ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ (Komal) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೋಮಲ್ ಜನುಮದಿನ ಉಡುಗೊರೆಯಾಗಿ ‘ರೋಲೆಕ್ಸ್’ (Rolex) ಸಿನಿಮಾದ ಸ್ಪೆಷಲ್ ಪೋಸ್ಟರ್ (Poster) ರಿಲೀಸ್ ಮಾಡಲಾಗಿದೆ. ಸೂಟು ಬೂಟೂ ತೊಟ್ಟು ಸ್ಟೈಲೀಶ್ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಕೋಮಲ್.
ಟೈಟಲ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ‘ರೋಲೆಕ್ಸ್’ಗೆ ಶ್ರೀನಿವಾಸ್ ಮಂಡ್ಯ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ‘ಬಿಲ್ ಗೇಟ್ಸ್’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಮಂಡ್ಯ (Srinivas Mandya) ಈ ಬಾರಿ ಇಂಟ್ರಸ್ಟಿಂಗ್ ಕಥೆ ಹೊತ್ತು ಬಂದಿದ್ದಾರೆ. ಕೋಮಲ್ ಗೆ ಜೋಡಿಯಾಗಿ ಪಂಚತಂತ್ರ ಬ್ಯೂಟಿ ಸೋನಲ್ ಮೊಂಟೆರೋ ನಟಿಸುತ್ತಿದ್ದಾರೆ. ಇದನ್ನೂ ಓದಿ:ಶೂಟಿಂಗ್ ವೇಳೆ ಶಾರುಖ್ ಖಾನ್‌ಗೆ ಪೆಟ್ಟು- ಆಸ್ಪತ್ರೆಗೆ ದಾಖಲು
ಉಳಿದಂತೆ ರಂಗಾಯಣ ರಘು, ಶೋಭರಾಜ್, ಅರವಿಂದ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ.
ಈಗಾಗಲೇ ಶೇಕಡಾ 50ರಷ್ಟು ರೋಲೆಕ್ಸ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಉಳಿದ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ ಸೆಪ್ಟಂಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.
ನಟ ಕೋಮಲ್ (Komal) ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬದ (Birthday) ಸಂದರ್ಭದಲ್ಲಿ ‘ಯಲಾ ಕುನ್ನಿ’ ಚಿತ್ರತಂಡವು ಹೊಸದೊಂದು ಪೋಸ್ಟರ್ (Poster) ರಿಲೀಸ್ ಮಾಡಿದೆ. ಥೇಟ್ ವಜ್ರಮುನಿಯಂತೆ ಕಾಣುವ ಈ ಪೋಸ್ಟರ್ ಸದ್ಯ ಕೋಮಲ್ ಅಭಿಮಾನಿಗಳನ್ನು ಖುಷಿ ಪಡಿಸಿದೆ.
ಮೊಟ್ಟಮೊದಲ ಬಾರಿಗೆ ಕೋಮಲ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ‘ಯಲಾ ಕುನ್ನಿ’ (Yalakunni) ಚಿತ್ರದ ಮುಹೂರ್ತ ಸಮಾರಂಭ ಈಗಾಗಲೇ ನಡೆದಿದೆ. ಚಿತ್ರಕ್ಕೆ ಕನ್ನಡ ಚಿತ್ರರಂಗದ ದಂತಕಥೆ ವಜ್ರಮುನಿ ಅವರ ಕುಟುಂಬದ ಎಲ್ಲ ಸದಸ್ಯರು ಆಗಮಿಸಿ ಚಿತ್ರಕ್ಕೆ ಶುಭ ಕೋರಿದ್ದರು. ವಜ್ರಮುನಿಯವರ ಪತ್ನಿ ಲಕ್ಷ್ಮೀ ವಜ್ರಮುನಿ (Lakshmi Vajramuni) ಕ್ಯಾಮೆರಾ ಚಾಲನೆ ಮಾಡಿದರೆ, ಮೊದಲ ಸನ್ನಿವೇಶಕ್ಕೆ ವಜ್ರಮುನಿ ಅವರ ಹಿರಿಯ ಪುತ್ರ ವಿಶ್ವನಾಥ್ ಆರಂಭಫಲಕ ತೋರಿದ್ದರು. ವಜ್ರಮುನಿ ಅವರ ಕಿರಿಯ ಪುತ್ರ ಜಗದೀಶ್ ವಜ್ರಮುನಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
‘ಯಲಾಕುನ್ನಿ’ ಖ್ಯಾತ ನಟ ವಜ್ರಮುನಿ ಅವರ ಚಿತ್ರಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದ ಪದ. ಈಗ ಆ ಪದವೇ ಚಿತ್ರದ ಶೀರ್ಷಿಕೆಯಾಗಿದೆ. ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹ ಕೂಡ ಇದೆ. ಈ ಕುರಿತು ಕೋಮಲ್ ಮಾತನಾಡುತ್ತಾ, ‘ನಾನು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನಿರ್ದೇಶಕ ಪ್ರದೀಪ್ ಬಹಳ ಚೆನ್ನಾಗಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ಮುಕ್ಕಾಲು ಭಾಗ 1981 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶ್ರೀರಂಗಪಟ್ಟಣ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಗಂಜಾಂ ಬಳಿ ಪುರಾತನ ದೇವಾಲಯವಿದ್ದು, ಆ ದೇವಾಲಯದಲ್ಲೇ ಹೆಚ್ಚಿನ ಚಿತ್ರೀಕರಣವಾಗಲಿದೆ. ಚಿತ್ರಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗುವುದು ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ’ ಎಂದಿದ್ದರು. ಇದನ್ನೂ ಓದಿ:ರಣಬೀರ್- ರಶ್ಮಿಕಾ ನಟನೆಯ ‘ಅನಿಮಲ್’ ಸಿನಿಮಾದ ನ್ಯೂ ರಿಲೀಸ್ ಡೇಟ್ ಅನೌನ್ಸ್
‘ನಾನು ಕನ್ನಡದ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿದ್ದೀನಿ . ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಈ ಹಿಂದೆ ಸಡಗರ ಚಿತ್ರ ನಿರ್ಮಿಸಿದ್ದ ಮಹೇಶ್ ಗೌಡ್ರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ವಜ್ರಮುನಿ ಅವರ ಮೊಮ್ಮಗ ಆಕರ್ಷ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹೊಸ ಪ್ರತಿಭೆ ನಿಸರ್ಗ ಈ ಚಿತ್ರದ ನಾಯಕಿ. ಯತಿರಾಜ್ ಜಗ್ಗೇಶ್, ಫ್ರೆಂಚ್ ಬಿರಿಯಾನಿ ಮಹಾಂತೇಶ್, ಜಯಸಿಂಹ ಮುಸುರಿ, ಅರವಿಂದ್ ರಾವ್, ಮಂಜು ಪಾವಗಡ, ರಾಜು ತಾಳಿಕೋಟೆ, ಶಿವರಾಜ್, ಬಿರಾದರ್, ವೆಂಕಟೇಶ್ ಪ್ರಸಾದ್, ಉಮೇಶ್ ಸಕ್ಕರೆನಾಡು, ಅನಿಲ್ ಯಾದವ್ ಇನ್ನು ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನ ಹಾಗೂ ಉದಯ್ ಲೀಲಾ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ , ವಿನೋದ್ ರವರ ಸಾಹಸ ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ವಜ್ರಮುನಿಯಾದರೆ, ಅವರ ಬಲಗೈ ಬಂಟನಾಗಿ ಜಯಸಿಂಹ ಮುಸುರಿ ಕನೆಕ್ಷನ್ ಕಾಳಪ್ಪನಾಗಿ ಕಾಣಿಸಿ ಕೊಳ್ಳಲಿದ್ದಾರೆ. ಚಿತ್ರದ ಹಿನ್ನಲೆ ಗೋವಿನ ಹಾಡಿನಲ್ಲಿ ಬರುವ ವ್ಯಾಘ್ರ ಹುಲಿ ಅರ್ಭುತ ಮತ್ತು ಸತ್ಯವೇ ಭಗವಂತನೆಂದ ಪುಣ್ಯಕೋಟಿಯ ಕಥೆಯಿಂದ ಪ್ರೇರಿತವಾಗಿದೆ. ಏಪ್ರಿಲ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ’ ಎಂದು ನಿರ್ದೇಶಕ ಪ್ರದೀಪ್ ತಿಳಿಸಿದ್ದರು.
ನಾಯಕಿ ನಿಸರ್ಗ ಹಾಗೂ ಚಿತ್ರದಲ್ಲಿ ನಟಿಸುತ್ತಿರುವ ಯತಿರಾಜ್, ಮಾಹಂತೇಶ್, ಆಕರ್ಷ, ಅರವಿಂದ್ ರಾವ್, ಮಂಜು ಪಾವಗಡ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದರು. ‘ನನ್ನ ಮೊಮ್ಮಗ ಆಕರ್ಷ ಈ ಚಿತ್ರದಲ್ಲಿ ಕೋಮಲ್ ಅವರ ಮಗನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾನೆ. ಅವನಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದಿದ್ದರು ಲಕ್ಷ್ಮೀ ವಜ್ರಮುನಿ.
ಸಿದ್ಲಿಂಗು ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಈಗಾಗಲೇ ಒಂದು ತೋತಾಪುರಿಯನ್ನು ಪ್ರೇಕ್ಷಕರಿಗೆ ತಿನ್ನಿಸಿದ್ದಾರೆ. ಮತ್ತೊಂದು ತೋತಾಪುರಿ ತಿನ್ನಿಸಲು ರೆಡಿ ಮಾಡಿಕೊಂಡಿದ್ದಾರೆ. ಜಗ್ಗೇಶ್ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನ ‘ತೋತಾಪುರಿ’ ಸಿನಿಮಾ ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ತೋತಾಪುರಿ ಸಿನಿಮಾವನ್ನು ಜನರು ಮೆಚ್ಚಿಕೊಂಡ ಬೆನ್ನಲ್ಲೇ ತೋತಾಪುರಿ 2 (Totapuri 2) ಸಿನಿಮಾವನ್ನು ರಿಲೀಸ್ ಮಾಡಲು ನಿರ್ಮಾಪಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಮೊದಲ ಪೋಸ್ಟರ್ (Poster) ರಿಲೀಸ್ ಮಾಡಿದ್ದಾರೆ.
ಮೊನ್ನೆಯಷ್ಟೇ ಬಾಲ ಆಂಜನೇಯ, ಬಾಲ ಕೃಷ್ಣ, ಬಾಲ ಗಣಪ ಹೀಗೆ ಜೋಡಿಯ ಪೋಸ್ಟರ್ ಗಳನ್ನು ನಿರ್ಮಾಪಕ ಕೆ.ಎ ಸುರೇಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಜಗ್ಗೇಶ್ ಮತ್ತು ಡಾಲಿ ಧನಂಜಯ್ ಇರುವ ಒಂದು ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ.
ಕೆ.ಎ.ಸುರೇಶ್ (KA Suresh) ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದ್ದು, ನೀರ್ ದೋಸೆ ಚಿತ್ರದ ಯಶಸ್ವೀ ತಂಡ ಮತ್ತೊಮ್ಮೆ `ತೋತಾಪುರಿ’ಯ ಮೂಲಕ ಒಂದಾಗಿರೋದು ವಿಶೇಷ. ನಿರ್ದೇಶಕ ವಿಜಯಪ್ರಸಾದ್ (Vijay Prasad) ಅವರ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ (Jaggesh), ದತ್ತಣ್ಣ, ಸುಮನ್ ರಂಗನಾಥ್ ಮತ್ತೆ ಒಂದಾಗಿದ್ದಾರೆ. ಇದಲ್ಲದೆ ಉದ್ಯಮಿಯ ಪಾತ್ರದಲ್ಲಿ ಡಾಲಿ ಧನಂಜಯ ಮತ್ತು ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ.
ನಿರ್ಮಾಪಕ ಕೆ ಎ ಸುರೇಶ್ ಅವರ ಹಿಂದಿನ ಸಿನಿಮಾಗಳಿಗಿಂತ ಹೆಚ್ಚಿನ ಭರವಸೆ ಈ ಚಿತ್ರ ಮೂಡಿಸಿದೆ. ಮಾರುಕಟ್ಟೆಯಲ್ಲಿ ಈ ತಂಡದ ಬಗ್ಗೆಯೇ ದೊಡ್ಡ ನಿರೀಕ್ಷೆ ಉದ್ಭವವಾಗಿದೆ. ಕನ್ನಡ ಚಿತ್ರ ರಂಗದಲ್ಲಿ ಯಶಸ್ಸನ್ನು ಬೆನ್ನಿಗೆ ಕಟ್ಟಿಕೊಂಡಿರುವ ನಿರ್ಮಾಪಕ ಕೆ ಎ ಸುರೇಶ್ `ತೋತಾಪುರಿ’. ಚಿತ್ರದಲ್ಲಿ ಮೊದಲ ಬಾರಿಗೆ ಡಾಲಿ ಧನಂಜಯ್ (Dhananjay), ಜಗ್ಗೇಶ್ ಜೊತೆಯಾಗಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಮುಸ್ಲಿಂ ಹುಡುಗಿ, ಸುಮನ್ ರಂಗನಾಥ್ ಕ್ರಿಶ್ಚಿಯನ್ ಹೆಣ್ಣುಮಗಳಾಗಿ ಅಭಿನಯಿಸಿದ್ದಾರೆ. ಇದನ್ನೂ ಓದಿ:18 ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ರವೀನಾ ಟಂಡನ್ ಪುತ್ರಿ
ನವರಸ ನಾಯಕ ಜಗ್ಗೇಶ್ ಅವರ ಚಿತ್ರಜೀವನದಲ್ಲಿ ಇದೇ ಮೊದಲ ಬಾರಿಗೆ 100ಕ್ಕೂ ಹೆಚ್ಚು ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ನಿರ್ಮಾಪಕ ಕೆ ಎ ಸುರೇಶ್ `ರಾಜು ಕನ್ನಡ ಮೀಡಿಯಂ’ ಚಿತ್ರದ ಯಶಸ್ಸಿನ ನಂತರ ಒಂದು ಭರವಸೆ ಮೂಡಿಸುವ ತಂಡದ ಜೊತೆ ಹಣ ಹೂಡಿದ್ದಾರೆ. ವಿಜಯಪ್ರಸಾದ್ `ಸಿದ್ಲಿಂಗು’ ಸಿನಿಮಾದಲ್ಲಿ ಟೀಚರ್ ಆಗಿದ್ದ ಸುಮನ್ ರಂಗನಾಥ್ ಈ ಚಿತ್ರದಲ್ಲೂ ಪ್ರಮುಖ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಅನೂಪ್ ಸೀಳಿನ್ ಸಂಗೀತ, ನಂಜೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಕೊಡಗಿನಲ್ಲಿ ಚಿತ್ರೀಕರಣ ಮಾಡಲಾಗಿದೆ.
`ಎರಡನೇ ಮದುವೆ’, `ಗೋವಿಂದಾಯ ನಮಃ’, ಶ್ರಾವಣಿ ಸುಬ್ರಮಣಿ, ಆರ್ ಎಕ್ಸ್ ಸೂರಿ, ಶಿವಲಿಂಗ ಮತ್ತು ರಾಜು ಕನ್ನಡ ಮೀಡಿಯಂ ನಂತರ `ತೋತಾಪುರಿ’, ‘ತೋತಾಪುರಿ 2’ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ಸುರೇಶ್ ಈ ಸಿನಿಮಾವನ್ನು ಯಾವಾಗ ರಿಲೀಸ್ ಮಾಡುತ್ತಾರೋ ಕಾದು ನೋಡಬೇಕಿದೆ.
ಸಿನಿಮಾ ರಂಗದ ಮೇಲೆ ಅಸಹ್ಯ ಹುಟ್ಟಿಸುವಂತಹ ಅನೇಕ ಸಂಗತಿಗಳು ಜರುಗುತ್ತಿವೆ. ಈ ಕಾರಣದಿಂದಾಗಿಯೇ ಸಿನಿಮಾ ರಂಗದ ಮೇಲೆ ಅನೇಕರು ನೇರವಾಗಿ ಸಿಡಿದೆದ್ದಿದ್ದಾರೆ. ಪ್ರತಿಭಟನೆ ಒಂದು ಕಡೆಯಾದರೆ, ಕಾನೂನು ಮೂಲಕ ಉತ್ತರ ಕೊಡುವ ಪ್ರಯತ್ನವನ್ನೂ ಹಲವರು ಮಾಡುತ್ತಿದ್ದಾರೆ. ಈ ನಡುವೆ ತೆಲುಗು ಚಿತ್ರೋದ್ಯಮದಲ್ಲಿ ಮತ್ತೊಂದು ಅಸಹ್ಯದ ಸಂಗತಿಯೊಂದು ನಡೆದು ಬಿಟ್ಟಿದೆ.
ವಿಜಯ್ ದೇವರಕೊಂಡ ನಟನೆಯ ಮೊದಲ ಸಿನಿಮಾ ಅರ್ಜುನ್ ರೆಡ್ಡಿಯಲ್ಲಿ ಸೆಕ್ಸ್ ಅನ್ನು ವೈಭವೀಕರಿಸುವ ಕೆಲಸವನ್ನು ನಿರ್ದೇಶಕರು ಮಾಡಿದ್ದರು. ನಾಯಕ ವಿಜಯ್, ತನ್ನ ಸಹಪಾಠಿ ಜೊತೆ ಸೆಕ್ಸ್ (Sex) ಮಾಡುವಂತಹ ಸನ್ನಿವೇಶವನ್ನೂ ಸಿನಿಮಾದಲ್ಲಿ ತೋರಿಸುವ ಮೂಲಕ ಈ ಸಿನಿಮಾ ಬೋಲ್ಡ್ ಎಂದು ತೋರಿಸುವ ಪ್ರಯತ್ನಕ್ಕೆ ನಿರ್ದೇಶಕರು ಕೈ ಹಾಕಿದ್ದರು. ಈ ಸನ್ನಿವೇಶ ಕೂಡ ಕೆಲವರ ಕಂಗಣ್ಣಿಗೆ ಗುರಿಯಾಗಿತ್ತು. ಇದೀಗ ವಿಜಯ್ ಸಹೋದರ ಆನಂದ್ ದೇವರಕೊಂಡ (Anand Devarakonda) ಸಿನಿಮಾದ ಪೋಸ್ಟರ್ (Poster) ಕೂಡ ವಿವಾದಕ್ಕೆ (Controversy) ಕಾರಣವಾಗಿದೆ. ಇದನ್ನೂ ಓದಿ:‘ಎಮರ್ಜೆನ್ಸಿ’ ನಂತರದ ಸಿನಿಮಾ ಸುಳಿವು ಕೊಟ್ಟ ಕಂಗನಾ ರಣಾವತ್
ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ‘ಬೇಬಿ’ (Baby) ಸಿನಿಮಾದ ಪೋಸ್ಟರ್‌ವೊಂದು ರಿಲೀಸ್ ಆಗಿದ್ದು, ಈ ಪೋಸ್ಟರ್‌ನಲ್ಲಿ ನಾಯಕನ ನಡು ಬೆರಳ ಮೇಲೆ ನಾಯಕಿಯನ್ನು ನಿಲ್ಲಿಸಲಾಗಿದೆ. ಈ ಪೋಸ್ಟರ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಸಿನಿಮಾ ಟೀಮ್ ಈ ಪೋಸ್ಟರ್ ಮೂಲಕ ಏನನ್ನೋ ಹೇಳಲು ಹೊರಟಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಸಾಮಾನ್ಯವಾಗಿ ಮಧ್ಯದ ಬೆರಳನ್ನು ತೋರಿಸುವುದು ಕೆಟ್ಟ ಸೂಚನೆಯನ್ನು ತೋರಿಸುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾನೂನಿನಲ್ಲಿ ಇದಕ್ಕೂ ಶಿಕ್ಷೆಯಿದೆ. ಇಷ್ಟೆಲ್ಲ ಗೊತ್ತಿದ್ದರೂ, ನಾಯಕಿಯ ಫೋಟೋವನ್ನು ಎಡಿಟ್ ಮಾಡಿ, ಮಧ್ಯದ ಬೆರಳ ಮೇಲೆ ನಿಲ್ಲಿಸಲಾಗಿದೆ. ಈ ಕುರಿತು ನಾಯಕಿ ವೈಷ್ಣವಿ ಚೈತನ್ಯ (Vaishnavi Chaitanya) ಯಾವುದೇ ಮಾತುಗಳನ್ನು ಆಡದೇ ಇರುವುದು ಅಚ್ಚರಿ ಕೂಡ ತಂದಿದೆ.
ಲಕ್ನೋ: ಪತ್ನಿಯೊಂದಿಗೆ (Wife) ಜಗಳವಾಡಿ ಕೋಪಗೊಂಡಿದ್ದ ವ್ಯಕ್ತಿ (Man) ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಅಶ್ಲೀಲ ಫೋಟೋದೊಂದಿಗೆ (Obscene Phot0) ಆಕೆಯ ನಂಬರ್ ಅನ್ನು ಬರೆದು ಬೀದಿಗಳಲ್ಲಿ ಪೋಸ್ಟರ್ (Poster) ಹಚ್ಚಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಉತ್ತರ ಪ್ರದೇಶದ ಆಗ್ರಾದ (Agra) ವ್ಯಕ್ತಿ ತನ್ನದೇ ಪತ್ನಿಯ ಅಶ್ಲೀಲ ಫೋಟೋ ಇರುವ ಪೋಸ್ಟರ್‌ಗಳನ್ನು ಬೀದಿಗಳಲ್ಲಿ ಹಚ್ಚಿರುವ ವೀಡಿಯೋ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಕಳೆದ 6 ವರ್ಷಗಳಿಂದ ಪತಿ ಹಾಗೂ ಪತ್ನಿ ಜಗಳವಾಡುತ್ತಿದ್ದು, ವ್ಯಕ್ತಿ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಇಂತಹ ಕೃತ್ಯ ಮಾಡಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರೂಮಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಪರಾರಿ!
ಘಟನೆ ಬಗ್ಗೆ ಮಹಿಳೆ ತನ್ನ ಪತಿಯ ವಿರುದ್ಧ ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಾತ್ರವಲ್ಲದೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನು ಹಾಕಿದ್ದಾಳೆ. ಇದನ್ನೂ ಓದಿ: ಯುವತಿಯನ್ನು ಕೊಲೆಗೈದು ಮ್ಯಾನ್‍ಹೋಲ್‍ಗೆ ಬಿಸಾಕಿದ ಅರ್ಚಕ!
ಕೆಂಡಸಂಪಿಗೆ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ವಿಕ್ಕಿ ವರುಣ್ (Vicky Varun), ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹುಟ್ಟು ಹಬ್ಬಕ್ಕಾಗಿ (Birthday,) ಅವರ ನಟನೆಯ ‘ಕಾಲಪತ್ಥರ್ ‘ ಸಿನಿಮಾದ ಪೋಸ್ಟರ್ (Poster) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅವರು ವಿಭಿನ್ನ ರೀತಿಯ ಪಾತ್ರ ನಿರ್ವಹಿಸುತ್ತಿದ್ದು, ಆ ಪಾತ್ರದ ಪೋಸ್ಟರ್ ಅನ್ನು ವಿಕ್ಕಿ ಹುಟ್ಟು ಹಬ್ಬಕ್ಕೆ ರಿಲೀಸ್ ಮಾಡಿದೆ ಚಿತ್ರತಂಡ.
ನಿರ್ದೇಶಕ ಸುಕ್ಕಾ ಸೂರಿ ಗರಡಿಯಲ್ಲಿ ಪಳಗಿದ್ದ ವಿಕ್ಕಿ, ಕೆಂಡಸಂಪಿಗೆ ಚಿತ್ರದಲ್ಲಿನ ಇವರ ಮುಗ್ಧ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಮೊದಲ ಚಿತ್ರದ ಗೆಲುವಿನ ನಂತರ ಕಾಲೇಜ್ ಕುಮಾರನಾಗಿ ತೆರೆ ಮೇಲೆ ಎಂಟ್ರಿ ಕೊಟ್ಟ ಇವರು ಎರಡನೇ ಸಿನಿಮಾದಲ್ಲೂ ಸಕ್ಸಸ್ ಕಾಣುವ ಮೂಲಕ ಖ್ಯಾತಿ ಗಳಿಸಿದ್ರು. ಸಿನಿಮಾ ಆಯ್ಕೆ ವಿಚಾರದಲ್ಲಿ ಸಖತ್ ಚ್ಯೂಸಿಯಾಗಿರುವ ವಿಕ್ಕಿ ವರುಣ್ ಬಹಳ ದಿನಗಳ ನಂತರ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಎಲ್ಲೆಡೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ಪಿಎಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್
ಕೆಂಡ ಸಂಪಿಗೆ, ಕಾಲೇಜ್ ಕುಮಾರ ಚಿತ್ರಗಳ ಬ್ಯಾಕ್ ಟು ಬ್ಯಾಕ್ ಸಕ್ಸಸ್ ನಂತರ ವಿಕ್ಕಿ ವರುಣ್ ಒಪ್ಪಿಕೊಂಡಿರುವ ನೂತನ ಚಿತ್ರವೇ ಈ ‘ಕಾಲಾ ಪತ್ಥರ್’ ((Kalapathar)). ಈಗಾಗಲೇ ನಟಿಸಿದ ಎರಡೂ ಸಿನಿಮಾಗಳು ಹಿಟ್ ಆಗಿರೋದ್ರಿಂದ ಸಾಕಷ್ಟು ಎಚ್ಚರಿಕೆ ವಹಿಸಿ ಮೂರನೇ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ ವಿಕ್ಕಿ ವರುಣ್. ‘ಕಾಲಾ ಪತ್ಥರ್’ ಸಿನಿಮಾ ಭಿನ್ನವಾಗಿದ್ದು ಖಂಡಿತಾ ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗುತ್ತೆ ಎನ್ನುತ್ತಾರೆ ನಟ ವಿಕ್ಕಿ ವರುಣ್.
‘ಕಾಲಾಪತ್ಥರ್’ ಚಿತ್ರಕ್ಕೆ ವಿಕ್ಕಿ ವರುಣ್ ಇವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ (Satya Prakash) ‘ಕಾಲಾ ಪತ್ಥರ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸುರೇಶ್ ಮತ್ತು ನಾಗರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ರವಿಚಂದ್ರನ್ ಹುಟ್ಟು ಹಬ್ಬಕ್ಕೆ (Birthday) ಬೆಳಗ್ಗೆಯಷ್ಟೇ ‘ಕೆಡಿ’ ಚಿತ್ರತಂಡ ಪೋಸ್ಟರ್ (Poster) ಬಿಡುಗಡೆ ಮಾಡಿತ್ತು. ಅದರ ಬೆನ್ನಲ್ಲೇ ದಿ ಜಡ್ಜ್ ಮೆಂಟ್ ಟೀಮ್ ಕೂಡ ತಮ್ಮ ಸಿನಿಮಾದ ನಾಯಕ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಫಸ್ಟ್ ಲುಕ್ ಪೋಸ್ಟರ್ ಮತ್ತು ವಿಡಿಯೋ ಬಿಡುಗಡೆ ಮಾಡಿದೆ. ಬೆಂಗಳೂರಿನ ಸುತ್ತಮುತ್ತ ರಭಸದಿಂದ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಈ ಮೂಕ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ‘ದ ಜಡ್ಜ್ ಮೆಂಟ್’ (The Judgment) ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. G9 communication media & Entertainment ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಗುರುರಾಜ ಬಿ ಕುಲಕರ್ಣಿ(ನಾಡಗೌಡ) (Gururaja Kulkarni) ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಆಕ್ಸಿಡೆಂಟ್, ಲಾಸ್ಟ್ ಬಸ್, ಅಮೃತ ಅಪಾರ್ಟ್‌ಮೆಂಟ್ಸ್ ಚಿತ್ರಗಳನ್ನು ಈ ಸಂಸ್ಥೆ ಮೂಲಕ ನಿರ್ಮಿಸಲಾಗಿತ್ತು ಹಾಗೂ ಈ ಚಿತ್ರಗಳನ್ನು ಗುರುರಾಜ್ ಬಿ ಕುಲಕರ್ಣಿ ಅವರೆ ನಿರ್ದೇಶಿಸಿದ್ದರು. ಸಂಸ್ಥೆಯ ನಾಲ್ಕನೇ ಚಿತ್ರವಾಗಿ ದ ಜಡ್ಜ್ ಮೆಂಟ್ ಚಿತ್ರ ನಿರ್ಮಾಣವಾಗುತ್ತಿದೆ.
ಇದೊಂದು ಲಿಗಲ್ ಸಿಸ್ಟಮ್ ಕುರಿತಾದ ಚಿತ್ರ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್, ಧನ್ಯ ರಾಮಕುಮಾರ್, ಲಕ್ಷ್ಮೀಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಹೀಗೆ ಬಹುದೊಡ್ಡ ತಾರಾಬಳಗವಿದೆ. ಇದನ್ನೂ ಓದಿ:ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ
ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಶಿವು ಬಿ.ಕೆ.ಕುಮಾರ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ ಹಾಗೂ ಎಂ.ಎಸ್ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ಗುರುರಾಜ ಬಿ ಕುಲಕರ್ಣಿ (ನಾಡಗೌಡ) ಮಾಹಿತಿ ನೀಡಿದರು.
ಕರುನಾಡ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟು ಹಬ್ಬದ (Birthday) ಸಂದರ್ಭದಲ್ಲಿ ಎರಡು ಸಿನಿಮಾಗಳ ಪೋಸ್ಟರ್ ರಿಲೀಸ್ ಆಗಿವೆ. ಜೋಗಿ ಪ್ರೇಮ್ ನಿರ್ದೇಶನದ ಕೆಡಿ (KD) ಚಿತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದು, ಆ ಸಿನಿಮಾದ ಪೋಸ್ಟರ್ (Poster) ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಜೊತೆಗೆ ದ ಜಡ್ಜ್ ಮೆಂಟ್ ಸಿನಿಮಾದಲ್ಲಿ ರವಿಚಂದ್ರನ್ ನಟಿಸಿದ್ದು ಆ ಸಿನಿಮಾ ಟೀಮ್ ಕೂಡ ಪೋಸ್ಟರ್ ರಿಲೀಸ್ ಮಾಡಿದೆ.
ಕೆಲ ತಿಂಗಳ ಹಿಂದೆಯಷ್ಟೇ ರವಿಚಂದ್ರನ್ ಅವರ ಫಸ್ಟ್ ಲುಕ್ ಅನ್ನು ಕೆಡಿ ಟೀಮ್ ರಿಲೀಸ್ ಮಾಡಿತ್ತು. ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್ ರವಿಚಂದ್ರನ್ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕಮಲಿ’ ನಟಿ ಯಶಸ್ವಿನಿ
ಕೆವಿಎನ್ ನಿರ್ಮಾಣದ ಧ್ರುವ ಸರ್ಜಾ (Dhruva Sarja) ಮತ್ತು ನಿರ್ದೇಶಕ ಪ್ರೇಮ್ (Director Prem) ಕಾಂಬಿನೇಷನ್ ಸಿನಿಮಾ `ಕೆಡಿ’ ಸಖತ್ ಸದ್ದು ಮಾಡ್ತಿದೆ. ಚಿತ್ರದ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿರುವ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾ ಮೂಲಕ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಈಗಾಗಲೇ ಕೆಡಿ ಸಿನಿಮಾದ ಬಹುತೇಕ ಚಿತ್ರೀಕರಣ ಕೂಡ ಮುಗಿದಿದೆ ಎಂದು ಹೇಳಲಾಗುತ್ತಿದೆ. ಸಂಜಯ್ ದತ್ ಅವರ ಶೂಟಿಂಗ್ ವೇಳೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಆ ನಂತರ ಚಿತ್ರೀಕರಣ ಸ್ವಲ್ಪ ದಿನದ ಮಟ್ಟಿಗೆ ನಿಲ್ಲಿಸಲಾಗಿತ್ತು. ಪ್ರೇಮ್ ಮತ್ತೆ ಈ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ತುಪ್ಪದ ಹುಡುಗಿ ಎಂದೇ ಖ್ಯಾತರಾಗಿರುವ ರಾಗಿಣಿ ದ್ವಿವೇದಿ ಇಂದು ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಜೈಲಿನಿಂದ ವಾಪಸ್ಸಾದ ನಂತರ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಆ ಚಿತ್ರಗಳಲ್ಲಿ ಬಿಂಗೋ ಕೂಡ ಒಂದು. ಬಿಂಗೋ ಚಿತ್ರತಂಡ ರಾಗಿಣಿ ಹುಟ್ಟು ಹಬ್ಬಕ್ಕೆ ಪೋಸ್ಟರ್ ( Poster) ರಿಲೀಸ್ ಮಾಡಿದೆ. ಖಡಕ್ ಲುಕ್ ನಲ್ಲಿ ತಯಾರಾದ ಪೋಸ್ಟರ್ ಅದಾಗಿದೆ.
ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ (Shankar Konamanahalli) ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಅಭಿನಯಿಸುತ್ತಿದ್ದಾರೆ. ನಾಯಕನಾಗಿ ಆರ್ ಕೆ ಚಂದನ್ (R.K.Chandan) ನಟಿಸುತ್ತಿದ್ದಾರೆ. ಇದನ್ನೂ ಓದಿ:‘ರಾನಿ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕರ ಹುಟ್ಟುಹಬ್ಬ
ಈಗಾಗಲೇ ಹಲವು ಹಂತಗಳ ಚಿತ್ರೀಕರಣ ಮುಗಿಸಿರುವ ಬಿಂಗೋ ತಂಡ ಬೆಂಗಳೂರು, ನಗರದ ಹೊರವಲಯದಲ್ಲಿರುವ ದೇವರಾಜ್ ಎಸ್ಟೇಟ್ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಾಡಿದೆ. ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಾಗಿಣಿ ದ್ವಿವೇದಿ, ಆರ್ ಕೆ ಚಂದನ್ (ನಾಯಕ) , ರಕ್ಷಾ ನಿಂಬರ್ಗಿ (ನಾಯಕಿ), ರಾಜೇಶ್ ನಟರಂಗ, ಪವನ್(ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡು ಶೇಡ್ ಗಳಲ್ಲಿ ಅವರ ಪಾತ್ರವಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಹಿತನ್ ಹಾಸನ್ ಸಂಗೀತ ನಿರ್ದೇಶನವಿರುವ “ಬಿಂಗೋ” ಚಿತ್ರಕ್ಕೆ ನಟರಾಜ್ ಮುದ್ದಾಲ್ ಅವರ ಛಾಯಾಗ್ರಹಣವಿದೆ.
ಮದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದ ನಟಿ ಮೇಘನಾ ರಾಜ್ (Meghana Raj) ‘ತತ್ಸಮ ತದ್ಬವ’ (Tatsama Tadbhava) ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದರು. ಮೊನ್ನೆಯಷ್ಟೇ ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಕೂಡ ಮುಗಿಸಿದ್ದರು. ಇಂದು ಮೇಘನಾ ರಾಜ್ ಹುಟ್ಟುಹಬ್ಬ (Birthday). ಹಾಗಾಗಿ ತತ್ಸಮ ತದ್ಭವ ಚಿತ್ರತಂಡ ಹುಟ್ಟುಹಬ್ಬಕ್ಕಾಗಿ ಅವರ ಪೋಸ್ಟರ್ (Poster)ರಿಲೀಸ್ ಮಾಡಿದೆ.
‘ನಿಜವಾದ ಸ್ನೇಹಿತರು ಯಾವಾಗಲೂ ಜೊತೆಗಿರುತ್ತಾರೆ. ಅಂತಹ ಸ್ನೇಹಿತರು ನನಗಿದ್ದಾರೆ. ನನಗಾಗಿ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರು ಪ್ರವೇಶ ಮಾಡಿದ್ದೇನೆ. ಪನ್ನಗ ಭರಣ ಹಾಗೂ ಸ್ಪೂರ್ತಿ ಅನಿಲ್ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಆತ್ರೇಯ ಒಳ್ಳೆಯ ಕಥೆ ಮಾಡಿಕೊಂಡು ನಿರ್ದೇಶನ ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈವರೆಗೂ ನಾನು ಇಂತಹ ಪಾತ್ರ ಮಾಡಿಲ್ಲ. ಮುಂದೆ ಮಾಡುತ್ತೀನೊ, ಇಲ್ಲವೊ? ಗೊತ್ತಿಲ್ಲ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು ಮೇಘನಾ ರಾಜ್.
ನನಗೆ ನಿರ್ದೇಶಕರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಕಥೆಯಲ್ಲಿ ಒಂದು ಮುಖ್ಯಪಾತ್ರ ಬರುತ್ತದೆ. ಈ ಪಾತ್ರ ಯಾರು ಮಾಡುತ್ತಿದ್ದಾರೆ ಎಂದು ಕೇಳಿದೆ. ಅವರು ನೀವೇ ಮಾಡುತ್ತಿದ್ದೀರ ಎಂದರು. ಸ್ನೇಹಿತರ ಸಿನಿಮಾದಲ್ಲಿ ಅಭಿನಯಿಸಿದ ಖುಷಿಯಿದೆ ಎಂದು ಪ್ರಜ್ವಲ್ ದೇವರಾಜ್ (Prajwal Devaraj) ಮಾತನಾಡಿ ಮೇಘನಾ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?
ಇದೊಂದು ಇನ್ವೆಸ್ಟಿಕೇಶನ್ ಕ್ರೈಮ್ ಥ್ರಿಲ್ಲರ್. ಕನ್ನಡದಲ್ಲಿ ಇಂತಹ ಕಥೆ ಬಂದಿರುವುದು ಅಪರೂಪ. ನೋಡುಗರಿಗೂ ಇಷ್ಟವಾಗಬಹುದೆಂಬ ನಂಬಿಕೆಯಿದೆ ಎಂದಿರುವ ನಿರ್ದೇಶಕ ವಿಶಾಲ್ ಆತ್ರೇಯ, ಸಂಪೂರ್ಣ ಚಿತ್ರೀಕರಣ ಮುಗಿಸಿ, ರೀರೆಕಾರ್ಡಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚುನಾವಣೆ ಮುಗಿದ ನಂತರ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಪನ್ನಗ ಭರಣ (Pannagabharana)ತಿಳಿಸಿದ್ದಾರೆ.
ನಟಿ ಶ್ರುತಿ ಕೂಡ ಈ ಸಿನಿಮಾದಲ್ಲಿ ಮಹತ್ವದ ಪಾತ್ರ ಮಾಡಿದ್ದು, ‘ಸಮಾಜದಲ್ಲಿ ಯಾವುದೇ ಹೆಣ್ಣಿಗಾದರೂ ಅನುಕಂಪಕ್ಕಿಂತ, ಅವಕಾಶ ಕೊಡುವುದು ಮುಖ್ಯ. ಮೇಘನಾ ರಾಜ್ ವಿಷಯದಲ್ಲಿ, ಅವರ ಸ್ನೇಹಿತರೆಲ್ಲರೂ ಸೇರಿ ಅವರ ರೀ ಎಂಟ್ರಿಗೆ ಒಳ್ಳೆಯ ಅವಕಾಶ ಕಲ್ಪಿಸಿದ್ದಾರೆ. ನಾನು ಈ ಚಿತ್ರದಲ್ಲಿ ಮನಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದೇನೆ’ ಎಂದಿದ್ದಾರೆ.