Tag: population control

  • 75ನೇ ವರ್ಷಕ್ಕೆ ಮೋದಿ ನಿವೃತ್ತಿ ವದಂತಿ – RSS ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ಪಷ್ಟನೆ

    75ನೇ ವರ್ಷಕ್ಕೆ ಮೋದಿ ನಿವೃತ್ತಿ ವದಂತಿ – RSS ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ಪಷ್ಟನೆ

    ನವದೆಹಲಿ: ಮುಂಬರುವ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 75ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅಲ್ಲದೇ 75ನೇ ವಯಸ್ಸಿನಲ್ಲೇ ನಿವೃತ್ತಿ ಆಗಲಿದ್ದಾರೆ ಅನ್ನೋ ಚರ್ಚೆ ಹುಟ್ಟುಹಾಕಿತ್ತು. ಇದೀಗ ಎಲ್ಲ ಊಹಾಪೋಹಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ತೆರೆ ಎಳೆದಿದ್ದಾರೆ.

    ಸ್ವತಃ ಭಾಗವತ್ ಅವರು ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿಯವರಿಗಿಂತ ಆರು ದಿನ ಮುಂಚಿತವಾಗಿ 75ನೇ ವಯಸ್ಸಿಗೆ ಕಾಲಿಡುತ್ತಿರುವುದು ಇಲ್ಲಿ ಗಮನಾರ್ಹ.

    ಆರ್‌ಎಸ್‌ಎಸ್‌ 100ನೇ ವರ್ಷದ‌ ಹಿನ್ನೆಲೆ ನಡೆಸ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಗವತ್‌ ಅವರು, 75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಎಂದು ನಾನು ಎಂದಿಗೂ ಹೇಳಿಲ್ಲ, ಎಂದು ಸ್ಪಷ್ಟಪಡಿಸಿದರು.

    ಸಂಘ ನಮಗೆ ಏನು ಹೇಳುತ್ತದೆಯೋ ಅದನ್ನು ನಾವು ಮಾಡುತ್ತೇವೆ. ನಾವೆಲ್ಲರೂ ಸಂಘದ ಸ್ವಯಂಸೇವಕರು. ನಮಗೆ ಇಷ್ಟವಿರಲಿ, ಇಲ್ಲದಿರಲಿ, ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ನಾನು 80 ವರ್ಷವಾದರೂ ಸಂಘವನ್ನು ಮುನ್ನಡೆಸುತ್ತೇನೆ ಎಂದು ಸಹ ತಿಳಿಸಿದರು. ಇದನ್ನೂ ಓದಿ: ನಾವಿಬ್ಬರು, ನಮಗೆ ಮೂವರು – ಪ್ರತಿ ಕುಟುಂಬವೂ ಮೂರು ಮಕ್ಕಳನ್ನ ಹೊಂದಬೇಕು: ಮೋಹನ್ ಭಾಗವತ್

  • ನಾವಿಬ್ಬರು, ನಮಗೆ ಮೂವರು – ಪ್ರತಿ ಕುಟುಂಬವೂ ಮೂರು ಮಕ್ಕಳನ್ನ ಹೊಂದಬೇಕು: ಮೋಹನ್ ಭಾಗವತ್

    ನಾವಿಬ್ಬರು, ನಮಗೆ ಮೂವರು – ಪ್ರತಿ ಕುಟುಂಬವೂ ಮೂರು ಮಕ್ಕಳನ್ನ ಹೊಂದಬೇಕು: ಮೋಹನ್ ಭಾಗವತ್

    – ಸರಿಯಾದ ವಯಸ್ಸಿನಲ್ಲಿ ಮದ್ವೆಯಾದ್ರೆ ಪೋಷಕರು, ಮಕ್ಕಳು ಆರೋಗ್ಯವಾಗಿರ್ತಾರೆ
    – ಹಿಂದೂಗಳು ಎಲ್ಲವನ್ನೂ ಕಿತ್ತುಕೊಳ್ತಾರೆ ಅಂತ ಭಾವಿಸುವಂತೆ ಮಾಡಲಾಗಿದೆ; ಕಳವಳ

    ನವದೆಹಲಿ: ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು, ಇದು ದೇಶಕ್ಕೂ ಒಳ್ಳೆಯದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ (Mohan Bhagwat) ಹೇಳಿದರು.

    ಆರ್‌ಎಸ್‌ಎಸ್‌ (RSS) 100 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು, ಇದು ದೇಶಕ್ಕೂ ಒಳ್ಳೆಯದು. ಮೂರಕ್ಕಿಂತ ಕಡಿಮೆ ಜನನದರ (Birth Rate) ಹೊಂದಿರುವ ಸಮುದಾಯಗಳು ನಿಧಾನವಾಗಿ ನಶಿಸಿಹೋಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಎಲ್ಲಾ ದೇಶಗಳಲ್ಲೂ ಈ ಪ್ರಕ್ರಿಯೆ ಸಹಜ. ಆದ್ದರಿಂದ ಮೂರಕ್ಕಿಂತ ಹೆಚ್ಚಿನ ಜನನ ಪ್ರಮಾಣವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಕೇಂದ್ರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಗಣೇಶ ಹಬ್ಬದ ಬಂಪರ್‌ ಗಿಫ್ಟ್‌ – ಪಿಎಂ ಸ್ವನಿಧಿ ಯೋಜನೆ 5 ವರ್ಷ ವಿಸ್ತರಣೆ

    ಸರಿಯಾದ ವಯಸ್ಸಿನಲ್ಲಿ ಮದ್ವೆಯಾಗೋದ್ರಿಂದ (Marriage) ಮೂವರು ಮಕ್ಕಳನ್ನು ಹೊಂದಬಹುದು. ಜೊತೆಗೆ ಪೋಷಕರು ಮತ್ತು ಮಕ್ಕಳು ಇಬ್ಬರು ಆರೋಗ್ಯವಾಗಿರ್ತಾರೆ ಅಂತ ವೈದ್ಯರೇ ಹೇಳಿದ್ದಾರೆ. ಮೂವರು ಒಡಹುಟ್ಟಿದವರು ಇರುವ ಮನೆಗಳಲ್ಲಿ ಅಹಂಕಾರ ನಿಯಂತ್ರಿಸೋದನ್ನ ಕಲಿಯುತ್ತಾರೆ. ಇದರಿಂದ ಭವಿಷ್ಯದಲ್ಲಿ ಅವರಿಗೆ ಯಾವುದೇ ತೊಂದರೆ ಇರೋದಿಲ್ಲ. ಇದಕ್ಕೂ ಕೂಡ ವೈದ್ಯರೇ ಹೇಳಿರುವುದಾಗಿ ತಿಳಿಸಿದರು.

    ಪ್ರಸ್ತುತ ದೇಶದ ಜನಸಂಖ್ಯೆಯು 2.1 ಜನನ ದರವನ್ನ ಶಿಫಾರಸು ಮಾಡುತ್ತೆ. ಇದು ಉತ್ತಮ ನೀತಿಯಾಗಿದೆ. ಯಾರೊಬ್ಬರು ಒಂದು ಮಗು ಹೊಂದಲು ಸಾಧ್ಯವಿಲ್ಲ. ಗಣಿತದಲ್ಲಿ 2.1 2 ಆಗುತ್ತದೆ. ಆದ್ದರಿಂದ ಮೂರು ಮಕ್ಕಳ ನೀತಿ ಉತ್ತಮ ಎಂದು ಮೋಹನ್‌ ಭಾಗವತ್‌ ಹೇಳಿದರು. ಇದನ್ನೂ ಓದಿ: Jammu Kashmir | ಅಕ್ರಮವಾಗಿ ಗಡಿ ನುಸುಳಲು ಯತ್ನ – ಇಬ್ಬರು ಉಗ್ರರ ಎನ್‌ಕೌಂಟರ್

    ಜನಸಂಖ್ಯೆ ಮೇಲೆ ಮತಾಂತರದ ಪರಿಣಾಮವೇ?
    ಇನ್ನೂ ಜನಸಂಖ್ಯಾ ಮಾದರಿಗಳ ಮೇಲೆ ಪರಿಣಾಮ ಬೀರುವ ಕೆಲವೊಂದು ಅಂಶಗಳನ್ನು ಮೋಹನ್‌ ಭಾಗವತ್‌ ಗುರುತಿಸಿದ್ದು, ಮತಾಂತವೂ ಒಂದು ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಮತಾಂತರವು ಜನಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ ಕಾಥೊಲಿಕರು, ಉಲೇಮಾಗಳು ನಾವು ಮತಾಂತರದಲ್ಲಿ ತೊಡಗುವುದಿಲ್ಲ ಎನ್ನುತ್ತಾರೆ ಎಂದು ವಿವರಿಸಿದರು.

    ಹಿಂದೂ – ಮುಸ್ಲಿಂ ಒಂದೇ
    ಇದೇ ವೇಳೆ ಹಿಂದೂ ಮತ್ತು ಮುಸ್ಲಿಮರ ನಡುವಿನ ಸಂಬಂಧಗಳನ್ನುದ್ದೇಶಿಸಿ ಮಾತನಾಡಿದ ಭಾಗವತ್, ಹಿಂದೂ ಮುಸ್ಲಿಮರು ಮೂಲಭೂತವಾಗಿ ಒಬ್ಬರು, ನಮ್ಮ ನಡುವೆ ಏಕತೆಯಿದೆ. ಆದ್ರೆ ಒಂದು ಭಯವನ್ನು ಸೃಷ್ಟಿಸಲಾಗಿದೆ. ಹಿಂದೂಗಳು ಎಲ್ಲವನ್ನೂ ತೆಗೆದುಕೊಳ್ತಾರೆ ಅಂತ ಭಾವಿಸುವಂತೆ ಮಾಡಲಾಗಿದೆ. ಆದ್ರೆ ವಾಸ್ತವದಲ್ಲಿ ನಮ್ಮ ಗುರುತು ಏಕೀಕೃತವಾಗಿದೆ. ಸಾಂಸ್ಕೃತಿಕವಾಗಿ, ನಾವು ಹಿಂದೂಗಳು ಎಂದು ಬಣ್ಣಿಸಿದರು. ಇದನ್ನೂ ಓದಿ: ಟ್ರಂಪ್‌ ಸೂಚಿಸಿದ 5 ಗಂಟೆಗಳೊಳಗೆ ಪಾಕ್‌ ವಿರುದ್ಧ ಮೋದಿ ಯುದ್ಧ ನಿಲ್ಲಿಸಿದ್ರು: ರಾಹುಲ್‌ ಗಾಂಧಿ ಕಿಡಿ

    ಮುಂದುವರಿದು.. ಅನೇಕ ಹಿಂದೂಗಳು ತಾವು ದುರ್ಬಲರೆಂದು ಭಾವಿಸಿ ಅಸುರಕ್ಷಿತವಾಗಿದ್ದೇವೆ. ಅವರಿಗೊಂದು ಸಲಹೆ ನೀಡುತ್ತೇನೆ. ಇತರರೊಂದಿಗೆ ಸಹಬಾಳ್ವೆ ನಡೆಸುವುದರಿಂದ ಸ್ವಂತ ನಂಬಿಕೆಗೆ ಹಾನಿಯಾಗಲ್ಲ. ಈ ವಿಶ್ವಾಸ ಬೇರೂರಿದರೆ, ಸಂಘರ್ಷ ಕೊನೆಗೊಳ್ಳುತ್ತದೆ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಗುಜರಾತ್‌ನಲ್ಲಿ ಹೆಸರೇ ಕೇಳದ ಪಕ್ಷಗಳಿಗೆ 4,300 ಕೋಟಿ ದೇಣಿಗೆ – ರಾಗಾ ಮತ್ತೊಂದು ಬಾಂಬ್‌

  • ಜನಸಂಖ್ಯೆ ನಿಯಂತ್ರಣ ಕುರಿತು ವಿಲಕ್ಷಣ ಹೇಳಿಕೆ – ನಿತೀಶ್‌ ಕುಮಾರ್‌ ಅಸಭ್ಯ ನಾಯಕ ಎಂದ BJP

    ಜನಸಂಖ್ಯೆ ನಿಯಂತ್ರಣ ಕುರಿತು ವಿಲಕ್ಷಣ ಹೇಳಿಕೆ – ನಿತೀಶ್‌ ಕುಮಾರ್‌ ಅಸಭ್ಯ ನಾಯಕ ಎಂದ BJP

    ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರು ಜನಸಂಖ್ಯೆ ನಿಯಂತ್ರಣ (Population Control) ಕುರಿತು ರಾಜ್ಯ ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯೊಂದು ಭಾರೀ ವಿವಾದ ಹುಟ್ಟುಹಾಕಿದೆ. ಈ ಹೇಳಿಕೆ ನಂತರ ಬಿಹಾರದ ಬಿಜೆಪಿ ಘಟಕವು ಭಾರೀ ಟೀಕೆ ವ್ಯಕ್ತಪಡಿಸಿದೆ. ಮಹಿಳಾ ಶಾಸಕರೂ ಅಸಮಾಧಾನ ಹೊರಹಾಕಿದ್ದಾರೆ. ಆದ್ರೆ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ (Tejashwi Yadav), ಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಜಾತಿ ಸಮೀಕ್ಷೆಯ ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಿದ ನಂತರ ಬಿಹಾರ ಸಿಎಂ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತನಾಡುತ್ತಾ ವೀಡಿಯೋವೊಂದರಲ್ಲಿ, ಈ ಹಿಂದೆ ಶೇ.4.3 ರಷ್ಟಿದ್ದ ಫಲವತ್ತತೆ ದರವು ಕಳೆದ ವರ್ಷ ಶೇ.2.9ಕ್ಕೆ ಇಳಿದಿದೆ ಎಂದು ಹೇಳಿದ್ದರು. ಇದನ್ನು ಅಶ್ಲೀಲ ಎಂದು ಬಿಜೆಪಿ ಟೀಕಿಸಿದೆ. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಮಾಡಿ ಜಾತಿಗೊಂದು ಸಿಎಂ ಕೊಟ್ಬಿಡಿ: ಈಶ್ವರಪ್ಪ ವ್ಯಂಗ್ಯ

    ದೇಶದ ರಾಜಕೀಯದಲ್ಲಿ ನಿತೀಶ್‌ ಕುಮಾರ್‌ ಅವರಷ್ಟು ಅಸಭ್ಯ ನಾಯಕರಿಲ್ಲ. ನಿತೀಶ್‌ ಬಾಬುಗೆ ವಯಸ್ಕರ ಬಿ-ಗ್ರೇಡ್‌ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿಯಿದೆ ಅನ್ನಿಸುತ್ತೆ. ಅವರ ಡಬಲ್‌ ಮೀನಿಂಗ್‌ ಹೇಳಿಕೆಗಳನ್ನು ನಿಷೇಧಿಸಬೇಕು. ತಮ್ಮ ಕಂಪನಿಗಳಿಂದಲೇ ಅವರು ಪ್ರಭಾವಿತರಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಎಕ್ಸ್‌ ಖಾತೆಯಲ್ಲಿ ಟೀಕಿಸಿದೆ. ಇದನ್ನೂ ಓದಿ: ಲೋಕಸಮರ ಗೆಲ್ಲಲು ನಿತೀಶ್ ತಂತ್ರ : ಬಿಹಾರದಲ್ಲಿ ಮೀಸಲಾತಿ ಪ್ರಮಾಣ 65% ಏರಿಕೆ – ಜಾತಿ ಸಮೀಕ್ಷೆಯಲ್ಲಿ ಏನಿದೆ?

    ಮುಖ್ಯಮಂತ್ರಿ ಅವ್ರಿಗೆ 70 ವರ್ಷ ದಾಟಿದ್ದರೂ ಈ ರೀತಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವೂ ಹೇಳಲಾಗದಂತಹ ಪದ ಬಳಸಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ಶಾಸಕಿ ಗಾಯತ್ರಿದೇವಿ ಹೇಳಿದ್ದಾರೆ. ಶಾಸಕಿ ಪ್ರತಿಮಾ ದಾಸ್ ಅವರೂ ಇದಕ್ಕೆ ದನಿಗೂಡಿಸಿದ್ದಾರೆ. ಆದ್ರೆ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಸಿಎಂ ಅವರು ಲೈಂಗಿಕ ಶಿಕ್ಷಣದ ಬಗ್ಗೆ ಮಾತನಾಡಿದ್ದಾರೆ. ಇದನ್ನು ಶಾಲೆಗಳಲ್ಲಿ ವಿಜ್ಞಾನ ವಿಭಾಗ ಜೀವಶಾಸ್ತ್ರದಲ್ಲಿ ಕಲಿಸಲಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.

  • ಮಹಿಳೆಯರು ಅವಿದ್ಯಾವಂತರು, ಅವ್ರಿಗೆ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜ್ಞಾನ ಕಡಿಮೆ – ನಿತೀಶ್ ಕುಮಾರ್

    ಮಹಿಳೆಯರು ಅವಿದ್ಯಾವಂತರು, ಅವ್ರಿಗೆ ಜನಸಂಖ್ಯಾ ನಿಯಂತ್ರಣದ ಬಗ್ಗೆ ಜ್ಞಾನ ಕಡಿಮೆ – ನಿತೀಶ್ ಕುಮಾರ್

    ಪಾಟ್ನಾ: ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಜನಸಂಖ್ಯೆ ನಿಯಂತ್ರಣದ (Population Control) ಬಗ್ಗೆ ನೀಡಿರುವ ಅಭಿಪ್ರಾಯದಿಂದ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ.

    ನಿತೀಶ್ ಕುಮಾರ್ ತಮ್ಮ ಹೇಳಿಕೆಯಲ್ಲಿ ಮಹಿಳೆಯರನ್ನು (Women) ಅವಹೇಳನ ಮಾಡಿದ್ದಾರೆಂದು ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಇದನ್ನೂ ಓದಿ: ಪ್ರತಿ ತಿಂಗಳು 6 ಸಾವಿರ ಪಿಂಚಣಿ ಕೊಡಿ – ಸರ್ಕಾರಕ್ಕೆ ಬೋಳುತಲೆ ಪುರುಷರ ಸಂಘ ಮನವಿ

    ಬಿಹಾರದ ವೈಶಾಲಿಯಲ್ಲಿ ನಡೆಯುತ್ತಿರುವ `ಸಮಾಧಾನ ಯಾತ್ರೆ’ಯನ್ನುದ್ದೇಶಿಸಿ ಮಾತನಾಡಿದ ನಿತೀಶ್ ಕುಮಾರ್, ಜನಸಂಖ್ಯಾ ನಿಯಂತ್ರಣಕ್ಕೆ (Population Control) ಪುರುಷರು ಹೆಚ್ಚಿನ ಒಲವು ತೋರಬೇಕು. ಮಹಿಳೆಯರು ಅವಿದ್ಯಾವಂತರಾಗಿದ್ದು (UnEducated), ಜನಸಂಖ್ಯೆ ನಿಯಂತ್ರಣದ ಕುರಿತು ಅವರಿಗೆ ಜ್ಞಾನ ಕಡಿಮೆ. ಹೀಗಾಗಿ ಪುರುಷರು ತಮ್ಮನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ, ಜನಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಮಹಿಳೆಯರು ಶಿಕ್ಷಿತರಾಗಿದ್ದರೆ ತಾವು ಗರ್ಭಿಣಿಯಾಗದಂತೆ (Pregnant) ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ತಿಳಿದಿರುತ್ತಿತ್ತು. ಆದ್ರೆ ಮಹಿಳೆಯರು ಸರಿಯಾಗಿ ಶಿಕ್ಷಣ ಪಡೆಯದ ಕಾರಣ, ಜನಸಂಖ್ಯೆ ನಿಯಂತ್ರಿಸಲು ಅವರಿಂದ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇದರಲ್ಲಿ ವಿಷ ಇದ್ರೆ? – UP ಪೊಲೀಸರು ನೀಡಿದ ಚಹಾವನ್ನು ನಿರಾಕರಿಸಿದ ಅಖಿಲೇಶ್ ಯಾದವ್

    ಇದಕ್ಕೆ ಪ್ರತಿಪಕ್ಷ ಬಿಜೆಪಿ (BJP) ಕಿಡಿ ಕಾರಿದೆ. ಸಿಎಂ ಹೇಳಿಕೆ ಬಿಹಾರದ ಪ್ರತಿಷ್ಟೆಗೆ ಕಳಂಕ ತಂದಿದೆ ಎಂದು ವಾಗ್ದಾಳಿ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಹುದ್ದೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕ್ವಾರಂಟೈನ್ ಕೇಂದ್ರಗಳಲ್ಲಿ ಉಚಿತ ಕಾಂಡೋಮ್ ವಿತರಣೆ

    ಕ್ವಾರಂಟೈನ್ ಕೇಂದ್ರಗಳಲ್ಲಿ ಉಚಿತ ಕಾಂಡೋಮ್ ವಿತರಣೆ

    ಪಾಟ್ನಾ: 14 ದಿನಗಳ ಕ್ವಾರಂಟೈನ್ ಸಮಯವನ್ನು ಪೂರ್ಣಗೊಳಿಸಿ ಮನೆಗಳಿಗೆ ಹಿಂದಿರುಗುತ್ತಿದ್ದ ಪ್ರವಾಸಿ ಕಾರ್ಮಿಕರಿಗೆ ಬಿಹಾರ ಸರ್ಕಾರ ಕಾಂಡೋಮ್, ಗರ್ಭನಿರೋಧಕ, ಪ್ರೆಗ್ರನ್ಸಿ ಕಿಟ್‍ಗಳನ್ನು ಉಚಿತವಾಗಿ ವಿತರಣೆ ಮಾಡಿದೆ.

    ಕುಟುಂಬ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಬಿಹಾರ ಸರ್ಕಾರ ಈ ಕಾರ್ಯವನ್ನು ಮಾಡುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬಿಹಾರದಲ್ಲಿ ಕುಟುಂಬ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರ ಹೊಸ ಯೋಜನೆ ಜಾರಿ ಮಾಡಿದೆ. ಅಲ್ಲದೇ ಕೋವಿಡ್-19ಗೂ ಸರ್ಕಾರದ ಹೊಸ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನು ಓದಿ: ಜಾಗತಿಕ ಕೊರತೆ – ಕಾಂಡೋಮ್ ಕಾರ್ಖಾನೆಯ ನೌಕರರನ್ನು ‘ಅಗತ್ಯ ಸೇವೆ’ ಪಟ್ಟಿಗೆ ಸೇರ್ಪಡೆ

    ಲಾಕ್‍ಡೌನ್ ಕಾರಣದಿಂದ ವಿವಿಧ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು ಲಾಕ್‍ಡೌನ್ ನಿಯಮಗಳಲ್ಲಿ ಸಡಿಲಿಕೆ ಲಭಿಸಿದ ಕಾರಣ ತಮ್ಮ ಸ್ವ-ಸ್ಥಳಗಳಿಗೆ ವಾಪಸ್ ಆಗುತ್ತಿದ್ದಾರೆ. ಈ ರೀತಿ ವಾಪಸ್ ಆಗುತ್ತಿರುವ ಕಾರ್ಮಿಕರಿಗೆ 14 ದಿನಗಳ ಅವಧಿಯ ಹೋಂ ಕ್ವಾರಂಟೈನ್‍ಗೆ ಸೂಚನೆ ನೀಡಿ ಸರ್ಕಾರ ಮನೆಗಳಿಗೆ ಕಳುಹಿಸುತ್ತಿದೆ. ಈ ವೇಳೆ ಅಧಿಕಾರಿಗಳು ಕಾರ್ಮಿಕರಿಗೆ ಕಾಂಡೋಮ್ ನೀಡಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅರೋಗ್ಯ ಅಧಿಕಾರಿಗಳಾಗಿ ಜನಸಂಖ್ಯೆ ನಿಯಂತ್ರಣ ನಮ್ಮ ಕರ್ತವ್ಯ ಎಂದು ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಓದಿ: ಕೊರೊನಾ ಎಫೆಕ್ಟ್- ಕಳೆದೊಂದು ವಾರದಿಂದ ಕಾಂಡೋಮ್ ಖರೀದಿ ಹೆಚ್ಚಳ

    ಕೇವಲ ಕ್ವಾರಂಟೈನ್ ಕೇಂದ್ರಗಳು ಮಾತ್ರವಲ್ಲದೇ ಗೋಪಾಲ್‍ಗಂಜ್, ಸಮಸ್ತಿಪುರ, ಚಂಪಾರನ್, ಸರನ್ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತರ ಮೂಲಕ ಮನೆ ಮನೆಗೆ ಕಾಂಡೋಮ್ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಲಾಕ್‍ಡೌನ್ ಕಾರಣದಿಂದ ಬಿಹಾರ ರಾಜ್ಯವೊಂದರಲ್ಲೇ ಸುಮಾರು 8 ಲಕ್ಷ ಪ್ರವಾಸಿ ಕಾರ್ಮಿಕರು ಸ್ವ-ಸ್ಥಳಗಳಿಗೆ ವಾಪಸ್ ಆಗಿದ್ದಾರೆ. ಸುಮಾರು 5.26 ಲಕ್ಷ ಮಂದಿಗೆ ಸಾಂಸ್ಥಿಕ ಕಾರಂಟೈನ್ ಮಾಡಲಾಗಿದೆ. ಜೂನ್ 15 ಬಳಿಕ ಕಾರಂಟೈನ್ ಕೇಂದ್ರಗಳನ್ನು ಮುಚ್ಚಿ ಆ ಬಳಿಕ ಎಲ್ಲರಿಗೂ ಹೋಂ ಕ್ವಾರಂಟೈನ್ ಮಾಡಲು ಬಿಹಾರ ಸರ್ಕಾರ ನಿರ್ಧರಿಸಿದೆ.

    ಕೊರೊನಾ ಸೋಂಕಿನ ಕಾರಣದಿಂದ ಬಿಹಾರದಲ್ಲಿ ಇದುವರೆಗೂ 23 ಮಂದಿ ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 3,945ಕ್ಕೇರಿದೆ. ಇದನ್ನು ಓದಿ: ಕಾಂಡೋಮ್ ವಿನ್ಯಾಸಿತ ಬಟ್ಟೆ ಧರಿಸಿದ ಚಿರಂಜೀವಿ ಸೊಸೆ- ಸುಸ್ಥಿರತೆ ಪಾಠ

  • ಸರ್ಕಾರ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹಡೆಯುತ್ತಲೇ ಇರು ಎಂದು ಪತ್ನಿಗೆ ಹೇಳಿದ್ದೀನಿ: ಬಿಜೆಪಿ ಶಾಸಕ

    ಸರ್ಕಾರ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹಡೆಯುತ್ತಲೇ ಇರು ಎಂದು ಪತ್ನಿಗೆ ಹೇಳಿದ್ದೀನಿ: ಬಿಜೆಪಿ ಶಾಸಕ

    ಮುಜಾಫರ್ ನಗರ್ : ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ನಿರ್ದಿಷ್ಟ ಕಾನೂನು ರೂಪಿಸುವವರೆಗೂ ನೀನು ಮಕ್ಕಳನ್ನು ಹಡೆಯುವುದನ್ನು ನಿಲ್ಲಿಸಬೇಡ ಎಂದು ಪತ್ನಿಗೆ ಹೇಳಿದ್ದೇನೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಬಿಜೆಪಿ ಶಾಸಕರೊಬ್ಬರು ವಿವಾದಕ್ಕೆ ಕಾರಣರಾಗಿದ್ದಾರೆ.

    ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಶುಕ್ರವಾರ ಈ ಹೇಳಿಕೆಯನ್ನು ನೀಡಿದ್ದಾರೆ. ಮುಜಾಫರ್ ನಗರದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮಗೆ ಇಬ್ಬರು ಮಕ್ಕಳು ಸಾಕು ಎಂದು ನನ್ನ ಪತ್ನಿ ಹೇಳಿದ್ದಾಳೆ. ಆದರೆ ಸರ್ಕಾರ ಜನಸಂಖ್ಯಾ ನಿಯಂತ್ರಣ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹಡೆಯುತ್ತಾ ಇರಲು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

    ನಾವು ಇಬ್ಬರು ಮಕ್ಕಳು ಸಾಕು ಎಂಬ ನಿಯಮವನ್ನು ಒಪ್ಪಿಕೊಂಡಿದ್ದೇವೆ. ಆದರೆ ಇತರರು ಅದನ್ನು ಒಪ್ಪಿಕೊಂಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಹಿಂದೂಗಳು ಮಕ್ಕಳಿಗೆ ಜನ್ಮ ನೀಡುವುದನ್ನು ನಿಲ್ಲಿಸಬಾರದು. ನನ್ನ ಪತ್ನಿ ನಮಗೆ ಮೂರನೇ ಮಗು ಬೇಡವೆಂದು ಹೇಳಿದ್ದಳು. ಆದರೆ ನಾನು 4 ರಿಂದ 5 ಮಕ್ಕಳನ್ನು ಪಡೆಯೋಣವೆಂದು ಹೇಳಿದ್ದೇನೆ ಎಂದು ಜನಸಂಖ್ಯಾ ನಿಯಂತ್ರಣ ವಿಷಯದ ಕುರಿತು ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

    ಶಾಸಕರು ವಿವಾದತ್ಮಾಕ ಹೇಳಿಕೆ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿದ್ದು, ಕಳೆದ ವರ್ಷ ಜನವರಿಯಲ್ಲಿ ಹಿಂದೂಸ್ತಾನ ಹಿಂದೂಗಳದ್ದು ಮಾತ್ರ, ಇತರರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದರು. ಅಲ್ಲದೇ ಹೊಸ ವರ್ಷದ ಆಚರಣೆ ಕ್ರೈಸ್ತ ಸಮುದಾಯದ ಹಬ್ಬ. ಇದರಿಂದ ಹಿಂದೂಗಳು ದೂರವಿರಿ ಎಂದು ಹೇಳಿದ್ದರು. ಫೆಬ್ರವರಿ 14ರ ಪ್ರೇಮಿಗಳ ದಿನವನ್ನು ಆಚರಿಸಬೇಡಿ ಎಂದು ಯುವಕರಿಗೆ ಕರೆ ನೀಡಿದ್ದರು.