Tag: politics

  • ಸಿಎಂ ಡಿನ್ನರ್ ಮೀಟಿಂಗ್ ಯಾಕೆ ಅಂತ ಗೊತ್ತಿಲ್ಲ: ಚೆಲುವರಾಯಸ್ವಾಮಿ

    ಸಿಎಂ ಡಿನ್ನರ್ ಮೀಟಿಂಗ್ ಯಾಕೆ ಅಂತ ಗೊತ್ತಿಲ್ಲ: ಚೆಲುವರಾಯಸ್ವಾಮಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಡಿನ್ನರ್ ಮೀಟಿಂಗ್ (Dinner Meeting) ಕರೆದಿರೋದು ಯಾಕೆ ಅಂತ ನನಗೆ ಗೊತ್ತಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ (Chaluvaraya Swamy) ತಿಳಿಸಿದ್ದಾರೆ.

    ಸಚಿವರಿಗೆ ಸಿಎಂ  ಸಿದ್ದರಾಮಯ್ಯ ಅವರು ಅ.13ರ ರಾತ್ರಿ ಔತಣಕೂಟಕ್ಕೆ ಆಹ್ವಾನ ನೀಡಿದ ವಿಚಾರವಾಗಿ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ಈ ವೇಳೆ, ನನಗೆ ಏನು ವಿಷಯ ಅಂತ ಗೊತ್ತಿಲ್ಲ. ಇದಕ್ಕೂ ಮುನ್ನ ಎರಡ್ಮೂರು ಸಭೆ ಬಾರಿ ಕರೆದಿದ್ದಾರೆ.ಈ ವೇಳೆ ಸರ್ಕಾರದ ಕಾರ್ಯಕ್ರಮ, ಅಭಿವೃದ್ಧಿ, ಪಕ್ಷದ ಸಂಘಟನೆ, ಸ್ಥಳೀಯ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದರು. ಈಗಲೂ ಅದೇ ಇರಬಹುದು. ಆದ್ರೆ ಸಂಪುಟ ಪುನರ್‌ಚನೆ ಬೇರೆ. ಇದಕ್ಕೂ ಅದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಂಪುಟ ಪುನರ್‌ಚನೆ ವದಂತಿ ಬೆನ್ನಲ್ಲೇ ಮೂವರು ಸಚಿವರಿಂದ ಬ್ರೇಕ್‌ಫಾಸ್ಟ್‌ ಮೀಟಿಂಗ್‌

    ಸಂಪುಟ ಪುನರ್‌ಚನೆ ಎಲ್ಲವೂ ಪಕ್ಷ ಮತ್ತು ಸಿಎಂ ಅವರಿಗೆ ಬಿಟ್ಟಿದ್ದು. ಅವರಿಗೆ ಸಂಬಂಧಿಸಿದ್ದು. ಖಾತೆ ಬದಲಾವಣೆ, ಸಂಪುಟ ಪುನಾರಚನೆ, ಹೊಸಬರನ್ನ ತೆಗೆದುಕೊಳ್ಳೋದು ಸಿಎಂ ಅವರಿಗೆ ಬಿಟ್ಟಿದ್ದು. ಎರಡೂವರೆ ವರ್ಷ ಆದ್ಮೇಲೆ ಬೇರೆಯವರಿಗೆ ಅವಕಾಶ ನೀಡಬೇಕು ಅಂತ ಹೇಳ್ತಾರೆ. ಸಚಿವರ ಮೌಲ್ಯಮಾಪನ ಅಂತ ಏನಿಲ್ಲ. ಎಲ್ಲರಿಗೂ ಅವಕಾಶ ನೀಡಬೇಕಾಗುತ್ತದೆ. ಎಲ್ಲರಿಗೂ ಸಚಿವರು ಆಗೋ ಆಸೆ ಇರುತ್ತದೆ ಹೈಕಮಾಂಡ್‌ ಹಾಗೂ ಸಿಎಂ ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು. ಇದನ್ನೂ ಓದಿ: ಸಂಪುಟ ವಿಸ್ತರಣೆ ವೇಳೆ ನನಗೆ ಸಚಿವ ಸ್ಥಾನ ಸಿಗಲಿದೆ: ನಾರಾಯಣಸ್ವಾಮಿ

     

  • ಸಿಎಂ ಹುದ್ದೆ ಹೇಳಿಕೆಗಳಿಂದ ಗೊಂದಲ – ಬಗೆಹರಿಸಲು ಹೈಕಮಾಂಡ್‌ಗೆ ಪರಮೇಶ್ವರ್ ಒತ್ತಾಯ

    ಸಿಎಂ ಹುದ್ದೆ ಹೇಳಿಕೆಗಳಿಂದ ಗೊಂದಲ – ಬಗೆಹರಿಸಲು ಹೈಕಮಾಂಡ್‌ಗೆ ಪರಮೇಶ್ವರ್ ಒತ್ತಾಯ

    – ಯಾವ ಹೊತ್ತಿಗೆ ಯಾವ ಔಷಧ ಕೊಡ್ಬೇಕು ಅಂತ ಹೈಕಮಾಂಡ್‌ಗೆ ಗೊತ್ತಿದೆ

    ಬೆಂಗಳೂರು: ಸಿಎಂ ಸ್ಥಾನ ಕುರಿತ ಹೇಳಿಕೆಗಳಿಂದ ಗೊಂದಲ ಆಗ್ತಿರುವುದನ್ನು ಹೈಕಮಾಂಡ್ ಬ್ರೇಕ್ ಹಾಕಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G.Parameshwar) ಒತ್ತಾಯಿಸಿದರು.

    ಬೆಂಗಳೂರಿನಲ್ಲಿ (Bengaluru) ಮಾತಾಡಿದ ಅವರು, ಗೊಂದಲ ಬಗೆಹರಿಸಬೇಕೆಂಬ ಸತೀಶ್ ಜಾರಕಿಹೊಳಿ ಅವ್ರು ಹೇಳಿರೋದು ಸರಿ ಇದೆ. ನಿತ್ಯ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡ್ತಿದ್ದಾರೆ. ಇದನ್ನು ಬಗೆಹರಿಸಬೇಕು. ಇದನ್ನು ಬಗೆಹರಿಸುವ ಕೆಲಸ ಹೈಕಮಾಂಡ್ ಮಾಡುತ್ತೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತದೆ. ಯಾವ ಸಂದರ್ಭದಲ್ಲಿ ಯಾವ ಔಷಧ ಕೊಡಬೇಕು ಅಂತ ಹೈಕಮಾಂಡ್‌ಗೆ ಗೊತ್ತಿದೆ. ಆ ಔಷಧ ಹೈಕಮಾಂಡ್ ಕೊಡುತ್ತೆ. ಗೊಂದಲಗಳನ್ನು ಬಗೆಹರಿಸಬೇಕು ಅಂತ ‌ನಾನೂ ಹೈಕಮಾಂಡ್‌ಗೆ ಒತ್ತಾಯಿಸ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ರಾಮಾಯಣ ಸೇರಿಸಲು ಕ್ರಮ: ಸಿದ್ದರಾಮಯ್ಯ

    ಬಿಹಾರ ಚುನಾವಣೆ (Bihar Election) ಬಳಿಕ ಕಾಂಗ್ರೆಸ್‌ನಲ್ಲಿ ಬದಲಾವಣೆಗಳಾಗಲಿವೆ ಎಂಬ ವಿಚಾರವಾಗಿ, ಬದಲಾವಣೆಗಳನ್ನು ಮಾಡಲು ಚುನಾವಣೆಯೇ ಆಗಬೇಕು ಅಂತೇನಿಲ್ಲ. ಬದಲಾವಣೆ ಮಾಡೋದಿದ್ರೆ ಹೈಕಮಾಂಡ್‌ನವ್ರು ಮಾಡ್ತಾರೆ. ಸಿಎಂಗೆ ಆಗಲೀ ಡಿಸಿಎಂಗೆ ಆಗಲೀ ಎಲ್ರಿಗೂ ಜವಾಬ್ದಾರಿ ಇದೆ. ಒಂದು ಕಡೆ ಪ್ರವಾಹ ಆಗ್ತಿದೆ, ಆ ಕಡೆ ಗಮನ ಕೊಡಬೇಕು. ಸಮಸ್ಯೆಗಳನ್ನು ಬಗೆಹರಿಸುವತ್ತ ನಾವು ಗಮನ ಕೊಡಬೇಕು. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತದೆ. ಆದ್ರೆ ಈಗ ನಮ್ಮ ಆಧ್ಯತೆ ಏನು ಅಂತ ನೋಡಬೇಕು ಎಂದರು.

    ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರ ಹೈಕಮಾಂಡ್ ಗಮನಕ್ಕೆ ಹೋಗಿಲ್ಲ. ಶಾಸಕರು, ಮಂತ್ರಿಗಳ ಭಿನ್ನಾಭಿಪ್ರಾಯದಿಂದ ಗೃಹ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ಗೊಂದಲ ಆಗಿದೆ ಅನ್ನೋದನ್ನು ಅಲ್ಲಗಳೆದಿದ್ದು, ನಮ್ಮ ಇಲಾಖೆಯಲ್ಲಿ ವರ್ಗಾವಣೆಗೆ ಅಂತ ನಿಗದಿತ ಸಮಯ ಇಲ್ಲ. 365 ದಿವಸವೂ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಆಗುತ್ತಿರುತ್ತೆ. ಯಾಕೆಂದರೆ ಎಲ್ಲೋ ಖಾಲಿ ಇರುತ್ತೆ ಅದನ್ನ ತುಂಬಬೇಕು. ಯಾರೋ ಅಮಾನತು ಆಗ್ತಾರೆ ಆ ಸ್ಥಾನ ತುಂಬಬೇಕು. ನಿವೃತ್ತಿ ಆಗ್ತಾರೆ ಅದನ್ನ ತುಂಬಬೇಕು. ಹೊಸ ನೇಮಕಾತಿ ಆಗುತ್ತೆ ಅವರಿಗೆ ಪೋಸ್ಟಿಂಗ್ ನೀಡಬೇಕು. ಪೊಲೀಸ್ ಇಲಾಖೆಯಲ್ಲಿ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ ಇದೆ. ಅಲ್ಲಿ ವರ್ಗಾವಣೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತೆ. ಸಬ್ ಇನ್ಸ್‌ಪೆಕ್ಟರ್‌, ಪಿಸಿಗಳಗಳ ವರ್ಗಾವಣೆ ಆಯಾ ಐಜಿಗಳು ತೀರ್ಮಾನ ಮಾಡ್ತಾರೆ. ನಿನ್ನೆ ಸಹ ಸಬ್ ಇನ್ಸ್ಪೆಕ್ಟರ್, ಡಿವೈಎಸ್ಪಿಗಳನ್ನ ವರ್ಗಾವಣೆ ಮಾಡಿದ್ದೀವಿ. ಇದ್ಯಾವುದೂ ಹೈಕಮಾಂಡ್ ಗಮನಕ್ಕೆ ಏನು ಹೋಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ST ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು: ಸಿದ್ದರಾಮಯ್ಯ

  • ಗಣತಿ ವಿಷಯದಲ್ಲಿ ಗೊಂದಲ, ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಅಲ್ಲೋಲಕಲ್ಲೋಲ: ವಿಜಯೇಂದ್ರ

    ಗಣತಿ ವಿಷಯದಲ್ಲಿ ಗೊಂದಲ, ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಅಲ್ಲೋಲಕಲ್ಲೋಲ: ವಿಜಯೇಂದ್ರ

    ಬೆಂಗಳೂರು: ಆರ್ಥಿಕ- ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ರಾಜ್ಯ ಸರ್ಕಾರ ಜಾತಿ ಜನಗಣತಿ ಮಾಡುತ್ತಿದ್ದು, ದಿನೇದಿನೇ ಇದರಿಂದ ಗೊಂದಲಗಳು ಹೆಚ್ಚಾಗುತ್ತಿವೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಆಕ್ಷೇಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ಅವರ ಪ್ರತಿಕ್ರಿಯೆಯನ್ನು ನೋಡಿದಾಗಲೇ ಇದು ಗೊತ್ತಾಗುತ್ತದೆ. 60 ಪ್ರಶ್ನೆಗಳನ್ನು ಜನಸಾಮಾನ್ಯರ ಮುಂದೆ ಇಟ್ಟಿದ್ದಾರೆ. ಎಲ್ಲ ಸಮಾಜಗಳಲ್ಲೂ ಗೊಂದಲ ಸೃಷ್ಟಿಯಾಗಿದೆ. ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ರಾಜ್ಯ ಸರ್ಕಾರ ಈ ನಿರ್ಣಯ ಮಾಡಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ವಿಕಲಚೇತನರನ್ನೂ ಇದಕ್ಕೆ ಜೋಡಿಸಿದ್ದಾರೆ. ಇದರ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳಿಗೆ ಇಷ್ಟೊಂದು ಆತುರ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ವೇಗೆ ಹೋದಾಗ ಬೆಂಗಳೂರಲ್ಲಿ ಕುರಿ, ಕೋಳಿ, ಚಿನ್ನ, ಫ್ರಿಡ್ಜ್ ಬಗ್ಗೆ ಪ್ರಶ್ನೆ ಕೇಳಬೇಡಿ: ಅಧಿಕಾರಿಗಳಿಗೆ ಡಿಸಿಎಂ ಮೌಖಿಕ ಸೂಚನೆ

    ಸರ್ಕಾರ ಆರ್ಥಿಕ- ಸಾಮಾಜಿಕ- ಶೈಕ್ಷಣಿಕ ನ್ಯಾಯ ನೀಡಲಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬ ವಿಚಾರದಲ್ಲಿ ಬಿಜೆಪಿಯಲ್ಲಿ ಗೊಂದಲ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಐತಿಹಾಸಿಕ ನಿರ್ಧಾರವನ್ನು ಘೋಷಿಸಿದ್ದಾರೆ. ಸ್ವಾತಂತ್ರ್ಯ ಬಂದ ನಂತರದಲ್ಲಿ ಯಾವುದೇ ಪ್ರಧಾನಮಂತ್ರಿಗಳು ನಿರ್ಧಾರ ಮಾಡದೇ ಇರುವಂಥ ನಿರ್ಧಾರ ಇದಾಗಿದೆ. ಇಡೀ ದೇಶದಲ್ಲಿ ಜಾತಿ ಜನಗಣತಿ ಪ್ರಾರಂಭಿಸುವುದಾಗಿ ಪ್ರಕಟಿಸಿದ್ದಾರೆ. ಇದರ ನಡುವೆ ಕರ್ನಾಟಕದಲ್ಲಿ ಈ ರೀತಿ ಗೊಂದಲವನ್ನು ಸೃಷ್ಟಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ.

    ಕ್ರಾಂತಿ ಕುರಿತು ಸಚಿವರ ಬಹಿರಂಗ ಹೇಳಿಕೆ
    ನವೆಂಬರ್ ಕ್ರಾಂತಿ- ಅಕ್ಟೋಬರ್ ಕ್ರಾಂತಿ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆ ನಡೆದಿದೆ. ರಾಜ್ಯದ ರಾಜಕಾರಣದಲ್ಲಿ ಆಗುವ ಕ್ರಾಂತಿಗೂ, ಈ ಜಾತಿ ಜನಗಣತಿಗೂ (Caste census) ಎಲ್ಲೋ ಒಂದು ಕಡೆ ಸಂಬಂಧ ಇದೆಯೇ ಎಂಬುದೂ ರಾಜ್ಯದಲ್ಲಿ ಚರ್ಚೆ ಆಗುತ್ತಿದೆ. ಕಾಂಗ್ರೆಸ್ಸಿನ ಹಿರಿಯ ಸಚಿವರೇ ನವೆಂಬರ್ ಕ್ರಾಂತಿ- ಅಕ್ಟೋಬರ್ ಕ್ರಾಂತಿ ಕುರಿತು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ.

    ಸಿದ್ದರಾಮಯ್ಯನವರು ಬಹಳ ಆತುರದಲ್ಲಿದ್ದಾರೆ. ಎರಡು ತಿಂಗಳ ಹಿಂದೆ ಮೈಸೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು. ಸಿದ್ದರಾಮಯ್ಯನವರು (Siddaramaiah) ರ‍್ಯಾಂಪ್ ವಾಕ್ ಮಾಡುತ್ತಿದ್ದರು. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌ಗೆ ಅಡ್ರೆಸ್ ಇರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಬಿಹಾರ ಚುನಾವಣೆ ಬಳಿಕ ಅಲ್ಲೋಲಕಲ್ಲೋಲ
    ಎಐಸಿಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಬೇಡಿ ಎನ್ನುತ್ತಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ವರಿಷ್ಠರೂ ಹೇಳಿಲ್ಲ. ಬಿಹಾರ ಚುನಾವಣೆ ಬಳಿಕ ಸಾಕಷ್ಟು ರಾಜಕೀಯ ಬದಲಾವಣೆಗಳು ರಾಜ್ಯದಲ್ಲಿ ಆಗಲಿದೆ. ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಆಗುವುದು ಸ್ಪಷ್ಟ ಎಂದು ಭವಿಷ್ಯ ನುಡಿದ್ದಾರೆ. ಇದನ್ನೂ ಓದಿ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಮತ್ತೆ ಕೂಗು – ಕೇಂದ್ರಕ್ಕೆ ರಾಜ್ಯ ಶಿಫಾರಸು ಮಾಡುವಂತೆ ಆಗ್ರಹ

  • ಸಿಎಂ ಜೊತೆ ತೆರೆದ ಜೀಪ್‌ನಲ್ಲಿ ಮೊಮ್ಮೊಗ ಪ್ರಯಾಣ; ಪ್ರೋಟೋಕಾಲ್ ವ್ಯಾಪ್ತಿಗೆ ಬರಲ್ಲ ಎಂದ ಹೆಚ್‌ಸಿಎಂ

    ಸಿಎಂ ಜೊತೆ ತೆರೆದ ಜೀಪ್‌ನಲ್ಲಿ ಮೊಮ್ಮೊಗ ಪ್ರಯಾಣ; ಪ್ರೋಟೋಕಾಲ್ ವ್ಯಾಪ್ತಿಗೆ ಬರಲ್ಲ ಎಂದ ಹೆಚ್‌ಸಿಎಂ

    ಮೈಸೂರು: ದಸರಾ ಜಂಬೂಸವಾರಿ (Dasara Jamboo Savari) ದಿನ ತೆರೆದ ಜೀಪಿನಲ್ಲಿ ಸಿಎಂ, ಡಿಸಿಎಂ ಜೊತೆ ತಮ್ಮ ಮೊಮ್ಮಗನನ್ನೂ ಕರೆದು ಕೊಂಡು ಹೋದ ನಡೆಗೆ ಆಕ್ಷೇಪ ವ್ಯಕ್ತವಾದ ಕುರಿತು ಸಚಿವ ಮಹದೇವಪ್ಪ (HC Mahadevappa) ಸ್ಪಷ್ಟನೆ ನೀಡಿದ್ದಾರೆ.

    ಮೈಸೂರಲ್ಲಿ (Mysuru) ಮಾತನಾಡಿದ ಅವರು, ಅಲ್ಲಿ ಯಾವ ಪ್ರೋಟೋಕಾಲ್ ಕೂಡ ಉಲ್ಲಂಘನೆಯಾಗಿಲ್ಲ. ಅದು ಪ್ರೋಟೋಕಾಲ್‌ ವ್ಯಾಪ್ತಿಗೆ ಬರುವುದೇ ಇಲ್ಲ. ಏಕೆಂದ್ರೆ ಅದು ಪೇರೆಡ್ ಅಲ್ಲ, ಅಲ್ಲಿ ಯಾವ ಧ್ವಜ ವಂದನೆಯೂ ಇರಲಿಲ್ಲ. ಕೇವಲ ಜನರಿಗೆ ವಂದನೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋದೆವು. ದಸರಾ ಅಚರಣೆ ಬಗ್ಗೆ ಗೊತ್ತಿಲ್ಲದವರು ಈ ರೀತಿಯ ಸುದ್ದಿ ಹಬ್ಬಿಸುತ್ತಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ – ಯಾರಿಗೂ ಆಹ್ವಾನ ನೀಡಲ್ಲ ಎಂದ ಸಿದ್ದರಾಮಯ್ಯ!

    ಅರಮನೆ ಹೊರ ಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ನಂದಿ ಧ್ವಜ ಪೂಜೆ ಮುಗಿಸಿ, ಅರಮನೆಯ ಆವರಣಕ್ಕೆ ಗಣ್ಯರು ತೆರೆದ ಜೀಪಿನಲ್ಲಿ ಸಿಎಂ, ಡಿಸಿಎಂ ಆಗಮಿಸಿದ್ದರು. ಸಿಎಂ ಹಾಗೂ ಡಿಸಿಎಂ ಅಲ್ಲಿ ನೆರೆದಿದ್ದ ಜನರಿಗೆ ಶುಭಾಶಯ ತಿಳಿಸುವ ಸಲುವಾಗಿ ತೆರೆದ ಜೀಪಿನಿಂದ ಕೈ ಬೀಸಿದ್ದರು. ಈ ಜೀಪಿನಲ್ಲಿ ಮಹದೇವಪ್ಪ ಅವರ ಜೊತೆ ಅವರ ಮೊಮ್ಮಗನೂ ಪ್ರಯಾಣಿಸಿದ್ದ. ಇದನ್ನೂ ಓದಿ: ಮೈಸೂರು ದಸರಾ | ಸಿಎಂ ಜೊತೆ ತೆರೆದ ಜೀಪಿನಲ್ಲಿ ಮಹದೇವಪ್ಪ ಮೊಮ್ಮೊಗನ ಪ್ರಯಾಣ

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಜನರು 6 ಸಾವಿರ ರೂ. ನೀಡಿ ಗೋಲ್ಡನ್‌ ಪಾಸ್‌ ಪಡೆದರೂ ಒಳಗಡೆ ಬಿಡಲಿಲ್ಲ. ಆದರೆ ಮಂತ್ರಿಗಳ ಮೊಮ್ಮಕ್ಕಳು ಜೀಪಿನಲ್ಲಿ ತೆರಳುತ್ತಾರೆ. ಇದು ನಾಡಹಬ್ಬ ಅಲ್ಲ, ಇದು ರಾಜಕೀಯ ಹಬ್ಬ ಎಂದು ಸಿಟ್ಟು ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಮುಂದಿನ ಸಾರಥಿ ಯಾರು?

  • ಮೈಸೂರು ದಸರಾ | ಸಿಎಂ ಜೊತೆ ತೆರೆದ ಜೀಪಿನಲ್ಲಿ ಮಹದೇವಪ್ಪ ಮೊಮ್ಮೊಗನ ಪ್ರಯಾಣ

    ಮೈಸೂರು ದಸರಾ | ಸಿಎಂ ಜೊತೆ ತೆರೆದ ಜೀಪಿನಲ್ಲಿ ಮಹದೇವಪ್ಪ ಮೊಮ್ಮೊಗನ ಪ್ರಯಾಣ

    – ಇದು ನಾಡಹಬ್ಬ ಅಲ್ಲ, ರಾಜಕೀಯ ಹಬ್ಬ ಎಂದು ಟೀಕೆ

    ಮೈಸೂರು: ದಸರಾ ಮೆರವಣಿಗೆಯ (Mysuru Dasara) ಆರಂಭದ ವೇಳೆ ತೆರೆದ ಜೀಪಿನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಸಚಿವರ ಜೊತೆ ಸಚಿವ ಮಹದೇವಪ್ಪ (H.C Mahadevappa) ಅವರ ಮೊಮ್ಮಗ ಪ್ರಯಾಣಿಸಿದ್ದು ಭಾರೀ ಟೀಕೆ ವ್ಯಕ್ತವಾಗಿದೆ.

    ನಂದಿ ಧ್ವಜ ಪೂಜೆಯನ್ನು ಅರಮನೆ ಹೊರ ಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಮುಗಿಸಿ, ಅರಮನೆಯ ಆವರಣಕ್ಕೆ ಗಣ್ಯರು ತೆರೆದ ಜೀಪಿನಲ್ಲಿ ಸಿಎಂ, ಡಿಸಿಎಂ ಆಗಮಿಸಿದ್ದರು. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ – ಯಾರಿಗೂ ಆಹ್ವಾನ ನೀಡಲ್ಲ ಎಂದ ಸಿದ್ದರಾಮಯ್ಯ!

    ಸಿಎಂ ಹಾಗೂ ಡಿಸಿಎಂ ಅಲ್ಲಿ ನೆರೆದಿದ್ದ ಜನರಿಗೆ ಶುಭಾಶಯ ತಿಳಿಸುವ ಸಲುವಾಗಿ ತೆರೆದ ಜೀಪಿನಿಂದ ಕೈ ಬೀಸಿದ್ದರು. ಈ ಜೀಪಿನಲ್ಲಿ ಮಹದೇವಪ್ಪ ಅವರ ಜೊತೆ ಮೊಮ್ಮಗನೂ ಪ್ರಯಾಣಿಸಿದ್ದ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಜನರು 6 ಸಾವಿರ ರೂ. ನೀಡಿ ಗೋಲ್ಡನ್‌ ಪಾಸ್‌ ಪಡೆದರೂ ಒಳಗಡೆ ಬಿಡಲಿಲ್ಲ. ಆದರೆ ಮಂತ್ರಿಗಳ ಮೊಮ್ಮಕ್ಕಳು ಜೀಪಿನಲ್ಲಿ ತೆರಳುತ್ತಾರೆ. ಇದು ನಾಡಹಬ್ಬ ಅಲ್ಲ, ಇದು ರಾಜಕೀಯ ಹಬ್ಬ ಎಂದು ಸಿಟ್ಟು ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕೇಂದ್ರಕ್ಕೂ ಮೊದಲೇ ರಾಜ್ಯ ಚುನಾವಣಾ ಆಯೋಗದಿಂದ SIR

  • ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ – ಯಾರಿಗೂ ಆಹ್ವಾನ ನೀಡಲ್ಲ ಎಂದ ಸಿದ್ದರಾಮಯ್ಯ!

    ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ – ಯಾರಿಗೂ ಆಹ್ವಾನ ನೀಡಲ್ಲ ಎಂದ ಸಿದ್ದರಾಮಯ್ಯ!

    – ಅಶೋಕ್‌ಗೆ ರಾಜ್ಯದ ಸಮಸ್ಯೆ ಏನ್‌ ಗೊತ್ತು – ಸಿಎಂ ಕಿಡಿ

    ಮೈಸೂರು: ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ (Gruhapravesha) ಮಾಡುತ್ತೇನೆ. ಯಾರನ್ನೂ ಗೃಹ ಪ್ರವೇಶಕ್ಕೆ ಆಹ್ವಾನಿಸುವುದಿಲ್ಲ. ಮಾಧ್ಯಮದವರನ್ನು ಆಹ್ವಾನಿಸುವುದಿಲ್ಲ, ನೀವು ಬಂದ್ರೂ ಬೇಡ ಎಂದು ಕಳುಹಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಮೈಸೂರಿನಲ್ಲಿ (Mysuru) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಹೊಸ ಮನೆ ಗೃಹ ಪ್ರವೇಶದ ವಿಚಾರವಾಗಿ ಪ್ರತಿಕ್ರಿಯಿಸಿ, ಮನೆಯ ಕೆಲಸ ಬಹುತೇಕ ಮುಕ್ತಾಯವಾಗಿದೆ. ಬರೀ ಕುಟುಂಬಸ್ಥರು ಮಾತ್ರ ಗೃಹ ಪ್ರವೇಶಮಾಡಿಕೊಳ್ಳುತ್ತೇವೆ. ನಾನು ಈಗ ಇರುವ ಮನೆ ನನ್ನದಲ್ಲ, ಮರಿಸ್ವಾಮಿ ಅವರದ್ದು. ಮರಿಸ್ವಾಮಿಯೇ ನನಗೆ ಹಾಗೂ ನನ್ನ ಮಗನಿಗೆ ಅನ್ನದಾತ ಎಂದಿದ್ದಾರೆ. ಇದನ್ನೂ ಓದಿ: GBA ಚುನಾವಣೆಗೆ ಜೆಡಿಎಸ್ ಸಿದ್ಧತೆ – ಅ.12ಕ್ಕೆ ಬೆಂಗ್ಳೂರಿನಲ್ಲಿ ಮಹಿಳಾ ಸಮಾವೇಶ: ದೇವೇಗೌಡ

    ಗೃಹ ಪ್ರವೇಶ ಆದ ಮೇಲೆ ಹೊಸ ಮನೆಗೆ ಹೋಗುತ್ತೇವೆ. ಈ ಮನೆಯನ್ನು ಮರಿಸ್ವಾಮಿ ಖಾಲಿ ಇಟ್ಟರೆ ಜನರನ್ನ ಭೇಟಿ ಮಾಡಲು ಬಳಸಿಕೊಳ್ಳುತ್ತೇವೆ ಎಂದಿದ್ದಾರೆ.

    ಜಾತಿ ಗಣತಿ ವಿಚಾರವಾಗಿ, ಗಣತಿ ಪ್ರಗತಿಯಲ್ಲಿದೆ. ಮೂರುವರೆ ಕೋಟಿ ಜನರ ಗಣತಿಯಾಗಿದೆ. ಇನ್ನೂ ಮೂರುನಾಲ್ಕು ದಿನ ಬಾಕಿ ಇದೆ. ಅಷ್ಟರೊಳಗೆ ರಾಜ್ಯದ ಒಂದುವರೆ ಕೋಟಿ ಮನೆಯ ಗಣತಿ ಆಗುತ್ತದೆ. ನಿಗದಿತ ಅವಧಿಯೊಳಗೆ ಗಣತಿ ಪೂರ್ಣಗೊಳಿಸುತ್ತಾರೆ ಎಂಬ ವಿಶ್ವಾಸ ಇದೆ. ಇಲ್ಲದಿದ್ದರೆ ಅಂದಿನ ಸ್ಥಿತಿ ನೋಡಿ ತೀರ್ಮಾನ ಮಾಡುತ್ತೇವೆ. ಆರಂಭದ ಮೂರು ದಿನ ತಾಂತ್ರಿಕ ದೋಷದಿಂದ ಸ್ವಲ್ಪ ಸಮಸ್ಯೆ ಆಗಿದೆ. ನಂತರ ಯಾವ ಸಮಸ್ಯೆ ಉಂಟಾಗಿಲ್ಲ ಎಂದಿದ್ದಾರೆ.

    ಇದೇ ವೇಳೆ, ವಿಪಕ್ಷ ನಾಯಕ ಆರ್.ಅಶೋಕ್‌ ವಿರುದ್ಧ ಏಕವಚನದಲ್ಲೇ ಸಿಎಂ ವಾಗ್ದಾಳಿ ನಡೆಸಿದ್ದಾರೆ. ಪ್ರತಿ ನಿತ್ಯ ಆರ್‌ಎಸ್‌ಎಸ್‌ ಬರೆದುಕೊಡುವುದನ್ನು ಹೇಳುವ ಅಶೋಕನಿಗೆ ರಾಜ್ಯದ ಸಮಸ್ಯೆ ಏನು ಗೊತ್ತು? ಆರ್‌ಎಸ್‌ಎಸ್‌ ಏನು ಬರೆದುಕೊಡುತ್ತೋ ಅದನ್ನ ಅಶೋಕ ಹೇಳುತ್ತಾನೆ. ಅವನಿಗೆ ರೈತನ ಸಮಸ್ಯೆ, ನಾಡಿನ ಸಮಸ್ಯೆ ಏನು ಗೊತ್ತು? ಸುಮ್ನೆ ವಿಪಕ್ಷ ನಾಯಕನನ್ನಾಗಿ ಮಾಡಿದ್ದಾರೆ, ಆಗಿದ್ದಾನೆ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನವೆಂಬರ್-ಡಿಸೆಂಬರ್ ಒಳಗೆ ಸಿಎಂ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರೆ: ಆರ್.ಅಶೋಕ್ ಭವಿಷ್ಯ

  • ನವೆಂಬರ್, ಡಿಸೆಂಬರ್‌ನಲ್ಲಿ ಕುರ್ಚಿ ಆಟ ಇಲ್ಲ ಎಂಬ ಸಿಎಂ ಸಂದೇಶಕ್ಕೆ ಡಿಕೆಶಿ ಸಾಫ್ಟ್ ಲಾಂಚ್ ಗೇಮ್

    ನವೆಂಬರ್, ಡಿಸೆಂಬರ್‌ನಲ್ಲಿ ಕುರ್ಚಿ ಆಟ ಇಲ್ಲ ಎಂಬ ಸಿಎಂ ಸಂದೇಶಕ್ಕೆ ಡಿಕೆಶಿ ಸಾಫ್ಟ್ ಲಾಂಚ್ ಗೇಮ್

    ಬೆಂಗಳೂರು: ಜಂಬೂ ಸವಾರಿಗೂ ಮುನ್ನ ವಿರೋಧಿಗಳಿಗೆ ಸಿಎಂ ಗುನ್ನಾ ಹೊಡೆದಿದ್ದಾರೆ. ಆಪ್ತ ವಲಯಕ್ಕೆ ಏನೂ ಆಗಲ್ಲ, ಸುಮ್ಮನಿರಿ ಎಂಬ ಸಂದೇಶ, ಕುರ್ಚಿ ಕೈ ಹಾಕಬಾರದು ಎಂದು ವಿರೋಧಿಗಳಿಗೆ ಟಕ್ಕರ್ ಕೊಡುವುದು ಸಿಎಂ ಗೇಮ್ ಪ್ಲ್ಯಾನ್. ಇನ್ನೊಂದು ಸೈಡ್‌ನಿಂದ ಡಿಕೆಶಿ (DK Shivakumar) ಸಂಘರ್ಷದ ರಾಜಕಾರಣ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದು, ಮೂರು ಜನಕ್ಕಷ್ಟೇ ಗೊತ್ತು, ಉಳಿದವರಿಗೆ ಏಕೆ ಬೇಕು ಎಂಬ ಆಟ ಶುರು ಮಾಡಿದ್ದಾರೆ.

    ನೀವು ಮಾತಾಡಿದ್ರೆ, ನಾನು ಮಾತಾಡ್ತೀನಿ. ನೀವು ಸುಮ್ಮನಿದ್ರೆ, ನಾನು ಸುಮ್ಮನಿರುತ್ತೀನಿ. ಆದ್ರೆ ಕೆಣಕಿದ್ರೆ ಹುಷಾರ್.. ಇದು ಸಿಎಂ ಸಿದ್ದರಾಮಯ್ಯ (Siddaramaiah) ಅಸಲಿ ಆಟ. ಹೌದು, ಜಂಬೂ ಸವಾರಿ ಮುನ್ನ ದಿನ ಅಂದ್ರೆ ಬುಧವಾರ ಸಿಎಂ ಸಿದ್ದರಾಮಯ್ಯ ನನ್ನ ಕುರ್ಚಿ ಗಟ್ಟಿ ಎಂಬ ಸಂದೇಶ ನಾನಾ ಲೆಕ್ಕಾಚಾರ ಹುಟ್ಟುಹಾಕಿದೆ. ತವರಿನಲ್ಲೇ ಪಕ್ಷದೊಳಗಿನ ವಿರೋಧಿಗಳಿಗೆ, ಹೊರಗಿನ ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ಬಿಸಿ ಮುಟ್ಟಿಸಿದ್ದಾರೆ. ಇದನ್ನೂ ಓದಿ: ಪವರ್ ಶೇರಿಂಗ್ ವಿಚಾರ; ಸಿಎಂ ಏನು ಹೇಳಿದ್ದಾರೆ ಅಷ್ಟೇ: ಡಿಕೆಶಿ

    ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ಇರುತ್ತೇನೆ. ಐ ಹೋಪ್ ಸೋ ಅಂತಾ ಸಿದ್ದರಾಮಯ್ಯ ಎಚ್ಚರಿಕೆಯ ಆಟಕ್ಕಿಳಿದಿದ್ದಾರೆ. ಹೈಕಮಾಂಡ್ ಹೇಳಿದಂತೆ ಕೇಳಬೇಕು ಅಂದಿದ್ದೇಕೆ? ಕೊಡುವ ಸಂದೇಶವನ್ನೆಲ್ಲ ಕೊಟ್ಟು ಜಾಣ ನಡೆ ಅನುಸರಿಸಿರುವ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ನಿಷ್ಠೆ ಕಾರ್ಡ್ ಪ್ಲೇ ಮಾಡಿ ಚೆಕ್‌ಮೇಟ್ ಇಟ್ಟಿದ್ದಾರೆ.

    ಈ ನಡುವೆ ಸಿಎಂ ಸಿದ್ದರಾಮಯ್ಯ ಮಾತಿಗೆ ಡಿಕೆಶಿ ಕೂಡ ಸಾಫ್ಟ್ ಲಾಂಚ್ ರಿಯಾಕ್ಷನ್ ಕೊಡುವ ಮೂಲಕ ಚದುರಂಗದಾಟಕ್ಕೆ ಇಳಿದಿದ್ದಾರೆ. ಸಿದ್ದರಾಮಯ್ಯ ಅವರು ಏನು ಹೇಳಿದ್ದಾರೆ. ಆದ್ರೆ ಹೈಕಮಾಂಡ್ ಅಂತಿಮ ಅಂತ ಅಷ್ಟೇ. ಅವರ ಪರವಾಗಿ ಮಾತನಾಡಿದರು ಡ್ಯಾಮೇಜ್. ನನ್ನ ಪರವಾಗಿ ಮಾತನಾಡಿದರು ಡ್ಯಾಮೇಜ್ ಅಂತಾ ಬೆಂಗಲಿಗರಿಗೂ ಎಚ್ಚರಿಸಿದ್ದಾರೆ. ಸರ್ಕಾರದಲ್ಲಿ ಪವರ್ ಶೇರಿಂಗ್ ಬರಲ್ಲ. ನಾನು ಮಾತಾಡಿದ್ದು ಬೋರ್ಡ್ ಡೈರೆಕ್ಟರ್ ಶೇರಿಂಗ್ ಬಗ್ಗೆ ಮಾತ್ರ. ಸರ್ಕಾರದ ಪವರ್ ಶೇರಿಂಗ್ ಬಗ್ಗೆ ಮಾತಾಡೋಕೆ ನಾನು, ಸಿದ್ದರಾಮಯ್ಯ, ಹೈಕಮಾಂಡ್ ಇದೆ ಎಂದು ಹೇಳಿದ್ದಾರೆ.

    ಇನ್ನು ಡಿಕೆಶಿಗೆ ಆಪ್ತರೇ ದೊಡ್ಡ ತಲೆನೋವಾಗಿದ್ದಾರೆ. ಆಕ್ಷನ್, ರಿಯಾಕ್ಷನ್‌ನಿಂದ ಡ್ಯಾಮೇಜ್ ತಪ್ಪಿದ್ದಲ್ಲ ಅನ್ನೋದು ಚೆನ್ನಾಗಿ ಗೊತ್ತಿದೆ. ಹಾಗಾಗಿ ಆಪ್ತರಿಗೂ ಬಹಿರಂಗವಾಗಿಯೇ ಡಿಕೆಶಿ ವಾರ್ನ್ ಮಾಡಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡಗೂ ನೋಟಿಸ್ ಕೊಡಿ, ಶಾಸಕ ರಂಗನಾಥ್‌ಗೂ ನೋಟಿಸ್ ಕೊಡಿ ಅಂತ ಹೇಳಿದ್ದೇನೆ ಹೀಗಾಗಿ ಯಾರೇ ಮಾತಾಡಿದ್ರೂ ನೋಟಿಸ್ ಕೊಡಲು ಹೇಳಿದ್ದೇನೆ ಅಂತಾ ಡಿಕೆಶಿ ಕಾರ್ಡ್ ಪ್ಲೇ ಮಾಡಿದ್ದಾರೆ.

    ಅತ್ತ ಬುಧವಾರ ಸಿಎಂ ಸಿದ್ದರಾಮಯ್ಯ ಬಳಿಕ ಆಪ್ತ ಹೆಚ್.ಸಿ.ಮಹದೇವಪ್ಪ ಕೂಡ ಅಲ್ಲೇ ರಿಯಾಕ್ಟ್ ಮಾಡಿ, ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಯರ‍್ಯಾರದ್ದೋ ಹೇಳಿಕೆಗಳಿಗೆ ಹೆಚ್ಚು ಮಹತ್ವ ಕೊಡಬೇಡಿ ಅಂತಾ ಟಕ್ಕರ್ ಕೊಟ್ಟಿದ್ರೆ, ಇಂದು ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ, ಡಿಕೆಶಿ ಹೇಳಿದ್ಮೇಲೆ ಮುಗೀತು ಅಂತ ಹೇಳಿದ್ದಾರೆ.

    ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನವೆಂಬರ್, ಡಿಸೆಂಬರ್‌ನಲ್ಲಿ ಆಟ ಇಲ್ಲ ಎಂಬ ಸಂದೇಶ ರವಾನಿಸಿದ್ರೆ, ಡಿಕೆಶಿ ಹೈಕಮಾಂಡ್ ಮುಂದೆ ಅಷ್ಟೇ ನಮ್ಮಿಬ್ಬರ ಆಟ ಅಂತಾ ಸೈಲೈಂಟ್ ಗೇಮ್ ಚಾಲೂ ಮಾಡಿದ್ದು, ಅಸಲಿ ಆಟ ಸಂಕ್ರಾಂತಿಗೋ? ಶಿವರಾತ್ರಿಗೋ ಕಾದುನೋಡಬೇಕಿದೆ.

  • ಸತೀಶ್‌ ಜಾರಕಿಹೊಳಿಗೆ ಮುಖಭಂಗ – 15ಕ್ಕೆ 15 ಕ್ಷೇತ್ರ ಗೆದ್ದ ಕತ್ತಿ ಬಣ

    ಸತೀಶ್‌ ಜಾರಕಿಹೊಳಿಗೆ ಮುಖಭಂಗ – 15ಕ್ಕೆ 15 ಕ್ಷೇತ್ರ ಗೆದ್ದ ಕತ್ತಿ ಬಣ

    ಬೆಳಗಾವಿ: ಹುಕ್ಕೇರಿ (Hukeeri)  ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ರಮೇಶ್ ಕತ್ತಿ (Ramesh Katti) ಬಣ ಇತಿಹಾಸ ನಿರ್ಮಿಸಿದೆ. ಒಟ್ಟು 15 ಜನ ನಿರ್ದೇಶಕರ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ 15ಕ್ಕೆ 15 ಕ್ಷೇತ್ರಗಳನ್ನ  ರಮೇಶ್ ಕತ್ತಿ ಬಣ ಗೆದ್ದು ಬೀಗಿದೆ.

    ಕಳೆದ ಒಂದು ತಿಂಗಳಿನಿಂದ ಹುಕ್ಕೇರಿಯಲ್ಲೇಬಿಟ್ಟಿದ್ದ ಸತೀಶ್ ಜಾರಕಿಹೊಳಿ (Satish Jarkiholi) ಕುಟುಂಬಕ್ಕೆ ಭಾರಿ ಮುಖಭಂಗವಾಗಿದೆ. ಹುಕ್ಕೇರಿ ಪಟ್ಟಣದ ಬಾಪೂಜಿ ಕಾಲೇಜು ಬಳಿ ಕತ್ತಿ ಬೆಂಬಲಿಗರು ಸತೀಶ್ ಜಾರಕಿಹೊಳಿ ಬೆಂಬಗಲಿಗರು ಪ್ರಯಾಣಿಸುತ್ತಿದ್ದ ಕಾರಿಗೆ ಕಲ್ಲು ಹೊಡೆದಿದ್ದಾರೆ ಎಂದ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ:  ಮತ್ತೆ ಹೊಸ ನಾಟಕ- ಕಪ್‌ ನೀಡಲು ಹೊಸ ಷರತ್ತು ಮುಂದಿಟ್ಟ ನಖ್ವಿ

     

    ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ನೇತೃತ್ವದ ಪುನಶ್ಚೇತನ ಪ್ಯಾನೆಲ್ ಭರ್ಜರಿ ಗೆಲುವು ಸಾಧಿಸಿದೆ. ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶಾಸಕ ಬಾಬಾ ಸಾಹೇಬ್ ಪಾಟೀಲ್, ವಿಠ್ಠಲ ಹಲಗೇಕರ್ ನೇತೃತ್ವದ ಪ್ಯಾನೆಲ್‌ನಿಂದ ಸ್ಫರ್ಧಿಸಿದ್ದ 12ಕ್ಕೂ ಹೆಚ್ಚು ಸದಸ್ಯರು ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಮದ್ದೂರು ಕಲ್ಲು ತೂರಾಟಕ್ಕೆ ಟ್ವಿಸ್ಟ್ ಟಾರ್ಗೆಟ್ ಮಾಡಿದ್ದೇ ಒಂದು, ಕಲ್ಲು ತೂರಿದ್ದೇ ಮತ್ತೊಂದು ಗಣೇಶನ ಮೇಲೆ

    ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾರ್ಖಾನೆಯ ಎದುರು ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

  • ಇನ್ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಗೀತಾ ಶಿವರಾಜ್‌ಕುಮಾರ್ ಘೋಷಣೆ

    ಇನ್ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಗೀತಾ ಶಿವರಾಜ್‌ಕುಮಾರ್ ಘೋಷಣೆ

    ಶಿವಮೊಗ್ಗ: ಇನ್ನುಮುಂದೆ ನಾನು ಚುನಾವಣೆಗೆ (Election) ಸ್ಪರ್ಧಿಸುವುದಿಲ್ಲ ಎಂದು ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಮಹತ್ವದ ಘೋಷಣೆ ಹೊರಡಿಸಿದ್ದಾರೆ.

    ಮಹಿಳಾ ಕಾಂಗ್ರೆಸ್ (Congress) ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಈ ಹಿಂದೆ ಸ್ಪರ್ಧಿಸಿದ್ದರೂ ಕೂಡ ಪಕ್ಷ ಸಂಘಟನೆಯಲ್ಲಿ ಜೊತೆಗೆ ಇರುತ್ತೇನೆ. ನಿಮ್ಮೊಂದಿಗೆ ಕೆಲಸ ಮಾಡುತ್ತೇನೆ, ಯಾವಾಗ ಕರೆದರೂ ನಾನು ಬರುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಆಯುಧ ಪೂಜೆ ಹಬ್ಬಕ್ಕೂ ಸಾರಿಗೆ ಇಲಾಖೆಯಲ್ಲಿ ದುಡ್ಡಿಲ್ವಾ?- ಒಂದು ಬಸ್‌ಗೆ ಕೇವಲ 150 ರೂ. ಬಿಡುಗಡೆ

    ನೂತನ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ವೇತಾ ಬಂಡಿಯವರನ್ನು ಅಭಿನಂದಿಸಿದ ಅವರು, ಶ್ವೇತಾ ಬಂಡಿಯವರು ತಮ್ಮ ಚುನಾವಣೆಯ ಪ್ರಚಾರದಲ್ಲಿ ಶ್ರಮಿಸಿದ್ದಾರೆ. ಇಂದಿನ ಸಮಾವೇಶ ಖುಷಿ ತಂದಿದೆ. ಮಹಿಳೆಯರು ಅಬಲೆಯರಲ್ಲ. ಅವರಿಗೆ ಎಲ್ಲಾ ಶಕ್ತಿಯಿದೆ ಅವರು ಎಲ್ಲರನ್ನ ಜೊತೆಗೂಡಿಸಿಕೊಂಡು ಅವರು ಪಕ್ಷ ಸಂಘಟಿಸಲಿ ಎಂದು ಸಲಹೆ ನೀಡಿದರು. ನಾನು ಇನ್ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಆದರೆ ಪಕ್ಷದ ಎಲ್ಲರ ಜೊತೆಗೂ ದೃಢವಾಗಿ ಇರುತ್ತೇನೆ ಎಂದು ಪುನರುಚ್ಚರಿಸಿದರು. ಇದನ್ನೂ ಓದಿ: ಮೂರು ಅಂತಸ್ತಿಗೆ ಅನುಮತಿ.. ಕಟ್ಟಿದ್ದು ಐದು ಅಂತಸ್ತು – ವಾಲಿದ ಬಿಲ್ಡಿಂಗ್‌ ತೆರವು ಕಾರ್ಯಾಚರಣೆ

    ಗೀತಾ ಶಿವರಾಜ್‌ಕುಮಾರ್ ಚುನಾವಣೆಯಿಂದ ದೂರ ಸರಿದಿದ್ದಾರೆ. 2024ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೀತಾ ಶಿವರಾಜ್ ಕುಮಾರ್, ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಇದೀಗ ಶಿವಮೊಗ್ಗದಲ್ಲೇ ತಮ್ಮ ಚುನಾವಣಾ ನಿವೃತ್ತಿ ಬಗ್ಗೆ ಘೋಷಿಸಿದ್ದಾರೆ. ಇನ್ಮುಂದೆ ನಾನು ಯಾವುದೇ ಚುನಾವಣೆಗೆ ನಿಲ್ಲೋದಿಲ್ಲ ಅಂತ ಗೀತಾ ಶಿವರಾಜ್‌ಕುಮಾರ್ ಘೋಷಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ: ಜಾತಿಗಣತಿ ಬಹಿಷ್ಕಾರಕ್ಕೆ ತೇಜಸ್ವಿ ಸೂರ್ಯ ಕರೆ

  • ಹರಾಜು ಮೂಲಕ ಮದ್ಯದ ಅಂಗಡಿಗಳ ಹಂಚಿಕೆ ಪ್ರಕ್ರಿಯೆಗೆ ಶೀಘ್ರವೇ ಚಾಲನೆ: ಆರ್.ಬಿ.ತಿಮ್ಮಾಪುರ್

    ಹರಾಜು ಮೂಲಕ ಮದ್ಯದ ಅಂಗಡಿಗಳ ಹಂಚಿಕೆ ಪ್ರಕ್ರಿಯೆಗೆ ಶೀಘ್ರವೇ ಚಾಲನೆ: ಆರ್.ಬಿ.ತಿಮ್ಮಾಪುರ್

    ಬೆಂಗಳೂರು: ಅವಧಿ ಮುಗಿದಿರೋ ಮದ್ಯದ ಅಂಗಡಿಗಳನ್ನ ಹರಾಜು ಮೂಲಕ ಹಂಚಿಕೆ ಮಾಡೋ ಪ್ರಕ್ರಿಯೆ ಶುರುವಾಗಿದೆ. ಕರಡು ನಿಯಮ ಬಿಡುಗಡೆ ಮಾಡಲಾಗಿದ್ದು, ಆದಷ್ಟೂ ಬೇಗ ಪ್ರಕ್ರಿಯೆ ಶುರು ಮಾಡೋದಾಗಿ ಅಬಕಾರಿ ಸಚಿವ ತಿಮ್ಮಾಪುರ್ (R B Thimmapur) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಹರಾಜು ಪ್ರಕ್ರಿಯೆಗೆ ತಯಾರಿ ಆಗ್ತಿದೆ. ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ಕೊಡಬೇಕು ಎಂದು ಅಂದುಕೊಳ್ಳಲಾಗಿದೆ. ಈಗಾಗಲೇ ಹರಾಜು ಪ್ರಕ್ರಿಯೆಯ ಡ್ರಾಫ್ಟ್ ರೆಡಿ ಆಗಿ ಸಹಿ ಆಗಿದೆ. ಆದಷ್ಟೂ ಬೇಗ ಹರಾಜು ಪ್ರಕ್ರಿಯೆ ಆಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಕಾವೇರಿ ಆರತಿಗೆ ಪ್ರತಿ ದಿನ ಒಂದೊಂದು ತಾಲೂಕಿನ ಜನರಿಗೆ ಆಹ್ವಾನ: ಚೆಲುವರಾಯಸ್ವಾಮಿ

    ಜನರಲ್ ಆಗಿ ಹರಾಜು ಹಾಕಬೇಕಾ? ಮೀಸಲಾತಿ ಕೊಡಬೇಕು ಅಂತ ಸಿಎಂ ಜೊತೆ ನಾಳೆ ಚರ್ಚೆ ಮಾಡ್ತೀನಿ. ಹರಾಜು ಪ್ರಕ್ರಿಯೆಯಿಂದ 2 ಸಾವಿರ ಕೋಟಿ ರೂ. ಲಾಭ ಬರಬಹುದು ಅಂತ ನಿರೀಕ್ಷೆ ಇದೆ. ಮೀಸಲಾತಿ ಕೊಟ್ಟರೆ ಸಹಾಯ ಅಗುತ್ತದೆ ಅಂತ ಚರ್ಚೆ ಇದೆ. ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಎಂದು ಹೇಳಿದ್ದಾರೆ.

    ಹೊಸ ಲೈಸೆನ್ಸ್ ಕೊಡ್ತಿಲ್ಲ. ಕೊಡೋದು ಇಲ್ಲ. ಈಗ ಯಾವುದು ಇದೆಯೋ ಅದಕ್ಕೆ ಮಾತ್ರ ಹರಾಜು ಮೂಲಕ ಲೈಸೆನ್ಸ್ ಕೊಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.