Tag: pork biryani

  • ಭಾನುವಾರದ ಬಾಡೂಟಕ್ಕೆ ಮಾಡಿ ನೋಡಿ ಪೋರ್ಕ್ ಬಿರಿಯಾನಿ

    ಭಾನುವಾರದ ಬಾಡೂಟಕ್ಕೆ ಮಾಡಿ ನೋಡಿ ಪೋರ್ಕ್ ಬಿರಿಯಾನಿ

    ಪ್ರತಿದಿನ ಚಿಕನ್, ಮೀನು, ಮೊಟ್ಟೆ ಇಷ್ಟೇ ತಿಂದು ಬೇಸರವಾಗಿದೆಯೇ? ಹಾಗಾದರೆ ಒಮ್ಮೆ ಹಂದಿ (ಪೋರ್ಕ್) ಖಾದ್ಯಗಳನ್ನು ತಯಾರಿಸಿ ನೋಡಿ. ಮನೆಯಲ್ಲೇ ಅದನ್ನೆಲ್ಲಾ ಹೇಗಪ್ಪಾ ಮಾಡೋದು ಎಂದು ಯೋಚಿಸಬೇಡಿ. ಚಿಕನ್, ಮೀನು ಖಾದ್ಯ ತಯಾರಿಸುವ ಸಮಯದಲ್ಲೇ ಹಂದಿಮಾಂಸದ ಖಾದ್ಯಗಳನ್ನು ತಯಾರಿಸಿ ಸವಿಯಬಹುದಾಗಿದೆ. ಭಾನುವಾರದ ಬಾಡೂಟಕ್ಕೆ ಮಾಡಿ ನೋಡಿ ಪೋರ್ಕ್ ಬಿರಿಯಾನಿ.


    ಬೇಕಾಗುವ ಸಾಮಗ್ರಿಗಳು:
    * ಪೋರ್ಕ್ – 1 ಕೆಜಿ
    * ಅಕ್ಕಿ – 3 ಕಪ್
    * ಶುಂಠಿ – ಬೆಳ್ಳುಳ್ಳಿ ಪೇಸ್ಟ್ – 2 ಚಮಚ,
    * ಬೆಳ್ಳುಳ್ಳಿ – 1
    * ಕೊತ್ತಂಬರಿ ಸೊಪ್ಪು
    * ಪುದಿನ ಸೊಪ್ಪು
    * ಖಾರದ ಪುಡಿ – 1 ಟೀ ಸ್ಪೂನ್
    * ಗರಂಮಸಾಲೆ – 1 ಟೀ ಸ್ಪೂನ್
    * ಅರಿಸಿನ ಪುಡಿ- ಅರ್ಧ ಟೀ ಸ್ಪೂನ್
    * ಕಾಳುಮೆಣಸು – 1 ಟೀ ಸ್ಪೂನ್
    * ಏಲಕ್ಕಿ, ಲವಂಗ, ಚಕ್ಕೆ, ಸೋಂಪು ಕಾಳು
    * ಈರುಳ್ಳಿ – 3
    * ಟೊಮೆಟೊ – 2
    * ಹಸಿಮೆಣಸಿನಕಾಯಿ – 6
    * ಎಣ್ಣೆ – ಅರ್ಧ ಕಪ್
    * ಸಾಸಿವೆ- ಅರ್ಧ ಟೀ ಸ್ಪೂನ್
    * ಉಪ್ಪು ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಚೆನ್ನಾಗಿ ತೊಳೆದ ಪೋರ್ಕ್‍ಗೆ ಅರಿಸಿನಪುಡಿ, ಖಾರದಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಒಂದು ಗಂಟೆ ಫ್ರಿಜ್‍ನಲ್ಲಿಡಿ.

    * ಒಂದು ಕುಕ್ಕರ್‍ಗೆ ಎಣ್ಣೆ ಸಾಸಿವೆ, ಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಸೋಂಪುಕಾಳು, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಕದು ಬಣ್ಣಕ್ಕೆ ಬರುವವರೆಗೂ ಫ್ರೈ ಮಾಡಿ.


    * ನಂತರ ಟೊಮೆಟೊ, ಕೊತ್ತಂಬರಿಸೊಪ್ಪು, ಉಪ್ಪು, ಖಾರದಪುಡಿ ಹಾಕಿ ಫ್ರೈ ಮಾಡಿ.

    * ಈಗ ಫ್ರಿಜ್‍ನಲ್ಲಿ ಇಟ್ಟಿದ್ದ ಪೋರ್ಕ್ ಅನ್ನು ಹಾಕಿ 20 ನಿಮಿಷಗಳ ಕಾಲ ಬೇಯಿಸಬೇಕು. ಆ ಮೇಲೆ ಅಕ್ಕಿ ಅಳತೆಗೆ ಅನುಸಾರವಾಗಿ ನೀರು, ಉಪ್ಪು ಹಾಕಿ ಮುಚ್ಚಳ ಮುಚ್ಚಿ ಬೇಯಲು ಬಿಟ್ಟರೆ ರುಚಿಯಾದ ಪೋರ್ಕ್ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.