Tag: Porn Website

  • ತಮನ್ನಾಗೆ ತಲೆಬಿಸಿ ತಂದಿಟ್ಟ ಹಸಿಬಿಸಿ ವಿಡಿಯೋ: ಸೆಕ್ಸ್ ಸೈಟ್‌ನಲ್ಲಿ ಅಪ್‌ಲೋಡ್

    ತಮನ್ನಾಗೆ ತಲೆಬಿಸಿ ತಂದಿಟ್ಟ ಹಸಿಬಿಸಿ ವಿಡಿಯೋ: ಸೆಕ್ಸ್ ಸೈಟ್‌ನಲ್ಲಿ ಅಪ್‌ಲೋಡ್

    ‘ನೋ ಕಿಸ್, ನೋ ಬೆಡ್ ರೂಮ್ ಸೀನ್’ ಎಂಬ ಬೌಂಡರಿ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದ ನಟಿ ತಮನ್ನಾ (Tamannaah) ‘ಲಸ್ಟ್ ಸೋರಿಸ್ 2’ ಸಿನಿಮಾದಲ್ಲಿ ತಾವೇ ಹಾಕಿಕೊಂಡಿದ್ದ ಬೇಲಿಯನ್ನು ಕಿತ್ತೆಸೆದು ಮನಸೋ ಇಚ್ಛೆ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸರಣಿಯಲ್ಲಿ ಕಿಸ್ ಇದೆ, ಬೆಡ್ ರೂಮ್ ದೃಶ್ಯಗಳಿವೆ. ಪಡ್ಡೆಗಳ ಕಣ್ಣಿಗೆ ಹಬ್ಬದಂತಹ ಹಸಿಬಿಸಿ ದೃಶ್ಯಗಳೂ ಇವೆ. ಈ ದೃಶ್ಯಗಳು ಈಗ ಸೆಕ್ಸ್ ಸೈಟ್‍ (Porn Website) ನಲ್ಲಿ ಅಪ್‌ಲೋಡ್ ಆಗಿವೆ.

    ನಟಿ ತಮನ್ನಾ ಹಾಗೂ ನಟ ವಿಜಯ್ ವರ್ಮಾ (Vijay Varma) ಅವರ ಹಸಿಬಿಸಿ ದೃಶ್ಯಗಳ ಫೋಟೋಗಳು ಮತ್ತು ವಿಡಿಯೋಗಳು ಕೇವಲ ಟ್ರೋಲಿಗರ ಪೇಜ್ ನಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಷ್ಟೇ ಕಾಣಿಸಿಕೊಂಡಿದ್ದವು. ಇದೀಗ ಪೋರ್ನ್‌ ಸೈಟ್‌ನಲ್ಲಿ ಅವುಗಳನ್ನು ಅಪ್‌ಲೋಡ್ ಮಾಡಿ, ಅವು ನಿಜ ದೃಶ್ಯಗಳು ಎನ್ನುವಂತೆ ಬಿಂಬಿಸಲಾಗುತ್ತಿದೆಯಂತೆ. ಇದು ನಟಿ ತಮನ್ನಾ ಅವರಿಗೆ ತಲೆಬಿಸಿ ತಂದಿದೆ.

    ‘ಕೆಜಿಎಫ್’ (KGF) ನಟಿಯೂ ಆಗಿರುವ ತಮನ್ನಾ ದಕ್ಷಿಣದ ಸಿನಿಮಾಗಳಲ್ಲಿ ಉತ್ತಮ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಆದರೆ ಬೋಲ್ಡ್, ಲಿಪ್‌ಲಾಕ್ ಸೀನ್‌ಗಳಲ್ಲಿ ಎಂದೂ ತಮನ್ನಾ ನಟಿಸಿರಲಿಲ್ಲ. ಆದರೆ ಇತ್ತೀಚಿನ ಬಾಲಿವುಡ್‌ನ ‘ಜೀ ಕರ್ದಾ’, ʼಲಸ್ಟ್ ಸ್ಟೋರಿಸ್ 2′ ಸಿನಿಮಾದಲ್ಲಿ ತಮನ್ನಾ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರೇನಾ.? ಎಂದು ಅಭಿಮಾನಿಗಳು ಬಾಯಿ ಮೇಲೆ ಬೆರಳಿಡೋ ಹಾಗೇ ತಮನ್ನಾ ನಟಿಸಿ ಬಂದಿದ್ದಾರೆ. ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು

    ಕೆಲ ವರ್ಷಗಳ ಹಿಂದೆ ಬಂದ ‘ಲಸ್ಟ್ ಸ್ಟೋರಿಸ್’  (Lust Stories) ಸೀರಿಸ್ ಬೋಲ್ಡ್ ದೃಶ್ಯಗಳಿಂದಲೇ ಹೆಚ್ಚು ಸದ್ದು ಮಾಡಿತ್ತು. ಅದನ್ನೂ ಮೀರಿಸುವಂತೆ ಸೀಕ್ವೆಲ್ ಸೀರಿಸ್ ಬರುತ್ತಿದೆ. ಇನ್ನೂ ತಮನ್ನಾ, ಲವರ್ ವಿಜಯ್ ವರ್ಮಾ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಷ್ಟು ದಿನ ಲಿಪ್‌ಲಾಕ್ (Lip Lock) ಸೀನ್‌ಗೆ ಒಲ್ಲೆ ಎಂದಿದ್ದ ಮಿಲ್ಕಿಬ್ಯೂಟಿ ಈ ಸೀರಿಸ್‌ನಲ್ಲಿ ತುಟಿಗೆ ತುಟಿ ಸೇರಿಸಿದ್ದಾರೆ. ಪ್ರಿಯಕರನ ಜೊತೆ ನಟಿಸಿರೋದ್ರಿಂದ ಕೊಂಚ ಹೆಚ್ಚೇ ಇಂಟಿಮೆಂಟ್ ಸೀನ್‌ಗಳಲ್ಲಿ ನಟಿಸಿದ್ದಾರೆ.

     

    ನೀವು ಭಾರತೀಯ ಸಂಸ್ಕೃತಿ ನಾಶ ಮಾಡುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ನಿನ್ನನ್ನು ಈ ರೀತಿ ನೋಡಲು ನಾಚಿಕೆ ಆಗುತ್ತಿದೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ನೀವು ಸೀ ಗ್ರೇಡ್ ನಟನ ಜೊತೆ ಇಂತಹ ಸನ್ನಿವೇಶದಲ್ಲಿ ಹೇಗೆ ನಟಿಸ್ತೀರಾ? ತಮನ್ನಾ ದಯವಿಟ್ಟು ಬಾಲಿವುಡ್ (Bollywood) ಬಿಟ್ಟು ಕಾಲಿವುಡ್, ಟಾಲಿವುಡ್‌ಗೆ (Tollywood) ಬಂದುಬಿಡಿ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೀತಿಸಲು ಒಲ್ಲೆ ಎಂದ ಗೆಳತಿಯ ಮೊಬೈಲ್ ನಂ. ಪೋರ್ನ್ ವೆಬ್‍ಸೈಟಿಗೆ ಅಪ್‍ಲೋಡ್

    ಪ್ರೀತಿಸಲು ಒಲ್ಲೆ ಎಂದ ಗೆಳತಿಯ ಮೊಬೈಲ್ ನಂ. ಪೋರ್ನ್ ವೆಬ್‍ಸೈಟಿಗೆ ಅಪ್‍ಲೋಡ್

    ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಗೆಳತಿಯ ಮೊಬೈಲ್ ನಂಬರನ್ನು 36 ವರ್ಷದ ವ್ಯಕ್ತಿಯೊಬ್ಬ ಪೋರ್ನ್ ವೆಬ್‍ಸೈಟಿಗೆ ಅಪ್‍ಲೋಡ್ ಮಾಡಿರುವ ಘಟನೆ ಬೆಂಗಳೂರಿನ ಇಂದಿರಾ ನಗರದಲ್ಲಿ ನಡೆದಿದೆ.

    ಇಂದಿರಾ ನಗರದ ನಿವಾಸಿಯಾಗಿರುವ ಮೊಹಮ್ಮದ್ ಮುದಸ್ಸಿರ್ ಗೆಳತಿಯ ಮೊಬೈಲ್ ನಂಬರನ್ನು ಪೋರ್ನ್ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದ್ದು, ಸೆಕ್ಸ್ ಗಾಗಿ ಮೇಲಿನ ನಂಬರ್ ಗೆ ಸಂಪರ್ಕಿಸಿ ಎಂದು ತಿಳಿಸಿದ್ದ. ಆಗಸ್ಟ್ 30 ರಂದು ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಯುವತಿಯ ಮೊಬೈಲ್ ನಂಬರಿಗೆ ನಿರಂತರವಾಗಿ ಮೆಸೇಜ್ ಗಳು ಬಂದಿದೆ. ಆ ಬಳಿಕ ಪೋರ್ನ್ ವೆಬ್ ಸೈಟ್‍ಗೆ ಮೊಬೈಲ್ ನಂಬರ್ ಅಪ್‍ಲೋಡ್ ಆಗಿರುವುದು ತಿಳಿದು ಬಂದಿದೆ.

    ಮೊಹಮ್ಮದ್ ಮುದಸ್ಸಿರ್ ಕೃತ್ಯದಿಂದ ಸಮಸ್ಯೆ ಎದುರಿಸಿದ್ದ ಯುವತಿ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಯುವತಿಗೆ ಮೆದಸ್ಸಿರ್ ಮೇಲೆ ಅನುಮಾನ ಬಂದಿದ್ದು, ಆಕೆಯ ಫೇಕ್ ಪ್ರೋಪೈಲ್ ಸೃಷ್ಟಿ ಮಾಡಿ ಮೊಬೈಲ್ ನಂಬರ್ ನೀಡಿದ್ದ.

    ಈ ಹಿಂದೆ ನಗರದ ಜೀವನ್ ಭೀಮಾ ನಗರದಲ್ಲೂ ಇಂತಹದೇ ಪ್ರಕರಣ ನಡೆದಿತ್ತು. ಮೆಡಿಕಲ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣ ದಾಖಲು ಮಾಡಿದ್ದರು. ಯುವತಿಗೆ ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದ ಯುವಕ ಆಕ್ಷೇಪಾರ್ಹ ಫೋಟೋಗಳನ್ನು ಯುವತಿಗೆ ಕಳುಹಿಸಿದ್ದ. ಯುವತಿಯ ನಿವಾಸದ ಬಳಿ ಮೆಡಿಕಲ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಆತ ಫೇಸ್‍ಬುಕ್ ರಿಕ್ವೆಸ್ಟ್ ಕಳುಹಿಸಿ ಯುವತಿಯ ಸ್ನೇಹ ಮಾಡಿದ್ದ.

  • ಪೋರ್ನ್ ವೆಬ್‍ಸೈಟಿಗೆ ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯ ಫೋಟೋ, ನಂಬರ್ ಹಾಕ್ದ!

    ಪೋರ್ನ್ ವೆಬ್‍ಸೈಟಿಗೆ ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯ ಫೋಟೋ, ನಂಬರ್ ಹಾಕ್ದ!

    ಲಕ್ನೋ: 38 ವರ್ಷದ ವ್ಯಕ್ತಿಯೊಬ್ಬ ಪತ್ನಿಯ ಅಶ್ಲೀಲ ಫೋಟೋ, ಸಂದೇಶ ಮತ್ತು ಫೋನ್ ನಂಬರನ್ನು ಪೋರ್ನ್ ವೆಬ್ ಸೈಟಿಗೆ ಪೋಸ್ಟ್ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡದಲ್ಲಿ ನಡೆದಿದೆ.

    ಆರೋಪಿ ಪತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿ ಖಾಸಗಿ ಸಂಸ್ಥೆಯಲ್ಲಿ ಒಬ್ಬ ಸಹಾಯಕ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದನು. ಆರೋಪಿ ಪತ್ನಿ ಪೊಲೀಸರಿಗೆ ದೂರ ಕೊಟ್ಟ ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿ ಮತ್ತು ಸಂತ್ರಸ್ತೆ 2011ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಳೆದ 10 ತಿಂಗಳಿನಿಂದ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಈ ಕಾರಣಕ್ಕಾಗಿ ಪತಿ ಆಕೆಯ ಫೋಟೋ ಮತ್ತು ನಂಬರ್ ಪೋಸ್ಟ್ ಮಾಡಿರಬಹುದು. ನಾವು ಪತ್ನಿ ಫೋನಿನಲ್ಲಿ ಫೋಟೋಗಳನ್ನು ಸಂಗ್ರಹಸಿ ಬಳಿಕ ಪ್ರಕರಣದ ತನಿಖೆಯನ್ನು ಪ್ರಾಂರಭಿಸಿದೆವು ಎಂದು ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ಪಂತ್ ಹೇಳಿದ್ದಾರೆ.

    ಆರೋಪಿಯ ಮೇಲೆ ನವೆಂಬರ್ 13 ರಂದು ದೂರು ದಾಖಲಾಗಿತ್ತು. ಆದರೆ ಆರೋಪಿ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದನು. ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಆತನ ಇರುವಿಕೆಯ ಬಗ್ಗೆ ಮಾಹಿತಿ ತಿಳಿದು ಬಂಧಿಸಿದ್ದಾರೆ.

    ಬಂಧಿತ ಆರೋಪಿಯ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದೇವೆ. ಬಳಿಕ ತನಿಖೆಯ ಸಮಯದಲ್ಲಿ ಆರೋಪಿ ಎರಡು ಸಿಮ್ ಗಳನ್ನು ಹೊಂದಿದ್ದು, ಒಂದನ್ನು ಪತ್ನಿಯ ಫೋನ್ ನಂಬರ್, ಫೋಟೋಗಳನ್ನು ಪೋರ್ನ್ ವೆಬ್ ಸೈಟಿಗೆ ಕಳುಹಿಸುತ್ತಿದ್ದನು. ಅಷ್ಟೇ ಅಲ್ಲದೇ ಆ ಸಿಮ್ ಕಾರ್ಡ್ ನಿಂದ ಪತ್ನಿಗೂ ಕೂಡ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯಕ್ಕೆ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು 509ರ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪೋರ್ನ್ ವೆಬ್‍ಸೈಟಿಗೆ ಮಹಿಳಾ ಪೊಲೀಸ್ ವಿಡಿಯೋ ಅಪ್ಲೋಡ್ ಮಾಡ್ದ ಪೇದೆ!

    ಪೋರ್ನ್ ವೆಬ್‍ಸೈಟಿಗೆ ಮಹಿಳಾ ಪೊಲೀಸ್ ವಿಡಿಯೋ ಅಪ್ಲೋಡ್ ಮಾಡ್ದ ಪೇದೆ!

    ಪಾಟ್ನಾ: ಪೋರ್ನ್ ವೆಬ್ ಸೈಟಿಗೆ ಮಹಿಳಾ ಪೋಲೀಸ್ ಅವರ ಅಶ್ಲೀಲ ವಿಡಿಯೋವೊಂದನ್ನ ಪೇದೆಯೊಬ್ಬ ಅಪ್ಲೋಡ್ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಕಾನ್ಸ್ ಟೇಬಲ್ ಮಿಥಿಲೇಶ್ ಕುಮಾರ್ ಝಾ ವಿಡಿಯೋ ಅಪ್ಲೋಡ್ ಮಾಡಿರುವ ಪೇದೆ. ಗುರುವಾರ ಈತನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿ ಝಾ ಮಹಿಳಾ ಪೊಲೀಸ್ ಒಬ್ಬರ ಅಶ್ಲೀಲ ವಿಡಿಯೋವನ್ನು ತೆಗೆದುಕೊಂಡಿದ್ದು, ಆ ವಿಡಿಯೋವನ್ನು ಪೋರ್ನ್ ಸೈಟ್ ಗೆ ಅಪ್ಲೋಡ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆದ ಬಳಿಕ ಮಹಿಳಾ ಪೊಲೀಸ್ ಆತನ ವಿರುದ್ಧ ದೂರು ನೀಡಿದ್ದಾರೆ.

    ಬುದ್ಧ ಕಾಲೋನಿ ಪೊಲೀಸ್ ಠಾಣೆಯಲ್ಲಿ ಆರೋಪಿ ಝಾ ವಿರುದ್ಧ ಮಹಿಳಾ ಪೊಲೀಸ್ ದೂರು ನೀಡಿದ್ದಾರೆ. ಬಳಿಕ ದೂರಿನ ಆಧಾರದ ಮೇಲೆ ಈತನನ್ನು ಬಂಧಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧೀಕ್ಷಕ ಮನು ಮಹಾರಾಜ್ ಹೇಳಿದ್ದಾರೆ.

    ಆರೋಪಿ ಪೇದೆ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv