Tag: ponniyin selvan 2

  • Chiyaan 62: ಸಂಭಾವನೆ ದುಪ್ಪಟ್ಟು ಮಾಡಿಕೊಂಡ ಚಿಯಾನ್‌ ವಿಕ್ರಮ್‌

    Chiyaan 62: ಸಂಭಾವನೆ ದುಪ್ಪಟ್ಟು ಮಾಡಿಕೊಂಡ ಚಿಯಾನ್‌ ವಿಕ್ರಮ್‌

    ಸೌತ್‌ನ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್‌ಗೆ ವಯಸ್ಸು 58 ವರ್ಷ ಆಗಿದ್ರೂ ಚಿರಯುವಕನಂತೆಯೇ ಇದ್ದಾರೆ. ಸಿನಿಮಾದಿಂದ ಸಿನಿಮಾಗೆ ಹೊಸ ಬದಲಾವಣೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹೀಗಿರುವಾಗ ಚಿಯಾನ್ ತಮ್ಮ ಸಂಭಾವನೆ ದುಪ್ಪಟ್ಟು ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.

     

    View this post on Instagram

     

    A post shared by Vikram (@the_real_chiyaan)

    ‘ಪೊನ್ನಿಯನ್ ಸೆಲ್ವನ್ 2’ ಸಕ್ಸಸ್ ಬಳಿಕ ಚಿಯಾನ್ ಮತ್ತೆ ತಮ್ಮ ಸಂಭಾವನೆಯನ್ನ ಡಬಲ್‌ ಮಾಡಿಕೊಂಡಿದ್ದಾರೆ. ಒಂದು ಸಿನಿಮಾಗೆ ಚಿಯಾನ್ 25 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಈಗ ಏಕಾಏಕಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಮುಂಬರುವ ಚಿಯಾನ್‌ 62ನೇ ಚಿತ್ರಕ್ಕೆ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಿರ್ಮಾಪಕ ಅರುಣ್‌ ಕುಮಾರ್‌ ನಿರ್ಮಾಣದ ಚಿತ್ರಕ್ಕೆ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದೇ ಚಿಯಾನ್‌ ಬಗ್ಗೆ ಗುಸು ಗುಸು ಶುರುವಾಗಿದೆ.

    ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್ 2’ ಚಿತ್ರದ ಯಶಸ್ಸಿನ ಬಳಿಕ ತಂಗಳನ್ ಚಿತ್ರ ಮತ್ತು ಚಿಯಾನ್‌ 62ನೇ ಸಿನಿಮಾದತ್ತ ಗಮನ ನೀಡುತ್ತಿದ್ದಾರೆ. ಹೀಗಿರುವಾಗ ‘ತಂಗಳನ್‌’ ತನ್ನ ಪಾತ್ರಕ್ಕಾಗಿ ಮತ್ತೆ ಲುಕ್ ಬದಲಿಸಿಕೊಂಡಿದ್ದಾರೆ. ಹೊಸ ಶೇಡ್‌ನಲ್ಲಿ ನಟ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ನಾಗಚೈತನ್ಯ ಜೊತೆ ಮತ್ತೆ ಒಂದಾಗುವ ಮುನ್ಸೂಚನೆ ಕೊಟ್ರಾ ಸಮಂತಾ

    ‘ತಂಗಳನ್’ ಸಿನಿಮಾದ ಶೂಟಿಂಗ್ ಕೋಲಾರದ ಗಣಿ ಕೆಜಿಎಫ್‌ನಲ್ಲಿ ನಡೆದಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸ ನಡೆಯುತ್ತಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ‘ಪೊನ್ನಿಯನ್ ಸೆಲ್ವನ್ 2’ ಸಕ್ಸಸ್ ಬಳಿಕ ನಯನತಾರಾ ಜೊತೆಯಾದ ಜಯಂರವಿ

    ‘ಪೊನ್ನಿಯನ್ ಸೆಲ್ವನ್ 2’ ಸಕ್ಸಸ್ ಬಳಿಕ ನಯನತಾರಾ ಜೊತೆಯಾದ ಜಯಂರವಿ

    ಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಜಯಂರವಿ ಇತ್ತೀಚಿಗೆ ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan 2) ಚಿತ್ರದ ಸಕ್ಸಸ್ ನಂತರ ಮತ್ತೊಂದು ಇಂಡಿಯಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಲೇಡಿ ಸೂಪರ್ ಸ್ಟಾರ್‌ಗೆ ಜಯಂರವಿ (Jayamravi) ಜೋಡಿಯಾಗಿ ಬರುತ್ತಿದ್ದಾರೆ.

    ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ತಮಿಳು ನಟ ಜಯಂರವಿ ತಾರಾಮೌಲ್ಯ ಜೊತೆಗೆ ಬೇಡಿಕೆಯೂ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗೆ ನಟ ಜಯಂರವಿ ಓಕೆ ಎಂದಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ‘ಇರೈವನ್’ ಎಂಬ ಟೈಟಲ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾದಲ್ಲಿ ಜಯಂರವಿಗೆ ನಾಯಕಿಯಾಗಿ ನಯನತಾರಾ(Nayanatara) ಸಾಥ್ ನೀಡ್ತಿದ್ದಾರೆ. ಇದನ್ನೂ ಓದಿ:ಮೆಗಾ ಪ್ರಿನ್ಸ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ ಗ್ರ್ಯಾಂಡ್‌ ಎಂಗೇಜ್‌ಮೆಂಟ್

     

    View this post on Instagram

     

    A post shared by Jayam Ravi (@jayamravi_official)

    ಈ ಮೆಗಾ ಪ್ರಾಜೆಕ್ಟ್‌ಗೆ ಐ.ಅಹಮದ್ ಆಕ್ಷನ್ ಕಟ್ ಹೇಳಿದ್ದಾರೆ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೊನೆ ಹಂತದಲ್ಲಿರುವ ‘ಇರೈವನ್’ (Iraivan) ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಮುಂದಿನ ವರ್ಷದ ಆಗಸ್ಟ್ 25ಕ್ಕೆ ವರ್ಲ್ಡ್ ವೈಡ್ ಈ ಚಿತ್ರ ತೆರೆಕಾಣಲಿದೆ. ಆಕ್ಷನ್ ಥ್ರಿಲ್ಲರ್ ಇರೈವನ್‌ನಲ್ಲಿ ರಾಹುಲ್ ಬೋಸೆ, ಅಶಿಶ್ ವಿದ್ಯಾರ್ಥಿ, ನರೇನ್, ವಿಜಯಲಕ್ಷ್ಮೀ, ಚಾರ್ಲಿ, ಬಗ್ಸ್ ಸೇರಿದಂತೆ ಹಲವರು ನಟಿಸಿದ್ದಾರೆ. ಯುವನ್ ಶಂಕರ್ ಸಂಗೀತ, ಮಣಿಕಂದನ್ ಬಾಲಾಜಿ ಸಂಕಲನಿರುವ ಸಿನಿಮಾಗೆ ಸುಧನ್ ಸುಂದರಂ ಮತ್ತು ಜಯರಾಮ್.ಜಿ ನಿರ್ಮಾಣ ಮಾಡಿದ್ದಾರೆ. ಚೆನ್ನೈ ಹಾಗೂ ಪುದುಚರಿಯಲ್ಲಿ ಶೂಟಿಂಗ್ ನಡೆಸಲಾಗಿದೆ. ಇರೈವನ್ ಸಿನಿ ಮೂಲಕ ಸಿನಿಮಾಪ್ರೇಮಿಗಳಿಗೆ ಒಂದೊಳ್ಳೆ ಕಂಟೆಂಟ್ ಜೊತೆಗೆ ಮನರಂಜನೆ ನೀಡೋದಾಗಿ ಚಿತ್ರತಂಡ ತಿಳಿಸಿದೆ.

    2015ರಲ್ಲಿ ‘ತಾನಿ ಓರುವನ್’ ಎಂಬ ಚಿತ್ರದಲ್ಲಿ ಜಯಂರವಿ- ನಯನತಾರಾ ಜೊತೆಯಾಗಿ ನಟಿಸಿದ್ದರು. ‘ಇರೈವನ್’ ಸಿನಿಮಾ ಮೂಲಕ ಮತ್ತೆ ಈ ಜೋಡಿ ಒಂದಾಗುತ್ತಿದೆ. ಅದೆಷ್ಟರ ಮಟ್ಟಿಗೆ ಈ ಜೋಡಿ ಕಮಾಲ್ ಮಾಡುತ್ತಾರೆ ಕಾದುನೋಡಬೇಕಿದೆ.

  • ‘ತಂಗಲಾನ್’ ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯ- ಶೂಟಿಂಗ್ ಸ್ಥಗಿತ

    ‘ತಂಗಲಾನ್’ ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯ- ಶೂಟಿಂಗ್ ಸ್ಥಗಿತ

    ಕ್ಷಿಣ ಭಾರತದ ಸ್ಟಾರ್ ನಟ ಚಿಯಾನ್ ವಿಕ್ರಮ್ (Chiyaan Vikram) ಅವರು ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan 2) ಸಿನಿಮಾ ಪ್ರಚಾರ ಮುಗಿಸಿ ಮತ್ತೆ ಹೊಸ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿದ್ದರು. ‘ತಂಗಲಾನ್’ (Thangalaan Film) ರಿಹರ್ಸಲ್ ವೇಳೆ ಬಿದ್ದು ವಿಕ್ರಮ್ ಪಕ್ಕೆಲುಬಿಗೆ ಪೆಟ್ಟಾಗಿದೆ. ಕೂಡಲೇ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ.

    ‘ತಂಗಲಾನ್’ ಸಿನಿಮಾದ ರಿಹರ್ಸಲ್ ವೇಳೆ ವಿಕ್ರಮ್‌ಗೆ ಗಾಯಗಳಾಗಿರೋದ್ರಿಂದ ಶೂಟಿಂಗ್ ನಿಲ್ಲಿಸಲಾಗಿದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕೆ ಮತ್ತೆ ಶೂಟಿಂಗ್ ಶುರುವಾಗುತ್ತದೆ. ಈ ಹಿಂದೆ ಕೂಡ ಇದೇ ಸಿನಿಮಾ ಸೆಟ್‌ನಲ್ಲಿ ವಿಕ್ರಮ್‌ಗೆ ಪೆಟ್ಟಾಗಿ ಕೆಲವು ದಿನಗಳ ಕಾಲ ಶೂಟಿಂಗ್ ನಿಂತಿತ್ತು. ಇದರಿಂದ ವಿಕ್ರಮ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಕ್ರಮ್ ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಪ್ರಸ್ತುತ ವಿಕ್ರಮ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ಹೇಳಲಾಗುತ್ತಿದೆ.

    ಕೋಲಾರ ಚಿನ್ನದ ಗಣಿಯ ಕಾರ್ಮಿಕರ ಸುತ್ತಾ ‘ತಂಗಲಾನ್’ ಸಿನಿಮಾ ಮೂಡಿ ಬರ್ತಿದೆ. ನಿರ್ದೇಶಕ ಪಾ.ರಂಜಿತ್ ಕೋಲಾರದಲ್ಲಿ ನಡೆದ ನಿಜವಾದ ಘಟನೆಗಳನ್ನು ಆಧರಿಸಿ, ಆ ಬಗ್ಗೆ ಸಂಶೋಧನೆ ನಡೆಸಿ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಾರೆ. ನೂರು ವರ್ಷಗಳ ಹಿಂದೆ ಅಲ್ಲಿನ ಗಣಿ ಕಾರ್ಮಿಕರ ಪರಿಸ್ಥಿತಿ ಹೇಗಿತ್ತು ಎನ್ನುವುದರ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

  • ಬಾಕ್ಸ್ ಆಫೀಸಿನಲ್ಲಿ ಪೊನ್ನಿಯನ್ ಸೆಲ್ವನ್-2 ಬಾಚಿದ್ದೆಷ್ಟು?

    ಬಾಕ್ಸ್ ಆಫೀಸಿನಲ್ಲಿ ಪೊನ್ನಿಯನ್ ಸೆಲ್ವನ್-2 ಬಾಚಿದ್ದೆಷ್ಟು?

    ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಸಾರಥ್ಯದಲ್ಲಿ ಮೂಡಿಬಂದ ಪೊನ್ನಿಯಿನ್ ಸೆಲ್ವನ್-2 (Ponniyin Selvan 2) ಸಿನಿಮಾ ವಿಶ್ವಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ಇದೇ ಶುಕ್ರವಾರ ತೆರೆಗೆ ಬಂದ ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಮೆಚ್ಚುಗೆಯ ಮಹಾಪೂರ ವ್ಯಕ್ತಪಡಿಸುತ್ತಿದ್ದಾರೆ. ಬಾಕ್ಸಾಫೀಸ್ (Box Office) ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿರುವ ಪಿಎಸ್-2, ರಿಲೀಸ್ ಆದ ಮೂರು ದಿನದಲ್ಲಿಯೇ ನೂರು ಕೋಟಿ ಕಲೆಕ್ಷನ್ ಮಾಡಿದೆ.  ಇಳಯದಳಪತಿ ವಿಜಯ್ ನಟನೆಯ ವಾರಿಸು ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿರುವ ಪಿಎಸ್-2 ಹೊಸ ದಾಖಲೆ ಬರೆಯುನ್ನು ತನ್ನದಾಗಿಸಿಕೊಳ್ಳುತ್ತಿದೆ.

    ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರುವ ಪೊನ್ನಿಯಿನ್ ಸೆಲ್ವನ್ 2ನಲ್ಲಿ ದೊಡ್ಡ ತಾರಾಬಳಗವೇ ಇದೆ.  ಜಯಂರವಿ, ಚಿಯಾನ್ ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ತ್ರಿಶಾ, ಶೋಭಿತಾ ಧುಲಿಪಾಲ್​, ಪ್ರಕಾಶ್ ರಾಜ್​ ಸೇರಿದಂತೆ ಹಲವರು ನಟಿಸಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದಿರೋ ಕಾದಂಬರಿ ಪೊನ್ನಿಯಿನ್‌ ಸೆಲ್ವನ್‌ ಆಧಾರಿಸಿದ ಈ ಕಥೆಗೆ ಮಣಿರತ್ನಂ ಆಕ್ಷನ್ ಕಟ್ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಹೂ ಜೊತೆ ಮೊಬೈಲ್ ಎಸೆದ ಅಭಿಮಾನಿ

    ಚೋಳ ಸಾಮ್ರಾಜ್ಯದ ಗತವೈಭವ ಸಾರುವ ಈ ಸಿನಿಮಾ ಮೇಕಿಂಗ್, ತಾರಾ ಬಳಗ, ಸಂಗೀತ, ನಟನೆ ಎಲ್ಲದರಲ್ಲಿಯೂ ನೋಡುಗರ ಗಮನಸೆಳೆಯುತ್ತಿದೆ. ಲೈಕಾ ಪ್ರೊಡಕ್ಷನ್ಸ್‌ ಮತ್ತು ಮದ್ರಾಸ್‌ ಟಾಕೀಸ್‌ ಬ್ಯಾನರ್‌ನಡಿ ಈ ಸಿನಿಮಾವನ್ನು ಬಲು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ.

    ಕಳೆ ವರ್ಷ ಸೆಪ್ಟೆಂಬರ್ 30 ರಂದು ರಿಲೀಸ್ ಆಗಿದ್ದ ಪೊನ್ನಿಯನ್ ಸೆಲ್ವನ್ ಮೊದಲ ಭಾಗ ಬರೋಬ್ಬರಿ 500 ಕೋಟಿ ಲೂಟಿ ಮಾಡಿತ್ತು. ಈಗ ತೆರೆಗೆ ಬಂದಿರುವ ಸಿಕ್ವೇಲ್ ಕೂಡ ಅಭೂತಪೂರ್ವ ಯಶಸ್ಸು ಕಾಣುತ್ತಿದ್ದು, ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ.

  • ಪೊನ್ನಿಯಿನ್ ಸೆಲ್ವನ್ 2 ಬೋರಿಂಗ್ ಎಂದ ಉಮೈರ್: ನೆಟ್ಟಿಗರ ತರಾಟೆ

    ಪೊನ್ನಿಯಿನ್ ಸೆಲ್ವನ್ 2 ಬೋರಿಂಗ್ ಎಂದ ಉಮೈರ್: ನೆಟ್ಟಿಗರ ತರಾಟೆ

    ಣಿರತ್ನಂ (Mani Ratnam) ನಿರ್ದೇಶನದಲ್ಲಿ ಮೂಡಿ ಬಂದ ‘ಪೊನ್ನಿಯಿನ್ ಸೆಲ್ವನ್ 2’ (Ponniyin Selvan 2) ಸಿನಿಮಾದ ಮೊದಲ ವಿಮರ್ಶೆ (Review) ಎನ್ನುವಂತೆ ಬಾಲಿವುಡ್ ನ ಸ್ವಯಂ ಘೋಷಿತ ವಿಮರ್ಶಕ ಉಮೈರ್ ಸಂಧು (Umair Sandhu) ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಅದೊಂದು ಬೋರ್ ಸಿನಿಮಾ. ಬೇಸರ ತರಿಸುತ್ತದೆ. ಸಿನಿಮಾ ನೋಡದೇ ಇದ್ದರೂ ಪರ್ವಾಗಿಲ್ಲ’ ಎಂದು ಬರೆದದ್ದು, ನೆಟ್ಟಿಗರು ಸಂಧು ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ನೂರಾರು ಕೋಟಿ ಬಜೆಟ್ ನಲ್ಲಿ ತಯಾರಾದ ಚಿತ್ರ ಪೊನ್ನಿಯಿನ್ ಸೆಲ್ವನ್ 2. ಇದರ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. ಹಾಗಾಗಿಯೇ ಎರಡನೇ ಭಾಗವನ್ನು ಚಿತ್ರೀಕರಿಸಿದ್ದಾರೆ ಮಣಿರತ್ನಂ. ಇದೇ ವಾರದಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ದೇಶದಾದ್ಯಂತ ಚಿತ್ರತಂಡ ಪ್ರಚಾರ ಮಾಡುತ್ತಿದೆ. ಈ ಸಂದರ್ಭದಲ್ಲಿ ಸಂಧು ಮಾಡಿರುವ ಟ್ವೀಟ್ ಆಕ್ರೋಶಕ್ಕೆ ಕಾರಣವಾಗಿದೆ. ಸಿನಿಮಾ ಚೆನ್ನಾಗಿದ್ದರೂ, ಚೆನ್ನಾಗಿಲ್ಲ ಎಂದು ಹಲವಾರು ಬಾರಿ ಬರೆದಿರುವ ಸಂಧು ಬಗ್ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ

    ಪೊನ್ನಿಯಿನ್ ಸೆಲ್ವನ್ ಭಾಗ ಒಂದು ರಿಲೀಸ್ ಆದಾಗಲೂ, ಇದೇ ಉಮೈರ್ ಸಿನಿಮಾದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದ. ಸ್ವತಃ ಮಣಿರತ್ನಂ ಪತ್ನಿ ಸುಹಾಸಿನಿ ಉಮೈರ್ ನನ್ನು ತರಾಟೆಗೆ ತಗೆದುಕೊಂಡಿದ್ದರು. ಸಿನಿಮಾ ಬಿಡುಗಡೆಗೂ ಮುನ್ನ ಹೇಗೆ ರಿವಿವ್ಯೂ ಮಾಡಿದ್ದೀಯಾ ಎಂದು ಕೇಳಿದ್ದರು. ಸಿನಿಮಾ ನೋಡದೇ ಹೀಗೆ ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ಬುದ್ದಿವಾದ ಹೇಳಿದ್ದರು.

    ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಸ್ಟಾರ್ ತಾರಾಬಳಗವಿರುವ ಸಿನಿಮಾ ‘ಪೊನ್ನಿಯಿನ್ ಸೆಲ್ವನ್ -2’. ಕಾರ್ತಿ (Karthi), ಐಶ್ವರ್ಯಾ ರೈ (Aishwarya Rai), ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಚಿತ್ರದಲ್ಲಿದೆ. ಮಣಿರತ್ನಂ ನಿರ್ದೇಶನ ಒಂದು ಶಕ್ತಿಯಾದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ಸೀಕ್ವೆಲ್ 2 ಮೇಲೆ ನಿರೀಕ್ಷೆ ಹೆಚ್ಚಿಸಿದೆ.

  • ʻಪೊನ್ನಿಯಿನ್ ಸೆಲ್ವನ್-2ʼ ಟ್ರೈಲರ್ ರಿಲೀಸ್: ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ

    ʻಪೊನ್ನಿಯಿನ್ ಸೆಲ್ವನ್-2ʼ ಟ್ರೈಲರ್ ರಿಲೀಸ್: ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ

    ಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ಕನಸಿನ ಕೂಸು ಐತಿಹಾಸಿಕ ದೃಶ್ಯಕಾವ್ಯ Ponniyin Selvan 2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಚೆನ್ನೈನಲ್ಲಿ ಮಾರ್ಚ್ 29ರಂದು ಸಂಜೆ ಅದ್ಧೂರಿಯಾಗಿ ಟ್ರೇಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ಜರುಗಿತು. ವಿಶೇಷ ಅತಿಥಿಯಾಗಿ ಆಗಮಿಸಿದ್ದ ಉಳಗನಾಯಗನ್ ಕಮಲ್ ಹಾಸನ್ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದ್ರು. ಟ್ರೈಲರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು. ಮಣಿರತ್ನಂ, ಕಾರ್ತಿ, ಐಶ್ವರ್ಯ ರೈ, ವಿಕ್ರಮ್, ತ್ರಿಷಾ, ಜಯಂರವಿ, ಪ್ರಕಾಶ್ ರೈ, ಶರತ್ ಕುಮಾರ್ ಸೇರಿದಂತೆ ಹಲವು ಸೂಪರ್ ಸ್ಟಾರ್ಸ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧರಿಸಿ ನಿರ್ದೇಶಕ ಮಣಿರತ್ನಂ ಎರಡು ಭಾಗದಲ್ಲಿ ಚಿತ್ರ ತಯಾರಿಸಿದ್ದರು. ಕಳೆದ ವರ್ಷ ರಿಲೀಸ್ ಆಗಿದ್ದ ಮೊದಲ ಭಾಗಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಪೊನ್ನಿಯಿನ್ ಸೆಲ್ವನ್ 500 ಕೋಟಿ ಬಾಚಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಲೈಕಾ ಪ್ರೊಡಕ್ಷನ್ ಜೊತೆಗೂಡಿ ಮಣಿರತ್ನಂ ನಿರ್ಮಿಸಿ ನಿರ್ದೇಶಿಸಿರುವ ಪೊನ್ನಿಯಿನ್ ಸೆಲ್ವನ್-2 ಸೀಕ್ವೆಲ್ ಟ್ರೈಲರ್ ರಿಲೀಸ್ ಆಗಿದ್ದು, ನಿರೀಕ್ಷೆ ನೂರ್ಮಡಿಗೊಳಿಸಿದೆ. ಇದನ್ನೂ ಓದಿ: ಪ್ರೀತಿಯ ಹೊಸ ಮಗ್ಗುಲಿಗೆ ಕಣ್ಣಾದ `ಚೌ ಚೌ ಬಾತ್’ ಸಿನಿಮಾ

    ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಹೋರಾಟ, ಪಾಂಡ್ಯ ರಾಜರ ಕುತಂತ್ರ, ಚೋಳ ಸಾಮ್ರಾಜ್ಯ ನಾಶಪಡಿಸಲು ನಂದಿನಿ ಮಾಡುವ ಶಪಥ, ಕರಿಕಾಲನ್ ವೀರಾವೇಶದ ಹೋರಾಟ, ನಂದಿನಿ ಕರಿಕಾಲನ್ ಮುಖಾಮುಖಿಯಾಗುವ ಸನ್ನಿವೇಶ. ಅದ್ಧೂರಿ ಮೇಕಿಂಗ್, ಬೃಹತ್ ಸೆಟ್ ಗಳು ಟ್ರೈಲರ್‌ನಲ್ಲಿ ಝಗಮಗಿಸಿವೆ. ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಪೊನ್ನಿಯಿನ್ ಸೆಲ್ವನ್-2 ಮೊದಲ ನೋಟ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಆಸ್ಕರ್ ವಿಜೇತ ಎ.ಆರ್ ರೆಹಮಾನ್ ಸಂಗೀತ ಸಿನಿಮಾಕ್ಕಿದೆ.

    ಟ್ರೈಲರ್ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಮಣಿರತ್ನಂ ತಂಡ ಕಟ್ಟಿಕೊಂಡು ಹೊರರಾಜ್ಯಗಳಲ್ಲಿಯೂ ಪ್ರಮೋಷನ್ ಶುರು ಮಾಡಲು ಸಜ್ಜಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಪೊನ್ನಿಯಿನ್ ಸೆಲ್ವನ್-2 ಏಪ್ರಿಲ್ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರ್ತಿದೆ. ಐಶ್ವರ್ಯ ರೈ (Aishwarya Rai), ತ್ರಿಷಾ, ಕಾರ್ತಿ, ವಿಕ್ರಂ, ಪ್ರಕಾಶ್ ರೈ, ಶರತ್ ಕುಮಾರ್, ಜಯಂರವಿ, ಐಶ್ವರ್ಯ ಲಕ್ಷ್ಮೀ, ಶೋಭಿತಾ ಧುಲಿಪಾಲ, ಪ್ರಭು ಸೇರಿದಂತೆ ದೊಡ್ಡ ಕ್ಯಾನ್ವಸ್ ಚಿತ್ರದಲ್ಲಿದೆ.

  • ‘ಪೊನ್ನಿಯಿನ್ ಸೆಲ್ವನ್-2’ ಸಿನಿಮಾದ ಮತ್ತೊಂದು ಹಾಡು ರಿಲೀಸ್

    ‘ಪೊನ್ನಿಯಿನ್ ಸೆಲ್ವನ್-2’ ಸಿನಿಮಾದ ಮತ್ತೊಂದು ಹಾಡು ರಿಲೀಸ್

    ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಡ್ರೀಮ್ ಪ್ರಾಜೆಕ್ಟ್ ಪ್ಯಾನ್ ಇಂಡಿಯಾ ಸಿನಿಮಾ ‘ಪೊನ್ನಿಯಿನ್ ಸೆಲ್ವನ್-2 (Ponniyin Selvan 2) ಬಿಡುಗಡೆಗೆ ರೆಡಿಯಾಗಿದೆ. ಏಪ್ರಿಲ್ 28ಕ್ಕೆ ಸಿನಿಮಾ ವರ್ಲ್ಡ್ ವೈಡ್ ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಈಗಾಗಲೇ ಟೀಸರ್ ಮೂಲಕ ಸೀಕ್ವೆಲ್ 2 ಮೋಡಿ ಮಾಡಲು ಶುರುವಿಟ್ಟಿದೆ. ಇದೀಗ ಚಿತ್ರತಂಡ ಚಿತ್ರದ ಮೊದಲ ಸಾಂಗ್ ‘ಕಿರುನಗೆ’ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿದೆ.

    ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಕಿರುನಗೆ’ ಹಾಡಿಗೆ ಜಯಂತ್ ಕಾಯ್ಕಿಣಿ ಚೆಂದದ ಸಾಲುಗಳನ್ನು ಪೋಣಿಸಿದ್ದು, ಗಾಯಕಿ ರಕ್ಷಿತಾ ಸುರೇಶ್ ಇಂಪಾದ ದನಿಯಾಗಿದ್ದಾರೆ. ಕಿರುನಗೆ  ಮೆಲೋಡಿ ಹಾಡು ಬಿಡುಗಡೆಯಾಗಿ ಕೇಳುಗರ ಮನ  ಸೆಳೆಯುತ್ತಿದೆ.  ಇದನ್ನೂ ಓದಿ: ಸೆಕ್ಸ್ ಸಿಂಬಲ್ ಅಂತ ಕರೆದರೆ ಬೇಸರವಿಲ್ಲ ಎಂದ ನಟಿ ಮಲೈಕಾ

    ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಸ್ಟಾರ್ ತಾರಾಬಳಗವಿರುವ ಸಿನಿಮಾ ‘ಪೊನ್ನಿಯಿನ್ ಸೆಲ್ವನ್ -2’. ಕಾರ್ತಿ (Karthi), ಐಶ್ವರ್ಯಾ ರೈ (Aishwarya Rai), ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಚಿತ್ರದಲ್ಲಿದೆ. ಮಣಿರತ್ನಂ ನಿರ್ದೇಶನ ಒಂದು ಶಕ್ತಿಯಾದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ಸೀಕ್ವೆಲ್ 2 ಮೇಲೆ ನಿರೀಕ್ಷೆ ಹೆಚ್ಚಿಸಿದೆ.

    ಲೇಖಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ ಆಧಾರಿತ ಚಿತ್ರವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಸೀಕ್ವೆಲ್ ಅಭೂತಪೂರ್ವ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ ಆ ಗೆಲುವಿನ ಸಂಭ್ರಮದಲ್ಲೇ ಎರಡನೇ ಸೀಕ್ವೆಲ್ ರೆಕಾರ್ಡ್ ಕ್ರಿಯೇಟ್ ಮಾಡಲು ರೆಡಿಯಾಗಿದೆ.  ಏಪ್ರಿಲ್ 28ಕ್ಕೆ ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಬರಲಿದೆ.

  • ‘ಪೊನ್ನಿಯಿನ್ ಸೆಲ್ವನ್-2’ ತಮಿಳು, ಹಿಂದಿ ಆವೃತ್ತಿ ಬಿಡುಗಡೆ

    ‘ಪೊನ್ನಿಯಿನ್ ಸೆಲ್ವನ್-2’ ತಮಿಳು, ಹಿಂದಿ ಆವೃತ್ತಿ ಬಿಡುಗಡೆ

    ಮ್ಯಾಕ್ಸ್ ಕಾರ್ಪೊರೇಷನ್ ಮತ್ತು ಲೈಕಾ ಪ್ರೊಡಕ್ಷನ್ಸ್ ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರ ‘ಪೊನ್ನಿಯಿನ್ ಸೆಲ್ವನ್-2’ (Ponniyin Selvan 2) ತಮಿಳು ಹಾಗೂ ಹಿಂದಿ ಆವೃತ್ತಿ ಐಮ್ಯಾಕ್ಸ್ ನಲ್ಲಿ ಬಿಡುಗಡೆಯಾಗುತ್ತಿರುವುದನ್ನು ಖಾತ್ರಿ ಪಡಿಸಿದೆ. ತಮಿಳು ಚಿತ್ರರಂಗದ ಬಿಗ್ ಪ್ರಾಜೆಕ್ಟ್ ಹಾಗೂ ಸ್ಟಾರ್ ತಾರಾಗಣವನ್ನೊಳಗೊಂಡ ‘ಪೊನ್ನಿಯಿನ್ ಸೆಲ್ವನ್-2’ ಏಪ್ರಿಲ್ 28ರಂದು ಬಿಡುಗಡೆಯಾಗುತ್ತಿದ್ದು, ಭಾರತದಾದ್ಯಂತ ಚಿತ್ರದ ತಮಿಳು ಹಾಗೂ ಹಿಂದಿ ಆವೃತ್ತಿ ಐಮ್ಯಾಕ್ಸ್ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ.

    ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ. ಕಾರ್ತಿ (Karthi), ಐಶ್ವರ್ಯಾ ರೈ (Aishwarya Rai), ಚಿಯಾನ್ ವಿಕ್ರಮ್ (Chiyan Vikram), ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ರಂತಹ ದಿಗ್ಗಜ ಕಲಾವಿದರ ಸಮಾಗಮವಿರುವ ಈ ಚಿತ್ರ ಪ್ರೇಕ್ಷಕ ಮಹಾಶಯರಿಂದಲೂ ಬಹುಪರಾಕ್ ಪಡೆದುಕೊಂಡಿತ್ತು. ಸೀಕ್ವಲ್ 2 ಏಪ್ರಿಲ್ 28ರಂದು ಮನರಂಜನೆ ನೀಡಲು ಸಜ್ಜಾಗಿದೆ. ಪ್ಯಾನ್ ಇಂಡಿಯಾ ಚಿತ್ರದ ತಮಿಳು ಹಾಗೂ ಹಿಂದಿ ಸೀಕ್ವೆಲ್ ಐಮ್ಯಾಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ:ಥೈಲ್ಯಾಂಡ್‌ನಲ್ಲಿ ನಟಿ ಸೋನು ಜೊತೆ ನೇಹಾ ಗೌಡ ಮೋಜು- ಮಸ್ತಿ

    ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಪ್ರಖ್ಯಾತಿ ಗಳಿಸಿರುವ ಲೈಕಾ ಸ್ಟುಡಿಯೋ ತಮಿಳು ಚಿತ್ರರಂಗದ ಬಿಗ್ ಬಜೆಟ್ ಸಿನಿಮಾಗಳಾದ ‘ಐ’, ‘ರೋಬೋಟ್ 2.0’ ಹಾಗೂ ‘ಪೊನ್ನಿಯಿನ್ ಸೆಲ್ವನ್- 1’ ನಿರ್ಮಾಣ ಮಾಡಿದೆ. ಇದೀಗ ‘ಪೊನ್ನಿಯಿನ್ ಸೆಲ್ವನ್- 2’ ಕೂಡ ಇದೇ ಸಂಸ್ಥೆಯಡಿ ನಿರ್ಮಾಣವಾಗಿ ತೆರೆ ಕಾಣುತ್ತಿದೆ. ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ, ರವಿವರ್ಮನ್ ಛಾಯಾಗ್ರಹಣ, ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ. ಸಾಕಷ್ಟು ನಿರೀಕ್ಷೆ ಕ್ರಿಯೇಟ್ ಮಾಡಿರುವ ‘ಪೊನ್ನಿಯಿನ್ ಸೆಲ್ವನ್- 2’ ಏಪ್ರಿಲ್ 28ರಂದು ಬಿಡುಗಡೆಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್

    `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್

    ಣಿರತ್ನಂ (Maniratnam) ನಿರ್ದೇಶನದ `ಪೊನ್ನಿಯನ್ ಸೆಲ್ವನ್’ (Ponniyin Selvan) ಚಿತ್ರಮಂದಿರದಲ್ಲಿ ಮ್ಯಾಜಿಕ್ ಮಾಡಿತ್ತು. ಪ್ರೇಕ್ಷಕರು ಈ ಸಿನಿಮಾ ನೋಡಿ ಖುಷಿಪಟ್ಟಿದ್ದರು. ಈ ಪಾರ್ಟ್ 2 ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ.

    ಐತಿಹಾಸಿಕ ಸ್ಟೋರಿ, ಸ್ಟಾರ್ ಡೈರೆಕ್ಟರ್, ಸ್ಟಾರ್ ತಾರಾಗಣ, ಅದ್ದೂರಿ ಮೇಕಿಂಗ್, ಸಂಗೀತ ಮಾಂತ್ರಿಕನ ಮ್ಯೂಸಿಕ್ ಇದೆಲ್ಲವೂ ಒಳಗೊಂಡ ಸಿನಿಮಾವೇ ‘ಪೊನ್ನಿಯಿನ್ ಸೆಲ್ವನ್’. ಸೆಪ್ಟೆಂಬರ್ 30ರಂದು ಮೊದಲ ಸೀಕ್ವೆಲ್ ರಿಲೀಸ್ ಆಗಿ ವರ್ಲ್ಡ್ ವೈಡ್ ಸೂಪರ್ ಸಕ್ಸಸ್ ಕಂಡ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ‘ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು 2023 ಏಪ್ರಿಲ್ 28ಕ್ಕೆ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಇದನ್ನೂ ಓದಿ: `ಕಾಂತಾರ’ ನಮ್ಮ ಕನ್ನಡದ ಹೆಮ್ಮೆ ಎಂದ ಭರಾಟೆ ಬ್ಯೂಟಿ ಶ್ರೀಲೀಲಾ

    ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್’. ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ರಂತ ದಿಗ್ಗಜ ಕಲಾವಿದರ ಸಮಾಗಮವಿರುವ ಈ ಚಿತ್ರ ಪ್ರೇಕ್ಷಕ ಮಹಾಶಯರಿಂದಲೂ ಬಹುಪರಾಕ್ ಪಡೆದುಕೊಂಡಿತ್ತು. ಮಣಿರತ್ನಂ ನಿರ್ದೇಶನ ಒಂದು ಶಕ್ತಿಯಾದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್, ಸ್ಟಾರ್ ಹಾಗೂ ಅನುಭವಿ ಕಲಾವಿದರ ನಟನೆ, ಅದ್ದೂರಿ ಮೇಕಿಂಗ್ ಎಲ್ಲವೂ ತೆರೆ ಮೇಲೆ ಕಮಾಲ್ ಮಾಡಿತ್ತು. ಎಲ್ಲೆಡೆ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಚಿತ್ರತಂಡದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಇದೀಗ ಮತ್ತೊಮ್ಮೆ ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಚಿತ್ರತಂಡ ರೆಡಿಯಾಗಿದೆ. ಸೀಕ್ವಲ್ 2 ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ.

    ಲೇಖಕ ಹಾಗೂ ಸ್ವಾತಂತ್ರ‍್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಐತಿಹಾಸಿಕ ಕಾದಂಬರಿ ಆಧಾರಿತ ಚಿತ್ರವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಭಾಗ ವರ್ಲ್ ವೈಡ್ ಅಭೂತ ಪೂರ್ವ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ ಆ ಗೆಲುವಿನ ಸಂಭ್ರಮದಲ್ಲೇ ಎರಡನೇ ಸೀಕ್ವೆಲ್ ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡಿದೆ ಚಿತ್ರತಂಡ. ಏಪ್ರಿಲ್ 28ಕ್ಕೆ `ಪೊನ್ನಿಯಿನ್ ಸೆಲ್ವನ್’ ಸೀಕ್ವೆಲ್ 2 ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಲು ಬರಲಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಈ ಅದ್ದೂರಿ ಸಿನಿಮಾ ನಿರ್ಮಾಣವಾಗಿದ್ದು, ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]