Tag: pooja

  • ಶೂಟಿಂಗ್‌ಗೆ ಬಂದ ನಟಿಯ ತಾಯಿ ಜೊತೆ ಸಾಲ- ‘ರಣಾಕ್ಷ’ ನಿರ್ಮಾಪಕನ ಮೇಲೆ FIR ದಾಖಲು

    ಶೂಟಿಂಗ್‌ಗೆ ಬಂದ ನಟಿಯ ತಾಯಿ ಜೊತೆ ಸಾಲ- ‘ರಣಾಕ್ಷ’ ನಿರ್ಮಾಪಕನ ಮೇಲೆ FIR ದಾಖಲು

    ಸ್ಯಾಂಡಲ್‌ವುಡ್‌ನ ‘ರಣಾಕ್ಷ’ (Ranaksha) ಸಿನಿಮಾದ ನಿರ್ಮಾಪಕ ಶಿವರಾಮ್ (Shivaram) ಮೇಲೆ ಎಫ್‌ಐಆರ್ ದಾಖಲಾಗಿದೆ. ಹೀರೋಯಿನ್ ಮಾಡ್ತೀನಿ ಅಂತ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಶಿವರಾಮ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ:ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಮದುವೆ ಆಮಂತ್ರಣ ನೀಡಿದ ಡಾಲಿ

    2023ರಲ್ಲಿ ‘ರಣಾಕ್ಷ’ ಎಂಬ ಸಿನಿಮಾ ಶೂಟಿಂಗ್ ನಡೆಯುತ್ತಿರುತ್ತದೆ. ಈ ಚಿತ್ರಕ್ಕೆ ಪೂಜಾ ಅವರನ್ನು ಆಯ್ಕೆ ಮಾಡಿರುತ್ತಾರೆ. ಮಗಳ ಸಿನಿಮಾ ಶೂಟಿಂಗ್ ನೋಡಲು ಸೆಟ್ ಬಂದಿದ್ದ ತಾಯಿ ಸುನಂದಾಗೂ ಚಿತ್ರದ ನಿರ್ಮಾಪಕ ಶಿವರಾಮ್ ಪರಿಚಯವಾಗುತ್ತದೆ. ಹೀಗೆ ಶೂಟಿಂಗ್‌ಗೆ ಆರ್ಥಿಕವಾಗಿ ಸಮಸ್ಯೆ ಆಗಿದೆ ಎಂದು ನಟಿಯ ತಾಯಿಯ ಬಳಿ 5 ಲಕ್ಷ ರೂ.ವನ್ನು ಶಿವರಾಮ್ ಪಡೆದಿರುತ್ತಾರೆ. ಆ ನಂತರ ಚಿತ್ರದ ಶೂಟಿಂಗ್ ಕೂಡ ನಡೆಸಿರುತ್ತಾರೆ. ಮುಂದೆ ಸಮಯಕ್ಕೆ ಸರಿಯಾಗಿ ಆ ಹಣವನ್ನು ಶಿವರಾಮ್ ಹಿಂದಿರುಗಿಸಿರುತ್ತಾರೆ.

    ಕೆಲವು ದಿನಗಳ ಬಳಿಕ ಮತ್ತೆ ನಟಿಯ ತಾಯಿಗೆ ಕರೆ ಮಾಡಿ ಇನ್ನೊಂದಿಷ್ಟು ಹಣ ಸಿಗಬಹುದಾ ಎಂದು ಕೇಳಿದ್ದಾರೆ. ಆ ಸಮಯದಲ್ಲಿ ನಗದು ಹಣವಿರದ ಕಾರಣ ತಮ್ಮ ಬಳಿಯಿದ್ದ 575 ಗ್ರಾಂ ಚಿನ್ನವನ್ನು ಶಿವರಾಮ್‌ಗೆ ನೀಡಿದ್ದಾರೆ. ಶ್ಯೂರಿಟಿಗಾಗಿ ಎರಡು ಚೆಕ್‌ಗಳನ್ನು ನಟಿಯ ತಾಯಿಗೆ ನೀಡಿದ್ದರು. ಆದರೆ ಚೆಕ್ ಅವಧಿ ಮುಗಿದಿದ್ದರೂ ಚಿನ್ನಾಭರಣ ನೀಡದೇ ನಿರ್ಮಾಪಕ ವರಸೆ ಬದಲಿಸಿದ್ದಾರೆ. ಈ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಶಿವರಾಮ್ ವಿರುದ್ಧ ನಟಿಯ ತಾಯಿ ಸುನಂದಾ ಎಫ್‌ಐಆರ್ ದಾಖಲಿಸಿದ್ದಾರೆ.

  • 3 ತಿಂಗಳ ಬಳಿಕ ತಂಗಿ ಮದುವೆಯ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

    3 ತಿಂಗಳ ಬಳಿಕ ತಂಗಿ ಮದುವೆಯ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

    ಸೌತ್ ಬ್ಯೂಟಿ ಸಾಯಿ ಪಲ್ಲವಿ (Sai Pallavi) ಅವರ ತಂಗಿ ಮದುವೆಯಾಗಿ 3 ತಿಂಗಳ ಬಳಿಕ ಮದುವೆ ಫೋಟೋವನ್ನು ಹಂಚಿಕೊಂಡಿದ್ದಾರೆ. ತಂಗಿ ಮದುವೆ ಬಗ್ಗೆ ಎಮೋಷನಲ್ ಪೋಸ್ಟ್ ಶೇರ್ ಮಾಡಿದ್ದಾರೆ. ಸಹೋದರಿ ಮದುವೆ ಫೋಟೋಸ್ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ತ್ರಿವಿಕ್ರಮ್‌ ವಿಚಾರಕ್ಕೆ ಕಾಲೆಳೆದ ಕಿಚ್ಚ- ನಾಚಿ ನೀರಾದ ಭವ್ಯಾ

     

    View this post on Instagram

     

    A post shared by Sai Pallavi (@saipallavi.senthamarai)

    ಎಲ್ಲ ವಿಷಯದಲ್ಲಿಯೂ ನಾನು ತಂಗಿ ಪೂಜಾಗೆ ಸಲಹೆ ನೀಡುತ್ತಿದ್ದೆ. ಆದರೆ ಮದುವೆ ವಿಷಯದಲ್ಲಿ ನಾನು ಯಾವುದೇ ಸಲಹೆ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಾನು ಹೆದರಿದ್ದೆ, ಆದರೆ ಆ ಹೆದರಿಕೆ ಈಗ ಹೊರಟು ಹೋಗಿದೆ ಎಂದಿದ್ದಾರೆ. ತಂಗಿಯ ಮದುವೆ ಆಗಿ ಮೂರು ತಿಂಗಳಾಗಿದ್ದು, ಒಂದು ಬಾರಿಯೂ ಸಹ ನನ್ನ ತಂಗಿ ತಪ್ಪು ಮಾಡಿದಳು, ಅಥವಾ ನಾನು ಆಕೆಗೆ ಮಾರ್ಗದರ್ಶನ ಮಾಡಲಿಲ್ಲ ಎಂಬ ಅಳುಕೇ ನನಗೆ ಮೂಡಿಲ್ಲ ಎಂದಿದ್ದಾರೆ ಸಾಯಿ ಪಲ್ಲವಿ.

     

    View this post on Instagram

     

    A post shared by Sai Pallavi (@saipallavi.senthamarai)

    ಅಂದಹಾಗೆ, ಬಹುಕಾಲದ ಗೆಳೆಯ ವಿನೀತ್ ಶಿವಕುಮಾರ್ ಜೊತೆ ಸೆಪ್ಟೆಂಬರ್‌ನಲ್ಲಿ ಪೂಜಾ ಮದುವೆಯಾದರು. ಅವರು ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸಾಯಿ ಪಲ್ಲವಿಯಂತೆ ಪೂಜಾಗೆ ಸಕ್ಸಸ್ ಸಿಗಲಿಲ್ಲ.

    ಇನ್ನೂ ರಣ್‌ಬೀರ್ ಕಪೂರ್ (Ranbir Kapoor) ಜೊತೆ ‘ರಾಮಾಯಣ’, ನಾಗ ಚೈತನ್ಯ ಜೊತೆ ‘ತಾಂಡೇಲ್’, ಆಮೀರ್ ಖಾನ್ ಪುತ್ರನ ಜೊತೆ ಬಾಲಿವುಡ್ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಸಾಯಿ ಪಲ್ಲವಿ ಕೈಯಲ್ಲಿವೆ.

  • ದರ್ಶನ್ ಗಾಗಿ ಪೂಜೆ ಮಾಡ್ತಿಲ್ಲ: ರಾಕ್ ಲೈನ್ ವೆಂಕಟೇಶ್ ಸ್ಪಷ್ಟನೆ

    ದರ್ಶನ್ ಗಾಗಿ ಪೂಜೆ ಮಾಡ್ತಿಲ್ಲ: ರಾಕ್ ಲೈನ್ ವೆಂಕಟೇಶ್ ಸ್ಪಷ್ಟನೆ

    ಸಿನಿಮಾ ರಂಗದ ಕಲಾವಿದರ ಸಂಘದಲ್ಲಿ ಇದೇ 13 ಮತ್ತು 14ರಂದು ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಪೂಜೆಯಲ್ಲಿ ಇಡೀ ಸಿನಿಮಾ ರಂಗ ಭಾಗಿಯಾಗಲಿದೆ ಎಂದು ಹೇಳಲಾಗಿತ್ತು. ಸ್ಟಾರ್ ನಟರೂ ಸೇರಿದಂತೆ ಎಲ್ಲ ಕಲಾವಿದರನ್ನು ಪೂಜೆಗೆ ಆಹ್ವಾನ ಕೂಡ ಮಾಡಲಾಗಿತ್ತು. ಇದೇ ವೇಳೆ ಈ ಪೂಜೆಯು ಜೈಲಿಗೆ ಹೋಗಿರೋ ದರ್ಶನ್ (Darshan) ಗಾಗಿ ಅನ್ನೋ ಸುದ್ದಿಯೂ ಹರಿದಾಡುತ್ತಿತ್ತು. ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ.

    ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rock Line Venkatesh) ಮತ್ತು ನಟ ದೊಡ್ಡಣ್ಣ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಪೂಜೆಯ ಕುರಿತಂತೆ ಮಾತನಾಡಿದರು. ದರ್ಶನ್ ಕುರಿತಂತೆ ಸ್ಪಷ್ಟನೆ ಕೂಡ ನೀಡಿದರು. ರಾಕ್ ಲೈನ್ ವೆಂಕಟೇಶ್ ಮಾತನಾಡಿ, ‘ ಚಿತ್ರರಂಗದ ಒಳಿತಿಗಾಗಿ ಈ ಪೂಜೆ. ದರ್ಶನ್ ಅವ್ರಿಗಾಗಿ ಪೂಜೆ ಮಾಡ್ಬೇಕು ಅಂದ್ರೆ ನಾನು 100 ದೇವಸ್ಥಾನದಲ್ಲಿ ಪೂಜೆ ಮಾಡಿಸ್ತೀನಿ. ಇಲ್ಲೇ ಯಾಕೆ ಮಾಡ್ಬೇಕಿತ್ತು. ದರ್ಶನ್ ಮನೇಲಿ ಮಾಡಿಸ್ತಿದ್ದೆ. ಇಲ್ಲಾಂದ್ರೆ ನನ್ನ ಮನೇಲಿ ಪೂಜೆ ಮಾಡಿಸ್ತಿದ್ದೆ. ದರ್ಶನ್ ಸ್ನೇಹಿತ ಆಗಿ ಫೀಲ್ ಮಾಡ್ತೀನಿ. ಅಯ್ಯೋ ಯಾಕೆ ಹೀಗೆ ಮಾಡಿದ್ರು ಅಂತಾ ಅನ್ಕೊತಿವಿ. ದಯವಿಟ್ಟು ದರ್ಶನ್ ವಿಚಾರಕ್ಕೆ ಪೂಜೆ ಮಾಡ್ತಿದಿವಿ ಅಂತಾ ಅನ್ಕೊಂಡ್ರೆ.. ಖಂಡಿತಾ ಅಲ್’ ಅಂದರು.

    ಮುಂದುವರೆದು ಮಾತನಾಡಿದ ರಾಕ್ ಲೈನ್ ‘ಚಿತ್ರೋದ್ಯಮದ ಏಳ್ಗೆಗೆ ಹೋಮ ಮಾಡ್ತಿರೋದು ಕಲಾವಿದರ ಸಂಘ. 13 ಮತ್ತು 14ನೇ ತಾರೀಖು ಅಂಬರೀಶ್ ಭವನದಲ್ಲಿ ಪೂಜೆ ನಡೆಯಲಿದೆ. ಕೊವಿಡ್ ಆದ್ಮೇಲೆ ಮಾಡ್ಬೇಕು ಅಂತಾ ಅನ್ಕೊಂಡಿದ್ವಿ. ಕಾರಣಾಂತರಗಳಿಂದ ಮಾಡೋಕೆ ಆಗ್ಲಿಲ್ಲ. ಈ ತಿಂಗಳು 14ಕ್ಕೆ ಒಳ್ಳೆ ದಿನ. ಇಡೀ ಚಿತ್ರರಂಗದ ಉಳಿವಿಗಾಗಿ ಈ ಹೋಮ ಹಾಗೂ ಪೂಜೆ ಮಾಡೋಕೆ ಹಮ್ಮಿಕೊಂಡಿದ್ದೇವೆ. ಇಡೀ ಚಿತ್ರರಂಗ ಭಾಗಿ ಆಗ್ಬೇಕು ಅನ್ನೋದು ನಮ್ಮ ಉದ್ದೇಶ.  ಥಿಯೇಟರ್ ಸಮಸ್ಯೆ, ಚಿತ್ರಮಂದಿರ ಮುಚ್ಚುತ್ತಿವೆ. ಇವತ್ತಿನ ಚಿತ್ರರಂಗದ ಸ್ಥಿತಿಗತಿಗೆ ಸೊಲುಷನ್ ಬೇಕಿತ್ತು ಹಾಗಾಗಿ ಪೂಜೆ’ ಎಂದಿದ್ದಾರೆ.

    ‘ಬೇರೆ ಭಾಷೆಯ ಸೂಪರ್ ಡೂಪರ್ ಹಿಟ್ ಸಿನಿಮಾನ ಕನ್ನಡಕ್ಕೆ ಡಬ್ ಮಾಡಿ ಇಲ್ಲಿ ರಿಲೀಸ್ ಮಾಡ್ತಿದಾರೆ ನಮ್ಮ ಪ್ರೇಕ್ಷಕರು ನೋಡ್ತಿದಾರೆ. ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಈ ಧ್ವನಿ ಇದೆ.  ದಿನನಿತ್ಯ ಊಟ ಹಾಕ್ತಿರೋರು ನಿರ್ಮಾಪಕರು ಎರಡು ವರ್ಷಕ್ಕೆ ಒಂದು ಚಿತ್ರ ಮಾಡ್ತಿದ್ದೀವಿ ಈಗ. ಹೊಸದಾಗಿ ಸಿನಿಮಾ ಮಾಡೋಕೆ ಬರ್ತಿರೋ ನಿರ್ಮಾಪಕರು ಚಿತ್ರರಂಗಕ್ಕೆ ಅನ್ನ ಹಾಕ್ತಿದ್ದಾರೆ. ಅಂತವ್ರ ಉಳಿವಿಗಾಗಿ ಹೋರಾಟ ಮಾಡ್ಬೇಕು’ ಎಂದರು ರಾಕ್ ಲೈನ್ ವೆಂಕಟೇಶ್.

  • ಮದುವೆ ಆಗುತ್ತಿರುವ ಹುಡುಗನ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ ತಂಗಿ

    ಮದುವೆ ಆಗುತ್ತಿರುವ ಹುಡುಗನ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ ತಂಗಿ

    ದೇ ಮೊದಲ ಬಾರಿಗೆ ತಾವು ಮದುವೆ ಆಗುತ್ತಿರುವ ಹುಡುಗನ ಫೋಟೋ ಹಂಚಿಕೊಂಡಿದ್ದಾರೆ ಖ್ಯಾತನಟಿ ಸಾಯಿ ಪಲ್ಲವಿ (Sai pallavi) ಸಹೋದರಿ ಪೂಜಾ. ಈ ಹುಡುಗನ ಕುರಿತಂತೆ ಕೆಲಸ ಸಾಲುಗಳನ್ನೂ ಅವರು ಬರೆದಿದ್ದಾರೆ.

    ಪೂಜಾ ಮದುವೆ (Marriage) ವಿಚಾರ ಹಲವು ತಿಂಗಳಿಂದ ಹರಿದಾಡುತ್ತಲೇ ಇದೆ. ಈ ಬಾರಿ ನಿಜವಾಗಿಯೂ ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ಸಡಗರ ಮನೆ ಮಾಡಿದೆ. ಮದುವೆಯ ಪೂರ್ವಭಾವಿ ಕೆಲಸಗಳನ್ನು ಈಗಾಗಲೇ ಅವರ ತಂದೆ ತಾಯಿ ಶುರು ಮಾಡಿದ್ದಾರೆ.

    ಹಾಗಂತ ಸಾಯಿ ಪಲ್ಲವಿ ಮದುವೆ ಆಗುತ್ತಿಲ್ಲ. ಅವರ ತಂಗಿ, ನಟಿಯೂ ಆಗಿರುವ ಪೂಜಾ ಅವರ ಮದುವೆ ಸದ್ಯದಲ್ಲೇ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಪೂಜಾ (Pooja) ತನ್ನ ಎಂಗೇಜ್ ಮೆಂಟ್ ವಿಚಾರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದರು. ಹುಡುಗನ ಫೋಟೋ ಶೇರ್ ಮಾಡಿದ್ದರು.

     

    ಹಲವು ಬಾರಿ ಸಾಯಿ ಪಲ್ಲವಿ ಮದುವೆ ವಿಚಾರ ಕೇಳಿ ಬಂದಿದ್ದರೂ, ಈ ಬಾರಿ ಮಾತ್ರ ಸಾಯಿ ಪಲ್ಲವಿ ಸ್ಥಾನದಲ್ಲಿ ಪೂಜಾ ಕಾಣಿಸಿಕೊಂಡಿದ್ದಾರೆ. ಮದುವೆ ವಿಚಾರವಾಗಿ ಅವರೇ ಒಂದಷ್ಟು ವಿಷಯವನ್ನು ಹಂಚಿಕೊಳ್ಳಬಹುದು.

  • ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ಸಡಗರ

    ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ಸಡಗರ

    ಕ್ಷಿಣದ ಹೆಸರಾಂತ ನಟಿ ಸಾಯಿ ಪಲ್ಲವಿ (Sai pallavi) ಮದುವೆ (Marriage) ವಿಚಾರ ಹಲವು ತಿಂಗಳಿಂದ ಹರಿದಾಡುತ್ತಲೇ ಇದೆ. ಈ ಬಾರಿ ನಿಜವಾಗಿಯೂ ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ಸಡಗರ ಮನೆ ಮಾಡಿದೆ. ಮದುವೆಯ ಪೂರ್ವಭಾವಿ ಕೆಲಸಗಳನ್ನು ಈಗಾಗಲೇ ಅವರ ತಂದೆ ತಾಯಿ ಶುರು ಮಾಡಿದ್ದಾರೆ.

    ಹಾಗಂತ ಸಾಯಿ ಪಲ್ಲವಿ ಮದುವೆ ಆಗುತ್ತಿಲ್ಲ. ಅವರ ತಂಗಿ, ನಟಿಯೂ ಆಗಿರುವ ಪೂಜಾ ಅವರ ಮದುವೆ ಸದ್ಯದಲ್ಲೇ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಪೂಜಾ (Pooja) ತನ್ನ ಎಂಗೇಜ್ ಮೆಂಟ್ ವಿಚಾರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದರು. ಹುಡುಗನ ಫೋಟೋ ಶೇರ್ ಮಾಡಿದ್ದರು.

     

    ಹಲವು ಬಾರಿ ಸಾಯಿ ಪಲ್ಲವಿ ಮದುವೆ ವಿಚಾರ ಕೇಳಿ ಬಂದಿದ್ದರೂ, ಈ ಬಾರಿ ಮಾತ್ರ ಸಾಯಿ ಪಲ್ಲವಿ ಸ್ಥಾನದಲ್ಲಿ ಪೂಜಾ ಕಾಣಿಸಿಕೊಂಡಿದ್ದಾರೆ. ಮದುವೆ ವಿಚಾರವಾಗಿ ಅವರೇ ಒಂದಷ್ಟು ವಿಷಯವನ್ನು ಹಂಚಿಕೊಳ್ಳಬಹುದು.

  • ಚಂದ್ರಯಾನ-3 ಯಶಸ್ಸಿಗೆ ಪ್ರಾರ್ಥಿಸಿ ಬೆಳಗಾವಿ ಕಪಿಲೇಶ್ವರ ಮಂದಿರದಲ್ಲಿ ಮಹಾರುಧ್ರಾಭಿಷೇಕ

    ಚಂದ್ರಯಾನ-3 ಯಶಸ್ಸಿಗೆ ಪ್ರಾರ್ಥಿಸಿ ಬೆಳಗಾವಿ ಕಪಿಲೇಶ್ವರ ಮಂದಿರದಲ್ಲಿ ಮಹಾರುಧ್ರಾಭಿಷೇಕ

    ಬೆಳಗಾವಿ: ಚಂದ್ರಯಾನ-2 (Chandrayaan-3) ಯಶಸ್ವಿಯಾಗಿ ಚಂದ್ರನ (Moon) ಅಂಗಳಕ್ಕೆ ಇಳಿಯುವಂತೆ ಪ್ರಾರ್ಥಿಸಿ ಬೆಳಗಾವಿಯ (Belagavi) ಕಪಿಲೇಶ್ವರ ಮಂದಿರದಲ್ಲಿ (Kapileshwar Temple) ಮಹಾರುಧ್ರಾಭಿಷೇಕ ಪೂಜೆ ನೆರವೇರಿಸಿದರು.

    ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿರುವ ಚಂದ್ರಯಾನ-2 ಚಂದ್ರನ ಕಕ್ಷೆಗೆ ಇಳಿಯಲು ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಇದು ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲಿ ಎಂದು ದೇವಸ್ಥಾನಗಳಲ್ಲಿ ಪ್ರಾರ್ಥಿಸಲಾಗುತ್ತಿದೆ. ಹೀಗಾಗಿ ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ಮಂದಿರದಲ್ಲಿ ಆಡಳಿತ ಮಂಡಳಿ ವತಿಯಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ಸಾರ್ವಜನಿಕರು ಕೂಡ ದೇವರಲ್ಲಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.

    ಅರ್ಚಕ ನಾಗರಾಜ ಕಟ್ಟಿ ಪಬ್ಲಿಕ್ ಟಿವಿ ಜತೆಗೆ ಮಾತನಾಡಿ, 140 ಕೋಟಿ ಭಾರತೀಯರ ಬಯಕೆ ಈಡೇರಲಿ ಎಂದು ಕಪಿಲೇಶ್ವರ ದೇವರಿಗೆ ವಿಶೇಷ ಅಭಿಷೇಕ, ರುದ್ರಾಭಿಷೇಕ, ಶತರುದ್ರಾಭಿಷೇಕ, ಲಘುರುದ್ರಾಭಿಷೇಕ, ರುದ್ರಾಕ್ಷಿ, ಏಕಾದಶಿ ಪೂಜೆಗಳನ್ನು ಮಾಡಿದ್ದೇವೆ. ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಸ್ಪರ್ಶ ಮಾಡಲಿ. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಲಿ. ಇದರಲ್ಲಿ ನಮ್ಮ ಬೆಳಗಾವಿಯ ಇಬ್ಬರು ವಿಜ್ಞಾನಿಗಳು ಕೈ ಜೋಡಿಸಿರುವುದು ಹೆಮ್ಮೆಯ ಸಂಗತಿ ಎಂದರು. ಇದನ್ನೂ ಓದಿ: Chandrayaan-3: ಬಾಹ್ಯಾಕಾಶ ಯೋಜನೆಗಳಿಗೆ ನೂರಾರು ಕೋಟಿ ವ್ಯಯ – ಭಾರತಕ್ಕೇನು ಲಾಭ?

    ನಗರಸೇವಕ ಶಂಕರಗೌಡ ಪಾಟೀಲ್ ಮಾತನಾಡಿ, ಇದು ಕೇವಲ ವಿಜ್ಞಾನಿಗಳ ಸಾಧನೆ ಅಲ್ಲ, ಇಡೀ ದೇಶದ ಸಾಧನೆ. ಚಂದ್ರನ ಮೇಲೆ ಇಳಿಯುತ್ತಿರುವ 4ನೇ ಮತ್ತು ಸೌತ್ ಪೋಲ್‌ನಲ್ಲಿ ಇಳಿಯುತ್ತಿರುವ ಮೊದಲ ದೇಶ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಸುರಕ್ಷಿತವಾಗಿ ವಿಕ್ರಮ ಇಳಿಯಲಿ ಎಂದು ಹಾರೈಸಿದರು. ಇದನ್ನೂ ಓದಿ: ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್‌ ಮಾಜಿ ಸಚಿವ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಪಂದನಾ ನಿಧನ: 5ನೇ ದಿನದ ಕಾರ್ಯದಲ್ಲಿ ಕುಟುಂಬ

    ಸ್ಪಂದನಾ ನಿಧನ: 5ನೇ ದಿನದ ಕಾರ್ಯದಲ್ಲಿ ಕುಟುಂಬ

    ಟ ವಿಜಯ ರಾಘವೇಂದ್ರ (Vijaya Raghavendra) ಪತ್ನಿ ಸ್ಪಂದನಾ (Spandana) ನಿಧನದ 5ನೇ ದಿನದ ಕಾರ್ಯವನ್ನು ಅವರ ಕುಟುಂಬದವರು ಇಂದು ನೆರವೇರಿಸಲಿದ್ದಾರೆ.  ಮಲ್ಲೇಶ್ವರಂನಲ್ಲಿರುವ ಶಿವರಾಮ್ (Shivaram) ಮನೆಯಿಂದ ತೆರಳಲು ಕುಟುಂಬಸ್ಥರ ಸಿದ್ಧತೆ ನಡೆಸಿದ್ದು, ಹರಿಶ್ಚಂದ್ರ ಘಾಟ್ ನಲ್ಲಿರುವ ಅಸ್ಥಿ ಪಡೆದು ಶ್ರೀರಂಗ ಪಟ್ಟಣದಲ್ಲಿ ಕಾರ್ಯ ನೆರವೇರಿಸಲಿದ್ದಾರೆ.

    ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶ್ರೀರಂಗಪಟ್ಟಣ ತಲುಪಲಿರುವ ಸ್ಪಂದನಾ ಕುಟುಂಬ ಸದಸ್ಯರು, ಅಲ್ಲಿ ಅಸ್ಥಿ ಬಿಡುವ ಕಾರ್ಯವನ್ನು ನೆರವೇರಿಸಲಿದ್ದಾರೆ. ಶಿವರಾಮ್, ಶ್ರೀಮುರಳಿ, ಚಿನ್ನೇಗೌಡ, ವಿಜಯರಾಘವೇಂದ್ರ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಸಿಕ್ಸ್ ಪ್ಯಾಕ್ ಅವತಾರದಲ್ಲಿ ಚಾರ್ಲಿ ಬೆಡಗಿ ಸಂಗೀತಾ

    ವಿಜಯ ರಾಘವೇಂದ್ರ ಅವರ ಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಮನೆಯ ಬೆಳಕು ಸ್ಪಂದನಾ ವಿಜಯ ವಿಧಿವಶರಾಗಿ 5 ದಿನಗಳು ಕಳೆದಿದೆ. ಈಡಿಗ ಪದ್ಧತಿಯಂತೆ 5ನೇ ದಿನದ ಕಾರ್ಯ, ಅಸ್ಥಿ ವಿಸರ್ಜನೆ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ. 11ನೇ ದಿನದ ಕಾರ್ಯ ಸಹ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ.

     

    ಕೆಲ ದಿನಗಳ ಹಿಂದೆ ಸ್ಪಂದನಾ ಸ್ನೇಹಿತರ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದರು. ಆಗಸ್ಟ್ 6ರಂದು ಭಾನುವಾರದಂದು ಹೃದಯಾಘಾತದಿಂದ ಸ್ಪಂದನಾ ವಿಧಿವಶರಾದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು. ಸ್ಪಂದನಾ ಹಠಾತ್‌ ನಿಧನ ವಿಜಯ ಮತ್ತು ಅವರ ಕುಟುಂಬಕ್ಕೆ ಶಾಕ್‌ ನೀಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀ ಕ್ಷೇತ್ರ ಮಂದಾರಬೈಲಿನಲ್ಲಿ ವರ್ಷಾವಧಿ ಕೋಲ ಬಲಿ ಸೇವೆ

    ಶ್ರೀ ಕ್ಷೇತ್ರ ಮಂದಾರಬೈಲಿನಲ್ಲಿ ವರ್ಷಾವಧಿ ಕೋಲ ಬಲಿ ಸೇವೆ

    ಮಂಗಳೂರು: ಶ್ರೀ ಕ್ಷೇತ್ರ ಮಂದಾರಬೈಲು (Mandarbailu) ರಕ್ತೇಶ್ವರಿ, ಮಂತ್ರದೇವತೆ, ರಾಹು ಗುಳಿಗ ಸನ್ನಿಧಿಯಲ್ಲಿ ವರ್ಷಾವಧಿ ಕೋಲ ಬಲಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದೆ.

    ಸೋಮವಾರ ರಾತ್ರಿ 7:30ರಿಂದ ರಂಗಪೂಜೆ, ಬೆಳ್ಳಿ ರಥೋತ್ಸವ, ಮಂಗಳವಾರ ಬೆಳಗ್ಗೆ 8:00ರಿಂದ ನಾಗದೇವರಿಗೆ ತಂಬಿಲಸೇವೆ, ಆಶ್ಲೇಷಾ ಬಲಿ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ತಾಯಿಗೆ ಪಂಚಾಮೃತಾಭಿಷೇಕ, ಮಂದಾರಬೈಲ್ ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವರಿಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

    ಬುಧವಾರ ಬೆಳಗ್ಗೆ 8:00ಕ್ಕೆ ತಾಯಿಗೆ ಪಂಚಾಮೃತಾಭಿಷೇಕ, ಸರ್ವಾಲಂಕಾರ ಪೂಜೆ, ತಾಯಿಗೆ ವಿಶೇಷ ಅಷ್ಟನಾದದೊಂದಿಗೆ ಉಯ್ಯಾಲೆ ಸೇವೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಗುರುವಾರ ಬೆಳಗ್ಗೆ 6:30ರಿಂದ 108 ಕಾಯಿ ಗಣಪತಿ ಹೋಮ, ಪಂಚಾಮೃತಾಭಿಷೇಕ, ಸರ್ವಾಲಂಕಾರ ಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು, ಶುಕ್ರವಾರ ಬೆಳಗ್ಗೆ 6:30ರಿಂದ ಶ್ರೀ ಸೂಕ್ತ ಹೋಮ, ಧನ್ವಂತಲ ಹೋಮ, ತಾಯಿಗೆ ಹರಕೆ ರೂಪದಲ್ಲಿ ಬರುವ ಬೆಳ್ಳಿ ಬಂಗಾರವನ್ನು ಸಮರ್ಪಿಸುವುದು. ಸಂಜೆ ಗಂಟೆ 4:30ರಿಂದ ವಿವಿಧ ಭಜನಾ ತಂಡದವರಿಂದ ‘ಭಜನಾ ಸತ್ಸಂಗ ಕಾರ್ಯಕ್ರಮ’ ಜರುಗಲಿದೆ. ಇದನ್ನೂ ಓದಿ: ಶ್ರೀಕೃಷ್ಣ, ಹನುಮಂತ ಇಬ್ಬರೂ ಶ್ರೇಷ್ಠ ರಾಜತಾಂತ್ರಿಕರು: ಜೈಶಂಕರ್‌

    ಶನಿವಾರ ಬೆಳಗ್ಗೆ 7:30ರಿಂದ ಶ್ರೀ ಸತ್ಯನಾರಾಯಣ ಪೂಜೆ 10:40ರ ಶುಭಲಗ್ನದಲ್ಲಿ ಭಂಡಾರ ಏರುವುದು, ಪಲ್ಲಪೂಜೆ, ಅನ್ನಸಂತರ್ಪಣೆ ಹಾಗೂ ಸಂಜೆ 7:30ರಿಂದ ರಕ್ತೇಶ್ವರೀ ದೈವದ ನೇಮ, ನಂತರ ಶ್ರೀ ಮಂತ್ರದೇವತೆ ದೈವದ ಕೋಲ ಬಲಿ ಸೇವೆ, ದರ್ಶನ ಬಲಿ, ಪಲ್ಲಕ್ಕಿ ಬಲಿ, ಬೆಳ್ಳಿರಥೋತ್ಸವ, ತುಲಾಭಾರ ಸೇವೆ, ಅಭಯಪ್ರದಾನ, ಪ್ರಸಾದ ವಿತರಣೆ ನಡೆಯಲಿದೆ.

    ಭಾನುವಾರ ರಾತ್ರಿ ಗಂಟೆ 8:05ರಿಂದ ಶ್ರೀ ಗುಳಿಗ ದೈವದ ಕೋಲಬಲಿ ಸೇವೆ, ಅಭಯ ಪ್ರದಾನ, ಪ್ರಸಾದ ವಿತರಣೆ ಜರುಗಲಿದೆ. ಭಾನುವಾರ ಕ್ಷೇತ್ರದಲ್ಲಿ ವರ್ಷಾವಧಿ ಅಗೇಲು ಸೇವೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಭಾರತದ ಮಹಿಳೆಯರಿಗೆ ಚೊಚ್ಚಲ ಅಂಡರ್‌ 19 ವಿಶ್ವಕಪ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಸೆಂಬರ್ 4ಕ್ಕೆ ‘ತಿಥಿ ಚಿತ್ರ’ ಖ್ಯಾತಿಯ ನಟಿ ಪೂಜಾ ಮದುವೆ

    ಡಿಸೆಂಬರ್ 4ಕ್ಕೆ ‘ತಿಥಿ ಚಿತ್ರ’ ಖ್ಯಾತಿಯ ನಟಿ ಪೂಜಾ ಮದುವೆ

    ನ್ನಡ ಸಿನಿಮಾ ರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸುವಂತೆ ಮಾಡಿದ್ದ ತಿಥಿ ಸಿನಿಮಾದ ನಾಯಕಿ ಪೂಜಾ ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಾಗಿದ್ದರು. ಓದಿನ ಕಡೆ ಗಮನ ಕೊಟ್ಟಿದ್ದ ಪೂಜಾ ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಅವರು, ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಿದ್ದರು ಅದೇ ರೀತಿಯಾಗಿ ಡಿಸೆಂಬರ್ 4ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಚೌಟ್ರಿಯಲ್ಲಿ ಅವರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಮದುವೆಯಾಗಿಯೇ ವಿಶೇಷ ಪ್ರೊಮೋ ಒಂದನ್ನು ಅವರು ರೆಡಿ ಮಾಡಿದ್ದು, ಅಲ್ಲಿ ಆರತಕ್ಷತೆ ಮತ್ತು ಮದುವೆಯ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. ಈ ಮೂಲಕ ತಮ್ಮೆಲ್ಲರ ಹಾರೈಕೆ ಹೊಸ ಜೋಡಿಗೆ ಇರಲಿ ಎಂದು ಅವರು ಕೇಳಿಕೊಂಡಿದ್ದಾರೆ.  ಸಿನಿಮಾ ರಂಗದಿಂದ ದೂರವಾಗಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪ್ರೇಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ತಿಥಿ ಸಿನಿಮಾದ ಕಾವೇರಿಗೂ ಕಂಕಣ ಭಾಗ್ಯ ಎಂದು ಅಭಿಮಾನಿಗಳು ಶುಭ ಹಾರೈಸಿದ್ದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್ ಸೇತುಪತಿ

    ತಿಥಿ ಸಿನಿಮಾ ಬಂದಾಗ ದಿಢೀರ್ ಅಂತ ಪೂಜಾ ಫೇಮಸ್ ಆದರು. ಕುರಿ ಕಾಯುವ ಕಾವೇರಿಯ ಪಾತ್ರದಲ್ಲಿ ಅವರು ಎಲ್ಲರ ಗಮನ ಸೆಳೆದಿದ್ದರು. ಅವರಿಗೆ ರಾಜ್ಯ ಪ್ರಶಸ್ತಿ ಕೂಡ ಬಂತು. ಅಲ್ಲಿಂದ ಹಲವು ಸಿನಿಮಾಗಳಲ್ಲೂ ನಟಿಸಿದರು. ನಂತರ ಸಿನಿಮಾ ರಂಗದಿಂದ ದೂರವಾದರು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಯೂ ಆಗಿತ್ತು. ಇದೀಗ ಪ್ರೇಮ್ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಡಿಸೆಂಬರ್ 3 ಮತ್ತು 4 ರಂದು ಈ ಜೋಡಿ ಹಸೆಮಣೆ ಏರುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ನಾಗರಪಂಚಮಿ’ ವಿಶೇಷತೆ ಏನು?

    ‘ನಾಗರಪಂಚಮಿ’ ವಿಶೇಷತೆ ಏನು?

    ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ಹಬ್ಬವೇ ‘ನಾಗರಪಂಚಮಿ’. ನಾಗರ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿರುವ ಜಾಗಕ್ಕೆ ಹೋಗಿ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ. ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಸಹ ಇದೆ.

    ಪಂಚಮಿಯ ವೈಶಿಷ್ಟ್ಯ
    ಸಾತ್ತ್ವಿಕತೆ ಗ್ರಹಿಸಲು ನಾಗರಪಂಚಮಿ ಉಪಯುಕ್ತ ಕಾಲ. ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಿದರೆ ಒಳ್ಳೆಯದು.

    ಪ್ರಾರ್ಥನೆಯ ವೇಳೆ, ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ. ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ ಎಂದು ಪುರಾಣಗಳಲ್ಲಿ ನಂಬಲಾಗಿದೆ.

    ಹೆಣ್ಣುಮಕ್ಕಳ ಹಬ್ಬ
    ನಾಗರಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. `ನಾಗರ ಪಂಚಮಿ ಬಂತು, ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ’ ಎನ್ನುವ ಜಾನಪದ ಹಾಡು ಹಬ್ಬದ ವಿಶೇಷತೆ ಸಾರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ.

    ಉಪವಾಸದ ಮಹತ್ವ
    ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವವೆಂದರೆ ಈ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ ಹೊಂದಿದನು. ಆಗ ಸಹೋದರನ ಸಾವಿನಿಂದ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಅದಕ್ಕೆ ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಅದಕ್ಕೆ ಆ ದಿನ ಮಹಿಳೆಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ.

    ಸಹೋದರನಿಗೆ ಅಖಂಡ ಆಯುಷ್ಯ ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟಗಳಿಂದ ಪಾರಾಗಲಿ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ. ಅವನ ರಕ್ಷಣೆಯಾಗುತ್ತದೆ.

    ಪೂಜೆ
    ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರತೆಯ ಒಂಬತ್ತು ಪ್ರಮುಖ ಗುಂಪುಗಳಾಗಿವೆ.

    ನಾಗ ಪಂಚಮಿ ಜಾನಪದ ಕಥೆ
    ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ನಾಗರಹಾವೊಂದು ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು.

    ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು. ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ – ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

    Live Tv
    [brid partner=56869869 player=32851 video=960834 autoplay=true]