Tag: poster

  • ರಂಜಾನ್ ವೇಳೆ ಸಂಘ ಪರಿವಾರದ ವಿರುದ್ಧ ವಿವಾದಿತ ಪೋಸ್ಟರ್ ಪ್ರದರ್ಶನ – ಎಸ್‌ಡಿಪಿಐ ಮುಖಂಡನ ಬಂಧನ

    ರಂಜಾನ್ ವೇಳೆ ಸಂಘ ಪರಿವಾರದ ವಿರುದ್ಧ ವಿವಾದಿತ ಪೋಸ್ಟರ್ ಪ್ರದರ್ಶನ – ಎಸ್‌ಡಿಪಿಐ ಮುಖಂಡನ ಬಂಧನ

    ಹುಬ್ಬಳ್ಳಿ: ರಂಜಾನ್ (Ramzan) ಪ್ರಾರ್ಥನೆ ವೇಳೆ ಸಂಘ ಪಾರಿವಾರದ ವಿರುದ್ಧ ಅವಹೇಳನಕಾರಿ ಪ್ಲೇ ಕಾರ್ಡ್ ಪ್ರದರ್ಶಿಸಿದ್ದ ಪ್ರಕರಣದಲ್ಲಿ ಎಸ್‌ಡಿಪಿಐ ಮುಖಂಡನನ್ನು (SDPI Leader) ಪೊಲೀಸರು ಬಂಧಿಸಿದ್ದಾರೆ.

    ಎಸ್‌ಡಿಪಿಐ ಮುಖಂಡ ಅಬ್ದುಲ್ ಗಪ್ಪುರ್ ಕುರಹಟ್ಟಿ ಬಂಧಿತ ಆರೋಪಿ. ಇದನ್ನೂ ಓದಿ: Hubballi | ರಂಜಾನ್ ಆಚರಣೆ ವೇಳೆ ಎಸ್‌ಡಿಪಿಐನಿಂದ ವಿವಾದಿತ ಪೋಸ್ಟರ್‌ಗಳ ಪ್ರದರ್ಶನ

    ಪ್ರಾರ್ಥನೆ ವೇಳೆ ಎಸ್‌ಡಿಪಿಐ ಕಾರ್ಯಕರ್ತರು ಸಂಘ ಪರಿವಾರಗಳ ವಿರುದ್ಧ ಪ್ಲೇ ಕಾರ್ಡ್ ತೋರಿಸಿದ್ದರು. ಇದರಿಂದ ಆಕ್ರೋಶಗೊಂಡು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೂ ಓದಿ: ಮಹಿಳೆ ಅನುಮಾನಾಸ್ಪದ ಸಾವು – ಪತಿಯ ಅಕ್ರಮ ಸಂಬಂಧದಿಂದ ಕೊಲೆ ಆರೋಪ

    ದೂರಿನ ಅನ್ವಯ ಅಬ್ದುಲ್ ಗಪ್ಪುರ್ ಕುರಹಟ್ಟಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಅಬ್ದುಲ್ ಗಪ್ಪುರ್‌ನನ್ನು ಬಂಧಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಭೂಕಂಪವಾಗಿದ್ರೂ ಸೈಟ್ ಫೈಲ್ ಕದಿಯಲು ಯತ್ನಿಸಿದ ಚೀನಿಯರು – ನಾಲ್ವರು ಅರೆಸ್ಟ್

    ಪೊಲೀಸರು ಅಬ್ದುಲ್ ಗಪ್ಪುರ್ ಮೊಬೈಲ್ ಫೋನ್ ಸಹ ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ಕೋರ್ಟ್ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

  • Hubballi | ರಂಜಾನ್ ಆಚರಣೆ ವೇಳೆ ಎಸ್‌ಡಿಪಿಐನಿಂದ ವಿವಾದಿತ ಪೋಸ್ಟರ್‌ಗಳ ಪ್ರದರ್ಶನ

    Hubballi | ರಂಜಾನ್ ಆಚರಣೆ ವೇಳೆ ಎಸ್‌ಡಿಪಿಐನಿಂದ ವಿವಾದಿತ ಪೋಸ್ಟರ್‌ಗಳ ಪ್ರದರ್ಶನ

    -ಹಿಂದೂ ಸಂಘಟನೆಗಳಿಂದ ಆಕ್ರೋಶ

    ಹುಬ್ಬಳ್ಳಿ: ರಂಜಾನ್ (Ramzan) ಆಚರಣೆ ಸಮಯದಲ್ಲಿ ಒಂದು ಕಡೆ ಶಾಂತಿಯುತ ರಂಜಾನ್ ಪ್ರಾರ್ಥನೆ ನಡೆಯುತ್ತಿದ್ದರೆ, ಮತ್ತೊಂದೆಡೆ ವಿವಿಧ ವಿಷಯಗಳ ಪ್ಲೇ ಕಾರ್ಡ್ ಹಿಡಿದು, ಕೈಗೆ ಕಪ್ಪು ಪಟ್ಟಿ ಧರಿಸಿ ಎಸ್‌ಡಿಪಿಐ (SDPI) ಕಾರ್ಯಕರ್ತರು ಅಸಮಾಧಾನ ಹೊರಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿ ಪ್ಯಾಲೆಸ್ಟಿನ್‌ನಲ್ಲಿ ಯುದ್ಧ ನಿಲ್ಲಬೇಕು, ಎಸ್‌ಡಿಪಿಐ ಅಧ್ಯಕ್ಷ ಎಂಕೆ ಫೈಜಿ ಬಿಡುಗಡೆಯಾಗಬೇಕು, ವಕ್ಫ್ ಆಸ್ತಿ ಎಂದಿಗೂ ಮುಸ್ಲಿಮರದ್ದೇ, ದೇಶ, ಮನಸ್ಸು ಒಡೆದವರು ಮುಸ್ಲಿಂ ಆಸ್ತಿ ಮೇಲೆ ಕಣ್ಣು ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರ, ಸಂಘಪರಿವಾರ ಗುರಿಯಾಗಿಟ್ಟುಕೊಂಡು ವಿವಿಧ ಪೋಸ್ಟರ್‌ಗಳ (Poster) ಪ್ರದರ್ಶನ ಮಾಡಲಾಗಿದೆ. ಇದನ್ನೂ ಓದಿ: ಚಿತ್ರದುರ್ಗ| ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ – 108 ಪ್ರಕರಣ ದಾಖಲು, 575 ಜೂಜುಕೋರರು ವಶಕ್ಕೆ

    ಕೂಡಲೇ ಎಚ್ಚೆತ್ತ ಪೊಲೀಸರು, ಪ್ರತಿಭಟನೆಗೆ ಕಡಿವಾಣಹಾಕಿದರು. ಈ ಬಗ್ಗೆ ಮಾತನಾಡಿದ ಎಸ್‌ಡಿಪಿಐ ಮುಖಂಡರು, ದೇಶದಲ್ಲಿ ಮುಸ್ಲಿಂ ಪರಿಸ್ಥಿತಿ ಸರಿಯಲ್ಲ. ಮುಸ್ಲಿಮರ ಪರವಾಗಿ ಎಸ್‌ಡಿಪಿಐ ಧ್ವನಿಯಾಗಿದೆ. ಎಸ್‌ಡಿಪಿಐ ಬ್ಯಾನ್ ಮಾಡಲು ಆಗಲ್ಲ. ಬರೀ ಜಿಲ್ಲಾ ಪಂಚಾಯತಿ, ಪಾಲಿಕೆ ಅಷ್ಟೇ ಅಲ್ಲಾ ಮುಂದಿನ ಬಾರಿ ಎಂಎಲ್‌ಎ, ಎಂಪಿ ಸ್ಥಾನ ಸಹ ಗೆಲ್ಲುತ್ತೆವೆ. ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲಸಬೇಕು. ನಿಜವಾದ ಉಗ್ರರು ಇಸ್ರೇಲ್‌ನವರು ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Explained: ಮುಂಬೈ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ರೋಹಿತ್‌ಗೆ ಇಲ್ಲ ಸ್ಥಾನ

    ಸಂಘಪರಿವಾರ ಅವಹೇಳನ ಮಾಡಿ ಪ್ಲೇ ಕಾರ್ಡ್ ಪ್ರದರ್ಶನ ಹಿನ್ನೆಲೆ ಹಿಂದೂಪರ ಸಂಘಟನೆಗಳು ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ದೂರು ದಾಖಲಿಸಿದೆ. ಹಿಂದೂಗಳ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂ ವಕೀಲರ ಸಂಘದಿಂದ ದೂರು ಕೊಡಲಾಗಿದೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್‌ಐಆರ್ ದಾಖಲು ಮಾಡುವಂತೆ ಆಗ್ರಹಿಸಿದ್ದಾರೆ. ಠಾಣೆಯ ಮುಂದೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಎಸ್‌ಡಿಪಿಐ ಬ್ಯಾನ್ ಮಾಡುವಂತೆ ಆಗ್ರಹಿಸಿದೆ. ಇದನ್ನೂ ಓದಿ: ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ – ಆಡಿಯೋದಲ್ಲಿ ಮಾತನಾಡಿರುವ ಪುಷ್ಪಾ ಯಾರು? ಹಿನ್ನೆಲೆ ಏನು?

  • ಉಪ್ಪಿ ಹುಟ್ಟು ಹಬ್ಬಕ್ಕೆ ’45’ ಚಿತ್ರತಂಡದಿಂದ ವಿಶೇಷ ಪೋಸ್ಟರ್

    ಉಪ್ಪಿ ಹುಟ್ಟು ಹಬ್ಬಕ್ಕೆ ’45’ ಚಿತ್ರತಂಡದಿಂದ ವಿಶೇಷ ಪೋಸ್ಟರ್

    ಟ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya)  ಚೊಚ್ಚಲ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಮಾ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಬಹು ನಿರೀಕ್ಷಿತ “45” ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ.

    ಸೆಪ್ಟೆಂಬರ್ 18 ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರ ಚಿತ್ರತಂಡ ಉಪೇಂದ್ರ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದೆ. ಉಪೇಂದ್ರ ಅವರ ನಿವಾಸಕ್ಕೆ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಅರ್ಜುನ್ ಜನ್ಯ ಮುಂತಾದವರು ಭೇಟಿ ನೀಡಿ  ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

    ಇದೇ ಮೊದಲ ಬಾರಿಗೆ ಅರ್ಜುನ್ ಜನ್ಯ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪರಿಚಯ ಆಗುತ್ತಿದ್ದು, ಬಹುತೇಕ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಈ ಸಿನಿಮಾ ಅದ್ಧೂರಿಯಾಗಿ ಮೂಡಿ ಬರುತ್ತಿದ್ದು, ರಮೇಶ್ ರೆಡ್ಡಿ ಅವರ ಪತ್ನಿ ಉಮಾ ಚಿತ್ರದ ನಿರ್ಮಾಪಕರು.

  • ಧನುಷ್ ನಟನೆಯ ‘ಕುಬೇರ’ ಅಡ್ಡಾದಿಂದ ನಯಾ ಪೋಸ್ಟರ್ ರಿಲೀಸ್

    ಧನುಷ್ ನಟನೆಯ ‘ಕುಬೇರ’ ಅಡ್ಡಾದಿಂದ ನಯಾ ಪೋಸ್ಟರ್ ರಿಲೀಸ್

    ಣೇಶ ಹಬ್ಬಕ್ಕೆ ಬಿಡಿಗಡೆಯಾಯ್ತು `ಕುಬೇರ’ (Kubera)  ಸಿನಿಮಾದ ಪೋಸ್ಟರ್. ಅಕ್ಕಿನೇನಿ ನಾಗಾರ್ಜುನ್ (Nagarjuna) ಹಾಗೂ ಧನುಷ್  (Dhanush) ಕಾಂಬಿನೇಷನ್‌ನ ಕುಬೇರ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಫಸ್ಟ್ಲುಕ್ ಟೀಸರ್ ಹಾಗೂ ಪೋಸ್ಟರ್‌ಗಳಿಂದಲೇ ಗಮನ ಸೆಳೆದಿರುವ `ಕುಬೇರ’ ಸಿನಿಮಾದಲ್ಲಿ ನಾಗಾರ್ಜುನ್ ಹಾಗೂ ಧನುಷ್ ಜೋಡಿ ಫಾರ್ ದಿ ಫಸ್ಟ್ ಟೈಂ ಸ್ಕ್ರೀನ್ ಶೇರ್ ಮಾಡಿದೆ. ಹೀಗಾಗಿಯೇ ನಾಗಾರ್ಜುನ್ ಫ್ಯಾನ್ಸ್ ಹಾಗೂ ಧನುಷ್ ಫ್ಯಾನ್ಸ್ ಸಿನಿಮಾ ನೋಡೋಕೆ ತುದಿಗಾಲ್ಲಿ ನಿಂತು ಕಾಯ್ತಿದ್ದಾರೆ.

    ಶೇಖರ್ ಕಮ್ಮುಲಾ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ನಾಯಕಿಯಾಗಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ತೆರೆ ಹಂಚಿಕೊಂಡಿದ್ದಾರೆ. ನಾಯಕಿ ಇಂಟ್ರುಡಕ್ಷನ್ ಗ್ಲಿಂಪ್ಸ್ ಮೂಲಕವೇ ಅಟ್ರ್ಯಾಕ್ಟ್ ಮಾಡಿದ್ದಾರೆ ಕೊಡಗಿನ ಕುವರಿ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನಲ್ಲಿ ತಯಾರಾಗ್ತಿರುವ `ಕುಬೇರ’ ಚಿತ್ರ ಡಿಸೆಂಬರ್ 31ಕ್ಕೆ ದೇಶದಾದ್ಯಂತ ಬೆಳ್ಳಿ ಪರದೆಯಲ್ಲಿ ತನ್ನ ಆಟವನ್ನ ಶುರು ಮಾಡಲಿದೆ.

    ಗಣೇಶ್ ಚತುರ್ಥಿ ವಿಶೇಷವಾಗಿ ಸಿನಿಮಾದ ಪೋಸ್ಟರ್‌ನ್ನ ಬಿಡುಗಡೆ ಮಾಡಿ ಧನುಷ್ ಅಭಿಮಾನಿಗಳಿಗೆ ಸರ್ಪೈಸ್  ಕೊಟ್ಟಿದೆ ಚಿತ್ರತಂಡ. ಇದೇ ವರ್ಷದಲ್ಲಿ ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಹಾಗೂ ರಾಯನ್ ಸಿನಿಮಾ ತೆರೆಕಂಡಿವೆ. ಇದೇ ವರ್ಷ ಎರಡು ಸಿನಿಮಾಗಳು ತೆರೆಕಂಡರೂ ಹೇಳಿಕೊಳ್ಳುವ ಮಟ್ಟಿಗೆ ಹಿಟ್ ಆಗಿಲ್ಲ. ಇದೇ ವರ್ಷದ ಕೊನೆಯಲ್ಲಿ ತೆರೆಕಾಣಲು ಸಿದ್ಧವಾಗಿರುವ `ಕುಬೇರ’ ಸಿನಿಮಾ ಮೇಲೆ ಭಾರಿ ನಿರೀಕ್ಷೆಗಳಿವೆ.

    ಐದು ಭಾಷೆಗಳಲ್ಲಿ ತಯಾರಾಗಿರುವ `ಕುಬೇರ’ ಚಿತ್ರತಂಡದಲ್ಲಿ ಧನುಷ್‌ಗೆ ನಾಗಾರ್ಜುನ್ ಹಾಗೂ ರಶ್ಮಿಕಾ ಸಾಥ್ ಕೊಟ್ಟಿರೋದು ಮತ್ತಷ್ಟು ಮೈಲೇಜ್ ಸಿಕ್ಕಂತಾಗಿದೆ. ಸದ್ಯ ಗಣೇಶ ಚತುರ್ಥಿ ವಿಶೇಷವಾಗಿ ಪೋಸ್ಟರ್ ನೋಡಿ ಭಕ್ತಗಣ ಕುಣಿದು ಕುಪ್ಪಳಿಸಿದೆ. ಇನ್ನೇನಿದ್ರೂ ಡಿಸೆಂಬರ್‌ಗೆ ಸಿನಿಮಾ ಕಣ್ತುಂಬಿಕೊಳ್ಳೋಕೆ ಕ್ಯೂರಿಯಾಸಿಟಿಯಿಂದ ಕಾಯ್ತಿದ್ದಾರೆ ಧನುಷ್ ಫ್ಯಾನ್ಸ್.

  • ‘ಮಿಸ್ಟರ್ ಅಂಡ್ ಮಿಸಸ್  ರಾಜಾ ಹುಲಿ’ ಪೋಸ್ಟರ್  ರಿಲೀಸ್ ಮಾಡಿದ ವೀರೇಂದ್ರ ಹೆಗ್ಗಡೆ

    ‘ಮಿಸ್ಟರ್ ಅಂಡ್ ಮಿಸಸ್ ರಾಜಾ ಹುಲಿ’ ಪೋಸ್ಟರ್ ರಿಲೀಸ್ ಮಾಡಿದ ವೀರೇಂದ್ರ ಹೆಗ್ಗಡೆ

    ಹೊನ್ನರಾಜ್ ನಿರ್ದೇಶನದ ‘ಮಿಸ್ಟರ್ ಅಂಡ್ ಮಿಸಸ್’ (Mr. and Mrs. Raja Huli) ರಾಜಾಹುಲಿ  ಚಿತ್ರವೀಗ ಸಿದ್ದವಾಗಿದೆ‌.   ಹೊನ್ನರಾಜ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುವ ಜೊತೆಗೆ ಚಿತ್ರದ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅಲ್ಲದೆ  ನಿರ್ಮಾಣವನ್ನೂ ಮಾಡಿದ್ದಾರೆ. ಈ ಚಿತ್ರದ ನೂತನ ಪೋಸ್ಟರನ್ನು  ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಧರ್ಮಸ್ಥಳದಲ್ಲಿ  ಬಿಡುಗಡೆ ಮಾಡಿದರು.

    ಈ ಸಂದರ್ಭದಲ್ಲಿ  ನಾಯಕ ಹೊನ್ನರಾಜ್, ರಾಜೇಂದ್ರ, ನಂದಿಹಳ್ಳಿ ಶಿವಣ್ಣ, ಜಗದೀಶ್ , ಸಹನಿರ್ದೇಶಕ ಪ್ರಕಾಶ್ ವೆಂಕಟರಮಣ, ಸ್ಟಿಲ್ ವೆಂಕಟೇಶ್, ಮೋಹನ್, ಜಗನ್ನಾಥ್  ಇತರರಿದ್ದರು. ನೈಜ ಘಟನೆಯನ್ನು ಆಧರಿಸಿ ನಿರ್ಮಾಣವಾಗಿರುವ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಚಿತ್ರ ಇದಾಗಿದೆ. ಇಲ್ಲಿ ನಾಯಕ  ಯಶ್ ಅಭಿಮಾನಿ, ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು‌,  ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ನಾಯಕ  ಮದುವೆ ಆಗ್ತಾನೋ ಇಲ್ಲವೋ, ಎನ್ನುವುದೇ ಚಿತ್ರದ ಕಥಾಹಂದರ.

     

    ಈ ಚಿತ್ರಕ್ಕೆ ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ನಾಯಕಿ ಶೃತಿ ಬಬಿತ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಶ್ರೀನಿವಾಸ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ವಿನು ಮನಸು ಅವರ ಸಂಗೀತ, ಶಿವಪುತ್ರ ಅವರ ಛಾಯಾಗ್ರಹಣ, ಗಿರೀಶ್ ಅವರ  ನೃತ್ಯ ನಿರ್ದೇಶನ‌ಈ ಚಿತ್ರಕ್ಕಿದೆ. ಮೈಸೂರು ಮಂಜುಳ , ರೇಖಾದಾಸ್ ಮತ್ತಿತರರು ಈ ಚಿತ್ರದಲ್ಲಿದ್ದಾರೆ.

  • ‘ರುದ್ರ ಗರುಡ ಪುರಾಣ’ ಪೋಸ್ಟರ್ ರಿಲೀಸ್ : ರಿಷಿಗೆ ಬರ್ತ್ ಡೇ ಗಿಫ್ಟ್

    ‘ರುದ್ರ ಗರುಡ ಪುರಾಣ’ ಪೋಸ್ಟರ್ ರಿಲೀಸ್ : ರಿಷಿಗೆ ಬರ್ತ್ ಡೇ ಗಿಫ್ಟ್

    ಪುನೀತ್ ರಾಜಕುಮಾರ್‌ ನಿರ್ಮಾಣದ “ಕವಲುದಾರಿ” ಸೇರಿದಂತೆ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಕನ್ನಡಿಗರ ಮನ ಗೆದ್ದಿರುವ ಹಾಗೂ “ಶೈತಾನ್” ವೆಬ್ ಸಿರೀಸ್ ಮೂಲಕ ತೆಲುಗಿನಲ್ಲೂ ಮನೆಮಾತಾಗಿರುವ ನಟ ರಿಷಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ.  ಈ ಸಂದರ್ಭದಲ್ಲಿ ರಿಷಿ ನಾಯಕರಾಗಿ ನಟಿಸಿರುವ “ರುದ್ರ ಗರುಡ ಪುರಾಣ” ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಿಷಿ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದೆ‌.

    ಈಗಾಗಲೇ ಚಿತ್ರೀಕರಣ ಪೂರೈಸಿರುವ ಈ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ.  ರಿಷಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ(ತನಿಖಾಧಿಕಾರಿ)  ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್ ಲುಕ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಚಿತ್ರದ ಫಸ್ಟ್ ಲುಕ್ ಗೆ ರಿಷಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  “ಡಿಯರ್ ವಿಕ್ರಮ್” ಚಿತ್ರ ನಿರ್ದೇಶಿಸಿರುವ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಕೆಪಿ ಸಂಗೀತ ನಿರ್ದೇಶನ, ಸಂದೀಪ್ ಕುಮಾರ್ ಛಾಯಾಗ್ರಹಣ ಹಾಗೂ ಮನು ಶೇಡ್ಗಾರ್ ಸಂಕಲನ ಈ ಚಿತ್ರಕ್ಕಿದೆ.

    ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ, ಕೆ.ಎಸ್ ಶ್ರೀಧರ್, ಅಶ್ವಿನಿ ಗೌಡ,  ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ರಂಗನಾಥ್ ಭಾರದ್ವಾಜ್, ಕಾಮಿಡಿ ಕಿಲಾಡಿಗಳು ಜಗಪ್ಪ, ಪ್ರಸನ್ನ ಹಂಡ್ರಂಗಿ, ರಿದ್ವಿ ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ‌ಮಾಡುವ ಮೂಲಕ ಪ್ರಚಾರ ಕಾರ್ಯ ಪ್ರಾರಂಭಿಸುವುದಾಗಿ ತಿಳಿಸಿರುವ ನಿರ್ದೇಶಕರು ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎನ್ನುತ್ತಾರೆ.

  • ಪ್ರಜ್ವಲ್ ರೇವಣ್ಣ ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ – ಪೋಸ್ಟರ್ ಅಂಟಿಸಿದ್ದವರು ಪೊಲೀಸರ ವಶಕ್ಕೆ

    ಪ್ರಜ್ವಲ್ ರೇವಣ್ಣ ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ – ಪೋಸ್ಟರ್ ಅಂಟಿಸಿದ್ದವರು ಪೊಲೀಸರ ವಶಕ್ಕೆ

    ಬೆಂಗಳೂರು: ಆರೋಪಿ ಪ್ರಜ್ವಲ್ ರೇವಣ್ಣನನ್ನು (Prajwal Revanna) ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಪೋಸ್ಟರ್ (Poster) ಅಂಟಿಸಿದ್ದ ಜನತಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಆರೋಪಿ ಪ್ರಜ್ವಲ್ ರೇವಣ್ಣನನ್ನು ಹುಡುಕುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ಆರೋಪಿ ಪ್ರಜ್ವಲ್ ರೇವಣ್ಣನನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ಕೊಡುವುದಾಗಿ ಜನತಾ ಪಕ್ಷದ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದರು. ಇದನ್ನೂ ಓದಿ: ಕ್ಲೀನ್‌ ಚಿಟ್‌ ಕೊಡೋಕೆ ಪ್ರಜ್ವಲ್‌ ಕೇಸನ್ನ ಸಿಬಿಐಗೆ ವಹಿಸಬೇಕಾ: ಎಂ.ಬಿ.ಪಾಟೀಲ್‌ ಪ್ರಶ್ನೆ

    ಸದ್ಯ ಪೋಸ್ಟರ್ ಅಂಟಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಹುಮಾನ ಘೋಷಿಸಿ ಅಂಟಿಸಿದ್ದ ಪೋಸ್ಟರ್ ಅನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರಿಯುತ್ತೆ: ಬಿಎಸ್‌ವೈ

  • ‘ಕೊರಗಜ್ಜ’ ಚಿತ್ರಕ್ಕೆ ಅಭಯ ನೀಡಿದ ದೈವ ಕೊರಗಜ್ಜ

    ‘ಕೊರಗಜ್ಜ’ ಚಿತ್ರಕ್ಕೆ ಅಭಯ ನೀಡಿದ ದೈವ ಕೊರಗಜ್ಜ

    ತ್ರಿವಿಕ್ರಮ ಸಪಲ್ಯ ನಿರ್ಮಾಣದ, ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ನಡಿ, ಸುಧೀರ್ ಅತ್ತಾವರ್ (Sudhir Attavar) ನಿರ್ದೇಶನದ  ಅತೀ ನಿರೀಕ್ಷಿತ  ಕೊರಗಜ್ಜ ಸಿನಿಮಾದ ‘ಮೋಷನ್ ಪೋಸ್ಟರ್‌’ ಜೊತೆ ಫಸ್ಟ್ ಲುಕ್ ಸಿದ್ಧಗೊಂಡಿದ್ದು, ಕೊರಗಜ್ಜ (Koragajja) ದೈವದ ಕಳೆ-ಕಾರ್ಣಿಕ ಮತ್ತು ಪಾವಿತ್ರ್ಯತೆಗೆ ಯಾವುದೇ ಧಕ್ಕೆ ಬಾರದಂತೆ ಅದನ್ನು ವಿನ್ಯಾಸ ಗೊಳಿಸಿ ಮೊದಲಿಗೆ ಕೊರಗಜ್ಜ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತೆ ವಿಷೇಶ ಕೋಲಸೇವೆ ನೀಡಿ, ಅದೇ ಸಮಯದಲ್ಲಿ   ಶ್ರೀ ದೈವಗಳ ಸಮಕ್ಷಮದಲ್ಲಿ ದೈವದ (Daiva) ಒಪ್ಪಿಗೆಗಾಗಿ  ಪ್ರದರ್ಶಿಸಿದರು. ಶ್ರೀ ದೈವಗಳಿಂದ ಫಸ್ಟ್ ಲುಕ್ ಅನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ಅನುಮತಿಯನ್ನು ಭಯ-ಭಕ್ತಿಯಿಂದ ಬೇಡಿಕೊಂಡು, ಒಪ್ಪಿಗೆ ಪಡೆಯಲಾಯ್ತು.

    ಆದರೆ ಎಲ್ಲೆಂದರಲ್ಲಿ ಈ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರನ್ನು ದೈವಕ್ಕೆ ಅಪಚಾರ ಆಗುವ ರೀತಿಯಲ್ಲಿ ಸಾರ್ವಜನಿಕರು ದುರುಪಯೋಗ ಪಡಿಸಬಾರದು ಎಂದು ದೈವಗಳು ಅಪ್ಪಣೆ ನೀಡಿದವು.ಮೋಷನ್ ಪೋಸ್ಟರನ್ನು ವಿಶೇಷವಾಗಿ ವಿನ್ಯಸಗೊಳಿಸಿದ್ಧರೂ ದೈವಗಳು ಒಪ್ಪಿಗೆ ನೀಡದಿದ್ದರೆ ಅದನ್ನು ಬಿಡುಗಡೆಗೊಳಿಸುವುದು ಅಸಾದ್ಯವಾಗಬಹುದಿತ್ತು.ಈ ರಿಸ್ಕನ್ನು ನಿರ್ದೇಶಕ ಮತ್ತು  ನಿರ್ಮಾಪಕರು ತೆಗೆದುಕೊಂಡಿದ್ದರು. ಚಿತ್ರತಂಡವು ಪ್ರತೀ ಹಂತದಲ್ಲೂ ಕೊರಗಜ್ಜ ಹಾಗೂ ಶ್ರೀ ದೈವಗಳ ಆಶಿರ್ವಾದ ಪಡೆದೇ ಮುಂದಡಿ ಇಡುತ್ತಿರುವುದು ವಿಶೇಷ.

     

    ಈ ಅಪರೂಪದ  ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಮೋಟಮ್ಮ, ಖ್ಯಾತ ಕಲಾವಿದೆ ಭವ್ಯ ಮತ್ತು ಸುಪುತ್ರಿ ಅದಿತಿ, ಎಡಿಟರ್ ಈಪಿ ವಿದ್ಯಾಧರ್ ಶೆಟ್ಟಿ, ಖ್ಯಾತ ಗಾಯಕ ರಮೇಶ್ಚಂದ್ರ, ನಾಯಕ ನಟ ಭರತ್ ಸೂರ್ಯ, ಶ್ಲಾಘ್ಯ ಕಮಲಿನಿ  ಹಾಗೂ ಚಿತ್ರತಂಡದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು.

  • ‘ರಣ ರಾಕ್ಷಸ’ ಚಿತ್ರದ ಪೋಸ್ಟರ್ ರಿಲೀಸ್

    ‘ರಣ ರಾಕ್ಷಸ’ ಚಿತ್ರದ ಪೋಸ್ಟರ್ ರಿಲೀಸ್

    ಚಂದನವನಕ್ಕೆ ಹೊಸ ಪ್ರತಿಭೆಗಳ ಆಗಮನ ಆರೋಗ್ಯಕರ ಬೆಳವಣಿಗೆಯಾಗಿದೆ. ಅದೇ ಸಾಲಿನಲ್ಲಿ ’ರಣ ರಾಕ್ಷಸ’ (Rana Rakshasa) ಚಿತ್ರವೊಂದು ಸದ್ದಿಲ್ಲದೆ ಸೆನ್ಸಾರ್‌ನಿಂದ ಪ್ರಶಂಸೆ ಪಡೆದುಕೊಂಡಿದೆ. ಮೊನ್ನೆಯಷ್ಟೇ ನಾಯಕ ಮತ್ತು ನಿರ್ಮಾಪಕ ಹೆಚ್.ಪಿ.ನರಸಿಂಹಸ್ವಾಮಿ (Narasimhaswamy) ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಿನಿಮಾದ ಪೋಸ್ಟರ್ (Poster) ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ನಾಂದಿ ಹಾಕಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕರು ತಂದೆ ರಂಗಭೂಮಿ ಕಲಾವಿದರು. ಅವರ ಬಳುವಳಿಯಿಂದಲೇ ನನಗೂ ಚಿಕ್ಕ ವಯಸ್ಸಿಗೆ ಅಭಿನಯದ ಗೀಳು ಹುಟ್ಟಿಕೊಂಡಿತು.  ನಂತರ ಉದ್ಯಮದಲ್ಲಿ ಯಶಸ್ಸು ಕಂಡು ಚಿತ್ರಮಂದಿರ ಮಾಲೀಕನಾದೆ. ಇದೆಲ್ಲಾದರ ಅನುಭವದಿಂದ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿ ನಾಯಕನಾಗಿ ಕಾಣಿಸಿಕೊಂಡಿದ್ದೇನೆ.

    ’ರಣ ರಾಕ್ಷಸ’ ಚಿತ್ರವು ತಂದೆ ಮಗಳ ಸಂಬಂಧವನ್ನು ಹೇಳಲಿದೆ. ’ಚಿಟ್ಟೆಮ್ಯಾನ್’ ಫ್ಯಾಂಟಸಿ ಕಥೆ. ’ಡಾನ್ ಶಿವ’ ಹೆಸರೇ ಹೇಳುವಂತೆ ಇದೊಂದು ಭೂಗತಲೋಕದ ಅಂಶಗಳನ್ನು ಒಳಗೊಂಡಿದೆ. ಕೊನೆಯ ಸಿನಿಮಾ ’ಕೊರಗಜ್ಜ’ ಚಿತ್ರವು ’ಕಾಂತಾರ’ದಂತೆ ಮೂಡಿಬರಲಿದ್ದು, ಶೂಟಿಂಗ್ ಹಂತದಲ್ಲಿದೆ. ಈ ಸಿನಿಮಾದ ಒಂದು ಹಾಡಿಗೆ ಸಾಹಿತ್ಯ ಬರೆದು ಹಾಡಿದ್ದೇನೆ. ನಾಲ್ಕರ ಪೈಕಿ ಎರಡು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದೇನೆ. ಎಲ್ಲಾ ಸಿನಿಮಾಗಳಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ಸದ್ಯಕ್ಕೆ ’ರಣ ರಾಕ್ಷಸ’ ಜನರಿಗೆ ತೋರಿಸಲು ಸಿದ್ದತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ.

    ರಚನೆ, ಚಿತ್ರಕಥೆ, ಸಂಭಾಷಣೆ, ಸಂಗೀತ ಹಾಗೂ ನಿರ್ದೇಶನ ಮುರಳಿ ಪ್ರಸಾದ್ ಅವರದಾಗಿದೆ. ತಾರಾಗಣದಲ್ಲಿ ಪುಣ್ಯಗೌಡ, ದತ್ತ, ದಿಲೀಪ್ ಮುಂತಾದವರು ನಟಿಸಿದ್ದಾರೆ. ಸಂಕಲನ ಭಾರ್ಗವ ನಿರ್ವಹಿಸಿದ್ದಾರೆ. ಬೆಂಗಳೂರು, ಹೆಸರುಘಟ್ಟ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶ್ರೀ ಲಕ್ಷೀ ನರಸಿಂಹಸ್ವಾಮಿ ಎಂಟರ್‌ಟೈನ್‌ಮೆಂಟ್ಸ್ ಅಡಿಯಲ್ಲಿರುವ ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.

  • ಯುಗಾದಿ ಹಬ್ಬಕ್ಕೆ ‘ಫುಲ್ ಮಿಲ್ಸ್’ ಚಿತ್ರದ ಸ್ಪೆಷಲ್ ಪೋಸ್ಟರ್

    ಯುಗಾದಿ ಹಬ್ಬಕ್ಕೆ ‘ಫುಲ್ ಮಿಲ್ಸ್’ ಚಿತ್ರದ ಸ್ಪೆಷಲ್ ಪೋಸ್ಟರ್

    ಸಂಕಷ್ಟಕರ ಗಣಪತಿ, ಫುಲ್ ಮಿಲ್ಸ್ , ಅಬ್ಬಬ್ಬ ಚಿತ್ರಗಳ ಖ್ಯಾತಿಯ ನಾಯಕ ನಟ ಲಿಖಿತ್ ಶೆಟ್ಟಿ ನಟಿಸಿ, ನಿರ್ಮಿಸುತ್ತಿರುವ ‘ಫುಲ್ ಮೀಲ್ಸ್’ ಚಿತ್ರತಂಡ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಚಿತ್ರದ ಇಬ್ಬರು ನಾಯಕಿಯರಾದ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಒಂದೇ ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವ ಪೋಸ್ಟರ್ ಇದಾಗಿದ್ದು,  ಎಲ್ಲರೂ ಒಟ್ಟಿಗೆ ಸೇರಿ ಮಾಡುವ ಸಂಭ್ರಮವೇ ಹಬ್ಬ ಎಂಬ ಥೀಮ್ ಮೇಲೆ ತಯಾರಾಗಿರುವ ಈ ಪೋಸ್ಟರ್ ಸುಂದರವಾಗಿ ಕಾಣುತ್ತಿದೆ.  ನೋಡುಗರ ಗಮನವನ್ನು ಸೆಳೆದಿದೆ.   ಸಿನೆಮಾಗೆ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲವು ಕೆಲಸಗಳು ಬಾಕಿಯಿದ್ದು, ಆದಷ್ಟು ಶೀಘ್ರದಲ್ಲಿ ಸಿನೆಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡವಿದೆ.

    ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಈ ಸಿನೆಮಾ, ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.

    ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.   ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ,  ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನವಿದೆ. ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಮುಂತಾದವರಿದ್ದಾರೆ.