Tag: poster

  • ಕಾಳಿಮಾತೆ ಕೈಲಿ ಸಿಗರೇಟ್ ವಿವಾದ : ನಿರ್ದೇಶಕಿ ವಿರುದ್ಧ ಬಲವಂತದ ಕ್ರಮ ಬೇಡ ಎಂದ ಸುಪ್ರೀಂ

    ಕಾಳಿಮಾತೆ ಕೈಲಿ ಸಿಗರೇಟ್ ವಿವಾದ : ನಿರ್ದೇಶಕಿ ವಿರುದ್ಧ ಬಲವಂತದ ಕ್ರಮ ಬೇಡ ಎಂದ ಸುಪ್ರೀಂ

    ಕಾಳಿಮಾತೆ ಕೈಯಲ್ಲಿ ಸಿಗರೇಟ್ ಕೊಟ್ಟ ಪೋಸ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕಿ ಲೀನಾ ಮಣಿಮೇಗಲೈ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಿರುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಕಿ ಪರ ಹೇಳಿಕೆ ನೀಡಿದೆ. ಲೀನಾ ನಿರ್ದೇಶನದಲ್ಲಿ ಮೂಡಿ ಬಂದ ಕಾಳಿ ಸಾಕ್ಷ್ಯ ಚಿತ್ರದ ಪೋಸ್ಟರ್ ನಲ್ಲಿ  ಎಲ್.ಜಿ.ಬಿ.ಟಿ.ಕ್ಯೂ ಧ್ವಜ ಹಿಡಿದು ಸಿಗರೇಟು ಸೇದುತ್ತಿರುವಂತೆ ಚಿತ್ರಿಸಲಾಗಿತ್ತು.

    ತಮ್ಮ ಸಿನಿಮಾದ ಪೋಸ್ಟರ್ ನಲ್ಲಿ ಕಾಳಿ ಮಾತೆಯ ಕೈಗೆ ಸಿಗರೇಟು ಕೊಟ್ಟಿರುವ ವಿಚಾರಕ್ಕಾಗಿ ಭಾರೀ ವಿವಾದ ಎಬ್ಬಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ ತಮ್ಮ ಮೇಲಿನ ದೂರುಗಳನ್ನು ವಜಾ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು. ರಾಜ್ಯದ ನಾನಾ ಭಾಗಗಳಲ್ಲಿ ದಾಖಲಾದ ಎಫ್.ಐ.ಆರ್ ಗಳನ್ನು ರದ್ದು ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್, ಬಲವಂತವಾಗಿ ಏನೂ ಕ್ರಮ ಕೈಗೊಳ್ಳದಂತೆ ತಿಳಿಸಿದೆ.

    ತಮ್ಮ ಸಿನಿಮಾದ ಪೋಸ್ಟರ್ ನಲ್ಲಿ ಲೀನಾ ಕಾಳಿ ಮಾತೆಯ ಕೈಗೆ ಸಿಗರೇಟು ಕೊಟ್ಟಿದ್ದಲ್ಲದೇ, ತೃತೀಯ ಲಿಂಗಿಗಳನ್ನು ಸೂಚಿಸುವಂತಹ ಬಾವುಟವನ್ನೂ ಅವರು ಕಾಳಿ ಮಾತೆಯ ಮತ್ತೊಂದು ಕೈಗೆ ಕೊಟ್ಟಿದ್ದರು. ಈ ಪೋಸ್ಟ್ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ನಿರ್ದೇಶಕಿಯನ್ನು ಬಂಧಿಸಿ, ಕ್ರಮ ತಗೆದುಕೊಳ್ಳಬೇಕು ಎಂದು ದೇಶದ ನಾನಾ ರಾಜ್ಯಗಳಲ್ಲಿ ಹಲವರು ದೂರು ದಾಖಲಿಸಿದ್ದರು. ಇದನ್ನೂ ಓದಿ: ರಶ್ಮಿಕಾ ಬೀಚ್ ಫೋಟೋ: ದೇವರಕೊಂಡ ಕ್ಲಿಕ್ಕಿಸಿದ್ದಾ ಎಂದ ನೆಟ್ಟಿಗರು

    ತಾವು ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಆಗುವಂತೆ ಪೋಸ್ಟರ್ ರಚಿಸಿಲ್ಲ, ಆ ಪೋಸ್ಟರ್ ಯಾರಿಗೂ ನೋವು ತರುವಂತಹ ಉದ್ದೇಶ ಹೊಂದಿರಲಿಲ್ಲ ಎಂದು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನದಟ್ಟು ಮಾಡುತ್ತಿರುವ ಅವರು, ತಮ್ಮ ಕುಟುಂಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆಯೊಡ್ಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಅವರು ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಸಂಕ್ರಾಂತಿ ಹಬ್ಬ’ಕ್ಕೆ ಹೊಸ ಪೋಸ್ಟರ್ ರಿಲೀಸ್ ಮಾಡಿದ ನಿರ್ದೇಶಕ ಆಸ್ಕರ್ ಕೃಷ್ಣ

    ‘ಸಂಕ್ರಾಂತಿ ಹಬ್ಬ’ಕ್ಕೆ ಹೊಸ ಪೋಸ್ಟರ್ ರಿಲೀಸ್ ಮಾಡಿದ ನಿರ್ದೇಶಕ ಆಸ್ಕರ್ ಕೃಷ್ಣ

    ನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ನಿರ್ದೇಶನದ (Direction) ಸಿನಿಮಾದಲ್ಲಿ ನಾಯಕನಾಗಿ ನಟಿಸುವವರ ಸಂಖ್ಯೆ ತೀರಾ ಕಡಿಮೆ. ಅವರಲ್ಲಿ ಆಸ್ಕರ್ ಕೃಷ್ಣ (Oscar Krishna) ಕೂಡ ಒಬ್ಬರು. ಸ್ಕರ್ ಸಿನಿಮಾದ ಮೂಲಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದವರು ಇದೀಗ ‘ಕೃತ್ಯ’ ಸಿನಿಮಾದ ಮೂಲಕ ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸುತ್ತಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್ (Poster) ಅನ್ನು ಸಂಕ್ರಾಂತಿ ಹಬ್ಬದ ದಿನದಂದು ರಿಲೀಸ್ ಮಾಡಿದ್ದಾರೆ.

    ಈ ಹಿಂದೆ ಕೃಷ್ಣ ಅವರು ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡ್ಸಬಿಟ್ಟ’ ಚಿತ್ರದಲ್ಲೂ ನಾಯಕರಾದರು. ಎರಡನೇ ಬಾರಿ ಕೃತ್ಯ ಸಿನಿಮಾದ ಮೂಲಕ ಮತ್ತೆ ನಾಯಕರಾಗುತ್ತಿರುವುದು ವಿಶೇಷ. ಈ ಹಿಂದೆ ಇದೇ ಸಿನಿಮಾದ ಪೋಸ್ಟರ್ ಅನ್ನು ಶ್ರೀಮುರಳಿ ಬಿಡುಗಡೆ ಮಾಡಿ, ಕೃತ್ಯದ ಕೆಲ ವಿಷಯಗಳನ್ನೂ ಹಂಚಿಕೊಂಡಿದ್ದರು. ಇದನ್ನೂ ಓದಿ: ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    ’ಆಸ್ಕರ್’, ’ಮಿಸ್ ಮಲ್ಲಿಗೆ’ ’ಮೋನಿಕಾ ಈಸ್ ಮಿಸ್ಸಿಂಗ್’ ’ಮನಸಿನ ಮರೆಯಲಿ’ ಹಾಗೂ ಇತ್ತೀಚಿನ ’ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡ್ಸುಬಿಟ್ಟ’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಆಸ್ಕರ್ ಕೃಷ್ಣ’ಕೃತ್ಯ’ ಸಿನಿಮಾಗೆ ನಿರ್ದೇಶನ ಮಾಡುವುದರ ಜತೆಗೆ ನಿರ್ಮಾಣ ಮತ್ತು ನಾಯಕನ ಸ್ಥಾನವನ್ನೂ ಅಲಂಕರಿಸಿರುವುದು ವಿಶೇಷ. ಗೌತಮ್‌ ರಾಮಚಂದ್ರ ಈ ಚಿತ್ರದ ಸಹ ನಿರ್ಮಾಪಕ. ಆಸ್ಕರ್‌ ಕೃಷ್ಣರೊಂದಿಗೆ ಹಲವು ವರ್ಷಗಳಿಂದ ಒಡನಾಟದಲ್ಲಿರುವ ಗೌತಮ್‌ ರಾಮಕೃಷ್ಣರವರು ಸಾಫ್ಟ್‌ವೇರ್ ಉದ್ಯೋಗಿ. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಇವರ ಜೊತೆ ಸೇರಿಕೊಂಡು ಬಂಡವಾಳ ಹೂಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಳಿ ಕೈಯಲ್ಲಿ ಸಿಗರೇಟ್ ವಿವಾದ : ಸುಪ್ರೀಂ ಮೊರೆ ಹೋದ ನಿರ್ದೇಶಕಿ ಲೀನಾ

    ಕಾಳಿ ಕೈಯಲ್ಲಿ ಸಿಗರೇಟ್ ವಿವಾದ : ಸುಪ್ರೀಂ ಮೊರೆ ಹೋದ ನಿರ್ದೇಶಕಿ ಲೀನಾ

    ಮ್ಮ ಸಿನಿಮಾದ ಪೋಸ್ಟರ್ ನಲ್ಲಿ ಕಾಳಿ (Kali) ಮಾತೆಯ ಕೈಗೆ ಸಿಗರೇಟು (Cigarette) ಕೊಟ್ಟಿರುವ ವಿಚಾರಕ್ಕಾಗಿ ಭಾರೀ ವಿವಾದ ಎಬ್ಬಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai) ತಮ್ಮ ಮೇಲಿನ ದೂರುಗಳನ್ನು ವಜಾ ಮಾಡಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲು ಏರಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ದಾಖಲಾದ ಎಫ್.ಐ.ಆರ್ ಗಳನ್ನು ರದ್ದು ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

    ತಮ್ಮ ಸಿನಿಮಾದ ಪೋಸ್ಟರ್ ನಲ್ಲಿ ಲೀನಾ ಕಾಳಿ ಮಾತೆಯ ಕೈಗೆ ಸಿಗರೇಟು ಕೊಟ್ಟಿದ್ದಲ್ಲದೇ, ತೃತೀಯ ಲಿಂಗಿಗಳನ್ನು ಸೂಚಿಸುವಂತಹ ಬಾವುಟವನ್ನೂ ಅವರು ಕಾಳಿ ಮಾತೆಯ ಮತ್ತೊಂದು ಕೈಗೆ ಕೊಟ್ಟಿದ್ದರು. ಈ ಪೋಸ್ಟ್ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ನಿರ್ದೇಶಕಿಯನ್ನು ಬಂಧಿಸಿ, ಕ್ರಮ ತಗೆದುಕೊಳ್ಳಬೇಕು ಎಂದು ದೇಶದ ನಾನಾ ರಾಜ್ಯಗಳಲ್ಲಿ ಹಲವರು ದೂರು ದಾಖಲಿಸಿದ್ದರು. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ತಾವು ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಆಗುವಂತೆ ಪೋಸ್ಟರ್ ರಚಿಸಿಲ್ಲ, ಆ ಪೋಸ್ಟರ್ ಯಾರಿಗೂ ನೋವು ತರುವಂತಹ ಉದ್ದೇಶ ಹೊಂದಿರಲಿಲ್ಲ ಎಂದು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನದಟ್ಟು ಮಾಡುತ್ತಿರುವ ಅವರು, ತಮ್ಮ ಕುಟುಂಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆಯೊಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಅವರು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೋಸ್ಟರ್ ಹರಿದು ಬಡಿದಾಡಿಕೊಂಡ ಅಜಿತ್, ವಿಜಯ್ ಫ್ಯಾನ್ಸ್

    ಪೋಸ್ಟರ್ ಹರಿದು ಬಡಿದಾಡಿಕೊಂಡ ಅಜಿತ್, ವಿಜಯ್ ಫ್ಯಾನ್ಸ್

    ಮಿಳು ಸಿನಿಮಾ ರಂಗದ ಇಬ್ಬರು ಸೂಪರ್ ಸ್ಟಾರ್ ಸಿನಿಮಾ ಒಂದೇ ದಿನದಂದು ಬಿಡುಗಡೆ ಆಗಿದೆ. ಅದು ಎಂಟು ವರ್ಷಗಳ ನಂತರ ಈ ಸ್ಟಾರ್ ನಟರ ಚಿತ್ರಗಳು ಮುಖಾಮುಖಿ ಆಗುತ್ತಿವೆ. ಹಾಗಾಗಿ ಸಹಜವಾಗಿಯೇ ಸ್ಟಾರ್ ವಾರ್ ಕ್ರಿಯೇಟ್ ಆಗಿತ್ತು. ಆ ಇಬ್ಬರೂ ಕಲಾವಿದರ ಅಭಿಮಾನಿಗಳು ಕೂಡ ಕಳೆದ ಹದಿನೈದು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮೂಲಕ ಜಗಳಕ್ಕೆ ನಾಂದಿ ಹಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿದ್ದ ಗಲಾಟೆ, ಇದೀಗ ನಿಜ ಸ್ವರೂಪ ಪಡೆದುಕೊಂಡಿದೆ.

    ಹೌದು, ಇವತ್ತು ಅಜಿತ್ ನಟನೆಯ ‘ತುಣಿವು’ ಮತ್ತು ವಿಜಯ್ ನಟನೆಯ ‘ವಾರಿಸು’ ಸಿನಿಮಾ ಏಕಕಾಲಕ್ಕೆ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ರಿಲೀಸ್ ಆದ ಅಷ್ಟೂ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಈ ಗೆಲುವನ್ನು ಸಂಭ್ರಮಿಸಬೇಕಿದ್ದ ಅಭಿಮಾನಿಗಳು, ಒಬ್ಬರಿಗೊಬ್ಬರು ಪೋಸ್ಟರ್ ಹರಿದುಕೊಂಡು ಕಿತ್ತಾಡಿದ್ದಾರೆ. ಅಭಿಮಾನಿಗಳ ಈ ಅತಿರೇಕಕ್ಕೆ ಪೊಲೀಸರು ಲಾಠಿ ರುಚಿ ಕೂಡ ತೋರಿಸಿದ್ದಾರೆ. ಇದನ್ನೂ ಓದಿ:‘ಪಠಾಣ್’ ದೇಶಭಕ್ತಿ ಸಾರುವ ಸಿನಿಮಾ : ನಟ ಶಾರುಖ್ ಖಾನ್

    ಚೆನ್ನೈನ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಮೊದಲು ಅಜಿತ್ ಅಭಿಮಾನಿಗಳು ಪೋಸ್ಟರ್ ಹರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಈ ಸುದ್ದಿ ಹರಡಿ ಅಜಿತ್ ಅಭಿಮಾನಿಗಳು ಕೂಡ ಅದೇ ಕೆಲಸ ಮಾಡಲು ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರ ಮಧ್ಯ ಪ್ರವೇಶವಾಗಿ ಲಾಠಿ ಚಾರ್ಜ್ ಮಾಡುವ ಮೂಲಕ ಮುಂದಾಗಬಹುದಾಗಿದ್ದ ಅನಾಹುತವನ್ನು ತಡೆದಿದ್ದಾರೆ.

    ಮೊದಲಿನಿಂದಲೂ ಅಜಿತ್ ಮತ್ತು ವಿಜಯ್ ಅಭಿಮಾನಿಗಳು ಹೀಗೆ ಬಡಿದಾಡುತ್ತಲೇ ಬಂದಿದ್ದಾರೆ. ಅದರಲ್ಲೂ ಈ ಬಾರಿ ಥಿಯೇಟರ್ ವಿಚಾರವಾಗಿ ತುಣಿವು ಮತ್ತು ವಾರಿಸು ನಿರ್ಮಾಪಕರ ನಡುವೆ ತೀರ್ವ ಸ್ಪರ್ಧಿ ಏರ್ಪಟ್ಟಿತ್ತು. ವಿಜಯ್ ಸಿನಿಮಾಗೆ ಅತೀ ಹೆಚ್ಚು ಚಿತ್ರಮಂದಿರಗಳು ಸಿಕ್ಕಿದ್ದು ಅಜಿಯ್ ಅವರ ಅಭಿಮಾನಿಗಳ ಕೋಪಕ್ಕೂ ಕಾರಣವಾಗಿತ್ತು. ಮೊದಲು ಸೋಷಿಯಲ್ ಮೀಡಿಯಾದಲ್ಲಿ ಹತ್ತಿಕೊಂಡ ದ್ವೇಷದ ಉರಿ, ಇದೀಗ ಚಿತ್ರಮಂದಿರತನಕ ಕಾಲಿಟ್ಟಿದೆ. ಮುಂದೆ ಈ ಗಲಾಟೆ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಪ್ಪಿ ಹುಟ್ಟು ಹಬ್ಬಕ್ಕೆ ‘ಪಠಾಣ್’ ಸಿನಿಮಾದ ವಿಶೇಷ ಪೋಸ್ಟರ್ ರಿಲೀಸ್

    ಡಿಪ್ಪಿ ಹುಟ್ಟು ಹಬ್ಬಕ್ಕೆ ‘ಪಠಾಣ್’ ಸಿನಿಮಾದ ವಿಶೇಷ ಪೋಸ್ಟರ್ ರಿಲೀಸ್

    ಬಾಲಿವುಡ್  ಖ್ಯಾತ ನಟಿ ದೀಪಿಕಾ ಪಡುಕೋಣೆ ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಬರ್ತಡೇಗಾಗಿಯೇ ಪಠಾಣ್ ಸಿನಿಮಾ ಟೀಮ್ ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ದೀಪಿಕಾ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಶಾರುಖ್ ಖಾನ್ ಪೋಸ್ಟರ್ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ರಿಲೀಸ್ ಮಾಡಿ, ಶುಭ ಹಾರೈಸಿದ್ದಾರೆ. ಅವರ ನಟನೆಗೆ ಹಾಡಿ ಹೊಗಳಿದ್ದಾರೆ. ಹುಟ್ಟ ಹಬ್ಬಕ್ಕೆ ಶುಭ ಹಾರೈಸಿದ್ದಾರೆ.

    ನಿನ್ನೆಯಷ್ಟೇ ಪಠಾಣ್ ಸಿನಿಮಾಗೆ ಸೆನ್ಸಾರ್ ಮಂಡಳಿಯು ಕೊನೆಗೂ ಪ್ರಮಾಣ ಪತ್ರವನ್ನು ಕೊಟ್ಟಿದ್ದು, ಕೆಲವು ಚಿತ್ರಿಕೆಗಳಿಗೆ ಕತ್ತರಿ ಪ್ರಯೋಗ ಮಾಡಿದೆ. ದೀಪಿಕಾ ಪಡುಕೋಣೆಯು ಕುಣಿದ ‘ಬೇಷರಂ ರಂಗ್’ ಹಾಡಿನ ಅಶ್ಲೀಲ ಭಂಗಿಗಳನ್ನು ತಗೆದು ಹಾಕುವಂತೆ ಸೂಚಿಸಿದೆ. ಈ ಹಾಡಿನಲ್ಲಿ ಅಶ್ಲೀಲವಾಗಿ, ಒಳ ಉಡುಪುಗಳು ಕಾಣುವಂತೆ ಮತ್ತು ಕೇಸರಿ ಬಣ್ಣಕ್ಕೆ ಅವಮಾನ ಮಾಡುವಂತಹ ಎಲ್ಲ ಸಂಗತಿಗಳನ್ನೂ ಕಟ್ ಮಾಡಿಸಿದೆ. ಇಷ್ಟೆಲ್ಲ ಮುಗಿದ ನಂತರವೇ ಈ ಚಿತ್ರಕ್ಕೆ ಯು/ ಎ ಸರ್ಟಿಫಿಕೇಟ್ ಪ್ರಮಾಣಪತ್ರವನ್ನು ನೀಡಿದೆ.

    ಅಲ್ಲದೇ, ಸಿನಿಮಾದ ಡೈಲಾಗ್ ಮೇಲೂ ಸೆನ್ಸಾರ್ ಮಂಡಳಿಯು ಅಧಿಕಾರ ಚಲಾಯಿಸಿದ್ದು, ಕೆಲವು ಪದಗಳನ್ನು ಮಾರ್ಪಾಡು ಮಾಡುವಂತೆ ಸೂಚಿಸಿದೆ. ಬಾಲಿವುಡ್ ಮಾಧ್ಯಮಗಳು ವರದಿ ಮಾಡಿದಂತೆ. ‘ಲಂಗ್ಡೆ ಲುಲ್ಲೆ’ ಪದದ ಬದಲು ‘ಟೂಟೆ ಪೂಟೆ’ ಎಂದು ಬದಲಾಯಿಸಲು, 13 ಕಡೆ ‘ಪಿಎಂಓ’ ಪದವನ್ನು ತಗೆದು ಹಾಕುವಂತೆ ಸೂಚಿಸಿದೆ. ‘ಮಿಸಸ್ ಭಾರತ್ ಮಾತಾ’ ಎನ್ನುವ ಮಾತಿನ ಬದಲಾಗಿ ‘ಹಮಾರಿ ಭಾರತ್ ಮಾತಾ’ ಎಂದು ಡಬ್ ಮಾಡುವಂತೆ ಸೂಚಿಸಿದೆ. ಹೀಗೆ ಸಾಕಷ್ಟು ಪದಗಳನ್ನು ಬದಲಿಸಿ, ಬೇರೆ ಪದವನ್ನು ಬಳಸುವಂತೆ ಸೆನ್ಸಾರ್ ಮಂಡಳಿಯು ಸೂಚಿಸಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಯಶ್ ಹೊಸ ಸಿನಿಮಾದ ಬಜೆಟ್ ಬರೋಬ್ಬರಿ 400 ಕೋಟಿ: ಜ.8ಕ್ಕೆ ಘೋಷಣೆ

    ಸೆನ್ಸಾರ್ ಮಂಡಳಿಯು ಏನೇ ಸೂಚಿಸಿದ್ದರು, ಚಿತ್ರತಂಡ ಚಿತ್ರಿಕೆಗಳನ್ನು ಕಟ್ ಮಾಡಿದ್ದರೂ, ಪ್ರತಿಭಟನೆ ಮಾತ್ರ ನಿಂತಿಲ್ಲ. ಇವತ್ತು ಗುಜರಾತ್ ನ ಅಹ್ಮದಾಬಾದ್ ನ ಮಾಲ್ ಒಂದರಲ್ಲಿ ಪಠಾಣ್ ಸಿನಿಮಾದ ಪೋಸ್ಟರ್ ಅಂಟಿಸಲಾಗಿತ್ತು. ಈ ಪೋಸ್ಟರ್ ಅನ್ನು ತಗೆದು ಹಾಕುವಂತೆ ಭಜರಂಗ ದಳದ ಕಾರ್ಯಕರ್ತರು ಥಿಯೇಟರ್ ಮಾಲೀಕರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಪುರಸ್ಕರಿಸದೇ ಹೋದಾಗ, ಚಿತ್ರಮಂದಿರದ ಮೇಲೆ ದಾಳಿ ಮಾಡಿದ ಭಜರಂಗ ದಳದ ಕಾರ್ಯಕರ್ತರು ಅದನ್ನು ಹರಿದು ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಘಟನೆಯ ಕುರಿತಾಗಿ ಮಾತನಾಡಿರುವ ಥಿಯೇಟರ್ ಮಾಲೀಕರು, ಕೇವಲ ಪೋಸ್ಟರ್ ಮಾತ್ರ ಹರಿದು ಹಾಕದೇ, ಈ ಸಿನಿಮಾವನ್ನು ಪ್ರದರ್ಶನ ಮಾಡಬಾರದು ಎಂದು ಬೆದರಿಕೆ ಕೂಡ ಹಾಕಿದ್ದಾರೆ ಎಂದಿದ್ದಾರೆ. ಪೋಸ್ಟರ್ ಹರಿದು ಹಾಕಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿರುವ ಭಜರಂಗ ದಳದ ಸದಸ್ಯರು, ಯಾವುದೇ ಸಿನಿಮಾ ಮಂದಿರದಲ್ಲೂ ಈ ಸಿನಿಮಾ ಪ್ರದರ್ಶನ ಮಾಡಬಾರದು, ಮಾಡಿದರೆ ದಾಳಿ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಠಾಣ್’ ಪೋಸ್ಟರ್ ಅಂಟಿಸಿದ್ದ ಚಿತ್ರಮಂದಿರ ಮೇಲೆ ಭಜರಂಗದಳ ದಾಳಿ

    ‘ಪಠಾಣ್’ ಪೋಸ್ಟರ್ ಅಂಟಿಸಿದ್ದ ಚಿತ್ರಮಂದಿರ ಮೇಲೆ ಭಜರಂಗದಳ ದಾಳಿ

    ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ವಿವಾದ ಮತ್ತೊಂದು ರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಸಲಾಗಿತ್ತು. ಕೆಲ ಕಡೆ ಪ್ರತಿಭಟನೆಗಳು ನಡೆದವು. ಸೆನ್ಸಾರ್ ಮಂಡಳಿ ಕೂಡ ಕೆಲ ಭಾಗಗಳನ್ನು ಕತ್ತರಿಸಬೇಕು ಎಂದು ಸಲಹೆ ನೀಡಿತ್ತು. ಈಗ ದಾಳಿಯಂತಹ ಪ್ರಕರಣಗಳು ನಡೆಯುತ್ತಿವೆ.

    ಗುಜರಾತ್ ನ ಅಹ್ಮದಾಬಾದ್ ನ ಮಾಲ್ ಒಂದರಲ್ಲಿ ಪಠಾಣ್ ಸಿನಿಮಾದ ಪೋಸ್ಟರ್ ಅಂಟಿಸಲಾಗಿತ್ತು. ಈ ಪೋಸ್ಟರ್ ಅನ್ನು ತಗೆದು ಹಾಕುವಂತೆ ಭಜರಂಗ ದಳದ ಕಾರ್ಯಕರ್ತರು ಥಿಯೇಟರ್ ಮಾಲೀಕರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಪುರಸ್ಕರಿಸದೇ ಹೋದಾಗ, ಚಿತ್ರಮಂದಿರದ ಮೇಲೆ ದಾಳಿ ಮಾಡಿದ ಭಜರಂಗ ದಳದ ಕಾರ್ಯಕರ್ತರು ಅದನ್ನು ಹರಿದು ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಮಿಲ್ಕಿ ಬ್ಯೂಟಿ ತಮನ್ನಾ – ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?

    ಘಟನೆಯ ಕುರಿತಾಗಿ ಮಾತನಾಡಿರುವ ಥಿಯೇಟರ್ ಮಾಲೀಕರು, ಕೇವಲ ಪೋಸ್ಟರ್ ಮಾತ್ರ ಹರಿದು ಹಾಕದೇ, ಈ ಸಿನಿಮಾವನ್ನು ಪ್ರದರ್ಶನ ಮಾಡಬಾರದು ಎಂದು ಬೆದರಿಕೆ ಕೂಡ ಹಾಕಿದ್ದಾರೆ ಎಂದಿದ್ದಾರೆ. ಪೋಸ್ಟರ್ ಹರಿದು ಹಾಕಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿರುವ ಭಜರಂಗ ದಳದ ಸದಸ್ಯರು, ಯಾವುದೇ ಸಿನಿಮಾ ಮಂದಿರದಲ್ಲೂ ಈ ಸಿನಿಮಾ ಪ್ರದರ್ಶನ ಮಾಡಬಾರದು, ಮಾಡಿದರೆ ದಾಳಿ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

    ಇದೇ ಜನವರಿ 25ರಂದು ವಿಶ್ವದಾದ್ಯಂತ ಪಠಾಣ್ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಜನವರಿ 10ರಂದು ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಆಗುತ್ತಿದ್ದು, ಶಾರುಖ್ ಅಂಡ್ ಟೀಮ್ ಚಿತ್ರದ ಭರ್ಜರಿ ಪ್ರಚಾರ ನಡೆಸಿದೆ. ನಿನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಶಾರುಖ್ ಅಭಿಮಾನಿಗಳ ಜೊತೆ ಸಂವಾದ ಕೂಡ ಮಾಡಿದ್ದಾರೆ. ವಿವಾದಗಳ ಹೊರತಾಗಿಯೂ ಸಿನಿಮಾ ನೋಡುವಂತೆ ಅವರು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಖರ್ಗೆ ಅಭಿನಂದನಾ ಬ್ಯಾನರ್ ಹರಿದ ಕಿಡಿಗೇಡಿಗಳು – ಗ್ರಾಮಸ್ಥರಿಂದ ರಸ್ತೆ ತಡೆ

    ಖರ್ಗೆ ಅಭಿನಂದನಾ ಬ್ಯಾನರ್ ಹರಿದ ಕಿಡಿಗೇಡಿಗಳು – ಗ್ರಾಮಸ್ಥರಿಂದ ರಸ್ತೆ ತಡೆ

    ಕೋಲಾರ: ಜಿಲ್ಲೆಯ ವಕ್ಕಲೇರಿ ಗ್ರಾಮದಲ್ಲಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕಾಂಗ್ರೆಸ್ (Congress) ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಫ್ಲೆಕ್ಸ್ (Flex) ಹರಿದು ಕಿಡಿಗೇಡಿಗಳು ದರ್ಪ ಮೆರೆದಿದ್ದಾರೆ. ಪರಿಣಾಮ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

    ದೇಶ ರಾಜಕಾರಣದಲ್ಲಿ ಸದ್ಯ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಶತಮಾನದ ಪಕ್ಷ ಕಾಂಗ್ರೆಸ್ ಚುಕ್ಕಾಣಿಯನ್ನು ಇದೀಗ ಕನ್ನಡಿಗ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಹಿಸಿಕೊಂಡಿದ್ದಾರೆ. ಇತ್ತೀಚಿಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ (AICC) ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ (Sonia Gandhi)  ಅಧಿಕಾರ ಹಸ್ತಾಂತರಿಸಿದ್ದಾರೆ. ಹಾಗಾಗಿ ಖರ್ಗೆಗೆ ಅಭಿನಂದನೆ ಸಲ್ಲಿಸಿ ಫ್ಲೆಕ್ಸ್ ಅಳವಡಿಸಲಾಗಿತ್ತು. ವಕ್ಕಲೇರಿ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಅಳವಡಿಸಿದ್ದ ಬ್ಯಾನರ್ ಒಂದನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿ ವಿಕೃತಿ ಮೆರೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕೋಲಾರ-ಮಾಲೂರು ಮುಖ್ಯ ರಸ್ತೆಯನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಖರ್ಗೆ ಎಐಸಿಸಿ ಅಧ್ಯಕ್ಷರಾಗುತ್ತಲೇ ಸ್ಟೇರಿಂಗ್ ಸಮಿತಿ ರಚನೆ – ಕರ್ನಾಟಕದ ಮೂವರಿಗೆ ಸ್ಥಾನ

    ಇದೇ ಫ್ಲೆಕ್ಸ್‌ನಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಸದಸ್ಯೆಯಾದ ಅಶ್ವಿನಿಯವರ ಭಾವಚಿತ್ರವನ್ನೂ ಸಹ ಮುದ್ರಿಸಲಾಗಿದ್ದು, ಕಳೆದ ರಾತ್ರಿಯಷ್ಟೇ ಗ್ರಾಮ ಪಂಚಾಯತ್ ಬಳಿ ಹಾಕಲಾಗಿದ್ದ ಫ್ಲೆಕ್ಸ್‌ನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಸಮೀಪದ ಸಿಸಿಟಿವಿಗಳಲ್ಲಿ ಕಿಡಿಗೇಡಿಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದು, ಕಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮೂರೂವರೆ ವರ್ಷಗಳ ಬಳಿಕ ಜೆಡಿಎಸ್ ಕಚೇರಿಗೆ ಬಂದ ಜಿ.ಟಿ ದೇವೇಗೌಡ- ಸಿಹಿ ತಿನ್ನಿಸಿ ಸ್ವಾಗತಿಸಿದ ಹೆಚ್‌ಡಿಕೆ

    Live Tv
    [brid partner=56869869 player=32851 video=960834 autoplay=true]

  • ಮತವನ್ನು ಮಾರಿಕೊಳ್ಳುವವರು ಶವಕ್ಕೆ ಸಮಾನ – ರಾತ್ರೋರಾತ್ರಿ ಗೋಡೆಗಳ ಮೇಲೆ ಪೋಸ್ಟರ್

    ಮತವನ್ನು ಮಾರಿಕೊಳ್ಳುವವರು ಶವಕ್ಕೆ ಸಮಾನ – ರಾತ್ರೋರಾತ್ರಿ ಗೋಡೆಗಳ ಮೇಲೆ ಪೋಸ್ಟರ್

    ಹೈದರಾವಾದ್: ತೆಲಂಗಾಣದ ಮುನುಗೋಡ (Munugode) ಉಪಚುನಾವಣೆ (Bypolls) ಇದೇ ನವೆಂಬರ್ 3 ರಂದು ನಡೆಯಲಿದೆ. ಇದಕ್ಕೂ ಮುನ್ನವೇ ಮತವನ್ನು ಮಾರಾಟ ಮಾಡಿಕೊಳ್ಳುವವರು ಶವಕ್ಕೆ ಸಮಾನ ಎಂಬ ಪೋಸ್ಟರ್‌ಗಳನ್ನು ಆಹೋರಾತ್ರಿ  ಅಂಟಿಸಲಾಗಿದೆ.

    5 ವರ್ಷಕ್ಕೊಮ್ಮೆ ನಡೆಯಲಿರುವ ಈ ಉಪಚುನಾವಣೆಯಲ್ಲಿ ಸಾರ್ವಜನಿಕರು ತಮ್ಮ ಮತವನ್ನು ಕೇವಲ ನೋಟು ( Notes) ಮತ್ತು ಮದ್ಯದ (Liquor) ಬಾಟಲಿಗೆ ಮಾರಿಕೊಳ್ಳುವವನು ಶವಕ್ಕೆ ಸಮಾನ. ಹಾಗಾಗಿ ನಿಮ್ಮ ಅಮೂಲ್ಯವಾದ ಮತವನ್ನು ಮಾರಿಕೊಳ್ಳಬೇಡಿ ಎಂಬ ಪೋಸ್ಟರ್‌ಗಳನ್ನು ಎಲ್ಲೆಡೆ ಹಾಕಲಾಗಿದೆ.

    ಪೋಸ್ಟರ್‌ಗಳಲ್ಲಿ ನಿಮ್ಮ ಮತವನ್ನು ಮಾರಾಟ ಮಾಡಬೇಡಿ. ಸಾಮರಸ್ಯ, ಸಾಮಾಜಿಕ ನ್ಯಾಯ, ಪ್ರಗತಿ, ನೈತಿಕತೆ, ಅರ್ಹತೆ, ಬದ್ಧತೆ ಮತ್ತು ದಕ್ಷತೆಗಾಗಿ ಮತ ಚಲಾಯಿಸಿ, ಮತದಾನ ಮಾಡಿ! ದೇಶವನ್ನು ಬದಲಾಯಿಸಿ ಎಂದು ಬರೆದಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ – ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ

    ಮುನುಗೋಡಿನ ಹಲವೆಡೆ ಮಳೆ ಸುರಿದಿದ್ದು, ಭಿತ್ತಿಪತ್ರಗಳು ಒದ್ದೆಯಾಗಿದೆ. ಈ ನಡುವೆ ಹಿಂದುಳಿದ ವರ್ಗದ ಸಮುದಾಯವನ್ನು ಉದ್ದೇಶಿಸಿ, ಗುಲಾಮರಾಗಬೇಡಿ. ಎದ್ದೇಳಿ, ಜವಾಬ್ದಾರಿಯುತವಾಗಿ ಮತ ಚಲಾಯಿಸಿ. ನಾವು ಹಿಂದುಳಿದ ಸಮುದಾಯದವರು, ಇತರೆ ದುರ್ಬಲ ವರ್ಗಗಳನ್ನು ರಾಜ್ಯದಲ್ಲಿ ಸರಿಪಡಿಸಲು ಬಯಸುತ್ತೇವೆ. ಗುಲಾಮರು ಬೇಡ ಎಂದು ಮತ್ತೊಂದು ಪೋಸ್ಟರ್‌ನಲ್ಲಿ ಲಗತ್ತಿಸಲಾಗಿದೆ.  ಇದನ್ನೂ ಓದಿ: ಅರ್ಕಾವತಿ ನದಿಯಲ್ಲಿ ಅಪರಿಚಿತ ಕಾರ್ ಪತ್ತೆ – ಮಾಲೀಕರಿಗಾಗಿ ತಲಾಶ್

    Live Tv
    [brid partner=56869869 player=32851 video=960834 autoplay=true]

  • ‘ಠಾಣೆ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಧ್ರುವ ಸರ್ಜಾ

    ‘ಠಾಣೆ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ ಧ್ರುವ ಸರ್ಜಾ

    ಗಾಯತ್ರಿ ಎಂ ನಿರ್ಮಿಸಿರುವ “ಠಾಣೆ” (Thane) ಚಿತ್ರದ ಪೋಸ್ಟರ್ ಧ್ರುವ ಸರ್ಜಾ (Dhruva Sarja) ಅವರಿಂದ ಬಿಡುಗಡೆಯಾಗಿದೆ. ಈ ಪೋಸ್ಟರ್ ನೋಡಿದರೆ ಇಡೀ ಚಿತ್ರ ನೋಡಿದ ಹಾಗೆ ಆಗುತ್ತಿದೆ. ಪೋಸ್ಟರ್ (Poster) ತುಂಬಾ ಚೆನ್ನಾಗಿದೆ. ಚಿತ್ರ ಕೂಡ ಅಷ್ಟೇ ಚೆನ್ನಾಗಿರುತ್ತದೆ ಎಂದು ಅನಿಸುತ್ತದೆ. ಚಿತ್ರ ಯಶಸ್ವಿಯಾಗಲಿ ಎಂದು ಧ್ರುವ ಸರ್ಜಾ ಹಾರೈಸಿದರು.

    ಕಳೆದ ಹದಿನೈದು ವರ್ಷಗಳಿಂದ ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡಿರುವ, ಕೌರವ ವೆಂಕಟೇಶ್ ಸೇರಿದಂತೆ ಅನೇಕ ಸಾಹಸ ನಿರ್ದೇಶಕರ ಬಳಿ ಕೆಲಸ ಮಾಡಿರುವ ಪ್ರಕಸಂ ತಂಡದ ಪ್ರವೀಣ್ “ಠಾಣೆ” ಚಿತ್ರದ ನಾಯಕ. ಭರತ ನಾಟ್ಯ ಸೇರಿದಂತೆ ಅನೇಕ ಕಲೆಗಳಲ್ಲಿ ನೈಪುಣ್ಯತೆ ಪಡೆದಿರುವ ಮೈಸೂರಿನ ಹರಿಣಾಕ್ಷಿ ಈ ಚಿತ್ರದ ನಾಯಕಿ. ಪಿ.ಡಿ.ಸತೀಶ್, ರಾಜ್ ಬೆಳವಾಡಿ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಟ, ನಿರ್ದೇಶಕ ಕಾಶಿನಾಥ್, ರಾಮನಾಥ್ ಋಗ್ವೇದಿ, ಗುರುಪ್ರಸಾದ್ ಮುಂತಾದವರ ಬಳಿ ಕಾರ್ಯ ನಿರ್ವಹಿಸಿರುವ ಎಸ್ ಭಗತ್ ರಾಜ್ (Bhagat Raj) ಈ ಚಿತ್ರದ ನಿರ್ದೇಶಕರು. ನಾವು ಧರಿಸುವ ಸೂಟ್ ಮೇಲೆ ಒಂದು ಕಥೆ ರಚಿಸಿ, ನಿರ್ದೇಶಿಸಿರುವ “ದಿ ಸೂಟ್” ಭಗತ್ ರಾಜ್ ನಿರ್ದೇಶನದ ಮೊದಲ ಚಿತ್ರ. “ಠಾಣೆ” ಎರಡನೇ ಚಿತ್ರ. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    “ಠಾಣೆ” 1962 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ನಗರಗಳು ಬೆಳೆದರು, ಸ್ಲಂಗಳು ಬೆಳೆಯುವುದಿಲ್ಲ. ಅದು ಬೆಳೆಯಲು ಕೆಲವರು ಬಿಡುವುದು ಇಲ್ಲ. ಸ್ಲಂ ನಲ್ಲೇ ಹುಟ್ಟಿಬೆಳೆದ ಯುವಕ‌ನೊಬ್ಬ ಅಲ್ಲಿನ ಜನರಿಗೆ ನ್ಯಾಯ ಕೊಡಿಸಲು ಹೋರಾಡುವ ಕಥೆಯಿದು. ಆ ಕಾಲಘಟ್ಟದ ಕಥೆಯಾಗಿರುವುದರಿಂದ ಬೆಂಗಳೂರಿನ ಹಳೆ ಬಡಾವಣೆಗಳಾದ ಶ್ರೀರಾಮಪುರ, ಶಿವಾಜಿ ನಗರ ಮುಂತಾದ ಕಡೆ ಹಳೆಯ ಜಾಗಗಳನ್ನು ಹುಡುಕಿ ಚಿತ್ರೀಕರಣ ಮಾಡಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

    ಎರಡು ಸುಮಧುರ ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ನೀಡಿದ್ದಾರೆ. ಸಾಗರದ ಪ್ರಶಾಂತ್ ಸಾಗರ್ ಛಾಯಾಗ್ರಹಣ, ಹಿರಿಯ ಸಂಕಲನಕಾರ ಸುರೇಶ್ ಅರಸ್ ಸಂಕಲನ, ಪ್ರವೀಣ್ ಜಾನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಕೌರವ ವೆಂಕಟೇಶ್ ಹಾಗೂ ಟೈಗರ್ ಶಿವ ಸಾಹಸ ಸಂಯೋಜನೆಯಲ್ಲಿ ಐದು ಸಾಹಸ ಸನ್ನಿವೇಶಗಳು ಮೂಡಿಬಂದಿದೆ. ನಾಯಕ ಪ್ರವೀಣ್ ಅವರಿಗೂ ಸಾಹಸ ಸಂಯೋಜನೆ ಮಾಡಿ ಅನುಭವವಿರುವುದರಿಂದ ಅವರ ಅಭಿನಯದಲ್ಲಿ ಸಾಹಸ ಸನ್ನಿವೇಶಗಳು ಅದ್ಭುತವಾಗಿ ಮೂಡಿಬಂದಿದೆ. “ಠಾಣೆ” ಚಿತ್ರದಲ್ಲಿ ಪ್ರವೀಣ್, (Praveen) ಕಾಳಿ  ಎಂಬ ಪಾತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. C/O ಶ್ರೀರಾಮಪುರ ಎಂಬ ಅಡಿಬರಹ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ಪರಿಮಳ ಡಿಸೋಜಾ’ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ ಮೂವರು ಮಾಜಿ ಸಿಎಂಗಳು

    ‘ಪರಿಮಳ ಡಿಸೋಜಾ’ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ ಮೂವರು ಮಾಜಿ ಸಿಎಂಗಳು

    ಡಾ. ಗಿರಿಧರ್ ಹೆಚ್ ಟಿ (Giridhar)ನಿರ್ದೇಶನದ ಹಾಗೂ ವಿಲೇಜ್ ರೋಡ್ ಫಿಲಂಸ್ ಸಂಸ್ಥೆಯ ಮೂಲಕ ವಿನೋದ್ ಶೇಷಾದ್ರಿ ಅವರು ನಿರ್ಮಿಸುತ್ತಿರುವ “ಪರಿಮಳ ಡಿಸೋಜಾ” (Parimala D’Souza) ಚಲನಚಿತ್ರದ ಪೋಸ್ಟರ್ (Poster)  ಅನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ (Yeddyurappa), ಹೆಚ್ ಡಿ ಕುಮಾರಸ್ವಾಮಿ (Kumaraswamy) ಹಾಗೂ ಸಿದ್ದರಾಮಯ್ಯ (Siddaramaiah) ಅವರು ಒಮ್ಮತದಿಂದ ಬಿಡುಗಡೆ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಇಡೀ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

    ಬೆಂಗಳೂರು, ಬಿಡದಿ, ನೆಲಮಂಗಲ, ಕನಕಪುರ, ಹಾಸನ, ಚಿಕ್ಕಮಗಳೂರು ಸೇರಿದಂತೆ ಕರ್ನಾಟಕದ ಹಲವಾರು ಸ್ಥಳಗಳಲ್ಲಿ 72 ದಿನಗಳಿಗೂ ಅಧಿಕ ಕಾಲ ಚಿತ್ರೀಕರಣ ಮಾಡಿರುವ ಸಸ್ಪೆನ್ಸ್-ಥ್ರಿಲ್ಲರ್-ಆಕ್ಷನ್ ಜೊತೆಗೆ ಮನರಂಜನಾತ್ಮಕ ಕಥೆಯನ್ನು ಹೊಂದಿರುವ ಈ ಚಲನಚಿತ್ರಕ್ಕೆ ಜೋಗಿ ಪ್ರೇಮ್ ಅವರು ಒಂದು ಅತ್ಯುತ್ತಮ ಹಾಡನ್ನು ಹಾಡುವ ಮೂಲಕ ಶುಭ ಹಾರೈಸಿದ್ದಾರೆ. ಇವರ ಜೊತೆಗೆ ಖ್ಯಾತ ಚಲನಚಿತ್ರ ಸಾಹಿತಿಗಳಾದ ಡಾ. ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಮತ್ತು ಕೆ ಕಲ್ಯಾಣ್ ಅವರು ಸಾಹಿತ್ಯವನ್ನು ರಚಿಸಿದ್ದಾರೆ. ಇವರುಗಳ ಸಾಹಿತ್ಯಕ್ಕೆ ಖ್ಯಾತ ಹಿನ್ನಲೆ ಗಾಯಕರಾದ ರಾಜೇಶ್ ಕೃಷ್ಣನ್, ಶ್ರುತಿ ವಿ ಎಸ್, ಸುಪ್ರಿಯಾ ರಾಮ್, ನಕುಲ್ ಅಭ್ಯಂಕರ್ ಮತ್ತು ಅನುರಾಧ ಭಟ್ ಅವರುಗಳು ಹಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

    ಈ ಚಲನಚಿತ್ರಕ್ಕೆ ಕ್ರಿಸ್ಟೋಫರ್ ಜೇಸನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆ ರಾಮ್ ಅವರು ಛಾಯಾಗ್ರಹಣ, ಚಲನಚಿತ್ರದ ಸಂಕಲನವನ್ನು ಸಂಜೀವ್ ರೆಡ್ಡಿ ಮತ್ತು ಎಸ್.ಎಫ್.ಎಕ್ಸ್ ಹಾಗೂ 5.1 ಮಿಕ್ಸಿಂಗ್ ಅನ್ನು ಶಂಕರ್, ನೃತ್ಯ ನಿರ್ದೇಶನವನ್ನು ವಿಜಯನಗರ ಮಂಜು, ಅತ್ಯುತ್ತಮ ಆಕ್ಷನ್ ಸನ್ನಿವೇಶಗಳಿಗೆ ಬಂಡೆ ಚಂದ್ರು ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವು ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]