ್ತೇವೆ: ಬಿಬಿಎಂಪಿಗೆ ಹೈಕೋರ್ಟ್‌ ಎಚ್ಚರಿಕೆ

    ಎಂಜಿನಿಯರ್‌ಗಳನ್ನೇ ಬದಲಿಸುತ್ತೇವೆ: ಬಿಬಿಎಂಪಿಗೆ ಹೈಕೋರ್ಟ್‌ ಎಚ್ಚರಿಕೆ

    ಬೆಂಗಳೂರು: ರಸ್ತೆ ಗುಂಡಿ ವಿಚಾರವಾಗಿ ಬಿಬಿಎಂಪಿ ಮತ್ತೊಮ್ಮೆ ಹೈಕೋರ್ಟ್ ಸಿಟ್ಟಿಗೆ ಗುರಿಯಾಗಿದೆ. ಬಿಬಿಎಂಪಿ ಇಂಜಿನಿಯರ್‌ಗಳನ್ನೇ ಬದಲಿಸಲು ಸರ್ಕಾರಕ್ಕೆ ಸೂಚಿಸುತ್ತೇವೆ ಅಂತ ನ್ಯಾಯಪೀಠ ಎಚ್ಚರಿಕೆ ನೀಡಿದೆ.

    ಸಾವಿರಾರು ಕೋಟಿ ನೀಡಿದರೂ ರಸ್ತೆ ಸರಿಯಾಗುತ್ತಿಲ್ಲ. ಜನ ಬಲಿಯಾಗೋದು ಕಡಿಮೆಯಾಗುತ್ತಿಲ್ಲ ಎಂದು ಹೇಳಿ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಸುರಕ್ಷಿತವಾಗಿ ಮಗಳು ಭಾರತಕ್ಕೆ – ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್‍ಗೆ ನೀಡಿದ ತಂದೆ

    ಹೈಕೋರ್ಟ್‌ ಎಚ್ಚರಿಕೆಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ರಸ್ತೆ ಗುಣಮಟ್ಟದಲ್ಲಿ ರಾಜಿ ಆಗುವುದಿಲ್ಲ. ಹೈಕೋರ್ಟ್ ಆದೇಶ ಪಾಲಿಸ್ತೇವೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಮಾರ್ಚ್ 15 ರೊಳಗೆ ವರದಿ ಸಲ್ಲಿಸಲು ಹೈಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ

    ಇದೇ ವೇಳೆ, ನಿರ್ಬಂಧ ಇದ್ದರೂ ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ಕಸ ತುಂಬುತ್ತಿರುವುದನ್ನು ಹೈಕೋರ್ಟ್ ಆಕ್ಷೇಪಿಸಿದೆ. ಕೋರ್ಟ್ ಆದೇಶ ಉಲ್ಲಂಘಿಸಿದರೆ ಆಯುಕ್ತರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ವಾರ್ನಿಂಗ್ ನೀಡಿದೆ. ಮುಖ್ಯ ಆಯುಕ್ತರು ಈ ವಿಚಾರಕ್ಕೆ ಕ್ಷಮೆ ಕೋರಿದ್ದಾರೆ.

  • ದ್ವಿಚಕ್ರ ವಾಹನವೇರಿ ಮೇಯರ್ ರಿಂದ ರಸ್ತೆ ಗುಂಡಿ ಪರಿಶೀಲನೆ- ದಾರಿ ಮಧ್ಯೆ ಸಿಕ್ಕ ನಲಪಾಡ್!

    ದ್ವಿಚಕ್ರ ವಾಹನವೇರಿ ಮೇಯರ್ ರಿಂದ ರಸ್ತೆ ಗುಂಡಿ ಪರಿಶೀಲನೆ- ದಾರಿ ಮಧ್ಯೆ ಸಿಕ್ಕ ನಲಪಾಡ್!

    ಬೆಂಗಳೂರು: ಬಿಬಿಎಂಪಿ ಮೇಯರ್ ಸಂಪತ್ ರಾಜ್ ಮಂಗಳವಾರ ರಾತ್ರಿ 9 ಗಂಟೆಯಿಂದ ತಡ ರಾತ್ರಿವರೆಗೂ ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನ ಹಲವೆಡೆ ರಸ್ತೆ ಗುಂಡಿ ವೀಕ್ಷಣೆ ಮಾಡಿದ್ದಾರೆ.

    ಲಾಟರಿ ಮೂಲಕ ವೀಕ್ಷಣೆ ವಲಯವನ್ನು ಆಯ್ಕೆ ಮಾಡಿಕೊಂಡು ಬಿಬಿಎಂಪಿ ಕೇಂದ್ರ ಕಚೇರಿಯಿಂದ ದ್ವಿಚಕ್ರ ವಾಹನವೇರಿ ಗುಂಡಿಗಳ ಪರಿಶೀಲನೆಗೆ ತೆರಳಿದರು. ಆರಂಭದಲ್ಲಿ ಪಾಲಿಕೆ ಕಚೇರಿ ಬಳಿಯೇ ಸಂಪತ್ ರಾಜ್ ಅವರಿಗೆ ಗುಂಡಿಗಳ ದರ್ಶನವಾಯಿತು. ಎಂಜಿ ರೋಡ್ ಮತ್ತು ಟೆಂಡರ್ ಶ್ಯೂರ್ ರಸ್ತೆ ಹದಗೆಟ್ಟ ಹಿನ್ನೆಲೆ, ಈ ಎರಡು ಕಾಮಗಾರಿಯ ಗುತ್ತಿಗೆದಾರರಿಗೆ 10 ಲಕ್ಷ ರೂ. ದಂಡ ವಿಧಿಸಲು ಮೇಯರ್ ಸೂಚನೆ ನೀಡಿದರು. ಇತ್ತ ಬೆಂಗಳೂರು ಕ್ಲಬ್ ಮತ್ತು ಸುಬ್ಬಯ್ಯ ವೃತ್ತದ ಹತ್ತಿರ ರಸ್ತೆ ಕಾಮಗಾರಿಯ ಗುತ್ತಿಗೆದಾರರಿಗೆ 1 ಲಕ್ಷ ರೂ. ದಂಡ ವಿಧಿಸುವಂತೆ ಸೂಚಿಸಿದರು.

    ಪರಿಶೀಲನೆಯ ಬಳಿಕ ಮಾತನಾಡಿದ ಮೇಯರ್ ಸಂಪತ್ ರಾಜ್, ಮಾಧ್ಯಮಗಳ ವರದಿ ಆಧರಿಸಿ ರಸ್ತೆಗಳಲ್ಲಿನ ಗುಂಡಿಗಳ ವೀಕ್ಷಣೆ ಮಾಡಲಾಗುತ್ತಿದೆ. ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳು ಕಂಡು ಬಂದಿದ್ದು ಸರಿಯಾಗಿ ಕಾಮಗಾರಿ ಮಾಡದ ಗುತ್ತಿಗೆದಾರರಿಗೆ ದಂಡ ಹಾಕಲಾಗಿದೆ ಎಂದು ತಿಳಿಸಿದರು.

    ರಸ್ತೆ ಗುಂಡಿಗಳ ವೀಕ್ಷಣೆಯ ವೇಳೆ ದಾರಿ ಮಧ್ಯೆ ಶಾಸಕ ಹ್ಯಾರಿಸ್ ಪುತ್ರ ಮೊಹ್ಮದ್ ನಲಪಾಡ್ ಸಿಕ್ಕಿದ್ದು, ಮೇಯರ್ ಕೈ ಕುಲುಕಿದ್ರು.