Tag: Pooja Dadwal

  • ದೇವ್ರ ಬದ್ಲು ಸಲ್ಮಾನ್ ಫೋಟೋವನ್ನು ಪೂಜಿಸ್ತೇನೆ- ಟೀ ಕುಡಿಯಲು ಪರದಾಡ್ತಿದ್ದ ನಟಿ

    ದೇವ್ರ ಬದ್ಲು ಸಲ್ಮಾನ್ ಫೋಟೋವನ್ನು ಪೂಜಿಸ್ತೇನೆ- ಟೀ ಕುಡಿಯಲು ಪರದಾಡ್ತಿದ್ದ ನಟಿ

    ಮುಂಬೈ: ಟೀ ಕುಡಿಯಲು ಪರದಾಡುತ್ತಿದ್ದ ನಟಿ ಪೂಜಾ ದದ್ವಾಲ್ ಅವರಿಗೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಸಹಾಯ ಮಾಡಿದ್ದರು. ಇದೀಗ ಪೂಜಾ ಹೊಸದೊಂದು ಮನೆ ನಿರ್ಮಿಸಿ ಸಲ್ಮಾನ್ ಖಾನ್ ಫೋಟೋ ಇಟ್ಟು ಪೂಜೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಪೂಜಾ 2018ರಲ್ಲಿ ಕ್ಷಯ ರೋಗ (ಟಿಬಿ) ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಅವರು 6 ತಿಂಗಳವರೆಗೂ ಮುಂಬೈನ ಶಿವಾಡಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಹಣಕಾಸಿನ ತೊಂದರೆಯಿಂದಾಗಿ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಈ ವಿಷಯ ನಟ ಸಲ್ಮಾನ್ ಖಾನ್ ಅವರಿಗೆ ಗೊತ್ತಾಗುತ್ತಿದ್ದಂತೆ ಅವರು ಪೂಜಾ ಅವರ ಖರ್ಚುಗಳನ್ನು ನೋಡಿಕೊಂಡಿದ್ದಾರೆ. ಇದನ್ನೂ ಓದಿ: ಅಂದು ಸಲ್ಮಾನ್ ಖಾನ್ ಜೊತೆ ನಟಿಸಿದ್ದ ನಟಿಗೆ ಇಂದು ಟೀ ಕುಡಿಯಲು ಹಣವಿಲ್ಲ!

    ಇತ್ತೀಚೆಗೆ ಪೂಜಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಚಿತ್ರರಂಗಕ್ಕೆ ಹಿಂದಿರುಗುವುದಾಗಿ ಹೇಳಿದ್ದಾರೆ. ಸದ್ಯ ಆರೋಗ್ಯದ ಸ್ಥಿತಿಯಲ್ಲಿ ಸುಧಾರಿಸಿದೆ. ನಾನು ಚಿತ್ರರಂಗವನ್ನು 2 ದಶಕಗಳ ಹಿಂದೆ ಬಿಟ್ಟಿದ್ದೆ. ಆದರೆ ಈಗ ನಾನು ಹಿಂದಿರುಗಲು ಇಷ್ಟಪಡುತ್ತೇನೆ. ಕಿರುತೆರೆ, ಬೆಳ್ಳಿತೆರೆ ಅಥವಾ ಡಿಜಿಟಲ್ ಮೀಡಿಯಾದಲ್ಲಿ ನನಗಾಗುವ ಕೆಲಸವನ್ನು ನಾನು ಮಾಡುತ್ತೇನೆ ಎಂದರು.  ಇದನ್ನೂ ಓದಿ: ಟೀ ಕುಡಿಯಲು ಹಣವಿಲ್ಲದೇ ಪರದಾಡಿದ ನಟಿಯ ಸಹಾಯಕ್ಕೆ ಬಂದ್ರು ಸೂಪರ್ ಸ್ಟಾರ್!

    ಸಂದರ್ಶನದಲ್ಲಿ ಪೂಜಾ ಮೊದಲು ತನಗಿದ್ದ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ. ಮೊದಲು ನನಗೆ ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದು ಗೊತ್ತಿರಲಿಲ್ಲ. ನಾನು ಪದೇ ಪದೇ ರಕ್ತ ವಾಂತಿ ಮಾಡುತ್ತಿದ್ದೆ. ಅಲ್ಲದೆ ನನ್ನ ತಲೆಕೂದಲು ಕೂಡ ಸಾಕಷ್ಟು ಉದುರುತ್ತಿತ್ತು. ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದನ್ನು ನೋಡಿ ನನ್ನ ಪತಿ ಹಾಗೂ ಮಕ್ಕಳು ನನ್ನನ್ನು ಬಿಟ್ಟು ದೂರ ಹೋದರು ಎಂದು ಪೂಜಾ ತಮ್ಮ ನೋವಿನ ದಿನಗಳನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಟೀ ಕುಡಿಯಲು ಪರದಾಡ್ತಿದ್ದ ನಟಿಯ ವಿಡಿಯೋಗೆ ಕೊನೆಗೂ ಪ್ರತಿಕ್ರಿಯಿಸಿದ ಸಲ್ಮಾನ್!

    ನನ್ನ ಸ್ನೇಹಿತ, ನಿರ್ದೇಶಕ ರಾಜೇಂದ್ರ ಸಿಂಗ್ ಅವರಿಗೆ ಕರೆ ಮಾಡಿ ನನ್ನ ಆರೋಗ್ಯದ ಬಗ್ಗೆ ಹೇಳಿಕೊಂಡೆ. ಆಗ ಅವರು ತಕ್ಷಣ ಮುಂಬೈಗೆ ಟಿಕೆಟ್ ಬುಕ್ ಮಾಡಿದ್ದರು. ನಾನು ಮುಂಬೈಗೆ ತಲುಪಿದಾಗ ಅವರು ನನ್ನನ್ನು ನೋಡಿ ಶಾಕ್ ಆದರು. ಏಕೆಂದರೆ ನಾನು ಕೇವಲ 26 ಕೆಜಿ ತೂಕವಿದ್ದೆ. ಬಳಿಕ ಅವರು ಶಿವಾಡಿ ಟಿಬಿ ಆಸ್ಪತ್ರೆಗೆ ದಾಖಲಿಸಿದ್ದರು. ದರೆ ಹಣದ ಸಮಸ್ಯೆಯಿದ್ದ ಕಾರಣ ಚಿಕಿತ್ಸೆ ಪಡೆಯುವಾಗ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಪೂಜಾ ತಿಳಿಸಿದ್ದಾರೆ.

    ನಾನು ಅನಾರೋಗ್ಯದಿಂದ ಬಳಲುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಆಗ ಸಲ್ಮಾನ್‍ಗೆ ನನ್ನ ಬಗ್ಗೆ ತಿಳಿದು ಅವರು ನನಗೆ ಸಹಾಯ ಮಾಡಿದ್ದರು. ಅವರ ಸಂಸ್ಥೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದ್ದರು. ಆದರೆ ನಾನು ಶಿವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದೆ. ಏಕೆಂದರೆ ಅಲ್ಲಿ ಕಾಯಿಲೆ ತುಂಬಾ ಬೇಗ ಗುಣವಾಗುತ್ತೆ ಎಂದು ಕೇಳಿದ್ದೆ. ಸಲ್ಮಾನ್ ಸಂಸ್ಥೆ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಯನ್ನಾಗಿ ಮಾಡಿ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದು ಪೂಜಾ ಹೇಳಿದ್ದಾರೆ.

    ನಾನು ಆಸ್ಪತ್ರೆಯಲ್ಲಿದ್ದಾಗ 2 ದಿನದಲ್ಲಿ 9 ಮಂದಿ ಮೃತಪಟ್ಟಿರುವುದನ್ನು ನೋಡಿದೆ. ಅವರು ಮೃತಪಟ್ಟಾಗ ಈಗ ನನ್ನ ಸರದಿ ಎಂದು ಎನಿಸುತ್ತಿತ್ತು. ಆದರೆ ಸಲ್ಮಾನ್ ನನಗೆ ಹೊಸ ಜೀವನವನ್ನು ನೀಡಿದ್ದಾರೆ. ನಾನು ಈಗ ಬದುಕುವುದನ್ನು ಕಲಿತಿದ್ದು, ಮತ್ತೆ ನಟನೆ ಮಾಡುತ್ತೇನೆ. ನನ್ನ ಸಂಪಾದನೆಯಿಂದ ಒಂದು ಮನೆ ಕಟ್ಟಿಸಿ ದೇವರ ಫೋಟೋ ಬದಲು ಸಲ್ಮಾನ್ ಫೋಟೋ ಇಟ್ಟು ಪೂಜೆ ಮಾಡುತ್ತೇನೆ. ಈಗ ಸಲ್ಮಾನ್‍ರನ್ನು ಭೇಟಿ ಮಾಡಿ ಅವರ ಕಾಲು ಮುಟ್ಟಿ ಧನ್ಯವಾದ ತಿಳಿಸಬೇಕು ಎಂದು ಪೂಜಾ ಹೇಳಿದ್ದಾರೆ.

    ಪೂಜಾ 90ರ ದಶಕದ ನಟಿಯಾಗಿದ್ದು, ಸಲ್ಮಾನ್ ಖಾನ್ ಜೊತೆ `ವೀರ್ ಗತಿ’ ಚಿತ್ರದಲ್ಲಿ ನಟಿಸಿದ್ದರು. ಪೂಜಾ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಕೂಡ ಹಣವಿಲ್ಲದೇ ಪರದಾಡುತ್ತಿದ್ದಾಗ ಭೋಜ್‍ಪುರಿ ಸೂಪರ್ ಸ್ಟಾರ್ ರವಿ ಕಿಶನ್ ಪೂಜಾ ಅವರ ಸಹಾಯಕ್ಕೆ ಬಂದಿದ್ದರು.

  • ಅಂದು ಟೀ ಕುಡಿಯಲು ಪರದಾಡಿದ್ದ ನಟಿಯಿಂದ ಇಂದು ಸಲ್ಮಾನ್ ಖಾನ್‍ಗೆ ಹೊಗಳಿಕೆ!

    ಅಂದು ಟೀ ಕುಡಿಯಲು ಪರದಾಡಿದ್ದ ನಟಿಯಿಂದ ಇಂದು ಸಲ್ಮಾನ್ ಖಾನ್‍ಗೆ ಹೊಗಳಿಕೆ!

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ `ವೀರ್ ಗತಿ’ ಚಿತ್ರದಲ್ಲಿ ನಟಿಸಿ ಆಗಿನ ಕಾಲದಲ್ಲಿ ಪ್ರಸಿದ್ಧ ನಟಿಯಾಗಿದ್ದ ಪೂಜಾ ದಡ್ವಾಲ್ ಆರೋಗ್ಯದಲ್ಲಿ ಈಗ ಸುಧಾರಣೆ ಕಂಡಿದೆ. ಈಗ ಸಂಪೂರ್ಣ ಗುಣವಾಗಿ ಪೂಜಾ, ಭಾಯಿಜಾನ್ ಸಲ್ಮಾನ್ ಖಾನ್ ಅವರನ್ನು ಹೊಗಳಿದ್ದಾರೆ.

    ಟಿಬಿ ಕಾಯಿಲೆಯಿಂದ ಬಳುತ್ತಿದ್ದ ಪೂಜಾ ದದ್ವಾಲ್ ಚಿಕಿತ್ಸೆ ಪಡೆಯಲು ಹಣವಿಲ್ಲದೇ ಸಲ್ಮಾನ್ ಖಾನ್ ಅವರ ಸಹಾಯದ ಮೊರೆ ಹೋಗಿದ್ದರು. ಪೂಜಾ ಕಷ್ಟಕ್ಕೆ ಸ್ಪಂದಿಸಿದ ಸಲ್ಮಾನ್ ತನ್ನ ಸಂಸ್ಥೆಯ ಮೂಲಕ ಪೂಜಾ ಅವರಿಗೆ ಹಣ ಹಾಗೂ ಬೇರೆ ವಸ್ತುಗಳನ್ನು ನೀಡಿ ಸಹಾಯ ಮಾಡಿದ್ದರು.

    ಮಾರ್ಚ್ ತಿಂಗಳಲ್ಲಿ ಪೂಜಾ ಆಸ್ಪತ್ರೆಗೆ ದಾಖಲಾದಾಗ ಅವರು ಕೇವಲ 23 ಕೆ.ಜಿ ತೂಕವಿದ್ದರು. ಆದರೆ ಈಗ ಕಾಯಿಲೆಯಿಂದ ಗುಣವಾಗಿದ್ದು 20 ಕೆಜೆ ತೂಕ ಹೆಚ್ಚಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಗುಣವಾದ ಪೂಜಾ ಈಗ ಗೋವಾಗೆ ತೆರೆಳುತ್ತಿದ್ದಾರೆ. ಅಲ್ಲದೇ ತನಗೆ ಸಹಾಯ ಮಾಡಿದ್ದಕ್ಕೆ ಸಲ್ಮಾನ್ ಖಾನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅಂದು ಸಲ್ಮಾನ್ ಖಾನ್ ಜೊತೆ ನಟಿಸಿದ್ದ ನಟಿಗೆ ಇಂದು ಟೀ ಕುಡಿಯಲು ಹಣವಿಲ್ಲ!

    ಸಲ್ಮಾನ್ ಬಗ್ಗೆ ಹೇಳಿದ್ದು ಹೀಗೆ
    ನನಗೆ ಹೇಗೆ ಅನುಭವ ಆಗುತ್ತಿದೆ ಎಂಬುದು ನಾನು ವಿವರಿಸಲು ಸಾಧ್ಯವಿಲ್ಲ. ಮಾರ್ಚ್ 2ರಂದು ನಾನು ಆಸ್ಪತ್ರೆಗೆ ದಾಖಲಾಗಿದ್ದಾಗ ಖಿನ್ನತೆಯ ವಾರ್ಡ್‍ನ ಕಾರ್ನರ್‍ನಲ್ಲಿ ಇದಿದ್ದನ್ನು ನೋಡಿ ನಾನು ಬದುಕುವುದಿಲ್ಲ ಎಂದು ನನಗೆ ಅನಿಸುತ್ತಿತ್ತು. ನನ್ನ ಕುಟುಂಬದವರು ಹಾಗೂ ನನ್ನ ಸ್ನೇಹಿತರು ನನ್ನನ್ನು ಬೀದಿ ಪಾಲು ಮಾಡಿದ್ದರು. ಅಲ್ಲದೇ ವೈದ್ಯರು ನನ್ನ ಶ್ವಾಸಕೋಶದಲ್ಲಿ ಸಮಸ್ಯೆಯಿದೆ ಎಂದು ಹೇಳಿದ್ದಾಗ ನಾನು ಸಂಪೂರ್ಣ ಭರವಸೆ ಕಳೆದುಕೊಂಡೆ. ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ನನ್ನ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ನಾನು ಅಲ್ಲಿ ನನ್ನಂತಹ ಬಹಳ ಜನರನ್ನು ನೋಡಿದೆ. ಅವರ ಕುಟುಂಬದವರು ಅವರನ್ನು ಬೀದಿ ಪಾಲು ಮಾಡಿದ್ದರು. ಆಗ ನಾನು ಸಾಯಬಾರದು, ಬದುಕಬೇಕೆಂದು ನಿರ್ಧರಿಸಿದೆ. ಇದನ್ನೂ ಓದಿ: ಟೀ ಕುಡಿಯಲು ಹಣವಿಲ್ಲದೇ ಪರದಾಡಿದ ನಟಿಯ ಸಹಾಯಕ್ಕೆ ಬಂದ್ರು ಸೂಪರ್ ಸ್ಟಾರ್!

    ನಾನು ಬದುಕಬೇಕು ಹಾಗೂ ನನ್ನ ಕಾಯಿಲೆ ವಿರುದ್ಧ ಹೋರಾಡಬೇಕೆಂದು ನಿರ್ಧರಿಸಿದೆ. ಅದಕ್ಕಾಗಿ ನಾನು ಸಲ್ಮಾನ್ ಖಾನ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಸಲ್ಮಾನ್ ಖಾನ್ ಅವರು ನನಗೆ ಸಹಾಯ ಮಾಡಿದ್ದಕ್ಕೆ ನಾನು ಅವರಿಗೆ ಚಿರಋಣಿಯಾಗಿರುತ್ತೇನೆ. ನನಗೆ ಬಟ್ಟೆ, ಸೋಪ್, ಡೈಪರ್, ಆಹಾರ, ಔಷಧಿಗಳಿಗೆ ಅವರ ಸಂಸ್ಥೆ ನೋಡಿಕೊಂಡಿದೆ. ನಾನು ಈಗ ಬದುಕಿದ್ದೇನೆ ಎಂದರೆ ಅದು ಸಲ್ಮಾನ್ ಖಾನ್ ಅವರಿಂದಾಗಿ ಎಂದು ಪೂಜಾ ತಿಳಿಸಿದ್ದಾರೆ. ಇದನ್ನೂ ಓದಿ: ಟೀ ಕುಡಿಯಲು ಪರದಾಡ್ತಿದ್ದ ನಟಿಯ ವಿಡಿಯೋಗೆ ಕೊನೆಗೂ ಪ್ರತಿಕ್ರಿಯಿಸಿದ ಸಲ್ಮಾನ್!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಟೀ ಕುಡಿಯಲು ಪರದಾಡ್ತಿದ್ದ ನಟಿಯ ವಿಡಿಯೋಗೆ ಕೊನೆಗೂ ಪ್ರತಿಕ್ರಿಯಿಸಿದ ಸಲ್ಮಾನ್!

    ಟೀ ಕುಡಿಯಲು ಪರದಾಡ್ತಿದ್ದ ನಟಿಯ ವಿಡಿಯೋಗೆ ಕೊನೆಗೂ ಪ್ರತಿಕ್ರಿಯಿಸಿದ ಸಲ್ಮಾನ್!

    ಮುಂಬೈ: ಟಿಬಿ ಯಿಂದ ಬಳಲುತ್ತಿರುವ ‘ವೀರ್ ಗತಿ’ ಚಿತ್ರದ ನಟಿ ಪೂಜಾ ದದ್ವಾಲ್ ವಿಡಿಯೋಗೆ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.

    ಪೂಜಾ ದದ್ವಾಲ್ ವಿಡಿಯೋ ಮೂಲಕ ಸಲ್ಮಾನ್ ಹತ್ತಿರ ಸಹಾಯ ಕೇಳಿದ್ದು, ಈಗ ಸಲ್ಮಾನ್ ಇದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ. ವರದಿಗಳ ಪ್ರಕಾರ ಸಲ್ಮಾನ್ ಪುಣೆಯಲ್ಲಿ ನಡೆದ ‘ದಿ ಬ್ಯಾಂಗ್ ಟೂರ್’ ಕನ್ಫರೆನ್ಸ್ ನಲ್ಲಿದ್ದಾಗ ಪೂಜಾ ಅವರ ಆರೋಗ್ಯದ ಸ್ಥಿತಿ ತಿಳಿದು ದುಃಖ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

    ಪೂಜಾ ಸಹಾಯಕ್ಕಾಗಿ ತಂಡವೊಂದನ್ನು ಆಕೆ ಇರುವ ಸ್ಥಳಕ್ಕೆ ಕಳುಹಿಸಿದ್ದೇನೆ. ಅಷ್ಟೇ ಅಲ್ಲದೇ ಪೂಜಾ ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ. ಸದ್ಯ ಪೂಜಾ ಅವರ ಚಿಕಿತ್ಸೆಗೆ 50 ಸಾವಿರ ರೂ. ಯನ್ನು ಕಳುಹಿಸಿಕೊಟ್ಟಿದ್ದೇನೆ. ಅವಶ್ಯಕತೆ ಇದ್ದರೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿಸುತ್ತೇನೆ ಎಂದು ನಟ ಸಲ್ಮಾನ್ ಖಾನ್ ತಿಳಿಸಿದ್ದಾರೆ.

    ಪೂಜಾ 90ರ ದಶಕದ ನಟಿಯಾಗಿದ್ದು, ಸಲ್ಮಾನ್ ಖಾನ್ ಜೊತೆ ‘ವೀರ್ ಗತಿ’ ಚಿತ್ರದಲ್ಲಿ ನಟಿಸಿದ್ದರು. ಪೂಜಾ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಕೂಡ ಹಣವಿಲ್ಲದೇ ಪರದಾಡುತ್ತಿದ್ದಾಗ ಭೋಜ್‍ಪುರಿ ಸೂಪರ್ ಸ್ಟಾರ್ ರವಿ ಕಿಶನ್ ಪೂಜಾ ಅವರ ಸಹಾಯಕ್ಕೆ ಬಂದಿದ್ದರು.

    ಭೋಜ್‍ಪುರಿ ನಟ ರವಿ ಕಿಶನ್ ಈ ಹಿಂದೆ ಪೂಜಾ ಜೊತೆ ನಟಿಸಿದ್ದರು. ಅವರು ಹೈದರಾಬಾದ್‍ನಲ್ಲಿ ಎಂಎಲ್‍ಎ ಚಿತ್ರದಲ್ಲಿ ಬ್ಯುಸಿಯಾಗಿದ್ದು, ತನ್ನ ಪರಿಚಯಸ್ಥರಿಂದ ಹಣ್ಣು ಹಾಗೂ ಹಣವನ್ನು ಪೂಜಾ ಗೆ ಕಳುಹಿಸಿಕೊಟ್ಟಿದ್ದರು. ವಿನಯ್ ಲಾಡ್ ನಿರ್ದೇಶನದಲ್ಲಿ ರವಿ ಕಿಶನ್ ಹಾಗೂ ಪೂಜಾ ದದ್ವಾಲ್ ನಟಿಸಿದ್ದು, ಈ ಹಿಂದೆ ರವಿ ಕಿಶನ್ ಹಲವರಿಗೆ ಈ ರೀತಿ ಸಹಾಯ ಮಾಡಿದ್ದರು ಎಂದು ರವಿಯ ಪರಿಚಯಸ್ಥರು ತಿಳಿಸಿದ್ದರು.

    ಕೆಲವು ದಿನಗಳ ಹಿಂದೆ ಪೂಜಾ, ನಾನು ಸುಮಾರು ಬಾರಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ನಾನು ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಮುಂಬೈನ ಶಿವಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ತಿಳಿಸಿದ್ದರು.

    ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದು 6 ತಿಂಗಳ ಹಿಂದೆ ನನಗೆ ತಿಳಿಯಿತು. ನಾನು ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿ ಸಹಾಯ ಕೇಳಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಅವರು ನನ್ನ ಈ ವಿಡಿಯೋ ನೋಡಿದರೆ ಸಹಾಯ ಮಾಡಬಹುದೆಂಬ ಆಶಯವಿದೆ. ಕಳೆದ 15 ದಿನಗಳಿಂದ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ಪೂಜಾ ಹೇಳಿದ್ದರು. ಇದನ್ನೂ ಓದಿ: ಅಂದು ಸಲ್ಮಾನ್ ಖಾನ್ ಜೊತೆ ನಟಿಸಿದ್ದ ನಟಿಗೆ ಇಂದು ಟೀ ಕುಡಿಯಲು ಹಣವಿಲ್ಲ!

    ನಾನು ಟಿಬಿ ಕಾಯಿಲೆಗೆ ತುತ್ತಾಗುವ ಮೊದಲು ಗೋವಾದ ಕೆಸಿನೋದಲ್ಲಿ ಹಲವು ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಈಗ ನನ್ನ ಹತ್ತಿರ ಹಣವಿಲ್ಲ ಹಾಗೂ ಒಂದು ಕಪ್ ಟೀ ಕುಡಿಯಲು ನಾನು ಇನ್ನೊಬ್ಬರ ಹತ್ತಿರ ಹಣ ಕೇಳುತ್ತಿದ್ದೇನೆ ಎಂದು ನಟಿ ಪೂಜಾ ವಿಡಿಯೋದಲ್ಲಿ ತಿಳಿಸಿದ್ದರು.

    ಪೂಜಾ ಆರೋಗ್ಯದ ಸಮಸ್ಯಯಿಂದ ಬಳಲುತ್ತಿರುವುದನ್ನು ನೋಡಿ ಆಕೆಯ ಪತಿ ಹಾಗೂ ಮಕ್ಕಳು ಆಕೆಯನ್ನು ಬಿಟ್ಟು ದೂರ ಹೋಗಿದ್ದಾರೆ ಎಂದು ನಟಿಯ ಹತ್ತಿರದವರು ತಿಳಿಸಿದ್ದರು. ಪೂಜಾ ವೀರ್ ಗತಿ ಚಿತ್ರ ಸೇರಿದಂತೆ ಹಿಂದೂಸ್ತಾನ್ ಹಾಗೂ ಸಿಂಧೂರ್ ಸೌಗಂಧ್ ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಟೀ ಕುಡಿಯಲು ಹಣವಿಲ್ಲದೇ ಪರದಾಡಿದ ನಟಿಯ ಸಹಾಯಕ್ಕೆ ಬಂದ್ರು ಸೂಪರ್ ಸ್ಟಾರ್!

  • ಟೀ ಕುಡಿಯಲು ಹಣವಿಲ್ಲದೇ ಪರದಾಡಿದ ನಟಿಯ ಸಹಾಯಕ್ಕೆ ಬಂದ್ರು ಸೂಪರ್ ಸ್ಟಾರ್!

    ಟೀ ಕುಡಿಯಲು ಹಣವಿಲ್ಲದೇ ಪರದಾಡಿದ ನಟಿಯ ಸಹಾಯಕ್ಕೆ ಬಂದ್ರು ಸೂಪರ್ ಸ್ಟಾರ್!

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ‘ವೀರ್ ಗತಿ’ ಚಿತ್ರದಲ್ಲಿ ನಟಿಸಿ ಆಗಿನ ಕಾಲದಲ್ಲಿ ಪ್ರಸಿದ್ಧ ನಟಿಯಾಗಿದ್ದ ಪೂಜಾ ದದ್ವಾಲ್ ಟಿಬಿಯಿಂದ ಬಳಲುತ್ತಿರುವ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಭೋಜ್‍ಪುರಿ ಸೂಪರ್ ಸ್ಟಾರ್ ರವಿ ಕಿಶನ್ ಪೂಜಾ ಅವರ ಸಹಾಯಕ್ಕೆ ಬಂದಿದ್ದಾರೆ.

    ಪೂಜಾ 90ರ ದಶಕದ ನಟಿಯಾಗಿದ್ದು, ಸಲ್ಮಾನ್ ಖಾನ್ ಜೊತೆ ವೀರ್ ಗತಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ಪೂಜಾ ಆರೋಗ್ಯದ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಕೂಡ ಹಣವಿಲ್ಲದೇ ಪರದಾಡುತ್ತಿದ್ದಾರೆ. ಈಗ ಭೋಜ್‍ಪುರಿ ಸೂಪರ್ ಸ್ಟಾರ್ ರವಿ ಕಿಶನ್ ಪೂಜಾ ಅವರ ಸಹಾಯಕ್ಕೆ ಬಂದಿದ್ದಾರೆ.

    ಭೋಜ್‍ಪುರಿ ನಟ ರವಿ ಕಿಶನ್ ಈ ಹಿಂದೆ ಪೂಜಾ ಜೊತೆ ನಟಿಸಿದ್ದರು. ಸದ್ಯ ಈಗ ಅವರು ಹೈದರಾಬಾದ್‍ನಲ್ಲಿ ಎಂಎಲ್‍ಎ ಚಿತ್ರದಲ್ಲಿ ಬ್ಯೂಸಿಯಾಗಿದ್ದು, ತನ್ನ ಪರಿಚಯಸ್ಥರಿಂದ ಹಣ್ಣು ಹಾಗೂ ಹಣವನ್ನು ಪೂಜಾ ಗೆ ಕಳುಹಿಸಿಕೊಟ್ಟಿದ್ದಾರೆ. ವಿನಯ್ ಲಾಡ್ ನಿರ್ದೇಶನದಲ್ಲಿ ರವಿ ಕಿಶನ್ ಹಾಗೂ ಪೂಜಾ ದದ್ವಾಲ್ ನಟಿಸಿದ್ದು, ಈ ಹಿಂದೆ ರವಿ ಕಿಶನ್ ಹಲವರಿಗೆ ಈ ರೀತಿ ಸಹಾಯ ಮಾಡಿದ್ದಾರೆ ಎಂದು ರವಿಯ ಪರಿಚಯಸ್ಥರು ತಿಳಿಸಿದ್ದಾರೆ.

    ಇತ್ತೀಚಿಗೆ ಪೂಜಾ, ನಾನು ಸುಮಾರು ಬಾರಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ನಾನು ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಮುಂಬೈನ ಶಿವಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ತಿಳಿಸಿದ್ದರು.

    ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದು 6 ತಿಂಗಳ ಹಿಂದೆ ನನಗೆ ತಿಳಿಯಿತು. ನಾನು ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿ ಸಹಾಯ ಕೇಳಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಅವರು ನನ್ನ ಈ ವಿಡಿಯೋ ನೋಡಿದರೆ ಸಹಾಯ ಮಾಡಬಹುದೆಂಬ ಆಶಯವಿದೆ. ಕಳೆದ 15 ದಿನಗಳಿಂದ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ಪೂಜಾ ಹೇಳಿದ್ದರು.

    ನಾನು ಟಿಬಿ ಕಾಯಿಲೆಗೆ ತುತ್ತಾಗುವ ಮೊದಲು ಗೋವಾದ ಕೆಸಿನೋದಲ್ಲಿ ಹಲವು ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಈಗ ನನ್ನ ಹತ್ತಿರ ಹಣವಿಲ್ಲ ಹಾಗೂ ಒಂದು ಕಪ್ ಟೀ ಕುಡಿಯಲು ನಾನು ಇನ್ನೊಬ್ಬರ ಹತ್ತಿರ ಹಣ ಕೇಳುತ್ತಿದ್ದೇನೆ ಎಂದು ನಟಿ ಪೂಜಾ ವಿಡಿಯೋದಲ್ಲಿ ತಿಳಿಸಿದ್ದರು.

    ಪೂಜಾ ಆರೋಗ್ಯದ ಸಮಸ್ಯಯಿಂದ ಬಳಲುತ್ತಿರುವುದನ್ನು ನೋಡಿ ಆಕೆಯ ಪತಿ ಹಾಗೂ ಮಕ್ಕಳು ಆಕೆಯನ್ನು ಬಿಟ್ಟು ದೂರ ಹೋಗಿದ್ದಾರೆ ಎಂದು ನಟಿಯ ಹತ್ತಿರದವರು ತಿಳಿಸಿದ್ದರು. ಪೂಜಾ ವೀರ್ ಗತಿ ಚಿತ್ರ ಸೇರಿದಂತೆ ಹಿಂದೂಸ್ತಾನ್ ಹಾಗೂ ಸಿಂಧೂರ್ ಸೌಗಂಧ್ ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಅಂದು ಸಲ್ಮಾನ್ ಖಾನ್ ಜೊತೆ ನಟಿಸಿದ್ದ ನಟಿಗೆ ಇಂದು ಟೀ ಕುಡಿಯಲು ಹಣವಿಲ್ಲ!

  • ಅಂದು ಸಲ್ಮಾನ್ ಖಾನ್ ಜೊತೆ ನಟಿಸಿದ್ದ ನಟಿಗೆ ಇಂದು ಟೀ ಕುಡಿಯಲು ಹಣವಿಲ್ಲ!

    ಅಂದು ಸಲ್ಮಾನ್ ಖಾನ್ ಜೊತೆ ನಟಿಸಿದ್ದ ನಟಿಗೆ ಇಂದು ಟೀ ಕುಡಿಯಲು ಹಣವಿಲ್ಲ!

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ‘ವೀರ್ ಗತಿ’ ಚಿತ್ರದಲ್ಲಿ ನಟಿಸಿ ಆಗಿನ ಕಾಲದಲ್ಲಿ ಪ್ರಸಿದ್ಧ ನಟಿಯಾಗಿದ್ದ ಪೂಜಾ ದಡ್ವಾಲ್ ಆರ್ಥಿಕ ಸ್ಥಿತಿ ಹದಗೆಟ್ಟಿದೆ.

    ಪೂಜಾ 90ರ ದಶಕದ ನಟಿಯಾಗಿದ್ದು, ಸಲ್ಮಾನ್ ಖಾನ್ ಜೊತೆ ವೀರ್ ಗತಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ಪೂಜಾ ಆರೋಗ್ಯದ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ಕೂಡ ಹಣವಿಲ್ಲದೇ ಪರದಾಡುತ್ತಿದ್ದಾರೆ.

    ನಾನು ಸುಮಾರು ಬಾರಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ನಾನು ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಮುಂಬೈನ ಶಿವಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ನಟಿ ಪೂಜಾ ತಿಳಿಸಿದ್ದಾರೆ.

    ನನಗೆ ಟಿಬಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇದೆ ಎಂದು 6 ತಿಂಗಳ ಹಿಂದೆ ನನಗೆ ತಿಳಿಯಿತು. ನಾನು ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿ ಸಹಾಯ ಕೇಳಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಅವರು ನನ್ನ ಈ ವಿಡಿಯೋ ನೋಡಿದ್ದರೆ ಸಹಾಯ ಮಾಡಬಹುದೆಂಬ ಆಶಯವಿದೆ. ಕಳೆದ 15 ದಿನಗಳಿಂದ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ ಎಂದು ಪೂಜಾ ಹೇಳಿದ್ದಾರೆ.

    ನಾನು ಟಿಬಿ ಕಾಯಿಲೆಗೆ ತುತ್ತಾಗುವ ಮೊದಲು ಗೋವಾದ ಕೆಸಿನೋದಲ್ಲಿ ಹಲವು ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಈಗ ನನ್ನ ಹತ್ತಿರ ಹಣವಿಲ್ಲ ಹಾಗೂ ಒಂದು ಕಪ್ ಟೀ ಕುಡಿಯಲು ನಾನು ಇನ್ನೊಬ್ಬರ ಹತ್ತಿರ ಹಣ ಕೇಳುತ್ತಿದ್ದೇನೆ ಎಂದು ನಟಿ ಪೂಜಾ ವಿಡಿಯೋದಲ್ಲಿ ತಿಳಿಸಿದ್ದಾರೆ.

    ಪೂಜಾ ಆರೋಗ್ಯದ ಸಮಸ್ಯಯಿಂದ ಬಳಲುತ್ತಿರುವುದನ್ನು ನೋಡಿ ಆಕೆಯ ಪತಿ ಹಾಗೂ ಮಕ್ಕಳು ಆಕೆಯನ್ನು ಬಿಟ್ಟು ದೂರ ಹೋಗಿದ್ದಾರೆ ಎಂದು ನಟಿಯ ಹತ್ತಿರದವರು ತಿಳಿಸಿದ್ದಾರೆ. ಪೂಜಾ ವೀರ್ ಗಟಿ ಚಿತ್ರ ಸೇರಿದಂತೆ ಹಿಂದೂಸ್ತಾನ್ ಹಾಗೂ ಸಿಂಧೂರ್ ಸೌಗಂದ್ ಚಿತ್ರದಲ್ಲಿ ನಟಿಸಿದ್ದಾರೆ.