Tag: pool

  • ಸ್ನೇಹಿತನ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಹುಡುಗ

    ಸ್ನೇಹಿತನ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಹುಡುಗ

    ಚಂಡೀಗಢ: ಸ್ನೇಹಿತನ ಪ್ರಾಣ ಉಳಿಸಲು ಕೊಳಕ್ಕೆ ಹಾರಿದ 16 ವರ್ಷದ ಹುಡುಗ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕ ಸೋನು ಎಂದು ಗುರುತಿಸಲಾಗಿದ್ದು, ಸೋನು ಮತ್ತು ಇತರ ನಾಲ್ವರು ಹುಡುಗರಾದ ಯಶ್, ಅಂಕಿತ್, ವಂಶ್ ಮತ್ತು ಆತನ ಸಹೋದರ ಮಧ್ಯಾಹ್ನದ ಸ್ನಾನ ಮಾಡಲು ಸಮಸ್‍ಪುರ ಗ್ರಾಮದ ಕೊಳಕ್ಕೆ ಹೋಗಿದ್ದರು. ಇದನ್ನೂ ಓದಿ: ಧರ್ಮದ ಹೆಸರಲ್ಲಿ ಬ್ರಾಹ್ಮಣರು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ: ಬಿಜೆಪಿ ನಾಯಕ

    crime

    ನಾಲ್ವರಲ್ಲಿ ಬಬ್ಬ ಹುಡುಗ ಮುಳುಗುತ್ತಿರುವುದನ್ನು ನೋಡಿದ ಸೋನು ಆತನನ್ನು ರಕ್ಷಿಸಲು ಪ್ರಯತ್ನಿಸಿ, ತಾನೇ ನೀರಿನಲ್ಲಿ ಮುಳುಗಿದ್ದಾನೆ. ಈ ವೇಳೆ ಸೋನುವನ್ನು ರಕ್ಷಿಸಲು ಪ್ರಯತ್ನಿಸಿದ ಸ್ನೇಹಿತರು ಮತ್ತು ಇತರ ಮೂವರು ಹುಡುಗರು ರಕ್ಷಿಸಲಾಗಿದೆ, ಈಜಿಕೊಂಡು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸೋನುವನ್ನು ನೀರಿನಿಂದ ಹೊರತೆಗೆದು, ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸೋನು ದಾರಿ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಮೊಟ್ಟೆ ಕಾಳಗ: ಆ.26ಕ್ಕೆ ಮಡಿಕೇರಿಯಲ್ಲಿ ಕಾಂಗ್ರೆಸ್‌, ಬಿಜೆಪಿ ಮಧ್ಯೆ ಕೋಳಿ ಜಗಳ!

    ಮತ್ತೊಂದೆಡೆ, ನಾಲ್ವರು ಬಾಲಕರು ನೀರಿನಲ್ಲಿ ಮುಳುಗಿದ್ದಾರೆ ಎಂದು ಗ್ರಾಮಸ್ಥರು ತಪ್ಪು ಮಾಹಿತಿ ನೀಡಿದ್ದರಿಂದ ನಾಲ್ಕು ಗಂಟೆಗಳ ಕಾಲ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಚಿಸಲಾಯಿತು. ಆದರೆ ಇತರ ಹುಡುಗರು ಪ್ರಾಣಾಪಾಯದಿಂದ ಪಾರಾಗಿರುವ ವಿಚಾರ ಪೊಲೀಸರಿಗೆ ನಂತರ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ರೇಕಪ್‍ಗೆ ಹೆದರಿ ಕೋಳ ಹಾಕಿಕೊಂಡು ಓಡಾಡ್ತಿರೋ ಜೋಡಿ

    ಬ್ರೇಕಪ್‍ಗೆ ಹೆದರಿ ಕೋಳ ಹಾಕಿಕೊಂಡು ಓಡಾಡ್ತಿರೋ ಜೋಡಿ

    ರಷ್ಯಾ: ಒಬ್ಬರಿಗೊಬ್ಬರು ಕೋಳ ತೊಡಿಸಿಕೊಂಡ ಪೋಟೋಗಳ ಮೂಲಕ ಪ್ರೇಮಿಗಳಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.

    ಅಲೆಕ್ಸಾಂಡರ್ ಕುಡ್‍ಲೇ(33) ವಿಕ್ಟೋರಿಯಾ ಪುಸ್ತೋವಿಟೋವಾ(28) ಕೋಳ ತೊಡಸಿಕೊಂಡು ಸುದ್ದಿಯಾದ ಈ ಜೋಡಿ ಉಕ್ರೇನ್ ನಿವಾಸಿಗಳಾಗಿದ್ದಾರೆ. ಕಾರ್ ಸೇಲ್ಸ್‍ಮನ್, ಬ್ಯೂಟಿಷಿಯನ್ ಆಗಿ ಇಬ್ಬರು ಕೆಲಸ ಮಾಡುತ್ತಾರೆ.

    ಇಬ್ಬರು ಪ್ರೇಮಿಗಳು ಒಬ್ಬರಿಗೊಬ್ಬರು ಹೆಚ್ಚು ಪ್ರೀತಿಸುತ್ತಾರೆ. ಆದರೆ ಆಗಾಗ ಇವರ ಮಧ್ಯೆ ಜಗಳವು ಆಗುತ್ತಿತ್ತು. ಬ್ರೇಕಪ್ ಮಾಡಿಕೊಳ್ಳೋಣ ಎನ್ನುವ ಮಾತುಗಳು ಇಬ್ಬರ ನಡುವೆ ಬರುತ್ತಿದ್ದವಂತೆ. ಆಗ ಇಬ್ಬರು ಸೇರಿ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

    ಒಬ್ಬರಿಗೊಬ್ಬರು ಮೂರು ತಿಂಗಳ ಕಾಲ ಕೋಳ ಧರಿಸಿಕೊಂಡು ಜೊತೆಯಲ್ಲೇ 24/7 ಕಾಲ ಕಳೆಯೋಣ ಎಂದು ಇಬ್ಬರು ಮಾತನಾಡಿಕೊಂಡು ಈ ಒಂದು ಪರೀಕ್ಷೆಗೆ ಮುಂದಾಗಿದ್ದಾರೆ. ಜೋಡಿಯ ನೂತನ ಕ್ಸ್ ಪರಿಮೆಂಟ್ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದರು. ಈ ವಿಚಾರ ಸೊಶೀಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.

    ಮೊದಲು ಇಬ್ಬರು ತುಂಬಾ ಜಗಳ ಮಾಡಿಕೊಳ್ಳುತ್ತಿದ್ದೆವು. ಹೀಗಾಗಿ ಈ ಒಂದು ಯೋಚನೆ ಬಂತು. ನಾನು ಮೊದಲು ಇದಕ್ಕೆ ಒಪ್ಪಲಿಲ್ಲ. ಕೋಳ ಧರಿಸಿಕೊಂಡ ನಂತರ ಇಬ್ಬರು ಜೊತೆಯಾಗಿ ಓಡಾಡಿ ಹೊಂದಿಕೊಂಡಿದ್ದೇವೆ. ಸದಾ ಜೊತೆಯಲ್ಲಿಯೇ ಇರುವುದರಿಂದ ಅರ್ಥ ಮಾಡಿಕೊಳ್ಳಲು ಸಮಯ ಸಿಕ್ಕಂತಾಯಿತ್ತು. ಇಬ್ಬರು ಅನ್ಯೋನ್ಯವಾಗಿದ್ದೇವೆ ಎಂದು ಈ ಜೋಡಿ ಹೇಳಿಕೊಂಡಿದೆ.

  • ಮೊಬೈಲ್ ಆನ್ ಮಾಡಿ ಕೊಳಕ್ಕೆ ಜಿಗಿದ್ರು-ನೀರಲ್ಲಿ ಬಿದ್ದ ಮೂವರು ಹೊರಗೆ ಬರಲೇ ಇಲ್ಲ-ವಿಡಿಯೋ ನೋಡಿ

    ಮೊಬೈಲ್ ಆನ್ ಮಾಡಿ ಕೊಳಕ್ಕೆ ಜಿಗಿದ್ರು-ನೀರಲ್ಲಿ ಬಿದ್ದ ಮೂವರು ಹೊರಗೆ ಬರಲೇ ಇಲ್ಲ-ವಿಡಿಯೋ ನೋಡಿ

    ಜೈಪುರ: ಮೂವರು ಸ್ನೇಹಿತರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ರಾಜಸಮಂಡ್ ಜಿಲ್ಲೆಯ ದೇವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಚೇತನ್ ಖತೀಕ್ (24), ಸುದರ್ಶನ್ ಖತೀಕ್ (22) ಮತ್ತು ರಾಧೆಶ್ಯಾಮ್ ಸಾವನ್ನಪ್ಪಿದವರು ಒಳ್ಳೆಯ ಸ್ನೇಹಿತರು ಮತ್ತು ಸಂಬಂಧಿಗಳಾಗಿದ್ದರು. ಸಂಬಂಧಿಗಳಿಗಿಂತ ಒಳ್ಳೆಯ ಸ್ನೇಹಿತರಾಗಿದ್ದ ಮೂವರು ಏಕಕಾಲದಲ್ಲಿ ಸಾವನ್ನಪ್ಪಿದ್ದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

    ಆಗಿದ್ದೇನು?
    ಮೂವರು ಕೊಳ ಸ್ನಾನಕ್ಕೆ ತೆರಳಿದ್ದಾರೆ. ಮೂವರಲ್ಲಿ ಚೇತನ್ ತನ್ನ ಮೊಬೈಲ್ ವಿಡಿಯೋ ಆನ್ ಮಾಡಿ ಕೊಳಕ್ಕೆ ಜಿಗಿದಿದ್ದಾರೆ. ಕೊಳದಲ್ಲಿ ಜಿಗಿದ ಚೇತನ್ ಈಜಲು ಸಾಧ್ಯವಾಗದೇ ಮುಳಗಲು ಆರಂಭಿಸುತ್ತಿದ್ದಂತೆ, ಇನ್ನಿಬ್ಬರು (ರಾಧೆಶ್ಯಾಮ್ ಮತ್ತು ಸುದರ್ಶನ್) ಚೇತನ್ ನನ್ನು ಕಾಪಾಡಲು ಮುಂದಾಗಿದ್ದಾರೆ. ಒಟ್ಟಾಗಿ ಮೂವರು ಕೊಳದಲ್ಲಿ ಜಿಗಿದಿದ್ದರಿಂದ ಒಬ್ಬರನೊಬ್ಬರನ್ನು ರಕ್ಷಿಸಲು ಹೋಗಿ ಎಲ್ಲರೂ ಮುಳುಗಿ ಸಾವನ್ನಪ್ಪಿದ್ದಾರೆ. ಈ ಎಲ್ಲ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ.

    ಸಾವನ್ನಪ್ಪಿದ ಮೂವರು ಸಂಬಂಧಿಗಳಾಗಿದ್ದು, ಮೂರು ನಿಮಿಷದ ಅವಧಿಯಲ್ಲಿ ಎಲ್ಲರೂ ನೀರಿನಲ್ಲಿ ಮುಳುಗಿರುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿವೆ. ರಾಧೆಶ್ಯಾಮ್ ಮತ್ತು ಸುದರ್ಶನ್ ಇಬ್ಬರೂ ಕೊಳದಲ್ಲಿ ದಡದಲ್ಲಿದ್ರು. ಮುಳುಗುತ್ತಿದ್ದ ಚೇತನ್ ನನ್ನು ರಕ್ಷಿಸಲು ಹೋಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಜೇಂದ್ರ ಗೋಡಾರ ತಿಳಿಸಿದ್ದಾರೆ.

    ಮೃತ ದೇಹಗಳನ್ನು ಕೊಳದಿಂದ ಹೊರತೆಗೆದು ಮರಣೋತ್ತರ ಶವಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

    https://www.youtube.com/watch?v=nCj6LUKUC4Q