Tag: Pooja Gandhi

  • ಕೈ ಬರಹದಲ್ಲಿ ಮಳೆ ಹುಡುಗಿಯ ಮದುವೆ ಕಾರ್ಡ್: ಮೆಚ್ಚಿದ ಕರುನಾಡು

    ಕೈ ಬರಹದಲ್ಲಿ ಮಳೆ ಹುಡುಗಿಯ ಮದುವೆ ಕಾರ್ಡ್: ಮೆಚ್ಚಿದ ಕರುನಾಡು

    ಸೆಲೆಬ್ರಿಟಿಗಳ ಮದುವೆ ಕಾರ್ಡಿಗೆ ಲಕ್ಷ ಲಕ್ಷ ಖರ್ಚು ಮಾಡುವವರನ್ನು ನೋಡಿದ್ದೇವೆ. ದುಬಾರಿ ಮದುವೆ ಕಾರ್ಡ್ ಹಂಚಿದವರೂ ನಮ್ಮ ನಡುವೆ ಇದ್ದಾರೆ. ಆದರೆ, ಎಲ್ಲರಿಗೂ ಮಾದರಿ ಆಗುವಂತಹ ಕೆಲಸ ಮಾಡಿದ್ದಾರೆ ಮಳೆ ಹುಡುಗಿ ಖ್ಯಾತಿಯ ನಟಿ ಪೂಜಾ ಗಾಂಧಿ (Pooja Gandhi). ಸ್ವತಃ ತಮ್ಮದೇ ಕೈ ಬರಹದಲ್ಲಿ ಮದುವೆ ಕಾರ್ಡ್ ಸಿದ್ಧ ಪಡಿಸಿ, ಅದನ್ನೇ ಎಲ್ಲರಿಗೂ ಕಳುಹಿಸಿ ಕೊಟ್ಟಿದ್ದಾರೆ.

    ಮೂಲತಃ ಉತ್ತರ ಪ್ರದೇಶದವರಾದ ಪೂಜಾ ಗಾಂಧಿ, ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಬಂದವರು. ಕನ್ನಡವೇ ಬಾರದ ಪೂಜಾ ಇದೀಗ ಸ್ವಚ್ಛ ಕನ್ನಡದಲ್ಲಿ ಮಾತನಾಡುತ್ತಾರೆ. ವಚನಗಳನ್ನು ಪಟಪಟ ಹೇಳುತ್ತಾರೆ. ತಮ್ಮದೇ ಕೈ ಬರಹದಲ್ಲಿ ಕನ್ನಡದ ಮದುವೆ ಆಮಂತ್ರಣ ಪತ್ರಿಕೆಯನ್ನು (Wedding Card) ಸಿದ್ಧ ಮಾಡಿದ್ದಾರೆ. ಈ ನಡೆಗೆ ಕನ್ನಡಿಗರಿ ಮೆಚ್ಚಿದ್ದಾರೆ. ಆ ಪತ್ರಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

    ನಾಳೆ ಮದುವೆ

    ಈ ಹಿಂದೆ ನಿಶ್ಚಾತಾರ್ಥ ಮುರಿದು ಬಿದ್ದ ಕಾರಣದಿಂದಾಗಿ ಮದುವೆಯನ್ನೇ ಮರೆತಿದ್ದ ಪೂಜಾ ಗಾಂಧಿ, ಇದೀಗ ಎಲ್ಲ ಕಹಿ ಘಟನೆಗಳನ್ನು ಮರೆತು ಮತ್ತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದಿಂದಲೂ ದೂರವಿರುವ ಪೂಜಾ, ಕನ್ನಡ ಕಲಿಕೆಯ ಕಾರಣದಿಂದಾಗಿ ಸಖತ್ ಸುದ್ದಿಯಾಗಿದ್ದರು. ಇದೀಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಗೆ ಬಂದಿದ್ದಾರೆ.

    ಮಳೆ ಹುಡುಗಿ ಎಂದೇ ಖ್ಯಾತಿಯ ಆಗಿರುವ ಪೂಜಾ ಗಾಂಧಿ ನಾಳೆ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅವರ ಆಪ್ತರು ಹೇಳುವಂತೆ ನಾಳೆ ಉದ್ಯಮಿ ಜೊತೆ ಅವರು ಮಂತ್ರ ಮಾಂಗಲ್ಯ ಮಾದರಿಯಲ್ಲಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿತ್ತು. ಅದೀಗ ಎಲ್ಲವೂ ನಿಜವಾಗಿದೆ. ಸ್ವತಃ ಪೂಜಾ ಗಾಂಧಿಯವರೆ ಮಾಧ್ಯಮಗಳಿಗೆ ತಮ್ಮ ಮದುವೆ ಕುರಿತಾಗಿ ಪತ್ರ ಬರೆದಿದ್ದಾರೆ.

    ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ ನಡೆಯುತ್ತಿದ್ದು, ಉದ್ಯಮಿ ಹಾಗೂ ಅವರಿಗೆ ಕನ್ನಡ ಕಲಿಸಿರುವ ವಿಜಯ್ ಘೋರ್ಪಡೆ (Vijay Ghorpade) ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು ಎಂದು ಹೇಳಲಾಗುತ್ತಿದೆ.

     

    ಈಗಾಗಲೇ ಪೂಜಾ ತಮ್ಮ ಆಪ್ತರಿಗೆ ಕರೆ ಮಾಡಿ, ಮದುವೆ ಆ‍ಹ್ವಾನ ನೀಡಿದ್ದಾರೆ. ಮದುವೆ ಅತ್ಯಂತ ಸರಳವಾಗಿ ನಡೆಯುವುದರಿಂದ ಕೇವಲ ಹಸ್ತಾಕ್ಷರದಲ್ಲಿ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಿ, ಆಪ್ತರಿಗೆ ಕಳುಹಿಸಿದ್ದಾರೆ. ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಾಗಿ ಈ ಹುಡುಗಿ ಇದೀಗ ಕನ್ನಡದವರೇ ಆಗಿದ್ದಾರೆ.

  • ಪೂಜಾ ಗಾಂಧಿ ಕೈ ಹಿಡಿಯಲಿರೋ ಹುಡುಗ ವಿಜಯ್

    ಪೂಜಾ ಗಾಂಧಿ ಕೈ ಹಿಡಿಯಲಿರೋ ಹುಡುಗ ವಿಜಯ್

    ಹಿಂದೆ ನಿಶ್ಚಾತಾರ್ಥ ಮುರಿದು ಬಿದ್ದ ಕಾರಣದಿಂದಾಗಿ ಮದುವೆಯನ್ನೇ (Wedding) ಮರೆತಿದ್ದ ಪೂಜಾ ಗಾಂಧಿ (Pooja Gandhi), ಇದೀಗ ಎಲ್ಲ ಕಹಿ ಘಟನೆಗಳನ್ನು ಮರೆತು ಮತ್ತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದಿಂದಲೂ ದೂರವಿರುವ ಪೂಜಾ, ಕನ್ನಡ ಕಲಿಕೆಯ ಕಾರಣದಿಂದಾಗಿ ಸಖತ್ ಸುದ್ದಿಯಾಗಿದ್ದರು. ಇದೀಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಗೆ ಬಂದಿದ್ದಾರೆ.

    ಮಳೆ ಹುಡುಗಿ ಎಂದೇ ಖ್ಯಾತಿಯ ಆಗಿರುವ ಪೂಜಾ ಗಾಂಧಿ ನಾಳೆ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅವರ ಆಪ್ತರು ಹೇಳುವಂತೆ ನಾಳೆ ಉದ್ಯಮಿ ಜೊತೆ ಅವರು ಮಂತ್ರ ಮಾಂಗಲ್ಯ (Mantra Mangalya)ಮಾದರಿಯಲ್ಲಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿತ್ತು. ಅದೀಗ ಎಲ್ಲವೂ ನಿಜವಾಗಿದೆ. ಸ್ವತಃ ಪೂಜಾ ಗಾಂಧಿಯವರೆ ಮಾಧ್ಯಮಗಳಿಗೆ ತಮ್ಮ ಮದುವೆ ಕುರಿತಾಗಿ ಪತ್ರ ಬರೆದಿದ್ದಾರೆ.

    ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ ನಡೆಯುತ್ತಿದ್ದು, ಉದ್ಯಮಿ ಹಾಗೂ ಅವರಿಗೆ ಕನ್ನಡ ಕಲಿಸಿರುವ ವಿಜಯ್ ಘೋರ್ಪಡೆ (Vijay Ghorpade) ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು ಎಂದು ಹೇಳಲಾಗುತ್ತಿದೆ.

     

    ಈಗಾಗಲೇ ಪೂಜಾ ತಮ್ಮ ಆಪ್ತರಿಗೆ ಕರೆ ಮಾಡಿ, ಮದುವೆ ಆ‍ಹ್ವಾನ ನೀಡಿದ್ದಾರೆ. ಮದುವೆ ಅತ್ಯಂತ ಸರಳವಾಗಿ ನಡೆಯುವುದರಿಂದ ಕೇವಲ ಹಸ್ತಾಕ್ಷರದಲ್ಲಿ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಿ, ಆಪ್ತರಿಗೆ ಕಳುಹಿಸಿದ್ದಾರೆ. ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಾಗಿ ಈ ಹುಡುಗಿ ಇದೀಗ ಕನ್ನಡದವರೇ ಆಗಿದ್ದಾರೆ.

  • ನ.29ಕ್ಕೆ ಪೂಜಾ ಗಾಂಧಿ ಮದುವೆ: ಮಂತ್ರ ಮಾಂಗಲ್ಯಕ್ಕೆ ಮನಸೋತ ನಟಿ

    ನ.29ಕ್ಕೆ ಪೂಜಾ ಗಾಂಧಿ ಮದುವೆ: ಮಂತ್ರ ಮಾಂಗಲ್ಯಕ್ಕೆ ಮನಸೋತ ನಟಿ

    ಳೆ ಹುಡುಗಿ ಎಂದೇ ಖ್ಯಾತಿಯ ಆಗಿರುವ ಪೂಜಾ ಗಾಂಧಿ (Pooja Gandhi) ನಾಳೆ ಮದುವೆ  (Marriage) ಆಗುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅವರು ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲವಾದರೂ, ಅವರ ಆಪ್ತರು ಹೇಳುವಂತೆ ನಾಳೆ ಉದ್ಯಮಿ ಜೊತೆ ಅವರು ಮಂತ್ರ ಮಾಂಗಲ್ಯ (Mantra Mangalya) ಮಾದರಿಯಲ್ಲಿ ಮದುವೆ ಆಗುತ್ತಿದ್ದಾರೆ.

    ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ ನಡೆಯುತ್ತಿದ್ದು, ಉದ್ಯಮಿ ಹಾಗೂ ಅವರಿಗೆ ಕನ್ನಡ ಕಲಿಸಿರುವ ವಿಜಯ್ ಘೋರ್ಪಡೆ (Vijay Ghorpade) ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು ಎಂದು ಹೇಳಲಾಗುತ್ತಿದೆ.

    ಈಗಾಗಲೇ ಪೂಜಾ ತಮ್ಮ ಆಪ್ತರಿಗೆ ಕರೆ ಮಾಡಿ, ಮದುವೆ ಆ‍ಹ್ವಾನ ನೀಡಿದ್ದಾರೆ. ಮದುವೆ ಅತ್ಯಂತ ಸರಳವಾಗಿ ನಡೆಯುವುದರಿಂದ ಕೇವಲ ಹಸ್ತಾಕ್ಷರದಲ್ಲಿ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಿ, ಆಪ್ತರಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಾಗಿ ಈ ಹುಡುಗಿ ಇದೀಗ ಕನ್ನಡದವರೇ ಆಗಿದ್ದಾರೆ.

  • ಈವರೆಗೂ ಪರಿಹಾರ ಸಿಗದೇ ಇರೋ ಏಕೈಕ ಸಮಸ್ಯೆ ಕಾವೇರಿಯದ್ದು: ನಟ ಉಪೇಂದ್ರ

    ಈವರೆಗೂ ಪರಿಹಾರ ಸಿಗದೇ ಇರೋ ಏಕೈಕ ಸಮಸ್ಯೆ ಕಾವೇರಿಯದ್ದು: ನಟ ಉಪೇಂದ್ರ

    ನ್ನಡ ಪರ ಸಂಘಟನೆಗಳ ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (Film Chamber) ಬೆಂಬಲ ಸೂಚಿಸಿದ್ದು, ಈ ಹೋರಾಟದಲ್ಲಿ ಸ್ಯಾಂಡಲ್ ವುಡ್ ನ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ನಟ ಉಪೇಂದ್ರ  (Upendra) ಮಾತನಾಡಿ, ‘ಈವರೆಗೂ ಪರಿಹಾರ ಸಿಗದೇ ಇರೋ ಏಕೈಕ ಸಮಸ್ಯೆ ಎಂದರೆ ಅದು ಕಾವೇರಿ ನದಿ ನೀರಿನ ಸಮಸ್ಯೆ’ ಎಂದರು.

    ಮುಂದುವರೆದು ಮಾತನಾಡಿ ಉಪೇಂದ್ರ, ‘ನಾವೆಲ್ಲರೂ ಬುದ್ದಿವಂತರು. ವಿಚಾರ ಮಾಡುವ ಶಕ್ತಿಯಿದೆ. ಅದನ್ನು ಬಳಸಿಕೊಂಡು ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಬೇಕು. ನಮ್ಮ ಸಮಸ್ಯೆಗೆ ನಾವೇ ಪರಿಹಾರ ಹುಡುಕಿಕೊಳ್ಳಬೇಕು. ಎರಡೂ ಕಡೆಗಳಲ್ಲೂ ಈ ಕೆಲಸ ನಡೆಯಬೇಕು’ ಎಂದರು. ಇದನ್ನೂ ಓದಿ:‘ಕೆಂಡ’ದಂತಹ ಸಿನಿಮಾ ಮಾಡಿದ ಸಹದೇವ್-ರೂಪಾ ರಾವ್

    ಪೂಜಾ ಗಾಂಧಿ ಹೇಳಿದ್ದೇನು?

    ಕಾವೇರಿ ನೀರಿಗಾಗಿ (Cauvery Protest) ಕನ್ನಡಪರ ಸಂಘಟನೆ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಕಾವೇರಿ ಹೋರಾಟಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಾಥ್ ನೀಡಿದ್ದಾರೆ. ಈ ವೇಳೆ ಪೂಜಾ ಗಾಂಧಿ (Pooja Gandhi) ಕೂಡ ಭಾಗಿಯಾಗಿ ಕನ್ನಡಿಗರ ಸಹನೆ ಮತ್ತು ತಾಳ್ಮೆಯ ಬಗ್ಗೆ ಶ್ಲಾಘಿಸಿದ್ದಾರೆ. ಕಾವೇರಿ ನಮ್ಮವಳು ಎಂದು ಹೇಳುವ ಮೂಲಕ ನಟಿ ಸಾಥ್ ನೀಡಿದ್ದಾರೆ.

    ಎರಡು ರಾಜ್ಯಕ್ಕೂ ಒಳ್ಳೆಯದಾಗಲಿ. ಕನ್ನಡಿಗರಿಗೆ ನಿಜವಾಗಲೂ ಸಹನೆಯಿದೆ. ಆದರೆ ಈ ವಿಚಾರವಾಗಿ ಜಾಸ್ತಿ ಸಹನೆ ತಗೋಬೇಡಿ ಎಂದು ಕೇಳಿಕೇಳುತ್ತೇನೆ ಎಂದು ನಟಿ ಪೂಜಾ ಗಾಂಧಿ ಮಾತನಾಡಿದ್ದಾರೆ. ಇವತ್ತು ಕರ್ನಾಟಕ್ಕೆ ಯಾವು ಸಂದರ್ಭ ಕ್ರಿಯೇಟ್ ಆಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಇಬ್ಬರು ಅಹಂ ಮತ್ತು ಅಸೂಯೆ ಬಿಟ್ಟು ಕಾವೇರಿ ವಿಚಾರ ಬಗ್ಗೆ ಚರ್ಚೆ ಮಾಡಬೇಕು. ಮೇಕೆದಾಟು ಯೋಜನೆ ಬಗ್ಗೆ ಕೂಡ ಗಮನ ಕೊಡಬೇಕು.

    ನಮ್ಮ ರಾಜ್ಯದ ರೈತರಿಗೆ ಏನು ಬೇಕಾದರೂ ಆಗಲಿ, ತಮಿಳುನಾಡಿನ ರೈತರು ಮಾತ್ರ ಚೆನ್ನಾಗಿ ಇರಬೇಕಾ? ಎಂದು ನಟಿ ಪೂಜಾ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಕಾವೇರಿಯ ಒಂದು ಹನಿ ನೀರು ತಮಿಳುನಾಡಿಗೆ ಬಿಡದೇ ಇರುವ ಹಾಗೆ ಮಾಡೋಕೆ ಕನ್ನಡಿಗರಿಗೆ ಶಕ್ತಿ ಇದೆ. ಇಡೀ ಚಿತ್ರರಂಗ ನಮ್ಮ ಭಾಷೆ, ನೆಲ, ಜಲ ವಿಚಾರ ಬಂದಾಗ ನಮ್ಮ ಜನರಿಗೋಸ್ಕರ ಹೋರಾಟ ಮಾಡುತ್ತೇವೆ.

     

    ಬೆಳ್ಳಿಯ ಬಾಗಿಲು ಚಿನ್ನದ ದೇಗುಲ, ಒಳಗಡೆ ಬಹು ಮುತ್ತು ರತ್ನ, ಬೀಗರ ಕೈ ತಂದು ಬಾಗಿಲನ್ನು ತೆಗೆಯಲು ನೀನು ಒಮ್ಮೆ ಮಾಡು ಪ್ರಯತ್ನ ಎಂದು ನಟಿ ಪದ್ಯ ಹೇಳಿದರು. ಎಂತಹ ಖಜಾನೆಗೂ ಒಂದು ಬೀಗದ ಕೈ ಇದ್ದೆ ಇರುತ್ತೆ, ಹಾಗೆಯೇ ಎಲ್ಲಾ ಸಮ್ಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ ಅದನ್ನು ನಾವು ಬಗೆಹರಿಸಬೇಕು ಎಂದು ಹೇಳುವ ಮೂಲಕ ಹೋರಾಟಕ್ಕೆ ನಟಿ ಹುರುಪು ನೀಡಿದ್ದಾರೆ. ಈ ಹೋರಾಟದಲ್ಲಿ ಶಿವರಾಜ್‌ಕುಮಾರ್, ಶ್ರೀಮುರಳಿ, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಉಮಾಶ್ರೀ, ನವೀನ್ ಕೃಷ್ಣ, ಲೂಸ್ ಮಾದ, ಪ್ರಮೀಳಾ ಜೋಷಾಯ್, ಸುಂದರ್ ರಾಜ್ ಸೇರಿದಂತೆ ಹಲವು ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಂದು ಹನಿ ನೀರು ಬಿಡದೇ ಇರುವ ಹಾಗೆ ಮಾಡೋಕೆ ಕನ್ನಡಿಗರಿಗೆ ಶಕ್ತಿ ಇದೆ- ಪೂಜಾ ಗಾಂಧಿ

    ಒಂದು ಹನಿ ನೀರು ಬಿಡದೇ ಇರುವ ಹಾಗೆ ಮಾಡೋಕೆ ಕನ್ನಡಿಗರಿಗೆ ಶಕ್ತಿ ಇದೆ- ಪೂಜಾ ಗಾಂಧಿ

    ಕಾವೇರಿ ನೀರಿಗಾಗಿ (Cauvery Protest) ಕನ್ನಡಪರ ಸಂಘಟನೆ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಕಾವೇರಿ ಹೋರಾಟಕ್ಕೆ ಸ್ಯಾಂಡಲ್‌ವುಡ್ ಕಲಾವಿದರು ಸಾಥ್ ನೀಡಿದ್ದಾರೆ. ಈ ವೇಳೆ ಪೂಜಾ ಗಾಂಧಿ (Pooja Gandhi) ಕೂಡ ಭಾಗಿಯಾಗಿ ಕನ್ನಡಿಗರ ಸಹನೆ ಮತ್ತು ತಾಳ್ಮೆಯ ಬಗ್ಗೆ ಶ್ಲಾಘಿಸಿದ್ದಾರೆ. ಕಾವೇರಿ ನಮ್ಮವಳು ಎಂದು ಹೇಳುವ ಮೂಲಕ ನಟಿ ಸಾಥ್ ನೀಡಿದ್ದಾರೆ.

    ಎರಡು ರಾಜ್ಯಕ್ಕೂ ಒಳ್ಳೆಯದಾಗಲಿ. ಕನ್ನಡಿಗರಿಗೆ ನಿಜವಾಗಲೂ ಸಹನೆಯಿದೆ. ಆದರೆ ಈ ವಿಚಾರವಾಗಿ ಜಾಸ್ತಿ ಸಹನೆ ತಗೋಬೇಡಿ ಎಂದು ಕೇಳಿಕೇಳುತ್ತೇನೆ ಎಂದು ನಟಿ ಪೂಜಾ ಗಾಂಧಿ ಮಾತನಾಡಿದ್ದಾರೆ. ಇವತ್ತು ಕರ್ನಾಟಕ್ಕೆ ಯಾವು ಸಂದರ್ಭ ಕ್ರಿಯೇಟ್ ಆಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಇಬ್ಬರು ಅಹಂ ಮತ್ತು ಅಸೂಯೆ ಬಿಟ್ಟು ಕಾವೇರಿ ವಿಚಾರ ಬಗ್ಗೆ ಚರ್ಚೆ ಮಾಡಬೇಕು. ಮೇಕೆದಾಟು ಯೋಜನೆ ಬಗ್ಗೆ ಕೂಡ ಗಮನ ಕೊಡಬೇಕು. ಇದನ್ನೂ ಓದಿ:‘ಹ್ಯಾರಿ ಪಾಟರ್’ ಖ್ಯಾತಿಯ ಮೈಕೆಲ್ ಗ್ಯಾಂಬೊನ್ ನಿಧನ

    ನಮ್ಮ ರಾಜ್ಯದ ರೈತರಿಗೆ ಏನು ಬೇಕಾದರೂ ಆಗಲಿ, ತಮಿಳುನಾಡಿನ ರೈತರು ಮಾತ್ರ ಚೆನ್ನಾಗಿ ಇರಬೇಕಾ? ಎಂದು ನಟಿ ಪೂಜಾ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಕಾವೇರಿಯ ಒಂದು ಹನಿ ನೀರು ತಮಿಳುನಾಡಿಗೆ ಬಿಡದೇ ಇರುವ ಹಾಗೆ ಮಾಡೋಕೆ ಕನ್ನಡಿಗರಿಗೆ ಶಕ್ತಿ ಇದೆ. ಇಡೀ ಚಿತ್ರರಂಗ ನಮ್ಮ ಭಾಷೆ, ನೆಲ, ಜಲ ವಿಚಾರ ಬಂದಾಗ ನಮ್ಮ ಜನರಿಗೋಸ್ಕರ ಹೋರಾಟ ಮಾಡುತ್ತೇವೆ.

    ಬೆಳ್ಳಿಯ ಬಾಗಿಲು ಚಿನ್ನದ ದೇಗುಲ, ಒಳಗಡೆ ಬಹು ಮುತ್ತು ರತ್ನ, ಬೀಗರ ಕೈ ತಂದು ಬಾಗಿಲನ್ನು ತೆಗೆಯಲು ನೀನು ಒಮ್ಮೆ ಮಾಡು ಪ್ರಯತ್ನ ಎಂದು ನಟಿ ಪದ್ಯ ಹೇಳಿದರು. ಎಂತಹ ಖಜಾನೆಗೂ ಒಂದು ಬೀಗದ ಕೈ ಇದ್ದೆ ಇರುತ್ತೆ, ಹಾಗೆಯೇ ಎಲ್ಲಾ ಸಮ್ಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ ಅದನ್ನು ನಾವು ಬಗೆಹರಿಸಬೇಕು ಎಂದು ಹೇಳುವ ಮೂಲಕ ಹೋರಾಟಕ್ಕೆ ನಟಿ ಹುರುಪು ನೀಡಿದ್ದಾರೆ.

    ಈ ಹೋರಾಟದಲ್ಲಿ ಶಿವರಾಜ್‌ಕುಮಾರ್, ಶ್ರೀಮುರಳಿ, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಉಮಾಶ್ರೀ, ನವೀನ್ ಕೃಷ್ಣ, ಲೂಸ್ ಮಾದ, ಪ್ರಮೀಳಾ ಜೋಷಾಯ್, ಸುಂದರ್ ರಾಜ್ ಸೇರಿದಂತೆ ಹಲವು ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ತಾಜ್ ಮಹಲ್’ ಚಿತ್ರಕ್ಕೆ 16ರ ಸಂಭ್ರಮ : ನಿರ್ದೇಶಕ ಆರ್.ಚಂದ್ರು ಸಿನಿಯಾನ

    ‘ತಾಜ್ ಮಹಲ್’ ಚಿತ್ರಕ್ಕೆ 16ರ ಸಂಭ್ರಮ : ನಿರ್ದೇಶಕ ಆರ್.ಚಂದ್ರು ಸಿನಿಯಾನ

    ಣ್ಣ ಹಳ್ಳಿಯಿಂದ ಬಂದು, ಇಂದು ‘ಕಬ್ಜ’ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಭಾರತದಾದ್ಯಂತ  ಹೆಸರು‌ ಮಾಡಿರುವ ನಿರ್ದೇಶಕ ಆರ್.ಚಂದ್ರು (R. Chandru) ಅವರ ಸಿನಿಯಾನಕ್ಕೆ ಈಗ ಹದಿನಾರನೇ ವಸಂತ. ಅವರ ನಿರ್ದೇಶನದ ಚೊಚ್ಚಲ ಸಿನಿಮಾ ‘ತಾಜ್ ಮಹಲ್’ (Taj Mahal) ತೆರೆಕಂಡು ಹದಿನೈದು ವರ್ಷ ಪೂರ್ಣಗೊಳಿಸಿದೆ.

    ಆರ್.ಚಂದ್ರು ನಿರ್ದೇಶನದ ಮೊದಲ ಚಿತ್ರ ‘ತಾಜ್ ಮಹಲ್’ ತೆರೆಕಂಡು ಜುಲೈ 25ಕ್ಕೆ ಹದಿನೈದು ವರ್ಷಗಳಾಗಿವೆ. (2008 ಜುಲೈ 25 ಈ ಚಿತ್ರ ಬಿಡುಗಡೆಯಾಗಿತ್ತು) ಶಿವಶಂಕರ್ ‌ರೆಡ್ಡಿ ನಿರ್ಮಿಸಿದ್ದ ಹಾಗೂ ಅಜೇಯ್ ರಾವ್ (Ajay Rao) ಹಾಗೂ ಪೂಜಾ ಗಾಂಧಿ (Pooja Gandhi) ನಾಯಕ, ನಾಯಕಿಯಾಗಿ ನಟಿಸಿದ್ದ ಈ ಚಿತ್ರ ಕರ್ನಾಟಕದಾದ್ಯಂತ ಭರ್ಜರಿ ಯಶಸ್ಸು ಕಂಡಿತ್ತು. ಇದನ್ನೂ ಓದಿ:ತಮಿಳು ‘ಜೈಲರ್’ ವಿರುದ್ದ ಮಲಯಾಳಂ ‘ಜೈಲರ್’ ರಿಲೀಸ್: ರಜನಿ ಸಿನಿಮಾಗೆ ಟಕ್ಕರ್

    ಅನೇಕ ಚಿತ್ರಮಂದಿರಗಳಲ್ಲಿ 200ಕ್ಕೂ ಅಧಿಕ ದಿನಗಳ ಕಾಲ ಈ ಸಿನಿಮಾ ಪ್ರದರ್ಶನವಾಗಿತ್ತು. ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲೇ ಆರ್.ಚಂದ್ರು ಡಬಲ್ ಸೆಂಚುರಿ ಬಾರಿಸಿದ್ದರು. ನಂತರದ ದಿನಗಳಲ್ಲಿ ಆರ್. ಚಂದ್ರು,  ತಾಜ್ ಮಹಲ್  ಚಂದ್ರು ಅಂತಲೇ ಪ್ರಸಿದ್ದರಾದರು. ಈ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅಭಿಮಾನ್ ರಾಯ್ ಅವರಿಗೆ ರಾಜ್ಯಪ್ರಶಸ್ತಿ ಸಹ ಬಂದಿತ್ತು. ಈ ಚಿತ್ರ 2010 ರಲ್ಲಿ ತಾಜ್ ಮಹಲ್ ಶೀರ್ಷಿಕೆಯಲ್ಲೇ ತೆಲುಗಿನಲ್ಲೂ ಬಿಡುಗಡೆಯಾಗಿತ್ತು.

    ಆನಂತರದ ದಿನಗಳಲ್ಲಿ ಆರ್.ಚಂದ್ರು ಕನ್ನಡದ ಹೆಸರಾಂತ ನಾಯಕ ನಟರ ಸಿನಿಮಾಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗಕ್ಕೆ ಸೂಪರ ಹಿಟ್ ಚಿತ್ರಗಳನ್ನು ನೀಡಿದರು. ನಿರ್ಮಾಪಕರಾಗಿಯೂ ಆರ್ ಚಂದ್ರು ಜನಪ್ರಿಯರಾದರು.

    ತಾಜ್ ಮಹಲ್ ನಿಂದ ಇತ್ತೀಚೆಗೆ ತೆರೆಕಂಡ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ತನಕ ಆರ್. ಚಂದ್ರು ಯಶಸ್ಸಿನ ಸಿನಿಮಾ ಯಾನ ಮುಂದುವರೆದುಕೊಂಡು ಬಂದಿದೆ.  ತಮ್ಮ ಸಿನಿ ಜರ್ನಿಗೆ 15 ವರ್ಷಗಳು ತುಂಬಿರುವ ಈ ಸುಸಂದರ್ಭದಲ್ಲಿ ಆರ್‌ ಚಂದ್ರು ತಮಗೆ ಸಹಕಾರ ನೀಡಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರಿಯನಟಿ ಲೀಲಾವತಿ ಮನೆಯಲ್ಲಿ ಕನ್ನಡ ಕಲಾವಿದರ ಕಲರವ

    ಹಿರಿಯನಟಿ ಲೀಲಾವತಿ ಮನೆಯಲ್ಲಿ ಕನ್ನಡ ಕಲಾವಿದರ ಕಲರವ

    ಹಿಳಾ ದಿನದ ಅಂಗವಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಿರಿಯ ನಟಿ ಲೀಲಾವತಿ (Leelavati) ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಈ ಹಿಂದೆಯೇ ಆಯೋಜಿಸಿತ್ತು. ಆದರೆ ವಯೋಸಹಜ ಕಾಯಿಲೆ ಅವರು ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ. ಹೀಗಾಗಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಅವರ ತೋಟದ ಮನೆಗೆ ಭೇಟಿ ನೀಡಿ ಹಿರಿಯ ನಟಿಯನ್ನು ಕನ್ನಡ ಕಲಾಬಳಗ ಸನ್ಮಾನ ಮಾಡುವ ಕಾರ್ಯಕ್ರಮ ಇಂದು ನೆರವೇರಿತು.

    ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರು ನಮ್ಮಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ಪ್ರದಾನ ಮಾಡಿ ಹಿರಿಯ ಚೇತನವನ್ನು ಗೌರವಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಕಲಾಬಳಗವೇ ಲೀಲಾವತಿ ಅವರ ಮನೆಗೆ ಆಗಮಿಸಿತ್ತು.  ಹಿರಿಯ ನಟರಾದ ಶ್ರೀಧರ್,  ದೊಡ್ಡಣ್ಣ, ಸುಂದರ್ ರಾಜ್,  ಜೈಜಗದೀಶ್, ಹಿರಿಯ ನಟಿಗಿರಿಜಾ ಲೋಕೇಶ್, ಪದ್ಮಾವಸಂತಿ, ಅಂಜಲಿ, ಭವ್ಯ, ನಿರ್ದೇಶಕ ಸಾಯಿಪ್ರಕಾಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ನಟಿ ಪೂಜಾಗಾಂಧಿ (Pooja Gandhi), ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್ (B.M. Harish)ಹಾಗೂ ಮಂಡಳಿ ಸದಸ್ಯರು ಸೇರಿದಂತೆ 50ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ:‘ಬಾಹುಬಲಿ’ ಪ್ರಭಾಸ್‌ಗೆ ಸ್ಟಾರ್ ನಟ ಕಮಲ್ ಹಾಸನ್ ವಿಲನ್

    ಇದೇ ವೇಳೆ ನಟ ನಟಿಯರು ಲೀಲಾವತಿಯವರೊಂದಿಗೆ ಇದ್ದ ಒಡನಾಟವನ್ನು ಹಂಚಿಕೊಂಡರು. ನಟ ನಟಿಯರನ್ನು ಬರಮಾಡಿಕೊಂಡ ಲೀಲಾವತಿ ಅವರ ಮಗ ವಿನೋದ್ ರಾಜ್ (Vinod Raj) ಕಲಾವಿದರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಿದರು. ಲೀಲಾವತಿ ಅವರ ಸಿನಿಮಾಗಳ ಹಾಡುಗಳ, ನೃತ್ಯ ಕಾರ್ಯಕ್ರಮದ ಹೈಲೆಟ್ಸ್.

  • ರಮ್ಯಾ ಈ ಗುಣ ನನಗೆ ಇಷ್ಟ, ಸಹನಟಿಗೆ ಪತ್ರ ಬರೆದ ಪೂಜಾ ಗಾಂಧಿ

    ರಮ್ಯಾ ಈ ಗುಣ ನನಗೆ ಇಷ್ಟ, ಸಹನಟಿಗೆ ಪತ್ರ ಬರೆದ ಪೂಜಾ ಗಾಂಧಿ

    ಮೋಹಕತಾರೆ ರಮ್ಯಾರಂತೆಯೇ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪೂಜಾ ಗಾಂಧಿ ಗುರುತಿಸಿಕೊಂಡಿದ್ದಾರೆ. ಸದ್ಯ ರಾಜಕೀಯದಿಂದ ದೂರವಿರೋ ಪೂಜಾ ಗಾಂಧಿ ತಮ್ಮ ಮುಂದಿನ ಸಿನಿಮಾ `ಸಂಹಾರಿಣಿ’ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಆಗಾಗ ಕನ್ನಡದ ವಿಚಾರವಾಗಿ ಗಮನ ಸೆಳೆಯುವ ಪೂಜಾ ಗಾಂಧಿ (Pooja Gandhi) ಇದೀಗ ಸಹನಟಿ ರಮ್ಯಾಗೆ (Ramya)  ಕನ್ನಡದಲ್ಲೊಂದು ಪತ್ರ ಬರೆದಿದ್ದಾರೆ. ರಮ್ಯಾರನ್ನ ಪೂಜಾ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಸಿಹಿಸುದ್ದಿ ಹಂಚಿಕೊಂಡ `ರಾಧಾ ಕಲ್ಯಾಣ’ ಸೀರಿಯಲ್ ನಟಿ ರಾಧಿಕಾ ರಾವ್

    `ಮುಂಗಾಳು ಮಳೆ’ (Mungarumale) ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ನಟಿ ಪೂಜಾ ಗಾಂಧಿ ಅವರು ಕೃಷ್ಣ, ಮಿಲನ, ದಂಡುಪಾಳ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ರಾಜಕೀಯದಲ್ಲೂ ಗುರುತಿಸಿಕೊಂಡರು. ಇದೀಗ ಕನ್ನಡಿಗರು ಕಾಯುತ್ತಿರುವ ವೀಕೆಂಡ್ ವಿತ್ ರಮೇಶ್ ಶೋ ನೋಡೋಕೆ ನಾನು ಕಾಯ್ತಾ ಇದ್ದೀನಿ ಎಂದು ಪೂಜಾ ಪತ್ರ ಬರೆದಿದ್ದಾರೆ.

    ರಮೇಶ್ ಸರ್, ನಿಮ್ಮ ಮತ್ತು ರಮ್ಯ ಮಧ್ಯೆ ನಡೆಯುವ ಮಾತಿನ ಜುಗಲ್‌ಬಂದಿ ನೋಡೋದಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನೂ ಕೂಡ ಕಾತರದಿಂದ ಕಾಯುತ್ತಿದ್ದೇನೆ. ರಮ್ಯಾ ಒಳ್ಳೆಯ ವ್ಯಕ್ತಿ. ಅವರಿಗೆ ಏನು ಅನಿಸುತ್ತದೆಯೋ ಅದನ್ನೇ ಹೇಳುತ್ತಾರೆ ಎಂದು ಪೂಜಾ ಪತ್ರ ಆರಂಭ ಮಾಡಿದ್ದಾರೆ.

    ನನಗೆ ವೈಯಕ್ತಿಕವಾಗಿ ರಮ್ಯಾ ಯಾಕೆ ಇಷ್ಟ ಆಗ್ತಾರೆ ಅಂದ್ರೆ, ಅವರು ತಮ್ಮ ಸಹ ಕಲಾವಿದರ ಪರವಾಗಿ ನಿಲ್ಲುತ್ತಾರೆ. ಅವರಲ್ಲಿನ ಈ ಗುಣ ನನಗೆ ಇಷ್ಟ ಆಗುತ್ತದೆ. ನನಗೆ ಈಗಲೂ ನೆನಪಿದೆ. ರಾಯಚೂರಿನ ಚುನಾವಣೆಯಲ್ಲಿ ನಾನು ಕೆಟ್ಟದಾಗಿ ಸೋತಾಗ, ಪೂಜಾ ಒಳ್ಳೆಯ ಪ್ರಯತ್ನ ಮಾಡಿದ್ದೀರಿ ಎಂದು ರಮ್ಯಾ ಹೇಳಿದ್ದರು. ರಮ್ಯಾ ನಿಮ್ಮ ಪ್ರೊಡಕ್ಷನ್ ಕಂಪನಿಗೆ ಶುಭಾವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕನ್ನಡ ಸಿನಿಮಾಗಳು ಮೂಡಿ ಬರಲಿ ಎಂದು ನಟಿ ಪೂಜಾ ಗಾಂಧಿ ಶುಭಹಾರೈಸಿದ್ದಾರೆ. ನಟಿಯ ಪೋಸ್ಟ್‌ಗೆ ರಮ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಅಂದಹಾಗೆ ರಮ್ಯಾ ಜೊತೆಗಿನ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮಕ್ಕೆ ಕೌಂಟ್‌ಡೌನ್‌ ಶುರುವಾಗಿದೆ.  ಮಾರ್ಚ್‌ 25ರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

  • ಪೂಜಾ ಗಾಂಧಿ ಕನ್ನಡ ಪ್ರೀತಿಗೆ ಭೇಷ್ ಎಂದ ಕನ್ನಡಿಗರು

    ಪೂಜಾ ಗಾಂಧಿ ಕನ್ನಡ ಪ್ರೀತಿಗೆ ಭೇಷ್ ಎಂದ ಕನ್ನಡಿಗರು

    ಳೆ ಹುಡುಗಿ ಪೂಜಾ ಗಾಂಧಿ (Pooja Gandhi) ಅವರು ಇದೀಗ ಕನ್ನಡದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸಿನಿಮಾ (Film)  ಮತ್ತು ರಾಜಕೀಯ (Politics)  ಕ್ಷೇತ್ರದಲ್ಲಿ ಸೈ ಎನಿಸಿಕೊಂಡಿದ್ದ ಚೆಲುವೆ ಪೂಜಾ ಅವರ ಕನ್ನಡ ಪ್ರೀತಿಗೆ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ. ನಟಿಯ ಹೊಸ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದಲ್ಲಿ ಸೊಂಟ ಬಳುಕಿಸಲು ಸಜ್ಜಾದ ನಟಿ ಶ್ರೀಲೀಲಾ

    `ಮುಂಗಾರುಮಳೆ’ (Mungaru Male) ಚಿತ್ರದ ನಟಿ ಪೂಜಾ ಗಾಂಧಿ (Pooja Gandhi) ಅವರ ಕನ್ನಡದ ಪ್ರೇಮ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕುವೆಂಪು ವಿಮಾನ ನಿಲ್ದಾಣದ ಉದ್ಘಾಟನೆ ಸಂದಭ೯ದಲ್ಲಿ ಶಿವಮೊಗ್ಗೆಯ ಕನ್ನಡಿಗರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ ಪೂಜಾ ಗಾಂಧಿ ಅವರು ಕನ್ನಡಿಗರಿಗೆ ಖುಷಿ ನೀಡುವ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ.

    ಇತ್ತೀಚಿಗೆ ಡಾ.ರಾಜ್ (Dr. Rajkumar) ಅವರು ಹಾಡಿದ್ದ ಜೇನಿನ ಹೊಳೆಯೋ, ಹಾಲಿನ ಮಳೆಯೋ ಸಾಂಗ್‌ನ್ನ ಪೂಜಾ ಗಾಂಧಿ ಅವರು ಹಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ `ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಎಂದು ಬರಹ ಬರೆದುಕೊಂಡು, “ಬಾರಿಸು ಕನ್ನಡ ಡಿಂಡಿಮವ” ಹಾಡನ್ನು ಪೂಜಾ ಅವರೇ ಬರೆದಿರುವ ಹಾಳೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಾಳಿ ಹುಡುಗಿ ಪೂಜಾ ಅವರು ಕನ್ನಡದಲ್ಲಿ ಬರೆದ ಕವಿತೆ ಕನ್ನಡಿಗರ ಮನಸ್ಸು ಗೆದ್ದಿದೆ.

    ಕನ್ನಡಿಗರೇ ಆಗಿದ್ದರು ಕನ್ನಡದ ನಟಿಮಣಿಯರಿಗೆ ಕನ್ನಡದ ಬಗ್ಗೆ ಒಲವು ಕಮ್ಮಿಯಾಗಿರುವ ಈ ಸಮಯದಲ್ಲಿ ಬೆಂಗಾಳಿ ನಟಿ ಪೂಜಾ ಕನ್ನಡ ಚಿತ್ರಗಳಲ್ಲಿ ನಟಿಸಿ, ಕನ್ನಡ ಬರವಣಿಗೆ ಜೊತೆಗೆ ಕನ್ನಡ ಕಲಿತು ಸಾಗುತ್ತಿರೋದನ್ನ ನೋಡಿ ನಟಿಯ ಪ್ರಯತ್ನಕ್ಕೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.

  • ದಂಡುಪಾಳ್ಯ ನಿರ್ದೇಶಕನ ಮತ್ತೊಂದು ಸಿನಿಮಾ ‘ಹುಬ್ಬಳ್ಳಿ ಡಾಬಾ’

    ದಂಡುಪಾಳ್ಯ ನಿರ್ದೇಶಕನ ಮತ್ತೊಂದು ಸಿನಿಮಾ ‘ಹುಬ್ಬಳ್ಳಿ ಡಾಬಾ’

    ಶ್ರೀನಿವಾಸರಾಜು (Srinivas Raju) ನಿರ್ದೇಶನದ, ಚರಣ್ ಅರ್ಜುನ್ ಸಂಗೀತ ನೀಡಿರುವ “ಹುಬ್ಬಳ್ಳಿ ಡಾಬಾ” (Hubli Dhaba)  ಚಿತ್ರದ ಹಾಡೊಂದು‌ ಆದಿತ್ಯ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.  ಡಾ||ವಿ.ನಾಗೇಂದ್ರಪ್ರಸಾದ್ ಈ ಹಾಡನ್ನು ಬರೆದಿದ್ದಾರೆ. ಮೋಹನ ಭೋಗರಾಜು ಹಾಡಿರುವ ಈ  ಹಾಡು ಮೆಚ್ಚುಗೆ ಪಡೆಯುತ್ತಿದೆ.  ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ನವೆಂಬರ್ 4 ರಂದು ತೆರೆಗೆ ಬರಲಿದೆ.

    “ದಂಡುಪಾಳ್ಯ”, ” ಶಿವಂ” ಸೇರಿದಂತೆ ವಿಭಿನ್ನ ರೀತಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಅವರ ನಿರ್ದೇಶನದ 10ನೇ ಚಿತ್ರವಿದು. ನಿರ್ದೇಶಕರೆ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. “ಹುಬ್ಬಳ್ಳಿ ಡಾಬಾ” ಚಿತ್ರ ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿದ್ದು, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದೆ. ನವೆಂಬರ್ 4 ರಂದು ಎರಡೂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಇದನ್ನೂ ಓದಿ:ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ

    ನವೀನ್ ಚಂದ್ರ, ದಿವ್ಯ ಪಿಳ್ಳೈ, ಅನನ್ಯ ಸೇನ್ ಗುಪ್ತ, ರವಿಶಂಕರ್ (Ravi Shankar), ರಾಜಾ ರವೀಂದರ್, ಅಯ್ಯಪ್ಪ ಶರ್ಮ, ನಾಗಾ ಬಾಬು, ಪೃಥ್ವಿ, ಪೂಜಾ ಗಾಂಧಿ (Pooja Gandhi), ರವಿ ಕಾಳೆ, ಪೆಟ್ರೋಲ್ ಪ್ರಸನ್ನ, ಡ್ಯಾನಿ ಕುಟ್ಟಪ್ಪ, ಮುನಿರಾಜು, ಜೈದೇವ್ ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  ವೆಂಕಟ್ ಪ್ರಸಾದ್ ಛಾಯಾಗ್ರಹಣ, ಗ್ಯಾರಿ ಬಿ.ಹೆಚ್ ಸಂಕಲನ ಹಾಗೂ ವೆಂಕಟ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]