Tag: Pooja Hegde

  • ಸತತ 7 ಸಿನಿಮಾಗಳು ಫ್ಲಾಪ್- ಗೆಲುವಿಗಾಗಿ ಕಾಯ್ತಿದ್ದಾರೆ ಪೂಜಾ ಹೆಗ್ಡೆ

    ಸತತ 7 ಸಿನಿಮಾಗಳು ಫ್ಲಾಪ್- ಗೆಲುವಿಗಾಗಿ ಕಾಯ್ತಿದ್ದಾರೆ ಪೂಜಾ ಹೆಗ್ಡೆ

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಸಾಲು ಸಾಲು 7 ಸಿನಿಮಾಗಳು ಫ್ಲಾಪ್ ಆಗಿವೆ. ಈ ಮಂಗಳೂರಿನ ಬೆಡಗಿಗೆ ಅದೃಷ್ಟ ಕೈಹಿಡಿಯೋದು ಯಾವಾಗ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ- ಮೊದಲ ಮಗುವಿನ ನಿರೀಕ್ಷೆಯಲ್ಲಿ ವರುಣ್ ತೇಜ್ ದಂಪತಿ

    ಇತ್ತೀಚಿನ ವರ್ಷಗಳಲ್ಲಿ ಪೂಜಾ ನಟಿಸಿರುವ ಸತತ 7 ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿವೆ. ಸ್ಟಾರ್ ನಟರಿಗೆ ಅವರು ನಾಯಕಿಯಾದ್ರೂ ಸಕ್ಸಸ್ ಸಿಗಲಿಲ್ಲ. ಪ್ರಭಾಸ್ ಜೊತೆ ರಾಧೆ ಶ್ಯಾಮ್, ದಳಪತಿ ವಿಜಯ್ ಜೊತೆ ಬೀಸ್ಟ್, ರಾಮ್ ಚರಣ್ ಜೊತೆ ಆಚಾರ್ಯ, ರಣವೀರ್ ಸಿಂಗ್ ಜೊತೆ ಸರ್ಕಸ್, ಸಲ್ಮಾನ್ ಖಾನ್ ಜೊತೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’, ಶಾಹಿದ್ ಕಪೂರ್ ಜೊತೆ ದೇವ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳೆಲ್ಲಾ ಸಕ್ಸಸ್ ಸಿಗದೆ ನೆಲಕಚ್ಚಿದೆ. ಇದನ್ನೂ ಓದಿ:ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ಯಾಕೆ?- ಪ್ರಚಾರದ ಗಿಮಿಕ್ ಎಂದವರಿಗೆ ನಟಿ ಸ್ಪಷ್ಟನೆ

    ಮೇ 1ರಂದು ಸೂರ್ಯ (Suriya) ಜೊತೆ ನಟಿಸಿದ್ದ ‘ರೆಟ್ರೋ’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸಕ್ಸಸ್ ಸಿಗದೆ ಇರೋದನ್ನು ನೋಡಿ ಅಭಿಮಾನಿಗಳು ಕಂಗಲಾಗಿದ್ದಾರೆ. ಕರಾವಳಿ ಬೆಡಗಿಗೆ ಅದೃಷ್ಟ ಕೈ ಹಿಡಿಯೋದು ಯಾವಾಗ ಎಂಬುದೇ ಅಭಿಮಾನಿಗಳ ಪ್ರಶ್ನೆಯಾಗಿದೆ.

    ‘ಒಕಾ ಲೈಲಾ ಕೋಸಂ’ ಚಿತ್ರದ ಮೂಲಕ ಪೂಜಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ 7 ಫ್ಲಾಪ್ ಚಿತ್ರಕ್ಕೂ ಮುನ್ನ ಸಮತಾ, ಮಹರ್ಷಿ, ಅಲ ವೈಕುಂಠಪುರಮಲ್ಲೋ, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾಗಳ ಮೂಲಕ ಪೂಜಾ ಸಕ್ಸಸ್ ಕಂಡಿದ್ದಾರೆ.

    ಸಾಲು ಸಾಲು ಸಿನಿಮಾ ಸೋತ್ರೂ ಅವರಿಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ತಲೈವಾ ನಟನೆಯ ‘ಕೂಲಿ’ ಚಿತ್ರದಲ್ಲಿ ಪೂಜಾ ಸೊಂಟ ಬಳುಕಿಸಿದ್ದಾರೆ. ವಿಜಯ್ ಜೊತೆ ‘ಜನ ನಾಯಗನ್’, ಸುನೀಲ್ ಶೆಟ್ಟಿ ಪುತ್ರನ ಸಿನಿಮಾದಲ್ಲೂ ನಾಯಕಿಯಾಕಿದ್ದಾರೆ.

  • ಕನ್ನಡಕ್ಕೆ ಬಂದ್ರು ಕುಡ್ಲದ ಬೆಡಗಿ- ಸುದೀಪ್‌ ಸಿನಿಮಾದಲ್ಲಿ ಪೂಜಾ ಹೆಗ್ಡೆ

    ಕನ್ನಡಕ್ಕೆ ಬಂದ್ರು ಕುಡ್ಲದ ಬೆಡಗಿ- ಸುದೀಪ್‌ ಸಿನಿಮಾದಲ್ಲಿ ಪೂಜಾ ಹೆಗ್ಡೆ

    ಕುಡ್ಲದ ಸುಂದರಿ ಪೂಜಾ ಹೆಗ್ಡೆ (Pooja Hegde) ಇತ್ತೀಚೆಗೆ ಕನ್ನಡದ ಸಿನಿಮಾದಲ್ಲಿ ನಟಿಸುವ ಆಸಕ್ತಿಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಉತ್ತಮ ಕಥೆ ಸಿಕ್ಕರೆ ಕನ್ನಡದಲ್ಲಿ ನಟಿಸೋದಾಗಿ ಹೇಳಿದ್ದರು. ಅದರಂತೆ ಈಗ ಸ್ಟಾರ್ ನಟ ಸುದೀಪ್ (Sudeep) ಸಿನಿಮಾಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕನ್ನಡದಲ್ಲಿ ನಟಿಸಲು ಹಲವು ಕಥೆಗಳನ್ನು ಕೇಳಿದ್ದೆ, ಯಾವುದು ಇಷ್ಟವಾಗಿಲ್ಲ: ಪೂಜಾ ಹೆಗ್ಡೆ

    ಕನ್ನಡದಲ್ಲಿ ನಟಿಸುವಂತೆ ಪೋಷಕರಿಂದ ಒತ್ತಡವಿದೆ. ನಾನು ಕೂಡ ಹಲವು ಕಥೆಗಳನ್ನು ಕೇಳಿದ್ದೇನೆ. ಆದರೆ ಯಾವುದು ಇಷ್ಟವಾಗಿಲ್ಲ. ಉತ್ತಮ ಕಥೆ ಸಿಕ್ಕಿದ್ದಲ್ಲಿ ಖಂಡಿತಾ ಕನ್ನಡದಲ್ಲಿ ನಟಿಸೋದಾಗಿ ಇಂಗಿತ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಅವರಿಗೆ ಸುದೀಪ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎನ್ನಲಾಗಿದೆ. ಇದನ್ನೂ ಓದಿ:ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್ ಪುತ್ರನಿಗೆ ರಂಜನಿ ರಾಘವನ್ ಆ್ಯಕ್ಷನ್ ಕಟ್

    ಸುದೀಪ್ ನಟನೆಯ ಮತ್ತು ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲಾ ರಂಗ ಭಾಷಾ’ (Billa Ranga Basha) ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾಗೆ ಪೂಜಾ ಹೆಗ್ಡೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾದ ಸುದ್ದಿ ಇದೀಗ ಹರಿದಾಡುತ್ತಿದೆ. ಕನ್ನಡದಲ್ಲಿ ಒಳ್ಳೆಯ ಅವಕಾಶಕ್ಕಾಗಿ ಕಾಯ್ತಿದ್ದ ಪೂಜಾಗೆ ಇದೀಗ ಸುದೀಪ್ ಚಿತ್ರ ಒಪ್ಕೊಂಡಿದ್ದಾರೆ ಎನ್ನಲಾಗಿದೆ. ಇದು ನಿಜನಾ? ಎಂಬುದನ್ನು ಚಿತ್ರತಂಡ ಮತ್ತು ಪೂಜಾ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.

    ಒಂದು ವೇಳೆ ಸುದೀಪ್‌ಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಲ್ಲಿ ಫ್ಯಾನ್ಸ್‌ಗೆ ಮನರಂಜನೆ ಗ್ಯಾರಂಟಿ. ಸುದೀಪ್ ಚಿತ್ರದ ಮೂಲಕ ಅವರು ಕನ್ನಡಕ್ಕೆ ಎಂಟ್ರಿ ಕೊಟ್ಟಂತೆ ಆಗಲಿದೆ. ಸದ್ಯ ಈ ವಿಚಾರ ಕೇಳಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಚಿತ್ರತಂಡದ ಕಡೆಯಿಂದ ಗುಡ್ ನ್ಯೂಸ್ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.

  • ಕನ್ನಡದಲ್ಲಿ ನಟಿಸಲು ಹಲವು ಕಥೆಗಳನ್ನು ಕೇಳಿದ್ದೆ, ಯಾವುದು ಇಷ್ಟವಾಗಿಲ್ಲ: ಪೂಜಾ ಹೆಗ್ಡೆ

    ಕನ್ನಡದಲ್ಲಿ ನಟಿಸಲು ಹಲವು ಕಥೆಗಳನ್ನು ಕೇಳಿದ್ದೆ, ಯಾವುದು ಇಷ್ಟವಾಗಿಲ್ಲ: ಪೂಜಾ ಹೆಗ್ಡೆ

    ಕುಡ್ಲದ ಬೆಡಗಿ ಪೂಜಾ ಹೆಗ್ಡೆ (Pooja Hegde) ಪ್ರಸ್ತುತ ಸೂರ್ಯ (Suriya) ಜೊತೆಗಿನ ‘ರೆಟ್ರೋ’ (Retro) ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಸಂರ್ದಶನವೊಂದರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ

    ಪೂಜಾ ಹೆಗ್ಡೆ ಸಂದರ್ಶನದಲ್ಲಿ ಮಾತನಾಡಿ, ನನ್ನ ಪೋಷಕರಿಂದ ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಒತ್ತಡವಿದೆ. ನಾನು ಮೂಲತಃ ಕರ್ನಾಟಕದವಳು, ತುಳು ಹುಡುಗಿ. ಹಾಗಾಗಿ ನನ್ನ ಪೋಷಕರು ಆಗಾಗ ಕನ್ನಡದಲ್ಲಿ ಸಿನಿಮಾ (Kannada Films) ಮಾಡಲು ಹೇಳುತ್ತಾ ಇರುತ್ತಾರೆ. ಕನ್ನಡದಲ್ಲಿ ಹಲವು ಕಥೆಗಳನ್ನು ಈಗಾಗಲೇ ಕೇಳಿದ್ದೇನೆ. ಯಾವುದು ಇಷ್ಟವಾಗಿಲ್ಲ. ಉತ್ತಮ ಕಥೆ ಸಿಕ್ಕರೆ ಖಂಡಿತವಾಗಿಯೂ ಕನ್ನಡದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಕನ್ನಡ ಸಿನಿಮಾದಲ್ಲಿ ನಟಿಸುವ ಆಸಕ್ತಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ವೈಯಕ್ತಿಕ ಸವಾಲುಗಳೊಂದಿಗೆ ಹೋರಾಡುತ್ತಿದ್ದೇನೆ: ಫ್ಯಾನ್ಸ್‌ಗೆ ಪತ್ರ ಬರೆದ ನಜ್ರಿಯಾ

    ಅಂದಹಾಗೆ, ‘ರೆಟ್ರೋ’ ಸಿನಿಮಾ ಇದೇ ಮೇ 1ರಂದು ರಿಲೀಸ್ ಆಗಲಿದೆ. ಕನ್ನಡದ ಕೆವಿಎನ್ ಸಂಸ್ಥೆ ನಿರ್ಮಾಣದ ‘ಜನ ನಾಯಗನ್’ ಸಿನಿಮಾದಲ್ಲಿ ವಿಜಯ್ ದಳಪತಿಯೊಂದಿಗೆ ನಟಿಸುತ್ತಿದ್ದಾರೆ. ಮುಂದಿನ ವರ್ಷ ಜ.9ರಂದು ರಿಲೀಸ್ ಆಗಲಿದೆ.

  • ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ

    ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ

    ಚಿತ್ರರಂಗದಲ್ಲಿ ಈಗಾಗಲೇ ಸಂಜಯ್ ದತ್, ಎಂ.ಎಸ್ ಧೋನಿ, ಜಯಲಲಿತಾ ಸೇರಿದಂತೆ ಅನೇಕರ ಸಿನಿಮಾ ಬೆಳ್ಳಿಪರದೆಯಲ್ಲಿ ರಾರಾಜಿಸಿವೆ. ಇದೀಗ ಲೆಜೆಂಡರಿ ನಟಿ ಶ್ರೀದೇವಿ (Sridevi) ಕುರಿತು ಬಯೋಪಿಕ್ ಮಾಡಲು ನಿರ್ದೇಶಕರೊಬ್ಬರು ಸಿದ್ಧತೆ ನಡೆಸುತ್ತಿದ್ದಾರೆ. ಶ್ರೀದೇವಿ ಪಾತ್ರಕ್ಕೆ ಜೀವ ತುಂಬಲು ಅನೇಕ ನಟಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ

    ಶ್ರೀದೇವಿ ಬಯೋಪಿಕ್ ಸಿನಿಮಾ ರೂಪದಲ್ಲಿ ತರಲು ಪ್ಲ್ಯಾನಿಂಗ್ ನಡೆಯುತ್ತಿದೆ. ಚಿತ್ರತಂಡ ನಟಿಯ ಹುಡುಕಾಟದಲ್ಲಿದೆ. ಇದರ ನಡುವೆ ಪೂಜಾ ಹೆಗ್ಡೆ (Pooja Hegde) ಅವರು ಸಂದರ್ಶನದಲ್ಲಿ ಶ್ರೀದೇವಿ ಬಯೋಪಿಕ್‌ನಲ್ಲಿ Sridevi Biopic) ನಟಿಸಲು ಆಸಕ್ತಿಯಿದೆ. ಅವಕಾಶ ಸಿಕ್ಕರೆ ನಟಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ವರುಣ್‌ ಧವನ್‌ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ

    ಈಗಾಗಲೇ ನಾನು ಶ್ರೀದೇವಿ ನಟನೆಯ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ. ಅವರ ಜೀವನ ಚರಿತ್ರೆಯಲ್ಲಿ ನಟಿಸಲು ಚಾನ್ಸ್ ಸಿಕ್ಕರೆ ಅಭಿನಯಿಸಲು ಸಿದ್ಧ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ. ನಾನು ಇದುವರೆಗೂ ಬಯೋಪಿಕ್‌ನಲ್ಲಿ ನಟಿಸಿಲ್ಲ. ನಿಜ ಜೀವನದಲ್ಲಿ ಹೀರೋ ಆಗಿರುವ ವ್ಯಕ್ತಿಗಳ ಪಾತ್ರವನ್ನು ತೆರೆಯ ಮೇಲೆ ಪ್ರತಿನಿಧಿಸುವುದಕ್ಕೆ ಖುಷಿ ಆಗುತ್ತದೆ. ಇದರೊಂದಿಗೆ ಕ್ರೀಡೆಗೆ ಸಂಬಂಧಿಸಿದ ಸಿನಿಮಾಗಳಲ್ಲಿಯೂ ನಟಿಸಲು ಇಷ್ಟ ಎಂದಿದ್ದಾರೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಶ್ರೀದೇವಿ ಬಯೋಪಿಕ್‌ನಲ್ಲಿ ಪೂಜಾನೇ ಆಯ್ಕೆ ಆಗ್ತಾರಾ ಅಥವಾ ಬೇರೆ ನಟಿಗೆ ನಿರ್ದೇಶಕರು ಮಣೆ ಹಾಕ್ತಾರಾ ಎಂದು ಕಾಯಬೇಕಿದೆ.

    ಅಂದಹಾಗೆ, ಬಾಲಿವುಡ್‌ನ ‘ದೇವ’ ಚಿತ್ರದ ಬಳಿಕ ತಮಿಳು ನಟ ಸೂರ್ಯ ಜೊತೆ ‘ರೆಟ್ರೋ’ ಸಿನಿಮಾದಲ್ಲಿ ಪೂಜಾ ನಟಿಸಿದ್ದಾರೆ. ಮೇ 1ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇನ್ನೂ ವರುಣ್‌ ಧವನ್‌ ನಟನೆಯ ಹೊಸ ಸಿನಿಮಾಗೆ ಅವರು ಆಯ್ಕೆ ಆಗಿದ್ದಾರೆ.

  • ಸಂಕ್ರಾಂತಿಗೆ ಸ್ಟಾರ್ ವಾರ್- ವಿಜಯ್ ನಟನೆಯ ‘ಜನ ನಾಯಗನ್’ ಎದುರು ಅಬ್ಬರಿಸಲಿದೆ ಜ್ಯೂ.ಎನ್‌ಟಿಆರ್ ಸಿನಿಮಾ

    ಸಂಕ್ರಾಂತಿಗೆ ಸ್ಟಾರ್ ವಾರ್- ವಿಜಯ್ ನಟನೆಯ ‘ಜನ ನಾಯಗನ್’ ಎದುರು ಅಬ್ಬರಿಸಲಿದೆ ಜ್ಯೂ.ಎನ್‌ಟಿಆರ್ ಸಿನಿಮಾ

    ವಿಜಯ್ (Vijay Thalapathy) ಸಿನಿಮಾ ಎದುರು ಅಬ್ಬರಿಸಲು ಜ್ಯೂ.ಎನ್‌ಟಿಆರ್ (Jr.Ntr) ರೆಡಿಯಾಗಿದ್ದಾರೆ. ಒಂದೇ ದಿನ ಇಬ್ಬರೂ ಸ್ಟಾರ್ ನಟರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಚಿತ್ರದ ಮುಂದೆ ಪ್ರಶಾಂತ್ ನೀಲ್ ಹಾಗೂ ಜ್ಯೂ.ಎನ್‌ಟಿಆರ್ ನಟನೆಯ ಚಿತ್ರ ರಿಲೀಸ್ ಆಗಲಿದೆ. ಇದರಿಂದ ಮುಂದಿನ ವರ್ಷ ಸಂಕ್ರಾಂತಿಗೆ ಸ್ಟಾರ್ ವಾರ್ ಶುರುವಾಗಲಿದ್ಯಾ? ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.‌

    ಜ್ಯೂ.ಎನ್‌ಟಿಆರ್ ನಟನೆಯ ಹೊಸ ಸಿನಿಮಾ ಮುಂದಿನ ವರ್ಷ ಜ.9ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ. ಇದೇ ದಿನ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಕೂಡ ರಿಲೀಸ್ ಆಗ್ತಿದೆ. ಹಾಗಾಗಿ ಸ್ಟಾರ್ ವಾರ್ ನಡೆಯುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ರಾಮ್ ಚರಣ್ ಸಿನಿಮಾಗೆ ‘ಪೆಡ್ಡಿ’ ಟೈಟಲ್ ಫಿಕ್ಸ್- ಮಾಸ್ ಗೆಟಪ್‌ನಲ್ಲಿ ನಟ

    ಈ ಹಿಂದೆ ವಿಜಯ್ ನಟನೆಯ ‘ಬೀಸ್ಟ್’ (Beast) ಸಿನಿಮಾ ಮುಂದೆ ಯಶ್ ನಟನೆಯ ‘ಕೆಜಿಎಫ್ 2’ (KGF 2) ರಿಲೀಸ್ ಭರ್ಜರಿ ಯಶಸ್ಸು ಕಂಡಿತ್ತು. ಬೀಸ್ಟ್ ಚಿತ್ರ ಹೀನಾಯವಾಗಿ ಸೋಲು ಕಂಡಿತ್ತು. ಈಗ ಮತ್ತೆ ಪ್ರಶಾಂತ್ ನೀಲ್ ನಿರ್ದೇಶನದ ಜ್ಯೂ.ಎನ್‌ಟಿಆರ್ ಸಿನಿಮಾ ಬರುತ್ತಿದೆ. ಈ ಎರಡು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕ್ಲ್ಯಾಶ್ ಆಗೋ ಸಾಧ್ಯತೆ ಇದೆ. ಹಾಗಾಗಿ ಇಬ್ಬರಲ್ಲಿ ಒಬ್ಬರಾದರು ರಿಲೀಸ್ ಡೇಟ್ ಮುಂದಕ್ಕೆ ಹಾಕ್ತಾರಾ? ಎಂದು ಈಗ ಚರ್ಚೆ ನಡೆಯುತ್ತಿದೆ.

    ಅಂದಹಾಗೆ, ‘ಜನ ನಾಯಗನ್’ ಚಿತ್ರವನ್ನು ಕನ್ನಡದ ಖ್ಯಾತ ಸಂಸ್ಥೆ ಕೆವಿಎನ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಗೆ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ನಟಿಸುತ್ತಿದ್ದಾರೆ.

  • 2026ರ ಸಂಕ್ರಾಂತಿಯಂದು ರಿಲೀಸ್‌ ಆಗಲಿದೆ ವಿಜಯ್‌ ನಟನೆಯ ಕೊನೆಯ ಸಿನಿಮಾ

    2026ರ ಸಂಕ್ರಾಂತಿಯಂದು ರಿಲೀಸ್‌ ಆಗಲಿದೆ ವಿಜಯ್‌ ನಟನೆಯ ಕೊನೆಯ ಸಿನಿಮಾ

    ಮಿಳು ನಟ ವಿಜಯ್ (Vijay) ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ (Jana Nayagan) ರಿಲೀಸ್ ಡೇಟ್ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಇದನ್ನೂ ಓದಿ:ಮಾ.27ಕ್ಕೆ ಸಂಸತ್ತಿನಲ್ಲಿ `ಛಾವಾ’ ಸಿನಿಮಾ ವೀಕ್ಷಿಸಲಿರುವ ಪ್ರಧಾನಿ ಮೋದಿ

    ಕೊನೆಗೂ ವಿಜಯ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ವಿಜಯ್ ಕೊನೆಯ ಚಿತ್ರ ಮುಂದಿನ ವರ್ಷ ಜನವರಿ 9ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ಅಪ್‌ಡೇಟ್‌ ಹಂಚಿಕೊಂಡಿದೆ. ಸಂಕ್ರಾಂತಿ ಹಬ್ಬದ ಸಡಗರದ ನಡುವೆ ವಿಜಯ್‌ ಕೊನೆಯ ಚಿತ್ರದ ಅಬ್ಬರ ಕೂಡ ಇರಲಿದೆ.

     

    View this post on Instagram

     

    A post shared by KVN Productions (@kvn.productions)

    ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ‘ಜನ ನಾಯಗನ್‌’ ರಾಜಕೀಯಕ್ಕೆ ಸಂಬಂಧಪಟ್ಟ ಚಿತ್ರವಾಗಿದೆ. ಈಗಾಗಲೇ ಚಿತ್ರದ ಪೋಸ್ಟರ್‌ನಿಂದ ಕುತೂಹಲ ಮೂಡಿಸಿದೆ. ‘ಬೀಸ್ಟ್‌’ ಚಿತ್ರದ ನಂತರ ‘ಜನ ನಾಯಗನ್‌’ ಚಿತ್ರದ ಮೂಲಕ 2ನೇ ಬಾರಿ ವಿಜಯ್ ಮತ್ತು ಪೂಜಾ ಹೆಗ್ಡೆ (Pooja Hegde) ಜೊತೆಯಾಗ್ತಿದ್ದಾರೆ.

    ಇನ್ನೂ ಈ ಚಿತ್ರದ ಬಳಿಕ ಮತ್ತೆ ತಾವು ನಟಿಸುವುದಿಲ್ಲ. ರಾಜಕೀಯದಲ್ಲಿ ಇರೋದಾಗಿ ವಿಜಯ್ ಈಗಾಗಲೇ ತಿಳಿಸಿದ್ದಾರೆ. ಹಾಗಾಗಿ ನಟನ ಕೊನೆಯ ಸಿನಿಮಾ ಸಂಭ್ರಮಿಸಲು ಫ್ಯಾನ್ಸ್ ಕಾಯ್ತಿದ್ದಾರೆ.

  • ವರುಣ್‌ ಧವನ್‌ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ

    ವರುಣ್‌ ಧವನ್‌ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ

    ಕು ಡ್ಲದ ಬೆಡಗಿ ಪೂಜಾ ಹೆಗ್ಡೆ ಸದ್ಯ ವರುಣ್ ಧವನ್ (Varun Dhawan) ಜೊತೆಗಿನ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ವರುಣ್ ಜೊತೆ ಪೂಜಾ (Pooja Hegde) ಉತ್ತರಾಖಂಡದ ಋಷಿಕೇಶನಲ್ಲಿ ಗಂಗಾ ಆರತಿ ಮಾಡಿದ್ದಾರೆ. ಈ ಕುರಿತು ನಟಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ‘ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ’ ಎನ್ನುತ್ತಿದ್ದಾರೆ ಸಪ್ತಮಿ ಗೌಡ

    ಹೊಸ ಸಿನಿಮಾದ ಶೂಟಿಂಗ್‌ಗಾಗಿ ಋಷಿಕೇಶಗೆ ಚಿತ್ರತಂಡ ತೆರಳಿದೆ. ಈ ವೇಳೆ, ಋಷಿಕೇಶನಲ್ಲಿರುವ ಗಂಗಾ ನದಿಯ ಬಳಿ ವರುಣ್ ಮತ್ತು ಪೂಜಾ ಗಂಗಾ ಆರತಿ ಮಾಡಿ ಪ್ರಾರ್ಥನೆ ಮಾಡುತ್ತಾರೆ. ಸಿನಿಮಾ ಯಶಸ್ಸಿಗಾಗಿ ಸಲ್ಲಿಸಿದ್ದಾರೆ. ಈ ಮೂಲಕ ಸಿನಿಮಾಕ್ಕೆ ಚಿತ್ರತಂಡ ಚಾಲನೆ ನೀಡಿದೆ.

     

    ಈ ಪೋಸ್ಟ್ ಅನ್ನು Instagram ನಲ್ಲಿ ವೀಕ್ಷಿಸಿ

     

    ಪೂಜಾ ಹೆಗ್ಡೆ (@hegdepooja) ಹಂಚಿಕೊಂಡ ಪೋಸ್ಟ್

    ಅಂದಹಾಗೆ, ವರುಣ್ ತಂದೆ ಡೇವಿಡ್ ಧವನ್ ನಿರ್ದೇಶನದ ‘ಹೇ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದಲ್ಲಿ ಪೂಜಾ ನಾಯಕಿಯಾಗಿದ್ದಾರೆ. ತೆಗೆದುಕೊಳ್ಳುವ ಸಿನಿಮಾದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.

    ಈ ಮುನ್ನ ವರುಣ್ ಅವರು ಕೀರ್ತಿ ಸುರೇಶ್ ಜೊತೆ ‘ಬೇಬಿ ಜಾನ್’ ಸಿನಿಮಾದಲ್ಲಿ ನಟಿಸಿದರು. ಇತ್ತ ಪೂಜಾ ಅವರು ಶಾಹಿದ್ ಕಪೂರ್‌ಗೆ ನಾಯಕಿಯಾಗಿ ‘ದೇವ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  • ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

    ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್

    ಕಾಲಿವುಡ್ ನಟ ಸೂರ್ಯ (Suriya) ನಟನೆಯ ‘ರೆಟ್ರೋ’ (Retro Film) ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ರೆಟ್ರೋ’ ಚಿತ್ರದ 2ನೇ ಹಾಡಿನ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಮಾ.21ರಂದು ಸಾಂಗ್ ರಿಲೀಸ್ ಆಗಲಿದೆ. ಇದನ್ನೂ ಓದಿ:ರಜತ್ ಪತ್ನಿ ಅಕ್ಷಿತಾಗೆ ಹುಟ್ಟುಹಬ್ಬದ ಸಂಭ್ರಮ: ‘ಬಿಗ್ ಬಾಸ್’ ಸ್ಪರ್ಧಿಗಳು ಭಾಗಿ

    ರೆಟ್ರೋ ಸಿನಿಮಾದಲ್ಲಿ ಸೂರ್ಯ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಸೂರ್ಯ ಜೀವತುಂಬಿದ್ದಾರೆ. ಈಗಾಗಲೇ ‘ಕನ್ನಾಡಿ ಪೂವೇ’ ಎನ್ನುವ ಸಾಂಗ್‌ವೊಂದು ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದೆ. ಈಗ ಎರಡನೇ ಹಾಡನ್ನು ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.

    ಮಾ.21ರಂದು ‘ಕನಿಮಾ’ ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ. ಸೂರ್ಯ ಸ್ಟೈಲೀಶ್ ಲುಕ್‌ನಲ್ಲಿರುವ ಫೋಟೋವನ್ನು ಚಿತ್ರತಂಡ ರಿವೀಲ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಇನ್ನೂ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಇದೇ ಮೇ.1ರಂದು ಸಿನಿಮಾ ರಿಲೀಸ್ ಆಗಲಿದೆ.

    ಇನ್ನೂ ಸೂರ್ಯ ಜೊತೆ ಮೊದಲ ಬಾರಿಗೆ ಪೂಜಾ (Pooja Hegde) ನಟಿಸಿರೋದ್ರಿಂದ ‘ರೆಟ್ರೋ’ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಸತತ ಸೋಲುಗಳನ್ನೇ ಕಂಡಿರೋ ಪೂಜಾಗೆ ತಮಿಳಿನ ‘ರೆಟ್ರೋ’ ಚಿತ್ರ ಕೈಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.

  • ಕಾಪು ಮಾರಿಗುಡಿಗೆ ಪೂಜಾ ಹೆಗ್ಡೆ ಭೇಟಿ

    ಕಾಪು ಮಾರಿಗುಡಿಗೆ ಪೂಜಾ ಹೆಗ್ಡೆ ಭೇಟಿ

    ಬಾಲಿವುಡ್ ಬೆಡಗಿ ಪೂಜಾ ಹೆಗ್ಡೆ (Pooja Hegde) ಅವರು ಉಡುಪಿಯ ಕಾಪು ಮಾರಿಗುಡಿಯ (Kapu Marigudi) ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕುಟುಂಬದ ಜೊತೆ ಭಾಗಿಯಾಗಿ ಕಾಪು ಮಾರಿಯಮ್ಮನ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ:40 ಬಾರಿ ದುಬೈಗೆ ಹೋಗಿದ್ದ ರನ್ಯಾ ಅಧಿಕಾರಿಗಳ ಬಲೆಗೆ ಬಿದ್ದಿದ್ದೆ ರೋಚಕ

    ಪೂಜಾ ಹೆಗ್ಡೆ ಮೂಲತಃ ಮಂಗಳೂರಿನವರು. ಹಾಗಾಗಿ ಆಗಾಗ ಕರಾವಳಿ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಫ್ಯಾಮಿಲಿ ಜೊತೆ ಕಾಪು ಮಾರಿಗುಡಿಗೆ ನಟಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಇನ್ನೂ ಕಾಪು ಮಾರಿಗುಡಿಗೆ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್‌, ಸೂರ್ಯಕುಮಾರ್‌ ಯಾದವ್‌ ಸೇರಿದಂತೆ ಅನೇಕರು ಭೇಟಿ ನೀಡಿದ್ದರು. ಈಗ ಪೂಜಾ ಹೆಗ್ಡೆ ಭೇಟಿ ಕೊಟ್ಟಿದ್ದಾರೆ.

    ಅಂದಹಾಗೆ, ಸದ್ಯ ಪೂಜಾ ಅವರು ತೆಲುಗು, ತಮಿಳು, ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ತಮಿಳು ನಟ ಸೂರ್ಯ ಜೊತೆಗಿನ ಸಿನಿಮಾ, ದಳಪತಿ ವಿಜಯ್ ಮತ್ತು ಕೆವಿಎನ್ ಸಂಸ್ಥೆಯೊಂದಿಗಿನ ಚಿತ್ರ, ಸುನೀಲ್ ಶೆಟ್ಟಿ ಪುತ್ರನಿಗೆ ನಾಯಕಿಯಾಗಿ ಬಾಲಿವುಡ್ ಚಿತ್ರ, ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ.

  • ತಲೈವಾ ಜೊತೆ ಸೊಂಟ ಬಳುಕಿಸಲು 2 ಕೋಟಿ ಸಂಭಾವನೆ ಪಡೆದ್ರಾ ಪೂಜಾ ಹೆಗ್ಡೆ?

    ತಲೈವಾ ಜೊತೆ ಸೊಂಟ ಬಳುಕಿಸಲು 2 ಕೋಟಿ ಸಂಭಾವನೆ ಪಡೆದ್ರಾ ಪೂಜಾ ಹೆಗ್ಡೆ?

    ರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಯಶಸ್ಸು ಸಿಗದೇ ಇದ್ದರೂ ಅವಕಾಶಗಳ ಕೊರತೆಯಿಲ್ಲ. ಹೀಗಿರುವಾಗ ‘ಕೂಲಿ’ ಸಿನಿಮಾದಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿರುವ ಪೂಜಾ ಈಗ ಸಂಭಾವನೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಲೈವಾ ಜೊತೆ ಸೊಂಟ ಬಳುಕಿಸಲು 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ.

    ಇತ್ತೀಚೆಗಷ್ಟೇ ‘ಕೂಲಿ’ (Coolie) ಚಿತ್ರತಂಡ ಪೂಜಾ ಹೆಗ್ಡೆ ಸಿನಿಮಾದ ಭಾಗವಾಗುತ್ತಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಚಿತ್ರದಲ್ಲಿ ಸ್ಪೆಷಲ್ ಡ್ಯಾನ್ಸ್ ಮಾಡಲು ನಟಿಯನ್ನು ಸಂಪರ್ಕಿಸಿದ ಸಮಯದಲ್ಲಿ 2 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದಕ್ಕೆ ಚಿತ್ರತಂಡವು ಕೂಡ ಒಪ್ಪಿಗೆ ನೀಡಿ 2 ಕೋಟಿ ರೂ. ಸಂಭಾವನೆಯನ್ನು ಪೂಜಾಗೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಶ್ರೇಯಾ ಘೋಷಾಲ್ ಎಕ್ಸ್‌ ಅಕೌಂಟ್ ಹ್ಯಾಕ್: ಲಿಂಕ್‌ ಕ್ಲಿಕ್‌ ಮಾಡದಂತೆ ಫ್ಯಾನ್ಸ್‌ಗೆ ಗಾಯಕಿ ಎಚ್ಚರಿಕೆ

    ಇನ್ನೂ ಈ ಹಿಂದೆ ‘ಜೈಲರ್’ ಸಿನಿಮಾದಲ್ಲಿ ತಲೈವಾ ಮತ್ತು ತಮನ್ನಾ ಡ್ಯಾನ್ಸ್ ಸಖತ್ ಕಿಕ್ ಕೊಟ್ಟಿತ್ತು. ಕಾವಾಲಯ್ಯ ಸಾಂಗ್ ಸೂಪರ್ ಹಿಟ್ ಆಗಿತ್ತು. ಅದೇ ಶೈಲಿಯಲ್ಲಿ ರಜನಿಕಾಂತ್ (Rajinikanth) ಮತ್ತು ಪೂಜಾ ಹೆಗ್ಡೆ ಸಾಂಗ್ ಶೂಟ್ ಮಾಡುವ ಪ್ಲಾö್ಯನ್ ಚಿತ್ರತಂಡಕ್ಕಿದೆ. ಈ ಸಾಂಗ್ ಕೂಡ ಹಿಟ್ ಆಗಲಿದೆ ಎಂಬುದು ನಿರ್ಮಾಪಕರ ಊಹೆ.

    ಅವಕಾಶವಿದ್ದರೂ ಸಕ್ಸಸ್ ಸಿಗದೇ ಒದ್ದಾಡುತ್ತಿರುವ ಪೂಜಾ ಹೆಗ್ಡೆಗೆ ಈ ಕೂಲಿ ಸಿನಿಮಾದ ಐಟಂ ಸಾಂಗ್ ಕೆರಿಯರ್‌ನಲ್ಲಿ ತಿರುವು ನೀಡುತ್ತಾ? ಮುಂದೆ ಏನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.