Tag: popcorn monkey tiger

  • ಡಾಲಿಯನ್ನು ಮೀರಿಸಿದ ಮಂಕಿ ಸೀನ- ಭೂಗತ ಲೋಕದ ರಕ್ತ-ಸಿಕ್ತ ‘ರಾ’-ಕಹಾನಿ

    ಡಾಲಿಯನ್ನು ಮೀರಿಸಿದ ಮಂಕಿ ಸೀನ- ಭೂಗತ ಲೋಕದ ರಕ್ತ-ಸಿಕ್ತ ‘ರಾ’-ಕಹಾನಿ

    ಹಳ ಕ್ರೇಜ್ ಹುಟ್ಟಿಸಿದ್ದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ದುನಿಯಾ ಸೂರಿ, ಡಾಲಿ ಕಾಂಬೀನೇಷನ್‍ನ ಪಕ್ಕಾ ರಾ- ಸಿನಿಮಾ ಮಾಸ್ ಪ್ರೇಕ್ಷಕರಿಗೆ ಭರ್ಜರಿ ಭೋಜನ ನೀಡಿದೆ.

    ಪಾಪ್ ಕಾರ್ನ್ ಮಂಕಿ ಟೈಗರ್ ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಅಂಡರ್ ವಲ್ಡ್ ಸಿನಿಮಾಗಳನ್ನು ರಾ- ಸ್ಟೈಲ್‍ನಲ್ಲಿ ತೆರೆ ಮೇಲೆ ತರುವಲ್ಲಿ ನಿಸ್ಸೀಮರಾಗಿರುವ ಸುಕ್ಕಾ ಸೂರಿ ಈ ಸಿನಿಮಾದಲ್ಲಿ ದುನಿಯಾ, ಕಡ್ಡಿಪುಡಿ ಸಿನಿಮಾಗಳಿಗೂ ಮೀರಿ ಆಳಕ್ಕೆ ಇಳಿದು ಭೂಗತ ಲೋಕದ ಪ್ರಪಂಚವನ್ನು ಪಕ್ಕಾ ರಾ ಆಗಿ ತೋರಿಸಿದ್ದಾರೆ.

    ಪಾಪ್ ಕಾರ್ನ್ ಮಂಕಿ ಟೈಗರ್ ಒಬ್ಬ ಅಂಡರ್ ವಲ್ಡ್ ರೌಡಿಯ ಕಥೆ. ಮಂಕಿ ಸೀನ ಅಲಿಯಾಸ್ ಟೈಗರ್ ಸೀನ, ಪಾಪ್ ಕಾರ್ನ್ ದೇವಿ ಈ ಎರಡು ಪಾತ್ರಗಳ ಜೀವನದಲ್ಲಿ ನಡೆಯುವ ಏಳು ಬೀಳುಗಳೆ ಈ ಚಿತ್ರದ ಕಥೆ. ಇದನ್ನು ಒಂದು ಸಿನಿಮಾ ಅನ್ನೋದಕ್ಕಿಂತ ಒಬ್ಬ ವ್ಯಕ್ತಿಯ ಜರ್ನಿ ಅಂದ್ರೆ ತಪ್ಪಾಗೊಲ್ಲ. ಯಾಕಂದ್ರೆ ಇಡೀ ಸಿನಿಮಾ ಒಂದು ಜರ್ನಿಯಂತೆ ಫೀಲ್ ಕೊಡುತ್ತೆ. ಸುಕ್ಕಾ ಸೂರಿ ಸಿನಿಮಾ ಇಷ್ಟವಾಗೋದೇ ಅವ್ರು ಕಥೆ ಹೇಳುವ ಸ್ಟೈಲ್‍ಗೆ. ಈ ಚಿತ್ರ ಕೂಡ ಹೊರತಾಗಿಲ್ಲ. ಚಿತ್ರಕಥೆ ಹೊಸದೊಂದು ಅನುಭವವನ್ನು, ಥ್ರಿಲ್‍ಅನ್ನು ಪ್ರೇಕ್ಷಕರಿಗೆ ನೀಡುತ್ತೆ. ಚಿತ್ರದಲ್ಲಿ ಸೂರಿ ಸೃಷ್ಟಿಸಿರೋ ಪಾತ್ರಗಳ ಹೆಸರು ಮತ್ತೊಮ್ಮೆ ಸದ್ದು ಮಾಡಿದೆ. ಮಂಕಿ ಸೀನ, ಮೂಕ, ಗಲೀಜು, ಭದ್ರಾವತಿ ಕುಷ್ಕ, ಶುಗರ್ ಹೆಸರುಗಳು ಸಖತ್ ಮಜಾ ನೀಡುತ್ತೆ.

    ಮಂಕಿ ಸೀನನಾಗಿ ಧನಂಜಯ್ ಅವರದ್ದು ರಾಕ್ಷಸ ಅಭಿನಯ. ಸೂರಿ ರಾ- ಸ್ಟೈಲ್‍ಗೆ ಅಷ್ಟೇ ರಾ- ಆದ ಅಭಿನಯ ಮಾಡಿದ್ದಾರೆ ಧನಂಜಯ್. ಈ ಮೂಲಕ ತಮ್ಮ ನಟನೆಯ ತಾಕತ್ತು ಏನು ಅನ್ನೋದನ್ನ ಮತ್ತೆ ತೆರೆ ಮೇಲೆ ಸಾಭೀತು ಮಾಡಿದ್ದಾರೆ. ಉಳಿದಂತೆ ಎಲ್ಲಾ ಪಾತ್ರಗಳು ಪ್ರಭಾವಿಯಾಗಿ ನಟಿಸಿದ್ದು ಚಿತ್ರದ ಗೆಲುವಿನಲ್ಲಿ ದೊಡ್ಡ ಪಾತ್ರವಹಿಸಿದ್ದಾರೆ.

    ಅಂಡರ್ ವಲ್ಡ್ ಸಿನಿಮಾ ಅಂದ್ರೆ ಮುಖ್ಯವಾಗಿ ಹಿನ್ನೆಲೆ ಸಂಗೀತ, ಕ್ಯಾಮೆರಾ ಕೈಚಳಕ ಇವೆರಡು ಪ್ರಮುಖ ಪಾತ್ರ ವಹಿಸುತ್ತೆ. ಚಿತ್ರದಲ್ಲಿ ಬ್ಯಾಗ್ರೌಂಡ್‍ನಲ್ಲಿ ಬರುವ ಎರಡು ಸಾಂಗ್‍ಗಳು ಕಮಾಲ್ ಮಾಡಿವೆ. ಚರಣ್ ರಾಜ್ ಹಿನ್ನೆಲೆ ಸಂಗೀತ ಸಿನಿಮಾಗೆ ಬೇರೆಯದ್ದೇ ಫೀಲ್ ನೀಡುತ್ತೆ. ಶೇಖರ್ ಕ್ಯಾಮೆರಾ ವರ್ಕ್ ಕೂಡ ಚಿತ್ರವನ್ನು ಶ್ರೀಮಂತಗೊಳಿಸಿದ್ದು ಆಫ್ ಸ್ಕ್ರೀನ್ ಹೀರೋಗಳಾಗಿ ಇಬ್ಬರು ಮಿಂಚಿದ್ದಾರೆ. ಒಟ್ನಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಮಾಸ್ ಸಿನಿ ಪ್ರಿಯರಿಗೆ ಫುಲ್ ಮೀಲ್ಸ್ ಬಡೂಟ ಅಂದ್ರೆ ತಪ್ಪಾಗೊಲ್ಲ.

    ಚಿತ್ರ: ಪಾಪ್ ಕಾರ್ನ್ ಮಂಕಿ ಟೈಗರ್
    ನಿರ್ದೇಶನ: ಸೂರಿ
    ನಿರ್ಮಾಪಕ: ಸುಧೀರ್. ಕೆ.ಎಂ
    ಸಂಗೀತ: ಚರಣ್ ರಾಜ್
    ಛಾಯಾಗ್ರಹಣ: ಶೇಖರ್
    ತಾರಾಬಳಗ: ಧನಂಜಯ್, ನಿವೇಧಿತಾ, ಅಮೃತ ಅಯ್ಯಂಗಾರ್, ಸಪ್ತಮಿ, ಸುಧಿ, ಇತರರು

    Rating 3.5 / 5

  • ‘ಮಂಕಿ ಸೀನ’ನ ಕಟೌಟಿಗೆ ಬಿಯರ್ ಅಭಿಷೇಕ

    ‘ಮಂಕಿ ಸೀನ’ನ ಕಟೌಟಿಗೆ ಬಿಯರ್ ಅಭಿಷೇಕ

    ಬೆಂಗಳೂರು: ಶಿವರಾತ್ರಿಯ ಹಬ್ಬವಾದ ಇಂದು ‘ಪಾಪ್‍ಕಾರ್ನ್ ಮಂಕಿ ಟೈಗರ್’ ಸಿನಿಮಾ ತೆರೆಗಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಡಾಲಿ ಅಭಿಮಾನಿಗಳು ಕಟೌಟಿಗೆ ಬಿಯರ್ ಅಭಿಷೇಕ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

    ಬೆಳಗ್ಗೆ 7 ಗಂಟೆಗೆ ಪಾಪ್‍ಕಾರ್ನ್ ಮಂಕಿ ಟೈಗರ್ ಅಭಿಮಾನಿಗಳಿಗಾಗಿ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸ್ಪೆಷಲ್ ಶೋ ಅರೆಂಜ್ ಮಾಡಲಾಗಿದ್ದು, ಈ ವಿಶೆಷ ಪ್ರದರ್ಶನ ಹೌಸ್ ಫುಲ್ ಆಗಿದೆ. ರಾಜ್ಯದಾದ್ಯಂತ ಸುಮಾರು 300 ಚಿತ್ರಮಂದಿರಗಳಲ್ಲಿ ಸುಕ್ಕಸೂರಿ ಸಾರಥ್ಯದ ಹಾಗೂ ಡಾಲಿ ಅಭಿನಯದ ಹೊಸ ಸಿನಿಮಾ ರಿಲೀಸ್ ಆಗಿದೆ.

    ಸುದೀರ್ ಕೆ.ಎಂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶೇಖರ್ ಕ್ಯಾಮೆರಾ ಕೈ ಚಳಕ ಚಿತ್ರಕ್ಕಿದೆ. ಧನಂಜಯ್ ಗೆ ಜೋಡಿಯಾಗಿ ನಿವೇದಿತಾ ಸ್ಕ್ರೀನ್ ಶೇರ್ ಮಾಡಿದ್ದು, ಅಮೃತ ಅಯ್ಯಂಗಾರ್, ಸುಧಿ, ಸಪ್ತಮಿ ಚಿತ್ರದ ತಾರಾ ಬಳಗದಲ್ಲಿದ್ದಾರೆ.

    ಪೋಸ್ಟರ್ ಹಾಗೂ ಟೈಟಲ್ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ಮೂಲಕ ಡಾಲಿ ಹಾಗೂ ನಿರ್ದೇಶಕ ಸೂರಿ ಅಭಿಮಾನಿಗಳಲ್ಲಿ ಸಂತಸ ಹೆಚ್ಚು ಮಾಡಿತ್ತು.

  • ಡಾಲಿಯ ಪಾಪ್ ಕಾರ್ನ್ ಮಂಕಿ ಟೈಗರ್ ಅವತಾರ ಶುಕ್ರವಾರ ರಿವೀಲ್

    ಡಾಲಿಯ ಪಾಪ್ ಕಾರ್ನ್ ಮಂಕಿ ಟೈಗರ್ ಅವತಾರ ಶುಕ್ರವಾರ ರಿವೀಲ್

    ಸ್ಯಾಂಡಲ್‍ವುಡ್ ದಿ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ‘ಪಾಪ್ ಕಾರ್ನ್ ಮಂಕಿ ಟೈಗರ್’. ಇನ್ನೇನು ಎರಡೇ ದಿನದಲ್ಲಿ ಚಿತ್ರಮಂದಿರದ ಅಂಗಳಕ್ಕೆ ಚಿತ್ರ ಕಾಲಿಡಲಿದೆ. ಸುಕ್ಕಾ ಸೂರಿ, ಸ್ಪೆಷಲ್ ಸ್ಟಾರ್ ಧನಂಜಯ್ ಕಾಂಬಿನೇಷನ್ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಟೀಸರ್, ಟೀಸರ್‌ನಲ್ಲಿ ಡಾಲಿ ಮಾಸ್ ಅವತಾರ ಕಂಡು ಪ್ರೇಕ್ಷಕರು ಫಿಧಾ ಆಗಿದ್ದು, ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿದೆ. ಟಗರು ನಂತರ ಒಂದಾಗಿರೋ ರಾ ಡೈರೆಕ್ಟರ್ ಸೂರಿ ಹಾಗೂ ಧನಂಜಯ್ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಮಾಸ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡಲು ಮುಂದಾಗಿದ್ದು, ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದೆ.

    ಈಗಾಗಲೇ ‘ಪಾಪ್ ಕಾರ್ನ್ ಮಂಕಿ ಟೈಗರ್’ ಕ್ರೇಜ್ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದ್ದು, ಡಾಲಿ ಅಭಿಮಾನಿ ಬಳಗ ‘ಪಾಪ್ ಕಾರ್ನ್ ಮಂಕಿ ಟೈಗರ್’ ಅವತಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಧನಂಜಯ್ ಚಿತ್ರದಲ್ಲಿ ವಿಶೇಷ ಅವತಾರಗಳಲ್ಲಿ ತೆರೆ ಮೇಲೆ ಮಿಂಚಲಿದ್ದು ಔಟ್ ಅಂಡ್ ಔಟ್ ಮಾಸ್ ಸಿನಿಮಾ ಜೊತೆಗೆ ಸೆಂಟಿಮೆಂಟ್ ಎಲಿಮೆಂಟ್‍ಗಳು ಚಿತ್ರದಲ್ಲಿದೆ. ಸೂರಿ ಹಾಗೂ ಧನಂಜಯ್ ಸಿನಿಮಾಗಳನ್ನು ಪ್ರೀತಿಸೋ ಭಕ್ತ ವೃಂದಕ್ಕೆ ಈ ಸಿನಿಮಾ ಭರ್ಜರಿ ಭೋಜನ ಆಗಲಿದೆ.

    ಟೀಸರ್‌ನಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಹಿನ್ನೆಲೆ ಸಂಗೀತ ಕಮಾಲ್ ಮಾಡಿದ್ದು, ಇಲ್ಲೂ ಕೂಡ ಟಗರು ಚಿತ್ರದಂತೆ ಮ್ಯೂಸಿಕ್‍ನಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಲಿದ್ದಾರೆ ಚರಣ್ ರಾಜ್. ಶೇಖರ್ ಕ್ಯಾಮೆರಾ ಕಣ್ಣಲ್ಲಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸೆರೆಯಾಗಿದ್ದು, ಸುಧೀರ್.ಕೆ.ಎಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ ‘ಪಾಪ್ ಕಾರ್ನ್ ಮಂಕಿ ಟೈಗರ್’ ಯಾವ ರೀತಿ ಸದ್ಧು ಮಾಡುತ್ತೆ ಕಾದು ನೋಡಬೇಕು.

  • ಡಾಲಿಯ ಪಾಪ್ ಕಾರ್ನ್ ಮಂಕಿ ಟೈಗರ್ ಅವತಾರ ಶುಕ್ರವಾರ ರಿವೀಲ್

    ಡಾಲಿಯ ಪಾಪ್ ಕಾರ್ನ್ ಮಂಕಿ ಟೈಗರ್ ಅವತಾರ ಶುಕ್ರವಾರ ರಿವೀಲ್

    ಸ್ಯಾಂಡಲ್‍ವುಡ್ ದಿ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ `ಪಾಪ್ ಕಾರ್ನ್ ಮಂಕಿ ಟೈಗರ್’. ಇನ್ನೇನು ಒಂದೇ ದಿನದಲ್ಲಿ ಚಿತ್ರಮಂದಿರದ ಅಂಗಳಕ್ಕೆ ಚಿತ್ರ ಕಾಲಿಡಲಿದೆ. ಸುಕ್ಕಾ ಸೂರಿ, ಸ್ಪೆಷಲ್ ಸ್ಟಾರ್ ಧನಂಜಯ್ ಕಾಂಬಿನೇಷನ್ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಟೀಸರ್, ಟ್ರೈಲರಿನಲ್ಲಿ ಡಾಲಿ ಮಾಸ್ ಅವತಾರ ಕಂಡು ಪ್ರೇಕ್ಷಕರು ಫಿಧಾ ಆಗಿದ್ದು, ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿದೆ. ಟಗರು ನಂತರ ಒಂದಾಗಿರೋ ರಾ ಡೈರೆಕ್ಟರ್ ಸೂರಿ ಹಾಗೂ ಧನಂಜಯ್ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಮಾಸ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡಲು ಮುಂದಾಗಿದ್ದು, ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದೆ.

    ಈಗಾಗಲೇ `ಪಾಪ್ ಕಾರ್ನ್ ಮಂಕಿ ಟೈಗರ್’ ಕ್ರೇಜ್ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದ್ದು, ಡಾಲಿ ಅಭಿಮಾನಿ ಬಳಗ `ಪಾಪ್ ಕಾರ್ನ್ ಮಂಕಿ ಟೈಗರ್’ ಅವತಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಧನಂಜಯ್ ಚಿತ್ರದಲ್ಲಿ ವಿಶೇಷ ಅವತಾರಗಳಲ್ಲಿ ತೆರೆ ಮೇಲೆ ಮಿಂಚಲಿದ್ದು ಔಟ್ ಅಂಡ್ ಔಟ್ ಮಾಸ್ ಸಿನಿಮಾ ಜೊತೆಗೆ ಸೆಂಟಿಮೆಂಟ್ ಎಲಿಮೆಂಟ್‍ಗಳು ಚಿತ್ರದಲ್ಲಿದೆ. ಸೂರಿ ಹಾಗೂ ಧನಂಜಯ್ ಸಿನಿಮಾಗಳನ್ನು ಪ್ರೀತಿಸೋ ಭಕ್ತ ವೃಂದಕ್ಕೆ ಈ ಸಿನಿಮಾ ಭರ್ಜರಿ ಭೋಜನ ಆಗಲಿದೆ.

    ಟೀಸರಿನಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಹಿನ್ನೆಲೆ ಸಂಗೀತ ಕಮಾಲ್ ಮಾಡಿದ್ದು, ಇಲ್ಲೂ ಕೂಡ ಟಗರು ಚಿತ್ರದಂತೆ ಮ್ಯೂಸಿಕ್‍ನಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಲಿದ್ದಾರೆ ಚರಣ್ ರಾಜ್. ಶೇಖರ್ ಕ್ಯಾಮೆರಾ ಕಣ್ಣಲ್ಲಿ `ಪಾಪ್ ಕಾರ್ನ್ ಮಂಕಿ ಟೈಗರ್’ ಸೆರೆಯಾಗಿದ್ದು, ಸುಧೀರ್.ಕೆ.ಎಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ `ಪಾಪ್ ಕಾರ್ನ್ ಮಂಕಿ ಟೈಗರ್’ ಯಾವ ರೀತಿ ಸದ್ಧು ಮಾಡುತ್ತೆ ಕಾದು ನೋಡಬೇಕು.

  • ಮಂಕಿ ಸೀನ ತೆರೆ ಮೇಲೆ ಮಿಂಚಲು ಒಂದೇ ದಿನ ಬಾಕಿ!

    ಮಂಕಿ ಸೀನ ತೆರೆ ಮೇಲೆ ಮಿಂಚಲು ಒಂದೇ ದಿನ ಬಾಕಿ!

    2020ಯ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಖತ್ ಕ್ರೇಜ್ ಹುಟ್ಟುಹಾಕಿದೆ. ಸುಕ್ಕಾ ಸೂರಿ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಚಿತ್ರ ಫೆಬ್ರವರಿ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಡಾಲಿ ಭಕ್ತ ವೃಂದವಂತೂ ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಡಾಲಿ ಅಭಿಮಾನಿಗಳ ಮನಸ್ಸನ್ನು ಕಾಡುತ್ತಿದೆ ಚಿತ್ರದ ಮಾಸ್ ಟೀಸರ್.

    ಸುಕ್ಕಾ ಸೂರಿ ಸಿನಿಮಾ ಅಂದ್ರೆ ಔಟ್ ಆ್ಯಂಡ್ ಔಟ್ ಮಾಸ್ ರಾ ಫ್ಲೇವರ್ ಇರೋ ಸಿನಿಮಾ. ಈ ಸಿನಿಮಾ ಕೂಡ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೇಂಡ್ ಸೃಷ್ಟಿಸಿರೋ ಈ ಚಿತ್ರ ಹೊಸದೊಂದು ಹವಾ ಸ್ಯಾಂಡಲ್ ವುಡ್ ನಲ್ಲಿ ಕ್ರಿಯೇಟ್ ಮಾಡೋದ್ರಲ್ಲಿ ದೂಸ್ರಾ ಮಾತೇ ಇಲ್ಲ ಅಂತಿದೆ ಗಾಂಧೀನಗರ. ಮಂಕಿ ಸೀನನ ಅವತಾರ ಟೀಸರ್ನಲ್ಲಿ ಕಮಾಲ್ ಮಾಡಿದ್ದು, ನಟ ಭಯಂಕರನಾಗಿ ಅಬ್ಬರಿಸಿದ್ದಾರೆ ಡಾಲಿ. ಮಾಸ್ ಸಿನಿಮಾ ಪ್ರಿಯರು ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಕ್ರೈಂ ಥ್ರಿಲ್ಲರ್ ಜೊತೆಗೆ ಸೆಂಟಿಮೆಂಟ್ ಎಲಿಮೆಂಟ್ ಗಳು `ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ಸಿನಿರಸಿಕರಿಗೆ ಡಬಲ್ ಕಿಕ್ ಕೊಡಲಿದೆ.

    ಟಗರು ಚಿತ್ರದ ಡಾಲಿ ಪಾತ್ರದ ಮೂಲಕ ಮನೆ ಮಾತಾಗಿರುವ ಸ್ಪೆಷಲ್ ಸ್ಟಾರ್ ಧನಂಜಯ್ ಇಲ್ಲಿ ಮಂಕಿ ಸೀನನಾಗಿ ಮಿಂಚಿದ್ದಾರೆ. ಒಂದೊಂದು ಲುಕ್ ಕೂಡ ಸಖತ್ ಕಿಕ್ ಕೊಡುತ್ತಿದೆ. ಸೂರಿ ಹಾಗೂ ಡಾಲಿ ರಾ ಕಾಂಬೀನೇಷನ್ ತೆರೆ ಮೇಲೆ ಯಾವ ರೀತಿ ಮಾಸ್ ಪ್ರಿಯರ ಮನತಣಿಸುತ್ತೆ ಅನ್ನೋದರತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಮಂಕಿ ಸೀನನ ಅಡ್ಡದಲ್ಲಿ ನಿವೇಧಿತಾ, ಅಮೃತ ಅಯ್ಯಂಗರ್, ಸಪ್ತಮಿ ಎಂಬ ಮೂರು ಹುಡುಗಿಯರು ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ. ಸುಧಿ, ನವೀನ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

    ಟಗರು ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಈ ಚಿತ್ರದಲ್ಲಿ ಮತ್ತೊಮ್ಮೆ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಮಾಸ್ ಸಿನಿಮಾಗಳಿಗೆ ಹೇಳಿ ಮಾಡಿಸಿದ ಚರಣ್ ರಾಜ್ ಮ್ಯೂಸಿಕ್ ಈ ಚಿತ್ರದಲ್ಲೂ ಒನ್ಸ್ ಅಗೈನ್ ಸೆನ್ಸೇಷನ್ ಕ್ರಿಯೇಟ್ ಮಾಡೋದ್ರಲ್ಲಿ ಡೌಟೇ ಇಲ್ಲ. ಶೇಖರ್ ಕ್ಯಾಮೆರಾ ಕೈಚಳಕದಲ್ಲಿ ‘ಪಾಪ್ ಕಾರ್ನ್ ಮಂಕಿ ಟೈಗರ್’ಚಿತ್ರ ಸೆರೆಯಾಗಿದ್ದು, ಸುಧೀರ್. ಕೆ.ಎಂ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿರೋ ‘ಪಾಪ್ ಕಾರ್ನ್ ಮಂಕಿ ಟೈಗರ್’ ಇದೇ ಶುಕ್ರವಾರ ಬಿಡುಗಡೆಯಾಗಲಿದ್ದು, ಯಾವ ರೀತಿ ಟ್ರೆಂಡ್ ಕ್ರಿಯೇಟ್ ಮಾಡಲಿದೆ ಅನ್ನೋದನ್ನ ಕಾದುನೋಡ್ಬೇಕು.

  • ಟೀಸರ್‌ನೊಂದಿಗೆ ಬಂದ ‘ಪಾಪ್ ಕಾರ್ನ್ ಮಂಕಿ ಟೈಗರ್’- ಡಾಲಿ ಅವತಾರಕ್ಕೆ ಪ್ರೇಕ್ಷಕ ಫಿದಾ!

    ಟೀಸರ್‌ನೊಂದಿಗೆ ಬಂದ ‘ಪಾಪ್ ಕಾರ್ನ್ ಮಂಕಿ ಟೈಗರ್’- ಡಾಲಿ ಅವತಾರಕ್ಕೆ ಪ್ರೇಕ್ಷಕ ಫಿದಾ!

    ಟಗರು ಖ್ಯಾತಿಯ ಡಾಲಿ ಧನಂಜಯ್ ಅಭಿನಯದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮಾಸ್ ಟೀಸರ್ ರಿಲೀಸ್ ಆಗಿದೆ. ಸ್ಯಾಂಡಲ್‍ವುಡ್ ನಲ್ಲಿ ಬಾರಿ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಸಿನಿಮಾಗಳಲ್ಲಿ ಈ ಚಿತ್ರವೂ ಕೂಡ ಒಂದು. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ನಾನಾ ಅವತಾರಗಳಲ್ಲಿ ಮಾಸ್ ಲುಕ್ ನಲ್ಲಿ ಕಾಣಸಿಕೊಂಡಿದ್ದಾರೆ. ಟೀಸರ್ ಸಖತ್ ಥ್ರಿಲ್ಲ್ ಆಗಿದ್ದು, ಸುಕ್ಕಾ ಸೂರಿ ಮತ್ತೊಮ್ಮೆ ಈ ಚಿತ್ರದ ಮೂಲಕ ಸಿನಿ ಪ್ರೇಕ್ಷಕರಿಗೆ ಭರ್ಜರಿ ಬೋಜನ ನೀಡೋದು ಪಕ್ಕಾ ಅನ್ನಿಸ್ತಾಯಿದೆ.

    ಪಿಆರ್ ಕೆ ಯುಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಕಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಮಾಸ್ ಚಿತ್ರಗಳಿಗೆ ಹೇಳಿ ಮಾಡಿಸಿದ ಸಂಗೀತ ನಿರ್ದೇಶಕ ಚರಣ್ ರಾಜ್ ಬ್ಯಾಗ್ರೌಂಡ್ ಸ್ಕೋರ್ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಟಗರು ಚಿತ್ರದಲ್ಲಿ ಸೂರಿ ಚರಣ್ ರಾಜ್ ಕಾಂಬಿನೇಷನ್ ಸಖತ್ ಸೌಂಡ್ ಮಾಡಿತ್ತು. ಈ ಚಿತ್ರದಲ್ಲೂ ಒಂದಾಗಿರುವ ಇವ್ರ ಕಾಂಬಿನೇಷನ್ ಮತ್ತೊಂದು ಸೂಪರ್ ಹಿಟ್ ಆಲ್ಬಂ ನೀಡೋದ್ರಲ್ಲಿ ಅನುಮಾನವೇ ಇಲ್ಲ.

    ಸುದೀರ್.ಕೆ.ಎಂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶೇಖರ್ ಕ್ಯಾಮೆರಾ ಕೈ ಚಳಕ ಚಿತ್ರಕ್ಕಿದೆ. ಧನಂಜಯ್ ಗೆ ಜೋಡಿಯಾಗಿ ನಿವೇದಿತಾ ಸ್ಕ್ರೀನ್ ಶೇರ್ ಮಾಡಿದ್ದು, ಅಮೃತ ಅಯ್ಯಂಗಾರ್, ಸುಧಿ, ಸಪ್ತಮಿ ಚಿತ್ರದ ತಾರಾ ಬಳಗದಲ್ಲಿದ್ದಾರೆ.

    ಪೋಸ್ಟರ್ ಹಾಗೂ ಟೈಟಲ್ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ಮೂಲಕ ಡಾಲಿ ಹಾಗೂ ನಿರ್ದೇಶಕ ಸೂರಿ ಅಭಿಮಾನಿಗಳಲ್ಲಿ ಸಂತಸ ಹೆಚ್ಚು ಮಾಡಿದೆ. ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿ ಇರೋ ಚಿತ್ರತಂಡ ಸದ್ಯದಲ್ಲೇ ಚಿತ್ರಮಂದಿರಕ್ಕೆ ಬರಲಿದೆ.

  • ಮಂಕಿಯಾದ ಡಾಲಿ ಧನಂಜಯ್

    ಮಂಕಿಯಾದ ಡಾಲಿ ಧನಂಜಯ್

    ಬೆಂಗಳೂರು: ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಧನಂಜಯ್ ಗೆ ಆ ಚಿತ್ರ ಅಷ್ಟೇನೂ ಸಕ್ಸಸ್ ತಂದುಕೊಡಲಿಲ್ಲ. ಅದೇ ಟೀಮಿನ ಜತೆಗೆ ಎರಡನೇ ಸಲ ಚಿತ್ರದಲ್ಲೂ ಅಭಿನಯಿಸಿ ಕೈ ಸುಟ್ಟು ಕೊಂಡಿದ್ದ ಧನಂಜಯ್ ಕೈ ಹಿಡಿದದ್ದು ಸೂರಿ ನಿರ್ದೇಶನದ ಟಗರು ಸಿನಿಮಾ. ಹೌದು ಟಗರು ಚಿತ್ರ ಧನಂಜಯ್ ಪಾಲಿಗೆ ಅಕ್ಷಯ ಪಾತ್ರೆ ಅಂದ್ರೆ ತಪ್ಪಿಲ್ಲ. ಆ ಚಿತ್ರದ ಅಮೋಘ ಅಭಿನಯಕ್ಕೆ ಕನ್ನಡ ಮಾತ್ರವಲ್ಲದೇ ಸಾಲು ಸಾಲು ಅವಕಾಶಗಳು ಧನಂಜಯ್ ಪಾಲಿಗೆ ಬಂದದ್ದು ಆಶ್ಚರ್ಯದ ಜತೆಗೆ ಕೆಲವರ ಹೊಟ್ಟೆ ಉರಿಗೆ ರೀಸನ್ ಕೂಡ.

    ಈಗಾಗಲೇ ಆರ್.ಜಿ.ವಿ ಗರಡಿಯಲ್ಲಿಯೂ ಭೈರವ ಗೀತಾ ಚಿತ್ರದ ಮೂಲಕ ಪಳಗಿ ಬಂದಿರುವ ಡಾಲಿ ಧನಂಜಯ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿಯಾಗಿಯೂ ಅಭಿನಯಿಸಿದ್ದಾರೆ. ಸದ್ಯ ಟಗರು ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್ ಮೇಲೆ ಇನ್ನಿಲ್ಲದ ನಿರೀಕ್ಷೆ ಇರುವುದಂತೂ ನಿಜವೇ. ಆರಂಭದಲ್ಲಿ ಟೈಟಲ್ ಮೂಲಕವೇ ಭಾರಿ ಸದ್ದು ಮಾಡಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಅದಾದ ಮೇಲೆ ಸದ್ದಿಲ್ಲದೇ ಗಪ್ ಚುಪ್ ಆಗಿತ್ತು. ಈಗ ಮತ್ತೆ ಫಾರ್ಮ್ ಗೆ ಬಂದಿರುವ ಚಿತ್ರ ತಂಡ ಲೇಟೆಸ್ಟ್ ವಿಚಾರವೊಂದನ್ನು ಶೇರ್ ಮಾಡಿಕೊಂಡಿದೆ.

    ಚಿತ್ರದ ಟೈಟಲ್ಲೇ ಸೂಚಿಸುವಂತೆ ಸಿನಿಮಾ ಮೂರು ಆ್ಯಂಗಲ್ ನಲ್ಲಿ ನಡೆಯೋ ಕಥೆಯಾಗಿದೆ. ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಧನಂಜಯ್ ಮಂಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮಂಕಿಯ ಎರಡು ಪೋಸ್ಟರ್ ರಿಲೀಸ್ ಆಗಿದ್ದು, ಡಾಲಿ ತಲೆ ಬೋಳಿಸಿಕೊಂಡು ಟೆರರ್ ಲುಕ್‍ನಲ್ಲಿ ಮಿಂಚುತ್ತಿದ್ದಾರೆ.

    ಅಂದಹಾಗೆ ಈಗಾಗಲೇ ಬೆಂಗಳೂರು, ಸೇರಿದಂತೆ ಬಹುತೇಕ ಕಡೆಗಳಲ್ಲಿ ಚಿತ್ರದ ಶೂಟಿಂಗ್ ಮುಗಿಸಿರೋ ಚಿತ್ರತಂಡ ಇದೀಗ ಮುಂಬೈಗೆ ಜಿಗಿದಿದೆ. ಚಿತ್ರಕ್ಕೆ ಅಗತ್ಯವಿರುವ ಲೊಕೇಷನ್ ಗಾಗಿ ಮುಂಬೈ ಸೆಲೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. ಕನ್ನಡದಲ್ಲಿ ಘಜಿನಿ ರೂಪದಲ್ಲಿ ಡಾಲಿ ಕಾಣಿಸಿಕೊಳ್ಳಲಿರುವುದು ಮಾಸ್ ಅಭಿಮಾನಿಗಳ ಕೌತುಕವನ್ನು ನೂರ್ಮಡಿಗೊಳಿಸಿದೆ.