Tag: Positive cases

  • ದೇಶದಲ್ಲಿ 6 ಸಾವಿರ ಗಡಿ ಸಮೀಪಿಸಿದ ಹೆಮ್ಮಾರಿ- 24 ಗಂಟೆಯಲ್ಲಿ 24 ಮಂದಿ ಸಾವು

    ದೇಶದಲ್ಲಿ 6 ಸಾವಿರ ಗಡಿ ಸಮೀಪಿಸಿದ ಹೆಮ್ಮಾರಿ- 24 ಗಂಟೆಯಲ್ಲಿ 24 ಮಂದಿ ಸಾವು

    – ಮಹಾರಾಷ್ಟ್ರದಲ್ಲಿ ನಿಯಂತ್ರಣಕ್ಕೆ ಸಿಗದ ಕೊರೊನಾ
    – 24 ಗಂಟೆಯಲ್ಲಿ 117 ಜನರಿಗೆ ಸೋಂಕು, 8 ಮಂದಿ ಸಾವು

    ನವದೆಹಲಿ: ದೇಶದಲ್ಲಿ ಹೆಮ್ಮಾರಿ ಕೊರೊನಾ ಸೋಂಕಿತರ ಸಂಖ್ಯೆ 5,742 ಆಗಿದ್ದು, 174 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ದಿನ 773 ಮಂದಿಗೆ ಸೋಂಕು ದೃಢವಾಗಿದ್ದು, 24 ಗಂಟೆಯಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ.

    ದೇಶದಲ್ಲಿ 402 ದಿನ ಚೇತರಿಸಿಕೊಂಡಿದ್ದಾರೆ. ಹಾಟ್‍ಸ್ಪಾಟ್‍ಗಳ ಮೇಲೆ ನಿರಂತರವಾಗಿ ನಿಗಾವಹಿಸಿದ್ದೇವೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಮಂಗಳವಾರ ಒಂದು ಸಾವಿರ ಸೋಂಕಿತರ ಗಡಿ ದಾಟಿದ್ದ ಮಹಾರಾಷ್ಟ್ರದಲ್ಲಿ ಬುಧವಾರ ರಾತ್ರಿ 7 ಗಂಟೆಯ ವೇಳೆಗೆ ಸೋಂಕಿತರ ಸಂಖ್ಯೆ 1,100ಕ್ಕೂ ಅಧಿಕವಾಗಿದೆ.

    ಮಹಾರಾಷ್ಟ್ರ ಆರೋಗ್ಯ ಇಲಾಖೆ ಬುಧವಾರ ರಾತ್ರಿ 7 ಗಂಟೆ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 117 ಜನ ಸೋಂಕಿತರು ಪತ್ತೆಯಾಗಿದ್ದು, 8 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 72ಕ್ಕೆ ಏರಿದರೆ, ಸೋಂಕಿತರ ಸಂಖ್ಯೆ 1135ಕ್ಕೆ ತಲುಪಿದೆ.

    ಆಂಧ್ರಪ್ರದೇಶದ ನೋಡಲ್ ಅಧಿಕಾರಿ ಅರ್ಜಾ ಶ್ರೀಕಾಂತ್ ಮಾತನಾಡಿ, ರಾಜ್ಯದಲ್ಲಿ ಇಂದು 19 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 348 ಜನ ಸೋಂಕಿತರಿದ್ದಾರೆ.

    ಗುಜರಾತ್ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಬುಧವಾರ 7 ಮಂದಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದ ಒಟ್ಟು 186 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 143 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ರೋಗಿಗಳು ವೆಂಟಿಲೇಟರ್ ನಲ್ಲಿದ್ದಾರೆ.

    ಗುಜರಾತ್‍ನ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಇಂದು 7 ಹೊಸ ಜನರಿಗೆ ಕೊರೊನಾ ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 186 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 143 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಇಬ್ಬರು ವೆಂಟಿಲೇಟರ್‍ನಲ್ಲಿದ್ದಾರೆ.

    ಯಾವ ರಾಜ್ಯದಲ್ಲಿ ಎಷ್ಟೆಷ್ಟು..?
    ಮಹಾರಾಷ್ಟ್ರ           1,135   ( 117 ಏರಿಕೆ)
    ತಮಿಳುನಾಡು        738     (48 ಏರಿಕೆ)
    ದೆಹಲಿ                    576
    ತೆಲಂಗಾಣ            404     (49 ಏರಿಕೆ)
    ರಾಜಸ್ಥಾನ             363    (23 ಏರಿಕೆ)
    ಉತ್ತರ ಪ್ರದೇಶ      361    (29 ಏರಿಕೆ)
    ಆಂಧ್ರ ಪ್ರದೇಶ       348   (34 ಏರಿಕೆ)
    ಕೇರಳ                 345    (9 ಏರಿಕೆ)