Tag: porn video

  • ಅಪ್ರಾಪ್ತ ಬಾಲಕಿಯರಿಗೆ ಅಶ್ಲೀಲ ವಿಡಿಯೋ ಕಳಿಸ್ತಿದ್ದ ಕಂಪ್ಯೂಟರ್ ಎಂಜಿನಿಯರ್ ಅರೆಸ್ಟ್

    ಅಪ್ರಾಪ್ತ ಬಾಲಕಿಯರಿಗೆ ಅಶ್ಲೀಲ ವಿಡಿಯೋ ಕಳಿಸ್ತಿದ್ದ ಕಂಪ್ಯೂಟರ್ ಎಂಜಿನಿಯರ್ ಅರೆಸ್ಟ್

    ಹಾವೇರಿ: ಅಪ್ರಾಪ್ತ ಬಾಲಕಿಯರಿಗೆ ಅಶ್ಲೀಲ ವಿಡಿಯೋ ಕಳಿಸುತ್ತಿದ್ದ ಕಂಪ್ಯೂಟರ್ ಎಂಜನಿಯರ್‍ನನ್ನು ಹಾವೇರಿಯಲ್ಲಿ ಬಂಧಿಸಲಾಗಿದೆ.

    ದಾವಣಗೆರೆ ಜಿಲ್ಲೆ ಹರಿಹರ ಮೂಲದ ಮಹ್ಮದ್ ಖಾಸಿ (28) ಬಂಧಿತ ಆರೋಪಿ. ಈತ ಹಿರೇಕೆರೂರು ಸಾರಿಗೆ ಡಿಪೋದಲ್ಲಿ ಕಂಪ್ಯೂಟರ್ ಎಂಜನಿಯರ್ ಆಗಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಡಿಪೋದಲ್ಲಿನ ನೌಕರರ ಅಪ್ರಾಪ್ತ ಮಕ್ಕಳು ಮತ್ತು ಅವರ ಗೆಳತಿಯರ ಮೊಬೈಲ್ ನಂಬರ್ ಪಡೆದು ಅಶ್ಲೀಲ ವಿಡಿಯೋ ಕಳಿಸುತ್ತಿದ್ದ ಎನ್ನಲಾಗಿದೆ. ನೌಕರರೊಬ್ಬರು ಮೊಬೈಲ್ ರಿಪೇರಿ ಮಾಡಿಸಿಕೊಳ್ಳಲು ಆರೋಪಿ ಬಳಿ ಮೊಬೈಲ್ ನೀಡಿದ್ದರು. ಈ ವೇಳೆ ಆತ ಅಪ್ರಾಪ್ತ ಬಾಲಕಿಯರ ನಂಬರ್ ಪಡೆದುಕೊಂಡಿದ್ದ ಎನ್ನಲಾಗಿದೆ.

    ಡಿಪೋದಲ್ಲಿನ ನೌಕರರ ವಾಟ್ಸಪ್ ಹ್ಯಾಕ್ ಮಾಡಿ ಈ ಕೃತ್ಯ ಎಸಗುತ್ತಿದ್ದ. ವಾಟ್ಸಪ್ ಮೂಲಕ ಬಾಲಕಿಯರಿಗೆ ಅಶ್ಲೀಲ ವಿಡಿಯೋ ಕಳಿಸುತ್ತಿದ್ದ.

    ಈ ಬಗ್ಗೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತಿ ಸ್ನೇಹಿತನಿಂದ ಅಶ್ಲೀಲ ವಿಡಿಯೋ ಅಪ್ಲೋಡ್: ಮನನೊಂದು ಗೃಹಿಣಿ ಆತ್ಮಹತ್ಯೆ

    ಪತಿ ಸ್ನೇಹಿತನಿಂದ ಅಶ್ಲೀಲ ವಿಡಿಯೋ ಅಪ್ಲೋಡ್: ಮನನೊಂದು ಗೃಹಿಣಿ ಆತ್ಮಹತ್ಯೆ

    ಮಂಡ್ಯ: ಪತಿಯ ಸ್ನೇಹಿತನೊಬ್ಬ ತನ್ನ ಅಶ್ಲೀಲ ದೃಶ್ಯ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರಿಂದ ಮನನೊಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಲ್ಲೆಯ ಮದ್ದೂರು ತಾಲೂಕಿನ ಸೋಮಮಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸಂಗೀತಾ (25) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಸಂಗೀತಾ ಅವರು ನವೀನ್ ಎಂಬವರ ಜೊತೆ ಪ್ರೇಮ ವಿವಾಹವಾಗಿದ್ದಳು. ಸಂಗೀತಾ ತನ್ನ ಪತಿಯ ಗೆಳೆಯ ಹೊಸಬೂದನೂರು ಗ್ರಾಮದ ನಿವಾಸಿ ಅನಿಲ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಅನಿಲ್ ಅಶ್ಲೀಲ ದೃಶ್ಯಗಳನ್ನು ತನ್ನ ಮೊಬೈಲನಲ್ಲಿ ಸೆರೆಹಿಡಿದು ಬ್ಲಾಕ್‍ಮೇಲ್ ಮಾಡುತ್ತಿದ್ದನು.

    ಅನಿಲ್

    ಕೊನೆಗೆ ಅನಿಲ್ ಸಂಗೀತಾ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದನು. ವಿಡಿಯೋ ವೈರಲ್ ಆಗುತ್ತಿದ್ದಂತೆ ಮನನೊಂದು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಸಂಗೀತಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಡೆತ್ ನೋಟ್‍ನಲ್ಲಿ ನನ್ನ ಸಾವಿಗೆ ಪತಿ ಗೆಳೆಯ ಅನಿಲ್ ಎಂದು ಬರೆಯಲಾಗಿದೆ.

    ಸ್ಥಳಕ್ಕೆ ಮದ್ದೂರು ಠಾಣಾ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಅನಿಲ್ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.