Tag: poster

  • ಚುನಾವಣೆಯಲ್ಲಿ ಗೆದ್ರೆ ಉಚಿತ ಮೇಕಪ್ ಕಿಟ್ ಕೊಡುತ್ತೇನೆ: ಅಭ್ಯರ್ಥಿಯ ಪೋಸ್ಟರ್ ವೈರಲ್

    ಚುನಾವಣೆಯಲ್ಲಿ ಗೆದ್ರೆ ಉಚಿತ ಮೇಕಪ್ ಕಿಟ್ ಕೊಡುತ್ತೇನೆ: ಅಭ್ಯರ್ಥಿಯ ಪೋಸ್ಟರ್ ವೈರಲ್

    ಚಂಡೀಗಢ: ಚುನಾವಣೆಯಲ್ಲಿ (Election) ಗೆಲ್ಲಲು ಅಭ್ಯರ್ಥಿಗಳು ಏನೆಲ್ಲಾ ಸರ್ಕಸ್ ಮಾಡಲ್ಲ? ಜನರ ಮತವನ್ನು ಸೆಳೆಯಲು ಭರವಸೆಗಳ ಸರಮಾಲೆಯನ್ನೇ ಹರಿಸುತ್ತಾರೆ. ಆದರೆ ಅವರ ಭರವಸೆಗಳು ನಿಜವಾಗುತ್ತೋ ಇಲ್ಲವೋ ಎಂಬುದು ಅವರು ಗೆದ್ದ ಬಳಿಕವೇ ಸಾಬೀತಾಗಬೇಕು.

    ಇಲ್ಲೊಬ್ಬ ಪಂಚಾಯತ್ ಚುನಾವಣಾ ಅಭ್ಯರ್ಥಿ (Candidate) ತಾನು ಗೆದ್ದರೆ, ಭವಿಷ್ಯದಲ್ಲಿ ಎಂತೆಂತಹ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎಂದು ಒಂದು ಪೋಸ್ಟರ್‌ನಲ್ಲಿ (Poster) ಬರೆದು ಹಾಕಿದ್ದಾರೆ. ಅಭ್ಯರ್ಥಿಯ ಭರವಸೆಗಳ ಲಿಸ್ಟ್ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

    ಹರಿಯಾಣದ (Haryana) ಸಿರ್ನಾದ್ ಗ್ರಾಮದಲ್ಲಿ ಸರಪಂಚ್ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಜೈಕರನ್ ಲಾಥ್ವಾಲ್ ಅವರು ಚುನಾವಣೆಯಲ್ಲಿ ಗೆದ್ದರೆ, ಭವಿಷ್ಯದಲ್ಲಿ ಅವರು ಕುಗ್ರಾಮದಲ್ಲಿ 3 ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಪ್ರಾರಂಭಿಸುತ್ತೇನೆ. ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 20 ರೂ. ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 100 ರೂ.ಗೆ ಇಳಿಸುತ್ತೇನೆ. ಸರಕು ಮತ್ತು ಸೇವಾ ತೆರಿಗೆಯನ್ನೂ (GST) ತೆಗೆದುಹಾಕುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಕಾರು ನಿಲ್ಲಿಸಿ ಅಭಿಮಾನಿಯಿಂದ ತಾಯಿಯ ಫೋಟೋ ಸ್ವೀಕರಿಸಿದ ಮೋದಿ

    ಅವರ ಭರವಸೆಗಳ ಪಟ್ಟಿ ಇಷ್ಟಕ್ಕೇ ಮುಗಿಯದೇ ಇನ್ನೂ ಬೆಳೆಯುತ್ತಲೇ ಹೋಗಿದ್ದು, ಉಚಿತ ವೈ-ಫೈ, ಎಲ್ಲಾ ಮಹಿಳೆಯರಿಗೆ ಮೇಕಪ್ ಕಿಟ್‌ಗಳು, ಪ್ರತಿ ಕುಟುಂಬಕ್ಕೆ ಉಚಿತ ಬೈಕುಗಳು, ಮದ್ಯವ್ಯಸನಿಯಾಗಿದ್ದರೆ ದಿನಕ್ಕೆ ಒಂದು ಮದ್ಯದ ಬಾಟಲಿ, ಉಳಿದವರಿಗೆ ಇತರ ಉಚಿತ ವಸ್ತುಗಳು, ಸಿರ್ಸಾದ್‌ನಿಂದ ದೆಹಲಿಗೆ ಮೆಟ್ರೋ ಮಾರ್ಗ ಮತ್ತು ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿ ಹಳ್ಳಿಯಿಂದ ಗೊಹಾನಾಗೆ ಪ್ರತಿ 5 ನಿಮಿಷಕ್ಕೆ ಹೆಲಿಕಾಪ್ಟರ್ ಸೇವೆಯನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

    ಲಾಥ್ವಾಲ್ ಅವರ ಭರವಸೆಗಳಿಂದ ಅವರು ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಪೋಸ್ಟರ್ ಇದೀಗ ಟ್ವಿಟ್ಟರ್‌ನಲ್ಲಿ ಭಾರೀ ವೈರಲ್ ಆಗುತ್ತಿದ್ದು, ನಗೆಪಾಟಲಿಗೀಡಾಗುತ್ತಿದೆ. ಇದನ್ನೂ ಓದಿ: ಪ್ರಯಾಣಿಕ ಖರೀದಿಸಿದ್ದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ – IRCTC ಹೇಳೋದೇನು?

    Live Tv
    [brid partner=56869869 player=32851 video=960834 autoplay=true]

  • ಭಾರತ್ ಜೋಡೋ ಯಾತ್ರೆ – ಮಂಡ್ಯದಲ್ಲಿ ಕಾಣಿಸಿಕೊಂಡಿತು ಸಾವರ್ಕರ್ ಫೋಟೋ

    ಭಾರತ್ ಜೋಡೋ ಯಾತ್ರೆ – ಮಂಡ್ಯದಲ್ಲಿ ಕಾಣಿಸಿಕೊಂಡಿತು ಸಾವರ್ಕರ್ ಫೋಟೋ

    ಮಂಡ್ಯ: ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ (Savarkar) ಅವರನ್ನು ಎಂದಿಗೂ ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ವಾದಿಸುವ ಕಾಂಗ್ರೆಸ್ (Congress) ಮತ್ತೊಮ್ಮೆ ಗೊಂದಲಕ್ಕೆ ಸಿಲುಕಿಕೊಂಡಿದೆ. ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಪೋಸ್ಟರ್‌ನಲ್ಲಿ (Poster) ಮತ್ತೊಮ್ಮೆ ಸಾವರ್ಕರ್ ಫೋಟೋ ಕಾಣಿಸಿಕೊಂಡಿದೆ. ಆದರೆ ಇದು ದುಷ್ಕರ್ಮಿಗಳ ಕೃತ್ಯ ಎಂದು ಕಾಂಗ್ರೆಸ್ ಆರೋಪಿಸಿದೆ.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಜೋಡೋ ಯಾತ್ರೆ ಇದೀಗ ಕರ್ನಾಟಕದ ಮಂಡ್ಯ (Mandya) ಜಿಲ್ಲೆಯನ್ನು ತಲುಪಿದೆ. ಆದರೆ ಅಲ್ಲಿ ಈ ಯಾತ್ರೆಗೆ ಸಂಬಂಧಪಟ್ಟ ಒಂದು ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ ಕಾಣಿಸಿಕೊಂಡಿದೆ. ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಫೋಟೋಗಳೂ ಕಂಡುಬಂದಿವೆ.

    ಈ ಪೋಸ್ಟರ್ ಶಾಂತಿನಗರ ಶಾಸಕ ಹ್ಯಾರಿಸ್‌ಗೆ ಸೇರಿದ್ದು ಎಂದು ಸುದ್ದಿ ಹಬ್ಬುತ್ತಲೇ ಅವರು ಮಾತನಾಡಿ, ಇದು ಕೆಲ ಕಿಡಿಗೇಡಿಗಳ ಕೃತ್ಯ, ನಾವು ಮಾಡಿರುವುದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಂಡ್ಯ ಜಿಲ್ಲೆಯಲ್ಲಿ ದೂರು ದಾಖಲಿಸುವುದಾಗಿಯೂ ಹ್ಯಾರಿಸ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಸೀದಿ ಮೇಲೆ ಭಗವಾಧ್ವಜದ ಫೋಟೋ- ಸ್ಟೇಟಸ್ ಹಾಕಿದ್ದ 8 ಮಂದಿ ವಿರುದ್ಧ ಪ್ರಕರಣ

    ಇದಕ್ಕೂ ಮೊದಲು ಸೆಪ್ಟೆಂಬರ್ 21 ರಂದು ಕೇರಳದಲ್ಲಿ ಭಾರತ್ ಜೋಡೋ ಯಾತ್ರೆಯ ಪೋಸ್ಟರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳ ಸಾಲಿನಲ್ಲಿ ಸಾವರ್ಕರ್ ಫೋಟೋ ಕೂಡಾ ಕಾಣಿಸಿಕೊಂಡಿತ್ತು. ಬಳಿಕ ಅದು ಪ್ರಿಂಟಿಂಗ್ ಮಿಸ್ಟೇಕ್ ಎಂದು ಸ್ಪಷ್ಟನೆ ನೀಡಿದ ಕಾಂಗ್ರೆಸ್ ಕಾರ್ಯಕರ್ತರು, ಅದರ ಮೇಲೆ ಮಹಾತ್ಮಾ ಗಾಂಧೀಜಿಯವರ ಫೋಟೋ ಅಂಟಿಸಿ ಸಾವರ್ಕರ್ ಫೋಟೋವನ್ನು ಮುಚ್ಚಿ ಹಾಕಿದ್ದರು. ಇದನ್ನೂ ಓದಿ: ದಸರಾ ಮೆರವಣಿಗೆ ವೇಳೆ ಮದರಸಾಗೆ ನುಗ್ಗಿ ಪೂಜೆ – 9 ಜನರ ವಿರುದ್ಧ ಎಫ್‌ಐಆರ್

    Live Tv
    [brid partner=56869869 player=32851 video=960834 autoplay=true]

  • ವಿಜಯದಶಮಿಗೆ ‘ಯುಐ’ ಪೋಸ್ಟರ್ ಮೂಲಕ ಮೆದುಳಿಗೆ ಹುಳು ಬಿಟ್ಟ ಉಪೇಂದ್ರ

    ವಿಜಯದಶಮಿಗೆ ‘ಯುಐ’ ಪೋಸ್ಟರ್ ಮೂಲಕ ಮೆದುಳಿಗೆ ಹುಳು ಬಿಟ್ಟ ಉಪೇಂದ್ರ

    ಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಯುಐ’ (UI) ಸಿನಿಮಾದ ಮತ್ತೊಂದು ಪೋಸ್ಟರ್ (poster) ವಿಜಯ ದಶಕಮಿಗಾಗಿ ಬಿಡುಗಡೆಗೊಂಡಿದ್ದು, ಈ ಪೋಸ್ಟರ್ ಮೂಲಕವೂ ಉಪೇಂದ್ರ ನೋಡುಗರ ಮೆದುಳಿಗೆ ಹುಳು ಬಿಟ್ಟಿದ್ದಾರೆ. ಈ ಪೋಸ್ಟರ್ ಕೂಡ ವಿಭಿನ್ನವಾಗಿದ್ದು ನಾನಾ ಅರ್ಥಗಳನ್ನು ನೀಡುತ್ತಿದೆ. ಕೈಯಲ್ಲಿ ರಕ್ತಸಿಕ್ತ ಖಡ್ಗ, ಸೂರ್ಯನಿಗೆ ಮರೆಮಾಡಿ ನಿಂತಿರುವ ವ್ಯಕ್ತಿ, ವಿಶೇಷ ವೇಷಭೂಷಣ ಸೇರಿದಂತೆ ಹತ್ತು ಹಲವು ಸಂಗತಿಗಳು ಅಲ್ಲಿವೆ.

    ವಿಭಿನ್ನ ಶೀರ್ಷಿಕೆಯಿಂದಾಗಿಯೇ ಈಗಾಗಲೇ ಗಮನ ಸೆಳೆದಿರುವ ಉಪೇಂದ್ರ,(Upendra) ಸಿನಿಮಾ ಟೈಟಲ್ ಏನನ್ನು ಧ್ವನಿಸುತ್ತದೆ ಎನ್ನುವ ಕುರಿತು ಈವರೆಗೂ ಹೇಳಿಲ್ಲ. ನೀವು ಟೈಟಲ್ ಅನ್ನು ಏನು ಬೇಕಾದರೂ ಕರೆದುಕೊಳ್ಳಿ ಎಂದು ನೋಡುಗರಿಗೆ ಅಂತಿಮ ಆಯ್ಕೆ ಬಿಟ್ಟಿದ್ದಾರೆ. ಹಲವು ದಿನಗಳಿಂದ ಭರದಿಂದ ಚಿತ್ರೀಕರಣವನ್ನೂ ಆರಂಭಿಸಿರುವ ಉಪ್ಪಿ, ಸಿನಿಮಾ ರಂಗದ ಅನೇಕ ಸಂಗತಿಗಳನ್ನೂ ಈ ಚಿತ್ರದಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ: ಗೊಬ್ಬರಗಾಲಗೆ ಕಾವ್ಯಶ್ರೀ ವಾರ್ನಿಂಗ್

    ಸಮಾಜ, ಮಾಧ್ಯಮ, ಕಾನೂನು, ಆಡಳಿತ ವ್ಯವಸ್ಥೆ, ಧಾರ್ಮಿಕ ಆಚರಣೆಗಳು ಹೀಗೆ ಸಾಕಷ್ಟು ವಿಷಯಗಳನ್ನು ಚಿತ್ರಕಥೆಯಲ್ಲಿ ಬೆರೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಉಪ್ಪಿ ಮಾತ್ರ ಈವರೆಗೂ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಜಿ.ಮನೋಹರನ್ ಮತ್ತು ಶ್ರೀಕಾಂತ್ ಕೆ.ಪಿ (K.P. Srikanth) ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಲಹರಿ ವೇಲು (Lahari Velu) ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತ್ ಜೋಡೋ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ – ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್

    ಭಾರತ್ ಜೋಡೋ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ – ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್

    ತಿರುವನಂತಪುರಂ: ಸಾವರ್ಕರ್ (Savarkar) ಅವರನ್ನು ಸ್ವಾತಂತ್ರ್ಯ ಹೋರಾಟಗಾರ (Freedom Fighter) ಎಂದು ಪರಿಗಣಿಸದ ಕಾಂಗ್ರೆಸ್ (Congress) ಇಂದು ಒಂದು ನಿರೀಕ್ಷೆಯೇ ಮಾಡಿರದ ಪ್ರಮಾದವನ್ನು ಎದುರಿಸಿದೆ. ಕಾಂಗ್ರೆಸ್ ಜೋಡೋ ಯಾತ್ರೆಯ (Bharat Jodo Yatra) ಹಿನ್ನೆಲೆ ಮಾಡಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಪೋಸ್ಟರ್‌ನಲ್ಲಿ (Poster) ಸಾವರ್ಕರ್ ಅವರ ಚಿತ್ರವೂ ಕಂಡುಬಂದಿದೆ. ಆದರೆ ಕಾಂಗ್ರೆಸ್ ಇದನ್ನು ಪ್ರಿಂಟಿಂಗ್ ಮಿಸ್ಟೇಕ್ (Printing Mistake) ಎಂದು ಸಮರ್ಥಿಸಿಕೊಂಡಿದೆ.

    ಕಾಂಗ್ರೆಸ್‌ನ ಮಹಾತ್ವಾಕಾಂಕ್ಷೆಯ ರ‍್ಯಾಲಿ ಭಾರತ್ ಜೋಡೋ ಯಾತ್ರೆ ಕೇರಳದ (Kerala) ಎರ್ನಾಕುಲಂ ಜಿಲ್ಲೆ ತಲುಪಿದಾಗ ಸ್ವಾತಂತ್ರ್ಯ ಹೋರಾಟಗಾರರ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ ಬಳಸಿರುವುದು ಕಂಡುಬಂದಿದೆ. ಆದರೆ ಕಾಂಗ್ರೆಸ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ, ಅವರು ಬ್ರಿಟಿಷರ ವಿರುದ್ಧ ಹೋರಾಡುವ ಬದಲು ಅವರಿಗೆ ಕ್ಷಮೆ ಯಾಚಿಸಿದವರು ಎಂದು ವಾದಿಸಿದ್ದಾರೆ.

    ಕೇರಳದ ಸ್ವತಂತ್ರ ಶಾಸಕ ಪಿ.ವಿ ಅನ್ವರ್ ಅವರು ಈ ಪೋಸ್ಟರ್ ಅನ್ನು ಗಮನಿಸಿ, ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಚೆಂಗಮನಾಡಿನಲ್ಲಿ ಇರಿಸಲಾದ ಪೋಸ್ಟರ್‌ನಲ್ಲಿ ಸಾವರ್ಕರ್ ಅವರ ಫೋಟೋವನ್ನು ಹಾಕಲಾಗಿದೆ. ಈ ವಿಚಾರ ಕಾರ್ಯಕರ್ತರ ಗಮನಕ್ಕೆ ಬರುತ್ತಿದ್ದಂತೆ ಸಾವರ್ಕರ್ ಅವರ ಫೋಟೋ ಮೇಲೆ ಮಹಾತ್ಮ ಗಾಂಧೀಜಿಯವರ ಚಿತ್ರವನ್ನು ಅಂಟಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹೃದಯ ಸಮಸ್ಯೆ- ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಶ್ರೀ ಶಿಫ್ಟ್

    ತಕ್ಷಣವೇ ಈ ಬಗ್ಗೆ ಸ್ಪಷ್ಟನೆ ನೀಡಿದ ಕಾಂಗ್ರೆಸ್, ಇದು ಪ್ರಿಂಟಿಂಗ್ ಮಿಸ್ಟೇಕ್‌ನಿಂದ ಆಗಿದೆ. ನಾವು ಮುದ್ರಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳಿರುವ ಪೋಸ್ಟರ್ ತಯಾರಿಸಲು ಹೇಳಿದಾಗ ಅವರು ಕ್ರಾಸ್ ಚೆಕ್ ಮಾಡದೇ ಆನ್‌ಲೈನ್‌ನಲ್ಲಿ ಲಭ್ಯವಿದ್ದ ಎಲ್ಲಾ ಫೋಟೋಗಳನ್ನೂ ಹಾಕಿ ಪೋಸ್ಟರ್ ಮಾಡಿದ್ದಾರೆ. ಬಳಿಕ ಸಾವರ್ಕರ್ ಫೋಟೋ ಮೇಲೆ ಗಾಂಧೀಜಿಯವರ ಚಿತ್ರವನ್ನು ಹಾಕುವ ಮೂಲಕ ತಪ್ಪನ್ನು ಸರಿಪಡಿಸಿದ್ದೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ‘ಸೆಪ್ಟೆಂಬರ್ 13′ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಸ್ಟಾರ್ ನಟ ಮಮ್ಮುಟ್ಟಿ

    ಕನ್ನಡದ ‘ಸೆಪ್ಟೆಂಬರ್ 13′ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಸ್ಟಾರ್ ನಟ ಮಮ್ಮುಟ್ಟಿ

    ಕೊರೋನಾ ಸಂದಿಗ್ದ ಪರಿಸ್ಥಿತಿಯಲ್ಲಿ ದಾದಿಯರ ಸೇವೆ, ತ್ಯಾಗವನ್ನು ಬಿಂಬಿಸುವ ಸೆಪ್ಟೆಂಬರ್ 13 ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಶೀಘ್ರದಲ್ಲಿಯೇ ತೆರೆಗೆ ಬರಲಿರುವ ಈ ಚಿತ್ರದ ಹೊಸ ಪೋಸ್ಟರ್ ನ್ನು ಮಾಲಿವುಡ್ ಚಿತ್ರರಂಗದ ಖ್ಯಾತ ನಟ ಮಮ್ಮುಟ್ಟಿ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ರುಬಿ ಫಿಲ್ಮಂಸ್ ನಡಿ ಮಾಜಿ ಶಾಸಕ ಇವಾನ್ ನಿಗ್ಲಿ ಕಥೆ ಬರೆದು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೆಸರಾಂತ ನಿರ್ಮಾಪಕ ಡಾ.ರಾಜ ಬಾಲಕೃಷ್ಣನ್ ಈ ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಸಂಕಲನ, ಛಾಯಾಗ್ರಾಹಣ ಜವಾಬ್ದಾರಿಯನ್ನೂ ನಿಭಾಯಿಸಿ ಸಿನಿಮಾದಲ್ಲಿ ಖಳನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ‘ಸೆಪ್ಟಂಬರ್ 13′ ಸಿನಿಮಾದಲ್ಲಿ ಹಿರಿಯ ಕಲಾವಿದರಾದ ವಿನಯ ಪ್ರಸಾದ್, ಜೈ ಜಗದೀಶ್, ಯಮುನಾ ಶ್ರೀನಿಧಿ ನಟಿಸಿದ್ದು, ಶ್ರೀಯಾರಿಧಿಬನ್ ನಾಯಕಿಯಾಗಿ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಪಾದಾರ್ಪಣೆ ಮಾಡಿದ್ದಾರೆ. ಉಳಿದಂತೆ ಒಂದಷ್ಟು ಯುವ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಶೀರ್ಘದಲ್ಲಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮುರುಗೇಶ್ ನಿರಾಣಿ ಮುಂದಿನ ಸಿಎಂ- ಆಪ್ತರಿಂದ ಪೋಸ್ಟರ್ ಫುಲ್ ವೈರಲ್

    ಮುರುಗೇಶ್ ನಿರಾಣಿ ಮುಂದಿನ ಸಿಎಂ- ಆಪ್ತರಿಂದ ಪೋಸ್ಟರ್ ಫುಲ್ ವೈರಲ್

    ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿ. ಹೀಗಂತ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಆಪ್ತ ಸಹಾಯಕ ಕಿರಣ್ ಬಡಿಗೇರ ಅಬರು ನಿರಾಣಿ ಹುಟ್ಟುಹಬ್ಬಕ್ಕೆ ಶುಭಕೋರಿ ಪೋಸ್ಟರ್ ಹಾಕಿದ್ದಾರೆ. ಅದರಲ್ಲಿ ಮುಂದಿನ ಸಿಎಂ ಎಂಬ ಪದ ಬಳಕೆ ಮಾಡಲಾಗಿತ್ತು. ಅಲ್ಲದೆ ಜಮಖಂಡಿ ಜಿಲ್ಲೆ ಕನಸು ನನಸು ಮಾಡುವ ನಾಯಕನಿಗೆ ಶುಭಾಶಯ ಎಂದು ತಿಳಿಸಿಸಲಾಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸಾಕಷ್ಟು ವೈರಲ್ ಆಗಿತ್ತು. ಈ ಬೆನ್ನಲ್ಲೇ ಬ್ಯಾನರ್ ತೆರವುಗೊಳಿಸಲಾಗಿದೆ.

    ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರ ಮುರುಗೇಶ್ ನಿರಾಣಿ ಅವರು ಈ ಮೂಲಕ ಬೀಳಗಿ ಕ್ಷೇತ್ರದಲ್ಲಿ ಸೋಲಿನ ಭಯ ಕಾಡ್ತಿದಿಯಾ..?, ನಿರಾಣಿ ಅವರು ಬೀಳಗಿ ಕ್ಷೇತ್ರ ಬಿಟ್ಟು ಪಂಚಮಸಾಲಿ ಸಮುದಾಯ ಹೆಚ್ಚಿರೋ ಜಮಖಂಡಿ ಕಡೆ ಹೊರಟ್ರಾ ಅನ್ನೋ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಬಿಜೆಪಿ ಜೊತೆಗೆ ಯಾವುದೇ ರಾಜಿ ಇಲ್ಲ – ದೆಹಲಿ ಭೇಟಿಗೂ ಮುನ್ನವೇ ಸ್ಟಾಲಿನ್ ಸ್ಪಷ್ಟನೆ

    ಫೆಬ್ರವರಿಯಲ್ಲಿ ಪಂಚಮಸಾಲಿ 3ನೇ ಪೀಠ ಜಮಖಂಡಿಯಲ್ಲಿ ಸ್ಥಾಪನೆಯಾಗಿದೆ. ಪೀಠ ಸ್ಥಾಪನೆ ನೋಡಿದ್ರೆ ನಿರಾಣಿ ಜಮಖಂಡಿ ಕ್ಷೇತ್ರದಲ್ಲಿ ನಿಲ್ಲೋದು ಪಕ್ಕಾನಾ ಅನ್ನೊ ಕುತೂಹಲ ಹೆಚ್ಚಿದೆ. ಕಳೆದ ಚುನಾವಣೆಯಲ್ಲಿ ನಿರಾಣಿ ಸಹೋದರ ಸಂಗಮೇಶ ಜಮಖಂಡಿಯಲ್ಲಿ ಬಂಡಾಯವಾಗಿ ಸ್ಪರ್ಧಿಸೋಕೆ ರೆಡಿಯಾಗಿದ್ದರು. ಬಳಿಕ ಯಡಿಯೂರಪ್ಪ ಮಧ್ಯಸ್ಥಿಕೆಯಲ್ಲಿ ಸಂಗಮೇಶ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬುಡಕಟ್ಟು ವಿರೋಧಿ ಎಂದು ಬ್ಯಾನರ್ಜಿ ವಿರುದ್ಧ 50,000 ಪೋಸ್ಟರ್‌ ಹಾಕಿದ ಬಿಜೆಪಿ

    ಬುಡಕಟ್ಟು ವಿರೋಧಿ ಎಂದು ಬ್ಯಾನರ್ಜಿ ವಿರುದ್ಧ 50,000 ಪೋಸ್ಟರ್‌ ಹಾಕಿದ ಬಿಜೆಪಿ

    ಕೊಲ್ಕತ್ತಾ: ರಾಷ್ಟ್ರಪತಿ ಅಭ್ಯರ್ಥಿ, ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರನ್ನು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬೆಂಬಲಿಸದ ಹಿನ್ನೆಲೆ ಅವರನ್ನು ‘ಬುಡಕಟ್ಟು ವಿರೋಧಿ’ ಎಂದು ಬಿಜೆಪಿ 50,000 ಪೋಸ್ಟರ್‌ಗಳನ್ನು ಹಾಕಿದೆ.

    ಪಶ್ಚಿಮ ಬಂಗಾಳದ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿ ಬಿಜೆಪಿ ಕಾರ್ಯಕರ್ತರು ಮಮತಾ ಬ್ಯಾನರ್ಜಿ ವಿರುದ್ಧ ಪೋಸ್ಟರ್ ಹಾಕಿದ್ದು, ಬುಡಕಟ್ಟು ಹುಡುಗಿಯರು ಹಡ್‌ಗ್ಲೋವ್ಸ್ ಹಾಕಿ ಬ್ಯಾನರ್ಜಿ ಅವರ ಕೈ ಹಿಡಿದು ನೃತ್ಯ ಮಾಡುತ್ತಿರುವ ಫೋಟೋವನ್ನು ಪೋಸ್ಟರ್‌ನಲ್ಲಿ ಹಾಕಲಾಗಿದೆ. ಬೆಂಗಾಲಿ ಭಾಷೆಯಲ್ಲಿ, ಬಿಜೆಪಿ ಪಕ್ಷ ಬುಡಕಟ್ಟು ಮಹಿಳೆಯನ್ನು ನಾಮನಿರ್ದೇಶನ ಮಾಡುವ ಮೂಲಕ ಬುಡಕಟ್ಟು ಸಮುದಾಯವನ್ನು ಅಭಿನಂದಿಸಿದೆ. ಆದರೆ ಸಿಎಂ ಮಮತಾ ಬ್ಯಾನರ್ಜಿ ಬುಡಕಟ್ಟು ಮಹಿಳೆಯರನ್ನು ಬೆಂಬಲಿಸದೆ ಬೇರೆಯವರನ್ನು ನಾಮನಿರ್ದೇಶನ ಮಾಡಿದ್ದಾರೆ ಎಂದು ಬರೆದು ಕಿಡಿಕಾರಿದ್ದಾರೆ. ಇದನ್ನೂ ಓದಿ:  ಮಹಾಲಕ್ಷ್ಮಿ ಲೇಔಟ್ 55ನೇ ವಾರ್ಡ್‍ಗೆ ಅಪ್ಪು ಹೆಸರಿಟ್ಟಿರೋದು ಸಂತೋಷ ತಂದಿದೆ: ಸಿಎಂ 

    ಇನ್ನೂ ಮುಂದುವರಿದ ಅವರು, ಬ್ಯಾನರ್ಜಿ ಬುಡಕಟ್ಟು ಜನಾಂಗದ ವಿರೋಧಿ. ಅದಕ್ಕೆ ಅವರು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಿಲ್ಲ ಎಂದು ಬರೆದು ಪೋಸ್ಟರ್‌ಗಳನ್ನು ಹಾಕಿದೆ. ಇದೇ ಪೋಸ್ಟರ್ ಅನ್ನು ಎಲ್ಲ ಪ್ರಮುಖ ಬುಡಕಟ್ಟು ಪ್ರದೇಶಗಳಲ್ಲಿ ಹಾಕಲಾಗಿದೆ.

    ಬ್ಯಾನರ್ಜಿ ಅವರು ಬುಡಕಟ್ಟು ಜನಾಂಗದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಬುಡಕಟ್ಟು ಹುಡುಗಿಯರ ಹಡ್‌ಗ್ಲೋವ್ಸ್ ಹಾಕಿ ಬ್ಯಾನರ್ಜಿ ಅವರ ಕೈ ಹಿಡಿದು ಬುಡಕಟ್ಟು ನೃತ್ಯ ಮಾಡಿದ್ದರು. ಈ ಫೋಟೋಗಳನ್ನು ಬಿಜೆಪಿ ಪೋಸ್ಟರ್‌ಗೆ ಬಳಸಿದೆ.

    Live Tv
    [brid partner=56869869 player=32851 video=960834 autoplay=true]

  • ಶಿವರಾಜ್ ಕುಮಾರ್ ಬರ್ತಡೇ : ಏನೆಲ್ಲ ಸ್ಪೆಷಲ್ ಗೊತ್ತಾ?

    ಶಿವರಾಜ್ ಕುಮಾರ್ ಬರ್ತಡೇ : ಏನೆಲ್ಲ ಸ್ಪೆಷಲ್ ಗೊತ್ತಾ?

    ಇಂದು ಡಾ.ಶಿವರಾಜ್ ಕುಮಾರ್ ಅವರ 60ನೇ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಅವರು ಹುಟ್ಟು ಹಬ್ಬ ಆಚರಿಸದೇ ಇದ್ದರೂ, ಅಭಿಮಾನಿಗಳು ಮತ್ತು ವಿವಿಧ ಸಿನಿಮಾ ತಂಡಗಳು ಸಾರ್ಥಕ ರೀತಿಯಲ್ಲಿ ಬರ್ತಡೇ ಆಚರಿಸುತ್ತಿವೆ. ಬೆಳಗ್ಗೆಯಿಂದಲೇ ನಾನಾ ರಂಗದ ಗಣ್ಯರು  ಸೋಷಿಯಲ್ ಮೀಡಿಯಾ ಮೂಲಕ ನೆಚ್ಚಿನ ನಟನಿಗೆ ಶುಭಾಶಯ ಹೇಳಿದ್ದಾರೆ.

    ಈ ಹುಟ್ಟು ಹಬಕ್ಕಾಗಿ ಶಿವರಾಜ್ ಕುಮಾರ್ ನಟನೆಯ ಹಲವು ಸಿನಿಮಾಗಳ ಪೋಸ್ಟರ್ಸ್ ರಿಲೀಸ್ ಆಗಿವೆ. ಅಲ್ಲದೇ, ಕೆಲ ಸಿನಿಮಾಗಳ ಟೈಟಲ್ ಕೂಡ ಲಾಂಚ್ ಮಾಡಲಾಗಿದೆ. ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಶಿವರಾಜ್ ಕುಮಾರ್ ನಟನೆಯ ಚಿತ್ರಕ್ಕೆ ‘45’ ಎಂದು ಹೆಸರಿಡಲಾಗಿದ್ದು, ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರೇ ಟೈಟಲ್ ಘೋಷಣೆ ಮಾಡಿದ್ದಾರೆ. ತೆಲುಗಿನಲ್ಲಿ ಅಕ್ಕಿನೇನ ನಾಗಾರ್ಜುನ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ತಮಿಳಿನಲ್ಲಿ ಶಿವಕಾರ್ತಿಕೇನ್ ಟೈಟಲ್ ಲಾಂಚ್ ಮಾಡಿದ್ದಾರೆ. ಇದನ್ನೂ ಓದಿ: ಮುಂದಿನ ಚಿತ್ರಕ್ಕಾಗಿ 15 ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ ಯಶ್

    ಶ್ರೀ ನಿರ್ದೇಶನದ ಘೋಸ್ಟ್, ಯೋಗರಾಜ್ ಭಟ್ ನಿರ್ದೇಶನದ ಮತ್ತು ಪ್ರಭುದೇವ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಹೊಸ ಸಿನಿಮಾ ಹಾಗೂ ಸಚಿನ್ ಆರ್ ಅವರ ಹೊಸ ಸಿನಿಮಾದ ಪೋಸ್ಟರ್ ಗಳು ಕೂಡ ಇಂದು ಬಿಡುಗಡೆ ಆಗಿವೆ. ಅಲ್ಲದೇ ವಿಶೇಷವಾಗಿ ಉಪೇಂದ್ರ ನಟನೆಯ ಯುಐ ಸಿನಿಮಾ ಕೂಡ ಇಂದು ಶಿವಣ್ಣ ಅವರಿಗೆ ವಿಶ್ ಮಾಡಿ ಜಾಹೀರಾತು ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.  ಈ ಸಿನಿಮಾದಲ್ಲಿ ಏನಾದರೂ ಶಿವಣ್ಣ ಇರುತ್ತಾರಾ? ಕಾದು ನೋಡಬೇಕು.

    ಶಿವಣ್ಣ ವಾಸಿಸುವ ಮಾನ್ಯತಾ ಟೆಕ್ ಪಾರ್ಕ್ ಹಿಂದಿನ ಸರ್ಕಲ್ ಗೆ ಅಲ್ಲಿನ ನಿವಾಸಿಗಳೆಲ್ಲರೂ ಸೇರಿ ಶಿವರಾಜ್ ಕುಮಾರ್ ಸರ್ಕಲ್ ಎಂದು ಹೆಸರು ಇಟ್ಟಿದ್ದಾರೆ. ಈ ಏರಿಯಾಗಾಗಿ ಅವರು ಸಾಕಷ್ಟು ರೀತಿಯಲ್ಲಿ ಸಹಾಯ ಮಾಡಿದ್ದಾರಂತೆ. ಹಾಗಾಗಿ ಸರ್ಕಲ್ ಗೆ  ಇವರ ಹೆಸರನ್ನೂ ಇಡಲಾಗಿದೆ.

    Live Tv [brid partner=56869869 player=32851 video=960834 autoplay=true]

  • ಪುನೀತ್ ರಾಜ್ ಕುಮಾರ್ ‘ಕಾಣೆಯಾಗಿದ್ದಾರೆ’ ಪೋಸ್ಟರ್ ವೈರಲ್

    ಪುನೀತ್ ರಾಜ್ ಕುಮಾರ್ ‘ಕಾಣೆಯಾಗಿದ್ದಾರೆ’ ಪೋಸ್ಟರ್ ವೈರಲ್

    ಪುನೀತ್ ರಾಜ್ ಕುಮಾರ್ ನಿಧನವನ್ನು ಇನ್ನೂ ಅವರ ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಅಗಲಿ ಎಂಟು ತಿಂಗಳು ಕಳೆದರೂ, ಅಭಿಮಾನಿಗಳು ಇನ್ನೂ ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ‘ಕಾಣೆಯಾಗಿದ್ದಾರೆ’ ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟ ಕಾಣೆಯಾಗಿದ್ದಾರೆ ಹುಡುಕಿಕೊಟ್ಟವರಿಗೆ ಕೇಳಿದ್ದನ್ನು ಕೊಡಲಾಗುವುದು ಎಂದು ಭಿತ್ತಿ ಪತ್ರವನ್ನು ಅಂಟಿಸುತ್ತಿದ್ದಾರೆ.

    ಹುಡುಗನೊಬ್ಬ ಭಿತ್ತಿ ಪತ್ರವನ್ನು ಗೋಡೆಗೆ ಅಂಟಿಸಿ ಕಾಣೆಯಾಗಿರುವ ತಮ್ಮ ನೆಚ್ಚಿನ ನಟನನ್ನು ಹುಡುಕಿಕೊಡಿ ಎಂದು ಕೇಳುವ ವಿಡಿಯೋ ಕೂಡ ವೈರಲ್ ಆಗಿದೆ. ಹೀಗೆ ಅಪ್ಪು ಅವರನ್ನು ಹುಡುಕುವ ಪ್ರಯತ್ನವನ್ನು ಇನ್ನೂ ಅಭಿಮಾನಿಗಳು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅಪ್ಪು ನಮ್ಮಿಂದ ಅಗಲಿಲ್ಲ, ಅಗಲುವುದೂ ಇಲ್ಲ ಎನ್ನುವ ಸಂದೇಶವನ್ನು ಸಾರಿದ್ದಾರೆ. ಜೊತೆಗಿರದ ಜೀವ ಸದಾ ಜೀವಂತ ಎನ್ನುವುದನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ನಿತ್ಯವೂ ಪುನೀತ್ ಪುಣ್ಯಭೂಮಿಗೆ ಸಾವಿರಾರು ಜನರು ಬರುತ್ತಿದ್ದಾರೆ. ಅಲ್ಲದೇ, ಪುನೀತ್ ಅವರ ಹೆಸರಿನಲ್ಲಿ ಅಲ್ಲಲ್ಲಿ ನಿತ್ಯವೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೇ, ತಮ್ಮ ಊರಿಗೆ, ಬೀದಿಗೆ ಪುನೀತ್ ರಾಜ್ ಕುಮಾರ್ ಹೆಸರನ್ನೂ ಇಟ್ಟಿದ್ದಾರೆ. ಹೀಗೆ ಪುನೀತ್ ಅವರನ್ನು ತಮಗಿಷ್ಟ ಬಂದಂತೆ ಆರಾಧಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ಬೆತ್ತಲೆ ಚಿತ್ರಕ್ಕೆ ಭಾರತದಾದ್ಯಂತ ತಾಪಮಾನ ಹೆಚ್ಚಿದೆ ಎಂದ ನಟಿ ಅನನ್ಯ ಪಾಂಡೆ

    ವಿಜಯ್ ದೇವರಕೊಂಡ ಬೆತ್ತಲೆ ಚಿತ್ರಕ್ಕೆ ಭಾರತದಾದ್ಯಂತ ತಾಪಮಾನ ಹೆಚ್ಚಿದೆ ಎಂದ ನಟಿ ಅನನ್ಯ ಪಾಂಡೆ

    ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಕಾಂಬಿನೇಷನ್ ನ ಲೈಗರ್ ಸಿನಿಮಾದ ಪೋಟೋವೊಂದನ್ನು ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಜಯ್ ಸಂಪೂರ್ಣ ಬೆತ್ತಲಾಗಿ, ಖಾಸಗಿ ಅಂಗಕ್ಕೆ ಹೂಗುಚ್ಚವನ್ನಿಟ್ಟು ಮುಚ್ಚಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದ್ದು, ನಟಿ ಅನನ್ಯ ಪಾಂಡೆ ಸೇರಿದಂತೆ ಹಲವರು ಕಲಾವಿದರು ಕಾಮೆಂಟ್ ಮಾಡಿದ್ದಾರೆ. ಸಮಂತಾ, ಅನುಷ್ಕಾ ಶೆಟ್ಟಿ ಮತ್ತು ಕರಣ್ ಜೋಹರ್ ಕೂಡ ವಿಭಿನ್ನವಾಗಿಯೇ ಪ್ರತಿಕ್ರಿಯಿಸಿದ್ದಾರೆ.

    ಸಮಂತಾ ಮತ್ತು ಕರಣ್ ಜೋಹಾರ್ ಗಿಂತಲೂ ಅನನ್ಯ ಪಾಂಡೆ ಮಾಡಿರುವ ಕಾಮೆಂಟ್ ನಾನಾ ರೀತಿಯ ಗಾಸಿಪ್ ಗೆ ಎಡೆಮಾಡಿ ಕೊಟ್ಟಿದೆ. ಈ ಹಿಂದೆ ವಿಜಯ್ ದೇವರಕೊಂಡ ಹೆಸರಿನ ಜೊತೆ ಕನ್ನಡತಿ ರಶ್ಮಿಕಾ ಮಂದಣ್ಣ ಹೆಸರು ತಳುಕು ಹಾಕಿಕೊಂಡಿತ್ತು. ಲೈಗರ್ ನಂತರ ವಿಜಯ್ ಜೊತೆ ಅನನ್ಯ ಪಾಂಡೆ ಓಡಾಡುತ್ತಿದ್ದಾರೆ ಎಂದು ಗಾಸಿಪ್ ಹರಡಿದೆ. ಈ ಕಾರಣಕ್ಕಾಗಿಯೇ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ದೂರವಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಅನನ್ಯ ಮಾಡಿರೋ ಕಾಮೆಂಟ್ ಗಮನ ಸೆಳೆದಿದೆ. ಇದನ್ನೂ ಓದಿ : ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಗೆ ಲೆಕ್ಕ ಕೇಳಿದೆ ಆಡಳಿತಾಧಿಕಾರಿ

    ವಿಜಯ್ ದೇವರಕೊಂಡ ಅವರ ಬೆತ್ತಲೆ ಫೋಟೋವನ್ನು ಶೇರ್ ಮಾಡಿರುವ ಅನನ್ಯ ಪಾಂಡೆ, ‘ ಬ್ರೀತ್ ಗಾಯ್ಸ್ ಬ್ರೀತ್, ದಿ ಟೆಂಪ್ರೆಚರ್ ಇಸ್ ರೇಸಿಂಗ್ ಆಲ್ ಓವರ್ ಇಂಡಿಯಾ ಟುಡೇ’ ಎಂದು ಬರೆದಿದ್ದಾರೆ. ಈ ಬೆತ್ತಲೆಯ ಫೋಟೋಗೆ ಭಾರತದಲ್ಲಿ ಇಂದು ತಾಪಮಾನ ಹೆಚ್ಚಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಈ ಕಾಮೆಂಟ್ ಗೆ ಸಾಕಷ್ಟು ಜನರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

    Live Tv