Tag: Pork

  • ಚಿಕನ್, ಪೋರ್ಕ್, 5 ಕ್ವಾಟರ್ ಎಣ್ಣೆ ಜೊತೆ ಪಾರ್ಟಿ – ಬೆಳಗಾಗುವಷ್ಟರಲ್ಲಿ ಅತ್ತೆ ಮರ್ಡರ್!

    ಚಿಕನ್, ಪೋರ್ಕ್, 5 ಕ್ವಾಟರ್ ಎಣ್ಣೆ ಜೊತೆ ಪಾರ್ಟಿ – ಬೆಳಗಾಗುವಷ್ಟರಲ್ಲಿ ಅತ್ತೆ ಮರ್ಡರ್!

    ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಅಳಿಯನೇ ಅತ್ತೆಯನ್ನ ಪೊರಕೆಯಲ್ಲಿ ಹೊಡೆದು ಕೊಲೆಗೈದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ.

    ಮೃತರನ್ನ ಕಾಳಮ್ಮ(60) ಎಂದು ಗುರುತಿಸಲಾಗಿದೆ. ರಮೇಶ್ (35) ಅತ್ತೆಯನ್ನ ಕೊಂದ ಅಳಿಯ. ಹಳ್ಳಿ-ಹಳ್ಳಿಗಳ ಮೇಲೆ ಕೆಲಸಕ್ಕೆ ಹೋಗುವ ರಮೇಶ್ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದನು. ಆರೋಪಿ ರಮೇಶ್‍ಗೆ 10 ವರ್ಷದೊಳಗಿನ ನಾಲ್ವರು ಮಕ್ಕಳಿದ್ದಾರೆ.

    ಆಗಾಗ್ಗೆ ಮನೆಗೆ ಬರುತ್ತಿದ್ದ ರಮೇಶ್, ಭಾನುವಾರ ಮಧ್ಯಾಹ್ನವೂ ಮನೆಗೆ ಬಂದಿದ್ದ. ಬಂದಾಗಲೇ ಅತ್ತೆ ಜೊತೆ ಸಣ್ಣದಾಗಿ ಜಗಳವಾಡಿ ಸಮಾಧಾನವಾಗಿದ್ದ. ಸಂಜೆ ಆತನೇ ಹೋಗಿ 5 ಕ್ವಾಟರ್ ಎಣ್ಣೆ, 1 ಕೆ.ಜಿ. ಚಿಕನ್ ಹಾಗೂ ಪೋರ್ಕ್ ತಂದಿದ್ದನು. ರಾತ್ರಿ ಆರೋಪಿ ರಮೇಶ್, ಪತ್ನಿ ಮಂಜುಳಾ ಹಾಗೂ ಅತ್ತೆ ಕಾಳಮ್ಮ ಎಲ್ಲರೂ ಕೂತು ಮದ್ಯ ಸೇವಿಸಿ ಊಟ ಮಾಡಿದ್ದಾರೆ. ಬಳಿಕ ಮತ್ತೆ ಮಾತಿಗೆ ಮಾತು ಬೆಳೆದು ಇಬ್ಬರು ನಡುವೆ ಜಗಳ ನಡೆದಿದೆ. ಈ ವೇಳೆ ಆರೋಪಿ ರಮೇಶ್ ಮೃತ ಕಾಳಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಅವರ ತಲೆ, ಕುತ್ತಿಗೆ ಬಳಿ ಗಾಯವಾಗಿತ್ತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಅಗ್ನಿ ಅವಘಡ – ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ, ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

    ನನ್ನ ಗಂಡನೇ ಹೊಡೆದು, ಪೊರಕೆಯಲ್ಲಿ ಹೊಡೆದು ಮನೆಯಿಂದ ಆಚೆ ತಳ್ಳಿದ್ದ ಎಂದು ರಮೇಶ್ ಪತ್ನಿ ಮಾಹಿತಿ ನೀಡಿದ್ದಾಳೆ. ಹಲ್ಲೆ ಮಾಡಿ ರಾತ್ರಿ ಹೊರಗಡೆ ತಳ್ಳಿದ್ದ ಕಾಳಮ್ಮ ಇಡೀ ರಾತ್ರಿ ಚಳಿಯಲ್ಲಿ ಹೊರಗಿದ್ದು ಸಾವನ್ನಪ್ಪಿದ್ದಾಳೆ. ಮೃತ ಕಾಳಮ್ಮ ಕಣ್ಣು ಕೂಡ ಮುಚ್ಚಿಲ್ಲ. ಹಾಗೇ ಸಾವನ್ನಪ್ಪಿದ್ದಾಳೆ. ಬೆಳಗ್ಗೆ ವಿಷಯ ತಿಳಿದು ರಮೇಶ್ ನಾಪತ್ತೆಯಾಗಿದ್ದ. ಬಳಿಕ ವಿಷಯ ತಿಳಿದ ಪೊಲೀಸರು ಆರೋಪಿ ರಮೇಶ್‍ನನ್ನ ಬಂಧಿಸಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಂದಿ ಮಾಂಸಕ್ಕಾಗಿ ಮುಗಿಬಿದ್ದ ನೂರಾರು ಜನರು

    ಹಂದಿ ಮಾಂಸಕ್ಕಾಗಿ ಮುಗಿಬಿದ್ದ ನೂರಾರು ಜನರು

    ಬೆಂಗಳೂರು: ಮಹಾಮಾರಿ ಕೊರೊನ ವೈರಸ್ ಭೀತಿಗೂ ಡೋಂಟ್ ಕೇರ್ ಎಂದ ನೂರಾರು ಜನ ಒಂದು ಹಂದಿ ಮಾಂಸಕ್ಕಾಗಿ ಮುಗಿಬಿದ್ದಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಸೊಂಡೆಕುಪ್ಪ ಬೈಪಾಸ್ ಬಳಿ ನಡೆದಿದೆ.

    ಈ ವೇಳೆ ಲಾಕ್‍ಡೌನ್ ಉಲ್ಲಂಘನೆ ಮಾಡುತ್ತಿದ್ದೀರಿ ಎಂದು ಪಶ್ನೆ ಮಾಡಲು ಮುಂದಾದ ವ್ಯಕ್ತಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಜೊತೆಗೆ ಗುಂಪು ಸೇರಲು ವಿರೋಧ ವ್ಯಕ್ತಪಡಿಸಿದ ನಗರಸಭೆ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಮಾಂಸಕ್ಕಾಗಿ ಬಂದ ಜನರು ಬೆದರಿಸಿದ್ದಾರೆ. ಆದರೆ ನಂತರ ಸ್ಥಳಕ್ಕೆ ಬಂದ ಪೊಲೀಸರು ಲಾಠಿ ಹಿಡಿದು ಗುಂಪನ್ನು ಚದುರಿಸಿದ್ದಾರೆ.

    ಲಾಠಿ ಹಿಡಿದು ಗುಂಪನ್ನು ಪೊಲೀಸರು ಚದುರಿಸುತ್ತಿದ್ದಂತೇ, ಹಂದಿ ಮಾಂಸ ಬಿಟ್ಟು ಜನರು ಓಡಿ ಹೋಗಿದ್ದಾರೆ. ಈಗಾಗಲೇ ನೆಲಮಂಗಲ ನಗರದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಮಾಂಸ ಮಾರಾಟ ನಿಷೇಧಿಸಿದೆ. ಆದರೂ ಮಾಂಸಕ್ಕೆ ಜನರು ಮುಗಿಬಿದ್ದಿರುವ ಘಟನೆ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಆರೋಗ್ಯ ಸಚಿವರ ತವರು ಜಿಲ್ಲಾಸ್ಪತ್ರೆ ಈಗ ಹಂದಿಗಳ ವಾಸ ಸ್ಥಳ

    ಆರೋಗ್ಯ ಸಚಿವರ ತವರು ಜಿಲ್ಲಾಸ್ಪತ್ರೆ ಈಗ ಹಂದಿಗಳ ವಾಸ ಸ್ಥಳ

    ಬಳ್ಳಾರಿ: ಸದಾ ಅವ್ಯವಸ್ಥೆಗಳ ಮೂಲಕವೇ ಸುದ್ದಿಯಾಗುವ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕಲ್ಯಾಣ ಕರ್ನಾಟಕದ ಬಹು ದೊಡ್ಡ ಆಸ್ಪತ್ರೆ ಅಂದರೆ ಅದು ಗಣಿ ನಾಡು ಬಳ್ಳಾರಿ ವಿಮ್ಸ್ ಆಸ್ಪತ್ರೆ. ಆದರೆ ಆಸ್ಪತ್ರೆ ಈಗ ಹಂದಿಗಳ ವಾಸ ಸ್ಥಾನವಾಗಿ ಮಾರ್ಪಟ್ಟಿದೆ. ರೋಗಿಗಳಿಗೆ ಆರೋಗ್ಯವನ್ನು ನೀಡಬೇಕಾದ ಆಸ್ಪತ್ರೆಯೇ ರೋಗ ಹರಡುವ ಸ್ಥಳವಾಗಿದೆ.

    ಬಳ್ಳಾರಿ ವಿಮ್ಸ್ ಆಸ್ಪತ್ರೆಯನ್ನು 10 ಎಕೆರೆ ಜಾಗದಲ್ಲಿ ನಿರ್ಮಿಸಲಾಗಿದೆ. ಆದರೆ ಆಸ್ಪತ್ರೆಯ ಬಹುತೇಕ ಭಾಗದಲ್ಲಿ ಚರಂಡಿ ನೀರು, ಒಳಚರಂಡಿ ಕೊಳಕು ನೀರು ಹರಿದು ಬರುತ್ತೆ. ಜೊತೆಗೆ ಇದೇ ನೀರಿನಲ್ಲಿ ಹಂದಿಗಳು ವಾಸ ಮಾಡುತ್ತವೆ. ಆಸ್ಪತ್ರೆಯ ಆವರಣದಲ್ಲಿ ಸುಮಾರು ನೂರಕ್ಕೆ ಹೆಚ್ಚು ಹಂದಿಗಳು ದಂಡೆ ಇದೆ. ಹೀಗಿದ್ದರೂ ಆಸ್ಪತ್ರೆಯಲ್ಲಿ ನೈರ್ಮಲ್ಯ ಕಾಪಾಡಲು ವಿಮ್ಸ್ ಆಡಳಿತ ಮಂಡಳಿ ಮುಂದಾಗಿಲ್ಲ.

    ಚಿಕಿತ್ಸೆಗಾಗಿ ರಾಯಚೂರು. ಬಳ್ಳಾರಿ ಪಕ್ಕದ ಆಂಧ್ರ ಪ್ರದೇಶದ ಸಾವಿರಾರು ಜನ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಹೀಗೆ ಚಿಕಿತ್ಸೆಗೆ ಬಂದವರು ರೋಗಿಗಳ ಜೊತೆಯಲ್ಲಿ ಅವರ ಸಂಬಂಧಿಕರು ಸಹ ಆಸ್ಪತ್ರೆಗೆ ಬಂದಿರುತ್ತಾರೆ. ಆದರೆ ಬಂದವರಿಗೆ ಆಸ್ಪತ್ರೆಯಲ್ಲಿ ಮಲಗುವ ವ್ಯವಸ್ಥೆ ಇರುವುದಿಲ್ಲ.

    ಹೀಗಾಗಿ ಜನ ಆಸ್ಪತ್ರೆಯ ಕೊಳಕು ನೀರು ಇರುವ ಪಕ್ಕದ ಜಾಗದಲ್ಲಿಯೇ ಇದೇ ಆವರಣದಲ್ಲಿ ಮಲಗುತ್ತಾರೆ. ಇಲ್ಲಿಯೇ ಊಟ ಮಾಡಬೇಕಾದ ಸ್ಥಿತಿ ಉಂಟಾಗಿದೆ. ಹೀಗಾಗಿ ರೋಗಿಗಳ ಜೊತೆಯಲ್ಲಿ ಬಂದವರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಹೈದರಾಬಾದ್ ಕರ್ನಾಟಕದ ಅತಿ ದೊಡ್ಡ ಆಸ್ಪತ್ರೆ ಅವ್ಯವಸ್ಥೆ ಗಮನಕ್ಕೆ ಬಂದರೂ ಆರೋಗ್ಯ ಸಚಿವ ಶ್ರೀರಾಮುಲು ಸುಮ್ಮನಿದ್ದಾರೆ. ಸರ್ಕಾರ ಉಳಿಸುವ ಮಂತ್ರಿಗಿರಿ ಪಡೆಯುವಲ್ಲಿ ಕಾಲ ಕಳೆಯುವ ಈ ಮಂತ್ರಿಗಳಿಗೆ ಈ ಆಸ್ಪತ್ರೆಯ ಪರಿಸ್ಥಿತಿ ಯಾಕೆ ಕಾಣುತಿಲ್ಲಾ ಎಂಬುದು ಜನರ ಪ್ರಶ್ನೆಯಾಗಿದೆ.

  • ಝೊಮೆಟೊದಲ್ಲಿ ಮತ್ತೆ ವಿವಾದ – ದನ, ಹಂದಿ ಮಾಂಸ ಡೆಲಿವರಿ ಮಾಡಲ್ಲ ಎಂದ ಸಿಬ್ಬಂದಿ

    ಝೊಮೆಟೊದಲ್ಲಿ ಮತ್ತೆ ವಿವಾದ – ದನ, ಹಂದಿ ಮಾಂಸ ಡೆಲಿವರಿ ಮಾಡಲ್ಲ ಎಂದ ಸಿಬ್ಬಂದಿ

    ಕೊಲ್ಕತ್ತಾ: ಝೊಮೆಟೊ ಆನ್‍ಲೈನ್ ಫುಡ್ ಡೆಲಿವರಿ ಸಂಸ್ಥೆ ಇತ್ತೀಚಿಗೆ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿಕೊಳ್ಳುತ್ತಿದೆ. ಕಳೆದ ತಿಂಗಳಷ್ಟೇ ಹಿಂದೂ ಗ್ರಾಹಕರೊಬ್ಬರು ಮುಸ್ಲಿಂ ಯುವಕ ಆಹಾರ ತಂದಿದಕ್ಕೆ ಆರ್ಡರ್ ಕ್ಯಾನ್ಸಲ್ ಮಾಡಿದ್ದರು. ಇದು ಧಾರ್ಮಿಕ ವಿವಾದವಾಗಿ ದೇಶದೆಲ್ಲೆಡೆ ಭಾರೀ ಚರ್ಚೆಯಾಗಿತ್ತು.

    ಈಗ ಮತ್ತೆ ಇದೇ ರೀತಿಯ ಧಾರ್ಮಿಕ ವಿಚಾರದಲ್ಲೇ ಝೊಮೆಟೊ ಸಂಕಷ್ಟಕ್ಕೆ ಸಿಲುಕಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಹಿಂದೂ ಮತ್ತು ಮುಸ್ಲಿಂ ಸಿಬ್ಬಂದಿ ನಾವು ನಮ್ಮ ಧರ್ಮಕ್ಕೆ ವಿರುದ್ಧವಾದ ಗೋಮಾಂಸ ಮತ್ತು ಹಂದಿ ಮಾಂಸವನ್ನು ಡೆಲಿವರಿ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

    ಸೋಮವಾರದಿಂದ ಆಚರಣೆ ಮಾಡುವ ಬಕ್ರಿದ್ ಹಬ್ಬಕ್ಕೆ ನಾವು ಗೋಮಾಂಸ ಮತ್ತು ಹಂದಿ ಮಾಂಸವನ್ನು ಡೆಲಿವರಿ ಮಾಡುವುದಿಲ್ಲ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಝೊಮೆಟೊ ಸಂಸ್ಥೆ ನಮ್ಮ ಉದ್ಯೋಗ ಮತ್ತು ಭಾವನೆಗಳ ಜೊತೆ ಆಟವಾಡುತ್ತಿದೆ ಎಂದು ಸೋಮವಾರ ಹಿಂದೂ ಮತ್ತು ಮುಸ್ಲಿಂ ಹುಡುಗರು ಝೊಮೆಟೊ ವಿರುದ್ಧ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಹಿಂದೂ ಆಹಾರ ವಿತರಣಾ ಸಿಬ್ಬಂದಿ ಬಜರಾಜ್ ನಾಥ್ ಬ್ರಹ್ಮ, ನಾನು ಹಿಂದೂ. ಇಲ್ಲಿ ಮುಸ್ಲಿಂ ಡೆಲಿವರಿ ಹುಡುಗರೂ ಇದ್ದಾರೆ. ಒಟ್ಟಿಗೆ ಕೆಲಸ ಮಾಡುವಲ್ಲಿ ನಮಗೆ ಯಾವುದೇ ಸಮಸ್ಯೆಗಳಿಲ್ಲ. ಝೊಮೆಟೊ ಪ್ರಸ್ತುತ ಕೆಲವು ಹೊಸ ರೆಸ್ಟೋರೆಂಟ್‍ಗಳೊಂದಿಗೆ ಸಂಬಂಧ ಹೊಂದಿದ್ದು, ಗೋಮಾಂಸ ಮತ್ತು ಹಂದಿ ಮಾಂಸವನ್ನು ವಿತರಣೆ ಮಾಡುತ್ತಿದೆ. ಇದರಿಂದ ಹಿಂದೂ ವಿತರಣಾ ಸಿಬ್ಬಂದಿ ಮತ್ತು ಮುಸ್ಲಿಂ ವಿತರಣಾ ಸಿಬ್ಬಂದಿ ಇಬ್ಬರಿಗೂ ಸಮಸ್ಯೆಯಾಗುತ್ತಿದೆ. ನಮ್ಮ ಧಾರ್ಮಿಕ ಭಾವನೆಗೆ ನೋವಾಗುತ್ತಿದೆ. ಇದ್ದರಿಂದ ತಕ್ಷಣವೇ ಈ ಯೋಜನೆಯನ್ನು ಸಂಸ್ಥೆ ನಿಲ್ಲಿಸಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ. ಈ ವಿಚಾರವಾಗಿ ನಾವು ಸೋಮವಾರ ಕೆಲಸ ಮಾಡದೇ ಮುಷ್ಕರ ನಡೆಸುತ್ತೇವೆ ಎಂದು ಹೇಳಿದ್ದಾರೆ.

    ಮುಸ್ಲಿಂ ಆಹಾರ ವಿತರಣಾ ಸಿಬ್ಬಂದಿ ಮೌಸಿರ್ ಅಖ್ತರ್ “ನಾವು ಈ ಸಮಸ್ಯೆಯ ಬಗ್ಗೆ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ, ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗೆ ಕೆಲ ಮುಸ್ಲಿಂ ಹೋಟೆಲ್‍ಗಳನ್ನು ಝೊಮೆಟೊ ತನ್ನ ವಿತರಣಾ ಅಪ್ಲಿಕೇಶನ್‍ಗೆ ಸೇರಿಸಿಕೊಂಡಿದೆ. ಅಲ್ಲಿ ಮಾಡುವ ಗೋಮಾಂಸವನ್ನು ಕೆಲ ಹಿಂದೂ ಹುಡುಗರು ವಿತರಣೆ ಮಾಡುವುದಿಲ್ಲ ಎಂದು ನಿರಾಕರಿಸಿದ್ದಾರೆ. ಹಾಗೆಯೇ ನಾವು ಕೂಡ ಹಂದಿ ಮಾಂಸವನ್ನು ವಿತರಣೆ ಮಾಡುವುದಿಲ್ಲ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುತ್ತಿದೆ. ಈ ವಿಚಾರದ ಬಗ್ಗೆ ಕಂಪನಿಗೆ ಎಲ್ಲ ತಿಳಿದಿದ್ದರು. ನಮಗೆ ಯಾವುದೇ ಸಹಾಯ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಈ ವಿಚಾರದಲ್ಲಿ ಝೊಮೆಟೊ ಹುಡುಗರ ಬೆಂಬಲಕ್ಕೆ ನಿಂತಿರುವ ಪಶ್ಚಿಮ ಬಂಗಾಳದ ಸಚಿವ ಮತ್ತು ಟಿಎಂಸಿ ಶಾಸಕರ ಹೌರಾ ರಾಜೀಬ್ ಬ್ಯಾನರ್ಜಿ, ಈ ರೀತಿಯ ಯೋಚನೆಗಳನ್ನು ಸಂಸ್ಥೆ ಜಾರಿಗೆ ತರುವಾಗ ಸ್ವಲ್ಪ ಯೋಚಿಸಬೇಕು. ಯಾವ ವ್ಯಕ್ತಿಯನ್ನು ಅವರ ಧಾರ್ಮಿಕ ಭಾವನೆಗಳ ವಿರುದ್ಧ ನಡೆಸಿಕೊಳ್ಳಬಾರದು. ಇದು ತಪ್ಪು. ಈ ವಿಚಾರದ ಬಗ್ಗೆ ನನಗೆ ತಿಳಿದಿರಲಿಲ್ಲ. ಈಗ ನನ್ನ ಗಮನಕ್ಕೆ ಬಂದಿದೆ ನಾನು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.