Tag: Poonam Kaur

  • ಆತ ನನ್ನ ಜೀವನವನ್ನೇ ನಾಶ ಮಾಡಿಬಿಟ್ಟ- ತ್ರಿವಿಕ್ರಮ್ ವಿರುದ್ಧ ಸಿಡಿದೆದ್ದ ಪೂನಂ ಕೌರ್

    ಆತ ನನ್ನ ಜೀವನವನ್ನೇ ನಾಶ ಮಾಡಿಬಿಟ್ಟ- ತ್ರಿವಿಕ್ರಮ್ ವಿರುದ್ಧ ಸಿಡಿದೆದ್ದ ಪೂನಂ ಕೌರ್

    ಟಾಲಿವುಡ್ ನಟಿ ಪೂನಂ ಕೌರ್ (Poonam Kaur) ಮತ್ತೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ವಿರುದ್ಧ ಗರಂ ಆಗಿದ್ದಾರೆ. ನಿರ್ದೇಶಕ ತ್ರಿವಿಕ್ರಮ್ ಮೇಲೆ ದೂರು ನೀಡಿದ್ದರೂ MAA ಸಂಸ್ಥೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಟಿ ರಾಂಗ್ ಆಗಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ನಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ನಿಮಗೆ ಕಪ್‌ ಗೆಲ್ಲಲು ಸಾಮರ್ಥ್ಯ ಇಲ್ವಾ?: ಭವ್ಯಾಗೆ ಸುದೀಪ್ ಕ್ಲಾಸ್

    ಡೈರೆಕ್ಟರ್ ತ್ರಿವಿಕ್ರಮ್ ಅವರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿರೋದಾಗಿ ಈ ಹಿಂದೆ ಪೂನಂ ಆರೋಪ ಮಾಡಿದ್ದರು. ಈ ಬಗ್ಗೆ ಇದೀಗ ಮತ್ತೆ ನಟಿ ಧ್ವನಿಯೆತ್ತಿದ್ದಾರೆ. ತೆಲುಗಿನ ಕಲಾವಿದರ ಸಂಘ ‘ಮಾ’ ಕುರಿತು ಎಕ್ಸ್‌ನಲ್ಲಿ ರಿಯಾಕ್ಟ್ ಮಾಡಿ, ತ್ರಿವಿಕ್ರಮ್ ಶ್ರೀನಿವಾಸ್ ಮೇಲಿನ ದೂರನ್ನು ‘ಮಾ’ ಸಂಸ್ಥೆ ಸ್ವೀಕರಿಸಲಿಲ್ಲ. ಯಾವುದೇ ವಿಚಾರಣೆ ಮಾಡಿಲ್ಲ. ಸೂಕ್ತ ಕ್ರಮ ಕೈಗೊಂಡಿಲ್ಲ. ಆತ ನನ್ನ ಜೀವನವನ್ನೇ ನಾಶ ಮಾಡಿ ಬಿಟ್ಟ ಎಂದು ಬರೆದುಕೊಂಡಿದ್ದಾರೆ. ಹಾಗಾದ್ರೆ ‘ಮಾ’ ಸಂಸ್ಥೆ ಯಾರ ಪರ ನಿಂತಿದೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

    ಇದಕ್ಕೆ ‘ಮಾ’ ಸಂಸ್ಥೆ ಸ್ಪಂದಿಸಿ, ಎಕ್ಸ್‌ನಲ್ಲಿ ಆರೋಪ ಮಾಡಿದ್ರೆ ಪ್ರಯೋಜನವಿಲ್ಲ. ತ್ರಿವಿಕ್ರಮ್ ವಿರುದ್ಧ ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ. ಇದುವರೆಗೂ ಯಾವುದೇ ಲಿಖಿತ ದೂರು ಬಂದಿಲ್ಲ ಎಂದು ‘ಮಾ’ ಚಲನಚಿತ್ರ ಕಲಾವಿದರ ಸಂಘ ಪೂನಂ ಆರೋಪಕ್ಕೆ ಉತ್ತರ ಕೊಟ್ಟಿದೆ.

  • ಪ್ರಜ್ವಲ್ ರೇವಣ್ಣ ಪ್ರಕರಣ: ಶಿಕ್ಷೆಗೆ ನಟಿ ಪೂನಂ ಕೌರ್ ಆಗ್ರಹ

    ಪ್ರಜ್ವಲ್ ರೇವಣ್ಣ ಪ್ರಕರಣ: ಶಿಕ್ಷೆಗೆ ನಟಿ ಪೂನಂ ಕೌರ್ ಆಗ್ರಹ

    ಶಿವರಾಜ್ ಕುಮಾರ್ ನಟನೆಯ ಬಂಧು ಬಳಗ ಸಿನಿಮಾ ಸೇರಿದಂತೆ ನಾನಾ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಪೂನಂ ಕೌರ್ (Poonam Kaur) ಸಿಡಿದೆದ್ದಿದ್ದಾರೆ. ಪ್ರಜ್ವಲ್ ರೇವಣ್ಣರಂಥ ನೀಚ ವ್ಯಕ್ತಿಗಳನ್ನು ಗೆಲ್ಲಿಸಬೇಕಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ದೇಶದಾದ್ಯಂತ ಪ್ರಜ್ವಲ್ ಅವರ ವಿಡಿಯೋ ಎನ್ನಲಾದ ವಿಡಿಯೋಗಳು ಹರಿದಾಡುತ್ತಿವೆ. ಈ ಸಂದರ್ಭದಲ್ಲಿ ಪೂನಂ ಹೇಳಿಕೆ ಮಹತ್ವ ಪಡೆದುಕೊಂಡಿದೆ.

    ಮಹಿಳೆಯರಿಗೆ ಬೆದರಿಕೆ ಹಾಕಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವಿರಾರು ವಿಡಿಯೋಗಳು (Video) ಹರಿದಾಡುತ್ತಿವೆ. ಹಣ ಮತ್ತು ರಾಜಕೀಯ ಕಾರಣದಿಂದಾಗಿ ಅವರು ತಪ್ಪಿಸಿಕೊಂಡು ಹೋಗಿದ್ದಾರೆ. ಜರ್ಮನಿಯಲ್ಲಿ ಪ್ರಜ್ವಲ್ ನೆಮ್ಮದಿಯಾಗಿದ್ದಾರೆ. ಇವರಿಗೆ ಶಿಕ್ಷೆ ಆಗಬೇಕು ಎಂದರೆ ಜನರು ತಿರುಗಿ ಬೀಳಬೇಕು ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

     

    ಪ್ರಜ್ವಲ್ ರೇವಣ್ಣ (Prajwal Revanna) ಅವರ ಮೇಲಿನ ಆರೋಪ ರಾಜಕೀಯವಾಗಿಯೂ ನಾನಾ ರೀತಿಯ ತಿರುವು ಪಡೆದುಕೊಳ್ಳುತ್ತದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿ ಮತ್ತು ಜೆಡಿಎಸ್ ಮೇಲೆ ಮುಗಿಬಿದ್ದಿವೆ. ಸ್ವತಃ ಕೇಂದ್ರದ ಗೃಹ ಸಚಿವರು ಕೂಡ ಈ ಕುರಿತಂತೆ ಮಾತನಾಡಿದ್ದಾರೆ. ಹಾಗಾಗಿ ಪ್ರಜ್ವಲ್ ರೇವಣ್ಣ ಪ್ರಕರಣ ದೇಶದಾದ್ಯಂತ ಕಾವು ಹೆಚ್ಚಿಸಿದೆ.

  • ನಟಿ ಪೂನಂಗೆ ಫೈಬ್ರೊಮ್ಯಾಲ್ಜಿಯಾ ಕಾಯಿಲೆ: ಬಟ್ಟೆ ತೊಡಲು ಕಷ್ಟ ಎಂದ ನಟಿ

    ನಟಿ ಪೂನಂಗೆ ಫೈಬ್ರೊಮ್ಯಾಲ್ಜಿಯಾ ಕಾಯಿಲೆ: ಬಟ್ಟೆ ತೊಡಲು ಕಷ್ಟ ಎಂದ ನಟಿ

    ತಾವು ಮೂರು ವರ್ಷಗಳಿಂದ ಫೈಬ್ರೊಮ್ಯಾಲ್ಜಿಯಾ (Fibromyalgia) ಕಾಯಿಲೆಯಿಂದ ಬಳಲುತ್ತಿರುವುದಾಗಿ ನಟಿ, ರಾಜಕಾರಣಿ ಪೂನಂ ಕೌರ್ (Poonam Kaur) ಹೇಳಿಕೊಂಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿರುವ ಪೂನಂ ಕೌರ್, ಈ ಕಾಯಿಲೆಯಿಂದಾಗಿ ಬಟ್ಟೆ ಹಾಕಿಕೊಳ್ಳಲು ಕಷ್ಟ ಪಡುತ್ತಿದ್ದೇನೆ ಎಂದಿದ್ದಾರೆ.

    ಈ ಕಾಯಿಲೆಗೆ ತುತ್ತಾದವರ ಬದುಕು ನರಕ. ದೀರ್ಘಕಾಲದ ಅಸ್ವಸ್ಥತೆ, ಖಿನ್ನತೆ, ತಲೆ ನೋವು, ದೇಹದ ಸ್ನಾಯುಗಳು ಬಿಗಿಯಾಗಿ ನೋವು ಹೀಗೆ ನಾನಾ ರೀತಿಯ ಸಂಕಟವನ್ನು ಅನುಭವಿಸಬೇಕಾಗುತ್ತಿದೆ. ಮೂರು ವರ್ಷಗಳಿಂದ ನಾನು ಈ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

    ಫೈಬ್ರೊಮ್ಯಾಲ್ಜಿಯಾ ಕಾರಣದಿಂದಾಗಿ ಅವರು ಎರಡು ವರ್ಷಗಳ ಕಾಲ ಸಡಿಲವಾದ ಬಟ್ಟೆಗಳನ್ನು ಧರಿಸಿದ್ದಾರಂತೆ. ನಾಟಿ ವೈದ್ಯೆ ಡಾ.ಮಂತೇನ ಅವರ ಬಳಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಅವರು ಮಾತನಾಡಿದ್ದಾರೆ.

     

    ಸಿನಿಮಾ ನಟನೆ, ರಾಜಕಾರಣ ಮತ್ತು ಸಮಾಜಮುಖಿ ಕೆಲಸಗಳ ಮೂಲಕ ಪೂನಂ ಕೌರ್ ಗುರುತಿಸಿಕೊಂಡಿದ್ದಾರೆ. ಕಾಯಿಲೆ ಕಾರಣದಿಂದಾಗಿ ಅವರು ಸಿನಿಮಾ ರಂಗದಿಂದ ಸ್ವಲ್ಪ ದಿನಗಳ ಕಾಲ ದೂರವೂ ಉಳಿದಿದ್ದರು.

  • ಪವನ್ ಕಲ್ಯಾಣ್ ವಿರುದ್ಧ ಗರಂ ಆದ ನಟಿ ಪೂನಂ ಕೌರ್

    ಪವನ್ ಕಲ್ಯಾಣ್ ವಿರುದ್ಧ ಗರಂ ಆದ ನಟಿ ಪೂನಂ ಕೌರ್

    ವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ (Ustad Bhagat Singh) ಚಿತ್ರದ ಫಸ್ಟ್ ಟೀಸರ್ (Teaser) ನಿನ್ನೆ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ. ಟೀಸರ್ ನಲ್ಲಿ ಪವನ್ ಕಲ್ಯಾಣ್ ಹೊಡೆದ ಡೈಲಾಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಬ್ಬರ್ ಸಿಂಗ್ ರೀತಿಯಲ್ಲೇ ಈ ಸಿನಿಮಾ ಕೂಡ ಹಿಟ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಗಬ್ಬರ್ ಸಿಂಗ್ ನಂತರ ನಿರ್ದೇಶಕ ಹರೀಶ್ ಶಂಕರ್ ಮತ್ತು ಪವನ್ ಕಲ್ಯಾಣ್ ಒಟ್ಟಾಗಿರುವುದರಿಂದ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

    ‘ಧರ್ಮಕ್ಕೆ ತೊಂದರೆಯಾದಾಗ, ಅಧರ್ಮ ಹೆಚ್ಚಾದ ಸಮಯದಲ್ಲಿ ನಾನು ಅವತಾರ ಎತ್ತಿ ಬರುತ್ತೇನೆ ಎನ್ನುವ ಶ್ರೀಕೃಷ್ಣನ ಮಾತನ್ನು ಅಳವಡಿಸಿ ಗ್ಲಿಂಪ್ಸ್ ಮಾಡಲಾಗಿದೆ. ನಂತರ ಪವನ್ ಕಲ್ಯಾಣ್ ಖಡಕ್ ಡೈಲಾಗ್ ಹೊಡೆಯುತ್ತಾರೆ. ಭಗತ್ ಸಿಂಗ್ ಪಾತಬಸ್ತಿ ಎನ್ನುವ ಶಬ್ದವೇ ಅಭಿಮಾನಿಗಳಿಗೆ ಕಿಕ್ ಕೊಡುತ್ತದೆ.

    ಅಭಿಮಾನಿಗಳು ಪವನ್ ಕಲ್ಯಾಣ್ ಮ್ಯಾನರಿಸಂ ಮತ್ತು ಲುಕ್ ಗೆ ಫಿದಾ ಆಗಿದ್ದರೆ, ನಟಿ ಪೂನಂ ಕೌರ್ (Poonam Kaur) ಚಿತ್ರದ ಪೋಸ್ಟರ್ ಕಂಡು ಗರಂ ಆಗಿದ್ದಾರೆ. ಈ ಸಿನಿಮಾ ಟೀಮ್ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗೆ ಅವಮಾನ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರನ ಹೆಸರಿನ ಮೇಲೆ ಪವನ್ ಕಲ್ಯಾಣ್ ಕಾಲಿಟ್ಟಿದ್ದಾರೆ ಎಂದು ನಟಿ ಕೋಪವನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:‘ಕಸ್ಟಡಿ’ ಸಿನಿಮಾ ತೆರೆಗೆ- ಕಾನ್ಸ್‌ಟೇಬಲ್ ಪಾತ್ರದಲ್ಲಿ ನಾಗ ಚೈತನ್ಯ

    ನಟನ ಕಾಲ ಕೆಳಗೆ ಮಹಾತ್ಮನ ಹೆಸರು ಹಾಕಿರುವುದು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವಂಥದ್ದು ಅಲ್ಲ ಎಂದು ಪೂನಂ ಕಾಮೆಂಟ್ ಮಾಡುತ್ತಿದ್ದಂತೆಯೇ ಪರ ವಿರೋಧದ ಕಾಮೆಂಟ್ ಗಳು ರಾಶಿ ರಾಶಿ ಬಿದ್ದಿವೆ. ಪವನ್ ಕಲ್ಯಾಣ್ ಫ್ಯಾನ್ಸ್ ಪೂನಂ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಸಿನಿಮಾವನ್ನು ಸಿನಿಮಾ ರೀತಿಯಲ್ಲೇ ನೋಡಿ ಎಂದು ತಿರುಗೇಟು ನೀಡಿದ್ದಾರೆ.