Tag: Pooran

  • ಕೊನೆಯ ಐದು ಓವರ್‌ನಲ್ಲಿ ಸಿಕ್ಸ್, ಬೌಂಡರಿ ಮಳೆ- ಭಾರತಕ್ಕೆ 316 ರನ್ ಗುರಿ

    ಕೊನೆಯ ಐದು ಓವರ್‌ನಲ್ಲಿ ಸಿಕ್ಸ್, ಬೌಂಡರಿ ಮಳೆ- ಭಾರತಕ್ಕೆ 316 ರನ್ ಗುರಿ

    – ವಿವಿಯನ್ ರಿಚಡ್ರ್ಸ್ ದಾಖಲೆ ಮುರಿದ ಶಾಯ್ ಹೋಪ್
    – ಕೊನೆಯ 30 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್

    ಕಟಕ್: ನಾಯಕ ಕೀರನ್ ಪೋಲಾರ್ಡ್ ಸಿಕ್ಸರ್, ಬೌಂಡರಿ ಸುರಿಮಳೆ ಹಾಗೂ ನಿಕೊಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ವೆಸ್ಟ್ ಇಂಡೀಸ್ ತಂಡವು ಭಾರತಕ್ಕೆ 316 ರನ್‍ಗಳ ಗುರಿ ನೀಡಿದೆ.

    ಕಟಕ್‍ನಲ್ಲಿ ಟೀಂ ಇಂಡಿಯಾ ವಿರುದ್ಧದ ನಡೆಯುತ್ತಿರುವ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಶಾಯ್ ಹೋಪ್ 42 ರನ್, ರಾಸ್ಟನ್ ಚೇಸ್ 38 ರನ್, ನಿಕೊಲಸ್ ಪೂರನ್ 89 ರನ್ ಹಾಗೂ ನಾಯಕ ಕೀರನ್ ಪೋಲಾರ್ಡ್ 74 ರನ್‍ಗಳಿಂದ 5 ವಿಕೆಟ್ ನಷ್ಟಕ್ಕೆ 315 ರನ್ ಪೇರಿಸಿದೆ.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಗಳನ್ನು ಕಟ್ಟಿಹಾಕಿತು. ಇನ್ನಿಂಗ್ಸ್ ನ 10 ಓವರ್ ಮುಕ್ತಾಯಕ್ಕೆ ವಿಂಡೀಸ್ ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿತ್ತು. ಎವಿನ್ ಲೂಯಿಸ್ ಹಾಗೂ ಶಾಯ್ ಹೋಪ್ ಉತ್ತಮ ಜೊತೆಯಾಟವನ್ನು ಟೀಂ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ ಮುರಿದರು. 50 ಎಸೆತಗಳಲ್ಲಿ ಎವಿನ್ ಲೂಯಿಸ್ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    ಭಾರತ ಬೌಲರ್ ಗಳ ದಾಳಿಗೆ ವಿಂಡೀಸ್ ಬ್ಯಾಟ್ಸ್‌ಮನ್‍ಗಳು ಆರಂಭದಲ್ಲಿ ತತ್ತರಿಸಿ ಹೋದರು. ಇನ್ನಿಂಗ್ಸ್ ನ 20ನೇ ಓವರ್ ನಲ್ಲಿ ಮೊಹಮ್ಮದ್ ಶಮಿ ಶಾಯ್ ಹೋಪ್ ವಿಕೆಟ್ ಉರುಳಿಸಿದರು. ಶಾಯ್ ಹೋಪ್ 42 ರನ್ (50 ಎಸೆತ, 5 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು.

    ಶಾಯ್ ಹೋಪ್:
    ವೆಸ್ಟ್ ಇಂಡೀಸ್ ತಂಡದ ದಿಗ್ಗಜ, ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ವಿವಿಯನ್ ರಿಚರ್ಡ್ಸ್ ಅವರ ದಾಖಲೆಯನ್ನು ಶಾಯ್ ಹೋಪ್ ಮುರಿದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ವೇಗವಾಗಿ 3,000 ರನ್‍ಗಳನ್ನು ಪೂರೈಸಿದವರ ಪೈಕಿ 26 ವರ್ಷದ ಬಲಗೈ ಬ್ಯಾಟ್ಸ್‌ಮನ್ ಶಾಯ್ ಹೋಪ್, ವಿವಿಯನ್ ರಿಚರ್ಡ್ಸ್ ಮತ್ತು ಪಾಕಿಸ್ತಾನದ ಬಾಬರ್ ಆಝಮ್ ಅವರನ್ನು ಹಿಂದಿಕ್ಕಿ ನೂತನ ಶಾಯ್ ಹೋಪ್ ದಾಖಲೆ ಬರೆದಿದ್ದಾರೆ.

    ರಿಚರ್ಡ್ಸ್ 69 ಇನಿಂಗ್ಸ್ ಗಳಲ್ಲಿ 3,000 ರನ್ ಗಳಿಸಿದರೆ, ಹೋಪ್ ಕೇವಲ 67 ಇನಿಂಗ್ಸ್ ಗಳಲ್ಲಿ ಈ ದಾಖಲೆ ಬರೆದಿದ್ದಾರೆ. ವಿಂಡೀಸ್‍ನ ಮತ್ತೊಬ್ಬ ದಂತಕತೆ ಬ್ರಿಯಾನ್ ಲಾರಾ 79 ಇನಿಂಗ್ಸ್ ಗಳಲ್ಲಿ 3 ಸಾವಿರ ರನ್‍ಗಳನ್ನು ಗಳಿಸಿದ್ದರು. ಇದೀಗ ವೆಸ್ಟ್ ಇಂಡೀಸ್ ಪರ ಏಕದಿನ ಕ್ರಿಕೆಟ್‍ನಲ್ಲಿ ಅತಿ ವೇಗದ 3 ಸಾವಿರ ರನ್‍ಗಳನ್ನು ಗಳಿಸಿದ ದಾಖಲೆ ಹೋಪ್ ಮುಡಿಗೇರಿದೆ.

    ಇನ್ನಿಂಗ್ಸ್ ನ 40ನೇ ಓವರ್ ಮುಕ್ತಾಯಕ್ಕೆ ವೆಸ್ಟ್ ಇಂಡೀಸ್ 197 ರನ್ ಗಳಿಸಿತ್ತು. ಬಳಿಕ ಪೋಲಾರ್ಡ್ ಹಾಗೂ ನಿಕೊಲಸ್ ಪೂರನ್ ಭರ್ಜರಿ ಬ್ಯಾಟಿಂಗ್‍ನಿಂದ ತಂಡದ ಮೊತ್ತ ಏರಿಕೆ ಕಂಡಿತು. ಈ ಜೋಡಿಯು 5ನೇ ವಿಕೆಟ್‍ಗೆ 135 ಗಳಿಸಿತು. 89 ರನ್ (64 ಎಸೆತ, 10 ಬೌಂಡರಿ, 3 ಸಿಕ್ಸರ್) ಗಳಿಸಿದ್ದ ಇನ್ನಿಂಗ್ಸ್ ನ 47ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಪೋಲಾರ್ಡ್ ತಮ್ಮ ಸ್ಫೋಟಕ ಬ್ಯಾಟಿಂಗ್‍ನಿಂದ ತಂಡದ ಮೊತ್ತವನ್ನು ಏರಿಸಿದರು. ಕೊನೆಯ ಐದು ಓವರ್ ಗಳಲ್ಲಿ ವೆಸ್ಟ್ ಇಂಡೀಸ್ ಆಟಗಾರರು 8 ಬೌಂಡರಿ, 5 ಸಿಕ್ಸರ್ ಸಿಡಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು 5 ವಿಕೆಟ್ ನಷ್ಟಕ್ಕೆ 315 ರನ್ ಪೇರಿಸಿರು.