Tag: Popcorn

  • ‘ಪಾಪ್ ಕಾರ್ನಾ’ ಮಾರಿ ಸಖತ್ ಟ್ರೋಲ್ ಆದ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್

    ‘ಪಾಪ್ ಕಾರ್ನಾ’ ಮಾರಿ ಸಖತ್ ಟ್ರೋಲ್ ಆದ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್

    ಬಾಲಿವುಡ್ ನಟಿ ದಿವಗಂತ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ ಸಖತ್ ಟ್ರೋಲ್ ಆಗುತ್ತಿದ್ದಾರೆ. ಟ್ರೋಲಿಗರು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಜಾನ್ವಿ ಕಪೂರ್ ಇತ್ತೀಚಿಗಷ್ಟೇ ಮಿಲಿ ಚಿತ್ರದ ಪ್ರಚಾರಕ್ಕಾಗಿ ದೆಹಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಮಲ್ಟಿಫ್ಲೆಕ್ಸ್‍ ನಲ್ಲಿ ಪಾಪ್ ಕಾರ್ನ್ (Popcorn) ಮಾರಾಟ ಮಾಡಿದ್ದರು. ಸಿನಿಮಾದ ಈ ವಿಭಿನ್ನ ಪ್ರಚಾರಕ್ಕೆ ಅಭಿಮಾನಿಗಳು ಮೆಚ್ಚಿಕೊಂಡಿದ್ದರೆ, ಉಳಿದಂತೆ ಟ್ರೋಲಿಗರು ಕಾಲೆಳೆದಿದ್ದರು.

    ಜಾನ್ವಿ ಕಪೂರ್ (Janhvi Kapoor) ಸದ್ಯ ಮಿಲಿ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಜಾನ್ವಿ ಕೆಲ ಸಿನಿಮಾಗಳನ್ನು ಮಾಡಿದ್ದರು, ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಮಿಲಿ ಸಿನಿಮಾ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಬಹುದು ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಅವರು ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಇದೇ ನವೆಂಬರ್ 4 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇದನ್ನೂ ಓದಿ: ಬೀದಿ ನಾಯಿ ರಾನುಗೆ ʻಐ ಲವ್‌ ಯೂʼ ಹೇಳಿದ ರಮ್ಯಾ: ರಾನು ಜೊತೆಗಿನ ವರ್ಷದ ನೆನಪು

    ಸಿನಿಮಾ ಪ್ರಚಾರಕ್ಕಾಗಿ ಪಾಪ್ ಕಾರ್ನ್ ಮಾರೋದು, ಮತ್ತೊಂದು ಮಾಡೋದು ಸರಿಯಾದದ್ದು ಅಲ್ಲ. ಖ್ಯಾತ ನಟಿ ಮತ್ತು ಖ್ಯಾತ ನಿರ್ಮಾಪಕರ ಪುತ್ರಿಯಾಗಿ ಜಾನ್ವಿ ಪಾಪ್ ಕಾರ್ನ್ ಮಾರುವುದು ಒಂದು ರೀತಿಯಲ್ಲಿ ಗಿಮಿಕ್. ಸಿನಿಮಾ ಚೆನ್ನಾಗಿದ್ದಾರೆ ಟಿಕೆಟ್ ಮಾರಬಹುದು, ಪಾಪ್ ಕಾರ್ನ್ ಅಲ್ಲ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೇ ಕೆಲವರು ಇನ್ನೂ ಕೆಟ್ಟದ್ದಾಗಿ ಕಾಮೆಂಟ್ ಕೂಡ ಮಾಡಿದ್ದರು.

    ಇದು ಹೆಲನ್ ಸಿನಿಮಾದ ರಿಮೇಕ್ ಚಿತ್ರವಾಗಿದ್ದು, ಇದೀಗ ಹಿಂದಿಯಲ್ಲಿ ರಿಮೇಕ್ ಆಗಿದೆ. ಈ ಸಿನಿಮಾವನ್ನು ಜಾನ್ವಿ ತಂದೆ ಬೋನಿ ಕಪೂರ್ (Boney Kapoor) ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟ್ರೇಲರ್ ರಿಲೀಸ್ ಮಾಡಿದ್ದು, ಒಳ್ಳೆಯ ಮಾತುಗಳು ಕೂಡ ಕೇಳಿ ಬಂದಿವೆ. ಸನ್ನಿ ಕೌಶಲ್ಯ ಹಾಗೂ ಮನೋಜ್ ಪಾಹ್ವಾ ಸೇರಿದಂತೆ ಹಲವರು ಈ ಸಿನಿಮಾದ ತಾರಾಗಣದಲ್ಲಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸಿನಿಮಾ ವೀಕ್ಷಿಸಿದ ರಾಹುಲ್ ಗಾಂಧಿ

    ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸಿನಿಮಾ ವೀಕ್ಷಿಸಿದ ರಾಹುಲ್ ಗಾಂಧಿ

    ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಹುಲ್ ಗಾಂಧಿ ತಮ್ಮ ವಿರಾಮದ ಸಮಯದಲ್ಲಿ ಸಿನಿಮಾ ನೋಡಲು ತೆರಳಿದ್ದರು. ಬುಧವಾರ ಆಯುಷ್ಮಾನ್ ಖುರಾನಾ ನಟನೆಯ ‘ಆರ್ಟಿಕಲ್ 15’ ಚಿತ್ರ ವೀಕ್ಷಿಸಿದ್ದಾರೆ.

    ರಾಹುಲ್ ಗಾಂಧಿ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಪಾಪ್‍ಕಾರ್ನ್ ಸವಿಯುತ್ತ ಸಿನಿಮಾ ವೀಕ್ಷಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯ ಪಿವಿಆರ್ ಚಾಣಕ್ಯದಲ್ಲಿ ರಾಹುಲ್ ಸಿನಿಮಾ ನೋಡಿದ್ದಾರೆ.

    ವಿಡಿಯೋದಲ್ಲಿ ಬಿಳಿ ಟೀ ಶರ್ಟ್ ಧರಿಸಿರುವ ರಾಹುಲ್ ಗಾಂಧಿ, ಭಾರತದಲ್ಲಿ ಜಾತಿ ವ್ಯವಸ್ಥೆ ಸಮಸ್ಯೆಯನ್ನು ಆಧರಿಸಿದ ಸಿನಿಮಾ ನೋಡಿದ್ದಾರೆ. ಬುಧವಾರಷ್ಟೇ ತಾವು ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿರುವ ಬಗ್ಗೆ ಬಹಿರಂಗವಾಗಿ 4 ಪುಟಗಳ ಪತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್, 2019ರ ಲೋಕಸಭಾ ಚುನಾವಣೆಯ ಸೋಲಿನ ಹೊಣೆಯನ್ನು ಹೊತ್ತಿದ್ದರು.

    ಉಳಿದಂತೆ ಅನುಭವ್ ಸಿನ್ಹಾ ಅವರು ನಿರ್ದೇಶನ ಮಾಡಿರುವ ‘ಆರ್ಟಿಕಲ್ 15’ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಜೂನ್ 28 ರಂದು ಬಿಡುಗಡೆಯಾಗಿದ್ದ ಚಿತ್ರ ಇದುವರೆಗೂ 31.16 ಕೋಟಿ ರೂ.ಗಳನ್ನು ಗಳಿಸಿದೆ. ಇದನ್ನು ಓದಿ:  ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ