Tag: poor work

  • ಕೆಲಸ ಮಾಡದಿದ್ರೆ ನಾಯಿ ಸಹ ಮೂಸಿ ನೋಡಲ್ಲ: ಭಗವಂತ್ ಖೂಬಾ

    ಕೆಲಸ ಮಾಡದಿದ್ರೆ ನಾಯಿ ಸಹ ಮೂಸಿ ನೋಡಲ್ಲ: ಭಗವಂತ್ ಖೂಬಾ

    ಬೀದರ್: ಸರಿಯಾಗಿ ಕೆಲಸ ಮಾಡದೇ ಇದ್ದರೆ ನಾಯಿಗಳು ಸಹ ಮೂಸಿ ನೋಡಲ್ಲ ಎಂದು ಬ್ರಿಮ್ಸ್ ಆಸ್ಪತ್ರೆಯ ವೈದ್ಯರನ್ನು ಮತ್ತು ಅಧಿಕಾರಿಗಳನ್ನು ಸಂಸದ ಭಗವಂತ್ ಖೂಬಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಬ್ರಿಮ್ಸ್ ಆಸ್ಪತ್ರೆಯ ಮೇಲ್ಛಾವಣಿ ಕುಸಿತ ಹಿನ್ನೆಲೆ ಇಂದು ಅಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಖೂಬಾ ಅವರು, ನೀವು ಸರಿಯಾಗಿ ಕೆಲಸ ಮಾಡದಿದ್ದರೆ ನಾಯಿ ಸಹ ಮೂಸಿ ನೋಡುವುದಿಲ್ಲ. 1 ವರ್ಷದ ಹಿಂದೆ 100 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಬ್ರಿಮ್ಸ್ ಆಸ್ಪತ್ರೆ ಮೇಲ್ಛಾವಣಿ ಮಳೆಯಿಂದಾಗಿ ಕುಸಿದಿತ್ತು. ಜಿಲ್ಲಾ ಆಸ್ಪತ್ರೆಯ ಕಳಪೆ ಕಾಮಗಾರಿ ನಡೆದಿದೆ ಎಂದು ಇಂದು ಖೂಬಾ ಅವರು ಭೇಟಿ ನೀಡಿ ಸಭೆ ನಡೆಸಿ ಬ್ರೀಮ್ಸ್ ನಿರ್ದೇಶಕ ಕ್ಷೀರ ಸಾಗರನ್ನು ಸೇರಿದಂತೆ ವೈದ್ಯರನ್ನು ತರಾಟೆಗೆ ತಗೆದುಕೊಂಡರು.

    ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿದ್ದ ಸಿಬ್ಬಂದಿಗಳನ್ನು ಯಾಕೆ ಅಮಾನತು ಮಾಡಿಲ್ಲಾ.? ಆಸ್ಪತ್ರೆಯಲ್ಲಿ ಏನ್ ಕೆಲಸ ಮಾಡುತ್ತಿದ್ದೀರಾ. ನಿಮ್ಮ ಜೀವನಕ್ಕಾಗಿ ಕೆಲಸ ಮಾಡುತ್ತಿದ್ದೀರಾ ಇಲ್ಲಾ ಜನರಿಗಾಗಿ ಕೆಲಸ ಮಾಡುತ್ತಿದ್ದಿರಾ..? ನಿರ್ಲಕ್ಷ್ಯ ತೋರಿದವರನ್ನು ಅಮಾನತು ಮಾಡದೇ ಹೇಗೆ ತನಿಖೆ ನಡೆಸುತ್ತಿರಾ ಎಂದು ಪ್ರಶ್ನಿಸಿ ಅಧಿಕಾರಿಗಳ ಮೇಲೆ ಕೋಪಗೊಂಡರು.

  • ನಿರ್ಮಾಣ ಮಾಡಿದ್ದ ಒಂದೇ ದಿನಕ್ಕೆ ಕಿತ್ತುಹೋಯ್ತು ರಸ್ತೆ!

    ನಿರ್ಮಾಣ ಮಾಡಿದ್ದ ಒಂದೇ ದಿನಕ್ಕೆ ಕಿತ್ತುಹೋಯ್ತು ರಸ್ತೆ!

    ರಾಯಚೂರು: ಶನಿವಾರದಂದು ಹಾಕಲಾಗಿದ್ದ ಡಾಂಬರ್ ರಸ್ತೆ ಕೇವಲ ಒಂದೇ ದಿನಕ್ಕೆ ಕಿತ್ತುಹೋಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ತೊಂಡೆಹಾಳ ಗ್ರಾಮದಲ್ಲಿ ನಡೆದಿದೆ.

    ನಿನ್ನೆ ಹಾಕಿದ ರಸ್ತೆ ಒಂದೇ ದಿನದಲ್ಲಿ ಕಿತ್ತುಹೋಗಿದೆ. ಈ ರೀತಿ ಕಳಪೆ ಕಾಮಗಾರಿಯಿಂದ ರಸ್ತೆ ಕಿತ್ತು ಬಂದಿರುವುದಕ್ಕೆ ತೊಂಡೆಹಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 48 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಬೇಕಾದ 1 ಕಿ.ಮೀ ಡಾಂಬರ್ ರಸ್ತೆಯನ್ನ ರಾತ್ರೋ ರಾತ್ರಿ ಮಾಡಿ ಮುಗಿಸಿದ್ದಾರೆ.

    20 ವರ್ಷಗಳಿಂದ ರಸ್ತೆಯಿಲ್ಲದ ಗ್ರಾಮಕ್ಕೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಲ್ಲಿ 48 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದ ತೀರಾ ಕಳಪೆ ಮಟ್ಟದ ಡಾಂಬರೀಕರಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಶನಿವಾರ ಹಾಕಿದ್ದ ರಸ್ತೆ ಇಂದು ಬೆಳಗ್ಗೆ ನೋಡಿದಾಗ ಎಲ್ಲವೂ ಕಿತ್ತು ಹೋಗಿತ್ತು. ಈ ರಸ್ತೆಯ ಮೇಲೆ ನಡೆದರೆ ಸಾಕು ಡಾಂಬರ್ ಕಿತ್ತು ಬರುತ್ತಿದೆ. ವರ್ಷಾನೂ ಗಟ್ಟಲೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಈ ಭಾಗದ ಜನರು ಒದ್ದಾಡುತ್ತಿದ್ದರು. ಈಗಲಾದರೂ ರಸ್ತೆ ವ್ಯವಸ್ಥೆ ಆಗುತ್ತಿದೆಯಲ್ಲ ಅಂತ ಖುಷಿ ಪಟ್ಟಿದ್ದರು. ಆದರೆ ತೀರ ಕೆಳಮಟ್ಟದ ಕಾಮಗಾರಿ ಮಾಡಿ ಬೇಜವಾಬ್ದಾರಿ ತೋರಿದಕ್ಕೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಅಲ್ಲದೆ ಕೂಡಲೇ ಪುನಃ ಕಾಮಗಾರಿ ನಡೆಸಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶಾಸಕರ ಎದುರೇ ರಸ್ತೆಯನ್ನು ಕೈಯಲ್ಲಿ ಕಿತ್ತ ಗ್ರಾಮಸ್ಥರು

    ಶಾಸಕರ ಎದುರೇ ರಸ್ತೆಯನ್ನು ಕೈಯಲ್ಲಿ ಕಿತ್ತ ಗ್ರಾಮಸ್ಥರು

    -ಕಳಪೆ ಕಾಮಗಾರಿ ಬಗ್ಗೆ ಗ್ರಾಮಸ್ಥರಿಂದ ಅಸಮಾಧಾನ

    ಮಂಡ್ಯ: ರಸ್ತೆಯನ್ನು ಶಾಸಕರ ಎದುರೇ ಕೈಯಲ್ಲಿ ಕಿತ್ತು ಕಳಪೆ ಕಾಮಗಾರಿ ಬಗ್ಗೆ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕಹೊಸಗಾವಿ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

    ಚಿಕ್ಕಹೊಸಗಾವಿ ಗ್ರಾಮ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದಾಗಿದ್ದು, ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್‍ಗೌಡ ಅವರು ಶುಕ್ರವಾರ ಚಿಕ್ಕಹೊಸಗಾವಿ ಗ್ರಾಮಕ್ಕೆ ಸಭೆ ನಡೆಸಲು ಬಂದಿದ್ದರು. ಇತ್ತೀಚೆಗೆ ಗ್ರಾಮಕ್ಕೆ ಹೊಸದಾಗಿ ಡಾಂಬರು ರಸ್ತೆ ನಿರ್ಮಿಸಲಾಗಿತ್ತು. ಆದರೆ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಅಲ್ಲಲ್ಲಿ ಬಿರುಕು ಬಿಡುತ್ತಿತ್ತು. ಗ್ರಾಮಕ್ಕೆ ಬಂದ ಶಾಸಕರನ್ನು ರಸ್ತೆಯ ಬಳಿ ಕರೆದುಕೊಂಡು ಹೋಗಿ ಡಾಂಬರನ್ನು ಕಿತ್ತು ಗ್ರಾಮಸ್ಥರು ತೋರಿಸಿದ್ದಾರೆ.

    ರಸ್ತೆಗೆ ಹಾಕಿದ್ದ ಡಾಂಬರನ್ನು ಕೈಯಲ್ಲಿ ಕಿತ್ತು ಶಾಸಕರಿಗೆ ತೋರಿಸಿ ಜೆಲ್ಲಿ ಹರಡದೆ ನೆಪ ಮಾತ್ರಕ್ಕೆ ಟಾರ್ ಹಾಕಿ ಬಿಲ್ ಪಡೆಯುತ್ತಿದ್ದಾರೆ. ಇಂತಹ ರಸ್ತೆ ಎಷ್ಟು ದಿನ ಬಾಳಿಕೆ ಬರುತ್ತೆ. ಹೀಗೆ ಆದರೆ ನಿಮಗೆ ಕೆಟ್ಟ ಹೆಸರು ಬರುತ್ತೆ ಎಂದು ಕಳಪೆ ಕಾಮಗಾರಿ ಬಗ್ಗೆ ಅಸಮಾಧಾನ ಹೊರಹಾಕಿದರು. ಇದೆಲ್ಲವನ್ನು ನೋಡಿದ ಶಾಸಕರು ಕೂಡ ಇದೇನು ರಸ್ತೆಗೆ ಟಾರ್ ಹಾಕಲು ಜೆಲ್ಲಿಯನ್ನೇ ಹಾಕಿಲ್ಲ ಎಂಬ ರೀತಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಬರ ಪರಿಹಾರದಲ್ಲಿ ಕುಡಿಯುವ ನೀರು ಪೂರೈಸಿದ್ದ ಬಿಲ್‍ನ ಹಣ ಎರಡು ವರ್ಷವಾದರೂ ನನ್ನ ಕೈ ಸೇರಿಲ್ಲ ಎಂದು ಶಾಸಕರ ಎದುರೇ ಜೆಡಿಎಸ್ ಪಕ್ಷದ ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ್ ಎಂಬವರು, ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಲತಾ ಕುಡಿಯುವ ನೀರು ಪೂರೈಸಿದ ಬಿಲ್ ನೀಡುತ್ತಿಲ್ಲ. ನನ್ನನ್ನು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ದೂರಿದರು. ಈ ಸಮಯದಲ್ಲಿ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಶಾಸಕರೇ ಎಲ್ಲರನ್ನೂ ಸಮಾಧಾನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಳಪೆ ಕಾಮಗಾರಿ ಪ್ರಶ್ನಿಸಿದ ಜನರಿಗೆ ಶಾಸಕ ಲಮಾಣಿ ಪುತ್ರ ಅವಾಜ್!

    ಕಳಪೆ ಕಾಮಗಾರಿ ಪ್ರಶ್ನಿಸಿದ ಜನರಿಗೆ ಶಾಸಕ ಲಮಾಣಿ ಪುತ್ರ ಅವಾಜ್!

    ಗದಗ: ರಸ್ತೆ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ, ಸರಿಪಡಿಸಿ ಎಂದು ಕಾಮಗಾರಿ ತಡೆದ ಸಾರ್ವಜನಿಕರಿಗೆ ಶಾಸಕ ಲಮಾಣಿ ಪುತ್ರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅವಾಜ್ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಿಂದ ಗದಗ ನಾಕಾವರೆಗೆ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಒಳ್ಳೆ ಕಾಮಗಾರಿ ಮಾಡಿ ಎಂದು ಸ್ಥಳಿಯರು ಪ್ರತಿಭಟಿಸಿ ಸ್ಥಗಿತಗೊಳಿಸಿದ್ದರು.

    ಈ ವಿಚಾರ ತಿಳಿದು ಗುತ್ತಿಗೆದಾರರ ಬೆಂಗಾವಲಾಗಿ ಬಂದ ಶಾಸಕರ ಪುತ್ರ ಮಹೇಶ ಲಮಾಣಿ ಜನರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದರಿಂದ ಅಂಬೇಡ್ಕರ್ ಸೇನಾ ಸಮಿತಿಯಿಂದ ಸಾರ್ವಜನಿಕರು ರಸ್ತೆ ತಡೆದು, ಜೆಸಿಬಿ ಅಡ್ಡನಿಲ್ಲಿಸಿ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಆಗಮಿಸಿ ಮಹೇಶ ಲಮಾಣಿ ಕ್ಷಮೆ ಕೇಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳಗಾವಿಯಲ್ಲಿ ವರುಣನ ಆರ್ಭಟ- ಕೊಚ್ಚಿಹೋಯ್ತು ಸೇತುವೆ

    ಬೆಳಗಾವಿಯಲ್ಲಿ ವರುಣನ ಆರ್ಭಟ- ಕೊಚ್ಚಿಹೋಯ್ತು ಸೇತುವೆ

    ಬೆಳಗಾವಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ನಿನ್ನೆ ಸುರಿದ ಭಾರಿ ಮಳೆಯಿಂದ ಮಲಪ್ರಭಾ ನದಿಗೆ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಗಿದೆ.

    ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ-ಬೇವಿನಕೊಪ್ಪ ಗ್ರಾಮಗಳ ನಡುವೆ ಮಲಪ್ರಭಾ ನದಿಗೆ ಸೇತುವೆ ನಿರ್ಮಿಸಲಾಗಿತ್ತು. ಸುಮಾರು 5 ಕೋಟಿ ರೂ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು.

    ಭಾರೀ ಮಳೆ ಸುರಿದ ಪರಿಣಾಮವಾಗಿ ಅರ್ಧ ಸೇತುವೆಯೇ ಕೊಚ್ಚಿಕೊಂಡು ಹೋಗಿದೆ. ಸಾಕಷ್ಟು ನೀರಿನ ಒತ್ತಡವಿರುವ ಪ್ರದೇಶ ಇದಾಗಿದ್ದು ಸೇತುವೆ ನೆಲಕಚ್ಚಿದೆ. ಬ್ರಿಡ್ಜ್ ನಿರ್ಮಾಣವಾಗಿ ಈ ಕಾಮಗಾರಿ ಪೂರ್ಣಗೊಂಡು ಇನ್ನೂ 6 ತಿಂಗಳೂ ಕಳೆದಿಲ್ಲ. ಸೇತುವೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.