Tag: Positive

  • ಕೆ.ಆರ್.ಪೇಟೆ ಪೇದೆಗೆ ಕೊರೊನಾ- 2 ಠಾಣೆ ಸೀಲ್‍ಡೌನ್

    ಕೆ.ಆರ್.ಪೇಟೆ ಪೇದೆಗೆ ಕೊರೊನಾ- 2 ಠಾಣೆ ಸೀಲ್‍ಡೌನ್

    ಮಂಡ್ಯ: ಮಳವಳ್ಳಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಯೊಬ್ಬರಿಗೆ ಕೊರೊನಾ ತಗುಲಿದ ಬೆನ್ನಲ್ಲೇ ಕೆ.ಆರ್.ಪೇಟೆ ಪಟ್ಟಣ ಠಾಣೆಯ ಮುಖ್ಯ ಪೇದೆಯೊಬ್ಬರಿಗೆ ಕೋವಿಡ್-19 ದೃಢಪಟ್ಟಿದೆ.

    ಕ್ರೈಂ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ಪೇದೆಯು ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ಕೊಟ್ಟಿದ್ದ ವೇಳೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಪೇಗೆ ಸೋಂಕು ದೃಢಪಡುತ್ತಿದ್ದಂತೆ ಅವರು ಭೇಟಿ ನೀಡಿದ್ದ ಕೆ.ಆರ್.ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳನ್ನು ನಾಲ್ಕು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ. ಇದನ್ನೂ ಓದಿ:  ಮಂಡ್ಯ, ಉಡುಪಿಯಲ್ಲಿ ಕೊರೊನಾ ಸ್ಫೋಟ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1605ಕ್ಕೆ ಏರಿಕೆ

    ಮುಖ್ಯ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಎರಡೂ ಠಾಣೆಗಳ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಸಂಬಂಧ ಮಾಹಿತಿ ಪಡೆದ ಮಂಡ್ಯ ಎಸ್‍ಪಿ ಪರಶುರಾಮ್ ಅವರು ಕೆ.ಆರ್.ಪೇಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್‍ಪಿ ಪರಶುರಾಮ್ ಅವರು, ಕೆ.ಆರ್.ಪೇಟೆ ಪಟ್ಟಣ ಠಾಣೆಯಲ್ಲಿನ ಮುಖ್ಯ ಪೇದೆಯೊಬ್ಬರಿಗೆ ಕೊರೊನಾ ರಿಪೋರ್ಟ್ ನಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಕೆ.ಆರ್ ಪೇಟೆ ಪಟ್ಟಣ ಹಾಗೂ ಗ್ರಾಮಾಂತರ ಠಾಣೆಗಳನ್ನ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದೆ. ಇಲ್ಲಿನ ಪ್ರಕರಣಗಳನ್ನ ಕಿಕ್ಕೇರಿ ಠಾಣೆಯಲ್ಲಿ ದಾಖಲಿಸಲು ಅವಕಾಶ ನೀಡಿದ್ದೇವೆ ಎಂದರು.

    ಕ್ವಾರಂಟೈನ್ ಕೇಂದ್ರಗಳಲ್ಲಿ ಭದ್ರತೆಗೆ ಬೇರೆ ತಾಲೂಕಿನ 31 ಜನ ಪೇದೆಗಳು ಕೆಲಸ ನಿರ್ವಹಿಸಲಿದ್ದಾರೆ. ಇಬ್ಬರು ಇನ್ಸ್‍ಪೆಕ್ಟರ್, ಇಬ್ಬರು ಸಬ್ ಇನ್ಸ್‍ಪೆಕ್ಟರ್, ಒಂದು ಕೆಎಸ್‍ಆರ್‍ಪಿ ಹಾಗೂ ಡಿಎಆರ್ ಪಡೆಯನ್ನು ನಿಯೋಜಿಸಲಾಗಿದೆ. ತಾಲೂಕಿನಲ್ಲಿ ಕೋವಿಡ್-19 ಕರ್ತವ್ಯಕ್ಕೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಲು ಕ್ರಮ ಕೈಕೊಳ್ಳಲಾಗಿದೆ ಎಂದು ತಿಳಿಸಿದರು.

  • ಉಡುಪಿಯಲ್ಲಿ ಇಂದು 6 ಕೊರೊನಾ ಕೇಸ್ – 21ಕ್ಕೇರಿದ ಸೋಂಕಿತರ ಸಂಖ್ಯೆ

    ಉಡುಪಿಯಲ್ಲಿ ಇಂದು 6 ಕೊರೊನಾ ಕೇಸ್ – 21ಕ್ಕೇರಿದ ಸೋಂಕಿತರ ಸಂಖ್ಯೆ

    ಉಡುಪಿ: ಉಡುಪಿ ಜಿಲ್ಲೆಯಲ್ಲಿ ಆರು ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 21ಕ್ಕೇರಿದೆ.

    ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಈಗಾಗಲೇ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಓರ್ವ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು. ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‍ನಲ್ಲಿ ಇದ್ದ ಆರು ಮಂದಿಗೆ ಇಂದು ಸೋಂಕು ತಗುಲಿದೆ. ಸೋಂಕಿತರನ್ನು ಕ್ವಾರಂಟೈನ್ ಸೆಂಟರ್ ಗಳಿಂದ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

    ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಕ್ವಾರಂಟೈನ್‍ನಲ್ಲಿ ಇರುವ ಒಬ್ಬರು ವೃದ್ಧರಿಗೆ ಮತ್ತು ಯುವಕರಿಗೆ ಕೋವಿಡ್-19 ದೃಢಪಟ್ಟಿದೆ. ಕುಂದಾಪುರ ಕ್ವಾರಂಟೈನ್ ಸೆಂಟರ್‍ನ ಇಬ್ಬರು ಬಾಲಕಿಯರಿಗೆ ಸೋಂಕು ತಗುಲಿದೆ. ಅವರ ವಯಸ್ಸು 15 ಮತ್ತು 4 ವರ್ಷ ಎಂಬ ಮಾಹಿತಿ ಇದೆ. ಹೆಬ್ರಿ ತಾಲೂಕಲ್ಲಿ ಕ್ವಾರಂಟೈನ್ ನಲ್ಲಿ ಇರುವ 31 ವರ್ಷ ಹಾಗೂ 47 ವರ್ಷದ ಇಬ್ಬರಿಗೆ ಕೊರೊನಾ ಕಂಡು ಬಂದಿದೆ. ದುಬೈನಿಂದ ಜಿಲ್ಲೆಗೆ 49 ಜನ ಬಂದಿದ್ದು, ಅವರ ಕೊರೊನಾ ಟೆಸ್ಟ್ ಇಂದಿನಿಂದ ಹಂತ ಹಂತವಾಗಿ ನಡೆಯುತ್ತಿದೆ.

  • ಇಂದು ನಾಲ್ವರಿಗೆ ಕೊರೊನಾ – ಹಾಸನದಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆ

    ಇಂದು ನಾಲ್ವರಿಗೆ ಕೊರೊನಾ – ಹಾಸನದಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆ

    ಹಾಸನ: ಹಾಸನದಲ್ಲಿ ಇಂದು ಕೂಡ ನಾಲ್ವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು ಸೋಂಕಿತರ ಸಂಖ್ಯೆ ಮೂವತ್ತಕ್ಕೇರಿದೆ.

    30 ಜನರೂ ಮುಂಬೈನಿಂದ ವಾಪಸ್ಸಾದವರಾಗಿದ್ದು, ಹಾಸನದಲ್ಲಿ ಕೊರೊನಾ ಪ್ರಕರಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇಂದು ಪಾಸಿಟಿವ್ ಬಂದ ನಾಲ್ವರಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದು ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರಾಗಿದ್ದಾರೆ.

    ಮತ್ತೋರ್ವ 17 ವರ್ಷದವನಾಗಿದ್ದು ಹೊಳೆನರಸೀಪುರ ತಾಲೂಕಿನ ಯುವಕನಾಗಿದ್ದಾನೆ. ಈತ ಮುಂಬೈನಿಂದ ಹಾಸನಕ್ಕೆ 5 ಜನರೊಂದಿಗೆ ಕಾರಿನಲ್ಲಿ ಬಂದಿದ್ದಾನೆ. ಉಳಿದ ನಾಲ್ವರು ಈತನನ್ನು ಹಾಸನಕ್ಕೆ ಬಿಟ್ಟು ಮಂಡ್ಯದ ಕೆಆರ್ ಪೇಟೆಗೆ ಹೋಗಿದ್ದಾರೆ. ಮುಂಬೈನಿಂದ ಬಂದಿರುವವರ ಪೈಕಿ ಇನ್ನೂ 420 ಜನರ ಫಲಿತಾಂಶ ಬರುವುದು ಬಾಕಿ ಇದ್ದು, ಸೋಂಕು ಮತ್ತಷ್ಟು ಹೆಚ್ಚಾಗುವ ಆತಂಕ ಮೂಡಿದೆ.

  • ಕೋಲಾರದಲ್ಲಿ ಕಳ್ಳನಿಗೆ ಕೊರೊನಾ – ಪೊಲೀಸ್ ಇಲಾಖೆಯಿಂದ ತಪ್ಪಿತು ಅನಾಹುತ

    ಕೋಲಾರದಲ್ಲಿ ಕಳ್ಳನಿಗೆ ಕೊರೊನಾ – ಪೊಲೀಸ್ ಇಲಾಖೆಯಿಂದ ತಪ್ಪಿತು ಅನಾಹುತ

    – ಜಿಲ್ಲಾಡಳಿತಕ್ಕೆ ತಲೆ ನೋವಾದ ಖದೀಮನ ಟ್ರಾವಲ್ ಹಿಸ್ಟರಿ

    ಕೋಲಾರ: ಕೋಲಾರದಲ್ಲಿ ಕಳ್ಳನಿಂದ ಪೊಲೀಸರಿಗೂ ಕೂಡ ಕೊರೊನಾ ಅತಂಕ ಶುರುವಾಗಿದೆ. ರೋಗಿ ಸಂಖ್ಯೆ 1128 ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಇದೀಗ ಕೆಜಿಎಫ್ ಪೊಲೀಸರನ್ನು ಬೆಚ್ಚಿ ಬೀಳಿಸಿದೆ.

    ಮೇ 14ರಂದು ಕೋಲಾರ ಜಿಲ್ಲೆಯ ಕೆಜಿಎಫ್‍ನ ಮಾರಿಕುಪ್ಪಂನಲ್ಲಿರುವ ಚಿನ್ನದ ಗಣಿಯಲ್ಲಿ ಐದು ಜನ ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದರು. ಈ ವೇಳೆ ನೂರಾರು ಅಡಿಯಲ್ಲಿರುವ ಚಿನ್ನದ ಗಣಿಯ ಗುಂಡಿಯಲ್ಲಿ ಬಿದ್ದು ಮೂವರು ಸಾವನ್ನಪ್ಪಿದ್ದರು. ಇನ್ನು ಐದು ಜನ ಕಳ್ಳರಲ್ಲಿ ಇಬ್ಬರು ಬಚಾವ್ ಅಗಿ ಪೊಲೀಸರ ಅತಿಥಿಯಾಗಿದ್ದರು.

    ಜೊತೆಗೆ ಇಬ್ಬರ ಮೃತ ದೇಹ ಪತ್ತೆಯಾಗಿದ್ದು, ಓರ್ವನ ಮೃತ ದೇಹಕ್ಕೆ ಇಂದೂ ಸಹ ಕಾರ್ಯಾಚರಣೆ ನಡೆಯುತ್ತಲೇ ಇದೆ. ಸೆರೆ ಸಿಕ್ಕ ಇಬ್ಬರು ಕಳ್ಳರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ, ನ್ಯಾಯಾಧೀಶರ ಆದೇಶದ ಮೇರೆಗೆ ಓರ್ವನಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಸದ್ಯ ಆತನಲ್ಲಿ ಸೋಂಕು ದೃಢವಾಗಿದ್ದು, ಆತನ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

    ಅದೃಷ್ಟವಶಾತ್ ಅಂದು ಕೆಜಿಎಫ್ ಪೊಲೀಸರು ತೆಗೆದುಕೊಂಡಿದ್ದ ಮುನ್ನೆಚ್ಚರಿಕೆ ಕ್ರಮದಿಂದ ಸಾಕಷ್ಟು ಪೊಲೀಸ್ ಅಧಿಕಾರಿಗಳು ಬಚಾವ್ ಆಗಿದ್ದಾರೆ. ಸೋಂಕು ಇರುವ ಲಕ್ಷಣ ಕಂಡ ಕೂಡಲೇ ಕಳ್ಳನನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಿದ್ದಾರೆ. ಜೊತೆಗೆ ಜಾಸ್ತಿ ಜನ ಪೊಲೀಸರು ಅವನ ವಿಚಾರಣೆಗೆ ಹೋಗಿಲ್ಲ. ಹೋದವರು ಸುರಕ್ಷಿತ ಕ್ರಮವನ್ನು ಅನುಸರಿಸಿದ್ದಾರೆ. ಇಲ್ಲವಾದಲ್ಲಿ ಕೆಜಿಎಫ್‍ನ ಅರ್ಧ ಪೊಲೀಸರು ಕ್ವಾರಂಟೈನ್ ಆಗುವ ಸಾಧ್ಯತೆ ಇತ್ತು.

    ಒಟ್ಟಾರೆ ಕಳ್ಳರಿಗೆ ಭಯ ಹುಟ್ಟಿಸುತ್ತಿದ್ದ ಪೊಲೀಸರು, ಇದೀಗ ಕೊರೊನಾ ಸೋಂಕಿತ ಕಳ್ಳನನ್ನ ಕಂಡು ಭಯ ಬೀಳುವಂತಾಗಿದೆ. ಈತ ಕೆಜಿಎಫ್ ನಗರದಲ್ಲೇ ಅಟೋ ಚಾಲಕನಾಗಿದ್ದ, ಈತನ ಟ್ರಾವಲ್ ಹಿಸ್ಟರಿ ಕೂಡ ತಲೆನೋವಾಗಿದೆ. ಈತನ ಮೂಲ ಪತ್ತೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

  • ಹಾಸನದಲ್ಲಿ ಇಂದು ಮತ್ತೆ 6 ಮಂದಿಗೆ ಕೊರೊನಾ – 26ಕ್ಕೇರಿದ ಸೋಂಕಿತರ ಸಂಖ್ಯೆ

    ಹಾಸನದಲ್ಲಿ ಇಂದು ಮತ್ತೆ 6 ಮಂದಿಗೆ ಕೊರೊನಾ – 26ಕ್ಕೇರಿದ ಸೋಂಕಿತರ ಸಂಖ್ಯೆ

    – ಈಗಾಗಲೇ ಹೊರರಾಜ್ಯದಿಂದ ಹಾಸನಕ್ಕೆ ಬಂದಿದ್ದಾರೆ 1400 ಜನ

    ಹಾಸನ: ಹಾಸನಕ್ಕೆ ಮುಂಬೈ ಕಂಟಕ ಮತ್ತೆ ಮುಂದುವರೆದಿದ್ದು, ಇಂದು ಒಂದೇ ದಿನ ಹಾಸನದಲ್ಲಿ ಆರು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

    ಇಂದು ಚನ್ನರಾಯಪಟ್ಟಣ ಮೂಲದ ಇಬ್ಬರು, ಆಲೂರು ಮೂಲದ ಒಂದೇ ಕುಟುಂಬದ ಮೂವರು, ಹೊಳೆನರಸೀಪುರದ ಒಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇವರೆಲ್ಲರೂ ಮುಂಬೈನಿಂದ ವಾಪಸ್ಸಾದವರಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ಆರು ಜನ ಸೋಂಕಿತರ ಜೊತೆ ಹಲವರು ಪ್ರಾಥಮಿಕ ಸಂಪರ್ಕದಲ್ಲಿದ್ದು ಸಂಜೆ ವೇಳೆಗೆ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಆರ್.ಗಿರೀಶ್ ಹೊಳೆನರಸೀಪುರ ಮೂಲದ ಒಬ್ಬರಿಗೆ ಪಾಸಿಟಿವ್ ಬಂದಿದೆ. ಇವರು ಒಂದೇ ಕುಟುಂಬದ ಮೂವರು ಬಾಂಬೆಯಿಂದ ಬಂದಿದ್ದು, 37 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಆಲೂರು ಮೂಲದ ಒಂದೇ ಕುಟುಂಬದ ಮೂವರಿಗೆ ಪಾಸಿಟಿವ್ ಬಂದಿದೆ. ಇವರ ಬಳಿ ಸ್ವಂತ ಲಾರಿಯಿದ್ದು, ಸ್ವಂತ ಲಾರಿಯಲ್ಲಿ ಹಾಸನಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಇಬ್ಬರಿಗೆ ಪಾಸಿಟಿವ್ ಬಂದಿದೆ ಇವರಲ್ಲಿ ಒಬ್ಬರು ಟೆಂಪೋ ಟ್ರಾವೆಲ್‍ನಲ್ಲಿ ಬಂದಿದ್ದಾರೆ. ಅವರ ಜೊತೆ ಒಟ್ಟು 13 ಜನ ಪ್ರಯಾಣಿಸಿದ್ದು, ಎಲ್ಲರೂ ಕ್ವಾರಂಟೈನ್‍ನಲ್ಲಿ ಇದ್ದಾರೆ. ಮತ್ತೊಬ್ಬರು ಒಟ್ಟು 15 ಜನರೊಂದಿಗೆ ಮುಂಬೈನಿಂದ ಪ್ರಯಾಣ ಮಾಡಿ ಚನ್ನರಾಯಪಟ್ಟಣಕ್ಕೆ ಬಂದಿದ್ದಾರೆ. 15 ಜನರಲ್ಲಿ ತುಮಕೂರಿನವರು 10 ಜನ, ಚನ್ನರಾಯಪಟ್ಟಣದವರು 5 ಜನ ಇದ್ದಾರೆ. ಎಲ್ಲರೂ ಕ್ವಾರಂಟೈನ್ ಮಾಡಲಾಗಿದೆ ಎಂದು ಗಿರೀಶ್ ಅವರು ಹೇಳಿದ್ದಾರೆ.

    ಇದುವರೆಗೂ ಹೊರರಾಜ್ಯದಿಂದ ಹಾಸನಕ್ಕೆ 1,400ಕ್ಕೂ ಹೆಚ್ಚು ಜನ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. 1,200ಕ್ಕೂ ಹೆಚ್ಚು ಜನ ಹೊರರಾಜ್ಯದಿಂದ ಹಾಸನಕ್ಕೆ ಬರಲು ನೋಂದಾಯಿಸಿಕೊಂಡಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.

  • ಇಂದು ಹಾಸನದಲ್ಲಿ ಮೂವರಿಗೆ ಕೊರೊನಾ- ಸೋಂಕಿತರೆಲ್ಲರೂ ಮುಂಬೈನಿಂದ ಬಂದವರು

    ಇಂದು ಹಾಸನದಲ್ಲಿ ಮೂವರಿಗೆ ಕೊರೊನಾ- ಸೋಂಕಿತರೆಲ್ಲರೂ ಮುಂಬೈನಿಂದ ಬಂದವರು

    – ಎಲ್ಲರೂ ಕ್ವಾರಂಟೈನ್‍ನಲ್ಲಿ ಇದ್ದರು

    ಹಾಸನ: ಜಿಲ್ಲೆಯಲ್ಲಿ ಇಂದು ಕೂಡ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಮೂಲಕ ಹಾಸನದಲ್ಲಿ ಸೋಂಕಿತರ ಸಂಖ್ಯೆ 19ಕ್ಕೇರಿದೆ.

    ಹಾಸನ ಜಿಲ್ಲೆಯಲ್ಲಿ ಮುಂಬೈನಿಂದ ಬಂದವರಿಂದ ಸೋಂಕು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಶುಕ್ರವಾರ ಮುಂಬೈನಿಂದ ಬಾಣಾವರಕ್ಕೆ ಕಾರಿನಲ್ಲಿ ಬಂದಿದ್ದ 21 ವರ್ಷದ ಯುವತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಾರಿನಲ್ಲಿ 7 ಮಂದಿ ಹಾಸನಕ್ಕೆ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಗಿರೀಶ್ ಮಾಹಿತಿ ನೀಡಿದ್ದಾರೆ.

    ಏಳು ಜನರನ್ನು ಅರಸೀಕೆರೆ ತಾಲೂಕಿನ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿದ್ದಾರೆ. ಎಲ್ಲರೂ ಹಾಸನ ಜಿಲ್ಲೆಯವರಾಗಿದ್ದು, ಕಾರಿನ ಚಾಲಕ ಹುಣಸೂರಿನವರು ಎಂದು ತಿಳಿದು ಬಂದಿದೆ. ಮೇ, 13ರಂದು ಮುಂಬೈನಿಂದ ಹಾಸನಕ್ಕೆ ಬಸ್‍ನಲ್ಲಿ ಬಂದಿದ್ದವರಲ್ಲಿ ಇಬ್ಬರಿಗೆ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬಸ್ಸಿನಲ್ಲಿ ಬಂದಿದ್ದ 50 ವರ್ಷದ ವ್ಯಕ್ತಿ ಮತ್ತು 63 ವರ್ಷದ ವೃದ್ಧನಿಗೆ ಪಾಸಿಟಿವ್ ಬಂದಿದೆ. ಇವರು ಎಲ್ಲೂ ಹೋಗದೆ ನೇರವಾಗಿ ಕ್ವಾರಂಟೈನ್‍ಗೆ ಬಂದಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.

    ಹಾಸನದಲ್ಲಿ ಇನ್ನು ಕೂಡ ಕೊರೊನಾ ಪಾಸಿಟಿವ್ ಬರುವ ಸಾಧ್ಯತೆ ಇದೆ. ಈಗ ಪಾಸಿಟಿವ್ ಬಂದವರ ಜೊತೆಗೆ 50ಕ್ಕೂ ಹೆಚ್ಚು ಜನ ಪ್ರಾಥಮಿಕ ಸಂಪರ್ಕದಲ್ಲಿ ಹೊಂದಿದ್ದಾರೆ. ಮುಂಬೈನಿಂದ ಎರಡು ಖಾಸಗಿ ಬಸ್ಸಿನಲ್ಲಿ ಹಾಸನಕ್ಕೆ ಬಂದವರಲ್ಲಿ ಈಗಾಗಲೇ ಕೊರೊನಾ ಕಾಣಿಸಿಕೊಂಡಿದೆ. ಒಂದು ಖಾಸಗಿ ಬಸ್ಸಿನಲ್ಲಿ ಕೊರೊನಾ ಪಾಸಿಟಿವ್ ಬಂದ ಮಹಿಳೆ ಜೊತೆ ಹಾಸನಕ್ಕೆ 20 ಜನ ಪ್ರಯಾಣಿಸಿದ್ದರು. ಮತ್ತೊಂದು ಖಾಸಗಿ ಬಸ್ಸಿನಲ್ಲಿ 26 ಜನ ಸೋಂಕಿತನೊಂದಿಗೆ ಪ್ರಯಾಣ ಮಾಡಿದ್ದರು. ಮುಂಬೈನಿಂದ ಬಂದ ಎಲ್ಲರನ್ನೂ ನೇರವಾಗಿ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು ಎಂದು ಡಿಸಿ ಹೇಳಿದ್ದಾರೆ.

  • ಸಕ್ಕರೆ ನಾಡನ್ನು ಬಿಡದ ಮುಂಬೈ ನಂಜು- 925 ಜನರ ವರದಿಗಾಗಿ ಕಾಯುತ್ತಿರೋ ಜಿಲ್ಲಾಡಳಿತ

    ಸಕ್ಕರೆ ನಾಡನ್ನು ಬಿಡದ ಮುಂಬೈ ನಂಜು- 925 ಜನರ ವರದಿಗಾಗಿ ಕಾಯುತ್ತಿರೋ ಜಿಲ್ಲಾಡಳಿತ

    ಮಂಡ್ಯ: ಸಕ್ಕರೆ ನಾಡು ಮಂಡ್ಯಗೆ ಮುಂಬೈ ಕೊರೊನಾ ನಂಜು ಬಿಟ್ಟು ಬಿಡದೆ ಕಾಡುತ್ತಿದೆ. ಜಿಲ್ಲೆಯಲ್ಲಿ ಗುರುವಾರ ದೃಢಪಟ್ಟ 4 ಪ್ರಕರಣಗಳು ದೂರದ ಮಹಾರಾಷ್ಟ್ರದ ನಂಟನ್ನು ಹೊಂದಿವೆ.

    ಮುಂಬೈನಿಂದ ವಾಪಸ್ಸಾಗಿದ್ದ ನಾಲ್ವರಿಗೆ ಕೊರೊನಾ ದೃಢವಾಗಿದೆ. ಮಂಡ್ಯ ಜಿಲ್ಲೆಯ 36 ಸೋಂಕಿತರ ಪೈಕಿ ಮುಂಬೈನಿಂದ ವಾಪಸ್ ಆಗಿದ್ದ 15 ಮಂದಿಗೆ ಸೋಂಕು ತಗುಲಿದೆ. ಮುಂಬೈ ನಿಂದ ವಾಪಸ್ ಬಂದ ಕೆ.ಆರ್.ಪೇಟೆ ತಾಲೂಕಿನ 10 ಮಂದಿ, ಪಾಂಡವಪುರದ 3, ನಾಗಮಂಗಲದ ಒಬ್ಬ ಹಾಗೂ ಚನ್ನರಾಯಪಟ್ಟಣ ಮೂಲದ ಒಬ್ಬರಿಗೆ ಕೊರೊನಾ ಬಂದಿದೆ.

    ಕೆ.ಆರ್.ಪೇಟೆ ತಾಲೂಕಿಗೆ ಮುಂಬೈನಿಂದ ಹೆಚ್ಚು ಜನರು ವಾಪಸ್ ಬಂದಿದ್ದು, ತಾಲೂಕಿನ ಜನರಲ್ಲಿ ಆತಂಕ ಹೆಚ್ಚಿಸಿದೆ. ಮುಂಬೈನಲ್ಲಿ ಬದುಕು ಕಟ್ಟಿಕೊಳ್ಳಲು ಹೋಗಿದ್ದವರು ಸೋಂಕು ಹೊತ್ತು ಜಿಲ್ಲೆಗೆ ವಾಪಸ್ ಆಗಿದ್ದಾರೆ. ಹೀಗಾಗಿ ಮುಂಬೈನಿಂದ ವಾಪಸ್ ಬರುತ್ತಿರುವವರು ಜಿಲ್ಲಾಡಳಿತಕ್ಕೂ ದೊಡ್ಡ ತಲೆನೋವಾಗಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಮುಂಬೈನಿಂದ ಬಂದವರಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಹೊರ ರಾಜ್ಯದಿಂದ ಮಂಡ್ಯಕ್ಕೆ ಬರುವವರ ಮೇಲೆ ಜಿಲ್ಲಾಡಳಿತ ತೀವ್ರ ನಿಗಾವಹಿಸಿದೆ. ಬಂದವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಿಸಲಾಗುತ್ತಿದೆ. ಈ ಪೈಕಿ ಇನ್ನೂ 925 ಜನರ ಪರೀಕ್ಷಾ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಈ 925 ಪೈಕಿ ಮುಂಬೈನಿಂದ ವಾಪಸ್ಸಾಗಿರುವವರ ಸಂಖ್ಯೆ ಎಷ್ಟು ಅನ್ನೋದನ್ನು ಜಿಲ್ಲಾಡಳಿತ ಬಿಟ್ಟು ಕೊಟ್ಟಿಲ್ಲ.

  • ಬೀದರ್ ಓಲ್ಡ್ ಸಿಟಿಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ: 28ಕ್ಕೇರಿದ ಸೋಂಕಿತರ ಸಂಖ್ಯೆ

    ಬೀದರ್ ಓಲ್ಡ್ ಸಿಟಿಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ: 28ಕ್ಕೇರಿದ ಸೋಂಕಿತರ ಸಂಖ್ಯೆ

    ಬೀದರ್: ದೆಹಲಿಯ ಜಮಾತ್‍ಗೆ ಹೋಗಿ ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿಯ ಮುಖಾಂತರ ಓಲ್ಡ್ ಸಿಟಿಯಲ್ಲಿ ಇಂದು ಮತ್ತೆ ಇಬ್ಬರು ಸೋಂಕಿಗೆ ತುತ್ತಾಗಿದ್ದಾರೆ.

    ಓಲ್ಡ್ ಸಿಟಿಯ ಇಡೇನ್ ಕಾಲೋನಿಯ 50 ವರ್ಷದ ವ್ಯಕ್ತಿ ಹಾಗೂ 27 ವಯಸ್ಸಿನ ಯುವಕನಲ್ಲಿ ಸೋಂಕು ಪತ್ತೆಯಾಗಿದ್ದು, ಈ ಇಬ್ಬರು ಕೊರೊನಾ ರೋಗಿ ನಂಬರ್ 644ರ ಸಂಪರ್ಕಕ್ಕೆ ಬಂದು ಸೋಂಕು ತಗುಲಿಸಿಕೊಂಡಿದ್ದಾರೆ. ಈಗ ಬೀದರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, 14 ಜನರನ್ನು ಗುಣಮುಖ ಮಾಡಿ ಮನೆಗೆ ಕಳುಹಿಸಲಾಗಿದೆ.

    ಜಿಲ್ಲೆಯಲ್ಲಿ ಸೋಂಕಿಗೆ ಒಂದು ಸಾವಾಗಿದೆ. ಸದ್ಯ ಕೊರೊನಾ ವಾರ್ಡ್‍ನಲ್ಲಿ 13 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯಾದ್ಯಂತ ಇಂದು 10 ಮಂದಿ ಹೊಸ ಪ್ರಕರಣಗಳು ದಾಖಲಾಗಿವೆ. ಬೀದರ್ ನಲ್ಲಿ 2, ಬಾಗಲಕೋಟೆಯಲ್ಲಿ 2, ದಾವಣಗೆರೆಯಲ್ಲಿ 3, ಹಾವೇರಿ, ವಿಜಯಪುರ ಹಾಗೂ ಕಲಬುರಗಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 858ಕ್ಕೆ ಏರಿದೆ.

  • ಕರ್ನಾಟಕದಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್ – ಕೊರೊನಾ ಸೋಂಕಿತರಲ್ಲಿ ಪುರುಷರೆಷ್ಟು ಗೊತ್ತಾ?

    ಕರ್ನಾಟಕದಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್ – ಕೊರೊನಾ ಸೋಂಕಿತರಲ್ಲಿ ಪುರುಷರೆಷ್ಟು ಗೊತ್ತಾ?

    ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಪೈಕಿ ಪುರಷರ ಸಂಖ್ಯೆಯೇ ಹೆಚ್ಚಾಗಿ ಇರುವುದು ಕಂಡು ಬಂದಿದೆ.

    ಕರ್ನಾಟಕದಲ್ಲಿ ಈವೆರಗೂ ಕಂಡ ಬಂದ 858 ಮಂದಿ ಕೊರೊನಾ ಸೋಂಕಿತರ ಪೈಕಿ, ಪುರಷರಿಗೆ ಹೆಚ್ಚು ಕೊರೊನಾ ಸೋಂಕು ಕಡಿಮೆ ಬಂದಿದೆ. ಆದರೆ ರಾಜ್ಯದಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್ ಗುರು ಎಂಬದನ್ನು ಮಹಿಳೆಯರು ಮತ್ತೊಮ್ಮೆ ಸಾಬೀತು ಪಡಿಸಿದ್ದು, ಮಹಿಳಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಕಡಿಮೆ ಇದೆ.

    ಈ ಅಂಕಿ ಅಂಶಗಳನ್ನು ನೋಡುವುದಾದರೆ. ಇಂದು ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಅಲ್ಲಿ ಬರೋಬ್ಬರಿ 858 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಒಟ್ಟು 550 ಜನ ಪುರುಷರು ಸೋಂಕಿತರಾಗಿದರೇ 308 ಜನ ಮಹಿಳೆಯರು ಇದ್ದಾರೆ. ಈ ಮೂಲಕ ಕೊರೊನಾ ಮಹಾಮಾರಿಗೆ ಅತೀ ಹೆಚ್ಚು ಪರುಷರೇ ತುತ್ತಾಗಿದ್ದಾರೆ. ಮನೆಯಲ್ಲಿಯೇ ಇರುವ ಮಹಿಳೆಯರು ಸೇಫ್ ಆಗಿದ್ದಾರೆ.

    ಇಂದು ರಾಜ್ಯದಲ್ಲಿ 10 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆಯಾಗಿದೆ. ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ, ದಾವಣಗೆರೆ 3, ಬೀದರ್ 2, ಬಾಗಲಕೋಟೆ 2, ಕಲಬುರಗಿ 1, ಹಾವೇರಿ 1 ಮತ್ತು ವಿಜಯಪುರದಲ್ಲಿ 1 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದೆ.

  • ಭಟ್ಕಳದಲ್ಲಿ 39ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ

    ಭಟ್ಕಳದಲ್ಲಿ 39ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ

    – ಇಬ್ಬರು ಬಾಲಕರು, ಆಟೋ ಚಾಲಕನಿಗೂ ಸೋಂಕು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಏಳು ಕೊರೊನಾ ಪ್ರಕರಣ ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

    ಸೋಂಕಿತ ಎಂಟು ಮಂದಿಯನ್ನು ಸಂಪರ್ಕ ಮಾಡಿರುವ ಏಳು ಜನರಲ್ಲಿ ಇಬ್ಬರು ಬಾಲಕರು ಸೇರಿ ಐದು ಜನ ಪುರುಷರು ಹಾಗೂ ಇಬ್ಬರು ಮಹಿಳೆಯರಿಗೆ ಸೋಂಕು ದೃಢವಾಗಿದೆ. ಇವರೆಲ್ಲರೂ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದವರಾಗಿದ್ದು, ರೋಗಿ ಸಂಖ್ಯೆ 659ರ ಜೊತೆ ದ್ವಿತೀಯ ಹಾಗೂ ನೇರ ಸಂಪರ್ಕಕ್ಕೆ ಬಂದಿದ್ದವರಾಗಿದ್ದಾರೆ.

    50 ವರ್ಷದ ಮಹಿಳೆ, 21 ವರ್ಷದ ಯುವತಿ, 16 ಮತ್ತು 15 ವರ್ಷದ ಬಾಲಕರು, 42, 31, 60 ವರ್ಷದ ಪುರುಷರು ಸೋಂಕಿತರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಎರಡು ದಿನದಲ್ಲಿ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಜಿಲ್ಲಾಡಳಿತ 30 ಮಂದಿಯ ಗಂಟಲ ದ್ರವದ ಮಾದರಿಯನ್ನು ಲ್ಯಾಬ್‍ಗೆ ಕಳುಹಿಸಿದ್ದು, ಇವುಗಳಲ್ಲಿ ಮೊದಲ ಹಂತದ ಪರೀಕ್ಷಾ ಪಲಿತಾಂಶ ಬಂದಿದೆ. ಸಂಜೆ ಅಥವಾ ನಾಳೆ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ.

    ಇಂದು ಪಾಸಿಟಿವ್ ಬಂದವರಲ್ಲಿ 42 ವರ್ಷದ ಆಟೋ ಚಾಲಕನೂ ಸೇರಿದ್ದು, ಎಲ್ಲರೂ ಏಳು ಮಂದಿ ನಿನ್ನೆ ಸೋಂಕು ದೃಢಪಟ್ಟ ಸೋಂಕಿತರ ಸಂಬಂಧಿಗಳಾಗಿದ್ದಾರೆ. ಆಟೋ ಚಾಲಕನಿಗೂ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತ ಯಾವ ಪ್ರದೇಶಕ್ಕೆ ಸಂಚರಿಸಿದ್ದ ಎಂಬ ಮಾಹಿತಿ ಹೊರಬರಬೇಕಿದೆ. ಸೋಂಕಿತರಲ್ಲಿ ಕೆಲವರು ಉಡುಪಿ ಹಾಗೂ ಭಟ್ಕಳದಲ್ಲಿ ಸಂಚರಿಸಿದ್ದು, ಮೂವರು ಮೆಡಿಕಲ್ ಸ್ಟೋರ್‍ನಲ್ಲಿ ಮಾತ್ರೆ ಖರೀದಿಸಿದ್ದರು ಎಂದು ಮೊದಲ ಹಂತದ ವಿವರದಲ್ಲಿ ತಿಳಿದು ಬಂದಿದೆ.