Tag: Pop Corn Monkey Tiger

  • ಹೊಸ ಫೋಟೋಶೂಟ್‌ನಲ್ಲಿ ಕಂಗೊಳಿಸಿದ `ಕಾಂತಾರ’ ಬ್ಯೂಟಿ ಸಪ್ತಮಿ ಗೌಡ

    ಹೊಸ ಫೋಟೋಶೂಟ್‌ನಲ್ಲಿ ಕಂಗೊಳಿಸಿದ `ಕಾಂತಾರ’ ಬ್ಯೂಟಿ ಸಪ್ತಮಿ ಗೌಡ

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಸಪ್ತಮಿ ಗೌಡ (Saptami Gowda)  ಸದ್ಯ ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ಈ ನಡುವೆ ಚೆಂದದೊಂದು ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.

    `ಪಾಫ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಸುಂದರಿ ಸಪ್ತಮಿ ಗೌಡ, `ಕಾಂತಾರ’ (Kantara) ಸಿನಿಮಾದ ಸಕ್ಸಸ್ ನಂತರ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ನಯಾ ಫೋಟೋಶೂಟ್‌ ಶೇರ್‌ ಮಾಡಿ, ಲೈಟ್ಸ್‌, ಕ್ಯಾಮರಾ, ಆಕ್ಷನ್‌ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಿರ್ದೇಶಕಿ ರಿಷಿಕಾ ಜೊತೆ ಫೆ.15ಕ್ಕೆ ನಟ ನಿಹಾಲ್ ಮದುವೆ

     

    View this post on Instagram

     

    A post shared by Sapthami Gowda ???? (@sapthami_gowda)

    ಮೆರುನ್ ಬಣ್ಣದ ಲೆಹೆಂಗಾ ಧರಿಸಿ ನಟಿ ಸಪ್ತಮಿ, ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಕ್ಯಾಮರಾಗೆ ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ನಟಿಯ ಹೊಸ ಲುಕ್ ನೋಡಿ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಕಾಂತಾರ ನಟಿಯ ಹೊಸ ಲುಕ್‌ ಈಗ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ.

    ಇನ್ನೂ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ `ದಿ ವಾಕ್ಸಿನ್ ವಾರ್’ ಚಿತ್ರದ ಮೂಲಕ ಬಾಲಿವುಡ್‌ಗೆ ನಟಿ ಕಾಲಿಡುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ಜೊತೆ ಕಾಳಿ ಸಿನಿಮಾ ಕೂಡ ಮಾಡ್ತಿದ್ದಾರೆ. `ಉತ್ತರಕಾಂಡ’ ಚಿತ್ರದಲ್ಲಿ ಡಾಲಿ ಮತ್ತು ರಮ್ಯಾ ಜೊತೆ ಸಪ್ತಮಿ ಗೌಡ ಕೂಡ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೆಸರು ಬದಲಿಸಿಕೊಂಡ್ರು ಡಾಲಿ ಧನಂಜಯ್

    ಹೆಸರು ಬದಲಿಸಿಕೊಂಡ್ರು ಡಾಲಿ ಧನಂಜಯ್

    ಬೆಂಗಳೂರು: ಟಗರು ಚಿತ್ರದಲ್ಲಿ ಡಾಲಿ ಆಗಿ ಮಿಚಿಂದ ಸ್ಯಾಂಡಲ್‍ವುಡ್ ನಟ ಧನಂಜಯ್ ಅವರು ಈಗ ಡಾಲಿ ಧನಂಜಯ್ ಅಂತನೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಆದ್ರೆ ಈಗ ಧನಂಜಯ್ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

    ಹೌದು. ನಿರ್ದೇಶಕ ಸೂರಿ ಆ್ಯಕ್ಷನ್ ಕಟ್ ಹೇಳಿರುವ ‘ಪಾಪ್ ಕಾನ್ ಮಂಕಿ ಟೈಗರ್’ ಸಿನಿಮಾದಲ್ಲಿ ಸದ್ಯ ಧನಂಜಯ್ ಬ್ಯುಸಿಯಾಗಿದ್ದಾರೆ. ಫೆ. 21ರಂದು ‘ಪಾಪ್ ಕಾನ್ ಮಂಕಿ ಟೈಗರ್’ ತೆರೆಕಾಣಲಿದೆ. ಈ ಚಿತ್ರದಲ್ಲಿ ‘ಮಂಕಿ ಸೀನ’ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ಪ್ರಮೋಷನ್‍ಗಾಗಿ ಸಾಮಾಜಿಕ ತಾಣದಲ್ಲಿ ತಮ್ಮ ಯೂಸರ್ ನೇಮ್ ಅನ್ನು ಧನಂಜಯ್ ಬದಲಿಸಿಕೊಂಡಿದ್ದಾರೆ. ಹೀಗಾಗಿ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೆಸರನ್ನು ‘ಮಂಕಿ ಸೀನ’ ಎಂದು ಧನಂಜಯ್ ಚೇಂಜ್ ಮಾಡಿಕೊಂಡಿದ್ದಾರೆ.

    ಟಗರು ಸಿನಿಮಾದಿಂದ ಧನಂಜಯ್ ಡಾಲಿ ಆಗಿ ಫೇಮಸ್ ಆದರು. ಟಗರು ಸಿನಿಮಾ ಧನಂಜಯ್ ಅವರ ದಿಕ್ಕೇ ಬದಲಾಯಿಸಿತು. ಟಗರು ಸಿನಿಮಾದಲ್ಲಿ ಧನಂಜಯ್ ಅವರ ಖಡಕ್ ಡೈಲಾಗ್, ನಟನೆ ಅಭಿಮಾನಿಗಳ ಮನ ಗೆದ್ದಿತ್ತು. ಅದರಲ್ಲೂ ‘ಅಂಕಲ್‍ನ ಹೊಡಿತೀನಿ ಸುಬ್ಬಿ’ ಅನ್ನೋ ಡಾಲಿ ಡೈಲಾಗ್ ಅಂತೂ ಸಿಕ್ಕಾಪಟ್ಟೆ ಫೇಮಸ್. ಟಗರು ಸಿನಿಮಾ ತೆರೆಕಂಡ ಬಳಿಕ ಎಲ್ಲೇ ಹೋದರು ಜನರು ಧನಂಜಯ್ ಅವರನ್ನು ಡಾಲಿ ಎಂದೇ ಗುರುತಿಸುತ್ತಿದ್ದರು. ಹೀಗಾಗಿ ಅವರಿಗೆ ಡಾಲಿ ಧನಂಜಯ್ ಎಂದು ಹೆಸರು ಬಂತು.

    ಡಾಲಿ ಪಾತ್ರದ ಹಾಗೆ ಈ ಮಂಕಿ ಸೀನನ ಪಾತ್ರವು ಫೇಮಸ್ ಆಗುತ್ತಾ? ಡಾಲಿ ಹೋಗಿ ಮಂಕಿ ಸೀನ ಆಗುತ್ತಾರಾ ಧನಂಜಯ್ ಎನ್ನುವುದು ಸದ್ಯದ ಕುತೂಹಲವಾಗಿದೆ. ಸೂರಿ ನಿರ್ದೇಶನದಲ್ಲಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಡಿಬಂದಿದ್ದು, ಈ ಚಿತ್ರದಲ್ಲಿ ಧನಂಜಯ್‍ಗೆ ನಾಯಕಿಯಾಗಿ ನಟಿ ನಿವೇದಿತಾ, ಅಮೃತಾ ಮತ್ತು ಸಪ್ತಮಿ ಸಾಥ್ ಕೊಟ್ಟಿದ್ದಾರೆ.

    ಈಗಾಗಲೇ ಸಿನಿಮಾದ ಫಸ್ಟ್ ಲುಕ್, ಟೀಸರ್ ಅಭಿಮಾನಿಗಳ ಗಮನ ಸೆಳೆದಿದ್ದು, ಫೆ. 21 ಶಿವರಾತ್ರಿಯಂದು ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಅಲ್ಲದೇ ಈ ಚಿತ್ರದ ಮಹದೇವ ಹಾಡು ಎಲ್ಲೆಡೆ ಕ್ರೇಜ್ ಹೆಚ್ಚಿಸಿದ್ದು, ಈ ಹಾಡಿಗೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ಸಂಜಿತ್ ಹೆಗ್ಡೆ ಧ್ವನಿಯನ್ನು ಮೂಡಿಬಂದಿರುವ ಹಾಡಿಗೆ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.