Tag: Poor

  • ಕಾಲಿಗೆ ಬೀಳಲು ಮುಂದಾದ ಜನ- ಕೈ ಮುಗಿದು ಹಿಂದೆ ಸರಿದ ಸೋನು ಸೂದ್

    ಕಾಲಿಗೆ ಬೀಳಲು ಮುಂದಾದ ಜನ- ಕೈ ಮುಗಿದು ಹಿಂದೆ ಸರಿದ ಸೋನು ಸೂದ್

    ಮುಂಬೈ: ಕೊರೊನಾ ಸಂಕಷ್ಟದ ಸಮಯದಿಂದಲೂ ಚಿಕಿತ್ಸೆಗೆ ಹಣ ಇಲ್ಲದವರಿಗೆ ಆರ್ಥಿಕ ನೆರವು ನೀಡುತ್ತಾ ಬಡವರ ಪಾಲಿನ ದೇವರಾಗಿರುವ ಸೋನು ಸೂದ್ ಅವರ ಕಾಲಿಗೆ ಜನ ಬೀಳಲು ಮುಂದಾಗಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಸೋನು ಸೂದ್ ಬಳಿ ಕಷ್ಟ ಹೇಳಿಕೊಂಡರೆ ಅದಕ್ಕೆ ಖಂಡಿತ ಪರಿಹಾರ ಸಿಗುತ್ತದೆ ಎಂಬ ಭರವಸೆ ಜನರಲ್ಲಿ ಮೂಡಿದೆ. ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿರುವ ಅವರನ್ನು ಜನರು ದೇವರ ರೀತಿ ನೋಡುತ್ತಾರೆ. ತಮಗೆ ಜನಿಸಿದ ಮಕ್ಕಳಿಗೆ ಸೋನು ಸೂದ್ ಎಂದು ಹೆಸರಿಟ್ಟು, ಸೋನು ಅವರಿಗೆ ದೇವಸ್ಥಾನ, ಹಾಲಿನ ಅಭಿಷೇಕ ಹೀಗೆ ಹಲವು ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದವರೂ ಇದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಮುಂಬೈನಲ್ಲಿರುವ ಸೋನು ಸೂದ್ ಮನೆಯ ಎದುರು ಇತ್ತೀಚೆಗೆ ಕೆಲವರು ಬಂದು ಸಹಾಯ ಕೇಳಿದ್ದಾರೆ. ತಮ್ಮ ಕಷ್ಟಕ್ಕೆ ಸ್ಪಂದಿಸಿದ ನಟನ ಕಾಲಿಗೆ ಬೀಳಲು ಅವರೆಲ್ಲ ಮುಂದಾಗಿದ್ದಾರೆ. ವಯಸ್ಸಿನಲ್ಲಿ ಹಿರಿಯರಾದವರು ಕೂಡ ಭಾವುಕರಾಗಿ ಸೋನು ಪಾದ ಮುಟ್ಟಿ ನಮಸ್ಕರಿಸಲು ಬಂದಿದ್ದಾರೆ. ಆದರೆ ಅದಕ್ಕೆ ಸೋನು ಅವಕಾಶ ನೀಡಿಲ್ಲ. ವಿನಯವಂತಿಕೆಯಿಂದ ಹಿಂದೆ ಸರಿದು, ಎಲ್ಲರಿಗೂ ಕೈ ಮುಗಿದಿದ್ದಾರೆ.

    ಒಂದೆಡೆ ಸೋನು ಸೂದ್ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಇನ್ನೊಂದೆಡೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ಏರಿಕೆ ಆಗುತ್ತಿದೆ. ಸೋನು ಸೂದ್ ಹೆಸರಿನಲ್ಲಿ ಹಣ ಮಾಡಲು ಕೂಡ ಕೆಲವು ಕಿಡಿಗೇಡಿಗಳು ಮುಂದಾಗಿದ್ದಾರೆ. ಸೋನು ಸೂದ್ ಫೌಂಡೇಶನ್‍ಗೆ ಹಣ ದೇಣಿಗೆ ನೀಡಿ ಎಂದು ನಕಲಿ ಗೂಗಲ್ ಪೇ ನಂಬರ್ ಇರುವ ಪೋಸ್ಟರ್​ಗಳು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹರಿದಾಡಿದ್ದವು. ಅವುಗಳ ಸ್ಕ್ರೀನ್ ಶಾಟ್ ಹಂಚಿಕೊಂಡ ಸೋನು ಸೂದ್, ಇದೆಲ್ಲವೂ ಫೇಕ್ ಎಂಬುದನ್ನು ಸ್ಪಷ್ಟಪಡಿಸಿದ್ದರು.

  • ಸ್ವಂತ ಹಣದಲ್ಲಿ 80 ಅಲೆಮಾರಿ ಕುಟುಂಬಗಳ ಸಾವಿರಕ್ಕೂ ಹೆಚ್ಚು ಜನರ ಹಸಿವು ನೀಗಿಸಿದ ಪೊಲೀಸರು

    ಸ್ವಂತ ಹಣದಲ್ಲಿ 80 ಅಲೆಮಾರಿ ಕುಟುಂಬಗಳ ಸಾವಿರಕ್ಕೂ ಹೆಚ್ಚು ಜನರ ಹಸಿವು ನೀಗಿಸಿದ ಪೊಲೀಸರು

    ಚಿಕ್ಕೋಡಿ/ಬೆಳಗಾವಿ: ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಅಲೆಮಾರಿ ಕುಟುಂಬಗಳಿಗೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಠಾಣೆಯ ಪೊಲೀಸರು ದಿನಸಿ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

    ಸಂಕೇಶ್ವರ ಪಟ್ಟಣದ ವಿವಿಧೆಡೆ ಇರುವ 80ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳಿಗೆ ಪಿಎಸ್‍ಐ ಗಣಪತಿ ಕೊಗನೊಳ್ಳಿ ಹಾಗೂ ಹವಾಲ್ದಾರ ಭೀಮಪ್ಪ ನಾಗನೂರೆ ನೇತೃತ್ವದಲ್ಲಿ ಪೊಲೀಸರು ತಮ್ಮ ವೇತನದಿಂದ ಹಣ ಸಂಗ್ರಹಿಸಿ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಕುಟುಂಬಗಳಿಗೆ ಆಹಾರದ ಕೊರತೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಅಕ್ಕಿ, ಅಡುಗೆ ಎಣ್ಣೆ, ಬೇಳೆ ಕಾಳುಗಳು, ಗೋದಿ ಹಿಟ್ಟು, ಬ್ರೆಡ್, ಬಿಸ್ಕೆಟ್ ಸೇರಿದಂತೆ ವಿವಿಧ ಆಹಾರದ ವಸ್ತುಗಳನ್ನು ಪೂರೈಸಿದ್ದಾರೆ.

    ಲಾಕ್‍ಡೌನ್ ಆದಾಗಿನಿಂದಲೂ ವಾರಕ್ಕೆ ಒಂದು ಬಾರಿ ಈ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಪೊಲೀಸರು ನೀಡುತ್ತಿದ್ದಾರೆ. ಸಂಕೇಶ್ವರ ಪಟ್ಟಣದ 80 ಕುಟುಂಬಗಳು ಅಂದರೆ ಸಾವಿರಕ್ಕೂ ಹೆಚ್ಚು ಜನರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಡ ಕುಟುಂಬಗಳ ಪರವಾಗಿ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

  • 2021ರ ಜೂನ್ ಒಳಗೆ 25 ಸಾವಿರ ಮನೆ ಆಗದೇ ಹೋದ್ರೆ ರಾಜೀನಾಮೆ ಕೊಡ್ತೀನಿ: ಸೋಮಣ್ಣ

    2021ರ ಜೂನ್ ಒಳಗೆ 25 ಸಾವಿರ ಮನೆ ಆಗದೇ ಹೋದ್ರೆ ರಾಜೀನಾಮೆ ಕೊಡ್ತೀನಿ: ಸೋಮಣ್ಣ

    – ಬಡವರಿಗೆ ಮನೆ ಕೊಡೋ ಕೆಲಸ ಮಾಡ್ತೀವಿ

    ಬೆಂಗಳೂರು: 2021ರ ಜೂನ್ ಒಳಗೆ 25 ಸಾವಿರ ಮನೆ ಆಗದೇ ಹೋದ್ರೆ ನಾನು ರಾಜಕೀಯವೇ ಮಾಡಲ್ಲ. ವಸತಿ ಇಲಾಖೆಗೆ ರಾಜೀನಾಮೆ ಕೊಡ್ತೀನಿ. ಇದನ್ನು ಸವಾಲಾಗಿ ತೆಗೆದುಕೊಳ್ಳುತ್ತೇನೆ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.

    ವಸತಿ ಇಲಾಖೆಗೆ ಸಂಬಂಧಿಸಿದಂತೆ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮನೆಗಳ ನಿರ್ಮಾಣದ ಕುರಿತು ಚರ್ಚೆ ನಡೆಯಿತು. ಸಭೆ ಬಳಿಕ ಮಾತನಾಡಿದ ಸಚಿವರು, ಸಿಎಂ ಒಂದು ಲಕ್ಷ ಮನೆ ಯೋಜನೆ ಸಂಬಂಧ ಸಭೆ ಮಾಡಿದ್ದೇವೆ. ಬೆಂಗಳೂರು ಡಿಸಿ, ತಹಶೀಲ್ದಾರ್, ಸರ್ವೆ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಮಾಡಲಾಗಿದೆ. 43 ಸಾವಿರ ಮನೆ ಈಗಾಗಲೇ ಪ್ರಾರಂಭ ಆಗಲಿದೆ. ಇದಕ್ಕಾಗಿ 221 ಎಕರೆ ಜಾಗ ನಗರ, ಜಿಲ್ಲೆ ಈಗಾಗಲೇ ನೀಡಿದೆ. 328 ಎಕರೆ ಜಾಗ ನಮ್ಮ ಕೈಗೆ ಸಿಗಬೇಕಿದೆ. ಇನ್ನೊಂದು ವಾರದಲ್ಲಿ ಈ ಜಾಗ ನಮಗೆ ಸಿಗಲಿದೆ ಎಂದರು.

    ಒಟ್ಟು 900 ಎಕರೆ ಜಾಗ ಒಂದು ಲಕ್ಷ ಮನೆ ಯೋಜನೆಗೆ ಸಿಗಲಿದೆ. 35 ಸಾವಿರ ಹೊಸ ಮನೆಗೆ ಒಂದು ವಾರದಲ್ಲಿ ಟೆಂಡರ್ ಕರೆಯುತ್ತೇವೆ. 2021ರ ಜೂನ್ ಒಳಗೆ 25-30 ಸಾವಿರ ಮನೆ ಬಡವರಿಗೆ ಕೊಡ್ತೀವಿ. ಈಗಾಗಲೇ 31 ಸಾವಿರ ಫಲಾನುಭವಿಗಳು ಅರ್ಜಿ ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ಮತ್ತೆ ಆನ್‍ಲೈನ್ ಮೂಲಕ ಅರ್ಜಿ ಕರೆಯುತ್ತೇವೆ. ಬಡವರಿಗೆ ಮನೆ ಕೊಡುವ ಕೆಲಸ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಶ್ರೀಮತಿ ಬಿಟ್ಟು ನನಗೆ ಸಂಜನಾ, ರಾಗಿಣಿ ಗೊತ್ತಿಲ್ಲ: ವಿ. ಸೋಮಣ್ಣ

    2021ರ ಜೂನ್ ಒಳಗೆ 25-30 ಸಾವಿರ ಮನೆ ಕೊಡ್ತೀವಿ. ಉಳಿದ ಮನೆ 2022 ರಲ್ಲಿ ಪೂರ್ಣ ಮಾಡ್ತೀವಿ. ಜೂನ್ ಒಳಗೆ 25 ಸಾವಿರ ಮನೆ ಆಗದೇ ಹೋದ್ರೆ ನಾನು ರಾಜಕೀಯವೇ ಮಾಡೊಲ್ಲ. ವಸತಿ ಇಲಾಖೆಗೆ ನಾನು ರಾಜೀನಾಮೆ ಕೊಡ್ತೀನಿ. ಇದನ್ನ ಚಾಲೆಂಜ್ ಆಗಿ ತಗೋತೀನಿ ಅಂದ್ರು.

    ಕಳೆದ ವರ್ಷ ಬಿದ್ದ ಮನೆಗೆ ಹಣ ಬಿಡುಗಡೆ ಮಾಡಿಲ್ಲ ಅನ್ನೊ ಆರೋಪ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಈಗಾಗಲೇ 1400 ಕೋಟಿ ಹಣ ಕಳೆದ ಬಾರಿ ಮಳೆಗೆ ಬಿದ್ದ ಮನೆಗಳಿಗೆ ಹಣ ಕೊಟ್ಟಿದ್ದೇವೆ. ಆದ್ಯತೆ ಮೇಲೆ ಹಣ ಬಿಡುಗಡೆ ಮಾಡ್ತಾನೆ ಇದ್ದೇವೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡ್ತಾನೆ ಇದ್ದೇವೆ ಎಂದು ಹೇಳಿದರು.

  • ಆನ್‍ಲೈನ್ ಕ್ಲಾಸ್ ಎಫೆಕ್ಟ್- ಜೀವನಾಧಾರವಾಗಿದ್ದ ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ ತಂದೆ

    ಆನ್‍ಲೈನ್ ಕ್ಲಾಸ್ ಎಫೆಕ್ಟ್- ಜೀವನಾಧಾರವಾಗಿದ್ದ ಹಸು ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ ತಂದೆ

    – ಬಿಜೆಪಿ ಆಡಳಿತವಿರೋ ರಾಜ್ಯದಲ್ಲೇ ಘಟನೆ

    ಶಿಮ್ಲಾ: ಕೊರೊನಾ ವೈರಸ್ ಭೀತಿಯಿಂದ ಮಕ್ಕಳಿಗೆ ಶಾಲೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಶಾಲೆಯ ಶಿಕ್ಷಕರು ಆನ್‍ಲೈನ್ ತರಗತಿಗಳನ್ನು ಆರಂಭಿಸಿದ್ದಾರೆ. ಈ ಆನ್‍ಲೈನ್ ಕ್ಲಾಸಿಗೆ ಮೊಬೈಲ್ ಬಹುಮುಖ್ಯವಾಗಿದೆ. ಹೀಗಾಗಿ ಬಡ ತಂದೆಯೊಬ್ಬ ತನ್ನ ಕುಟುಂಬಕ್ಕೆ ಜೀವನಾಧಾರವಾಗಿದ್ದ ಹಸುವನ್ನೇ ಮಾರಿ ಮಕ್ಕಳಿಗೆ ಮೊಬೈಲ್ ಕೊಡಿಸಿದ್ದಾರೆ. ಈ ಮೂಲಕ ತನ್ನ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂದು ಪಣತೊಟ್ಟಿದ್ದಾರೆ.

    ಹೌದು. ಈ ಘಟನೆ ನಡೆದಿರುವುದು ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ. ಕೋವಿಡ್ 19 ಲಾಕ್‍ಡೌನ್ ಪರಿಣಾಮ ಶಾಲೆಯ ಮಕ್ಕಳಿಗೆ ಆನ್‍ಕ್ಲಾಸ್ ಆರಂಭಿಸಿದ್ದಾರೆ. ಆದರೆ ಕಡು ಬಡ ಕುಟುಂಬದ ಕುಲ್ದೀಪ್ ಕುಮಾರ್ ತನ್ನ ಮಕ್ಕಳು ಇತರರಂತೆ ಓದಬೇಕು ಎಂದು ತಾನು ಸಾಕಿದ್ದ ಹಸುವನ್ನೇ ಮಾರಿ 6 ಸಾವಿರ ರೂ. ಕೊಟ್ಟು ಮೊಬೈಲ್ ಖರೀದಿಸಿದ್ದಾರೆ.

    ಹಸುವನ್ನು ಪುಣ್ಯಕೋಟಿ ಎಂದು ಬಣ್ಣಿಸಲಾಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ತಾಯಿಯಂತೆ ಹಸುವನ್ನು ಪೂಜಿಸಲಾಗುತ್ತಿದೆ. ಈ ಮಧ್ಯೆ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಸುವನ್ನೇ ಮಾರಿರುವುದು ನಿಜಕ್ಕೂ ಬೇಸರದ ಸಂಗತಿ. ಪರಿಶಿಷ್ಠ ಜಾತಿಗೆ ಸೇರಿರುವ ಕುಲ್ದೀಪ್, ಕಾಂಗ್ರಾ ಜಿಲ್ಲೆಯ ತಹಸಿಲ್ ನ ಗುಮ್ಮರ್ ಗ್ರಾಮದಲ್ಲಿ ನೆಲೆಸಿದ್ದಾರೆ. ಇವರ ಮಗಳು ಅನು ಹಾಗೂ ಮಗ ವಾನ್ಶ್ ಸರ್ಕಾರಿ ಶಾಲೆಯಲ್ಲಿ 4 ಮತ್ತು 2ನೇ ತರಗತಿಯಲ್ಲಿ ಓದುತ್ತಿದ್ದಾರೆ.

    ಕೊರೊನಾ ಎಂಬ ಮಹಾಮಾರಿ ವೈರಸ್ ಭೀತಿಯಿಂದ ರಾಜ್ಯದಲ್ಲಿ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಗಳನ್ನು ಆರಂಭಿಸಲಾಯಿತು. ಆದರೆ ಕುಲ್ದೀಪ್ ಮಕ್ಕಳಿಗೆ ತರಗತಿಗೆ ಹಾಜರಾಗಲು ಮೊಬೈಲ್ ಫೋನ್ ಹಾಗೂ ನೆಟ್ ಕನೆಕ್ಷನ್ ಇರಲಿಲ್ಲ. ಇದರಿಂದ ಬೇಸರಗೊಂಡು ತನ್ನ ಮಕ್ಕಳ ಓದು ಅರ್ಧಕ್ಕೆ ನಿಲ್ಲಬಾರದೆಂದು ಮೊಬೈಲ್ ಖರೀದಿ ಮಾಡಿದ್ದೇನೆ ಎಂದು ಕುಮಾರ್ ತಿಳಿಸಿದ್ದಾರೆ.

    ನನ್ನ ಮಕ್ಕಳು ಆನ್‍ಲೈನ್ ತರಗತಿಗೆ ಹಾಜರಾಗಲು ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ನನ್ನ ಕೈಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿ ನಾನು ಸಾಕಿದ್ದ ಹಸುವನ್ನು ಮಾರಲು ನಿರ್ಧರಿಸಿದೆ. ಅಲ್ಲದೆ 6 ಸಾವಿರ ರೂಪಾಯಿಗೆ ಹಸುವನ್ನು ಮಾರಿಬಿಟ್ಟೆ ಎಂದು ಕುಮಾರ್ ಗದ್ಗದಿತರಾದರು. ಕುಮಾರ್ ಹಾಲು ಮಾರಾಟ ಮಾಡುತ್ತಿದ್ದರೆ, ಪತ್ನಿ ಕೂಲಿ ಕೆಸ ಮಾಡುತ್ತಿದ್ದರು. ಈ ಮೂಲಕ ಇಬ್ಬರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದರು.

    ಹಸು ಮಾರುವ ಮೊದಲು ಕುಮಾರ್ ಕುಟುಂಬ, ಬ್ಯಾಂಕ್ ಬಾಗಿಲು ತಟ್ಟಿದೆ. ಅಲ್ಲದೆ ಖಾಸಗಿ ಸಾಲಗಾರರ ಮೊರೆಯೂ ಹೋಗಿದ್ದಾರೆ. ಆದರೆ ಎಲ್ಲಿಯೂ ಕುಮಾರ್ ಗೆ ಸಾಲ ದೊರಕಿರಲಿಲ್ಲ. ಇತ್ತ ಅದಾಗಲೇ ಆನ್‍ಕ್ಲಾಸ್ ಆರಂಭಿಸಿರುವ ಶಿಕ್ಷಕರು, ನಿಮ್ಮ ಮಕ್ಕಳ ಓದು ಮುಂದುವರಿಯಬೇಕಾದರೆ ಅವರಿಗೆ ಮೊಬೈಲ್ ಕೊಡಿಸಿ ತರಗತಿಗೆ ಹಾಜರುಪಡಿಸಿ ಎಂದು ಒತ್ತಡ ಹಾಕಲು ಆರಂಭಿಸಿದ್ದಾರೆ. ಪರಿಣಾಮ ಬೇರೆ ದಾರಿ ಇಲ್ಲದೆ ಹಸುವನ್ನು ಮಾರಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಕುಮಾರ್ ಬೇಸರ ವ್ಯಕ್ತಪಡಿಸಿದರು.

    ಸದ್ಯ ಅವರಲ್ಲಿ ಉಳಿದ ಇನ್ನೊಂದು ಹಸುವೇ ಜೀವನಾಧಾರವಾಗಿದೆ. ಇಷ್ಟು ಮಾತ್ರವಲ್ಲದೆ ಇದೀಗ ಕುಟುಂಬ ಮತ್ತೊಂದು ಕಷ್ಟವನ್ನು ಅನುಭವಿಸುತ್ತಿದೆ. ಅದೇನೆಂದರೆ, ಒಂದೇ ಫೋನಿನಲ್ಲಿ ಇಬ್ಬರು ಮಕ್ಕಳು ಏಕಕಾಲದಲ್ಲಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪರಿಣಾಮ ತರಗತಿಗೆ ಹಾಜರಾಗಲು ಇಬ್ಬರು ಮಕ್ಕಳು ಬೆಳಗೆದ್ದು ಜಗಳವಾಡುತ್ತಿರುವುದನ್ನು ನೋಡಲು ಕುಮಾರ್ ಕೈಯಲ್ಲಿ ಆಗುತ್ತಿಲ್ಲ.

    ಬಡವರಿಗೆ ನೀಡುವ ಸೌಲಭ್ಯಗಳನ್ನು ಪಡೆಯುವಲ್ಲಿ ಕುಮಾರ್ ವಂಚಿತರಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸಮಗ್ರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯುವ ಅರ್ಹತೆ ಕುಮಾರ್ ಕುಟುಂಬಕ್ಕಿದೆ. ಕುಮಾರ್ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಧವಾಲಾಗೆ ತಿಳಿಸಿದಾಗ, ಸರ್ಕಾರದಿಂದ ಕುಮಾರ್ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನಿಡಿದ್ದಾರೆ.

  • ಮೊಳಕೆ ಒಡೆಯದ ಕಳಪೆ ಬೀಜ – ಉತ್ತಮ ಮಳೆಯಾದ್ರೂ ಮಂಕಾದ ರೈತರು

    ಮೊಳಕೆ ಒಡೆಯದ ಕಳಪೆ ಬೀಜ – ಉತ್ತಮ ಮಳೆಯಾದ್ರೂ ಮಂಕಾದ ರೈತರು

    ರಾಯಚೂರು: ರೈತರು ದೇಶದ ಬೆನ್ನೆಲುಬು ಅನ್ನೋದು ಕೇವಲ ಮಾತಿಗೆ ಸೀಮಿತವಾಗಿದೆ. ರೈತರಿಗೆ ಮಾತ್ರ ಅನ್ಯಾಯವಾಗುತ್ತಲೇ ಇದೆ. ಸಾಲಸೂಲ ಮಾಡಿ ಜಮೀನಿನಲ್ಲಿ ಬಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಅನ್ನದಾತರು ಇರುತ್ತಾರೆ. ಆದರೆ ರೈತರಿಗೆ ಮೋಸ ಮಾಡಲೆಂದೇ ಇರುವ ಕಳಪೆ ಬೀಜ ತಯಾರಿಕಾ ಕಂಪನಿಗಳು ಮಾತ್ರ ರೈತರ ಬದುಕನ್ನೇ ಮುಳುಗಿಸುತ್ತಿವೆ.

    ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಖುಷಿಯಾಗಿದ್ದ ರಾಯಚೂರಿನ ಸಿಂಧನೂರು, ಮಸ್ಕಿ ತಾಲೂಕಿನ ಈ ರೈತರು ಈಗ ಮೋಸಹೊಗಿದ್ದಾರೆ. ಸೂರ್ಯಕಾಂತಿ ಬೀಜ ಬಿತ್ತಿ 20 ದಿನಗಳಾದರೂ ಬೀಜ ಮೊಳಕೆ ಒಡೆಯದೇ ಇರುವುದರಿಂದ ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೀಜ ಕಳಪೆಯಾಗಿದೆ. ಮೋಸಹೋಗಿ ಕೈ ಸುಟ್ಟುಕೊಂಡಿರುವ ರೈತರು ಕಂಪನಿಯ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಮುಂಗಾರು ಹಂಗಾಮಿನ ಬಿತ್ತನೆ ಎಲ್ಲೆಡೆ ಜೋರಾಗಿ ನಡೆದಿದೆ. ಇದೇ ಸಮಯದಲ್ಲಿ ಮಳೆಯನ್ನು ನಂಬಿ ಜಿಲ್ಲೆಯ ಸಿಂಧನೂರು ತಾಲೂಕಿನ ನೂರಾರು ಜನ ರೈತರು ತೇಜ ಕಂಪನಿಯ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ್ದಾರೆ. ತುರ್ವಿಹಾಳದ ಶ್ರೀ ಬಸವ ಅನ್ನದಾತ ಟ್ರೇಡರ್ಸ್ ನಲ್ಲಿ ತೇಜ ಕಂಪನಿಯ ಸೂರ್ಯಕಾಂತಿ ಬೀಜವನ್ನು ಖರೀದಿಸಿ ಬಿತ್ತನೆ ಮಾಡಿದ್ದಾರೆ. 20 ದಿನ ಕಳೆದರೂ ಬೀಜ ಮೊಳಕೆ ಒಡೆಯದೇ ಇರುವುದರಿಂದ ಕಂಪನಿಯು ಕಳಪೆ ಬೀಜ ನೀಡಿ ಮೋಸ ಮಾಡಿದೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.

    ಅಮಾಯಕ ರೈತರಿಗೆ ಮೋಸ ಮಾಡುವ ಕಂಪನಿಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೃಷಿ ಸಚಿವರು ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಕಳಪೆ ಬೀಜ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ.

  • ಬಿರುಗಾಳಿ ಮಳೆಗೆ ಮನೆ ಕಳೆದುಕೊಂಡು ಕಣ್ಣೀರಿಡುತ್ತಿದೆ ಕುಟುಂಬ

    ಬಿರುಗಾಳಿ ಮಳೆಗೆ ಮನೆ ಕಳೆದುಕೊಂಡು ಕಣ್ಣೀರಿಡುತ್ತಿದೆ ಕುಟುಂಬ

    ಗದಗ: ಮಳೆ ರಾಯನ ಆರ್ಭಟಕ್ಕೆ ಮನೆಯ ಶೀಟ್‍ಗಳು ಹಾರಿ ಹೋಗಿ, ಮನೆ ಸಂಪೂರ್ಣ ನಾಶವಾಗಿವೆ. ಪುಟ್ಟ ಮನೆಗಳಲ್ಲೇ ವಾಸಿಸುತ್ತಿದ್ದ ಬಡ ಕುಟುಂಬಗಳು ಸೂರು ಇಲ್ಲದೆ ಕಣ್ಣೀರಿಡುತ್ತಿವೆ.

    ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಘಟನೆ ನಡೆದಿದ್ದು, ಹಮಾಲರ ಕಾಲೋನಿಯ ಕಳಕವ್ವ ತಳವಾರ ಅವರ ಮನೆಯ ಶೀಟ್‍ಗಳು ಹಾರಿಹೋಗಿವೆ. ಬೆಳಗಿನ ಜಾವ ಸುರಿದ ಬಿರುಗಾಳಿ ಸಹಿತ ಮಳೆಯ ಅವಾಂತರಕ್ಕೆ ನಿವಾಸಿಗಳು ಕಣ್ಣೀರಿಡುತ್ತಿದ್ದಾರೆ. ಬಿರುಗಾಳಿ ಮಳೆ ಸುರಿಯುವ ಸಂದರ್ಭದಲ್ಲಿ ಮನೆಯಲ್ಲಿ ಗರ್ಭಿಣಿ ಹಾಗೂ ಚಿಕ್ಕಮಕ್ಕಳು ಸಹ ಇದ್ದು, ಭಯದಿಂದಲೇ ಜೀವ ಕೈಯ್ಯಲ್ಲಿ ಹಿಡಿದು ಕುಳಿತಂತಾಗಿತ್ತು.

    ಹಮಾಲರ ಕಾಲೋನಿಯಲ್ಲಿ ಹತ್ತಾರು ವರ್ಷಗಳಿಂದ ಈ ಕುಟುಂಬಗಳು ಹೀಗೆ ಜೀವನ ನಡೆಸುತ್ತಿವೆ. ಇಲ್ಲಿಯವರೆಗೆ ಯಾವೊಬ್ಬ ಜನಪ್ರತಿನಿಧಿಗಳು, ಅಧಿಕಾರಿಗಳು ನಮಗೆ ಸೌಲಭ್ಯಗಳನ್ನು ನೀಡಿಲ್ಲ ಎಂದು ನೊಂದ ಕುಟುಂಬಗಳು ಕಣ್ಣೀರಿಡುತ್ತಿವೆ. ಪಟ್ಟಣದ ಅನೇಕ ಕಡೆಗಳಲ್ಲಿ ಮನೆಗಳ ಮೇಲ್ಛಾವಣಿಗಳು ನಾಶವಾಗಿವೆ. ವಿದ್ಯುತ್ ಕಂಬಗಳು, ಗಿಡಮರಗಳು ಧರೆಗುರುಳಿವೆ. ಮಳೆಯ ಅವಾಂತರದಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ.

  • ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ವಾರ್ನಿಂಗ್ ಕೊಟ್ಟು ಆಹಾರ ಕಿಟ್ ಹಂಚಿದ ಗೋಪಾಲಯ್ಯ

    ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ವಾರ್ನಿಂಗ್ ಕೊಟ್ಟು ಆಹಾರ ಕಿಟ್ ಹಂಚಿದ ಗೋಪಾಲಯ್ಯ

    ಬೆಂಗಳೂರು: ಕೊರೊನಾ ಮಹಾಮಾರಿ ತೊಲಗುವ ತನಕ ಉಳ್ಳವರು ಬಡವರಿಗೆ ನೆರವು ನೀಡಿ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಮನವಿ ಮಾಡಿದರು.

    ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿಯ ಚೊಕ್ಕಸಂದ್ರ ಮುಖ್ಯ ರಸ್ತೆಯಲ್ಲಿ ಪಾಲಿಕೆ ಸದಸ್ಯೆ ಸರ್ವಮಂಗಳ, ಸಿ.ಎಂ ನಾಗರಾಜು ಹಾಗೂ ಸೆಮಿ ಲ್ಯಾಬ್ ಕಂಪನಿ ವತಿಯಿಂದ ಬಡವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಗೋಪಾಲಯ್ಯ ಅವರು ಚಾಲನೆ ನೀಡಿದರು. ಬಳಿಕ ಈ ಬಗ್ಗೆ ಮಾತನಾಡಿದ ಅವರು, ಪಡಿತರ ಚೀಟಿದಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ದಿನಸಿ ವಿತರಿಸುತ್ತಿವೆ. ಕಡು ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಮುಖಂಡರು ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಕೊರೊನಾ ಇರುವವರೆಗೆ ಜನಸೇವೆ ಮುಂದುವರೆಸುತ್ತೇವೆ ಎಂದರು. ಅಲ್ಲದೆ ಹೊರ ಜಿಲ್ಲೆಯ ಹಾಗೂ ಹೊರ ತಾಲೂಕಿನ ಎಲ್ಲಾ ಕುಟುಂಬಗಳಿಗೆ ಹತ್ತಿರದ ನ್ಯಾಯ ಬೆಲೆ ಅಂಗಡಿಯವರು ದಿನಸಿ ವಿತರಣೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

    ನಂತರ ಟಿ. ದಾಸರಹಳ್ಳಿಯ ಮಾಜಿ ಶಾಸಕ ಮುನಿರಾಜು ಮಾತನಾಡಿ, ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಜನಪ್ರತಿನಿಧಿಗಳೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸಿದೆ. ಇದರಿಂದ ಅಸಹಾಯಕರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಸೆಮಿ ಲ್ಯಾಬ್ ಕಾರ್ಖಾನೆ ಮಾಲೀಕ ಡಾ. ಮಹಮದ್ ಮಜೀದ್, ಸಿಇಒ ನೀರಜಾ ಶೆಟ್ಟಿ, ಎಂ.ಸಿ ಮುನಿರಾಜು, ನಿಸರ್ಗ ಕೆಂಪರಾಜು, ಕೆ. ಮುನಿರಾಜು, ಜಗದೀಶ್, ಮಂಜುನಾಥ್ ಮೊದಲಾದವರು ಭಾಗಿಯಾಗಿದ್ದರು.

  • 200 ಆಟೋ ಚಾಲಕರಿಗೆ ಸಹಾಯ ಹಸ್ತ ಚಾಚಿದ ಸೀರಿಯಲ್ ನಿರ್ಮಾಪಕ

    200 ಆಟೋ ಚಾಲಕರಿಗೆ ಸಹಾಯ ಹಸ್ತ ಚಾಚಿದ ಸೀರಿಯಲ್ ನಿರ್ಮಾಪಕ

    ಮಡಿಕೇರಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಇಡೀ ದೇಶವೇ ಲಾಕ್‍ಡೌನ್ ಆದ ಬಳಿಕ ಕೋಟ್ಯಂತರ ಜನರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಅದರಲ್ಲಿ ಆಟೋ ಚಾಲಕರ ಸ್ಥಿತಿಯೋ ಗಂಭೀರವಾಗಿದೆ. ಇದನ್ನು ಮನಗಂಡ ಸೀರಿಯಲ್ ನಿರ್ಮಾಪಕಯೊಬ್ಬರು 200 ಆಟೋ ಚಾಲಕರಿಗೆ 1 ಲಕ್ಷ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿ ಸಹಾಯ ಮಾಡಿದ್ದಾರೆ.

    ಕೊಡಗು ಜಿಲ್ಲೆಯ ಕುಶಾಲನಗರದ ನಿರ್ಮಾಪಕ ಮತ್ತು ಉದ್ಯಮಿಯಾಗಿರುವ ಉಮಾಶಂಕರ್ ಅವರು ಸ್ವತಃ ಆಟೋ ಚಾಲಕರಾಗಿದ್ದವರು. ಇಂದು ಆರ್ಥಿಕವಾಗಿ ಸುಧಾರಣೆ ಆಗಿರುವ ಉಮಾಶಂಕರ್ ಕೊರೊನಾದಿಂದ ತಮ್ಮ ಸಹಉದ್ಯೋಗಿಗಳಾಗಿದ್ದ ಆಟೋ ಚಾಲಕರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಅವರಿಗೆ ಸಹಾಯ ಮಾಡಿದ್ದಾರೆ. ಸುಮಾರು 200 ಆಟೋ ಚಾಲಕರಿಗೆ ಉಮಾಶಂಕರ್ ಲಕ್ಷ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳ ಕಿಟ್ ಅನ್ನು ವಿತರಣೆ ಮಾಡಿದರು.

    ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರಿಂದ ಆಟೋ ಚಾಲಕರಿಗೆ ಉಮಾಶಂಕರ್ ಕಿಟ್ ವಿತರಣೆ ಮಾಡಿಸಿದರು. ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಮುಖಂಡರು ಆಟೋ ಚಾಲಕರನ್ನು ನಿಲ್ಲಿಸಿದರು. ಪ್ರತೀ ಆಟೋ ಚಾಲಕರಿಗೆ ಹ್ಯಾಂಡ್ ಸ್ಯಾನಿಟೈಸರ್ ನೀಡಿ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡೇ ಕಿಟ್ ವಿತರಣೆ ಮಾಡಲಾಯಿತು.

    ಈ ವೇಳೆ ಮಾತನಾಡಿದ ಉಮಾಶಂಕರ್ ಅವರು, ಯಾರೂ ಸಹಾಯ ಮಾಡಿ ಎಂದು ಕೇಳುವುದಿಲ್ಲ. ಆದರೆ ಇಂತಹ ಸ್ಥಿತಿಯಲ್ಲಿ ಜನರ ಪರಿಸ್ಥಿತಿ ಅರ್ಥ ಮಾಡಿಕೊಂಡು ನಿಮ್ಮ ಮನೆಗಳ ಸುತ್ತಮುತ್ತಲಿರುವ ಬಡ ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದರು.

  • ‘ಮನೆಯೇ’ ಮಂತ್ರಾಲಯದ ಕರೆಗೆ ಸ್ಪಂದನೆ – ನಾಲ್ಕು ಲಕ್ಷ ಮೌಲ್ಯದ ಆಹಾರ ಕಿಟ್‌ಗಳನ್ನು ವಿತರಿಸಿದ ಎಂ.ಆರ್ ಬ್ರದರ್ಸ್ ತಂಡ

    ‘ಮನೆಯೇ’ ಮಂತ್ರಾಲಯದ ಕರೆಗೆ ಸ್ಪಂದನೆ – ನಾಲ್ಕು ಲಕ್ಷ ಮೌಲ್ಯದ ಆಹಾರ ಕಿಟ್‌ಗಳನ್ನು ವಿತರಿಸಿದ ಎಂ.ಆರ್ ಬ್ರದರ್ಸ್ ತಂಡ

    ಕಾರವಾರ: ಲಾಕ್‍ಡೌನ್‍ನಿಂದ ಅದೆಷ್ಟೋ ಮಂದಿ ಕಷ್ಟಗಳನ್ನು ಅನುಭವಿಸುತ್ತಿದ್ದು, ಒಂದು ದಿನದ ತುತ್ತಿಗೂ ಕಷ್ಟಪಡುತ್ತಿದ್ದಾರೆ. ಹೀಗಾಗಿ ಇಂತಹ ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಲು ಪಬ್ಲಿಕ್ ಟಿವಿ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮ ನಡೆಸುತ್ತಿದ್ದು, ಜನರು ಪ್ರತಿ ದಿನ ಕ್ರಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಹಾಯ ಪಡೆದಿದ್ದಾರೆ. ಈ ಕಾರ್ಯಕ್ರಮದ ಕರೆಗೆ ಸ್ಪಂದಿಸಿದ ಶಿರಸಿಯ ಎಂ.ಆರ್ ಬ್ರದರ್ಸ್ ತಂಡ ಬಡವರಿಗೆ ನಾಲ್ಕು ಲಕ್ಷ ರೂ. ಮೌಲ್ಯದ ಆಹಾರ ಕಿಟ್‍ಗಳನ್ನು ವಿತರಿಸಿ ನೆರವಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಗುಜುರಿ ವ್ಯಾಪಾರ ಮಾಡುತ್ತಿದ್ದ ನಾಗಪ್ಪ ಎಂಬವರು ಶುಕ್ರವಾರ ‘ಮನಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಸಹಾಯ ಬೇಡಿದ್ದರು. ಇದಕ್ಕೆ ಸ್ಪಂದಿಸಿದ ಪಬ್ಲಿಕ್ ಟಿವಿ ಅಭಿಮಾನಿಗಳು ಶಿರಸಿಯ ಫೈಯು ಚೌಟಿ ಅವರ ಸಹಕಾರದಲ್ಲಿ ಗುಜರಿ ವ್ಯಾಪಾರಿ ನಾಗಪ್ಪ ಅವರಿಗೆ ಅಗತ್ಯ ವಸ್ತುಗಳನ್ನು ನೀಡಿ, ಜೊತೆಗೆ ತಾತ್ಕಾಲಿಕವಾಗಿ ಸಹಾಯವಾಗಲು ಹಣ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಇದರ ಜೊತೆಗೆ ಫೈಯು ಚೌಟಿರವರ ಎಂ.ಆರ್ ಬ್ರದರ್ಸ್ ತಂಡವು ಇದೇ ಭಾಗದಲ್ಲಿ ತೊಂದರೆಗೊಳಗಾದ ಬಡವರಿಗೆ ನಾಲ್ಕು ಲಕ್ಷ ರೂ. ಮೌಲ್ಯದ ಆಹಾರ ಕಿಟ್‍ಗಳನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿರುವ ಜೀವಗಳಿಗೆ ಆಸರೆಯಾಗಿದ್ದಾರೆ.

  • ಬಡವರಿಗೆ ಸಹಾಯ ಮಾಡಿ ಪರಿಣಿತಿ ಚೋಪ್ರಾ ಜೊತೆ ಕಾಫಿ ಡೇಟ್ ಹೋಗಿ

    ಬಡವರಿಗೆ ಸಹಾಯ ಮಾಡಿ ಪರಿಣಿತಿ ಚೋಪ್ರಾ ಜೊತೆ ಕಾಫಿ ಡೇಟ್ ಹೋಗಿ

    ಮುಂಬೈ: ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು, ಬಡವರಿಗೆ ಸಹಾಯ ಮಾಡಿದವರಿಗೆ ತಮ್ಮ ಜೊತೆ ಕಾಫಿ ಕುಡಿಯುತ್ತಾ ಹರಟೆ ಹೊಡೆಯೋ ಚಾನ್ಸ್ ಸಿಗುತ್ತೆ ಎಂದಿದ್ದಾರೆ.

    ಹೌದು. ಇಡೀ ದೇಶವೇ ಕೊರೊನಾ ವೈರಸ್ ಹಾವಳಿಗೆ ತತ್ತರಿಸಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನಟಿ ಪರಿಣಿತಿ ಚೋಪ್ರಾ ಅಬಿಮಾನಿಗಳಿಗೆ ಒಂದು ಸ್ಪೆಷಲ್ ಅವಕಾಶ ನೀಡಿದ್ದಾರೆ. ಯಾರು ಬಡವರಿಗೆ, ದಿನಗೂಲಿ ನೌಕರರಿಗೆ ಉಚಿತವಾಗಿ ದಿನಸಿ ಕಿಟ್ ವಿತರಣೆ ಮಾಡುವುದು ಅಥವಾ ಯಾವುದೇ ಸಹಾಯ ಮಾಡಿದರೆ ಅವರೊಂದಿಗೆ ಪರಿಣಿತಿ ಚೋಪ್ರಾ ಕಾಫಿ ಕುಡಿಯುತ್ತಾರೆ.

    ಈ ಬಗ್ಗೆ ತಮ್ಮ ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪರಿಣಿತಿ, ವೆಬ್‍ಲಿಂಕ್ ಒಂದನ್ನು ನೀಡಿ ಅದಕ್ಕೆ ಲಾಗಿನ್ ಆಗಿ ದಿನಗೂಲಿ ನೌಕರರಿಗೆ ಸಹಾಯ ಮಾಡಿ ನನ್ನೊಂದಿಗೆ ಕಾಫಿ ಡೇಟ್ ನಲ್ಲಿ ಭಾಗವಹಿಸಿ ಎಂದು ಆಹ್ವಾನ ನೀಡಿದ್ದಾರೆ.

    https://www.instagram.com/p/B_1m88KFfVI/

    ವರ್ಚುಯಲ್ ಕಾಫಿ ಡೇಟ್:
    ಐಡಿಯಾ ಏನೋ ಚೆನ್ನಾಗಿದೆ. ಆದ್ರೆ ಲಾಕ್‍ಡೌನ್‍ನಲ್ಲಿ ಹೇಗಪ್ಪಾ ಪರಿಣಿತಿ ಜೊತೆ ಕಾಫಿ ಕುಡಿಯೋದು? ಹೋಟೆಲ್, ರೆಸ್ಟೋರೆಂಟ್‍ಗಳೆಲ್ಲಾ ತೆರೆದಿಲ್ಲವಲ್ಲಾ ಅಂತ ಪ್ರಶ್ನೆ ಕಾಡೋದು ಸಾಮಾನ್ಯ. ಇದಕ್ಕೆ ಉತ್ತರ ವರ್ಚುಯಲ್ ಡೇಟ್. ಪರಿಣಿತಿ ಜೊತೆ ಕಾಫಿ ಡೇಟ್ ವರ್ಚುಯಲ್ ಆಗಿರಲಿದೆ. ಅಂದರೆ ಪರಿಣಿತಿ ಮತ್ತು ಸಹಾಯ ಮಾಡಿದ ವ್ಯಕ್ತಿ ಅಂತರ್ಜಾಲದ ಮೂಲಕವೇ ಜೊತೆಯಾಗಿ ಕಾಫಿ ಸವಿಯುತ್ತಾ ಕೆಲ ಸಮಯ ಕಳೆಯಲಿದ್ದಾರೆ.

    ಪರಿಣಿತಿ ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಅದಕ್ಕೆಂದೇ ಅವರು ಈ ಕಾಫಿ ಡೇಟ್ ಐಡಿಯಾ ಮುಂದೆ ತಂದಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನವಾಗಿದ್ದು, ಸಹಾಯ ಮಾಡಿದವರು ಪರಿಣಿತಿ ಜೊತೆ ವರ್ಚುಯಲ್ ಕಾಫಿ ಕುಡಿಯಬಹುದಾಗಿದೆ.

    ಪರಿಣಿತಿ ಅಭಿನಯದ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಸಂದೀಪ್-ಪಿಂಕಿ ಫರಾರ್, ಸೈನಾ, ಲೂಡೋ, ಇಂದೂ ಕಿ ಜವಾನಿ, ಶಕುಂತಲಾ ದೇವಿ, ಕೋಡ್ ನೇಮ್ ಅಬ್ದುಲ್ ಸಿನಿಮಾಗಳು ಲಾಕ್‍ಡೌನ್ ಮುಕ್ತಾಯಗೊಂಡ ಬಳಿಕ ತೆರೆಕಾಣಲಿದೆ ಎನ್ನಲಾಗಿದೆ.