Tag: portugal

  • ಸ್ಪೇನ್, ಪೋರ್ಚುಗಲ್‌, ಫ್ರಾನ್ಸ್‌ನ ಬಹುತೇಕ ಕಡೆ ವಿದ್ಯುತ್ ಕಡಿತ – ರೈಲು ಸಂಚಾರದಲ್ಲಿ ವ್ಯತ್ಯಯ

    ಸ್ಪೇನ್, ಪೋರ್ಚುಗಲ್‌, ಫ್ರಾನ್ಸ್‌ನ ಬಹುತೇಕ ಕಡೆ ವಿದ್ಯುತ್ ಕಡಿತ – ರೈಲು ಸಂಚಾರದಲ್ಲಿ ವ್ಯತ್ಯಯ

    – ವಿಮಾನಗಳ ಹಾರಾಟಕ್ಕೂ ಸಮಸ್ಯೆ
    – ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿ ತಾತ್ಕಾಲಿಕ ಸ್ಥಗಿತ

    ಮ್ಯಾಡ್ರಿಡ್: ಫ್ರಾನ್ಸ್‌, ಪೋರ್ಚುಗಲ್‌ ಹಾಗೂ ದಕ್ಷಿಣ ಫ್ರಾನ್ಸ್‌ನಲ್ಲಿಂದು (Spain, Portugal, France) ಏಕಕಾಲಕ್ಕೆ ವಿದ್ಯುತ್‌ ಕಡಿತಗೊಂಡಿದ್ದು (Power Outage), ಲಕ್ಷಾಂತರ ಜನರು ಪರದಾಡುವಂತಾಗಿದೆ. ಅಲ್ಲದೇ ಈ ವಿದ್ಯುತ್‌ ಕಡಿತವು ರೈಲು (Train) ಸಂಚಾರ ಹಾಗೂ ವಿಮಾನ ಹಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ.

    ಮೂರು ಯೂರೋಪಿಯನ್‌ ದೇಶಗಳಲ್ಲಿ (European countries) ವಿದ್ಯುತ್‌ ಕಡಿತ ಸಂಭವಿಸಿದ್ದು, ಲಕ್ಷಾಂತರ ಜನಕ್ಕೆ ಸಮಸ್ಯೆ ತಂದೊಡ್ಡಿದೆ. ಆದ್ರೆ ವಿದ್ಯುತ್‌ ಕಡಿತಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಸ್ಪ್ಯಾನಿಷ್‌ ಪ್ರಧಾನಿ ಪೆಡ್ರೋ ಸ್ಯಾಂಚೆಜ್‌ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಲು ಗ್ರಿಡ್‌ ಆಪರೇಟರ್‌ ತುರ್ತು ಸಭೆ ಕರೆದಿದ್ದಾರೆ. ಇಂಧನ ಸಚಿವೆ ಸಾರಾ ಆಗೆಸೆನ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಫ್ಲೋರಿಡಾದಲ್ಲಿ 2 ದೋಣಿಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು, 12 ಮಂದಿಗೆ ಗಾಯ

    ಸದ್ಯ ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪನಿ ರೆಡ್ ಎಲೆಕ್ಟ್ರಿಕಾ, ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲು ನಮ್ಮ ತಂಡ ಕೆಲಸ ಮಾಡುತ್ತಿದೆ. ಜೊತೆಗೆ ವಿದ್ಯುತ್‌ ಕಡಿತಕ್ಕೆ ನಿಖರ ಕಾರಣವನ್ನೂ ಪರಿಶೀಲಿಸಲಾಗುತ್ತಿದೆ, ಅದಕ್ಕಾಗಿ ಯುರೋಪಿಯನ್ ನೆಟ್‌ವರ್ಕ್ ಆಫ್ ಟ್ರಾನ್ಸ್‌ಮಿಷನ್ ಸಿಸ್ಟಮ್ ಆಪರೇಟರ್‌ಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್‌

    ರೈಲು ಸಂಚಾರ, ವಿಮಾನ ಹಾರಾಟದಲ್ಲಿ ವ್ಯತ್ಯಯ:
    ಏಕಕಾಲಕ್ಕೆ ದೇಶದ ವಿವಿಧೆಡೆ ವಿದ್ಯುತ್‌ ಕಡಿತಗೊಂಡ ಪರಿಣಾಮ ಸ್ಪೇನ್‌ನಾದ್ಯಂತ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮ್ಯಾಡ್ರಿಡ್‌ನ ವಿಮಾನಗಳ ಹಾರಟದಲ್ಲೂ ಸಮಸ್ಯೆ ಉಂಟಾಗಿದೆ. ಪರಿಸ್ಥಿತಿ ಕುರಿತು ಬಜೆಟ್ ವಿಮಾನಯಾನ ಸಂಸ್ಥೆ ರಯಾನ್ಏರ್ ಮೇಲ್ವಿಚಾರಣೆ ನಡೆಸುತ್ತಿದೆ. ಅಲ್ಲದೇ ವಿದ್ಯುತ್ ಕಡಿತದಿಂದಾಗಿ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೋದಿ-ರಾಜನಾಥ್ ಸಿಂಗ್ ಮಹತ್ವದ ಚರ್ಚೆ; ಉಗ್ರರ ವಿರುದ್ಧ ಮುಂದಿನ ಕ್ರಮಕ್ಕೆ ಮಾಸ್ಟರ್ ಪ್ಲ್ಯಾನ್

  • ರಸ್ತೆಯಲ್ಲಿ ನದಿಯಂತೆ ಉಕ್ಕಿ ಹರಿದ 22 ಲಕ್ಷ ಲೀಟರ್‌ ರೆಡ್‌ ವೈನ್

    ರಸ್ತೆಯಲ್ಲಿ ನದಿಯಂತೆ ಉಕ್ಕಿ ಹರಿದ 22 ಲಕ್ಷ ಲೀಟರ್‌ ರೆಡ್‌ ವೈನ್

    ಲಿಸ್ಬನ್: ಪೋರ್ಚುಗಲ್‌ನ (Portugal) ಕರಾವಳಿ ಪಟ್ಟಣದಲ್ಲಿ 22 ಲಕ್ಷ ಲೀಟರ್‌ನಷ್ಟು ರೆಡ್‌ ವೈನ್‌ ರಸ್ತೆಯಲ್ಲಿ ಪ್ರವಾಹದಂತೆ ಹರಿಯಿತು. ಈ ದೃಶ್ಯ ಸ್ಥಳೀಯರ ಆತಂಕಕ್ಕೆ ಕಾರಣವಾಯಿತು.

    ವೈನ್ ಒಯ್ಯುವ ಎರಡು ಕಂಟೈನರ್ ವಾಹನಗಳು ಸ್ಫೋಟಗೊಂಡವು. ಪರಿಣಾಮವಾಗಿ ವಾಹನಗಳಲ್ಲಿದ್ದ ಲಕ್ಷಾಂತರ ಲೀಟರ್‌ನಷ್ಟು ರೆಡ್‌ ವೈನ್‌ ರಸ್ತೆಯಲ್ಲಿ ನದಿಯಂತೆ ಉಕ್ಕಿ ಹರಿಯಿತು. ಸಾವೊ ಲೊರೆಂಕೊ ಡಿ ಬೈರೊ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಇದನ್ನೂ ಓದಿ: ಮೊರಾಕ್ಕೋ ಭೂಕಂಪ; ಮೃತರ ಸಂಖ್ಯೆ 2,800 ಕ್ಕೆ ಏರಿಕೆ

    ಪ್ರವಾಹದ ನೀರು ನುಗ್ಗಿದಂತೆ ಸ್ಥಳೀಯ ಮನೆಗಳಿಗೆ ವೈನ್‌ ನುಗ್ಗಿತು. ಇದರಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಹ ಉಂಟಾಯಿತು. ರೆಡ್‌ ವೈನ್‌ ಹರಿಯುತ್ತಿದ್ದ ಸ್ಥಳಕ್ಕೆ ಹತ್ತಿರದಲ್ಲೇ ಸೆರ್ಟಿಮಾ ನದಿ ಇತ್ತು. ವೈನ್‌ ನದಿ ಸೇರಿದರೆ, ನೀರು ಕಲುಷಿತಗೊಳ್ಳಬಹುದು ಎಂದು ಅಗ್ನಿಶಾಮಕ ಸಿಬ್ಬಂದಿ ವೈನ್‌ ಹರಿಯುತ್ತಿದ್ದ ದಿಕ್ಕನ್ನು ಬದಲಾಯಿಸುವ ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ: ಪುಟಿನ್ ಭೇಟಿ ಮಾಡಲು ರಷ್ಯಾಗೆ ತೆರಳಿದ ಕಿಮ್ ಜಾಂಗ್ ಉನ್

    ಘಟನೆಗೆ ಸಂಬಂಧಿಸಿದಂತೆ ಲೆವಿರಾ ಡಿಸ್ಟಿಲರಿ ಕ್ಷಮೆಯಾಚಿಸಿದೆ. ಆಗಿರುವ ಹಾನಿಯನ್ನು ಸರಿಪಡಿಸಲು ಕ್ರಮಕೈಗೊಳ್ಳುತ್ತೇವೆ. ಸ್ವಚ್ಛಗೊಳಿಸುವುದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ಲೆವಿರಾ ಡಿಸ್ಟಿಲರಿ ತಿಳಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾಥೋಲಿಕ್‌ ಚರ್ಚ್‌ಗಳ ಪಾದ್ರಿಗಳಿಂದ 5,000 ಬಾಲಕಿಯರ ಮೇಲೆ ಅತ್ಯಾಚಾರ

    ಕ್ಯಾಥೋಲಿಕ್‌ ಚರ್ಚ್‌ಗಳ ಪಾದ್ರಿಗಳಿಂದ 5,000 ಬಾಲಕಿಯರ ಮೇಲೆ ಅತ್ಯಾಚಾರ

    ಲಿಸ್ಬೆನ್: ಪೋರ್ಚುಗಲ್‌ (Portugal) ಕ್ಯಾಥೋಲಿಕ್‌ ಚರ್ಚ್‌ಗಳ ಪಾದ್ರಿಗಳಿಂದ (Catholic Church) 1950ರಿಂದ ಇಲ್ಲಿಯವರೆಗೆ 5,000 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆದಿದೆ ಎಂದು ಸ್ವತಂತ್ರ ತನಿಖಾ ಆಯೋಗ ತಿಳಿಸಿದೆ.

    ಚರ್ಚ್‌ಗಳ 500 ಪಾದ್ರಿಗಳ (Priests) ಲೈಂಗಿಕ ದೌರ್ಜನ್ಯದ ಬಗ್ಗೆ ಪೋರ್ಚುಗಲ್‌ನ ಕ್ಯಾಥೋಲಿಕ್‌ ಚರ್ಚ್‌ ಒಕ್ಕೂಟವು ಸ್ವತಂತ್ರ ತನಿಖಾ ಆಯೋಗವನ್ನು ನೇಮಿಸಿತ್ತು. ಈ ಸಂಬಂಧ ಆಯೋಗವು ತನಿಖಾ ವರದಿಯನ್ನು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದೆ. ಇದನ್ನೂ ಓದಿ: ಬಸ್‌-ಟ್ರಕ್‌ ನಡುವೆ ಭೀಕರ ಅಪಘಾತ; 20 ಸಾವು, 60 ಮಂದಿಗೆ ಗಾಯ

    ಆಯೋಗವು ಜನವರಿ 2022 ರಲ್ಲಿ ತನಿಖೆಯನ್ನು ಪ್ರಾರಂಭಿಸಿತ್ತು. ದೇಶದ ಎಲ್ಲಾ ಕ್ಯಾಥೋಲಿಕ್ ಸಂಸ್ಥೆಗಳು, ಡಯಾಸಿಸ್ ಮತ್ತು ಧಾರ್ಮಿಕ ಆದೇಶಗಳ ಬಗ್ಗೆ ಸಮೀಕ್ಷೆ ಮಾಡಿತ್ತು. ಸುಮಾರು 500 ಪುಟಗಳ ವರದಿಯನ್ನು ಆಯೋಗವು ರೂಪಿಸಿದೆ.

    ಆಯೋಗವು 2022ರ ಜನವರಿಯಿಂದ ಅಕ್ಟೋಬರ್‌ 31ರ ವರೆಗೆ 500ಕ್ಕೂ ಹೆಚ್ಚು ಸಂತ್ರಸ್ತರನ್ನು ಪತ್ತೆಹಚ್ಚಿ ಹೇಳಿಕೆ ದಾಖಲಿಸಿದೆ. ಚರ್ಚ್‌ ಪಾದ್ರಿಗಳಿಂದ 1950ರಿಂದ ಈವರೆಗೆ 5,000 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಎಲ್‌ಟಿಟಿಇ ಮುಖ್ಯಸ್ಥ ಜೀವಂತವಾಗಿದ್ದಾನಾ? – ಇದು ತಮಾಷೆ ಎಂದ ಶ್ರೀಲಂಕಾ

    ಲೈಂಗಿಕ ಕಿರುಕುಳ ಅನುಭವಿಸಿರುವ ಸಂತ್ರಸ್ತರು ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪಾದ್ರಿಗಳು ನಮ್ಮ ಮೇಲೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.

    ಸ್ವತಂತ್ರ ತನಿಖಾ ಆಯೋಗದ ಅಧ್ಯಕ್ಷ ಪೆಡ್ರೊ ಸ್ಟ್ರೆಚ್ಟ್‌ ಅವರು, ಮಕ್ಕಳ ಮೇಲಿನ ಲೈಂಗಿಕ ಶೋಷಣೆ ನಿರ್ಲಕ್ಷಿಸುವ ಆಘಾತವು ಪೂರ್ಚುಗಲ್‌ಗೆ ಈಗ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತೀಯ ಗರ್ಭಿಣಿ ಪ್ರವಾಸಿ ಸಾವು- ಪೋರ್ಚುಗಲ್‍ನ ಆರೋಗ್ಯ ಸಚಿವೆ ರಾಜೀನಾಮೆ

    ಭಾರತೀಯ ಗರ್ಭಿಣಿ ಪ್ರವಾಸಿ ಸಾವು- ಪೋರ್ಚುಗಲ್‍ನ ಆರೋಗ್ಯ ಸಚಿವೆ ರಾಜೀನಾಮೆ

    ಲಿಸ್ಬನ್: ಭಾರತೀಯ ಗರ್ಭಿಣಿ ಪ್ರವಾಸಿಯೊಬ್ಬರು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯತೆಯಿಲ್ಲದೇ ಪೋರ್ಚುಗಲ್‍ನಲ್ಲಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ರಾಜೀನಾಮೆ ನೀಡಿದ್ದಾರೆ.

    ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದಾಗಿ ಹಾಸಿಗೆಯ ಕೊರತೆ ಉಂಟಾಗಿತ್ತು. ಇದರಿಂದಾಗಿ 34 ವರ್ಷದ ಭಾರತೀಯ ಗರ್ಭಿಣಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವ ಸಮಯದಲ್ಲಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವು ತೀವ್ರ ಟೀಕೆಗೆ ಒಳಗಾಗಿದೆ. ಹೀಗಾಗಿ ಆರೋಗ್ಯ ಸಚಿವೆ ರಾಜೀನಾಮೆ ನೀಡಿದ್ದಾರೆ.

    ಈ ವೇಳೆ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ಮಾತನಾಡಿ, ಇನ್ನೂ ಮುಂದೆ ಯಾವುದೇ ಷರತ್ತುಗಳನ್ನು ಹೊಂದಿಲ್ಲ. ರಾಜೀನಾಮೆಯನ್ನು ಪ್ರಧಾನಮಂತ್ರಿ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಈ ರಾಜೀನಾಮೆಯನ್ನು ಲಿಸ್ಬನ್‍ನಲ್ಲಿ ಗರ್ಭಿಣಿ ಸಾವನ್ನಪ್ಪಿದ 5 ಗಂಟೆಯ ನಂತರ ಘೋಷಿಸಲಾಗಿದೆ. ಇದನ್ನೂ ಓದಿ: ಬ್ಲೇಡ್‍ನಿಂದ ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು!

    crime

    ಘಟನೆಯೇನು?: 31 ವಾರಗಳ ಗರ್ಭಿಣಿಯಾಗಿದ್ದ ಭಾರತೀಯ ಮಹಿಳೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಅತಿದೊಡ್ಡ ಆರೋಗ್ಯ ಸೌಲಭ್ಯಗಳಲ್ಲಿ ಒಂದಾದ ಸಾಂಟಾ ಮಾರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆಯ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲಾಯಿತು. ಆದರೆ ನವಜಾತ ಶಿಶುಗಳ ವಿಭಾಗ ತುಂಬಿದ್ದರಿಂದ ಗರ್ಭಿಣಿಯನ್ನು ಡಿ ಸಾಂಟಾ ಮರಿಯಾ ಆಸ್ಪತ್ರೆಯಿಂದ ಸಾವೊ ಫ್ರಾನ್ಸಿಸ್ಕೊ ಕ್ಸೇವಿಯರ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಮಾರ್ಗಮಧ್ಯೆ ಆಕೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮೋದಿ ಆಡಳಿತದ ವಿರುದ್ಧ ಕೆಸಿಆರ್ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಪೋರ್ಚುಗಲ್‌ಗೆ ನೀಡಿದ ವಾಗ್ದಾನದಂತೆ ಅಬು ಸಲೇಂನನ್ನು ಬಿಡುಗಡೆ ಮಾಡಿ – ಕೇಂದ್ರಕ್ಕೆ ಸುಪ್ರೀಂ

    ಪೋರ್ಚುಗಲ್‌ಗೆ ನೀಡಿದ ವಾಗ್ದಾನದಂತೆ ಅಬು ಸಲೇಂನನ್ನು ಬಿಡುಗಡೆ ಮಾಡಿ – ಕೇಂದ್ರಕ್ಕೆ ಸುಪ್ರೀಂ

    ನವದೆಹಲಿ: 1993ರ ಮುಂಬೈ ಬಾಂಬ್‌ ಸ್ಫೋಟ ಪ್ರಕರಣದ ದೋಷಿ ಗ್ಯಾಂಗ್‌ಸ್ಟರ್‌ ಅಬು ಸಲೇಂ 25 ವರ್ಷ ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಬಿಡುಗಡೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಹೇಳಿದೆ.

    2002 ರಲ್ಲಿ ಪೋರ್ಚುಗಲ್‌ ಸರ್ಕಾರಕ್ಕೆ ನೀಡಿದ ವಾಗ್ಧಾನಕ್ಕೆ ಗೌರವ ನೀಡಬೇಕು. ವಾಗ್ದಾನ ನೀಡಿದಂತೆ 25 ವರ್ಷಗಳ ಜೈಲು ಶಿಕ್ಷೆಯ ಅವಧಿ ಪೂರ್ಣಗೊಂಡ ಬಳಿಕ ಬಿಡುಗಡೆ ಮಾಡಬೇಕು ಎಂದು ನ್ಯಾ. ಎಸ್‌.ಕೆ.ಕೌಲ್‌ ಮತ್ತು ಎಂಎಂ ಸುಂದರೇಶ್‌ ಅವರಿದ್ದ ಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

    ಶಿಕ್ಷೆ ಮುಗಿದ 1ತಿಂಗಳ ಒಳಗಡೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಬೇಕು ಎಂದು ಕೋರ್ಟ್‌ ಹೇಳಿದೆ.

    ತನ್ನ ಕಕ್ಷಿದಾರರ ಶಿಕ್ಷೆ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸಬಾರದು ಎಂದು ಸಲೇಂ ಪರ ವಕೀಲರು ಕೋರ್ಟ್‌ನಲ್ಲಿ ವಾದಿಸಿದ್ದರು. ಈ ವಾದವನ್ನು ಕೋರ್ಟ್‌ ಪುರಸ್ಕರಿಸಿದೆ. ಆದರೆ ತನ್ನ ಹಸ್ತಾಂತರವನ್ನು ರದ್ದುಗೊಳಿಸುವಂತೆ ಕೋರಿ ಸಲೇಂ ಮಾಡಿದ ಮನವಿಯನ್ನು ಕೋರ್ಟ್‌ ವಜಾಗೊಳಿಸಿದೆ.

    ಮುಂಬೈ ಮೂಲದ ಬಿಲ್ಡರ್‌ ಪ್ರದೀಪ್‌ ಜೈನ್‌ ಮತ್ತು ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯ 2015ರ ಫೆ. 25 ರಂದು ಸಲೇಂಗೆ ಜೀವಾವಾಧಿ ಶಿಕ್ಷೆ ವಿಧಿಸಿತ್ತು. ಇದನ್ನೂ ಓದಿ: ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ- ದಿಗ್ಭ್ರಮೆಗೊಂಡ ಪೊಲೀಸರು

    ಭಾರತಕ್ಕೆ ಹಸ್ತಾಂತರಿಸುವಾಗ ತನ್ನ ಶಿಕ್ಷೆಯ ಅವಧಿಯು 25 ವರ್ಷ ಮೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಪೋರ್ಚುಗಲ್‌ಗೆ ತಿಳಿಸಿತ್ತು. ಈ ವಾಗ್ದಾನವನ್ನು ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ನೀಡಿದ್ದರು ಎಂದು ಸಲೇಂ ವಾದಿಸಿದ್ದ.

    2002ರಲ್ಲಿ ಗೆಳತಿ ಚಿತ್ರನಟಿ ಮೋನಿಕಾ ಬೇಡಿ ಜೊತೆ ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ಅಬು ಸಲೇಂನನ್ನು ಬಂಧಿಸಲಾಗಿತ್ತು. ಹಲವು ಸುತ್ತಿನ ಕಾನೂನು ಸಮರದ ಬಳಿಕ ಅಬು ಸಲೇಂನನ್ನು ಪೋರ್ಚುಗಲ್‌ 2005ರಲ್ಲಿ ಭಾರತಕ್ಕೆ ಹಸ್ತಾಂತರಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಬಂಡೀಪುರ ಅರಣ್ಯದಲ್ಲಿ ಸಫಾರಿ ಪ್ರಾರಂಭಿಸಿದ ದಿನವೇ ವಿದೇಶಿಗರ ರಂಪಾಟ

    ಬಂಡೀಪುರ ಅರಣ್ಯದಲ್ಲಿ ಸಫಾರಿ ಪ್ರಾರಂಭಿಸಿದ ದಿನವೇ ವಿದೇಶಿಗರ ರಂಪಾಟ

    – ಅನುಚಿತ ವರ್ತನೆ ವಿರುದ್ಧ ದೂರು ದಾಖಲು

    ಚಾಮರಾಜನಗರ: ಜಿಲ್ಲೆಯ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಸಾರ್ವಜಕರಿಗೆ ಮುಕ್ತಗೊಳಿಸಿ, ಸಫಾರಿ ಪ್ರಾರಂಭಿಸಿದ ಮೊದಲ ದಿನವೇ ಮೂವರು ಪೋರ್ಚುಗಲ್ ಪ್ರಜೆಗಳು ಅಕ್ರಮವಾಗಿ ಪ್ರವೇಶಿಸಿರುವುದಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ತೋರಿದ್ದು, ಪ್ರಕರಣ ದಾಖಲಾಗಿದೆ.

    ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯದಲ್ಲಿ ಘಟನೆ ನಡೆದಿದೆ. ಪೋರ್ಚುಗಲ್ ಪ್ರಜೆಗಳಾದ ರಿಕಾರ್ಡೊ, ಮಿಗ್ವೆಲ್ ಗ್ಯಾರಿಡೋ, ಥಾಮಸ್ ಪಿನ್ಹೋ ಅವರು ಸಫಾರಿ ವಲಯಕ್ಕೆ ಬೈಕ್ ಮೂಲಕ ಅಕ್ರಮವಾಗಿ ಪ್ರವೇಶಿಸಿದ್ದಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ ಎನ್ನಲಾಗಿದೆ.

    ಈ ಮೂವರೂ ಡಿಆರ್‍ಡಿಒಗೆ ಬಂದಿರುವ ವಿಶೇಷ ಎಂಜಿನಿಯರ್‍ಗಳೆಂದು ತಿಳಿದು ಬಂದಿದೆ. ವಿದೇಶಿ ಪ್ರಜೆಗಳ ಕಾಯ್ದೆ ಅಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಿ, ಗುಂಡ್ಲುಪೇಟೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಅಲ್ಲದೆ ಅರಣ್ಯ ಇಲಾಖೆ ವಿರುದ್ಧ ಈ ಮೂವರೂ ರಾಯಭಾರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಮೂವರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು, ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

  • ಈ ಪುಟಾಣಿ ಚಾಕ್ಲೇಟ್ ಬೆಲೆ 6 ಲಕ್ಷ ರೂ.

    ಈ ಪುಟಾಣಿ ಚಾಕ್ಲೇಟ್ ಬೆಲೆ 6 ಲಕ್ಷ ರೂ.

    ಲಿಸ್ಬನ್: ವಿಶ್ವದ ಅತ್ಯಂತ ದುಬಾರಿ ಚಾಕ್ಲೇಟನ್ನ ಪೋರ್ಚುಗಲ್‍ನ ಒಬಿಡೋಸ್‍ನಲ್ಲಿ ಶುಕ್ರವಾರದಂದು ಪ್ರದರ್ಶನಕ್ಕೆ ಇಡಲಾಗಿದೆ.

    ಈ ಪುಟಾಣಿ ಚಾಕ್ಲೇಟ್ ಬೆಲೆ ಬರೋಬ್ಬರಿ 7,728 ಯೂರೋ(ಅಂದಾಜು 6 ಲಕ್ಷ ರೂ.) ಚಾಕ್ಲೇಟ್ ಮೇಲೆ ತಿನ್ನಲು ಯೋಗ್ಯವಾದ ಚಿನ್ನದ ಪದರವಿದ್ದು, ಒಳಗೆ ಕೇಸರಿ ದಳ, ವೈಟ್ ಟ್ರಫಲ್, ಮಡಗಾಸ್ಕರ್‍ನ ವೆನಿಲ್ಲಾ ತುಂಬಲಾಗಿದೆ. ದುಬಾರಿ ಚಾಕ್ಲೇಟ್ ನ ಕಾವಲಿಗಾಗಿ ಇಬ್ಬರು ಸಮವಸ್ತ್ರಧಾರಿಗಳನ್ನ ನಿಯೋಜಿಸಲಾಗಿತ್ತು.

    ಈ ಚಾಕ್ಲೇಟನ್ನ ತಯಾರಿಸಿರುವ ವ್ಯಕ್ತಿ ಡೇನಿಯಲ್ ಗೋಮ್ಸ್. ವಜ್ರದ ಆಕಾರದಲ್ಲಿರುವ ಈ ಚಾಕ್ಲೇಟನ್ನ ಜಗತ್ತಿನ ಅತ್ಯಂತ ದುಬಾರಿ ಚಾಕ್ಲೇಟ್ ಎಂದು ಗಿನ್ನೀಸ್ ಬುಕ್ ಆಫ್ ರೆಕಾಡ್ರ್ಸ್ ಪ್ರಮಾಣೀಕರಿಸಿದೆ ಎಂದು ಗೋಮ್ಸ್ ಹೇಳಿದ್ದಾರೆ.

    ಈ ಹಿಂದೆ 2017ರಲ್ಲಿ ಡ್ಯಾನಿಷ್ ಚಾಕ್ಲೇಟ್ ತಯಾರಕ ಫ್ರಿಟ್ಸ್ ನಿಪ್ಸ್‍ಚೈಲ್ಡ್ ಎಂಬವರು ತಯಾರಿಸಿದ್ದ 250 ಡಾಲರ್(ಅಂದಾಜು 16 ಸಾವಿರ ರೂ.) ಮೌಲ್ಯದ ಚಾಕ್ಲೇಟ್ ಈ ದಾಖಲೆಗೆ ಪಾತ್ರವಾಗಿತ್ತು. ಇದೀಗ ಆ ದಾಖಲೆಯನ್ನ ಈ ಚಾಕ್ಲೇಟ್ ಮುರಿದಿದೆ.

    ಕೀರಿಟದ ಆಕಾರದ ಇದರ ಬಾಕ್ಸ್ ಮೇಲೆ 5500 ಸ್ವರೋವ್‍ಸ್ಕಿ ಹರಳುಗಳಿಂದ ಅಲಂಕರಿಸಲಾಗಿದೆ.