Tag: porcupine

  • ಮುಳ್ಳುಹಂದಿ ಬೇಟೆಯಾಡಲು ಗುಹೆಗೆ ನುಗ್ಗಿದ್ದ ಇಬ್ಬರು ಉಸಿರುಗಟ್ಟಿ ಸಾವು

    ಮುಳ್ಳುಹಂದಿ ಬೇಟೆಯಾಡಲು ಗುಹೆಗೆ ನುಗ್ಗಿದ್ದ ಇಬ್ಬರು ಉಸಿರುಗಟ್ಟಿ ಸಾವು

    ಚಿಕ್ಕಮಗಳೂರು: ಮೂಲತಃ ತಮಿಳುನಾಡಿನವರು (Tamil Nadu) ಕಾಫಿ ತೋಟದ ಕೆಲಸಕ್ಕೆ ಬಂದು ಮುಳ್ಳುಹಂದಿ (Porcupine) ಬೇಟೆಗೆ ಹಂದಿಗಳ ಗುಹೆಗೆ ನುಗ್ಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ನಡೆದಿದೆ.

    ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್‌ನ ಸಮೀಪದ ಬೆಟ್ಟದ ಸುರಂಗದಲ್ಲಿ ಮುಳ್ಳುಹಂದಿ ಹಿಡಿಯುಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಮೃತರು ತಮಿಳುನಾಡು ಮೂಲದ ಕಾರ್ಮಿಕರೆಂದು ತಿಳಿದುಬಂದಿದೆ. ಮೃತರನ್ನ ಗೋವಿಂದರಾಜು (30) ಹಾಗೂ ವಿಜಯ್ ಕುಮಾರ್ (29) ಎಂದು ಗುರುತಿಸಲಾಗಿದೆ. ಬೇಟೆಗೆ ಹೋದಾಗ ಮಣ್ಣು ಕುಸಿತವಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಾಟರ್ ಹೀಟರ್‌ನಿಂದ ವಿದ್ಯುತ್ ಶಾಕ್ – ತಾಯಿ ಮಗು ಬಲಿ

    ಕಾಫಿ ತೋಟದಲ್ಲಿ ಕಾಳುಮೆಣಸು ಕೊಯ್ಯಲು ಬಂದಿದ್ದ ತಮಿಳುನಾಡು ಮೂಲದ ನಾಲ್ವರು ಕಾರ್ಮಿಕರು ಬೆಟ್ಟದಲ್ಲಿ ಮುಳ್ಳುಹಂದಿ ಶಿಕಾರಿಗೆ ತೆರಳಿದ್ದರು. ಮುಳ್ಳುಹಂದಿ ಗುಹೆಗೆ ಹೊಗೆ ಹಾಕಿ ನಂತರ ಒಬ್ಬೊಬ್ಬರಾಗಿ ಸುರಂಗದ ಒಳಗೆ ಹೋಗಿದ್ದಾರೆ. ಒಬ್ಬರು ಬರಲಿಲ್ಲ ಎಂದು ಮತ್ತೊಬ್ಬರು ಹೋಗಿದ್ದಾರೆ. ಕೊನೆಗೆ ಇಬ್ಬರು ವಾಪಾಸ್ಸು ಬಂದಿದ್ದು, ಇನ್ನಿಬ್ಬರು ಸುರಂಗದೊಳಗೇ ಸಿಲುಕಿದ್ದಾರೆ. ಅಲ್ಲಿಯೇ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

    ಸ್ಥಳಕ್ಕೆ ಪೊಲೀಸ್, ಅರಣ್ಯ ಹಾಗೂ ಅಗ್ನಿಶಾಮಕ ತಂಡ ಭೇಟಿ ನೀಡಿ ಗುಹೆಯಿಂದ ಶವಗಳನ್ನು ಹೊರತೆಗೆದಿದ್ದಾರೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸದ್ಯಕ್ಕೆ ಟೋಲ್‌ ಸಂಗ್ರಹ ಇಲ್ಲ

  • ಮುಳ್ಳು ಹಂದಿ ಚಿತ್ರದಂತೆ ಕಾಣುವ ವೈದ್ಯರ ಸಹಿ ವೈರಲ್

    ಮುಳ್ಳು ಹಂದಿ ಚಿತ್ರದಂತೆ ಕಾಣುವ ವೈದ್ಯರ ಸಹಿ ವೈರಲ್

    ಡಿಸ್ಪುರ್: ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಯೊಬ್ಬರು ಮುಳ್ಳು ಹಂದಿಯಂತೆ ಕಾಣುವ ಸಹಿ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿ ಸಹಿ ವೈರಲ್ ಆಗಿದೆ. ನೆಟ್ಟಿಗರೊಬ್ಬರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಖಾಕಿ ಶರ್ಟ್ ಧರಿಸಿ ಸ್ಟೇರಿಂಗ್ ಹಿಡಿದು ರಸ್ತೆಯಲ್ಲಿ ಸಂಚಾರ – ನೋವಿನ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ

    ಗುವಾಹಟಿಯ ವೈದ್ಯಕೀಯ ಕಾಲೇಜಿನ ಮೂಳೆ ಚಿಕಿತ್ಸಾ ವಿಭಾಗದ ರಿಜಿಸ್ಟ್ರಾರ್‌ನ ಮುದ್ರೆಯ ಮೇಲೆ ಈ ಸಹಿ ಇದೆ. ಈ ಫೋಟೋವನ್ನು ನಾನು ತೆಗೆದಿದ್ದೇನೆ. ನಾನು ಇಲ್ಲಿಯವರೆಗೆ ವಿಶಿಷ್ಟ ಸಹಿಗಳನ್ನು ನೋಡಿದ್ದೇನೆ. ಆದರೆ ಇದೇ ಬೆಸ್ಟ್ ಸಿಗ್ನೇಚರ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ವೈರಲ್ ಆಗಿರುವ ಈ ಹಸಿ ಕೆಳಗೆ 2022 ಮಾರ್ಚ್ 4 ಎನ್ನುವ ದಿನಾಂಕ ಇರುವುದನ್ನು ನೋಡ ಬಹುದಾಗಿದೆ. ಇದನ್ನೂ ಓದಿ: ಬಪ್ಪನಾಡು ದೇವಸ್ಥಾನ ಹಾಗೂ ಮಾರಿಕಾಂಬಾ ದೇವಸ್ಥಾನ ಕಟ್ಟಿದವರು ಮುಸ್ಲಿಮರು: ರಿಜ್ವಾನ್

    ಈ ಸಹಿಯನ್ನ ಕಂಡ ನೆಟ್ಟಿಗರು ವಿವಿಧ ರೀತಿಯ ಕಾಮೆಂಟುಗಳನ್ನ ಮಾಡುತ್ತಿದ್ದಾರೆ. ಇಬ್ಬ ಬಳಕೆದಾರ, ಇದು ಥೇಟ್ ಮುಳ್ಳುಹಂದಿಯಂತೆ ಕಾಣುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಮುಳ್ಳುಹಂದಿಯನ್ನು ಅಡ್ಡಗಟ್ಟಿ ಮುಖ ಪರಿಚಿಕೊಂಡ ಚಿರತೆ: ವಿಡಿಯೋ

    ಮುಳ್ಳುಹಂದಿಯನ್ನು ಅಡ್ಡಗಟ್ಟಿ ಮುಖ ಪರಿಚಿಕೊಂಡ ಚಿರತೆ: ವಿಡಿಯೋ

    ನವದೆಹಲಿ: ಮುಳ್ಳುಹಂದಿಯನ್ನು ಅಡ್ಡಗಟ್ಟಿ ಬೇಟೆಯಾಡಲು ಹೋದ ಚಿರತೆಯೊಂದು ಮುಖ ಪರಚಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಭಾರತೀಯ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚಿರತೆ ಮತ್ತು ಮುಳ್ಳುಹಂದಿ ನಡುವಿನ ರೋಚಕ ಕದನದ ಹಳೇ ವಿಡಿಯೋ ಇದು. ಇದರಲ್ಲಿ ಚಿರತೆ ಮುಳ್ಳುಹಂದಿಯ ಮುಳ್ಳಿನಿಂದ ಒಳ್ಳೆಯ ಪಾಠ ಕಲಿತಿದೆ ಎಂದು ಬರೆದುಕೊಂಡಿದ್ದಾರೆ.

    https://twitter.com/ParveenKaswan/status/1197117490452545536

    58 ಸೆಕೆಂಡ್ ಇರುವ ಈ ವಿಡಿಯೋವನ್ನು ರಾತ್ರಿ ಸಮಯದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋದಲ್ಲಿ ಕಾಡು ಮಧ್ಯೆ ಇರುವ ರಸ್ತೆಯಲ್ಲಿ ಮುಳ್ಳುಹಂದಿ ಮತ್ತು ಚಿರತೆ ಮುಖಾಮುಖಿ ಆಗುತ್ತವೆ. ಈ ವೇಳೆ ಮುಳ್ಳುಹಂದಿಯನ್ನು ಬೇಟೆಯಾಡಲು ಚಿರತೆ ಮುಂದಾಗುತ್ತದೆ. ಆದರೆ ಬುದ್ಧಿವಂತ ಹಂದಿ ತನ್ನ ಮುಳ್ಳುಗಳ ಮೂಲಕ ತನ್ನನ್ನು ಉಳಿಸಿಕೊಳ್ಳುತ್ತದೆ. ಭೇಟೆಯಾಡಲು ಬಾಯಿ ಹಾಕಿದ ಚಿರತೆ ಮುಖ ಪರಚಿಸಿಕೊಂಡು ಮುಳ್ಳು ಚುಚ್ಚಿಸಿಕೊಂಡು ಬಂದ ದಾರಿಯಲ್ಲಿ ವಾಪಸ್ ಹೋಗುತ್ತದೆ.

    ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಬಹಳ ಜನ ಕಾಮೆಂಟ್ ಮಾಡಿದ್ದಾರೆ. ಮುಳ್ಳುಹಂದಿಯ ಸಹವಾಸ ಮಾಡಿ ಚಿರತೆ ಒಳ್ಳೆಯ ಪಾಠವನ್ನೆ ಕಲಿತುಕೊಂಡಿತು ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಪಾಪ ಚಿರತೆಗೆ ತುಂಬಾ ನೋವಾಗಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.

    ಈ ವಿಡಿಯೋ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಪರ್ವೀನ್ ಕಸ್ವಾನ್ ಅವರು, ಈ ಟ್ವಿಟ್ಟರ್ ನಲ್ಲಿ ಮುಳ್ಳುಹಂದಿಯ ಬಲಿಷ್ಠ ಮುಳ್ಳಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಇದು ಮುಳ್ಳುಹಂದಿಯ ಬಲಿಷ್ಠ ಮುಳ್ಳು. ಈ ಪ್ರಾಣಿ ಇದನ್ನು ತನ್ನ ಜೀವ ರಕ್ಷಣೆಗಾಗಿ ಬಳಸಿಕೊಳ್ಳುತ್ತದೆ. ಒಂದು ಮುಳ್ಳುಹಂದಿಯಲ್ಲಿ ಸುಮಾರು ಮೂರು ಸಾವಿರ ಮುಳ್ಳುಗಳು ಇರುತ್ತವೆ ಎಂದು ಬರೆದುಕೊಂಡಿದ್ದಾರೆ.