Tag: Potatoes

  • ಲಂಚವಾಗಿ 5 ಕೆಜಿ ಆಲುಗಡ್ಡೆಗೆ ಬೇಡಿಕೆಯಿಟ್ಟಿದ್ದ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು

    ಲಂಚವಾಗಿ 5 ಕೆಜಿ ಆಲುಗಡ್ಡೆಗೆ ಬೇಡಿಕೆಯಿಟ್ಟಿದ್ದ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು

    ಲಕ್ನೋ: ಲಂಚವಾಗಿ 5 ಕೆಜಿ ಆಲುಗಡ್ಡೆಗೆ (Potatoes) ಬೇಡಿಕೆಯಿಟ್ಟಿದ್ದ ಸಬ್‌ಇನ್‌ಸ್ಪೆಕ್ಟರ್‌ ಒಬ್ಬರನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಕನೌಜ್‌ನಲ್ಲಿ ನಡೆದಿದೆ.

    ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಪೊಲೀಸ್ ಅಧಿಕಾರಿ ರಾಮ್ ಕೃಪಾಲ್ ಸಿಂಗ್ ಲಂಚ ಕೇಳಿರುವ ಆರೋಪದ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಲಂಚಕ್ಕಾಗಿ ‘ಆಲೂಗಡ್ಡೆ’ ಎಂಬ ಪದವನ್ನು ಕೋಡ್‌ ಆಗಿ ಬಳಸಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಇದನ್ನೂ ಓದಿ: ಈ ಗ್ರಾಮದಲ್ಲಿ ಧೂಮಪಾನ ಮಾಡುವಂತಿಲ್ಲ, ಅರ್ಧಂಬರ್ಧ ಬಟ್ಟೆ ಧರಿಸುವಂತಿಲ್ಲ – ಯಾಕೆ ಗೊತ್ತಾ?

    ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭವಲ್‌ಪುರ ಚಾಪುನ್ನಾ ಚೌಕಿಯಲ್ಲಿ ನಿಯೋಜನೆಗೊಂಡಿದ್ದ ಸಬ್‌ಇನ್‌ಸ್ಪೆಕ್ಟರ್‌ನನ್ನು ಅಮಾನತುಗೊಳಿಸಿ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆನಂದ್ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಇಲಾಖಾ ತನಿಖೆಗೂ ಸೂಚಿಸಲಾಗಿದೆ.

    ವೈರಲ್ ಆಡಿಯೋದಲ್ಲಿ ಆರೋಪಿ ಪೋಲೀಸ್‌, ರೈತರೊಬ್ಬರಿಂದ 5 ಕೆಜಿ ಆಲೂಗಡ್ಡೆಗೆ ಬೇಡಿಕೆ ಇಡುತ್ತಾರೆ. ಈ ಬೇಡಿಕೆಯನ್ನು ಪೂರೈಸಲು ಕಷ್ಟ ಎಂದು ರೈತ ಹೇಳುತ್ತಾರೆ. 5 ಕೆಜಿ ಬದಲಿಗೆ 2 ಕೆಜಿ ನೀಡುತ್ತೇನೆಂದು ರೈತರ ಹೇಳುತ್ತಾರೆ. ಅದಕ್ಕೆ ಪೊಲೀಸ್‌ ಅಧಿಕಾರಿ ಕೋಪಗೊಂಡು, ಕೊನೆಗೆ 3 ಕೆಜಿಗೆ ಒಪ್ಪಂದ ಅಂತಿಮವಾಗುತ್ತದೆ. ಇದನ್ನೂ ಓದಿ: Wayanad Landslides | ವಯನಾಡಿಗೆ ಮೋದಿ ಭೇಟಿ – ದುರಂತ ಭೂಮಿಯಲ್ಲಿ ವೈಮಾನಿಕ ಸಮೀಕ್ಷೆ

  • ಆಲೂಗಡ್ಡೆ, ಟೊಮೆಟೊ ಬೆಲೆ ಪರಿಶೀಲಿಸಲು ನಾನು ರಾಜಕೀಯ ಸೇರಿಲ್ಲ – ಪಾಕ್ ಪ್ರಧಾನಿ

    ಆಲೂಗಡ್ಡೆ, ಟೊಮೆಟೊ ಬೆಲೆ ಪರಿಶೀಲಿಸಲು ನಾನು ರಾಜಕೀಯ ಸೇರಿಲ್ಲ – ಪಾಕ್ ಪ್ರಧಾನಿ

    ಇಸ್ಲಾಮಾಬಾದ್: ಆಲೂಗಡ್ಡೆ, ಟೊಮೆಟೊ ಬೆಲೆಗಳನ್ನು ಪರಿಶೀಲಿಸಲು ನಾನು ರಾಜಕೀಯಕ್ಕೆ ಸೇರಲಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಿಡಿಕಾರಿದ್ದಾರೆ.

    ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದವು. ಈ ಕುರಿತಂತೆ ಪಂಜಾಬ್ ಪ್ರಾಂತ್ಯದ ಹಫೀಜಾಬಾದ್ ನಗರದಲ್ಲಿ ರಾಜಕೀಯ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಕೆಲವು ಶಾಸಕರು ಹಣದಿಂದ ಆತ್ಮಸಾಕ್ಷಿಯನ್ನು ಖರೀದಿಸಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಅಂಶಗಳ ವಿರುದ್ಧ ರಾಷ್ಟ್ರ ನಿಲ್ಲುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

    ತಮ್ಮ ಅವಧಿಯಲ್ಲಿ ಪಾಕಿಸ್ತಾನವು ಶ್ರೇಷ್ಠ ದೇಶವಾಗಿದೆ. ತಮ್ಮ ಸರ್ಕಾರ ಘೋಷಿಸುತ್ತಿದ್ದಂತೆಯೇ ಶೀಘ್ರದಲ್ಲೇ ಅದರ ಫಲಿತಾಂಶಗಳು ದೊರೆಯಲಿದೆ. 25 ವರ್ಷಗಳ ಹಿಂದೆ ದೇಶದ ಯುವಕರ ಹಿತದೃಷ್ಟಿಯಿಂದ ನಾನು ರಾಜಕೀಯಕ್ಕೆ ಸೇರಲು ನಿರ್ಧರಿಸಿದೆ. ಜೀವನದಲ್ಲಿ ಒಬ್ಬ ವ್ಯಕ್ತಿ ಕಾಣುವ ಎಲ್ಲ ಕನಸನ್ನು ನಾನು ಹೊಂದಿದ್ದೇನೆ. ಆದರೆ ಅದರಿಂದ ನನಗೆ ಯಾವುದೇ ವೈಯಕ್ತಿಕ ಲಾಭವಿಲ್ಲ ಎಂದು ತಿಳಿಸಿದ್ದಾರೆ.

    tomato

    ಆಲೂಗಡ್ಡೆ ಮತ್ತು ಟೊಮೆಟೊ ಬೆಲೆಗಳನ್ನು ತಿಳಿಯಲು ನಾನು ರಾಜಕೀಯಕ್ಕೆ ಸೇರಲಿಲ್ಲ. ದೇಶದ ಯುವಜನತೆಗಾಗಿ ನಾನು ರಾಜಕೀಯಕ್ಕೆ ಸೇರಿಕೊಂಡೆ. ನಾವು ದೇಶದ ಮಹಾನ್ ವ್ಯಕ್ತಿಯಾಗಬೇಕಾದರೆ, ಸತ್ಯವನ್ನು ಬೆಂಬಲಿಸಬೇಕು. ನಾನು ಕಳೆದ 25 ವರ್ಷಗಳಿಂದ ಇದನ್ನೇ ಹೇಳುತ್ತಿದ್ದೇನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್

  • ಆರೋಗ್ಯದ ಬೆಸ್ಟ್‌ಫ್ರೆಂಡ್‌ ಆಲೂಗಡ್ಡೆ

    ಆರೋಗ್ಯದ ಬೆಸ್ಟ್‌ಫ್ರೆಂಡ್‌ ಆಲೂಗಡ್ಡೆ

    ಲೂಗಡ್ಡೆ ಅಂದ ತಕ್ಷಣ ನೆನಪಾಗೋದು ಅದರಿಂದ ತಯಾರಿಸುವ ಚಿಪ್ಸ್, ರುಚಿಕರ ತಿಂಡಿ. ಒಂದೆಡೆ ಆಲೂಗಡ್ಡೆಯಿಂದ ತಯಾರಾದ ರುಚಿಕರ ತಿಂಡಿಗೆ ಮನಸೋಲುವವರು ಇದ್ದರೆ, ಇನ್ನೊಂದೆಡೆ ಹೆಚ್ಚು ಆಲೂಗಡ್ಡೆ ತಿಂದರೆ ಕೈ ಕಾಲುಗಳು ಹಿಡಿದುಕೊಳ್ಳುತ್ತೆ, ಗ್ಯಾಸ್ಟಿಕ್ ಸಮಸ್ಯೆ ಆಗುತ್ತೆ, ಇದರ ಸಹವಾಸವೇ ಬೇಡಪ್ಪಾ ಎಂದು ಮೂಗು ಮುರಿಯುವವರೂ ಇರುತ್ತಾರೆ. ಆದರೆ ಆಲೂಗಡ್ಡೆಯನ್ನು ನಿತ್ಯವು ನಿಯಮಿತ ಸೇವಿಸಿದರೆ ಸಿಗುವ ಆರೋಗ್ಯಕರ ಲಾಭದ ಬಗ್ಗೆ ಬಹುತೇಕ ಮಂದಿಗೆ ಅರಿವಿರಲ್ಲ.

    ಆಲೂಗಡ್ಡೆಯಲ್ಲಿ ಇರುವ ಅನೇಕ ಬಗೆಯ ಪೌಷ್ಟಿಕ ಸತ್ವಗಳು ಮನುಷ್ಯನ ದೇಹಕ್ಕೆ ಒಳ್ಳೆದು. ಆಲೂಗಡ್ಡೆ ಸೇವನೆಯಿಂದ, ಅದರ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭವೇನು? ಯಾವ ಸಮಸ್ಯೆಗೆ ಇದು ಮದ್ದು? ಎನ್ನುವುದರ ಮಾಹಿತಿ ಇಲ್ಲಿದೆ.

    ಆಲೂಗಡ್ಡೆ ಜ್ಯೂಸ್ ಕುಡಿಯಬಹುದೇ?
    ಅಧ್ಯಯನ ಹಾಗೂ ತಜ್ಞರ ಪ್ರಕಾರ, ಆಲೂಗಡ್ಡೆ ಜ್ಯೂಸ್ ಆರೋಗ್ಯಕ್ಕೆ ಒಳ್ಳೆದು. ಇದನ್ನು ನಿತ್ಯವು ಮಿತವಾಗಿ ಸೇವಿಸಿದರೆ ಆರೋಗ್ಯದ ಹಲವು ಸಮಸ್ಯೆಗಳು ನಿವಾರಣೆ ಆಗುತ್ತದೆ. ಇದು ಜೀರ್ಣ ಪ್ರಕ್ರಿಯೆ, ಎದೆಯುರಿ, ಚರ್ಮದ ಆರೋಗ್ಯ ಹೀಗೆ ಹಲವು ಸಮಸ್ಯೆಗಳನ್ನು ದೂರ ಮಾಡುತ್ತದೆ.

    ಅಲ್ಲದೆ ಹಸಿ ಆಲೂಗಡ್ಡೆ ಜ್ಯೂಸ್ ವಿಷಕಾರಿ ಅಂತ ಕೆಲವರು ಹೇಳುತ್ತಾರೆ. ಆದರೆ ಅದು ತಪ್ಪು ಕಲ್ಪನೆ. ಹಸಿ ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಹಸಿ ಆಲೂಗಡ್ಡೆ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸಬೇಕು, ಹೆಚ್ಚಾಗಿ ಸೇವಿಸಿದರೆ ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

    ಆಲೂಗಡ್ಡೆಯ ಆರೋಗ್ಯಕರ ಲಾಭವೇನು?

    1. ಹೃದಯದ ಆರೋಗ್ಯಕ್ಕೆ ಒಳ್ಳೆದು
    ಆಲೂಗಡ್ಡೆಯಲ್ಲಿ ಪೊಟ್ಯಾಶಿಯಂ ಅಂಶ ಇರುತ್ತದೆ. ಇದು ಕಟ್ಟಿಕೊಂಡಿರುವ ಹೃದಯ ರಕ್ತ ನಾಳಗಳನ್ನು ತೆರವುಗೊಳಿಸಿ ಹೃದಯಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಕಾಯಿಲೆಗಳು ದೂರಾಗಿ ಆರೋಗ್ಯ ವೃದ್ಧಿಯಾಗುತ್ತದೆ.

    2. ಎದೆಯುರಿ ನಿವಾರಿಸುತ್ತೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಹೊಟ್ಟೆಯ ಒಳ ಪದರಕ್ಕೆ ಬೇಕಾದ ಅಗತ್ಯ ಸಂಯುಕ್ತಗಳು ಬಹಳಷ್ಟಿವೆ. ಇವುಗಳು ಹೊಟ್ಟೆಯ ಆಮ್ಲವನ್ನು ಹೆಚ್ಚಾಗದಂತೆ ತಡೆದು, ಜಠರದಲ್ಲಿ ಕಾಣಿಸುವ ಉರಿಯೂತವನ್ನು ಗುಣ ಪಡಿಸುತ್ತದೆ. ಆದ್ದರಿಂದ ಊಟಕ್ಕೆ ಅರ್ಧ ಗಂಟೆ ಮುಂಚೆ ಪ್ರತಿ ದಿನ 3 ರಿಂದ 4 ಟೇಬಲ್ ಚಮಚಗಳಷ್ಟು ಆಲೂಗಡ್ಡೆ ಜ್ಯೂಸ್ ಕುಡಿಯುವುದು ಒಳ್ಳೆದು. ಇದರಿಂದ ಎದೆಯುರಿ ಸಮಸ್ಯೆ ನಿವಾರಣೆಯಾಗುತ್ತೆ.

    3. ತೂಕ ಇಳಿಸಲು ಸಹಕಾರಿ
    ಹಸಿ ಆಲೂಗಡ್ಡೆ ಜ್ಯೂಸ್‍ನಲ್ಲಿ ವಿಟಮಿನ್ ‘ಸಿ’ ಅಂಶ ಇರುತ್ತದೆ, ಇದು ದೇಹದ ಮೆಟಬಾಲಿಸಂ ಹೆಚ್ಚಿಸುತ್ತದೆ. ಇದರಿಂದ ತೂಕ ಕಡಿಮೆ ಆಗುತ್ತದೆ. ಹೀಗಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಊಟದ ನಂತರ ಆಲೂಗಡ್ಡೆ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಆಲೂಗಡ್ಡೆ ಜ್ಯೂಸ್ ಹೆಚ್ಚು ಹಸಿವಾಗದಂತೆ ನೋಡಿಕೊಳ್ಳುವುದರಿಂದ ದೇಹದ ತೂಕ ಇಳಿಯುತ್ತದೆ.

    4. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತೆ
    ಆಲೂಗಡ್ಡೆಗಳಲ್ಲಿ ಆಲ್ಕಲೈನ್ ಅಂಶ ಬಹಳಷ್ಟಿದೆ. ಇದು ಮನುಷ್ಯನ ದೇಹದ ಅನ್ನನಾಳವನ್ನು ಶುಚಿಗೊಳಿಸಿ, ಅದಕ್ಕೆ ಬೇಕಾದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಇದರಿಂದ ಜೀರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.

    5. ಗಾಯಗಳು ಬೇಗ ಮಾಗುತ್ತವೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಜಿಂಕ್ ಮತ್ತು ವಿಟಮಿನ್ ‘ಸಿ’ ಅಂಶವಿದ್ದು, ಇದು ಗಾಯ ವಾಸಿಯಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸಿ. ಅಲ್ಲದೇ ಗಾಯವಾದ ಭಾಗದಲ್ಲಿ ಊದಿಕೊಂಡ ಮಾಂಸ ಖಂಡಗಳನ್ನು ಸಹಜ ಸ್ಥಿತಿಗೆ ಮರಳಿಸುತ್ತದೆ. ಇದರಿಂದ ಗಾಯಗಳು ಬೇಗನೇ ಮಾಗುತ್ತದೆ.

    6. ಮೂತ್ರ ಪಿಂಡಗಳ ಆರೋಗ್ಯಕ್ಕೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಪೊಟ್ಯಾಷಿಯಂ ಅಂಶವನ್ನು ಅಡಗಿದ್ದು, ಇದು ಕಿಡ್ನಿಗಳ ಕಾರ್ಯ ಚಟುವಟಿಕೆಯನ್ನು ಬಲಪಡಿಸುತ್ತದೆ. ಪೊಟ್ಯಾಶಿಯಂ ಒಂದು ಎಲೆಕ್ಟ್ರೋಲೈಟ್ ಆಗಿದ್ದು, ಇದು ದೇಹದಲ್ಲಿರುವ ದ್ರವಗಳನ್ನು ನಿಯಂತ್ರಿಸುತ್ತದೆ.

    7. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ
    ಆಲೂಗಡ್ಡೆ ಜ್ಯೂಸ್‍ನಲ್ಲಿ ಆಂಟಿ – ಆಕ್ಸಿಡೆಂಟ್ ಎಂದು ಗುರುತಿಸಿಕೊಂಡ ವಿಟಮಿನ್ ‘ ಸಿ ‘ ಅಂಶವಿದೆ. ಇದು ದೇಹದ ಸೋಂಕು ಮತ್ತು ಸಾಮಾನ್ಯ ಶೀತದ ನಿವಾರಣೆಗೆ ಸಹಾಯಕವಾಗಿದೆ. ಈ ಅಂಶ ರೋಗ ನಿರೋಧಕ ವ್ಯವಸ್ಥೆಯನ್ನು ಹೊರಗಿನ ಹಾನಿಕಾರಕ ರೋಗಕಾರಕಗಳಿಂದ ರಕ್ಷಿಸುತ್ತದೆ. ಅಲ್ಲದೇ ದೀರ್ಘ ಕಾಲದ ಕಾಯಿಲೆಗಳನ್ನು ನಿಧಾನವಾಗಿ ಗುಣ ಪಡಿಸುತ್ತದೆ.

    8. ಲಿವರ್ ಆರೋಗ್ಯಕ್ಕೆ
    ಆಲೂಗಡ್ಡೆ ಜ್ಯೂಸ್ ಪಿತ್ತಕೋಶದ ಸೋಂಕುಗಳನ್ನು ಗುಣಪಡಿಸಿ ಲಿವರ್‍ನ ಶುದ್ಧೀಕರಿಸುತ್ತೆ. ಆಲೂಗಡ್ಡೆ ಜ್ಯೂಸ್ ದೇಹದ ತ್ಯಾಜ್ಯ ವಸ್ತುಗಳನ್ನು ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕುವ ಲಿವರ್‍ನ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಆದ್ದರಿಂದ ಇದು ನಿರ್ವಿಷಕಾರಿ ಏಜೆಂಟ್ ಎನ್ನಿಸಿಕೊಂಡಿದೆ.

  • ಸ್ಟಾರ್ಟ್ ಆಯ್ತು ಮದ್ಯವನ್ನು ಬಳಸಿ ಆಲೂಗಡ್ಡೆ ಬೆಳೆಸುವ ಟ್ರೆಂಡ್!

    ಸ್ಟಾರ್ಟ್ ಆಯ್ತು ಮದ್ಯವನ್ನು ಬಳಸಿ ಆಲೂಗಡ್ಡೆ ಬೆಳೆಸುವ ಟ್ರೆಂಡ್!

    ಲಕ್ನೋ: ಉತ್ತರ ಪ್ರದೇಶದ ಬುಲಂದರ್‌ಶಹರ್‌ನ ರೈತರು ಆಲೂಗೆಡ್ಡೆ ಕೃಷಿಯಲ್ಲಿ ಮದ್ಯವನ್ನು ಬಳಸಿ ಸುದ್ದಿಯಾಗಿದ್ದಾರೆ.

    ಹೌದು, ಸಾಮಾನ್ಯವಾಗಿ ರೈತರು ಬೆಳೆಗಳನ್ನು ಬೆಳೆಯಲು ನೀರು, ಗೊಬ್ಬರ ಬಳಸುತ್ತಾರೆ. ಆದರೆ ಬುಲಂದರ್‌ಶಹರ್‌ನ ರೈತರು ಮಾತ್ರ ಹೊಸ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಈ ಭಾಗದಲ್ಲಿ ರೈತರು ತಮ್ಮ ಬೆಳೆಗಳು ಹಾನಿಯಾಗಬಾರದೆಂದು ಮದ್ಯವನ್ನು ಔಷಧಿ ರೀತಿ ಬಳಸುತ್ತಿದ್ದಾರೆ.

    ಇದನ್ನು ನೋಡಿದ ಕೃಷಿ ತಜ್ಞರು, ಮದ್ಯವನ್ನು ಬೆಳೆಗಳಿಗೆ ಹಾಕುವ ಬದಲು ಸರಿಯಾದ ಔಷಧಿಗಳನ್ನು ಬಳಸಬೇಕು. ಇದರಿಂದ ಬೆಳೆಗೂ ಒಳ್ಳೆಯದು ಮತ್ತು ಅದನ್ನು ಸೇವಿಸುವವರಿಗೂ ಒಳ್ಳೆಯದು ಎಂದು ಹೇಳಿ ಈ ಹೊಸ ವಿಧಾನವನ್ನು ತಿರಸ್ಕರಿಸಿದ್ದಾರೆ. ಹೀಗೆ ಮದ್ಯವನ್ನು ಬಳಸುವುದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಇದು ಹಣವನ್ನು ಹಾಳುಮಾಡುವ ವಿಧಾನ. ಇದರಿಂದ ಏನೂ ಉಪಯೋಗವಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.

    ಕೃಷಿ ತಜ್ಞರು ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ತಿಳಿಸಿದರೂ, ನಾವು ಮಾತ್ರ ಮದ್ಯವನ್ನೇ ಬಳಸಿ ಆಲೂಗಡ್ಡೆ ಬೆಳೆಸುತ್ತೇವೆ ಅದರಿಂದ ನಮಗೆ ಹೆಚ್ಚು ಇಳುವರಿ ಸಿಗುತ್ತದೆ ಅಂತ ರೈತರು ಹೇಳುತ್ತಿದ್ದಾರೆ.

    ಅದರಲ್ಲೂ ರೈತರೊಬ್ಬರು ತಮ್ಮ ಜಮೀನಿನಲ್ಲಿ ಆಲೂಗಡ್ಡೆ ಬೆಳೆಗೆ ಮದ್ಯವನ್ನು ಸಿಂಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾವು ಒಮ್ಮೆ ಈ ವಿಧಾನ ಅನುಸರಿಸೋಣ ಎಂದು ಜನರು ಚರ್ಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv