Tag: Poster Release

  • ಕರಾವಳಿಯ ಮತ್ತೊಂದು ಕಥನ `ದಿಂಸೋಲ್’ ಪೋಸ್ಟರ್ ರಿಲೀಸ್

    ಕರಾವಳಿಯ ಮತ್ತೊಂದು ಕಥನ `ದಿಂಸೋಲ್’ ಪೋಸ್ಟರ್ ರಿಲೀಸ್

    ‘ದಿಂಸೋಲ್’ ಹೀಗೊಂದು ವಿಭಿನ್ನ ಟೈಟಲ್‌ನ ಅದ್ದೂರಿ ಸಿನಿಮಾ ರೆಡಿಯಾಗುತ್ತಿದೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಿನಿಮಾದ ಭರ್ಜರಿ ಪೋಸ್ಟರ್ ರಿಲೀಸ್ ಆಗಿತ್ತು. ಇದೀಗ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಸಖತ್ ಇಂಟ್ರೆಸ್ಟಿಂಗ್ ಆಗಿದೆ. ನಾಗೇಂದ್ರ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ದಿಂಸೋಲ್ ಕರಾವಳಿಯ ಸಂಸ್ಕೃತಿ ಬಗ್ಗೆ ಇರುವ ಸಿನಿಮಾವಾಗಿದೆ. ಈಗಾಗಲೇ ಕರಾವಳಿ ಸಂಸ್ಕೃತಿಯ ಸೊಡಗನ್ನು ಸಾರುವ ಅನೇಕ ಸಿನಿಮಾಗಳು ಬರ್ತಿವೆ. ಇದೀಗ ದಿಂಸೋಲ್ ಕೂಡ ಅದೇ ಲಿಸ್ಟ್‌ಗೆ ಸೇರಿಕೊಂಡಿದೆ.

    ದಿಂಸೋಲ್ ರಥಾಕಿರಣ್ ನಾಯನಾಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ. ನಾಯಕಿಯಾಗಿ ಶಿವಾನಿ ರೈ ನಟಿಸುತ್ತಿದ್ದಾರೆ. ಈ ಮೊದಲು ಅಭಿರಾಮಚಂದ್ರ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ದಿಂಸೋಲ್ ಮೂಲಕ ಒಂದಾಗಿ ತೆರೆಮೇಲೆ ಬರುತ್ತಿದ್ದಾರೆ. ಇನ್ನೂ ಸಿನಿಮಾದ ಪ್ರಮುಖ ಪಾತ್ರದಲ್ಲಿ ರಾಕೇಶ್ ಅಡಿಗ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ಮಾನಸಿ ಸುಧೀರ್, ಕಿರುತೆರೆ ನಟಿ ಅಮೃತಾ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.ಇದನ್ನೂ ಓದಿ: ಪಡ್ಡೆಗಳ ನಿದ್ದೆ ಕದ್ದ ಹಾಟ್ ಬ್ಯೂಟಿ ಜ್ಯೋತಿ ರೈ – ಕಾಮೆಂಟ್ಸ್‌ ಸೆಕ್ಷನ್‌ ಆಫ್‌ ಮಾಡಿದ್ದೇಕೆ?

    ದಿಂಸೋಲ್ ಎಂದರೆ ಕರಾವಳಿ ಭಾಗದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಅಚರಣೆಯಾಗಿದೆ. ಕರಾವಳಿಯ ಎಲ್ಲಾ ಸಂಸ್ಕೃತಿಯನ್ನು ಈ ಸಿನಿಮಾದ ಮೂಲಕ ದೃಶ್ಯ ರೂಪಕ್ಕೆ ತರುತ್ತಿದ್ದಾರೆ ನಿರ್ದೇಶಕ ನಾಗೇಂದ್ರ ಗಾಣಿಗ. ಮೊದಲ ಪೋಸ್ಟರ್ ಕೂಡ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ದೇವಿ ರಕ್ತೇಶ್ವರಿ ಇರುವ ಮೋಷನ್ ಪೋಸ್ಟರ್ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ..ಅಲ್ಲದೆ ಈ ಸಿನಿಮಾ ದೇವರ ಬಗ್ಗೆ ಇದೆ ಎನ್ನುವುದು ಈ ಪೋಸ್ಟರ್ ನೋಡಿದ್ರೆ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

    ಸದ್ಯ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಶೂಟಿಂಗ್ ಪ್ರಾರಂಭ ಮಾಡಲಿದೆ. ಕರಾವಳಿಯ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಈ ಚಿತ್ರ ಸಚಿನ್ ವಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಚಿತ್ರಕ್ಕೆ ಸಂದೀಪ್ ವಲ್ಲೂರಿ ಅವರ ಕ್ಯಾಮರಾ ವರ್ಕ್ ಇದೆ, ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ.ಇದನ್ನೂ ಓದಿ: BBK12 | ಬಿಗ್‌ಬಾಸ್‌ಗೆ ಹೋಗ್ತಾರಾ ಸುಧಾರಾಣಿ – ʻಯಾರ್‌ ಹೇಳಿದ್ದುʼ?

  • ವೈಕುಂಠ ಸಮಾರಾಧನೆ: ಕನ್ನಡದಲ್ಲಿ ಹೀಗೊಂದು ಸಿನಿಮಾ

    ವೈಕುಂಠ ಸಮಾರಾಧನೆ: ಕನ್ನಡದಲ್ಲಿ ಹೀಗೊಂದು ಸಿನಿಮಾ

    ನರನ್ನು ಚಿತ್ರಮಂದಿರಕ್ಕೆ ಕರೆತರಲು ವಿನೂತನ ರೀತಿಯ ಶೀರ್ಷಿಕೆ, ಪ್ರಚಾರ ನಡೆಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಆ ಸಾಲಿಗೆ ’ವೈಕುಂಠ ಸಮಾರಾಧನೆ’ (Vaikunta Samaaraadhane) ಚಿತ್ರವೊಂದು ಸೇರ್ಪಡೆಯಾಗಿದೆ. ವೃತ್ತಿಯಲ್ಲಿ ಹೆಸರು ಮಾಡಿರುವ ಅಡ್ವೋಕೇಟ್ ರಜತ್ ಮೌರ್ಯ (Rajat Maurya) ಅವರ ಪ್ರವೃತ್ತಿ ಬಣ್ಣದಲೋಕ. ಬಿಡುವಿನ ವೇಳೆಯಲ್ಲಿ ನಟನೆ, ನಿರ್ದೇಶನದ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಮಾಡೆಲ್ ಆಗಿದ್ದು, ಇವರ ಅಭಿನಯದ ಜಾಹಿರಾತುಗಳು ಐಪಿಎಲ್ ಪಂದ್ಯಗಳಲ್ಲಿ ಸ್ಟ್ರೀಮಿಂಗ್ ಆಗಿದೆ. ಇದರ ಅನುಭವದಿಂದಲೇ ಸಿನಿಮಾಕ್ಕೆ ಕಥೆ,ಚಿತ್ರಕಥೆ,ನಿರ್ದೇಶನ ಮತ್ತು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಗೇರ್‌ಗಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಆಶಾ ಗೇರ್‌ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಕಲ್ಕಿ ಜಯಂತಿ ಶ್ರಾವಣ ಶನಿವಾರ ಶುಭ ದಿನದಂದು ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು.

    ಸದಭಿರುಚಿಯ ’ಬ್ಲಿಂಕ್’ ’ಜಲಪಾತ’ ’ಶಾಖಾಹಾರಿ’ ’ಕೆರೆಬೇಟೆ’ ’4ಎನ್6’ ಮತ್ತು ’ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ’ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ’ ವಾರ್ಡನ್ ಖ್ಯಾತಿಯ ಮಂಜುನಾಥ್ ಮತ್ತು ವಕೀಲರುಗಳು ಆಗಮಿಸಿ ಸ್ನೇಹಿತನಿಗೆ ಶುಭ ಹಾರೈಸಿದರು. ’ಇದು ನಮ್ಮ ಸಿನಿಮಾದ ಡೆತ್ ಲುಕ್ ಪೋಸ್ಟರ್’ ಎಂದು ವೈಕುಂಠ ಸಮಾರಾಧನೆ ಪತ್ರಿಕೆ ರೀತಿಯಲ್ಲಿಯೇ ಕಪ್ಪು ಬಿಳುಪಿನಲ್ಲಿ ಸಿದ್ದಗೊಂಡಿದ್ದು, ಜನನ, ಮರಣ ಇರುವಂತೆ ಇದರಲ್ಲಿ ಮುಹೂರ್ತ 10.8.24 ರಿಲೀಸ್ 12.12.25 ಎಂಬುದಾಗಿ ಹೇಳಿಕೊಂಡಿದೆ. ಈಗಾಗಲೇ ಡೆತ್ ಲುಕ್ ಪೋಸ್ಟರ್ ರೀಲ್ಸ್ ವೈರಲ್ ಆಗಿದ್ದು, ಎಲ್ಲಾ ಕಡೆ ಸದ್ದು ಮಾಡುತ್ತಿದೆ.

    ಸಂಗೀತ ರುತ್ವಿಕ್‌ಮುರಳಿಧರ್, ಛಾಯಾಗ್ರಹಣ ಹರ್ಷಿತ್.ಬಿ.ಗೌಡ, ಕಾರ್ಯಕಾರಿ ನಿರ್ಮಾಪಕ ನಾಗೇಂದ್ರ ಯಡಿಯಾಳ್ ಅವರದಾಗಿದೆ. ಆದರ್ಶ್‌ಬೆಳ್ಳೂರು, ದರ್ಶನ್‌ಕುಮಾರ್, ಸಿದ್ದಾನ್ ವಿಜಯ್, ನವೀನ್, ಸಚ್ಚಿನ್ ನಿರ್ದೇಶನ ತಂಡದಲ್ಲಿ ಇರುತ್ತಾರೆ. ಶೇಕಡ 60 ರಷ್ಟು ಮಲೆನಾಡು, ಉಳಿದುದನ್ನು ಬೆಂಗಳೂರು ಸುತ್ತಮತ್ತ ಚಿತ್ರೀಕರಿಸಲು ಯೋಜನೆ ರೂಪಿಸಲಾಗಿದೆ.

  • ‘ಪರಿಮಳಾ ಡಿಸೋಜಾ’ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಮುನಿರತ್ನ

    ‘ಪರಿಮಳಾ ಡಿಸೋಜಾ’ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಮುನಿರತ್ನ

    ಗಾಗಲೆ ರಾಜ್ಯದ ಮೂವರು ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರ ಸ್ವಾಮಿ, ಬಿ ಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ‘ಪರಿಮಳ ಡಿಸೋಜಾ’ ಚಲನಚಿತ್ರದ ಸಿನೆಮಾ ಪೋಸ್ಟರ್ ಬಿಡುಗಡೆ ಮಾಡಿದ್ದು , ಈಗ ಪರಿಮಳ ಡಿಸೋಜಾ ಚಲನಚಿತ್ರದ ಮೋಶನ್ ಪೋಸ್ಟರ್ ಅನ್ನು ತೋಟಗಾರಿಕೆ,ಯೋಜನೆ ಹಾಗೂ ಸಾಂಖ್ಯಿಕ ಸಚಿವರಾದ  ಮುನಿರತ್ನ ಹಾಗೂ ಖ್ಯಾತ ಚಲನಚಿತ್ರ ಸಾಹಿತಿಗಳಾದ ಕೆ ಕಲ್ಯಾಣ್  ಬಿಡುಗಡೆ ಮಾಡಿದ್ದಾರೆ.

    ಸಸ್ಪೆನ್ಸ್ ಥ್ರಿಲ್ಲರ್ ಆಕ್ಸನ್ ಪ್ಯಾಮಿಲಿ ಸೆಂಟಿಮೆಂಟ್ ಕಥಾವಸ್ತುವನ್ನು ಹೊಂದಿರುವ ಬಹುನಿರೀಕ್ಷೇಯ ಪರಿಮಳ ಡಿಸೋಜಾ ಕನ್ನಡ ಚಲನಚಿತ್ರದ ಮೋಶನ್ ಪೋಸ್ಟರ್ ಅನ್ನು ತೋಟಗಾರಿಕೆ,ಯೋಜನೆ ಹಾಗೂ ಸಾಂಖ್ಯಿಕ ಸಚಿವರಾದ  ಮುನಿರತ್ನ ಹಾಗೂ ಖ್ಯಾತ ಚಲನಚಿತ್ರ ಸಾಹಿತಿಗಳಾದ ಕೆ ಕಲ್ಯಾಣ್  ಮಂಗಳವಾರ ಸಂಜೆ 6 ಗಂಟೆಗೆ ಬಿಡುಗಡೆ ಮಾಡಿ “ ಪರಿಮಳ ಡಿಸೋಜಾ” ಚಲನಚಿತ್ರ ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಚಿತ್ರದಲ್ಲಿ ಅಬ್ಬರಿಸಲಿದ್ದಾರಾ ರಾಣಾ ದಗ್ಗುಭಾಟಿ?

    ಈ ಚಿತ್ರದಲ್ಲಿ ಶ್ರೀನಿವಾಸ್ ಪ್ರಭು, ಭವ್ಯ, ಕೋಮಲ ಬನವಾಸೆ , ವಿನೋದ್ ಶೇಷಾದ್ರಿ , ಪೂಜ ರಾಮಚಂದ್ರ, ರೋಹಿಣಿ ಜಗನಾಥ್, ಚಂದನ ಶ್ರೀನಿವಾಸ್, ಮೀಸೆ ಆಂಜನಪ್ಪ, ಶಿವಕುಮಾರ್ ಆರಾಧ್ಯ, ನಾಗಮಂಗಲ ಜಯರಾಮ್ ಸುನೀಲ್ ಮೋಹಿತೆ, ಉಗ್ರಂ ರೆಡ್ಡಿ ಮುಂತಾದ ನೂರಕ್ಕು ಹೆಚ್ಚು ಕಲಾವಿಧರು ಅಭಿನಯಿಸಿರುವ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಹಾಗೂ ನಿರ್ದೇಶನವನ್ನು ಡಾ.ಗಿರಿಧರ್ ಹೆಚ್ ಟಿ ,ಸಿನೇಮಾಟೊಗ್ರಪಿಯನ್ನು ಕೆ ರಾಮ್, ಸಂಕಲನ ಸಂಜೀವ್ ರೆಡ್ಡಿ, ಸಂಗೀತವನ್ನು ಕ್ರಿಸ್ಟೋಫರ್ ಜೇಸನ್ ಮಾಡಿದ್ದಾರೆ. ನಿರ್ಮಾಪಕರು ವಿನೋದ್ ಶೇಷಾದ್ರಿ ಅವರು ವಿಲೇಜ್ ರೋಡ್ ಫಿಲಂಸ್ ಲಾಂಚನದಲ್ಲಿ ನಿರ್ಮಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]