Tag: Polygraph Test

  • ಕೋಲ್ಕತ್ತಾ ರೇಪ್ & ಮರ್ಡರ್ ಕೇಸ್: ಪ್ರಮುಖ ಆರೋಪಿ ಸೇರಿ 7 ಮಂದಿಯ ಸುಳ್ಳು ಪತ್ತೆ ಪರೀಕ್ಷೆ

    ಕೋಲ್ಕತ್ತಾ ರೇಪ್ & ಮರ್ಡರ್ ಕೇಸ್: ಪ್ರಮುಖ ಆರೋಪಿ ಸೇರಿ 7 ಮಂದಿಯ ಸುಳ್ಳು ಪತ್ತೆ ಪರೀಕ್ಷೆ

    ಕೋಲ್ಕತ್ತಾ: ಇಲ್ಲಿನ ಆರ್‍ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ), 7 ಜನರ ಸುಳ್ಳು ಪತ್ತೆ ಪರೀಕ್ಷೆ ನಡೆಸಿದೆ.

    ಒಂದೆಡೆ ಜೈಲಿನಲ್ಲಿ ಸಂಜಯ್ ರಾಯ್ ಪಾಲಿಗ್ರಾಫ್ ಪರೀಕ್ಷೆ ನಡೆದಿದೆ. ಉಳಿದ ಆರು ಮಂದಿಗೆ ಸಿಬಿಐ ಕಚೇರಿಯಲ್ಲಿ ಪರೀಕ್ಷೆ ನಡೆಯುತ್ತಿದೆ. ಇದರೊಂದಿಗೆ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‍ಗೂ ಪರೀಕ್ಷೆ ನಡೆಸಲಾಗಿದೆ.

    ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಬಿಐ ಅಧಿಕಾರಿಗಳ ವಿಶೇಷ ತಂಡ ಶನಿವಾರ (ಇಂದು) ಕೋಲ್ಕತ್ತಾಗೆ ಆಗಮಿಸಿತು. ಆರೋಪಿ ಸಂಜಯ್ ನೀಡಿದ ಹೇಳಿಕೆಗಳಲ್ಲಿ ಹಲವು ಅಸ್ಪಷ್ಟತೆ ಇದೆ. ಇದರಿಂದಾಗಿ ಆತನಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸುವ ಅಗತ್ಯತೆ ಇದೆ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ಸುಪ್ರೀಂ ಕೋರ್ಟ್ 7 ಜನರ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿಬಿಐಗೆ ಒಪ್ಪಿಗೆ ನೀಡಿತ್ತು.

    ಪಾಲಿಗ್ರಾಫ್ ಪರೀಕ್ಷೆಯು ರಕ್ತದೊತ್ತಡ, ನಾಡಿ, ಉಸಿರಾಟ ಮತ್ತು ಚರ್ಮದ ವಾಹಕತೆಯಂತಹ ಹಲವಾರು ಶಾರೀರಿಕ ಸೂಚಕಗಳನ್ನು ಅಳೆಯುವ ಮತ್ತು ದಾಖಲಿಸುವ ಒಂದು ವಿಧಾನವಾಗಿದೆ. ವ್ಯಕ್ತಿಗೆ ಪ್ರಶ್ನೆಗಳ ಸರಣಿಯನ್ನು ಕೇಳಲಾಗುತ್ತದೆ. ಪರೀಕ್ಷೆಯ ಪ್ರಕಾರ, ಸುಳ್ಳು ಉತ್ತರಗಳು ಶಾರೀರಿಕ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತವೆ. ಈ ಮೂಲಕ ವಿಚಾರಣೆ ವೇಳೆ ಸುಳ್ಳು ಹೇಳುವುದನ್ನು ಪತ್ತೆ ಮಾಡಲಾಗುತ್ತದೆ.

    ಪಾಲಿಗ್ರಾಫ್ ಪರೀಕ್ಷೆಯು ಸಂಪೂರ್ಣ ಸರಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಅಲ್ಲದೇ ಪರೀಕ್ಷೆಯ ಫಲಿತಾಂಶವನ್ನು ತಪೆÇ್ಪಪ್ಪಿಗೆ ಎಂದು ಪರಿಗಣಿಸಲಾಗುವುದಿಲ್ಲ. ಇದರೊಂದಿಗೆ ನ್ಯಾಯಾಲಯದಲ್ಲಿ ಸ್ವೀಕಾರಾರ್ಹವಲ್ಲ. ತನಿಖಾಧಿಕಾರಿಗಳಿಗೆ ಅವರ ತನಿಖೆಯಲ್ಲಿ ಸಹಾಯ ಮಾಡಲು ಮತ್ತು ಶಂಕಿತರಿಂದ ಸುಳಿವುಗಳನ್ನು ಪಡೆಯಲು ಮಾತ್ರ ಪರೀಕ್ಷೆಯನ್ನು ಮಾಡಲಾಗುತ್ತದೆ.

    ಏನಿದು ಕೇಸ್?‌
    ಕಳೆದ ಶುಕ್ರವಾರ ಬೆಳಗ್ಗೆ ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿರುವುದು ಗೊತ್ತಾಗಿತ್ತು. ವೈದ್ಯಕೀಯ ವಿದ್ಯಾರ್ಥಿನಿಯ ಮೃತದೇಹವು ರಕ್ತದ ಕಲೆಗಳ ಸಹಿತ ಹಾಸಿಗೆಯ ಮೇಲೆ ಬಿದ್ದಿರುವುದು ಪತ್ತೆಯಾಗಿತ್ತು. ಜೊತೆಗೆ ಆಕೆಯ ಕಣ್ಣು ಮತ್ತು ಬಾಯಿಯಿಂದ ರಕ್ತ ಹರಿಯುತ್ತಿತ್ತು. ಘಟನೆ ಬೆಳಕಿಗೆ ಬಂದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಮಹಿಳಾ ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವರದಿಯಲ್ಲಿ ಬಹಿರಂಗವಾಯಿತು.

  • ಶ್ರದ್ಧಾ ಹತ್ಯೆ ಮಾಡಿದ್ದು ನಾನೇ, ಆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ – ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅಫ್ತಾಬ್ ಹೇಳಿಕೆ

    ಶ್ರದ್ಧಾ ಹತ್ಯೆ ಮಾಡಿದ್ದು ನಾನೇ, ಆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ – ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅಫ್ತಾಬ್ ಹೇಳಿಕೆ

    ನವದೆಹಲಿ: ಶ್ರದ್ಧಾ ವಾಕರ್ (Shraddha Walkar) ಹತ್ಯೆ ಮಾಡಿದ್ದು ನಾನೇ. ಆ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ (Aftab Poonawala) ಹೇಳಿದ್ದಾನೆ. ಪಾಲಿಗ್ರಾಫ್ ಪರೀಕ್ಷೆ (Polygraph Test) ವೇಳೆ ಆತ ತಪ್ಪೊಪ್ಪಿಕೊಂಡಿದ್ದು, ಕೊಲೆಯ ಎಲ್ಲಾ ಸಂಗತಿಗಳನ್ನು ವಿವರವಾಗಿ ಹಂಚಿಕೊಂಡಿದ್ದಾನೆ ಎಂದು ಎಫ್‌ಎಸ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

    ಶ್ರದ್ಧಾ ಹತ್ಯೆ ಮಾಡಿದ್ದ ಅಫ್ತಾಬ್ ಪೂನವಾಲಾ ವಿಚಾರಣೆ ವೇಳೆ ಪೊಲೀಸರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆ ಕೋರ್ಟ್ ಅನುಮತಿ ಮೇರೆಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅಫ್ತಾಬ್ ಹತ್ಯೆಯನ್ನು ಒಪ್ಪಿಕೊಂಡಿದ್ದು, ಕೊಲೆ ಮಾಡಿ ದೇಹವನ್ನು ತುಂಡರಿಸಿದ ಬಗ್ಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ ಪ್ರಿಯತಮೆ ಕೊಲೆಗೈದ ಪ್ರಿಯಕರ

    ಮೂಲಗಳ ಪ್ರಕಾರ, ಅಫ್ತಾಬ್ ಮೇ 18 ರಂದು ಶ್ರದ್ಧಾಳ ಕತ್ತು ಹಿಸುಕಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, 3 ವಾರಗಳ ಕಾಲ ಫ್ರಿಡ್ಜ್‌ನಲ್ಲಿ ಇರಿಸಿ ಬಳಿಕ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಕಾಡಿನಲ್ಲಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಇದೇ ವೇಳೆ ಆತ ಡೇಟಿಂಗ್ ಆ್ಯಪ್ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾನೆ. ಅಫ್ತಾಬ್ ಹಲವು ಆ್ಯಪ್‌ಗಳನ್ನು ಬಳಸುತ್ತಿದ್ದು, ಅನೇಕ ಯುವತಿಯರ ಜೊತೆಗೆ ಸಂಪರ್ಕದಲ್ಲಿ ಇದ್ದೆ. ಅವರೊಂದಿಗೆ ಸಂಬಂಧವೂ ಹೊಂದಿದ್ದೆ ಎಂದು ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಗೆಳೆಯನ ವಿಚಾರಕ್ಕೆ ಹುಡುಗಿಯನ್ನು ಥಳಿಸಿದ ಯುವತಿಯರ ಗುಂಪು

    Live Tv
    [brid partner=56869869 player=32851 video=960834 autoplay=true]

  • ಪೀಸ್‌ಪೀಸ್ ಪ್ರೇಮಿ ಅಫ್ತಾಬ್ ಹತ್ಯೆಗೆ ಯತ್ನ – ಪೊಲೀಸ್ ವ್ಯಾನ್ ಮೇಲೆ ದಾಳಿ

    ಪೀಸ್‌ಪೀಸ್ ಪ್ರೇಮಿ ಅಫ್ತಾಬ್ ಹತ್ಯೆಗೆ ಯತ್ನ – ಪೊಲೀಸ್ ವ್ಯಾನ್ ಮೇಲೆ ದಾಳಿ

    ನವದೆಹಲಿ: ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ (LiveIn RelationShip) ಗೆಳತಿ ಶ್ರದ್ಧಾ ವಾಕರ್‌ನನ್ನು (Shraddha Walker) ಭೀಕರವಾಗಿ ಹತ್ಯೆ ಮಾಡಿದ್ದ ಅಫ್ತಾಬ್ ಅಮೀನ್ ಪೂನಾವಾಲ (Aaftab Amin Poonawala) ಹತ್ಯೆಗೆ ಸೋಮವಾರ ಯತ್ನಿಸಲಾಗಿದೆ.

    ಕತ್ತಿ ಹಿಡಿದುಬಂದ ಗುಂಪೊಂದು ಪೊಲೀಸ್ ವ್ಯಾನ್ (Poliec Van) ಮೇಲೆ ಏಕಾ-ಏಕಿ ದಾಳಿ ಮಾಡಿದೆ. ದೆಹಲಿಯ ರೋಹಿಣಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (Forensic Laboratory) 2ನೇ ಪಾಲಿಗ್ರಾಫ್ ಪರೀಕ್ಷೆ (Polygraph Test) ನಡೆಸಿ ಮರಳಿ ಜೈಲಿಗೆ ಕರೆದೊಯ್ಯುವಾಗ ದಾಳಿ ನಡೆದಿದೆ. ಇದನ್ನೂ ಓದಿ: ಶ್ರದ್ಧಾವಾಕರ್ ಹತ್ಯೆ ಪ್ರಕರಣ – ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‍ಗೆ ಕೇಳಿದ ಪ್ರಶ್ನೆಗಳೇನು?

    15 ಜನರ ಗುಂಪು ಕತ್ತಿ ಹಿಡಿದು ಏಕಾ-ಏಕಿ ದಾಳಿ ನಡೆಸಿದೆ. ಅಲ್ಲದೇ ಆ ಗುಂಪು ಅಫ್ತಾಬ್‌ನನ್ನೇ (Aaftab Amin Poonawala) ಹುಡುಕುತ್ತಿತ್ತು. ಅದು ಬಲಪಂಥೀಯರ ಗುಂಪಿನಂತೆ ಕಂಡುಬಂದಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ತಕ್ಷಣ ಜಾಗೃತರಾದ ಪೊಲೀಸರು ದಾಳಿಯನ್ನು ಹತ್ತಿಕ್ಕಿ, ಅಫ್ತಾಬ್‌ನನ್ನು ರಕ್ಷಣೆ ಮಾಡಿದ್ದಾರೆ. ದಾಳಿಗೆ ಯತ್ನಿಸಿದ ಕೆಲವರು ಗಾಯಗೊಂಡಿದ್ದಾರೆ.

    ಪೀಸ್‌ಪೀಸ್ ಪ್ರೇಮಿ ಪ್ರಕರಣವನ್ನು ದೆಹಲಿ ಪೊಲೀಸರು ವಿಭಿನ್ನ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಕೂತುಹಲಕಾರಿ ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಇದನ್ನೂ ಓದಿ: ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್

    ಶ್ರದ್ಧಾ ಉಂಗುರ – ಗೆಳತಿಗೆ ಉಡುಗೊರೆ:
    ನವೆಂಬರ್ 12ರಂದು ಬಂಧನವಾಗಿರುವ ಅಫ್ತಾಬ್, ಶ್ರದ್ಧಾ ಮೃತದೇಹವನ್ನು ಕತ್ತರಿಸಿ ಮಾಡಿ ಮನೆಯಲ್ಲೇ ಇಟ್ಟುಕೊಂಡಿದ್ದರೂ ಡೇಟಿಂಗ್ ಆ್ಯಪ್‌ನಲ್ಲಿ (Dating App) ಪರಿಚಯವಾದ ಡಾಕ್ಟರ್ (Doctor) ಗೆಳತಿಯೊಂದಿಗೆ ಮನೆಯಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದ. ಜೊತೆಗೆ ಶ್ರದ್ಧಾಳ ಉಂಗುರವನ್ನೂ ಆಕೆಗೆ ಉಡುಗೊರೆಯಾಗಿ ನೀಡಿದ್ದ ಎಂದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

    ಅಫ್ತಾಬ್ ಶ್ರದ್ಧಾಳನ್ನು ಕೊಂದ ಬಳಿಕವೂ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಗೆಳತಿಯೊಂದಿಗೆ ತನ್ನ ಮನೆಯಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಆಕೆ ಮನೋವೈದ್ಯೆ ಎಂದು ಪೊಲೀಸರು ಗುರುತಿಸಿ, ವಿಚಾರಣೆಗೆ ಒಳಪಡಿಸಿದ್ದರು. ಇದೀಗ ಕೊಂದ ಗೆಳತಿಯ ಉಂಗುರವನ್ನು ಡಾಕ್ಟರ್‌ಗೆ ಉಡುಗೊರೆಯಾಗಿ ನೀಡಿದ್ದ ಎಂದು ತಿಳಿದುಬಂದಿದೆ.

    ಈಗಾಗಲೇ ಶ್ರದ್ಧಾ ವಾಕರ್ ದೇಹದ 20 ಭಾಗಗಳನ್ನು ಸಂಗ್ರಹಿಸಲಾಗಿದೆ. ಅಫ್ತಾಬ್ ಹತ್ಯೆಗೆ ಬಳಸಿದ್ದ 5-6 ಇಂಚಿನ 5 ಚಾಕುಗಳನ್ನು ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರದ್ಧಾವಾಕರ್ ಹತ್ಯೆ ಪ್ರಕರಣ – ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‍ಗೆ ಕೇಳಿದ ಪ್ರಶ್ನೆಗಳೇನು?

    ಶ್ರದ್ಧಾವಾಕರ್ ಹತ್ಯೆ ಪ್ರಕರಣ – ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‍ಗೆ ಕೇಳಿದ ಪ್ರಶ್ನೆಗಳೇನು?

    ನವದೆಹಲಿ: ಶ್ರದ್ಧಾ ವಾಕರ್ (Shraddha Walkar) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ (Aaftab Poonawala) ಶುಕ್ರವಾರ ಎರಡನೇ ದಿನದ ಪಾಲಿಗ್ರಾಫ್ ಪರೀಕ್ಷೆಗೆ (Polygraph Test) ಒಳಪಡಿಸಲಾಯಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಪರೀಕ್ಷೆಯಲ್ಲಿ ಹಲವು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ, ಇನ್ನು ಕೆಲವು ಪ್ರಶ್ನೆಗಳಿಗೆ ಉತ್ತರ ನೀಡದೇ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.

    ಪಾಲಿಗ್ರಾಫ್ ಪರೀಕ್ಷೆಗೆ ಸಾಕೇತ್ ಜಿಲ್ಲಾ ನ್ಯಾಯಲಯ ಅನುಮತಿ ನೀಡಿದ ಬಳಿಕ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ತೀವ್ರವಾಗುತ್ತಿದ್ದಂತೆ ಕೆಮ್ಮು ಆರಂಭಿಸಿದ ಅಫ್ತಾಬ್ ನಾಡಿ ಮಿಡಿತ, ಹೃದಯ ಬಡಿತ, ಮಾನಸಿಕ ಒತ್ತಡ ಸರಿಯಾಗಿ ದಾಖಲಾಗದ ಹಾಗೇ ಮಾಡಿದ ಎನ್ನಲಾಗಿದೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿ, 20 ಲಕ್ಷ ಉದ್ಯೋಗ ಸೃಷ್ಟಿ – ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರವಸೆ

    ಅಫ್ತಾಬ್ ಉದ್ದೇಶ ಪೂರ್ವಕವಾಗಿ ಅನಾರೋಗ್ಯಕ್ಕೆ ಈಡಾದಂತೆ ಕಂಡು ಬಂದ ಹಿನ್ನೆಲೆ ಮತ್ತೊಮ್ಮೆ ಪರೀಕ್ಷೆ ನಡೆಸಲು ನಿರ್ಧರಿಸಿ ಶುಕ್ರವಾರ ಪರೀಕ್ಷೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಮುಂದಿನ ಪರೀಕ್ಷೆಯಲ್ಲಿ ಅಫ್ತಾಬ್ ಪೊಲೀಸರ ದಾರಿ ತಪ್ಪಿಸುವ ಪ್ರಯತ್ನ ಮಾಡಿದಲ್ಲಿ ನಾರ್ಕೊ ವಿಶ್ಲೇಷಣೆ ಪರೀಕ್ಷೆಗೆ ಒಳಗಾಗಬಹುದು ಎಂದು ಮೂಲಗಳು ಹೇಳಿವೆ.

    ಪಾಲಿಗ್ರಾಫ್ ಪರೀಕ್ಷೆ ಎಂದರೇನು?
    ಸುಳ್ಳು ಪತ್ತೆಕಾರಕ ಪರೀಕ್ಷೆಯನ್ನು ಪಾಲಿಗ್ರಾಫ್‌ ಪರೀಕ್ಷೆ ಎಂದು ಕರೆಯಲಾಗುತ್ತದೆ. ಇದು ಮಾನವನ ದೇಹದ ಮೇಲೆ ಸೆನ್ಸಾರ್‌ಗಳನ್ನು ಸ್ಥಾಪಿಸಿ, ಅದರ ಸಹಾಯದಿಂದ, ಪ್ರಶ್ನೆಯನ್ನು ಕೇಳಿದ ಸಮಯದಲ್ಲಿ ದೇಹದಲ್ಲಿ ಸಂಭವಿಸುವ ಜೈವಿಕ ಭೌತಿಕ ಬದಲಾವಣೆಗಳನ್ನು ಪತ್ತೆಹಚ್ಚಲು ಸಾಧ್ಯವಿದೆ. ಸರಳವಾಗಿ ಹೇಳುವುದಾದರೆ, ನಿರ್ದಿಷ್ಟ ಘಟನೆಯ ಬಗ್ಗೆ ಅಭ್ಯರ್ಥಿಯನ್ನು ಕೇಳಿದಾಗ, ಒಬ್ಬ ವ್ಯಕ್ತಿಯು ಸುಳ್ಳು ಹೇಳುತ್ತಿದ್ದಾನೆಯೇ ಅಥವಾ ಸತ್ಯ ಹೇಳುತ್ತಾನೆಯೇ ಎಂದು ಪ್ರತಿಪಾದಿಸಲು ಅನುಮತಿಸುವ ದತ್ತಾಂಶವನ್ನು ಪರದೆಯು ಪ್ರದರ್ಶಿಸುತ್ತದೆ. ಈ ಒಟ್ಟಾರೆ ಪ್ರಕ್ರಿಯೆಗೆ ಪಾಲಿಗ್ರಾಫ್‌ ಪರೀಕ್ಷೆ ಎಂದು ಹೇಳಲಾಗುತ್ತದೆ.

    ಶುಕ್ರವಾರ ನಡೆದ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಹತ್ತಾರು ಪ್ರಶ್ನೆಗಳನ್ನು ಕೇಳಲಾಗಿದೆ. ಮುಖ್ಯವಾಗಿ, ಶ್ರದ್ಧಾಳನ್ನು ಕೊಂದಿದ್ದೇಕೆ ಮತ್ತು ಕೊಲ್ಲಲು ಯಾವ ಆಯುಧವನ್ನು ಬಳಸಿದ್ದೀರಿ? ಶ್ರದ್ಧಾ ದೇಹವನ್ನು ಹೇಗೆ ಕತ್ತರಿಸಿದ್ದೀರಿ? ಕತ್ತರಿಸುವಾಗ ತಪ್ಪಿತಸ್ಥ ಭಾವನೆ ಬರಲಿಲ್ಲವೇ? ಕತ್ತರಿಸಿದ ದೇಹದ ಭಾಗಗಳನ್ನು ಎಲ್ಲಿ ಎಸೆದಿದ್ದೀರಿ? ಶ್ರದ್ಧಾ ವಾಕರ್ ಹತ್ಯೆ ನಂತರ ನೀವು ಏನು ಮಾಡಿದ್ದೀರಿ? ಕೊಲೆಯ ಆಯುಧ ಎಲ್ಲಿದೆ? ಕೊಲ್ಲುವ ಏಕೈಕ ಉದ್ದೇಶದಿಂದ ಶ್ರದ್ಧಾಳನ್ನು ದೆಹಲಿಗೆ ಕರೆತಂದಿದ್ದೀರಾ ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]