Tag: postoffice

  • ಪೋಸ್ಟ್ ಆಫೀಸ್ ನೌಕರರಿಂದ ಮಾದಕ ವಸ್ತು ಮಾರಾಟ- ನಾಲ್ವರ ಬಂಧನ

    ಪೋಸ್ಟ್ ಆಫೀಸ್ ನೌಕರರಿಂದ ಮಾದಕ ವಸ್ತು ಮಾರಾಟ- ನಾಲ್ವರ ಬಂಧನ

    – ಬಂಧಿತರಲ್ಲಿ ಓರ್ವ ಸೇನೆಯಲ್ಲಿದ್ದ?

    ಬೆಂಗಳೂರು: ವಿದೇಶಗಳಿಂದ ಪೋಸ್ಟ್ ಮೂಲಕ ಮಾದಕ ವಸ್ತುಗಳನ್ನ ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದ್ದ 4 ಮಂದಿ ಅಂಚೆ ಕಚೇರಿಯ ನೌಕರರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

    ಸುಬ್ಬ, ರಮೇಶ್ ಕುಮಾರ್, ಸೈಯದ್ ಮಾಜಿದ್, ವಿಜಯರಾಜನ್ ಬಂಧಿತ ಅಂಚೆ ಕಚೇರಿಯ ಆರೋಪಿಗಳು. ಇವರು ಬೆಂಗಳೂರಿನ ಜಿಪಿಒ ಕಚೇರಿ ಮತ್ತು ಚಾಮರಾಜಪೇಟೆಯ ಪೋಸ್ಟ್ ಆಫೀಸ್ ನಲ್ಲಿ ವಿದೇಶಗಳಿಂದ ಬರುವ ಪೋಸ್ಟಲ್ ಗಳು ಹಾಗೂ ಪಾರ್ಸೆಲ್ ಗಳನ್ನ ಪರಿಶೀಲಿಸುವ ಹುದ್ದೆಯಲ್ಲಿದ್ದಾರೆ.

    ನೆದರ್ಲೆಂಡ್, ಡೆನ್ಮಾರ್ಕ್, ಯುಎಸ್ ಗಳಿಂದ ಬರುವ ಆರ್ಡಿನರಿ ಪೋಸ್ಟ್ ಕಾರ್ಡ್ ಗಳು ಹಾಗೂ ಪಾರ್ಸೆಲ್ ಗಳನ್ನ ಪರಿಶೀಲಿಸಿ ಅವುಗಳಲ್ಲಿ ಮಾದಕವಸ್ತುಗಳು ಇದ್ದರೆ ಡೀಲರ್ ಗಳಿಗೆ ಮಾರಿ ಹಣ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಇದಲ್ಲದೆ ಇವರೇ ನಕಲಿ ಅಡ್ರೆಸ್ ನೀಡಿ ಡಾರ್ಕ್ ನೆಟ್ ಮೂಲಕ ಖರೀದಿ ಕೂಡ ಮಾಡುತ್ತಿದ್ದರು.

    ಸದ್ಯ ಬಂಧಿತರಿಂದ 20 ಲಕ್ಷ ಬೆಲೆಯ ಎಕ್ಸ್ ಟಾಸಿ ಮಾತ್ರೆಗಳು, ಎಂಡಿಎಂ ಎ ಕ್ರಿಸ್ಟೆಲ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ವಿಜಯ್ ರಾಜ್ ಈ ಹಿಂದೆ ಸೇನೆಯಲ್ಲಿ ಸಹ ಕೆಲಸ ಮಾಡಿದ್ದಾಗಿ ತಿಳಿದು ಬಂದಿದೆ. ಇದೀಗ ಸರ್ಕಾರಿ ಹುದ್ದೆಯನ್ನ ಮಾದಕ ವಸ್ತುಗಳ ಮಾರಾಟಕ್ಕೆ ಬಳಸಿಕೊಂಡ ಆರೋಪದ ಮೇಲೆ ಎಲ್ಲರನ್ನೂ ಬಂಧಿಸಿ ಜೈಲಿಗಟ್ಟಲಾಗಿದೆ.