Tag: Pool Party

  • ಖನ್ನಾ ಪೂಲ್ ಪಾರ್ಟಿಯಲ್ಲಿ ಮತ್ಸ್ಯಕನ್ಯೆಯಂತೆ ಈಜಿದ್ದ ಸಂಜನಾ

    ಖನ್ನಾ ಪೂಲ್ ಪಾರ್ಟಿಯಲ್ಲಿ ಮತ್ಸ್ಯಕನ್ಯೆಯಂತೆ ಈಜಿದ್ದ ಸಂಜನಾ

    – ಕಿಕ್ಕೇರಿಸಿ ಪೂಲ್ ಪಾರ್ಟಿ, ಹೋಲಿ ಪಾರ್ಟಿ
    – ನಟಿಯರ ಮೂಲಕ ಪಾರ್ಟಿ ಆಯೋಜಿಸಿ ಹಣ ಮಾಡ್ತಿದ್ದ ಖನ್ನಾ?

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣವನ್ನು ಬೇಧಿಸುತ್ತಿರುವ ಸಿಸಿಬಿ ಪೊಲೀಸರಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಒಂದು ಕಡೆ ರಾಜಕಾರಣಿ ಹಾಗೂ ಬ್ಯುಸಿನೆಸ್ ಮೆನ್ ಮಕ್ಕಳಿದ್ರೆ, ಇನ್ನೊಂದೆಡೆ ಹತ್ತಾರು ಮಾದರಿಯ ಪಾರ್ಟಿಗಳಲ್ಲಿ ನಟಿ ಮಣಿಯರು ಕಿಕ್ಕೇರಿಸಿಕೊಂಡು ಕುಣಿದಿರುವ ವಿಡಿಯೋಗಳು ಲಭ್ಯವಾಗುತ್ತಿವೆ.

    ನಟಿ ಮಣಿಯರ ಪಾರ್ಟಿಗಳಿಗೆ ಡ್ರಗ್ಸ್ ಡೀಲರ್ ವೀರೇನ್ ಖನ್ನಾ ಸೂತ್ರದಾರ ಎಂದು ಹೇಳಲಾಗಿದ್ದು, ಪೂಲ್ ಪಾರ್ಟಿ, ಹೋಲಿ ಪಾರ್ಟಿ ಹೀಗೆ ವಿವಿಧ ಬಗೆಯ ಪಾರ್ಟಿಗಳ ಪ್ಲಾನ್ ಮಾಡಿ ಹಣ ಸಂಪಾದಿಸುತ್ತಿದ್ದ ಎನ್ನಲಾಗಿದೆ. ವೀಕೆಂಡ್ ನಲ್ಲಿ ಪೂಲ್ ಪಾರ್ಟಿ ಆಯೋಜಿಸಿ ಖನ್ನಾ ಕಿಕ್ಕೇರಿಸುತ್ತಿದ್ದ. ಪೂಲ್ ಪಾರ್ಟಿ, ಹೋಲಿ ಪಾರ್ಟಿ ಹೀಗೆ ಸಂದರ್ಭಕ್ಕೆ ತಕ್ಕ ಪಾರ್ಟಿ ಆಯೋಜಿಸಿ ಹಣ ಕೀಳುತ್ತಿದ್ದ. ಸ್ಟಾರ್ ಹೋಟೆಲ್ ಗಳ ಪೂಲ್ ಬಳಿ ಪಾರ್ಟಿ ಆಯೋಜಿಸಿ, ನಶೆಯೇರಿಸುತ್ತಿದ್ದ ಎನ್ನಲಾಗಿದೆ.

    ಪಕ್ಕಾ ಪ್ಲಾನ್ ಮಾಡಿ ಪಾರ್ಟಿ ಆಯೋಜಿಸಿ ಸಖತ್ ಹಣ ಮಾಡುತ್ತಿದ್ದ ಖನ್ನಾ, ಪಾರ್ಟಿ ಪ್ಲಾನ್ ಇವನದ್ದು, ಆಯೋಜನೆ ಎಲ್ಲಾ ಹೋಟೆಲ್ ನವರದ್ದು. ಹೀಗೆ ಪಾರ್ಟಿ ಆಯೋಜಿಸಿ ಬಂದ ಹಣದಲ್ಲಿ ಹೋಟೆಲ್‍ನವರಿಂದ ಖನ್ನಾ ಪರ್ಸೆಂಟೇಜ್ ಪಡೆಯುತ್ತಿದ್ದ. ಪ್ರತಿ ಟೇಬಲ್ ಗೆ 25,000 ಎಂಟ್ರಿ ಫೀಸ್ ಇಡುತ್ತಿದ್ದ. ಪೂಲ್ ಪಾರ್ಟಿಗೆ ನಟ, ನಟಿಯರು, ವಿಐಪಿಗಳಂಥ ಗೆಸ್ಟ್ ಗಳನ್ನು ಸಹ ಕರೆ ತರುತ್ತಿದ್ದ ಎಂದು ತಿಳಿದು ಬಂದಿದೆ.

     

    View this post on Instagram

     

    It’s my time at @tajconnemara ❤️❤️❤️

    A post shared by SANJJANAA GALRANI (@sanjjanaagalrani) on

    ಒಂದೆರಡು ಪೂಲ್ ಪಾರ್ಟಿಗಳಲ್ಲಿ ನಟಿ ಸಂಜನಾ ಸಹ ಭಾಗವಹಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಇದೀಗ ಸಂಜನಾ ಪೂಲ್ ಸ್ವಿಮ್ಮಿಂಗ್ ವಿಡಿಯೋ ಲಭ್ಯವಾಗಿದ್ದು, ಈ ವಿಡಿಯೋ ಆಧರಿಸಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಕಷ್ಟು ನಟಿಯರು ಪೂಲ್ ಪಾರ್ಟಿಯಲ್ಲಿ ಭಾಗವಹಿಸಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.