Tag: pot

  • ಕೈಯ್ಯಾರೆ ಮಣ್ಣಿನ ಮಡಿಕೆ ಮಾಡಿದ ಕಾಂತಾರ ಕನಕವತಿ ರುಕ್ಮಿಣಿ ವಸಂತ್

    ಕೈಯ್ಯಾರೆ ಮಣ್ಣಿನ ಮಡಿಕೆ ಮಾಡಿದ ಕಾಂತಾರ ಕನಕವತಿ ರುಕ್ಮಿಣಿ ವಸಂತ್

    ದಿನದಿಂದ ದಿನಕ್ಕೆ ಸಪ್ತಸಾಗರದಾಚೆ ಎಲ್ಲೋ ಪುಟ್ಟಿಯ ಖ್ಯಾತಿ ಹೆಚ್ಚುತ್ತಿದೆ. ರುಕ್ಮಿಣಿ ವಸಂತ್ (Rukmini Vasanth) ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಬಹುಭಾಷೆಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ರುಕ್ಮಿಣಿ ವಸಂತ್ ಇದೀಗ ಜೇಡಿ ಮಣ್ಣಿನಿಂದ ಮಡಿಕೆ ಮಾಡಿದ್ದಾರೆ.

    ಮಣ್ಣು ಹಿಡಿದು ತಾವೇ ಕೈಯ್ಯಾರೆ ಮಡಿಕೆ ಅಚ್ಚಿನಲ್ಲಿ ಮಣ್ಣು ಹಾಕಿ ಅದಕ್ಕೊಂದು ಹಾರ್ಟ್‌ಶೇಪ್ ಕೊಟ್ಟಿದ್ದಾರೆ. ಸುಂದರವಾದ ಬೌಲ್ ಸಿದ್ಧಪಡಿಸಿದ್ದಾರೆ. ಸತತ ಪ್ರಯತ್ನದ ಬಳಿಕ ಮಡಿಕೆ ತಯಾರಾದಂತಿದೆ. ಹೀಗಾಗಿ ಆ ವೀಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರುಕ್ಮಿಣಿ ವಸಂತ್ ಅದಕ್ಕೊಂದು ಅರ್ಥಪೂರ್ಣ ಕ್ಯಾಪ್ಷನ್ ಕೊಟ್ಟಿದ್ದಾರೆ. `ನಿಧಾನವಾಗಿ ಸಿಗುವ ಹರ್ಷ ಹೀಗೆ ಸುಂದರವಾಗಿ ಇರುತ್ತದೆ ಅಲ್ಲವೇ’ ಎಂದಿದ್ದಾರೆ.

    ವಿಶೇಷ ಮಣ್ಣಿನಿಂದ ರುಕ್ಮಿಣಿ ತಾವೇ ಕೈಯಾರೆ ಮಾಡಿಕೊಂಡಿರುವ ಮಡಿಕೆಯು ಬಳಸಲು ಯೋಗ್ಯವೋ ಇಲ್ಲವೋ, ಆದರೆ ನೋಡಲು ಅದ್ಭುತವಾಗಿದೆ. ಮಣ್ಣು ತಂದು ತಾವೇ ಕುಳಿತು ಸಿದ್ಧಮಾಡಿ ಅದನ್ನ ಬಾಕ್ಸ್ನಲ್ಲಿ ಪ್ಯಾಕ್ ಮಾಡುವವರೆಗೂ ಸಂಪೂರ್ಣ ವೀಡಿಯೋವನ್ನ ರುಕ್ಮಿಣಿ ಶೇರ್ ಮಾಡಿದ್ದಾರೆ. ಇದೀಗ ಸ್ಟಾರ್ ನಟರ ಚಿತ್ರಗಳ ನಾಯಕಿಯಾಗಿರುವ ರುಕ್ಮಿಣಿ ಕಾಂತಾರ 1 ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಟಾಕ್ಸಿಕ್ ಚಿತ್ರದಲ್ಲೂ ನಟಿಸಿರುವ ವದಂತಿ ಇದೆ. ಒಟ್ಟಿನಲ್ಲಿ ಅರ್ಥಪೂರ್ಣ ಸಂದೇಶದ ಜೊತೆ ಸರಳ ವೀಡಿಯೋಗಳ ಮೂಲಕವೇ ರುಕ್ಮಿಣಿ ವಸಂತ್ ಜನಮೆಚ್ಚುಗೆ ಪಡೆದ ನಟಿ.

  • ಬಿಸ್ಕೆಟ್ ರೀತಿ ಜನರಿಗೆ ಬಿಂದಿಗೆ ಎಸೆದ ಜೆಡಿಎಸ್ ನಾಯಕರು

    ಬಿಸ್ಕೆಟ್ ರೀತಿ ಜನರಿಗೆ ಬಿಂದಿಗೆ ಎಸೆದ ಜೆಡಿಎಸ್ ನಾಯಕರು

    ಮಂಡ್ಯ: ಜಿಲ್ಲೆಯ ಕೆಆರ್ ಪೇಟೆಯಲ್ಲಿ (KR Pete) ಪಂಚರತ್ನ ಯಾತ್ರೆಯ (Pancharatna Yatra) ವೇಳೆ ಮುಖಂಡರು ಸ್ಟೀಲ್ ಬಿಂದಿಗೆಗಳನ್ನು (Pots) ಮಹಿಳೆಯರಿಗೆ ಉಡುಗೊರೆ (Gift) ನೀಡಿದ್ದಾರೆ. ಆದರೆ ಗೌರವಯುತವಾಗಿ ಬಿಂದಿಗೆಗಳನ್ನು ನೀಡದೇ ಕಾರ್ಯಕರ್ತರು ಬೇಕಾಬಿಟ್ಟಿ ಜನರತ್ತ ಎಸೆದಿದ್ದಾರೆ. ಜೆಡಿಎಸ್ (JDS) ಕಾರ್ಯಕರ್ತರ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಭಾನುವಾರ ಕೆಆರ್ ಪೇಟೆಯಲ್ಲಿ ನಡೆದ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜು ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಪ್ರಚಾರ ಮಾಡಿದ್ದಾರೆ. ಇದಕ್ಕೂ ಮುನ್ನ ಹೆಚ್‌ಡಿಕೆಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿತ್ತು. ಇದನ್ನೂ ಓದಿ: ಯಾರೂ ಪ್ಯಾನಿಕ್ ಆಗ್ಬೇಡಿ, ಸದ್ಯಕ್ಕೆ ಯಾವುದೇ ರೀತಿಯ ನಿರ್ಬಂಧ ಇರಲ್ಲ: ಆರ್.ಅಶೋಕ್

    ಪೂರ್ಣ ಕುಂಭ ಸ್ವಾಗತಕ್ಕಾಗಿ ಅಭ್ಯರ್ಥಿ ಮಂಜು ಅವರು 5 ಸಾವಿರ ಬಿಂದಿಗೆಗಳನ್ನು ತರಿಸಿದ್ದರು. ಆದರೆ ಪೂರ್ಣಕುಂಭ ಸಿದ್ಧತೆಗೆ ಕೇವಲ 1 ಸಾವಿರ ಬಿಂದಿಗೆಗಳನ್ನು ಬಳಸಲಾಗಿತ್ತು. ಈ ವೇಳೆ ಉಳಿದ ಬಿಂದಿಗೆಗಳನ್ನು ಜೆಡಿಎಸ್ ಮುಖಂಡರು ಮಹಿಳೆಯರಿಗೆ ಗಿಫ್ಟ್ ನೀಡುವುದಾಗಿ ಘೋಷಿಸಿದ್ದಾರೆ.

    ಬಿಂದಿಗೆಗಳನ್ನು ಗೌರವಯುತವಾಗಿ ನೀಡದೇ ಕಾರ್ಯಕರ್ತರು ಜನರತ್ತ ಎಸೆದಿದ್ದಾರೆ. ಬಿಸ್ಕೆಟ್‌ನಂತೆ ಎಸೆಯುತ್ತಿದ್ದ ಬಿಂದಿಗೆಗಳನ್ನು ಕ್ಯಾಚ್ ಹಿಡಿಯಲು ಜನರು ಕ್ಯಾಂಟರ್ ಹಿಂದೆ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಬಿಂದಿಗೆ ಎಸೆಯುತ್ತಿರುವ ವೀಡಿಯೋ ಹರಿದಾಡುತ್ತಿದೆ. ಇದನ್ನೂ ಓದಿ: ಇನ್ನುಮುಂದೆ ಬೇಕಾಬಿಟ್ಟಿ ರಸ್ತೆ ಅಗೆದರೆ ಬಿಬಿಎಂಪಿ ಎಂಜಿನಿಯರ್‌ಗಳ ಸಂಬಳ ಕಟ್‌

    Live Tv
    [brid partner=56869869 player=32851 video=960834 autoplay=true]

  • ಪಾತ್ರೆಯಲ್ಲಿದ್ದ ನೀರು ಕುಡಿದ ದಲಿತ ಬಾಲಕನಿಗೆ ಥಳಿಸಿ ಕೊಂದ ಶಿಕ್ಷಕ

    ಪಾತ್ರೆಯಲ್ಲಿದ್ದ ನೀರು ಕುಡಿದ ದಲಿತ ಬಾಲಕನಿಗೆ ಥಳಿಸಿ ಕೊಂದ ಶಿಕ್ಷಕ

    ಜೈಪುರ: ಖಾಸಗಿ ಶಾಲೆಯೊಂದರಲ್ಲಿ ಪಾತ್ರೆಯಲ್ಲಿದ್ದ ನೀರು ಕುಡಿದಿದ್ದಕ್ಕೆ ಒಂಬತ್ತು ವರ್ಷದ ದಲಿತ ವಿದ್ಯಾರ್ಥಿಗೆ ಶಿಕ್ಷಕನೊಬ್ಬ ಅಮಾನವೀಯವಾಗಿ ಥಳಿಸಿದ್ದರಿಂದ ಬಾಲಕ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನಡೆದಿದೆ.

    ಜುಲೈ 20 ರಂದು ಜಲೋರ್ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯಲ್ಲಿ ಈ ಘಟನೆ ಜರುಗಿದ್ದು, ಗಾಯಗೊಂಡ ಬಾಲಕ ಗುಜರಾತಿನ ಅಹಮದಾಬಾದ್‍ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್ ಕಾಲ್ನಡಿಗೆಯ ಟಿಪ್ಪು ಫ್ಲೆಕ್ಸ್ ಧ್ವಂಸ- ಪುನೀತ್ ಕೆರೆಹಳ್ಳಿ, ಬೆಂಬಲಿಗರಿಂದ ಕೃತ್ಯ

    ಇದೀಗ 40 ವರ್ಷದ ಆರೋಪಿ ಶಿಕ್ಷಕ ಚೈಲ್ ಸಿಂಗ್ ಅನ್ನು ಪೊಲೀಸರು ಬಂಧಿಸಿದ್ದು, ಕೊಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೇವಲ ತ್ರಿವರ್ಣ ಧ್ವಜ ಹಾರಿಸುವುದರಿಂದ ನಾವು ದೇಶಭಕ್ತರಾಗುವುದಿಲ್ಲ: ಉದ್ಧವ್ ಠಾಕ್ರೆ ಟಾಂಗ್

    ಈ ಕುರಿತಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಇದೊಂದು ದುರಂತ ಘಟನೆ ಎಂದಿದ್ದಾರೆ. ಜಾಲೋರ್‍ನ ಸೈಲಾ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕ ನಡೆಸಿದ ಹಲ್ಲೆಯಿಂದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವುದು ದುರಂತವಾಗಿದ್ದು, ಆರೋಪಿಗಳ ವಿರುದ್ಧ ಕೊಲೆ ಹಾಗೂ ಎಸ್‍ಸಿ/ಎಸ್‍ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ಲಾಸ್ಟಿಕ್ ವಸ್ತುಗಳಿಗೆ ಮರುಜೀವ- ಮಾದರಿ ಆಯ್ತು ಸರ್ಕಾರಿ ಶಿಕ್ಷಕನ ಕೆಲಸ

    ಪ್ಲಾಸ್ಟಿಕ್ ವಸ್ತುಗಳಿಗೆ ಮರುಜೀವ- ಮಾದರಿ ಆಯ್ತು ಸರ್ಕಾರಿ ಶಿಕ್ಷಕನ ಕೆಲಸ

    ಮಡಿಕೇರಿ: ಸರ್ಕಾರಿ ಶಿಕ್ಷಕರೊಬ್ಬರು ಕೇವಲ ವೃತ್ತಿಗೆ ಸೀಮಿತವಾಗದೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ವಸ್ತುಗಳಿಗೆ ಹೊಸ ರೂಪ ನೀಡುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಅವುಗಳನ್ನು ಮರುಬಳಕೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಪರಿಸರ ಪ್ರೇಮಿಯಾಗಿ ಇತರರಿಗೆ ಮಾದರಿ ಆಗಿದ್ದಾರೆ.

    ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್ ಸರ್ಕಾರಿ ಶಿಕ್ಷಕರಾಗಿ ಪರಿಸರ ಕಾಳಜಿ ಮಾಡುತ್ತಿದ್ದಾರೆ. ಅಡುಗೆ ಎಣ್ಣೆಯ ಕ್ಯಾನ್‍ಗಳು, ನೀರಿನ ಬಾಟಲಿ ಹಾಗೂ ಕಂಫರ್ಟ್ ಡಬ್ಬಗಳನ್ನು ಬಳಸಿಕೊಂಡು ಅವುಗಳನ್ನು ಅಲಂಕಾರಿಕವಾಗಿ ಕತ್ತರಿಸಿ ಹೂ ಕುಂಡಗಳನ್ನು ನಿರ್ಮಿಸಿದ್ದಾರೆ.

    ಅವುಗಳ ಮೇಲೆ ವಿವಿಧ ಚಿತ್ರಗಳನ್ನು ಬಿಡಿಸಿದ್ದು, ನೋಡಲು ಸುಂದರವಾಗಿವೆ. ಅಲ್ಲದೇ ಸಾಮಾನ್ಯ ಹೂ ಕುಂಡಗಳಿಗಿಂತಲೂ ಇವು ಬಾಳಿಕೆಯಿಂದ ಕೂಡಿವೆ. ಕ್ಯಾನ್‍ಗಳನ್ನು ನೆಲದಲ್ಲಿಡುವ ಕುಂಡಗಳಾಗಿ ಮಾತ್ರವಲ್ಲದೇ ಹ್ಯಾಂಗಿಂಗ್ ಪಾಟ್‍ಗಳು, ಗೋಡೆ ಮತ್ತು ಕಂಬಗಳಿಗೆ ವಾಲ್ ಪಾಟ್‍ಗಳನ್ನಾಗಿಯೂ ಬಳಸಬಹುದು.

    ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಒದಗಿಸುವ ಉದ್ದೇಶದಿಂದ, ಹ್ಯಾಂಗಿಂಗ್ ಪಾಟ್‍ನ ಮೇಲೆ ಸುರಿದ ನೀರು ಹೆಚ್ಚಾದರೆ ಒಂದೆಡೆ ಸಂಗ್ರಹವಾಗುವ ಹಾಗೆ ನೀರಿನ ಬಾಟಲಿಗಳ ತಳ ಭಾಗವನ್ನು ಕೊಯ್ದು ಹ್ಯಾಂಗಿಂಗ್ ಪಾಟಿನ ತಳಭಾಗದಲ್ಲಿ ಅಳವಡಿಸಲಾಗಿದೆ. ಇಲ್ಲಿ ಸಂಗ್ರಹವಾದ ನೀರನ್ನು ಪಕ್ಷಿಗಳು ಕುಡಿಯುವಂತೆ ವಿನ್ಯಾಸ ಮಾಡಲಾಗಿದೆ.