Tag: Porn Photo

  • ಪ್ರಭಾವಿ ವ್ಯಕ್ತಿಗಳನ್ನ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡ್ಕೊಂಡು ಹಣಕ್ಕೆ ಬ್ಲಾಕ್‍ಮೇಲ್ ಮಾಡ್ತಿರೋ ಖರ್ತನಾಕ್ ಲೇಡಿ

    ಪ್ರಭಾವಿ ವ್ಯಕ್ತಿಗಳನ್ನ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡ್ಕೊಂಡು ಹಣಕ್ಕೆ ಬ್ಲಾಕ್‍ಮೇಲ್ ಮಾಡ್ತಿರೋ ಖರ್ತನಾಕ್ ಲೇಡಿ

    ಬೀದರ್: ಸೋಶಿಯಲ್ ಮೀಡಿಯಾ ಮೂಲಕ ಪ್ರಭಾವಿ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಅವರ ನಗ್ನ ವೀಡಿಯೋ ಚಿತ್ರೀಕರಿಸಿ ಹಣ ವಸೂಲಿ ಮಾಡುವ ಜಾಲ ಗಡಿ ಜಿಲ್ಲೆ ಬೀದರ್‌ನಲ್ಲಿ ಬೆಳಕಿಗೆ ಬಂದಿದೆ.

    ಉತ್ತರ ಭಾರತದ ಬ್ಲಾಕ್ ಮೇಲ್ ಜಾಲವೊಂದು ಫೇಸ್‍ಬುಕ್‍ನಲ್ಲಿ ಚಂದದ ಹುಡುಗಿಯ ಡಿಪಿ ಇಟ್ಟುಕೊಂಡು ರಾಜಕಾರಣಿಗಳು, ಉದ್ಯಮಿಗಳು, ವಯಸ್ಕರಿಗೆ ಬ್ಲಾಕ್ ಮೇಲ್ ಮಾಡುವ ಮೂಲಕ ಹಣ ವಸೂಲಿ ಮಾಡುತ್ತಿದ್ದರು. ಇಂಥಾ ಜಾಲಕ್ಕೆ ಬೀದರ್ ಜಿಲ್ಲೆಯ 15 ಮಂದಿ ಸಿಲುಕಿ ಮಾನ ಮರ್ಯಾದೆಗೆ ಅಂಜಿ ಹಣ ಕಳೆದುಕೊಂಡ ಪ್ರಕರಣ ಪ್ರಸ್ತುತ ಬೆಳಕಿಗೆ ಬಂದಿದೆ. ಇದನ್ನೂ ಓದಿ: BJP, RSS ನಾಯಕರು ತಮ್ಮ ಮಕ್ಕಳನ್ನು ಯಾಕೆ ಅಗ್ನಿಪಥ್ ಯೋಜನೆಯಡಿ ಸೈನ್ಯಕ್ಕೆ ಸೇರಿಸುತ್ತಿಲ್ಲ: ರೈತ ಮುಖಂಡರ ಕಿಡಿ 

    ಏನಿದು ಘಟನೆ?
    ಬೀದರ್‌ನ ಬಿಜೆಪಿ ಮುಖಂಡ ಸಂಗಮೇಶ್ ನಾಸಿಗಾರ್ ಅವರಿಗೆ ಯುವತಿಯೊಬ್ಬಳು ಫೇಸ್‍ಬುಕ್‍ನಲ್ಲಿ ರಿಕ್ವೇಸ್ಟ್ ಕಳಿಸಿದ್ದಾಳೆ. ಬಳಿಕ ವಾಟ್ಸಪ್ ನಂಬರ್ ತೆಗೆದುಕೊಂಡು ವೀಡಿಯೋ ಕಾಲ್ ಮಾಡಿ ಸಂಗಮೇಶ್ ಫೋಟೋ ಸೆರೆ ಹಿಡಿದಿದ್ದಾಳೆ. ಬಳಿಕ ಕರೆ ಮಾಡಿ, ನಿನ್ನ ಅಶ್ಲೀಲ ಚಿತ್ರಗಳನ್ನು ಮಾಡಿದ್ದೇನೆ. ನನಗೆ ಹಣ ಕೊಡದಿದ್ದರೆ ಫೋಟೋ, ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆ ಎಂದು ಬ್ಲಾಕ್‌ ಮೇಲ್ ಮಾಡಲು ಪ್ರಾರಂಭ ಮಾಡಿದ್ದಾಳೆ.

    ಇದೇ ರೀತಿ ಫೇಸ್‍ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯ ಮಾಡಿಕೊಂಡ 15 ರಿಂದ 20 ದಿನದಲ್ಲಿ ಅವರ ಮಾಹಿತಿ ಕಲೆ ಹಾಕಿ ಬಳಿಕ ನಿಮ್ಮ ಅಶ್ಲೀಲ ಫೋಟೋಗಳನ್ನು ವೈರಲ್ ಮಾಡುತ್ತೇನೆ ಎಂದು ಬ್ಲಾಕ್ ಮೇಲೆ ಮಾಡುತ್ತಾಳೆ. ಇದನ್ನೂ ಓದಿ: ಸೋನಿಯಾ, ಪವಾರ್, ಮಮತಾ ಬ್ಯಾನರ್ಜಿಗೆ ಕರೆ ಮಾಡಿ ಬೆಂಬಲ ಕೋರಿದ ದ್ರೌಪದಿ ಮುರ್ಮು 

    ಈ ಬಗ್ಗೆ ಬಿಜೆಪಿ ಮುಖಂಡ ಸಂಗಮೇಶ್ ಸೈಬರ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    Live Tv

  • ಅಶ್ಲೀಲ ಫೋಟೋ ವಾಟ್ಸಪ್ ಗ್ರೂಪ್‍ಗೆ ಹಾಕಿ ಪೇಚೆಗೆ ಸಿಲುಕಿದ ಬಿಜೆಪಿ ಮುಖಂಡ

    ಅಶ್ಲೀಲ ಫೋಟೋ ವಾಟ್ಸಪ್ ಗ್ರೂಪ್‍ಗೆ ಹಾಕಿ ಪೇಚೆಗೆ ಸಿಲುಕಿದ ಬಿಜೆಪಿ ಮುಖಂಡ

    ಬೆಳಗಾವಿ: ಪಕ್ಷದ ಸಂಘಟನೆಗಾಗಿ ರಚಿಸಿದ್ದ ವಾಟ್ಸಪ್ ಗ್ರೂಪ್‍ನಲ್ಲಿ ಅಶ್ಲೀಲ ಫೋಟೋವೊಂದನ್ನು ಪೋಸ್ಟ್ ಮಾಡಿ, ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷ ಶಶಿಕಾಂತ್ ಪಾಟೀಲ್ ಪೇಚೆಗೆ ಸಿಲುಕಿದ್ದಾರೆ.

    ಸದ್ಯ ವಾಟ್ಸಪ್ ಗ್ರೂಪ್‍ನ ಸ್ಕ್ರಿನ್‍ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಬಿಜೆಪಿ ಕೆಎ ದಕ್ಷಿಣ ಮಂಡಲ’ ಹೆಸರಿನ ವಾಟ್ಸಪ್ ಗ್ರೂಪ್‍ನಲ್ಲಿ ಅವರು ಅಶ್ಲೀಲ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಶಶಿಕಾಂತ ಗೋವಾ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಮಧ್ಯ ರಾತ್ರಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿರುವ ಗ್ರೂಪ್‍ನಲ್ಲಿ ಅಶ್ಲೀಲ ಫೋಟೋ ಕಳಿಸಿದ್ದಾರೆ. ಇದನ್ನೂ ಓದಿ: ಮಗಳ ದಾಂಪತ್ಯ ಸರಿಪಡಿಸಲು ರಜನಿಕಾಂತ್ ಸರ್ಕಸ್

    ಅಶ್ಲೀಲ ಫೋಟೋ ನೋಡಿದ ಮಹಿಳಾ ಕಾರ್ಯಕರ್ತೆಯರು ಗ್ರೂಪ್‍ನಿಂದ ಎಕ್ಸಿಟ್ ಆಗಿದ್ದಾರೆ. ಬಳಿಕ ಗ್ರೂಪ್ ಅಡ್ಮಿನ್ ಗ್ರೂಪ್‍ನಿಂದ ಎಲ್ಲರನ್ನೂ ರಿಮೂವ್ ಮಾಡಿ ಗ್ರೂಪ್ ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಟ್ವಿಟ್ಟರ್ ರೀಚ್ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ – ದಾಖಲೆ ಮುಂದಿಟ್ಟು ಪರಾಗ್‍ಗೆ ರಾಹುಲ್ ಪತ್ರ

  • 20 ವರ್ಷದಿಂದ ಮಕ್ಕಳ ಅಶ್ಲೀಲ ಫೋಟೋ, ವೀಡಿಯೋ ಚಿತ್ರಿಸುತ್ತಿದ್ದ ಸಂಗೀತಗಾರ

    20 ವರ್ಷದಿಂದ ಮಕ್ಕಳ ಅಶ್ಲೀಲ ಫೋಟೋ, ವೀಡಿಯೋ ಚಿತ್ರಿಸುತ್ತಿದ್ದ ಸಂಗೀತಗಾರ

    ರೋಮ್: 20 ವರ್ಷಗಳಿಂದ ಮಕ್ಕಳ ಅಶ್ಲೀಲ ಫೋಟೋ ಮತ್ತು ವೀಡಿಯೋಗಳನ್ನು ಚಿತ್ರಿಸುತ್ತಿದ್ದ 49 ವರ್ಷದ ಸಂಗೀತಗಾರ ಇಂದು ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

    ವಯಸ್ಕರೊಂದಿಗೆ ಮಕ್ಕಳು ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಕೊಳ್ಳುವ ಲಕ್ಷಗಳಷ್ಟು ಫೋಟೋ ಮತ್ತು ವೀಡಿಯೋಗಳನ್ನು 49 ವರ್ಷದ ಸಂಗೀತಗಾರ ಹೊಂದಿದ್ದು, ಆತನನ್ನು ಇಟಾಲಿಯನ್ ಪೊಲೀಸರು ಇಂದು ಬಂಧಿಸಿದ್ದಾರೆ. ಇದನ್ನೂ ಓದಿ: 6 ಲಕ್ಷ ರೂ. ಬಹುಮಾನ ಘೋಷಣೆಯಾಗಿದ್ದ ಇಬ್ಬರು ಮಹಿಳಾ ನಕ್ಸಲರ ಹತ್ಯೆ

    ಇಟಲಿಯ ಮಾರ್ಚೆ ಪ್ರದೇಶದ ಕರಾವಳಿ ನಗರವಾದ ಅಂಕೋನಾದಲ್ಲಿ ಸಂಗೀತಗಾರನಾಗಿದ್ದ ವ್ಯಕ್ತಿ ಸುಮಾರು 20 ವರ್ಷಗಳಿಂದ ಮಕ್ಕಳನ್ನು ಬಳಸಿಕೊಂಡು ಅಶ್ಲೀಲ ವೀಡಿಯೋ ಮತ್ತು ಫೋಟೋಗಳ್ನು ಚಿತ್ರಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಅವನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ವಿವಿಧ ಹಾರ್ಡ್ ಡಿಸ್ಕ್‍ಗಳು, ಆಪ್ಟಿಕಲ್ ಮೀಡಿಯಾ ಮತ್ತು ಸ್ಮಾರ್ಟ್‍ಫೋನ್‍ನಲ್ಲಿ ಫೈಲ್‍ಗಳನ್ನು ಆತ ಇಟ್ಟುಕೊಂಡಿದ್ದನು. ಅದನ್ನು ಪೊಲೀಸರು ಪರಿಶೀಲಿಸಿದಾಗ ಮಕ್ಕಳ ಅಶ್ಲೀಲ ಫೋಟೋ ಮತ್ತು ವೀಡಿಯೋ ಇರುವುದು ಪತ್ತೆಯಾಗಿದೆ.

    ಅದು ಅಲ್ಲದೇ ಈ ಫೈಲ್ ಗಳಿಗೆ ಮಕ್ಕಳ ವಯಸ್ಸಿನ ಪ್ರಕಾರ ಹೆಸರನ್ನು ಕೊಟ್ಟು ವಿಂಗಡಿಸಲಾಗಿದ್ದು, ವಿಭಿನ್ನ ಫೋಲ್ಡರ್ ಗಳನ್ನು ಮಾಡಲಾಗಿದೆ. ಇದರಲ್ಲಿ ಅಪ್ರಾಪ್ತ ಮಕ್ಕಳ ಫೋಟೋ ಮತ್ತು ವೀಡಿಯೋಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದರು. ಇದನ್ನೂ ಓದಿ: ಎಂಜಿನಿಯರ್ ಮನೆಯಲ್ಲಿ 4 ಗಂಟೆ ದಾಳಿ ನಂತರ 60 ಲಕ್ಷ ರೂ. ಪತ್ತೆ

    ಈತ ಅಪ್ರಾಪ್ತ ಮಕ್ಕಳಿಗೆ ಸಂಗೀತವನ್ನು ಹೇಳಿಕೊಂಡುತ್ತಿದ್ದು, ಮಕ್ಕಳನ್ನು ಬಳಸಿಕೊಂಡು ಈ ರೀತಿಯ ಕೃತ್ಯವನ್ನು ಮಾಡುತ್ತಿದ್ದಾನೆ. ಆದರೆ ಈ ಕುರಿತು ಈತನ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಪೊಲೀಸರು ಹೇಳಿದರು.