ಬಾಲಿವುಡ್ ಕಿಂಗ್ ಖಾನ್ ನಟನೆಯ ಡಂಕಿ (Dunki) ಸಿನಿಮಾದ ಟೀಸರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಶಾರುಖ್ ಖಾನ್ (Shahrukh Khan) ಜನ್ಮದಿನಕ್ಕೆ ಡಂಕಿ ಡ್ರಾಪ್ 1 ಎಂಬ ಟೈಟಲ್ ನಡಿ ಬಂದ ಝಲಕ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ದೀಪಾವಳಿ ಹಬ್ಬದ ಸ್ಪೆಷಲ್ ಡಂಕಿ ಸಿನಿಮಾದ ಎರಡು ಹೊಸ ಪೋಸ್ಟರ್ (Poster) ರಿಲೀಸ್ ಮಾಡಲಾಗಿದೆ.
ಪ್ರೀತಿ, ನಗು ಹಾಗೂ ಸ್ನೇಹ ತುಂಬಿರುವ ಎರಡು ಹೊಸ ಪೋಸ್ಟರ್ ನಲ್ಲಿ ಶಾರುಖ್ ಸ್ನೇಹ ಬಳಗವನ್ನು ಪರಿಚಯ ಮಾಡಿಕೊಡಲಾಗಿದೆ. ಕಿಂಗ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಹಾಗೂ ಅನಿಲ್ ಗ್ರೋವರ್ ಒಟ್ಟಿಗೆ ನಿಂತು ನಗು ಬೀರಿದ್ದಾರೆ. ಎರಡು ಪೋಸ್ಟರ್ಸ್ ಆಕರ್ಷಕವಾಗಿವೆ.
ರಾಜ್ ಕುಮಾರ್ ಹಿರಾನಿ, ಅಭಿಜತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದಾರೆ.
ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ (Rajkumar Hirani) ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಈ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ
ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ.
ಸುದೀಪ್ (Sudeep) ಅವರ ಮುಂದಿನ ಸಿನಿಮಾದ್ದು ಎನ್ನಲಾದ ಪೋಸ್ಟರ್ (Poster) ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಿಚ್ಚ 47 ಹೆಸರಿನಲ್ಲಿ ಕಿಚ್ಚನ ಅಭಿಮಾನಿಗಳು ಅದನ್ನು ಶೇರ್ ಮಾಡುತ್ತಿದ್ದಾರೆ. ಅತೀ ಶೀಘ್ರದಲ್ಲೇ ಈ ಹೊಸ ಸಿನಿಮಾದ ಅಪ್ ಡೇಟ್ ಸಿಗಲಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ಈ ಹೊಸ ಸಿನಿಮಾ ಯಾವುದು? ಏನ್ ಸಮಾಚಾರ ಎನ್ನುದು ಇನ್ನಷ್ಟೇ ತಿಳಿಯಬೇಕಿದೆ.
ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ. ಬಿಗ್ ಬಾಸ್ ನಡುವೆಯೂ ತಪ್ಪದೇ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಹೊತ್ತಿಗೆ ಮ್ಯಾಕ್ಸ್ (Max) ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯಲಿದೆ. ಹಾಗಾಗಿ ಫೆಬ್ರವರಿಯಲ್ಲಿ (February) ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿನಿಮಾ ತಂಡವು ಅಧಿಕೃತವಾಗಿ ಮಾಹಿತಿ ನೀಡದೇ ಇದ್ದರೂ, ಚಿತ್ರೋದ್ಯಮದಲ್ಲಿ ಕೇಳಿ ಬರುತ್ತಿರುವ ಮಾತಿನಂತೆ ಫೆಬ್ರವರಿಗೆ ಮ್ಯಾಕ್ಸ್ ತೆರೆ ಕಾಣಲಿದೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಸುದೀಪ್ ಒಪ್ಪಿಕೊಂಡಿದ್ದರಿಂದ ಮತ್ತು ಅವರೇ ಚಿತ್ರವೊಂದನ್ನು ನಿರ್ದೇಶನ ಮಾಡಬೇಕಾಗಿರುವುದರಿಂದ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಸಿನಿಮಾದ ಶೂಟಿಂಗ್ ಮುಗಿಸಲಿದ್ದಾರಂತೆ.
ಮ್ಯಾಕ್ಸ್ (Max) ಸಿನಿಮಾದಲ್ಲಿ ದಕ್ಷಿಣದ ಖ್ಯಾತ ನಟಿ ವರಲಕ್ಷ್ಮಿ (Varalakshmi) ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಅದು ಈಗ ನಿಜವಾಗಿದೆ. ಚೆನ್ನೈನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ವರಲಕ್ಷ್ಮಿ ಭಾಗಿಯಾಗಿದ್ದಾರೆ. ಅಧಿಕೃತವಾಗಿಯೇ ಈ ಮಾಹಿತಿಯನ್ನು ಚಿತ್ರತಂಡ ಹೇಳಿಕೊಂಡಿದೆ. ‘ವೆಲ್ ಕಮ್ ಆನ್ ಬೋರ್ಡ್ ಮಹಾಲಕ್ಷ್ಮಿ’ ಎಂದು ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದೆ.
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಪೋಸ್ಟರ್ ವಾರ್ ಶುರುವಾದಂತಿದೆ. ಬೆಂಗಳೂರಿನ ಸದಾಶಿವನಗರದ ರಮೇಶ್ ಜಾರಕಿಹೊಳಿ (Ramesh Jarakiholi) ನಿವಾಸಕ್ಕೆ ಅವಾಚ್ಯ ಪದ ಬಳಕೆ ಮಾಡಿರುವ ಪೋಸ್ಟರ್ ಗಳನ್ನು ಕಿಡಿಗೇಡಿಗಳು ಅಂಟಿಸಿ ಹೋಗಿದ್ದಾರೆ.
ಪೋಸ್ಟರ್ ನಲ್ಲಿ ಏಕವಚನದಲ್ಲಿ ನಿಂದನೆ ಜೊತೆಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಇದೇ ನಿನ್ನ ಸಂಸ್ಕೃತಿ ಎಂದು ಪದ ಬಳಸಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಕೂಡಲೇ ಅಂಟಿಸಿದ್ದ ಪೋಸ್ಟರ್ ತೆರವುಮಾಡಿದ್ದಾರೆ. ಈ ಪೋಸ್ಟರ್ ಬಗ್ಗೆ ಇದೀಗ ಭಾರೀ ಚರ್ಚೆ ಶುರುವಾಗಿದೆ.
ಸೋಮವಾರ ಡಿಸಿಎಂ ಡಿಕೆಶಿ (DK Shivakumar) ವಿರುದ್ಧ ರಮೇಶ್ ಜಾರಕಿಜೊಳಿ ಸುದ್ದಿಗೋಷ್ಠಿ ನಡೆಸಿ ಡಿಕೆ ಹೆದರು ಪುಕ್ಕಲ, ಮೋಸಗಾರ ಎಂದು ಜರೆದಿದ್ದರು. ರಾಜ್ಯ ಸರ್ಕಾರದ ಪತನಕ್ಕೆ ಬಿಜೆಪಿ(BJP) ಸ್ಕೆಚ್ ಹಾಕಿಲ್ಲ. ಆಪರೇಷನ್ ಕಮಲವನ್ನು ನಾವು ಮಾಡ್ತಿಲ್ಲ. ಸುಳ್ಳು ಗ್ಯಾರಂಟಿ ಕೊಟ್ಟಿದ್ದನ್ನ ಈಡೇರಿಸಲು ಆಗದ ಕಾರಣ ಆಪರೇಷನ್ ಕಮಲ ಮಾಡುತ್ತಿದ್ದಾರೆ ಅಂತಾ ಡಿಕೆ ಗ್ಯಾಂಗ್ ಹೇಳ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದರು. 2019ರಲ್ಲಿ ಅನಿವಾರ್ಯ ಇತ್ತು ಆಪರೇಷನ್ ಮಾಡಿದ್ವಿ. ಅಂದು ಡಿಕೆಶಿಯ ಸರ್ವಾಧಿಕಾರಿ ಧೋರಣೆ ಮತ್ತು ಸೊಕ್ಕಿನಿಂದ ಸರ್ಕಾರವನ್ನು ಬೀಳಿಸಬೇಕಾಯಿತು ಅಂದಿದ್ದರು. ಇದನ್ನೂ ಓದಿ: ನಾನು ಯಾವತ್ತಿದ್ದರೂ ಸಿದ್ದರಾಮಯ್ಯ ಪರ, ಸಚಿವರ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟಿದ್ದು: ಜಮೀರ್ ಅಹ್ಮದ್
ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ (Congress) ಕಾರ್ಯಕರ್ತರು, ಡಿಕೆ ಬೆಂಬಲಿಗರು ಪೋಸ್ಟರ್ ಅಂಟಿಸಿದ್ರಾ ಅನ್ನೋ ಅನುಮಾನ ಶುರುವಾಗಿದೆ. ಸ್ಥಳಕ್ಕೆ ಶೇಷಾದ್ರಿಪುರ ಉಪ ವಿಭಾಗ ಎಸಿಪಿ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಟ ಧ್ರುವ ಸರ್ಜಾ ಹುಟ್ಟುಹಬ್ಬಕ್ಕಾಗಿ (Birthday) ‘ಕೆಡಿ’ ಸಿನಿಮಾ ತಂಡ ಚಿತ್ರದ ಪೋಸ್ಟರ್ (Poster) ರಿಲೀಸ್ ಮಾಡುವ ಮೂಲಕ ಶುಭಾಶಯ ತಿಳಿಸಿದೆ. ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಧ್ರುವ ಹೊಸ ರೀತಿಯ ಪಾತ್ರವನ್ನು ಮಾಡಿದ್ದಾರೆ. ಆ ಪಾತ್ರದ ಹಿನ್ನೆಲೆಯಾಗಿಟ್ಟುಕೊಂಡು ಈ ಪೋಸ್ಟರ್ ಸಿದ್ಧ ಮಾಡಿದೆ ಚಿತ್ರತಂಡ.
ಕ್ರಿಯೆಟಿವ್ ಡೈರೆಕ್ಟರ್ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ `ಕೆಡಿ’ (Kd Film) ಸಿನಿಮಾದ ಫೋಟೋವೊಂದು ಈ ಹಿಂದೆ ಲೀಕ್ ಆಗಿತ್ತು. ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ನಡೆದಾಗ, ಆ ಭಾಗದ ಶೂಟಿಂಗ್‌ನಲ್ಲಿ ಧ್ರುವ ಸರ್ಜಾ ರೆಟ್ರೋ ಲುಕ್ (Retro Look) ನಲ್ಲಿ ಕಂಡಿದ್ದರು. ಅಭಿಮಾನಿಗಳ ಮಧ್ಯ ಧ್ರುವ ಕಾಣಿಸಿಕೊಂಡಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ರೆಟ್ರೋ ಲುಕ್‌ನಲ್ಲಿ ಧ್ರುವ ಸಖತ್ ಆಗಿ ಕಂಡಿದ್ದರು.
ಕೆವಿಎನ್ ನಿರ್ಮಾಣದ ಧ್ರುವ ಸರ್ಜಾ (Dhruva Sarja) ಮತ್ತು ನಿರ್ದೇಶಕ ಪ್ರೇಮ್ (Director Prem) ಕಾಂಬಿನೇಷನ್ ಸಿನಿಮಾ ನಾನಾ ಕಾರಣಗಳಿಂದಾಗಿ ಸಖತ್ ಸದ್ದು ಮಾಡ್ತಿದೆ. ಚಿತ್ರದ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿರುವ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ರವಿಚಂದ್ರನ್ (Ravichandran) ಕೂಡ ಇದ್ದಾರೆ. ಮೊನ್ನೆಯಷ್ಟೇ ರವಿಚಂದ್ರನ್ ಅವರ `ಕೆಡಿ’ ಸಿನಿಮಾದಲ್ಲಿನ ಫಸ್ಟ್ ಲುಕ್ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ಇದನ್ನೂ ಓದಿ:ಅಲ್ಲು ಬ್ಯುಸಿನೆಸ್ ಪಾರ್ಕ್ ನಲ್ಲಿ ಖ್ಯಾತ ನಟ ಅಲ್ಲು ರಾಮಲಿಂಗಯ್ಯ ಪ್ರತಿಮೆ
ಈ ಹಿಂದೆ ತಮ್ಮದೇ ಸಿನಿಮಾದಲ್ಲಿ ನಟಿಸಿದ್ದ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೆ ಮತ್ತೊಂದು ಅವಕಾಶ ನೀಡಿದ್ದಾರೆ ಪ್ರೇಮ್. ಕೆಡಿ ಸಿನಿಮಾದಲ್ಲಿ ರೀಷ್ಮಾ ಅವರು ಮಚ್‌ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್‌ಗಳಿರುವ ತಾರಾಗಣ ಅಂದ್ರೆ ಅದು ಕೆಡಿ ಸಿನಿಮಾ. ಧ್ರುವ ಸರ್ಜಾ, ರವಿಚಂದ್ರನ್, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) , ಸಂಜಯ್ ದತ್ (Sanjay Dutt) ಹೀಗೆ ಸ್ಟಾರ್‌ಗಳನ್ನ ಸ್ಟಾರ್ ಡೈರೆಕ್ಟರ್ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ವಿಭಿನ್ನ ಕಥೆ ಹೊತ್ತು, ಪ್ಯಾನ್ ಇಂಡಿಯಾ ಸಿನಿಮಾ ಹೊತ್ತು ತರುತ್ತಿದ್ದಾರೆ.
1968ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಚಿತ್ರಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸ್ತಿದ್ದಾರೆ.
ಟಿ. ಸಿ. ರವೀಂದ್ರ ತುಂಬರಮನೆ ನಿರ್ಮಿಸಿ, ರಮೇಶ್ ಬೇಗಾರ್ (Ramesh Begar) ರಚಿಸಿ ನಿರ್ದೇಶಿಸಿರುವ ‘ಜಲಪಾತ’ (Jalapatha) ಚಿತ್ರದಲ್ಲಿ ಪ್ರಸಿದ್ಧ , ಪ್ರತಿಭಾವಂತ ನಟ ಪ್ರಮೋದ್ ಶೆಟ್ಟಿ (Pramod Shetty) ಒಂದು ಪರಿಪೂರ್ಣ ವಿಭಿನ್ನ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದು ಅವರ ಪಾತ್ರದ ಲುಕ್ ನ ಪೋಸ್ಟರ್ (Poster) ಅನ್ನು ಅವರ ಧರ್ಮಪತ್ನಿ ನಟಿ, ನಿರ್ಮಾಪಕಿ ಸುಪ್ರೀತಾ ಶೆಟ್ಟಿ (Supreeta Shetty) ಬಿಡುಗಡೆಗೊಳಿಸಿದರು.
ಗಂಡನ ಹೊಸ ಅವತಾರವನ್ನು ಹೆಂಡತಿ ಜನರಿಗೆ ತೋರಿಸಿದ ಅಪರೂಪದ ಆಪ್ತ ವಿದ್ಯಮಾನ ಇದಾಗಿದೆ. ಈ ಸಂದರ್ಭದಲ್ಲಿ ಸುಪ್ರೀತಾ ಶೆಟ್ಟಿ ಮಾತನಾಡಿ ಪ್ರಮೋದ್ ಮೊದಲಿನಿಂದಲೂ ವಿಭಿನ್ನ ಪಾತ್ರಗಳು ಮತ್ತು ಹೊಸಬರಿಗೆ ಪ್ರೋತ್ಸಾಹಿಸುವುದನ್ನು ಬಯಸುವವರು. ಅದರಂತೆ ರಮೇಶ್ ಬೇಗಾರ್ ಜೊತೆಗೆ ಪ್ರೀತಿಯಿಂದ 2ನೇ ಪ್ರಾಜೆಕ್ಟ್ ಮಾಡಿದ್ದಾರೆ. ರವೀಂದ್ರ ನಿರ್ಮಾಣದ ಜಲಪಾತದ ಈ ಪೋಸ್ಟರ್ ಏನೋ ವಿಭಿನ್ನತೆ ಇದೆ ಎಂಬುದನ್ನು ಬಲು ಸೊಗಸಾಗಿ ತೋರಿಸಿದೆ. ಪ್ರಮೋದ್ ಲುಕ್ ಭರ್ಜರಿಯಾಗಿದ್ದು ಆ ಪಾತ್ರ ಮತ್ತು ಸಿನಿಮಾ ನೋಡಲು ಕಾತುರಳಾಗಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ:Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಬೇಗಾರ್ ಪರಿಸರ ಕಾಳಜಿ ಪ್ರಮೋದ್ ಶೆಟ್ಟಿ ಅವರ ವೈಯಕ್ತಿಕ ಆಸಕ್ತಿಯ ವಿಷಯ ಎಂದು ಅವರ ಚಟುವಟಿಕೆಯಿಂದ ಗಮನಿಸಿ ಈ ಪಾತ್ರಕ್ಕೆ ವಿನಂತಿಸಿದೆ. ಸಿನಿಮಾದ ಉದ್ದೇಶ ಅವರನ್ನು ಇಂಪ್ರೆಸ್ಸ್ ಮಾಡಿತು. ಹಾಗಾಗಿ ಈ ಪಾತ್ರ ಒಪ್ಪಿ ಅತ್ಯುತ್ತಮ ನಿರ್ವಹಣೆ ಮಾಡಿದ್ದಾರೆ ಎಂದರು.
ನಿರ್ಮಾಪಕ ರವೀಂದ್ರ ತುಂಬರಮನೆ ಮಾತಾಡಿ, ಪರಿಸರ ರಕ್ಷಣೆ ಮತ್ತು ಅರಿವನ್ನು ಒಂದು ಫೀಲ್ ಗುಡ್ ಜಾನರ್ ನಲ್ಲಿ ಹೇಳಲು ಹೊರಟ ನಮ್ಮ ತಂಡಕ್ಕೆ ಪ್ರಮೋದ್ ಶೆಟ್ಟಿ ಒತ್ತಾಸೆಯಾಗಿ ನಿಂತಿದ್ದಾರೆ ಮಾತ್ರವಲ್ಲ ಚಿತ್ರದ ಮೌಲ್ಯ ಮತ್ತು ಅದ್ಧೂರಿತನವನ್ನು ಎತ್ತಿದ್ದಾರೆ. ಸಿನಿಮಾ ಜನರನ್ನು ಆಕರ್ಷಿಸುವಲ್ಲಿ ಪ್ರಮೋದ್ ಶೆಟ್ಟಿ ಅವರ ಈ ಪೋಸ್ಟರ್ ನಿರ್ಣಾಯಕವಾಗಿದೆ ಎಂದು ತಿಳಿಸಿದರು. ಚಿತ್ರದ ನಾಯಕ ನಟ ರಜನೀಶ್ ಎಂ ಈ ಸಂದರ್ಭ ಉಪಸ್ಥಿತರಿದ್ದರು. ಸಾದ್ವಿನಿಕೊಪ್ಪ ಸಂಗೀತ ನಿರ್ದೇಶನದ , ಶಶೀರ ಕ್ಯಾಮರಾ ಕೆಲಸದ , ಅವಿನಾಶ್ ಸಂಕಲಿಸಿರುವ ಜಲಪಾತ ಸೆಪ್ಟೆಂಬರ್ ನಲ್ಲಿ ತೆರೆಗೆ ಬರಲಿದೆ.
ತಮಿಳಿನ ಹೆಸರಾಂತ ನಟ ಧನುಷ್ ಮತ್ತು ಕನ್ನಡದ ಸೆಂಚ್ಯೂರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಪೋಸ್ಟರ್ (Poster) ವೊಂದು ನಿನ್ನೆ ರಿಲೀಸ್ ಆಗಿದ್ದು, ವಿವಿಧ ಬಗೆಯ ಬಂದೂಕು ಹಿಡಿದುಕೊಂಡಿರುವ ಇಬ್ಬರು ಸ್ಟಾರ್ ನಟರು ತೆರೆಯ ಮೇಲೆ ಕಾಳಗ ಮಾಡಲಿದ್ದಾರೆ ಎನ್ನುವ ಕುತೂಹಲವನ್ನು ಉಂಟು ಮಾಡಿದೆ.
ಧನುಷ್ ಕೈಯಲ್ಲಿ ಒಂದು ಬಗೆಯ ಬಂದೂಕು ಇದ್ದರೆ, ಶಿವರಾಜ್ ಕುಮಾರ್ ಮತ್ತೊಂದು ಬಗೆಯ ಬಂದೂಕು ಹಿಡಿದಿದ್ದಾರೆ. ಇಬ್ಬರ ಲುಕ್ ಕೂಡ ಸಖತ್ ಕ್ಯಾಚಿ ಆಗಿದೆ. ಹೀಗಾಗಿ ತೆರೆಯ ಮೇಲೆ ಇಬ್ಬರೂ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಇರುವ ಕಾತರ.
ಶಿವರಾಜ್ ಕುಮಾರ್ (Shivraj Kumar) ಸದ್ಯ ಏಕಕಾಲಕ್ಕೆ ತಮಿಳಿನ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ಸಿನಿಮಾದಲ್ಲಿ ರಜನಿಕಾಂತ್ ನಾಯಕನಾದರೆ ಮತ್ತೊಂದು ಸಿನಿಮಾದಲ್ಲಿ ರಜನಿ ಅಳಿಯ ಧನುಷ್ (Dhanush) ನಾಯಕ. ಈ ಎರಡೂ ಚಿತ್ರಗಳು ಬಹುತೇಕ ಶೂಟಿಂಗ್ ಮುಗಿಸಿವೆ.
ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ವಿಶೇಷ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಪಾತ್ರ ಯಾವುದು, ಹಿನ್ನೆಲೆ ಏನು ಎನ್ನುವ ವಿಚಾರ ಈವರೆಗೂ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಸ್ವತಃ ಶಿವರಾಜ್ ಕುಮಾರ್ ಕೂಡ ಈತನಕ ಹೇಳಿಕೊಂಡಿಲ್ಲ. ಪಾತ್ರ ಮತ್ತು ಕಥೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಂಡು ಬರಲಾಗುತ್ತಿದೆ. ಇದನ್ನೂ ಓದಿ:ತಮಿಳು ‘ಜೈಲರ್’ ವಿರುದ್ದ ಮಲಯಾಳಂ ‘ಜೈಲರ್’ ರಿಲೀಸ್: ರಜನಿ ಸಿನಿಮಾಗೆ ಟಕ್ಕರ್
ಆದರೆ, ಆಕಸ್ಮಿಕ ಎನ್ನುವಂತೆ ಧನುಷ್ ಜೊತೆ ಮಾಡುತ್ತಿದ್ದ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾದ ಕೆಲವು ವಿಷಯಗಳು ಸೋರಿಕೆಯಾಗಿವೆ. ಅಂದರೆ, ಶಿವರಾಜ್ ಕುಮಾರ್ ಅವರಿಗೆ ಕೇಶವಿನ್ಯಾಸ ಮಾಡುತ್ತಿರುವ ರಾಜು ಎನ್ನುವವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾತ್ರ ಮತ್ತು ಸಿನಿಮಾದ ಕಥೆಯನ್ನೂ ಅವರು ಬಿಟ್ಟುಕೊಟ್ಟಿದ್ದಾರೆ.
ಕಾಡು ಜನರು ಮತ್ತು ಬ್ರಿಟಿಷ್ ರ ನಡುವಿನ ಹೋರಾಟದ ಕಥೆಯನ್ನು ಕ್ಯಾಪ್ಟನ್ ಮಿಲ್ಲರ್ ನಲ್ಲಿ ಹೇಳುತ್ತಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ಕಾಡು ಜನರ ಪಾತ್ರದಲ್ಲಿ ಶಿವಣ್ಣ ಮತ್ತು ಧನುಷ್ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಧನುಷ್ ಅಣ್ಣನ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಶಾರುಖ್ ಖಾನ್ (Shah Rukh Khan) ಅಭಿನಯದ ‘ಜವಾನ್’ (Jawan) ಚಿತ್ರದ ಪ್ರಿವ್ಯೂ, ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ. ಈಗ ಚಿತ್ರದಲ್ಲಿನ ನಯನತಾರಾ ಅವರ ಪಾತ್ರದ ಪೋಸ್ಟರ್ (Poster) ಅನ್ನು ನಾಯಕ ನಟ ಶಾರುಖ್ ಖಾನ್ ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ಇಂಟರ್ನೆಟ್ ನಲ್ಲಿ ಸಾಕಷ್ಟು ವೈರಲ್ ಆಗಿದೆ.
ಪ್ರಿವ್ಯೂನಲ್ಲಿ ನಯನತಾರಾ (Nayantara) ಅವರನ್ನು ಸಾಹಸ ದೃಶ್ಯಗಳಲ್ಲಿ ಪ್ರೇಕ್ಷಕರು ನೋಡಿ ಅವಕ್ಕಾಗಿದ್ದರು. ಆಕೆಯನ್ನು ಇನ್ನಷ್ಟು ನೋಡಬಯಸಿದ್ದರು. ಈಗ ನಯನತಾರಾ ಪೋಸ್ಟರ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನಯನತಾರಾ ಅವರ ಪಾತ್ರವನ್ನು ‘ಬಿರುಗಾಳಿಗೂ ಮುಂಚೆ ಬರುವ ಗುಡುಗು’ ಎಂದು ಶಾರುಖ್ ಖಾನ್ ವರ್ಣಿಸಿದ್ದು, ಆಕೆಯ ಪಾತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿದೆ. ಇದನ್ನೂ ಓದಿ:ಟೊಮ್ಯಾಟೋ ವಿಚಾರದಲ್ಲಿ ಕ್ಷಮೆ ಕೇಳಿದ ನಟ ಸುನೀಲ್ ಶೆಟ್ಟಿ
ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಮತ್ತು ನಯನತಾರಾ, ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ‘ಜವಾನ್’ನಲ್ಲಿ ನಯನತಾರಾ, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಇಡೀ ಚಿತ್ರದ ಹೈಲೈಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಸಾಕಷ್ಟು ಸಾಹಸಮಯ ದೃಶ್ಯಗಳಲ್ಲಿ ನಯನತಾರಾ ಕಾಣಿಸಿಕೊಂಡಿದ್ದಾರೆ.
‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಗೌರಿ ಖಾನ್ ನಿರ್ಮಿಸಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಗೌರವ್ ವರ್ಮ ಈ ಚಿತ್ರದ ಸಹನಿರ್ಮಾಪಕರು. ಸೆಪ್ಟೆಂಬರ್ 7ರಂದು ಈ ಚಿತ್ರವು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ದಕ್ಷಿಣದ ಖ್ಯಾತ ನಟಿ ಹನಿ ರೋಸ್ (Honey Rose) ವಿರುದ್ಧ ಗೋರಕ್ಷಕರು ತಿರುಗಿ ಬಿದ್ದಿದ್ದಾರೆ. ಹನಿ ರೋಸ್ ಇದೀಗ ಮಹಿಳಾ ಪ್ರಧಾನ ಸಿನಿಮಾವೊಂದರಲ್ಲಿ ನಟಿಸಿದ್ದು, ಆ ಸಿನಿಮಾದ ಪೋಸ್ಟರ್ (Poster) ರಿಲೀಸ್ ಮಾಡಲಾಗಿದೆ. ಆ ಪೋಸ್ಟರ್ ನಲ್ಲಿ ಹನಿ ಗೋಮಾಂಸ (Beef) ಮಾರುವ ಅಂಗಡಿಯಲ್ಲಿ ಕೂತಿದ್ದಾರೆ. ಕೈಯಲ್ಲಿ ರಕ್ತಸಿಕ್ತ ಕತ್ತಿಯಿದೆ.
ರಚೆಲ್ (Rachel) ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಹನಿ ರೋಸ್ ನಟಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಆಕೆಯದ್ದು ಗೋಮಾಂಸ ಮಾರುವ ಯುವತಿ ಪಾತ್ರ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಗೋಮಾಂಸವನ್ನು ಸೂಚಿಸುವಂತಹ ಅನೇಕ ಸಂಗತಿಗಳನ್ನು ಪೋಸ್ಟರ್ ನಲ್ಲೂ ಅಳವಡಿಸಲಾಗಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್
ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಹನಿ ರೋಸ್ ಕೈಯಲ್ಲಿ ರಕ್ತಸಿಕ್ತ ಕತ್ತಿ, ಮುಂದ ಗೋಮಾಂಸ, ಹಿಂದೆ ಚರ್ಮ ಸುಲಿದ ಗೋವು, ಮತ್ತೊಂದು ಕಡೆ ಗೋವಿನ ತಲೆ ಹೀಗೆ ಡಿಸೈನ್ ಮಾಡಲಾಗಿದೆ. ಈ ಪೋಸ್ಟರ್ ವಿವಾದಕ್ಕೂ ಕಾರಣವಾಗಿದೆ. ಐದು ಭಾಷೆಗಳಲ್ಲಿ ಪೋಸ್ಟರ್ ರಿಲೀಸ್ ಆಗಿದ್ದು, ನಾನಾ ಕಡೆ ಇದರ ವಿರುದ್ದ ಪ್ರತಿಭಟನೆಗಳು ದಾಖಲಾಗುತ್ತಿವೆ.
ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡ ಹಂಚಿಕೊಳ್ಳುತ್ತಿದ್ದಂತೆಯೇ ಗೋ ರಕ್ಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಹನಿ ರೋಸ್ ಇಂಥದ್ದೊಂದು ಪಾತ್ರ ಮಾಡಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಜವಾನ್ (Jawan) ಸಿನಿಮಾದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದ್ದು, ಶಾರುಖ್ ಖಾನ್ ಅಭಿಮಾನಿಗಳು ಪೋಸ್ಟರ್(Poster) ಗೆ ಫಿದಾ ಆಗಿದ್ದಾರೆ. ಬೋಳು ತಲೆಯ ಶಾರುಖ್ ಖಾನ್ (Shah Rukh Khan) ಕೈಯಲ್ಲಿ ಗನ್ ಹಿಡಿದುಕೊಂಡು ಪೋಸ್ ನೀಡಿರುವ ಪೋಸ್ಟರ್, ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲೇ ಸೋಷಿಯಲ್ ಮೀಡಿಯಾ ತುಂಬಾ ವೈರಲ್ ಆಗಿದೆ. ಇಂಗ್ಲಿಷ್, ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ ನಿರ್ದೇಶಕರು. ಶಾರುಖ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಬಹುನಿರೀಕ್ಷಿತ ಚಿತ್ರವಾದ ‘ಜವಾನ್’ ಸಿನಿಮಾದ ಪ್ರಿವ್ಯೂ ಮೊನ್ನೆ ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಸಮಾಜದಲ್ಲಾಗುತ್ತಿರುವ ತಪ್ಪುಗಳನ್ನು ತಿದ್ದುವ ಒಬ್ಬ ಜವಾಬ್ದಾರಿಯುತ ಮತ್ತು ಪ್ರಾಮಾಣಿಕ ವ್ಯಕ್ತಿಯ ಕಥೆಯಾಗಿದೆ.
‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಆರಂಭದಿಂದಲೂ ಬಹಳ ಕುತೂಹಲವಿತ್ತು. ಇಂದು ಬಿಡುಗಡೆಯಾದ ಟೀಸರ್, ಆ ನಿರೀಕ್ಷೆ ಮತ್ತು ಕುತೂಹಲಗಳನ್ನು ಇನ್ನೊಂದು ಹಂತಕ್ಕೆ ತಲುಪಿಸಿದೆ. ದೊಡ್ಡ ಬಜೆಟ್ ನಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಚಿತ್ರವು ಆಕ್ಷನ್ ಮತ್ತು ಎಮೋಷನ್ ಗಳನ್ನು ಹದವಾಗಿ ಹಿಡಿದಿಟ್ಟಿದೆ. ಚಿತ್ರದ ಕೆಲವು ಅದ್ಭುತ ಕ್ಷಣಗಳನ್ನು ಹಿಡಿದಿಡುವುದರ ಜೊತೆಗೆ, ‘ಜವಾನ್ ಪ್ರಪಂಚವನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.
‘ಕಿಂಗ್ ಖಾನ್’ ಅವರ ಧ್ವನಿಯಲ್ಲಿ ಪ್ರಾರಂಭವಾಗುವ ಈ ಪ್ರಿವ್ಯೂ, ನಂತರ ಚಿತ್ರ ಏನಿರಬಹುದು ಎಂದು ಪರಿಚಯಿಸಿಕೊಡುತ್ತದೆ. ಈ ಪ್ರಿವ್ಯೂನ ಒಂದು ವಿಶೇಷತೆಯೆಂದರೆ, ಇದುವರೆಗೂ ನೀವು ನೋಡದೆ ಇರುವ ಶಾರುಖ್ ಅವರನ್ನು ಇಲ್ಲಿ ಹಲವು ಅವತಾರಗಳಲ್ಲಿ ನೋಡಬಹುದು. ಶಾರುಖ್ ಖಾನ್ ಅಲ್ಲದೆ, ಚಿತ್ರದಲ್ಲಿ ನಟಿಸಿರುವ ಹಲವು ಪ್ರತಿಭಾವಂತರ ತುಣುಕುಗಳು ಸಹ ಈ ಪ್ರಿವ್ಯೂನಲ್ಲಿ ಪರಿಚಯಿಸಲಾಗಿದೆ. ರೋಮಾಂಚನಗೊಳಿಸುವ ಆಕ್ಷನ್ ದೃಶ್ಯಗಳು, ಅದ್ದೂರಿ ಹಾಡುಗಳು, ‘ಬೇಕರಾರ್ ಕರಕೇ ಹಮೇ’ ಹಾಡಿಗೆ ಶಾರುಖ್ ಖಾನ್ ಅಭಿನಯ … ಇವೆಲ್ಲವೂ ಈ ಪ್ರಿವ್ಯೂ ಚಿತ್ರದ ಹೈಲೈಟ್ ಗಳಾಗಿದ್ದು, ಚಿತ್ರ ಬಿಡುಗಡೆಗೆ ಕಾಯುವಂತಾಗಿದೆ.
ದಕ್ಷಿಣ ಭಾರತದ ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕರಾದ ಅಟ್ಲಿ (Atlee) ಈ ಚಿತ್ರವನ್ನು ನಿರ್ದೇಶಿಸಿದ್ದು, ಅನಿರುದ್ಧ್ ರವಿಚಂದರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ. ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ಈ ಪ್ರಿವ್ಯೂನ ಇನ್ನೊಂದು ಹೈಲೈಟ್. ಈ ಪ್ರಿವ್ಯೂನಲ್ಲಿ ಗಮನಸೆಳೆಯುವ ಇನ್ನೊಂದು ಅಂಶವೆಂದರೆ ಅದು ಗ್ರಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿರುವ ರಾಜಕುಮಾರಿ ಅವರು ಹಾಡಿರುವ ‘ದಿ ಕಿಂಗ್ ಖಾನ್ ರಾಪ್’ ಎಂಬ ಹಾಡು.
‘ಜವಾನ್’, ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರವಾಗಿದ್ದು, ಅತ್ಯಂತ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿದೆ. ಈ ಚಿತ್ರದ ಶಾರುಖ್ ಜೊತೆಗೆ ಭಾರತೀಯ ಚಿತ್ರರಂಗದ ಜನಪ್ರಿಯ ಹಾಗೂ ವಿವಿಧ ಭಾಷೆಯ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ನಯನತಾರಾ, ವಿಜಯ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಗಿರಿಜಾ ಓಕ್, ಸಂಗೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ದೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಿಯಾ ನಟಿಸಿರುವ ಈ ಚಿತ್ರವು ಎಲ್ಲ ಭಾಷೆಗಳ ಜನರಿಗೂ ತಲುಪವಂತೆ ಚಿತ್ರಿಸಲಾಗಿದೆ.
ಇದಕ್ಕೂ ಮುನ್ನ ಪೋಸ್ಟರ್ ಮತ್ತು ಸಣ್ಣ ಟೀಸರ್ ಮೂಲಕ ಜನರ ಗಮನ ಸೆಳೆದ ಟೀಸರ್, ಈಗ ಪ್ರಿವ್ಯೂ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ನಡಿ ಗೌರಿ ಖಾನ್ ನಿರ್ಮಾಣ ಮಾಡಿದರೆ, ಗೌರವ್ ವರ್ಮ ಸಹ-ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ‘ಜವಾನ್’ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಸದ್ಯ ಕೈಯಲ್ಲಿರುವ ಸಿನಿಮಾ ಮುಗಿಸಿಕೊಂಡು ಕಮಲ್ ಹಾಸನ್ (Kamal Haasan) ಸಕ್ರೀಯ ರಾಜಕಾರಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿ ಅವರು ತೆರೆ ಮರೆಯಲ್ಲಿ ಸಿದ್ದತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ರಾಜಕಾರಣಕ್ಕೆ ಬರುವಂತಹ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಏಕೆಂದರೆ ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ ಕಮಲ್.
ಈಗ ಅವರು ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಇಂಡಿಯನ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಾದ ನಂತರ ಭಾರತೀಯ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ಈ ಸಿನಿಮಾಗಳ ಮಧ್ಯೆಯೇ ಮತ್ತೊಂದು ಸಿನಿಮಾ (New Cinema) ಘೋಷಿಸಿದ್ದಾರೆ ಕಮಲ್ ಹಾಸನ್. ಆ ಸಿನಿಮಾದ ಪೋಸ್ಟರ್ (Poster) ಅನ್ನು ಕೂಡ ರಿಲೀಸ್ ಮಾಡಿದ್ದಾರೆ. ಇದು ಅವರ 233ನೇ (KH 233) ಸಿನಿಮಾವಾಗಿದೆ. ಇದನ್ನೂ ಓದಿ:‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ: ರೆಟ್ರೋ ಲುಕ್ ಫೋಟೋ ಲೀಕ್
ಈ ಹೊಸ ಚಿತ್ರವನ್ನು ಎಚ್.ವಿನೋದ್ (H. Vinod) ನಿರ್ದೇಶನ ಮಾಡಲಿದ್ದು, ಸ್ವತಃ ಕಮಲ್ ಹಾಸನ್ ಇದಕ್ಕೆ ಹಣ ಹೂಡುತ್ತಿದ್ದಾರೆ. ಅವರದ್ದೇ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗಲಿದೆ. ಪೋಸ್ಟರ್ ನಲ್ಲಿ ಕಮಲ್ ಜನನಾಯಕನ ರೀತಿಯಲ್ಲಿ ಪೋಸ್ ನೀಡಿದ್ದಾರೆ. ಹೀಗಾಗಿ ಈ ಚಿತ್ರದಲ್ಲಿ ರಾಜಕೀಯ ಕಥೆಯನ್ನು ಹೇಳುತ್ತಾರಾ ಎನ್ನುವ ಅನುಮಾನ ಕೂಡ ಮೂಡಿದೆ.
ಒಂದಷ್ಟು ಸೋಲಿನ ಬಳಿಕ ಕಮಲ್ ನಟನೆಯ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಕಮಾಯಿ ಮಾಡಿತು. ಮತ್ತೆ ಕಮಲ್ ಗೆ ಅದು ಮರುಜೀವ ನೀಡಿತು. ಈ ಸಿನಿಮಾ ಸಾಕಷ್ಟು ದುಡ್ಡು ಮಾಡುತ್ತಿದ್ದಂತೆಯೇ ಕಮಲ್ ಮತ್ತೆ ಬ್ಯುಸಿಯಾಗಿದ್ದಾರೆ. ಹಲವು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ.