ಹಾಸನ: ಮಾಜಿ ಸಚಿವ ಹೆಚ್‍ಡಿ ರೇವಣ್ಣ ಅವರ ಗನ್‍ಮ್ಯಾನ್‍ಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ರೇವಣ್ಣವರಿಗೂ ಕೊರೊನಾ ಭೀತಿ ಎದುರಾಗಿದೆ.
ಸೋಮವಾರ ರೇವಣ್ಣ ಅವರು ಗನ್‍ಮ್ಯಾನ್‍ಗಳು ಸೇರಿದಂತೆ ಅವರ 9 ಜನ ಸಿಬ್ಬಂದಿಗೆ ಕೊರೊನಾ ತಪಾಸಣೆ ಮಾಡಲಾಗಿತ್ತು. ಇಂದು ಬಂದ ವರದಿಯಲ್ಲಿ ರೇವಣ್ಣ ಅವರ ನಾಲ್ವರು ಗನ್‍ಮ್ಯಾನ್‍ಗಳಿಗೂ ಕೊರೊನಾ ಪಾಸಿಟಿವೆ ಬಂದಿದೆ.

ಸದ್ಯ ರೇವಣ್ಣ ಅವರು ಬೆಂಗಳೂರಿನಲ್ಲಿ ಇದ್ದು, ಅವರ ಕೊರೊನಾ ತಪಾಸಣೆಯೂ ಒಳಪಡುವ ಸಾಧ್ಯತೆ ಇದೆ. ಕಳೆದ ಸೋಮವಾರ ರೇವಣ್ಣನವರ ಬೆಂಗಾವಲು ಪಡೆಯ 9 ಜನ ಪೊಲೀಸರಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈಗ ಅವರ ಸೋಂಕಿತ ಮೂವರ ಜೊತೆ ಬೆಂಗಳೂರಿಗೆ ಬಂದಿದ್ದಾರೆ. ಇನ್ನೊಬ್ಬ ಸೋಂಕಿತ ಹಾಸನದಲ್ಲೇ ಇದ್ದಾರೆ.

ಇಂದು ಹಾಸನದಲ್ಲಿ 15 ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಿವೆ ಎಂದು ಹಾಸನದ ಡಿಎಚ್‍ಒ ಸತೀಶ್ ಹೇಳಿದ್ದಾರೆ. ಹೊಳೆನರಸೀಪುರ ತಾಲೂಕು ಒಂದರಲ್ಲೇ 11 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 11 ಜನ ಪೊಲೀಸರಲ್ಲಿ ನಾಲ್ಕು ಜನ ಪೊಲೀಸರಿಗೆ ಪಾಸಿಟಿವ್ ಬಂದಿದೆ. ನಾಲ್ಕು ಜನ ಪೊಲೀಸರಲ್ಲಿ ಮೂವರು ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಂಡ ನಂತರ ಬೆಂಗಳೂರಿಗೆ ಹೋಗಿದ್ದಾರೆ. ಹೀಗಾಗಿ ಮೂವರು ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ.























