Tag: potato dosa

  • ರುಚಿಕರವಾದ ಆಲೂಗಡ್ಡೆ ದೋಸೆ ಒಮ್ಮೆ ಮಾಡಿ ನೋಡಿ

    ರುಚಿಕರವಾದ ಆಲೂಗಡ್ಡೆ ದೋಸೆ ಒಮ್ಮೆ ಮಾಡಿ ನೋಡಿ

    ರುಚಿಕರ ಮಾತ್ರವಲ್ಲದೇ ಆರೋಗ್ಯಕರ ಉಪಾಹಾರ ತಯಾರಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಪ್ರತಿ ದಿನ ಬಗೆಬಗೆಯದ್ದು ಮಾಡುವುದು ಸವಾಲೇ ಸರಿ. ಇಂದು ನಾವು ಆಲೂಗಡ್ಡೆಯ ದೋಸೆ (Potato Dosa) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ರುಚಿಕರವಾದ ಈ ದೋಸೆಯನ್ನು ಸಂಜೆಯ ತಿಂಡಿಯಾಗಿಯೂ ತಯಾರಿಸಬಹುದು. ಮಕ್ಕಳಂತೂ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.

    ಬೇಕಾಗುವ ಪದಾರ್ಥಗಳು:
    ಆಲೂಗಡ್ಡೆ – 3
    ಕಾರ್ನ್ ಫ್ಲೋರ್ – 2 ಟೀಸ್ಪೂನ್
    ಕಡಲೇ ಹಿಟ್ಟು – 2 ಟೀಸ್ಪೂನ್
    ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1
    ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ – 1 ಟೀಸ್ಪೂನ್
    ಉಪ್ಪು – ಅರ್ಧ ಟೀಸ್ಪೂನ್
    ಎಣ್ಣೆ – ಕಾಯಿಸಲು ಇದನ್ನೂ ಓದಿ: ಮೊಟ್ಟೆಯಿಲ್ಲದೆ ಮಾಡಿ ರುಚಿ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್

    ಮಾಡುವ ವಿಧಾನ:
    * ಮೊದಲಿಗೆ, ಆಲೂಗಡ್ಡೆಯ ಸಿಪ್ಪೆ ತೆಗೆದು, ತುರಿದುಕೊಳ್ಳಿ.
    * 5 ನಿಮಿಷಗಳ ಕಾಲ ತುರಿದ ಆಲೂಗಡ್ಡೆಯನ್ನು ನೀರಿನಲ್ಲಿ ನೆನೆಸಿಡಿ.
    * ಈಗ ತುರಿದ ಆಲೂಗಡ್ಡೆಯನ್ನು ಹಿಸುಕಿ ನೀರನ್ನು ಹರಿಸಿ.
    * ಈಗ ಕಾರ್ನ್ ಫ್ಲೋರ್ ಹಾಗೂ ಕಡಲೇ ಹಿಟ್ಟನ್ನು ಸೇರಿಸಿ. ಆಲೂಗಡ್ಡೆಯಲ್ಲಿ ತೇವಾಂಶ ಹೆಚ್ಚಿದ್ದರೆ ಇನ್ನಷ್ಟು ಸೇರಿಸಬಹುದು.

    * ಈಗ ಮಿಶ್ರಣಕ್ಕೆ ಕರಿಮೆಣಸಿನ ಪುಡಿ, ಜೀರಿಗೆ ಹಾಗೂ ಉಪ್ಪು ಸೇರಿಸಿ ಮಿಕ್ಸ್ ಮಾಡಿ.
    * ಈಗ ತವಾವನ್ನು ಬಿಸಿ ಮಾಡಿ, ಅದಕ್ಕೆ ಚಮಚದ ಸಹಾಯದಿಂದ ದೋಸೆ ಆಕಾರದಲ್ಲಿ ಆಲೂಗಡ್ಡೆ ಮಿಶ್ರಣವನ್ನು ತೆಳ್ಳಗೆ ಹರಡಿ.
    * ದೋಸೆಯ ಸುತ್ತಲೂ 1 ಟೀಸ್ಪೂನ್ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಕಾಯಿಸಿ.
    * ದೋಸೆ ಗೋಲ್ಡನ್ ಬ್ರೌನ್ ಹಾಗೂ ಗರಿಗರಿಯಾಗುವತನಕ ಎರಡೂ ಬದಿಯಲ್ಲಿ ಬೇಯಿಸಿ.
    * ಇದೀಗ ಆಲೂಗಡ್ಡೆ ದೋಸೆ ತಯಾರಾಗಿದ್ದು, ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬಾದಾಮಿ ಕೇಕ್ ಮಾಡುವ ಸುಲಭ ವಿಧಾನ – ನೀವೊಮ್ಮೆ ಟ್ರೈಮಾಡಿ

    Live Tv
    [brid partner=56869869 player=32851 video=960834 autoplay=true]

  • ರುಚಿಯಾದ ಆಲೂಗಡ್ಡೆ ದೋಸೆ ಮಾಡುವ ವಿಧಾನ ನಿಮಗಾಗಿ

    ರುಚಿಯಾದ ಆಲೂಗಡ್ಡೆ ದೋಸೆ ಮಾಡುವ ವಿಧಾನ ನಿಮಗಾಗಿ

    ದೋಸೆ ಎಲ್ಲರಿಗೂ ಇಷ್ಟ. ದೋಸೆಯಲ್ಲಿಯೇ ಹಲವಾರು ವಿಧಗಳನ್ನು ಮಾಡಲಾಗುತ್ತದೆ. ಪುದೀನಾ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ಗ್ರೀನ್ ಪೀಸ್ ದೋಸೆ ಹೀಗೆ ಇದರ ಪಟ್ಟಿ ಬೆಳೆಯುತ್ತದೆ. ಈ ದೋಸೆ ತಿಂದು ನಿಮಗೆ ಬೇಸರವಾಗಿದ್ಯಾ? ಹಾಗಿದ್ರೆ ಇವತ್ತು ನಾವು ಆಲೂಗಡ್ಡೆ ದೋಸೆ ಮಾಡಲು ಟ್ರೈ ಮಾಡೋಣ

    ಬೇಕಾಗುವ ಸಾಮಗ್ರಿಗಳು:
    * ಆಲೂಗಡ್ಡೆ- 3
    * ಅಕ್ಕಿ ಹಿಟ್ಟು- 1ಕಪ್
    * ರವಾ – ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಈರುಳ್ಳಿ – 1
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಮೆಣಸಿನಕಾಯಿ- 2
    * ಕರಿಬೇವು- ಸ್ವಲ್ಪ
    * ಜೀರಿಗೆ- 1ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಮಿಕ್ಸಿ ಜಾರ್‌ನಲ್ಲಿ 3 ಬೇಯಿಸಿದ ಆಲೂವನ್ನು ಹಾಕಿ ರುಬ್ಬಿಕೊಳ್ಳಿ.

    * ಒಂದು ಬೌಲ್‍ಗೆ ಆಲೂ ಪೇಸ್ಟ್, ಅಕ್ಕಿ ಹಿಟ್ಟು, ರವಾ ಉಪ್ಪು ಸೇರಿಸಿ ಉಂಡೆಗಳಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ಅದೇ ಮಿಶ್ರಣಕ್ಕೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ, ಕರಿಬೇವು, ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    * ನಂತರ ದೋಸೆ ಕಾವಲಿ ಬಿಸಿ ಮಾಡಿ ಅಡುಗೆ ಎಣ್ಣೆಯನ್ನು ಹಾಕಿ ಮಿಶ್ರಣದಿಂದ ದೋಸೆ ಹಾಕಿದರೆ ರುಚಿಯದಾ ಆಲೂಗಡ್ಡೆ ದೋಸೆ ಸವಿಯಲು ಸಿದ್ಧವಾಗುತ್ತದೆ.

  • ಬೇರೆಲ್ಲ ದೋಸೆಗಿಂತ ವಿಭಿನ್ನ ಆಲೂಗಡ್ಡೆ ದೋಸೆ

    ಬೇರೆಲ್ಲ ದೋಸೆಗಿಂತ ವಿಭಿನ್ನ ಆಲೂಗಡ್ಡೆ ದೋಸೆ

    ಆಲೂಗಡ್ಡೆ ದೋಸೆ ಸಖತ್ ಟೇಸ್ಟೀ ಮತ್ತು ಆರೋಗ್ಯಕಾರಿಯಾಗಿದೆ. ನಿಮ್ಮ ಹಸಿವನ್ನು ಇಂಗಿಸಿ ನಾಲಗೆಯಲ್ಲಿ ಆ ರುಚಿ ಇನ್ನೂ ಇರುವಂತೆ ಈ ದೋಸೆ ಮಾಡುತ್ತದೆ. ಸುಲಭವಾಗಿ ತಯಾರಿಸಬಹುದಾದ ಈ ಆಲೂಗಡ್ಡೆ ದೋಸೆ ಮಾಡುವ ವಿಧಾನ ನಿಮಗಾಗಿ ನೀಡಲಾಗಿದೆ. ರಾಗಿ ದೋಸೆ, ಗೋಧಿ ದೋಸೆಗಳಿಗಿಂತ ಈ ದೋಸೆ ವಿಭಿನ್ನವಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಆಲೂಗಡ್ಡೆ – 3
    * ಮೈದಾ – 2 ಸ್ಪೂನ್
    * ಹಸಿಮೆಣಸು – 2
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಅಡುಗೆಎಣ್ಣೆ – ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    ಮಾಡುವ ವಿಧಾನ:
    * ಮೊದಲು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಪಕ್ಕದಲ್ಲಿರಿಸಿ.
    * ಒಂದು ಪಾತ್ರೆಗೆ ಸಿಪ್ಪೆ ತೆಗೆದ ಆಲೂಗಡ್ಡೆ, ಮೈದಾ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣವನ್ನು ಮಿಶ್ರಣ ಮಾಡಿ. ಇದನ್ನೂ ಓದಿ:  ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

    * ಈ ಮಿಶ್ರಣ ಇಡ್ಲಿ ಹಿಟ್ಟಿನಂತೆ ಸ್ವಲ್ಪ ದಪ್ಪನೆಯ ಹಿಟ್ಟಿನಂತೆ ಇರಲಿ. ಹಿಟ್ಟಿಗೆ ಹಸಿಮೆಣಸು ಹಾಗೂ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಿ.
    * ತವಾಗೆ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ದೋಸೆ ಹುಯ್ಯಿರಿ. ಈ ದೋಸೆ ಚೆನ್ನಾಗಿ ಬೇಯಿಸಿದರೆ ರುಚಿಯಾದ ಆಲೂಗಡ್ಡೆ ದೋಸೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ