Tag: Pooja Hegde

  • ರಜನಿಕಾಂತ್‌ ಸಿನಿಮಾದಲ್ಲಿ ಪೂಜಾ ಹೆಗ್ಡೆ- ‌’ಕೂಲಿ’ ಚಿತ್ರದ ಪೋಸ್ಟರ್‌ ಔಟ್

    ರಜನಿಕಾಂತ್‌ ಸಿನಿಮಾದಲ್ಲಿ ಪೂಜಾ ಹೆಗ್ಡೆ- ‌’ಕೂಲಿ’ ಚಿತ್ರದ ಪೋಸ್ಟರ್‌ ಔಟ್

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಅವರು ‘ಕೂಲಿ’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಪೂಜಾ ಹೆಗ್ಡೆಗೆ ಸಕ್ಸಸ್ ಸಿಗದೇ ಇದ್ದರೂ ಸಿನಿಮಾ ಅವಕಾಶಗಳ ಕೊರತೆಯಿಲ್ಲ. ಯಶಸ್ಸಿಗಾಗಿ ಎದುರು ನೋಡುತ್ತಿರುವ ಪೂಜಾ ಹೆಗ್ಡೆ ಇದೀಗ ರಜನಿಕಾಂತ್‌ ನಟನೆಯ ಚಿತ್ರಕ್ಕೆ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸುದ್ದಿಯನ್ನು ಸ್ವತಃ ‘ಕೂಲಿ’ (Coolie) ಚಿತ್ರತಂಡವೇ ತಿಳಿಸಿದೆ.

     

    View this post on Instagram

     

    A post shared by Sun Pictures (@sunpictures)

    ಲೋಕೇಶ್ ಕನಕರಾಜ್ ‘ಕೂಲಿ’ ಚಿತ್ರದಲ್ಲಿ ತಲೈವಾ ಜೊತೆ ಪೂಜಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಈ ಚಿತ್ರದಲ್ಲಿ ಸೊಂಟ ಬಳುಕಿಸಲು ನಟಿ ದುಬಾರಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

    ಇನ್ನೂ ಕೆರಿಯರ್ ಬ್ರೇಕ್‌ಗಾಗಿ ನಟಿ ಹೊಸ ಹೆಜ್ಜೆ ಇಟ್ಟಿದ್ದು, ಐಟಂ ಸಾಂಗ್ ಮೂಲಕ ಸಕ್ಸಸ್ ಸಿಗುತ್ತಾ? ಎಂದು ಕಾಯಬೇಕಿದೆ.

  • ಮಾತಿನ ಭರದಲ್ಲಿ ಪೂಜಾ ಹೆಗ್ಡೆ ಯಡವಟ್ಟು- ಹಿಗ್ಗಾಮುಗ್ಗಾ ಟ್ರೋಲ್ ಆದ ನಟಿ

    ಮಾತಿನ ಭರದಲ್ಲಿ ಪೂಜಾ ಹೆಗ್ಡೆ ಯಡವಟ್ಟು- ಹಿಗ್ಗಾಮುಗ್ಗಾ ಟ್ರೋಲ್ ಆದ ನಟಿ

    ಕುಡ್ಲದ ಬೆಡಗಿ ಪೂಜಾ ಹೆಗ್ಡೆ (Pooja Hegde) ನಟಿಸಿದ ಸಿನಿಮಾಗಳೆಲ್ಲಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಹೀನಾಯ ಸೋಲನ್ನೇ ಕಂಡಿರುವ ಪೂಜಾ ಈಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮಾತಿನ ಭರದಲ್ಲಿ ನಟಿ ಯಡವಟ್ಟು ಮಾಡಿಕೊಂಡು ಸಖತ್ ಟ್ರೋಲ್ ಆಗ್ತಿದ್ದಾರೆ. ಇದನ್ನೂ ಓದಿ:ಹೆಚ್ಚಾಯ್ತು ಬೇಡಿಕೆ- ಸಿನಿಮಾ ಆಫರ್‌ಗೆ ಡೋಂಟ್ ಕೇರ್ ಎಂದ Bigg Boss ವಿನ್ನರ್ ಹನುಮಂತ

    ಶಾಹಿದ್ ಕಪೂರ್ ಜೊತೆಗಿನ ‘ದೇವ’ (Deva) ಸಿನಿಮಾದ ಪ್ರಚಾರ ಕಾರ್ಯದ ವೇಳೆ, ಮಾಧ್ಯಮಗಳ ಜೊತೆ ಮಾತನಾಡುವಾಗ ಪೂಜಾ ಹೆಗ್ಡೆ ತೆಲುಗಿನ ‘ಅಲಾ ವೈಕುಂಠಪುರಮುಲೋ’ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. ಆಗ ಒಂದು ಎಡವಟ್ಟು ಆಗಿದೆ. ‘ಅಲಾ ವೈಕುಂಠಪುರಮುಲೋ’ ಒಂದು ತಮಿಳು ಸಿನಿಮಾ. ಅದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಆದರೂ ಅದನ್ನು ಹಿಂದಿ ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಿದ್ದಾರೆ. ‘ಡಿಜೆ’ ಸಿನಿಮಾವನ್ನು ಕೂಡ ನೋಡಿದ್ದಾರೆ. ಕೆಲಸ ಚೆನ್ನಾಗಿದ್ರೆ, ಅದು ಎಲ್ಲ ಕಡೆಗೆ ರೀಚ್ ಆಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ಪೂಜಾ ಹೇಳಿದ್ದಾರೆ.

    ಹೀಗೆ ಪ್ರಶ್ನೆಯೊಂದಕ್ಕೆ ತೆಲುಗಿನ ‘ಅಲಾ ವೈಕುಂಠಪುರಮುಲೋ’ ಸಿನಿಮಾವನ್ನು ಉದಾಹರಣೆಗೆ ತೆಗೆದುಕೊಂಡ ಪೂಜಾ, ಅದನ್ನು ತಮಿಳು ಸಿನಿಮಾ ಅಂತ ಹೇಳಿದ್ದು, ಪ್ರೇಕ್ಷಕರ ಕೋಪಕ್ಕೆ ಕಾರಣವಾಗಿದೆ. ತಾವೇ ನಟಿಸಿದ ತೆಲುಗಿನ ಸಿನಿಮಾವನ್ನು ತಮಿಳು ಚಿತ್ರ ಎನ್ನುತ್ತೀರಿ. ನೀವು ನಟಿಸಿದ ಸಿನಿಮಾ ಯಾವ ಭಾಷೆಯದ್ದು, ಎಂಬುದು ಕೂಡ ನಿಮಗೆ ಗೊತ್ತಿಲ್ವಾ? ಎಂದೆಲ್ಲಾ ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟೀಕಿಸಿದ್ದಾರೆ.

  • ಪೂಜಾ ಹೆಗ್ಡೆಗೆ ಠಕ್ಕರ್-‌ ನಾಗಚೈತನ್ಯಗೆ ಶ್ರೀಲೀಲಾ ಜೋಡಿ?

    ಪೂಜಾ ಹೆಗ್ಡೆಗೆ ಠಕ್ಕರ್-‌ ನಾಗಚೈತನ್ಯಗೆ ಶ್ರೀಲೀಲಾ ಜೋಡಿ?

    ನ್ನಡತಿ ಶ್ರೀಲೀಲಾ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಕರಾವಳಿ ನಟಿ ಪೂಜಾ ಹೆಗ್ಡೆಗೆ (Pooja Hegde) ಠಕ್ಕರ್ ಕೊಟ್ಟು ಶ್ರೀಲೀಲಾ ಬಿಗ್ ಆಫರ್‌ವೊಂದನ್ನು ಬಾಚಿಕೊಂಡಿದ್ದಾರೆ. ಸಮಂತಾ ಮಾಜಿ ಪತಿ ನಾಗಚೈತನ್ಯ ಸಿನಿಮಾಗೆ ನಾಯಕಿಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಪಿಎಂ ಮೋದಿರನ್ನು ಭೇಟಿಯಾದ ಕರೀನಾ ಕಪೂರ್ ಕುಟುಂಬ

    ಟಾಲಿವುಡ್‌ನಲ್ಲಿ ನಟನೆ, ಡ್ಯಾನ್ಸ್, ಬ್ಯೂಟಿ ಮೂಲಕ ಎಲ್ಲರ ಮನಗೆದ್ದಿರುವ ಸುಂದರಿ ಶ್ರೀಲೀಲಾ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ. ನಾಗಚೈತನ್ಯ (Naga Chaitanya) ನಟನೆಯ 24ನೇ ಸಿನಿಮಾಗೆ ಪೂಜಾ ಹೆಗ್ಡೆರನ್ನು ಆಯ್ಕೆ ಮಾಡಿದೆ ಎಂಬ ಸುದ್ದಿ ಇತ್ತು. ಈಗ ಪೂಜಾರನ್ನು ನಾಯಕಿ ಪಾತ್ರಕ್ಕೆ ಕೈಬಿಡಲಾಗಿದ್ದು, ಶ್ರೀಲೀಲಾರನ್ನು ತಂಡ ಫೈನಲ್ ಮಾಡಿದೆ ಎನ್ನಲಾಗಿದೆ. ಚಿತ್ರತಂಡದಿಂದ ಈ ಕುರಿತು ಅಧಿಕೃತ ಮಾಹಿತಿ ಸಿಗುವವರೆಗೂ ಕಾದುನೋಡಬೇಕಿದೆ.

    ಇನ್ನೂ ‘ಪುಷ್ಪ 2’ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಜೊತೆ ಶ್ರೀಲೀಲಾ ಡ್ಯಾನ್ಸ್ ಮಾಡುವ ಮೂಲಕ ಹೈಪ್ ಕ್ರಿಯೆಟ್ ಆಗಿದೆ. ಜೊತೆಗೆ ನಿತಿನ್ ಜೊತೆಗಿನ ‘ರಾಬಿನ್‌ಹುಡ್’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ.

  • ಶ್ರೀಲೀಲಾ ನಟಿಸಬೇಕಿದ್ದ ಪಾತ್ರಕ್ಕೆ ಪೂಜಾ ಹೆಗ್ಡೆ ಎಂಟ್ರಿ?

    ಶ್ರೀಲೀಲಾ ನಟಿಸಬೇಕಿದ್ದ ಪಾತ್ರಕ್ಕೆ ಪೂಜಾ ಹೆಗ್ಡೆ ಎಂಟ್ರಿ?

    ನ್ನಡದ ಬ್ಯೂಟಿ ಶ್ರೀಲೀಲಾಗೆ (Sreeleela) ಪರಭಾಷೆಯಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ನಟಿಸಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗದೆ ಇದ್ರೂ ಅವಕಾಶಗಳಿಗೆ ಕೊರತೆಯೇನು ಇಲ್ಲ. ಆದರೆ ಇದೀಗ ನಟಿ ಬಂಪರ್ ಅವಕಾಶವೊಂದನ್ನು ಕಳೆದುಕೊಂಡಿದ್ದಾರೆ. ಶ್ರೀಲೀಲಾ ನಟಿಸಬೇಕಿದ್ದ ಪಾತ್ರಕ್ಕೆ ಕರಾವಳಿ ಬೆಡಗಿ ಪೂಜಾ ಹೆಗ್ಗೆ (Pooja Hegde) ಎಂಟ್ರಿ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬಾಲಿವುಡ್ ನಟ ವರುಣ್ ಧವನ್ (Varun Dhawan) ಚಿತ್ರದಲ್ಲಿ ಮೃಣಾಲ್ ಠಾಕೂರ್ ಮತ್ತು ಶ್ರೀಲೀಲಾ ಆಯ್ಕೆಯಾಗಿದ್ದರು. ಎರಡು ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಇತ್ತು. ಆದರೆ ಶ್ರೀಲೀಲಾ ಆಯ್ಕೆಯಾಗಿದ್ದ ಪಾತ್ರಕ್ಕೆ ಈಗ ಪೂಜಾರನ್ನು ಫೈನಲ್ ಮಾಡಲಾಗಿದೆ. ಶ್ರೀಲೀಲಾರನ್ನು ಆ ಪಾತ್ರದಿಂದ ಹೊರಗಿಡಲಾಗಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಚಿತ್ರತಂಡ ಅನೌನ್ಸ್ ಮಾಡುವವರೆಗೂ ಕಾದುನೋಡಬೇಕಿದೆ.

    ಇನ್ನೂ ಈ ಹಿಂದೆ ಮಹೇಶ್ ಬಾಬು (Mahesh Babu) ನಟನೆಯ ‘ಗುಂಟೂರು ಖಾರಂ’ ಚಿತ್ರಕ್ಕೆ ಮೊದಲು ಪೂಜಾ ಹೆಗ್ಡೆ ಆಯ್ಕೆಯಾಗಿದ್ದರು. ಆ ನಂತರ ಪೂಜಾ ಬದಲು ಶ್ರೀಲೀಲಾಗೆ ಚಿತ್ರತಂಡ ಮಣೆ ಹಾಕಿತ್ತು. ಆ ಚಿತ್ರ ರಿಲೀಸ್ ಆಗಿ ಶ್ರೀಲೀಲಾ ನಟನೆ ಮತ್ತು ಡ್ಯಾನ್ಸ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದನ್ನೂ ಓದಿ:ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?

    ಇನ್ನೂ ರಾಬಿನ್‌ಹುಡ್, ಉಸ್ತಾದ್ ಭಗತ್ ಸಿಂಗ್ ಸೇರಿದಂತೆ ಹಲವು ಚಿತ್ರಗಳು ಶ್ರೀಲೀಲಾ ಕೈಯಲ್ಲಿವೆ. ಈ ಎರಡು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.

  • ಸರಳವಾಗಿ ಜರುಗಿತು ವಿಜಯ್ ದಳಪತಿ, ಪೂಜಾ ಹೆಗ್ಡೆ ನಟನೆಯ ಸಿನಿಮಾ ಮುಹೂರ್ತ

    ಸರಳವಾಗಿ ಜರುಗಿತು ವಿಜಯ್ ದಳಪತಿ, ಪೂಜಾ ಹೆಗ್ಡೆ ನಟನೆಯ ಸಿನಿಮಾ ಮುಹೂರ್ತ

    ನ್ನಡದ ಕೆವಿಎನ್ ಪ್ರೋಡಕ್ಷನ್ಸ್ ನಿರ್ಮಾಣದ ‘ದಳಪತಿ 69’ (Thalapathy 69) ಚಿತ್ರದ ಮುಹೂರ್ತ ಕಾರ್ಯಕ್ರಮ ಇಂದು (ಅ.4) ಅದ್ಧೂರಿಯಾಗಿ ನಡೆಯಿತು. ಮುಹೂರ್ತ ಕಾರ್ಯಕ್ರಮದ ಫೋಟೋಗಳನ್ನು ನಿರ್ಮಾಣ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದನ್ನೂ ಓದಿ:ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ನಟ ಗೋವಿಂದ ಡಿಸ್ಚಾರ್ಜ್

    ವಿಜಯ್ ದಳಪತಿ ಮತ್ತು ಪೂಜಾ ಹೆಗ್ಡೆ (Pooja Hegde) ನಟನೆಯ ಹೊಸ ಸಿನಿಮಾಗೆ ಇಂದು ಚಾಲನೆ ನೀಡಲಾಗಿದೆ. ‘ದಳಪತಿ 69’ ಚಿತ್ರದಲ್ಲಿ ವಿಜಯ್ ಜೊತೆ ಯಾರೆಲ್ಲಾ ನಟನೆ ಮಾಡ್ತಾರೆ ಎಂದು ಚಿತ್ರತಂಡ ರಿವೀಲ್ ಮಾಡಿದ ಬೆನ್ನಲ್ಲೇ ಈಗ ಸಿನಿಮಾ ಮುಹೂರ್ತ ಚೆನ್ನೈನಲ್ಲಿ ನೆರವೇರಿದೆ.

    ಈ ಕಾರ್ಯಕ್ರಮದಲ್ಲಿ ಕೆವಿಎನ್ ಸಂಸ್ಥೆಯ ನಿರ್ಮಾಪಕರು, ವಿಜಯ್ ದಳಪತಿ, ಪೂಜಾ ಹೆಗ್ಡೆ, ಅನಿಮಲ್ ನಟ ಬಾಬಿ ಡಿಯೋಲ್ ಸೇರಿದಂತೆ ಅನೇಕರು ಭಾಗಿದ್ದರು.

    ಇನ್ನೂ ಈ ಚಿತ್ರವು ವಿಜಯ್ ನಟಿಸಲಿರುವ ಕೊನೆಯ ಸಿನಿಮಾ ಆಗಿದ್ದು, ರಾಜಕೀಯ ಕುರಿತು ಸಿನಿಮಾ ಮೂಡಿ ಬರಲಿದೆ ಎನ್ನಲಾಗಿದೆ.

  • Thalapathy 69: ವಿಜಯ್ ಕೊನೆಯ ಚಿತ್ರಕ್ಕೆ ಪೂಜಾ ಹೆಗ್ಡೆ ಹೀರೋಯಿನ್

    Thalapathy 69: ವಿಜಯ್ ಕೊನೆಯ ಚಿತ್ರಕ್ಕೆ ಪೂಜಾ ಹೆಗ್ಡೆ ಹೀರೋಯಿನ್

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸಕ್ಸಸ್ ಸಿಗದೆ ಇದ್ದರೂ ಅವಕಾಶಗಳ ಕೊರತೆಯಿಲ್ಲ. ಕಾಲಿವುಡ್‌ನಲ್ಲಿ ಮತ್ತೊಂದು ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಮತ್ತೊಮ್ಮೆ ಸ್ಟಾರ್ ನಟ ವಿಜಯ್ ದಳಪತಿಗೆ (Vijay Thalapathy) ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಈ ಗುಡ್ ನ್ಯೂಸ್ ಅನ್ನು ಕೆವಿಎನ್ ನಿರ್ಮಾಣ ಸಂಸ್ಥೆ ಅಫಿಷಿಯಲ್ ಆಗಿ ತಿಳಿಸಿದೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ‘ಮಧ್ಯಂತರ’ ಕಿರುಚಿತ್ರಕ್ಕೆ ಜಯಮಾಲಾ ಮೆಚ್ಚುಗೆ

    ವಿಜಯ್ ನಟನೆಯ ಕೊನೆಯ ಸಿನಿಮಾ ‘ದಳಪತಿ 69ನೇ’ (Thalapathy 69) ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮತ್ತೊಮ್ಮೆ ವಿಜಯ್ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶವನ್ನು ಪೂಜಾ ಹೆಗ್ಡೆ ಗಿಟ್ಟಿಸಿಕೊಂಡಿದ್ದಾರೆ.

     

    View this post on Instagram

     

    A post shared by KVN Productions (@kvn.productions)

    ಈ ಹಿಂದೆ ಕೂಡ 2022ರಲ್ಲಿ ತೆರೆಕಂಡ ‘ಬೀಸ್ಟ್’ ಚಿತ್ರದಲ್ಲಿ ವಿಜಯ್‌ಗೆ ಪೂಜಾ ನಾಯಕಿಯಾಗಿ ನಟಿಸಿದ್ದರು. ಆದರೆ ಈ ಚಿತ್ರ ಚಿತ್ರಮಂದಿರದಲ್ಲಿ ಮಕಾಡೆ ಮಲಗಿತ್ತು. ಈಗ ಮತ್ತೆ ವಿಜಯ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದೆ. ಇನ್ನೂ ಬಾಬಿ ಡಿಯೋಲ್ (Bobby Deol) ಕೂಡ ನಟಿಸುವ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ ಚಿತ್ರತಂಡ.

    ಅಂದಹಾಗೆ, ಶಾಹಿದ್ ಕಪೂರ್ ಜೊತೆ ‘ದೇವ’, ಸೂರ್ಯ 44, ಅಹಾನ್ ಶೆಟ್ಟಿ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

  • ದೆವ್ವದ ಪಾತ್ರ ಮಾಡಲು ಒಪ್ಪಿಕೊಂಡ್ರಾ ಪೂಜಾ ಹೆಗ್ಡೆ?

    ದೆವ್ವದ ಪಾತ್ರ ಮಾಡಲು ಒಪ್ಪಿಕೊಂಡ್ರಾ ಪೂಜಾ ಹೆಗ್ಡೆ?

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸಾಲು ಸಾಲು ಸಿನಿಮಾಗಳ ಸೋಲನ್ನು ಕಂಡಿರುವ ಹಿನ್ನೆಲೆ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಹೊಸ ಬಗೆಯ ಪಾತ್ರಗಳನ್ನು ಮಾಡಲು ಮುಂದಾಗಿದ್ದಾರೆ. ತಮಿಳಿನ ಹೊಸ ಸಿನಿಮಾದಲ್ಲಿ ದೆವ್ವದ ಪಾತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಪೂಜಾಗೆ ಕೆರಿಯರ್‌ನಲ್ಲಿ ಹೇಳಿಕೊಳ್ಳುವಂತಹ ಸಕ್ಸಸ್ ಸಿಗುತ್ತಿಲ್ಲ. ಆದರೆ ಅವರಿಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ನಟ ರಾಘವ್ ಲಾರೆನ್ಸ್ (Raghava Lawrence) ನಟನೆಯ ‘ಕಾಂಚನಾ ಪಾರ್ಟ್ 4’ನಲ್ಲಿ (Kanchana 4) ದೆವ್ವದ (Ghost) ಪಾತ್ರದಲ್ಲಿ ನಟಿಸಲು ಚಿತ್ರತಂಡ ನಟಿಯನ್ನು ಕೇಳಲಾಗಿದೆಯಂತೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ. ಆದರೆ ನಟಿ ಒಪ್ಪಿಕೊಂಡ್ರಾ? ಎಂಬುದರ ಬಗ್ಗೆ ಅಧಿಕೃತ ಘೋಷಣೆಯಾಗಬೇಕಿದೆ.

    ದೆವ್ವ ಪಾತ್ರವಾಗಿದ್ದರೂ ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ. ಒಂದು ವೇಳೆ, ಈ ಪಾತ್ರ ಒಪ್ಪಿದ್ದೇ ಆದರೆ ಹೊಸ ಪಾತ್ರದಲ್ಲಿ ನಟಿ ಕಾಣಿಸಿಕೊಂಡಂತೆ ಆಗುತ್ತದೆ. ಜಸ್ಟ್‌ ವೈರಲ್‌ ಆಗುತ್ತಿರುವ ಸುದ್ದಿ ಕೇಳಿಯೇ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಪೂಜಾರನ್ನು ದೆವ್ವ ಪಾತ್ರದಲ್ಲಿ ನೋಡಲು ಕಾಯುತ್ತಿದ್ದಾರೆ. ಇದನ್ನೂ ಓದಿ:ಮಾಧ್ಯಮಗಳನ್ನು ನೋಡಿ ಅಸಭ್ಯ ಸನ್ನೆ ಮಾಡಿದ ದರ್ಶನ್

    ಅಂದಹಾಗೆ, ಶಾಹಿದ್ ಕಪೂರ್ (Shahid Kapoor) ನಟನೆಯ ದೇವ ಚಿತ್ರದಲ್ಲಿ ಪೂಜಾ ಹೀರೋಯಿನ್ ನಟಿಸಿದ್ದಾರೆ. ತಮಿಳು ನಟ ಸೂರ್ಯ ನಟನೆಯ 44ನೇ ಚಿತ್ರಕ್ಕೂ ಇವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದಕ್ಕೆ, ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡುತ್ತಿದ್ದಾರೆ.

  • ಸಿನಿಮಾಗೆ ಬ್ರೇಕ್ ಕೊಟ್ಟು ಜಂಗಲ್‌ನಲ್ಲಿ ಪೂಜಾ ಹೆಗ್ಡೆ ಸುತ್ತಾಟ

    ಸಿನಿಮಾಗೆ ಬ್ರೇಕ್ ಕೊಟ್ಟು ಜಂಗಲ್‌ನಲ್ಲಿ ಪೂಜಾ ಹೆಗ್ಡೆ ಸುತ್ತಾಟ

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸಿನಿಮಾಗೆ ಕೆಲಸಕ್ಕೆ ಬ್ರೇಕ್ ಕೊಟ್ಟು ವಿದೇಶದ ಜಂಗಲ್‌ನಲ್ಲಿ ನಟಿ ಸುತ್ತಾಟ ನಡೆಸಿದ್ದಾರೆ. ಟ್ರೇಕ್ಕಿಂಗ್‌ನ ಸುಂದರ ಫೋಟೋಗಳನ್ನು ಪೂಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿ ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟು ನಟಿ ವಿದೇಶಕ್ಕೆ ಹಾರಿದ್ದಾರೆ. ಕಾಡಿನ ಗ್ರೀನರಿ ಮಧ್ಯೆ ನಿಂತು ಪ್ರಕೃತಿಯನ್ನು ನೋಡಿ ಖುಷಿಪಟ್ಟಿರುವ ಚೆಂದದ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಈ ವೇಳೆ, ಶರ್ಟ್‌ ಮತ್ತು ಶಾರ್ಟ್‌ ಜೀನ್ಸ್‌ ಧರಿಸಿ ಮಿಂಚಿದ್ದಾರೆ. ಇದನ್ನೂ ಓದಿ:‘ಮುಫಾಸಾ: ದಿ ಲಯನ್ ಕಿಂಗ್’ ಸಿನಿಮಾಗೆ ಸಾಥ್‌ ನೀಡಿದ ಮಹೇಶ್ ಬಾಬು

     

    View this post on Instagram

     

    A post shared by Pooja Hegde (@hegdepooja)


    ಅಂದಹಾಗೆ, ನಟಿಯ ಖಾಸಗಿ ವಿಚಾರಕ್ಕೆ ಬರೋದಾದ್ರೆ ಬಾಲಿವುಡ್ ಹೀರೋ ರೋಹನ್ ಮೆಹ್ರಾ ಜೊತೆ ಪೂಜಾ ಹೆಸರು ಕೇಳಿ ಬರುತ್ತಿದೆ. ಕೆಲ ತಿಂಗಳುಗಳ ಹಿಂದೆ ನಟಿಯ ಕುಟುಂಬದ ಜೊತೆ ರೋಹನ್ ಕಾಣಿಸಿಕೊಂಡಿದ್ದರು. ಇದು ಇಬ್ಬರ ಡೇಟಿಂಗ್ ಸುದ್ದಿ ಮತ್ತಷ್ಟು ಪುಷ್ಠಿ ನೀಡಿತ್ತು.

    ಇನ್ನೂ ಶಾಹಿದ್ ಕಪೂರ್ ಜೊತೆ `ದೇವ’ (Deva) ಸಿನಿಮಾದಲ್ಲಿ ಪೂಜಾ ನಾಯಕಿಯಾಗಿ ನಟಿಸಿದ್ದಾರೆ. ಸುನೀಲ್ ಶೆಟ್ಟಿ ಪುತ್ರನ ಜೊತೆ ಸಿನಿಮಾ, ತಮಿಳು ನಟ ಸೂರ್ಯ ನಟನೆಯ 44ನೇ (Suriya 44) ಚಿತ್ರಕ್ಕೂ ಇವರೇ ನಾಯಕಿಯಾಗಿದ್ದಾರೆ.

  • Suriya 44: ಗ್ಯಾಂಗ್‌ಸ್ಟರ್ ಅವತಾರದಲ್ಲಿ ಎಂಟ್ರಿ ಕೊಟ್ಟ ತಮಿಳು ನಟ ಸೂರ್ಯ

    Suriya 44: ಗ್ಯಾಂಗ್‌ಸ್ಟರ್ ಅವತಾರದಲ್ಲಿ ಎಂಟ್ರಿ ಕೊಟ್ಟ ತಮಿಳು ನಟ ಸೂರ್ಯ

    ಮಿಳು ನಟ ಸೂರ್ಯಗೆ (Tamil Actor Suriya) ಇಂದು (ಜು.23) 49ನೇ ವರ್ಷದ ಹುಟ್ಟುಹಬ್ಬದ (Birthday) ಸಂಭ್ರಮ. ಈ ದಿನ ಸೂರ್ಯ ಫ್ಯಾನ್ಸ್‌ಗೆ ಹೊಸ ಚಿತ್ರದ ಅಪ್‌ಡೇಟ್ ಮೂಲಕ ಚಿತ್ರತಂಡ ಸರ್ಪ್ರೈಸ್ ಕೊಟ್ಟಿದೆ. ಗ್ಯಾಂಗ್‌ಸ್ಟರ್ ಅವತಾರದಲ್ಲಿ ನಟ ಎಂಟ್ರಿ ಕೊಟ್ಟಿದ್ದಾರೆ.

    ಡೈರೆಕ್ಟರ್ ಕಾರ್ತಿಕ್ ಸುಬ್ಬರಾಜ್ ಜೊತೆ 44ನೇ (Suriya 44) ಸಿನಿಮಾಗಾಗಿ ಸೂರ್ಯ ಕೈಜೋಡಿಸಿದ್ದಾರೆ. ಸಮುದ್ರದ ಸಮೀಪ ಇರುವ ಕೋಟೆಯಿಂದ ಸಿಗರೇಟ್ ಸೇದುತ್ತಾ ಖಡಕ್ ಆಗಿ ಸೂರ್ಯ ಎಂಟ್ರಿ ಕೊಟ್ಟಿದ್ದಾರೆ. ರೆಟ್ರೋ ಸ್ಟೈಲಿನಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಈ ಸದ್ಯ ಸಿನಿಮಾದ ಮೊದಲ ತುಣುಕು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ:ದರ್ಶನ್ ಭೇಟಿಗೆ ಜೈಲಿಗೆ ಆಗಮಿಸಿದ ಸಾಧುಕೋಕಿಲ

    ಈ ಚಿತ್ರದಲ್ಲಿ ಗ್ಯಾಂಗ್ ಒಂದರ ಲೀಡರ್ ಆಗಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕಥೆ ವಿಭಿನ್ನವಾಗಿದ್ದು, ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ‘ಕಂಗುವ’ ಸಿನಿಮಾದ ಕೆಲಸದ ನಡುವೆ 44ನೇ ಚಿತ್ರದ ಶೂಟಿಂಗ್‌ನಲ್ಲಿಯೂ ಸೂರ್ಯ ತೊಡಗಿಸಿಕೊಂಡಿದ್ದಾರೆ.


    ಈ ಚಿತ್ರದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಜೊತೆ ಸೂರ್ಯ ರೊಮಾನ್ಸ್ ಮಾಡಲಿದ್ದಾರೆ. ಮೊದಲ ಬಾರಿಗೆ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ತಿದ್ದಾರೆ. ಹಾಗಾಗಿ ಸಿನಿಮಾದ ಮೇಲೆ ಭಾರೀ ನಿರೀಕ್ಷೆಯಿದೆ.

  • ಸೂರ್ಯ ಜೊತೆ ನಟಿಸಲು 4 ಕೋಟಿ ಸಂಭಾವನೆ ಪಡೆದ ಪೂಜಾ ಹೆಗ್ಡೆ

    ಸೂರ್ಯ ಜೊತೆ ನಟಿಸಲು 4 ಕೋಟಿ ಸಂಭಾವನೆ ಪಡೆದ ಪೂಜಾ ಹೆಗ್ಡೆ

    ರಾವಳಿ ನಟಿ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ ಮತ್ತು ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟಿಸುತ್ತಿರುವ ಸಿನಿಮಾ ಹಿಟ್ ಆಗದೇ ಇದ್ದರೂ ಪೂಜಾಗೆ ಇರುವ ಬೇಡಿಕೆಯೇನು ಕಮ್ಮಿಯಾಗಿಲ್ಲ. ಸದ್ಯ ಕಾಲಿವುಡ್ ನಟ ಸೂರ್ಯ ಜೊತೆ ನಟಿಸಲು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

    ಶಾಹಿದ್ ಕಪೂರ್ ಜೊತೆ ‘ದೇವ’ ಸಿನಿಮಾ, ಅಹಾನ್ ಶೆಟ್ಟಿ ಜೊತೆ ಸಂಕಿ ಸಿನಿಮಾದಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ತಮಿಳಿನ ನಟ ಸೂರ್ಯ (Actor Suriya) ಜೊತೆ ನಟಿಸುವ ಅವಕಾಶ ಪೂಜಾಗೆ ಸಿಕ್ಕಿದೆ.

    ಇದುವರೆಗೂ 3.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟಿ ಈಗ ಸೂರ್ಯ ನಟನೆಯ 44ನೇ (Suriya 44) ಸಿನಿಮಾದಲ್ಲಿ ನಟಿಸಲು 4 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:‘ನಿನಗಾಗಿ’ ಎನ್ನುತ್ತಾ ದಿವ್ಯಾ ಉರುಡುಗ ಹಿಂದೆ ಬಿದ್ದ ಕಿಶನ್ ಬಿಳಗಲಿ

    ತೆಲುಗಿನಲ್ಲಿ ಅದ್ಯಾಕೋ ಪೂಜಾಗೆ ಅದೃಷ್ಟ ಖುಲಾಯಿಸುತ್ತಿಲ್ಲ. ಆದರೆ ಬಾಲಿವುಡ್‌ನಲ್ಲಿ ನಟಿಗೆ ಉತ್ತಮ ಅವಕಾಶಗಳೇ ಅರಸಿ ಬರುತ್ತಿವೆ. ಹಾಗಾಗಿ ಅವರು ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಡುತ್ತಿದ್ದಾರೆ.