Tag: pooja

  • ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು

    ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರು

    ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಮಟ್ಟಿನ ಏರುಪೇರು ಕಂಡುಬಂದಿದ್ದು, ಆರೋಗ್ಯ ತಪಾಸಣೆಗಾಗಿ ಇಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿದೆ. ಬುಧವಾರ ಸಂಜೆ ವೇಳೆಗೆ ಶ್ರೀಗಳಿಗೆ ಜ್ವರ ಹಾಗೂ ಕಫ ಕಾಣಿಸಿಕೊಂಡಿತ್ತು.

    ತಕ್ಷಣ ಸಿದ್ದಗಂಗಾ ಡಾಯಾಗ್ನಾಸ್ಟಿಕ್ ನಲ್ಲಿ ರಕ್ತ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಡಿಸಲಾಯಿತು. ರಕ್ತ ಪರೀಕ್ಷೆ ವರದಿ ಕೂಡಾ ನಾರ್ಮಲ್ ಆಗಿ ಬಂದಿದ್ದು, ಭಕ್ತಾಧಿಗಳು ಆತಂಕ ಪಡುವ ಅವಶ್ಯವಿಲ್ಲ ಎಂದು ಶ್ರೀಗಳ ತಪಾಸಣೆ ನಡೆಸಿದ ಸ್ಥಳೀಯ ವೈದ್ಯ ಡಾ.ಪರಮೇಶ್ ತಿಳಿಸಿದ್ದಾರೆ.

    ಎಂದಿನಂತೆ ಇಂದು ಬೆಳಗ್ಗೆ ಶ್ರೀಗಳು ಇಷ್ಠಲಿಂಗ ಪೂಜೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಕೆಲವೊಂದು ಪರೀಕ್ಷೆಗಳನ್ನು ನಡೆಸಲು ಇಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿದೆ.

  • ಶ್ರಾವಣ ಮಾಸದ ಕೊನೆಯ ವಾರ: ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಹರಿದು ಬಂದ ಜನ ಸಾಗರ

    ಶ್ರಾವಣ ಮಾಸದ ಕೊನೆಯ ವಾರ: ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಹರಿದು ಬಂದ ಜನ ಸಾಗರ

    ಕೋಲಾರ: ಹಿಂದೂ ಪಂಚಾಂಗದಲ್ಲಿ ಶ್ರಾವಣ ಮಾಸ ಶ್ರೇಷ್ಠ ಮಾಸಗಳಲ್ಲಿ ಒಂದಾಗಿದೆ. ಹಾಗಾಗಿ ಶ್ರಾವಣ ಮಾಸದ ಕೊನೆಯ ವಾರ ಶನಿವಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಜನರು ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬಂಗಾರ ತಿರುಪತಿ ವೆಂಕಟರಮಣ ಸ್ವಾಮಿ, ಮಾಲೂರು ತಾಲೂಲಿನ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಜನ ಸಾಗರವೇ ಹರಿದು ಬರುತ್ತಿದೆ.

    ಶ್ರಾವಣ ಮಾಸ ದೇವಾನು ದೇವತೆಗಳಿಗೆ ಶುಭ ಸಂದರ್ಭವಾಗಿದ್ದು, ಈ ಸಂದರ್ಭದಲ್ಲಿ 17 ನಕ್ಷತ್ರಗಳು ಒಂದೇ ರೇಖೆಯಲ್ಲಿ ಬಂದು ಮಂಗಳವಾಗುತ್ತದೆ ಎಂಬ ನಂಬಿಕೆ ಇದೆ. ವಿವಿಧ ಹಬ್ಬಗಳು ಈ ಸಂದರ್ಭದಲ್ಲಿ ಬಂದು ಎಲ್ಲಾ ಒಳಿತಾಗುತ್ತೆ ಅನ್ನೋ ನಂಬಿಕೆ ನಡೆದು ಬಂದಿದೆ. ಹಾಗಾಗಿ ಸಾವಿರಾರು ಜನರು ಕೊನೆಯ ಶನಿವಾರದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

     

     

  • ತುಮಕೂರು: ಮಳೆಗಾಗಿ ದೇವರ ಮೊರೆ ಹೋದ ಪೊಲೀಸರು

    ತುಮಕೂರು: ಮಳೆಗಾಗಿ ದೇವರ ಮೊರೆ ಹೋದ ಪೊಲೀಸರು

    ತುಮಕೂರು: ಮಳೆಗಾಗಿ ಪೊಲೀಸರೇ ದೇವರ ಮೊರೆ ಹೋಗಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪೊಲೀಸರು ಮಳೆಗಾಗಿ ಶನಿ ಮಹಾತ್ಮಾ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಒಂದು ತಿಂಗಳ ಹಿಂದೆ ಪಾವಗಡ ಪಟ್ಟಣ, ತಿರುಮಣಿ, ವೈಎನ್ ಹೊಸಕೋಟೆ ಹಾಗೂ ಅರಸಿಕೆರೆ ಸೇರಿದಂತೆ ನಾಲ್ಕೂ ಠಾಣೆಯ ಪೊಲೀಸರು ಪಟ್ಟಣದ ಶನಿಮಹಾತ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಸಿಪಿಐ ಆನಂದ್ ಮತ್ತು ಶ್ರೀ ಶೈಲ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರು ಪೂಜೆಯಲ್ಲಿ ಭಾಗಿಯಾಗಿದ್ರು.

    ಪಾವಗಡ ತಾಲೂಕಿನಲ್ಲಿ ಮಳೆಯಿಲ್ಲದೆ ನೀರಿನ ಸಮಸ್ಯೆ ತಲೆದೋರಿತ್ತು. ನೀರಿಲ್ಲದೆ ಬೆಳೆಗಳು ಒಣಗಿಹೋಗಿತ್ತು. ಅಲ್ಲದೆ ಬಿಸಿಲ ತಾಪದಿಂದ ಜನರು ತತ್ತರಿಸಿ ಹೋಗಿದ್ರು. ಈ ಹಿನ್ನೆಲೆಯಲ್ಲಿ ಪೊಲೀಸರು ವೈಯಕ್ತಿಕವಾಗಿ ವಂತಿಗೆ ಸಂಗ್ರಹಿಸಿ ವರುಣನ ಕೃಪೆಗಾಗಿ ದೇವರ ಮೊರೆಹೋಗಿದ್ದಾರೆ.

  • ವರುಣನಿಗಾಗಿ ತಲಕಾವೇರಿಯಲ್ಲಿ ಪರ್ಜನ್ಯ ಜಪ – ತ್ರಿವೇಣಿ ಸಂಗಮದಲ್ಲಿ ಸಚಿವರಿಂದ ಬಾಗಿನ

    ವರುಣನಿಗಾಗಿ ತಲಕಾವೇರಿಯಲ್ಲಿ ಪರ್ಜನ್ಯ ಜಪ – ತ್ರಿವೇಣಿ ಸಂಗಮದಲ್ಲಿ ಸಚಿವರಿಂದ ಬಾಗಿನ

    ಮಡಿಕೇರಿ: ಮಳೆಗಾಗಿ ಪ್ರಾರ್ಥಿಸಿ ಜೀವ ನದಿ ತಲಕಾವೇರಿ ಸನ್ನಿಧಿಯಲ್ಲಿ ಪರ್ಜನ್ಯ ಜಪ ಆರಂಭವಾಗಿದೆ.

    ವರುಣನ ಕೃಪೆಗಾಗಿ ಕಾವೇರಿ ಉಗಮಸ್ಥಾನ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ಪರ್ಜನ್ಯ ಜಪ ಆಯೋಜನೆ ಮಾಡಿದ್ದ ಸಚಿವ ಎಂ.ಬಿ ಪಾಟೀಲ್ ವಿವಾದದಿಂದ ದೂರ ಉಳಿಯಲು ಎಂಜಿನಿಯರ್‍ಗಳ ಮೂಲಕ ಪರ್ಜನ್ಯ ಜಪ ಮಾಡಿಸಿದ್ರು.

    ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಸವರಾಜ್, ಪತ್ನಿ ಜಯಶ್ರೀ ಜೊತೆಗೆ ಪರ್ಜನ್ಯ ಜಪ ನಡೆಸಿದರು. ಅರ್ಚಕರಾದ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಮುಂಜಾನೆ 9 ಗಂಟೆಯಿಂದ 11 ಗಂಟೆಯ ವರೆಗೆ ಪೂಜಾ ವಿಧಿ ವಿಧಾನಗಳು ನಡೆದವು.

    ಸರ್ಕಾರದಿಂದ ಮಳೆಗಾಗಿ ಪೂಜೆ ಮಾಡುವುದಕ್ಕೆ ವಿರೋಧ ವ್ಯಕ್ತವಾದ್ದರಿಂದ ವೈಯಕ್ತಿಕವಾಗಿ ಪೂಜೆ ಮಾಡೋದಾಗಿ ಹೇಳಿದ್ದ ನೀರಾವರಿ ಸಚಿವ ಎಂ.ಬಿ.ಪಾಟಿಲ್ ತಲಕಾವೇರಿ-ಭಾಗಮಂಡಲ ಕ್ಷೇತ್ರಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಿಸಿದ್ರು. ಸಚಿವರಿಗೆ ಕಲಾ ತಂಡಗಳ ಅದ್ದೂರಿ ಸ್ವಾಗತ ಸಿಕ್ತು.

     

  • ಭೀಕರ ಬರ: ಮಳೆಗಾಗಿ ಪ್ರಾರ್ಥಿಸಿ ಮಂಡ್ಯದಲ್ಲಿ ಪರ್ಜನ್ಯ ಪೂಜೆ

    ಭೀಕರ ಬರ: ಮಳೆಗಾಗಿ ಪ್ರಾರ್ಥಿಸಿ ಮಂಡ್ಯದಲ್ಲಿ ಪರ್ಜನ್ಯ ಪೂಜೆ

    ಮಂಡ್ಯ: ಸಮರ್ಪಕವಾಗಿ ಮಳೆಯಾಗದೇ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಇಂದು ಬ್ರಾಹ್ಮಣ ಸಭಾದಿಂದ ಪರ್ಜನ್ಯ ಪೂಜೆ ಮಾಡಲಾಯಿತು.

    ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾನ ಘೋಸಾಯಿ ಘಾಟ್ ನ ಕಾವೇರಿ ನದಿ ತೀರದಲ್ಲಿ ಪರ್ಜನ್ಯ ಪೂಜೆ ನಡೆಯಿತು. ವೇದ ಬ್ರಹ್ಮ ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಐವತ್ತಕ್ಕೂ ಹೆಚ್ಚು ಬ್ರಾಹ್ಮಣರಿಂದ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

    ಮೊದಲು ನದಿ ದಡದಲ್ಲಿ ಪೂಜೆ ಸಲ್ಲಿಸಿ ಬಳಿಕ ಕಾವೇರಿ ನದಿಗೆ ಇಳಿದು ಮಂತ್ರ ಪಠಿಸಿದ್ರು. ಈ ವರ್ಷವಾದ್ರೂ ಉತ್ತಮ ಮಳೆಯಾಗಿ ನಾಡಿನ ಜನರ ರಕ್ಷಣೆ ಆಗಲಿ ಅಂತಾ ಪ್ರಾರ್ಥಿಸಿಕೊಳ್ಳಲಾಯ್ತು.