Tag: politics

  • ಕಾಂಗ್ರೆಸ್‌ಗೆ ನಕ್ಸಲರು ಇಷ್ಟ ಆಗ್ತಾರೆ, ದೇಶಭಕ್ತರನ್ನು ಕಂಡ್ರೆ ಅಸಹನೆ: ಸಿ.ಟಿ ರವಿ

    ಕಾಂಗ್ರೆಸ್‌ಗೆ ನಕ್ಸಲರು ಇಷ್ಟ ಆಗ್ತಾರೆ, ದೇಶಭಕ್ತರನ್ನು ಕಂಡ್ರೆ ಅಸಹನೆ: ಸಿ.ಟಿ ರವಿ

    ಚಿಕ್ಕಮಗಳೂರು: ಕಾಂಗ್ರೆಸ್‌ಗೆ (Congress) ನಕ್ಸಲರು, ನಗರ ನಕ್ಸಲರು ಆತ್ಮೀಯರಾಗ್ತಾರೆ. ಆದರೆ ದೇಶಭಕ್ತರನ್ನು ಕಂಡರೆ ಅವರಿಗೆ ಆಗಲ್ಲ ಎಂದು ಎಂಎಲ್‌ಸಿ ಸಿ.ಟಿ ರವಿ (C.T Ravi) ಕಿಡಿಕಾರಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಸರ್ಕಾರ ನಿರ್ಬಂಧ ಹೇರಿದ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು. ಆರ್‌ಎಸ್ಎಸ್ ಇರುವುದು ಜನರ ಮನಸ್ಸಿನಲ್ಲಿ. ದೇಶ ಹಾಳು ಮಾಡುವ ವಿಚಾರ ಆಗಿದ್ರೆ ಸಂಘ ಇಷ್ಟು ದೊಡ್ಡ ಮಟ್ಡಕ್ಕೆ ಬೆಳೆಯುತ್ತಿರಲಿಲ್ಲ. ಸಂಘದಲ್ಲಿರುವುದು ನಿಸ್ವಾರ್ಥ ದೇಶಪ್ರೇಮ, ಅದು ಬೆಳೆಯುತ್ತಲೇ ಇದೆ ಎಂದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಮೂಗುದಾರ

    ಕಾಂಗ್ರೆಸ್ ಸೇವಾದಳ ಅದಕ್ಕೂ ನೂರು ವರ್ಷ, ಯಾರಾದರೂ ನೆನಪಿಸುತ್ತಾರಾ? ನಮಗೆ ಗಣವೇಷವನ್ನು ಸರಬರಾಜು ಮಾಡಲು ಆಗದಂತಹ ಮಟ್ಟಕ್ಕೆ ಬೇಡಿಕೆ ಬಂದಿದೆ. ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡುವ ಜನ ದೇಶ ಬಲ ಆಗಬೇಕೆಂದು ಬಯಸುತ್ತಾರೆ. ದೂರ ಇಟ್ಟರೆ ದೇಶಕ್ಕೆ ನಷ್ಟವಾಗಲಿದೆ. ಇದರ ಲಾಭವನ್ನು ಅರಾಜಕವಾದಿಗಳು, ಭಾರತ್ ತೇರೆ ತುಕಡೆ ಹೂಂಗೆ, ಇನ್ಷಾ ಅಲ್ಲಾ ಅನ್ನೋರು ಪಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ನಕ್ಸಲರು, ನಗರ ನಕ್ಸಲರು ಕಾಂಗ್ರೆಸ್‌ನವರಿಗೆ ಆತ್ಮೀಯರಾಗುತ್ತಾರೆ. ದೇಶಭಕ್ತಿಯ ಸಂಘಟನೆ ಕಂಡರೆ ಅಸಹನೆ ಆಗುತ್ತೆ, ಯಾರನ್ನ ದೇಶದ್ರೋಹಿಗಳು ಎನ್ನಬೇಕು? ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ವಿರೋಧ ಮಾಡುವವರು ದೇಶದ್ರೋಹಿಗಳು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗಿಯಾದ್ರೆ ಶಿಸ್ತು ಕ್ರಮ ಕೈಗೊಳ್ಳಿ: ಪ್ರಿಯಾಂಕ್‌ ಪತ್ರ

  • ಗುಜರಾತ್‌ ಸಿಎಂ ಹೊರತು ಪಡಿಸಿ ಎಲ್ಲಾ 16 ಸಚಿವರ ರಾಜೀನಾಮೆ

    ಗುಜರಾತ್‌ ಸಿಎಂ ಹೊರತು ಪಡಿಸಿ ಎಲ್ಲಾ 16 ಸಚಿವರ ರಾಜೀನಾಮೆ

    ಗಾಂಧಿನಗರ: ಅಚ್ಚರಿಯ ಬೆಳವಣಿಗೆಯಲ್ಲಿ ಗುಜರಾತ್‌ (Gujarat) ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಹೊರತುಪಡಿಸಿ ಎಲ್ಲಾ 16 ಸಚಿವರು ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ.

    ಬಿಜೆಪಿ (BJP) ಪಕ್ಷವು ಎಲ್ಲಾ 16 ಸಚಿವರ ರಾಜೀನಾಮೆಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಪಟೇಲ್ ಹೊರತುಪಡಿಸಿ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಶುಕ್ರವಾರ ಬೆಳಿಗ್ಗೆ 11:30 ಕ್ಕೆ ಭೂಪೇಂದ್ರ ಪಟೇಲ್ ಅವರ ಸಚಿವ ಸಂಪುಟ ಪುನರ್‌ಚನೆ ಕಾರ್ಯಕ್ರಮ ನಿಗದಿಯಾಗಿದೆ. ಈ ಕಾರ್ಯಕ್ರಮದ ಒಂದು ದಿನ ಮುಂಚಿತವಾಗಿ ಸಚಿವರಿಂದ ರಾಜೀನಾಮೆಗಳನ್ನು ತೆಗೆದುಕೊಳ್ಳಲಾಗಿದೆ.  ಇದನ್ನೂ ಓದಿ:  ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ರಾಜಧಾನಿ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ರಾಜ್ಯಪಾಲ ಆಚಾರ್ಯ ದೇವವ್ರತ್‌ಜಿ ಅವರು ಸಂಪುಟದ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಗುಜರಾತ್‌ ಸಚಿವ ಸಂಪುಟದಲ್ಲಿ ಸಿಎಂ ಪಟೇಲ್ ಸೇರಿದಂತೆ 17 ಮಂದಿ ಸಚಿವರಿದ್ದರು. ಇವರಲ್ಲಿ ಎಂಟು ಮಂದಿ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳಾಗಿದ್ದರೆ, ಇತರರು ರಾಜ್ಯ ಸಚಿವರಾಗಿದ್ದರು.  ಇದನ್ನೂ ಓದಿ:  ನಾಮಪತ್ರ ಸಲ್ಲಿಕೆಗೆ ನಾಳೆ ಡೆಡ್‌ಲೈನ್‌| ಇನ್ನೂ ಅಂತಿಮಗೊಳ್ಳದ ಸೀಟ್‌ ಹಂಚಿಕೆ – ಲಾಲೂಗೆ ರಾಹುಲ್‌ ಕರೆ

    ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬುಡಕಟ್ಟು ಶಾಸಕರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲು ಬಿಜೆಪಿ ಮುಂದಾಗಿದೆ. ಆಪ್‌ ಬುಡಕಟ್ಟು ಜನರನ್ನು ಸೆಳೆಯುತ್ತಿರುವ ಕಾರಣ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.

    ಹೊಸ ಸಂಪುಟವು 23 ಸದಸ್ಯರನ್ನು ಹೊಂದುವ ಸಾಧ್ಯತೆಯಿದೆ. ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಮಾಡಿ ಹೊಸ ಸಂಪುಟ ರಚನೆಗೆ ಬಿಜೆಪಿ ಈಗ ಕೈಹಾಕಿದೆ. 182 ಸದಸ್ಯರ ವಿಧಾನಸಭೆಯನ್ನು ಹೊಂದಿರುವ ಗುಜರಾತ್‌ನಲ್ಲಿ ಗರಿಷ್ಠ 27 ಮಂತ್ರಿಗಳಿರಬಹುದು. ಹೊಸ ಸಂಪುಟದಲ್ಲಿ ಯುವ ಮತ್ತು ಮಹಿಳಾ ನಾಯಕಿಯರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುವ ಸಾಧ್ಯತೆಯಿದೆ.

  • ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಿದ್ರೆ ಕಠಿಣ ಕ್ರಮ: ಸಿದ್ದರಾಮಯ್ಯ

    ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಿದ್ರೆ ಕಠಿಣ ಕ್ರಮ: ಸಿದ್ದರಾಮಯ್ಯ

    ಬೆಂಗಳೂರು: ಹಸಿವಿನ ಸಂಕಟ,ಅನ್ನದ ಮೌಲ್ಯ ನನಗೆ ಗೊತ್ತು ಅದಕ್ಕಾಗಿ ನಾನು ಅನ್ನಭಾಗ್ಯ ಜಾರಿಗೆ ತಂದೆ. ಕಾಳಸಂತೆಯಲ್ಲಿ ಯಾರೇ ಅನ್ನ ಭಾಗ್ಯ(Anna Bhgya) ಅಕ್ಕಿ ಮಾರಾಟ ಮಾಡಿದರೂ ಅವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.

    ಆಹಾರ ಮತ್ತು ನಾಗರಿಕ‌ ಸರಬರಾಜು ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ವಿಶ್ವ ಆಹಾರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕವಿ ಬೇಂದ್ರೆಯವರು ರೈತರನ್ನು ಅನ್ನಬ್ರಹ್ಮ ಎಂದು ಕರೆದಿದ್ದಾರೆ. ಆದ್ದರಿಂದ ಅನ್ನ ವ್ಯರ್ಥ ಮಾಡುವುದು, ಬಿಸಾಡುವುದು ಅನ್ನಬ್ರಹ್ಮನಿಗೆ ಮಾಡುವ ಅವಮಾನ ಎಂದರು.

    ನಾವು ಒಂದು ಕಾಲದಲ್ಲಿ ಅನ್ನಕ್ಕಾಗಿ ಅಮೆರಿಕದ ಮೇಲೆ ಅವಲಂಬಿತರಾಗಿದ್ದೆವು. ಈಗ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ. ಇದರ ಜೊತೆಗೆ ಊಟ ವ್ಯರ್ಥ ಮಾಡುವ ಪ್ರಮಾಣವೂ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ ಎಂದರು. ಇದನ್ನೂಓದಿ:  ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ


    ಬೆಂಗಳೂರು ಒಂದರಲ್ಲೇ ಪ್ರತೀ ವರ್ಷ 943 ಟನ್ ಆಹಾರ ವ್ಯರ್ಥ ಆಗುತ್ತಿದೆ. ಹೆಚ್ಚೂಕಡಿಮೆ 360 ಕೋಟಿ ರೂ. ಮೌಲ್ಯದ ಆಹಾರ ವೇಸ್ಟ್ ಮಾಡುತ್ತಿದ್ದೇವೆ ಎಂದು ಜಿಕೆವಿಕೆ ಅಧ್ಯಯನವನ್ನು ಉಲ್ಲೇಖಿಸಿದರು. ಗೊತ್ತಿದ್ದೂ ಗೊತ್ತಿದ್ದೂ ಆಹಾರ ವ್ಯರ್ಥ ಮಾಡುವುದು ಅನ್ನಕ್ಕೆ ತೋರಿಸುವ ಅಹಂಕಾರ. ಅನ್ನ ವೇಸ್ಟ್ ಮಾಡುವುದು ಪಾಪದ ಕೆಲಸ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ‌ ಅಂತ ತಿಳಿಸಿದರು.

    ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಕಾಂಗ್ರೆಸ್ ಬದ್ದತೆ. ಹೀಗಾಗಿ ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪ್ರಧಾನಿ ಮನ ಮೋಹನ್ ಸಿಂಗ್. ಆಹಾರ ಭದ್ರತೆ ಕಾಯ್ದೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಬಡವರ ವಿರೋಧಿ ನೀತಿ ಬಿಜೆಪಿಯ ಸಿದ್ಧಾಂತ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಆ ಕಡೆ ಬಿಜೆಪಿಗೂ ಚಪ್ಪಾಳೆ ತಟ್ಟೋದು,ಈ ಕಡೆ ಬಡವರ ಪರ ಕಾರ್ಯಕ್ರಮ ಕೊಟ್ಟ ಕಾಂಗ್ರೆಸ್ಸಿಗೂ ಚಪ್ಪಾಳೆ ತಟ್ಟೋದು ಮಾಡಬೇಡಿ. ಅನ್ನದ ಪರವಾಗಿ ಇರುವ ಕಾಂಗ್ರೆಸ್ ಬದ್ಧತೆ ಅರ್ಥ ಮಾಡಿಕೊಳ್ಳಿ ಎಂದು ಕರೆ ನೀಡಿದರು.

    ಅನ್ನಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಳ ಸಂತೆ ಮಾರಾಟ ತಪ್ಪಿಸಲು 5 ಕೆಜಿ ಅಕ್ಕಿ ಕೊಟ್ಟು ಉಳಿದ ಐದು ಕೆಜಿ ಕಾಳು, ಬೇಳೆ ವಿತರಿಸಲು ತೀರ್ಮಾನಿಸಿದ್ದೇವೆ ಎಂದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಮೂಗುದಾರ

    ಆಹಾರದ ಬಗ್ಗೆ ಜಾಗ್ರತೆ, ಸಣ್ಣ ರೈತರ ರಕ್ಷಣೆ ಮಾಡುವುದು ನಮ್ಮ ನಿಮ್ಮ ಮತ್ತು ನಾಗರಿಕ ಸಮಾಜದ ಜವಾಬ್ದಾರಿ ಅಂತ ತಿಳಿಸಿದರು. ಡಿಸಿಎಂ ಡಿಕೆಶಿವಕುಮಾರ್, ಸಚಿವ ಮುನಿಯಪ್ಪ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ: ಸಿಎಂ

    ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ: ಸಿಎಂ

    ಬಾಗಲಕೋಟೆ: ಆರ್‌ಎಸ್‌ಎಸ್‌ (RSS) ವಿರುದ್ಧ ತಮಿಳುನಾಡಿನಲ್ಲಿ (Tamil Nadu) ಯಾವ ರೀತಿ ಕ್ರಮ ಕೈಗೊಂಡಿದ್ದಾರೋ ಆ ರೀತಿ ಕ್ರಮವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ಬಂಡಿಗಣಿಯಲ್ಲಿ ಮಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಪ್ರಿಯಾಂಕ್‌ ಖರ್ಗೆ ಪತ್ರ ಬರೆದಿದ್ದಾರೆ. ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದರು. ಇದನ್ನೂ ಓದಿ:  ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ: ಗೋವಿಂದ ಕಾರಜೋಳ

     

    ಇಂದು ರಾತ್ರಿ ನಡೆಯಲಿರುವ ಡಿನ್ನರ್ ಪಾರ್ಟಿಗೂ ಸಂಪುಟ ಪುನಾರಚನೆಗೂ ಯಾವುದೇ ಸಂಬಂಧವಿಲ್ಲ. ನಾನು ಆಗಾಗ ಊಟ ನೀಡುತ್ತಿರುತ್ತೇನೆ. ಊಟದಲ್ಲಿ ಏನೂ ಸ್ಪೆಷಲ್ ಇಲ್ಲ. ಮಾಧ್ಯಮದವರಿಗೆ ಮತ್ತು ಬಿಜೆಪಿಯವರಿಗೆ ಮಾತ್ರ ವಿಶೇಷ ಎಂದು ತಿಳಿಸಿದರು. ಇದನ್ನೂ ಓದಿ:  ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ ಎಲ್ಲಾ ಚಟುವಟಿಕೆ ಬ್ಯಾನ್‌?

    ದೇವೇಗೌಡರ ಆರೋಗ್ಯ ಚೆನ್ನಾಗಿದೆ, ಚೇತರಿಕೆ ಆಗುತ್ತಿದೆ. ವೈದ್ಯ ಸತ್ಯನಾರಾಯಣ ಅವರ ಜೊತೆ ಮಾತನಾಡಿದ್ದೇನೆ. ಎರಡ್ಮೂರು ದಿನಗಳಲ್ಲಿ ಚೇತರಿಕೆ ಆಗುತ್ತಾರೆ ಎಂದಿದ್ದಾರೆ ಎಂದು ನುಡಿದರು.

  • ಶಾಸಕರ ಅಭಿಪ್ರಾಯ ಪಡೆದೇ ಹೈಕಮಾಂಡ್ ಸಿಎಂ ಆಯ್ಕೆ ಮಾಡೋದು: ಡಿಕೆಶಿಗೆ ಪರಮೇಶ್ವರ್ ತಿರುಗೇಟು

    ಶಾಸಕರ ಅಭಿಪ್ರಾಯ ಪಡೆದೇ ಹೈಕಮಾಂಡ್ ಸಿಎಂ ಆಯ್ಕೆ ಮಾಡೋದು: ಡಿಕೆಶಿಗೆ ಪರಮೇಶ್ವರ್ ತಿರುಗೇಟು

    ಬೆಂಗಳೂರು: ಶಾಸಕರ ಅಭಿಪ್ರಾಯ ಪಡೆದೇ ಹೈಕಮಾಂಡ್ ಸಿಎಂ ಆಯ್ಕೆ ಮಾಡೋದು ಅಂತ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ (G.Parameshwar) ತಿರುಗೇಟು ನೀಡಿದ್ದಾರೆ.

    ಸಿಎಂ ಆಯ್ಕೆಗೆ ಶಾಸಕರ ಬಲ ಬೇಡ ಹೈಕಮಾಂಡ್ ತೀರ್ಮಾನ ಸಾಕು ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ‌ನೀಡಿದ‌ ಅವರು, ನಮ್ಮಲ್ಲಿ ಒಂದು ನಿಯಮ ಇದೆ. ಒಂದು ಪಕ್ಷ ಆಯ್ಕೆ ಆದ ಮೇಲೆ ಸರ್ಕಾರ ಮಾಡುವಾಗ, ಸಿಎಲ್‌ಪಿ ಲೀಡರ್ ಅಂದರೆ ಮುಖ್ಯಮಂತ್ರಿಗಳ ನೇಮಕ ಮಾಡುವಾಗ ಶಾಸಕರ ಅಭಿಪ್ರಾಯ ಕೇಳಲು ಹೈಕಮಾಂಡ್‌ನಿಂದ ವೀಕ್ಷಕರು ಬರುತ್ತಾರೆ. ಅವರು ಶಾಸಕರ ಅಭಿಪ್ರಾಯ ತಗೊಂಡು ಹೈಕಮಾಂಡ್‌ಗೆ ತಿಳಿಸುತ್ತಾರೆ. ಇಂತವರ ಪರ ಇಷ್ಟು ಜನ ಇದ್ದಾರೆ ಎಂದು ಹೇಳುತ್ತಾರೆ. ಯಾರಿಗೆ ಸಿಎಂಗೆ ಮೆಜಾರಿಟಿ ಬಂದಿದೆ ಎಂದು ಆ ನಂತರ ಹೆಸರು ಘೋಷಣೆ ಮಾಡುತ್ತಾರೆ ಎಂದರು. ಇದನ್ನೂ ಓದಿ: ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳೋದೇ ಕಷ್ಟ ಇದೆ, ಸಿಎಂ ಬದಲಾವಣೆ ಬಗ್ಗೆ ನಾವೇನ್ ಹೇಳೋದು? – ಸತೀಶ್ ಜಾರಕಿಹೊಳಿ

    ಸಿದ್ದರಾಮಯ್ಯ ನವರನ್ನು ಆಯ್ಕೆ ಮಾಡಿದ್ದು ಇದೇ ರೀತಿಯಲ್ಲಿ. ಹಿಂದೆ ಎಸ್.ಎಂ ಕೃಷ್ಣ ಅವರನ್ನು ಆಯ್ಕೆ ಮಾಡುವಾಗಲೂ ಇದೇ ರೀತಿಯಲ್ಲಿ ಮಾಡಿದ್ದೇವೆ. ಇವಾಗ್ಲೂ ಕೂಡ ಶಾಸಕರ ಅಭಿಪ್ರಾಯ ಪಡೆಯಬೇಕೆಂಬುದು ಪದ್ದತಿ. ಇಲ್ಲ ಹೈಕಮಾಂಡ್ ತೀರ್ಮಾನ ತಗೊಳ್ತೇವೆ ಎಂದರೆ ಅದು ಅವರಿಗೆ ಬಿಟ್ಟಿದ್ದು. ಅದಕ್ಕೆ ನಾವು ಹೈಕಮಾಂಡ್ ತೀರ್ಮಾನ ಅನ್ನೋದು. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಗೌರವ ಕೊಡುತ್ತಾರೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, 5 ವರ್ಷವೂ ಸಿದ್ದರಾಮಯ್ಯ ಸಿಎಂ: ರಾಮಲಿಂಗಾರೆಡ್ಡಿ

  • ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ ಎಲ್ಲಾ ಚಟುವಟಿಕೆ ಬ್ಯಾನ್‌?

    ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ ಎಲ್ಲಾ ಚಟುವಟಿಕೆ ಬ್ಯಾನ್‌?

    – ಸಿಎಂಗೆ ಪತ್ರ ಬರೆದು ಮನವಿ ಮಾಡಿರುವ ಪ್ರಿಯಾಂಕ್‌

    ಬೆಂಗಳೂರು: ಸರ್ಕಾರಿ ಸ್ಥಳ, ಮುಜುರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ನ (RSS) ಎಲ್ಲಾ ಚಟುವಟಿಕೆಗಳನ್ನು ಸರ್ಕಾರ ನಿಷೇಧಿಸುತ್ತಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

    ಹೌದು. ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಪತ್ರ ಬರೆದು ಸರ್ಕಾರದ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಎಲ್ಲ ಚಟುವಟಿಕೆಗಳನ್ನು ನಿಷೇಧಿಸುವಂತೆ ಮನವಿ ಮಾಡಿದ್ದಾರೆ.

    ಪ್ರಿಯಾಂಕ್‌ ಖರ್ಗೆ ಬರೆದ ಪತ್ರವನ್ನು ಸಿದ್ದರಾಮಯ್ಯನವರು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಕಳುಹಿಸಿ ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ವಹಿಸಿ ಎಂದು ಸೂಚಿಸಿದ್ದಾರೆ.

    ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಿಸುವಂತೆ ಸರ್ಕಾರ ಇನ್ನೂ ಯಾವುದೇ ಆದೇಶ ಪ್ರಕಟಿಸಿಲ್ಲ. ಒಂದು ವೇಳೆ ಆದೇಶ ಪ್ರಕಟಿಸಿದರೆ ಅಧಿಕೃತವಾಗಿ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಟಿ ಚಟುವಟಿಕೆಗಳಿಗೆ ಬ್ರೇಕ್‌ ಬೀಳಲಿದೆ. ಇದನ್ನೂ ಓದಿ:  ಪಾಕಿಸ್ತಾನದ 58 ಸೈನಿಕರ ಹತ್ಯೆ, 30 ಮಂದಿಗೆ ಗಾಯ: ಅಫ್ಘಾನಿಸ್ತಾನ

    ಪ್ರಿಯಾಂಕ್‌ ಖರ್ಗೆ ಪತ್ರದಲ್ಲಿ ಏನಿದೆ?
    ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುದಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಸರಕಾರವನ್ನು ನೀಡುತ್ತದೆ.

    ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ, ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಮತ್ತು ಯುವ ಸಮುದಾಯದ ಮನಸ್ಸಿನಲ್ಲಿ ಭಾರತದ ಏಕತೆಯ ವಿರುದ್ಧವಾಗಿ, ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕಾರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ.

    ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ಗ ಮಕ್ಕಳು ಹಾಡಿ ಯುವಜನರ ಮನಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಸಂಘಟನೆಯು ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

  • ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ: ಡಿ.ಕೆ ಶಿವಕುಮಾರ್‌

    ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ: ಡಿ.ಕೆ ಶಿವಕುಮಾರ್‌

    ಬೆಂಗಳೂರು: ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವಿಪಕ್ಷಗಳ ನವೆಂಬರ್ ಕ್ರಾಂತಿ ಚರ್ಚೆ ವಿಚಾರಕ್ಕೆ ಬ್ರೇಕ್‌ ಹಾಕುವ ಯತ್ನ ಮಾಡಿದ್ದಾರೆ.

    ಲಾಲ್‌ ಬಾಗ್‌ನಲ್ಲಿ ಬೆಂಗಳೂರು (Bengaluru) ನಡಿಗೆ ಹೆಸರಿನಲ್ಲಿ ನಡೆಸಿದ ಸಾರ್ವಜನಿಕರ ಭೇಟಿ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನವೆಂಬರ್ ಕ್ರಾಂತಿ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ. ಯಾರೋ ಪಬ್ಲಿಕ್ ನೀವು ಸಿಎಂ ಆಗೋ ಟೈಂ ಹತ್ತಿರ ಬರಲಿ ಅಂದ್ರು. ನಾನು ಅದಕ್ಕೆ ಪ್ರತಿಕ್ರಿಯಿಸಿಲ್ಲ. ನನ್ನ ಹೇಳಿಕೆಯನ್ನ ತಿರುಚುವ ಕೆಲಸ ಆಗ್ತಿದೆ ಎಂದಿದ್ದಾರೆ. ಇದನ್ನೂ ಓದಿ: 30*40 ಮನೆ ವಿದ್ಯುತ್ ಸಂಪರ್ಕದ ಓಸಿಗೆ ಅಸ್ತು – ಲಕ್ಷಾಂತರ ಜನಕ್ಕೆ ಗುಡ್‌ನ್ಯೂಸ್‌ ಕೊಟ್ಟ ಡಿಕೆಶಿ

    ಇದೇ ವೇಳೆ ಮಾಧ್ಯಮಗಳಿಗೆ ಸಲಹೆ ನೀಡಿದ ಅವರು, ಯಾರೋ ನಾಗರಿಕರು ಮುಖ್ಯಮಂತ್ರಿ ಆಗುವ ಸಮಯ ಹತ್ತಿರ ಬಂತಾ ಅಂತ ಕೇಳಿದ್ರು, ಅದಕ್ಕೆ ನಾನು ಉತ್ತರಿಸಿಲ್ಲ. ನನ್ನ ಮಾತು ಹತ್ರ ಬರ್ತಿದೆ ಅಂತ ತಿರುಚಿ ತೋರಿಸಬೇಡಿ. ಸುಳ್ಳು ನ್ಯೂಸ್ ಕ್ರಿಯೇಟ್ ಮಾಡ್ತಿರಾ? ಮೀಡಿಯಾದವರು ರಾಜಕಾರಣ ಮಾಡಬೇಡಿ ಎಂದು ಹೇಳಿದ್ದಾರೆ.

    ನಾನು ಮುಖ್ಯಮಂತ್ರಿ ಆಗೋ ಟೈಂ ಹತ್ತಿರ ಬಂದಿದೆ ಅಂತ ಹೇಳಿಲ್ಲ. ನನ್ನ ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡಲು ಹೊರಟಿದ್ದೇನೆ. ಸುಳ್ಳು ಸುದ್ದಿ ಹಾಕಿದ್ರೆ ಮಾನನಷ್ಟ ಕೇಸ್ ಹಾಕ್ತೀನಿ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಜೊತೆಗಿನ ಫೋಟೊ ಶೇರ್ – ರಾಜಕೀಯ ಎಂಟ್ರಿಗೆ ಸಿದ್ದರಾಮಯ್ಯ ಮೊಮ್ಮಗ ಸಿದ್ಧತೆ?

  • ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿಗಣತಿ, GBA ಚುನಾವಣೆಗೆ ತಯಾರಿ ಎಲ್ಲಿ?: ಸರ್ಕಾರಕ್ಕೆ ವಿಜಯೇಂದ್ರ ಪ್ರಶ್ನೆ

    ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿಗಣತಿ, GBA ಚುನಾವಣೆಗೆ ತಯಾರಿ ಎಲ್ಲಿ?: ಸರ್ಕಾರಕ್ಕೆ ವಿಜಯೇಂದ್ರ ಪ್ರಶ್ನೆ

    ಬೆಂಗಳೂರು: ರಾಜ್ಯ ಸರ್ಕಾರ ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿಗಣತಿ (Caste census) ವಿಷಯದಲ್ಲಿ ತೀರ್ಮಾನ ಮಾಡುತ್ತಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಅವರು ಟೀಕಿಸಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಾತಿ ಗಣತಿ ವಿಚಾರದಲ್ಲಿ ಗಣತಿದಾರ ಶಿಕ್ಷಕವೃಂದಕ್ಕೂ ಸಮಸ್ಯೆ ಆಗುತ್ತಿದೆ. ರಜೆ ದಿನಗಳನ್ನೂ ವಿಸ್ತರಿಸಿದ್ದರಿಂದ ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಸಮಸ್ಯೆ ಆಗಲಿದೆ. ಸರಕಾರಿ ಶಾಲೆಯಲ್ಲಿ ಓದುವ ಗ್ರಾಮೀಣ ಭಾಗದ ಮಕ್ಕಳಿಗೆ ಒಂದೊಂದು ದಿನವೂ ಅಷ್ಟೇ ಮಹತ್ವದ್ದು. ಶಾಲೆಗೆ ರಜೆ ಘೋಷಿಸಿ ಶಾಲಾ ಮಕ್ಕಳಿಗೂ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಟ್ರಾಫಿಕ್‌ ಸಮಸ್ಯೆ ಒಳ್ಳೆಯದು, ಇದು ಬೆಂಗಳೂರಿನ ಪ್ರಗತಿಯ ದಿಕ್ಸೂಚಿ: ಪ್ರಿಯಾಂಕ್‌ ಖರ್ಗೆ ವ್ಯಾಖ್ಯಾನ

    ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆ ಕರೆದಿದ್ದು, ಶಾಸಕರಿಗೆ ಸಭೆಯ ಕಾರ್ಯಸೂಚಿಯನ್ನೇ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜಿಬಿಎ ಅಜೆಂಡವನ್ನೂ ಕೊಡದೆ ಗೌಪ್ಯವಾಗಿ ಸಭೆ ಮಾಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಚುನಾವಣೆ (GBA Election) ನಡೆಸುವುದಾಗಿ ಹೇಳುತ್ತಾರೆ. ಎಲ್ಲಿದೆ ತಯಾರಿ? ಎಷ್ಟು ಅಧಿಕಾರಿಗಳು ಬೇಕು? ಮೂಲಭೂತ ಸೌಕರ್ಯಗಳು, ಯಾವುದೂ ಇಲ್ಲದೇ ರಾಜಕೀಯ ಚಟಕ್ಕೆ ಘೋಷಣೆ ಮಾಡುತ್ತಾರೆ. ಯಾವುದೇ ಯೋಜನೆ ಇಲ್ಲದೇ ಹೊರಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಪರಿಸ್ಥಿತಿ
    ಬೆಂಗಳೂರಿನ (Bengaluru ) ಜನತೆ ಈ ಸರ್ಕಾರಕ್ಕೆ ಛೀ ಥೂ ಎಂದು ಉಗುಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಪ್ರಧಾನಮಂತ್ರಿಯವರ ಮನೆ ಮುಂದೆ ಗುಂಡಿ ಇದೆ; ಅಲ್ಲಿ ಗುಂಡಿ ಇದೆ ಎಂದು ಲೆಕ್ಕ ಹಾಕಲು ಹೊರಟಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಗಳ ಮಧ್ಯೆ ರಸ್ತೆ ಹುಡುಕುವ ದಾರುಣ ಪರಿಸ್ಥಿತಿ ಬಂದಿದೆ. ದೊಡ್ಡ ಮನುಷ್ಯರು ಪ್ರಧಾನಿ, ಲಂಡನ್ ಕುರಿತು ಮಾತನಾಡುತ್ತಾರೆ ಎಂದರಲ್ಲದೇ ಲಂಡನ್ ಬಗ್ಗೆ ಮಾತನಾಡಲು ನೀವು ಬೇಕೇ ಎಂದು ಪ್ರಶ್ನಿಸಿದರು. ಬೆಂಗಳೂರಿನ ಮಹಾಜನತೆ ರಾಜ್ಯ ಸರ್ಕಾರಕ್ಕೆ ಉತ್ತರ ಕೇಳುತ್ತಿದ್ದಾರೆ. ತುರ್ತಾಗಿ ಗುಂಡಿ ಮುಚ್ಚುವ ಕೆಲಸ ಆಗಬೇಕೆಂದು ಜನರು ಅಪೇಕ್ಷೆ ಪಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಕೊಲೆ, ಸುಲಿಗೆ, ಅತ್ಯಾಚಾರ ಸಂಭ್ರಮಕ್ಕೆ ಔತಣಕೂಟ – ಸಿಎಂ ಡಿನ್ನರ್‌ ಮೀಟಿಂಗ್‌ಗೆ ಸಿ.ಟಿ ರವಿ ವ್ಯಂಗ್ಯ

  • ಕೊಲೆ, ಸುಲಿಗೆ, ಅತ್ಯಾಚಾರ ಸಂಭ್ರಮಕ್ಕೆ ಔತಣಕೂಟ – ಸಿಎಂ ಡಿನ್ನರ್‌ ಮೀಟಿಂಗ್‌ಗೆ ಸಿ.ಟಿ ರವಿ ವ್ಯಂಗ್ಯ

    ಕೊಲೆ, ಸುಲಿಗೆ, ಅತ್ಯಾಚಾರ ಸಂಭ್ರಮಕ್ಕೆ ಔತಣಕೂಟ – ಸಿಎಂ ಡಿನ್ನರ್‌ ಮೀಟಿಂಗ್‌ಗೆ ಸಿ.ಟಿ ರವಿ ವ್ಯಂಗ್ಯ

    – ಭ್ರಷ್ಟಾಚಾರ 80% ದಾಟಿದೆ ಅಂತ ಗುತ್ತಿಗೆದಾರರ ಪ್ರೇಮಪತ್ರದಲ್ಲಿ ಉಲ್ಲೇಖ!

    ಚಿಕ್ಕಮಗಳೂರು: ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರ ಹಾಗೂ ಅತಿವೃಷ್ಠಿ ಇವೆಲ್ಲಾ ರಾಜ್ಯದ ದಾಖಲೆಯಾಗಿದ್ದು ಅದರ ಸಂಭ್ರಮಕ್ಕೆ ಔತಣಕೂಟ ಮಾಡುತ್ತಿದ್ದಾರೆ ಎಂದು ಸಿಎಂ ಡಿನ್ನರ್‌ ಮೀಟಿಂಗ್‌ಗೆ ಎಂಎಲ್‌ಸಿ ಸಿ.ಟಿ ರವಿ (C.T Ravi) ವ್ಯಂಗ್ಯವಾಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿಎಂ ಸಿದ್ದರಾಮಯ್ಯ (Siddaramaiah) ಔತಣಕೂಟ (Dinner Meeting) ಆಯೋಜಿಸಿರುವ ಬಗ್ಗೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ 80% ದಾಟಿದೆ ಅಂತ ಗುತ್ತಿಗೆದಾರರು ಪ್ರೇಮಪತ್ರ ಬರೆದಿದ್ದಾರೆ. ರಾಜ್ಯದಲ್ಲಿ 10 ಜಿಲ್ಲೆಗಳು ಅತಿವೃಷ್ಠಿಯಿಂದ ಕಂಗೆಟ್ಟು ಹೋಗಿವೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆಯಲ್ಲಿ ನಾವು 2ನೇ ಸ್ಥಾನದಲ್ಲಿದ್ದೇವೆ. ಇದನ್ನೆಲ್ಲಾ ಸಂಭ್ರಮಾಚರಣೆ ಮಾಡಬೇಕಲ್ವಾ ಅದಕ್ಕೆ ಔತಣಕೂಟ ಆಯೋಜಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿಎಂ ಡಿನ್ನರ್ ಮೀಟಿಂಗ್ ಯಾಕೆ ಅಂತ ಗೊತ್ತಿಲ್ಲ: ಚೆಲುವರಾಯಸ್ವಾಮಿ

    ಶಾಸಕ ವೀರೇಂದ್ರ ಪಪ್ಪಿಗೆ ಇಡಿ ಶಾಕ್ ವಿಚಾರವಾಗಿ, ರಾಜ್ಯದಲ್ಲಿ ಮಂತ್ರಿಯಾಗಲು ಬಿಹಾರ ಚುನಾವಣೆಗೆ 300 ಕೋಟಿ ರೂ. ದೇಣಿಗೆ ಆರೋಪವಿದೆ. ಕಾಂಗ್ರೆಸ್‌ನಲ್ಲಿ ಮೆರಿಟ್ ಅಂದ್ರೆ ಅಕ್ರಮ ಹಣ ಸಂಪಾದನೆಯಾಗಿದೆ. ಭ್ರಷ್ಟಾಚಾರರಿಗಳಿಗೆ, ಕಾಳಸಂತೆಕೋರರಿಗೆ ಕಾಂಗ್ರೆಸ್ ಮಣೆ ಹಾಕುತ್ತಾ ಬಂದಿದೆ. 60ರ ದಶಕದಿಂದಲೂ ಕಾಂಗ್ರೆಸ್ ಕಾಳಸಂತೆಕೋರರಿಗೆ ಪ್ರೋತ್ಸಾಹ ಮಾಡಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗೆಲ್ಲಾ ಕಾಳಸಂತೆಯ ಪ್ರಮಾಣ ಹೆಚ್ಚು ಎಂದು ವಾಗ್ದಾಳಿ ನಡೆಸಿದ್ದಾರೆ.

    ಯಾವ ಮೂಲದಿಂದ ಬೇಕಾದರೂ ಹಣ ಮಾಡಲಿ, ಒಟ್ಟು ಹಣ ಮಾಡಿದ್ದರೆ ಕಾಂಗ್ರೆಸ್ ಅವರಿಗೆ ಮಣೆ ಹಾಕುತ್ತೆ. ಇದು ಕಾಂಗ್ರೆಸ್‌ನಲ್ಲಿರುವ ವ್ಯವಸ್ಥೆ. ಕಾಂಗ್ರೆಸ್‌ನಲ್ಲಿ ಮೆರಿಟ್ ಅಂದ್ರೆ ಅಕ್ರಮ ಹಣ ಸಂಪಾದನೆ. ಅನುಮಾನವಿದ್ದರೆ 40 ಜನರ ಟ್ರ್ಯಾಕ್ ರೆಕಾರ್ಡ್ ನೋಡಿ ನಿಮಗೆ ಅರ್ಥವಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ ಅಧಿಕಾರ ಅಂತ್ಯದ ಮುನ್ಸೂಚನೆಯಾ- ಛಲವಾದಿ ಪ್ರಶ್ನೆ

  • ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ ಅಧಿಕಾರ ಅಂತ್ಯದ ಮುನ್ಸೂಚನೆಯಾ- ಛಲವಾದಿ ಪ್ರಶ್ನೆ

    ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ ಅಧಿಕಾರ ಅಂತ್ಯದ ಮುನ್ಸೂಚನೆಯಾ- ಛಲವಾದಿ ಪ್ರಶ್ನೆ

    ಬೆಂಗಳೂರು: ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ (Siddaramaiah) ಅಧಿಕಾರ ಅಂತ್ಯದ ಮುನ್ಸೂಚನೆಯಾ? ಡಿಕೆ ಶಿವಕುಮಾರ್ ಸಿಎಂ ಆಗುವ ಆರಂಭವೇ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನಿಸಿದ್ದಾರೆ.

    ಸಿಎಂ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನವೆಂಬರ್ ಕ್ರಾಂತಿ ಅನ್ನೋದು ಬಹುದಿನಗಳ ಸುದ್ದಿ. 6 ತಿಂಗಳ ಹಿಂದೆಯೇ ಕಾಂತ್ರಿ ಆಗುತ್ತೆ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ರು. ಆ ಕ್ರಾಂತಿಗೆ ಇನ್ನೊಂದು ತಿಂಗಳು ಇದೆ. ಅದರ ಬೆಳವಣಿಗೆ ಈಗ ಶುರುವಾಗಿದೆ‌. ಸಿಎಂ ಅವರು ಬದಲಾವಣೆ ಆಗ್ತಾರೆ ಅನ್ನೋ ಸಮಯದಲ್ಲಿ ಡಿನ್ನರ್ ಮೀಟಿಂಗ್ ಮಾಡುತ್ತಿದ್ದಾರೆ. ಸಿಎಂ ಅಲ್ಲದೇ ಬೇರೆ ಮಂತ್ರಿಗಳು ಸಭೆ ಮಾಡ್ತಿದ್ದಾರೆ. ಇದು ಕ್ರಾಂತಿಯ ವಿಚಾರವೇ ಅಂತ ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ:  ನಾವು ಮಾಡಿರೋದು ಪೊಲಿಟಿಕಲ್ ಮೀಟಿಂಗ್ ಅಲ್ಲ: ಪರಮೇಶ್ವರ್

     

    ಡಿನ್ನರ್ ಮೀಟಿಂಗ್ ಅಂದರೆ ಅದೇ ವಿಶೇಷತೆ. ಎರಡು ವರ್ಷಗಳಿಂದ ಡಿನ್ನರ್ ಮೀಟಿಂಗ್ ಸಿಎಂ ಮಾಡಿರಲಿಲ್ಲ.ಈಗ ಮಾಡ್ತಿದ್ದಾರೆ ಅಂದರೆ ಸಿದ್ದರಾಮಯ್ಯ (Siddaramaiah) ಅವರ ಅಧಿಕಾರ ಅಂತ್ಯವಾ? ಅಥವಾ ಡಿಕೆಶಿ (DK Shivakumar) ಗುಂಪು ಹೇಳು ರೀತಿ ನವೆಂಬರ್ ಗೆ ಡಿಕೆಶಿವಕುಮಾರ್ ಸಿಎಂ ಆಗ್ತಾರೆ ಅನ್ನೋದರ ಪ್ರಾರಂಭನಾ? ಅಥವಾ ದಲಿತ ಸಿಎಂ ಮಾಡ್ತೀನಿ ಅಂತ ಕಾಂಗ್ರೆಸ್ ಹೇಳ್ತಿದೆ. ಈಗಲಾದರೂ ದಲಿತ ಸಿಎಂ ಮಾಡಿ ಅದಕ್ಕೆ ತೆರೆ ಎಳೆಯುತ್ತಾರಾ ಅಂತ ಪ್ರಶ್ನೆ ಮಾಡಿದರು.

    ನಿನ್ನೆಯಿಂದ ಸಿಎಂ ಆಗಿ ಪರಮೇಶ್ವರ್ ಅವರನ್ನ ಮಾಡುತ್ತಾರೆ. ಅವರನ್ನು ಬೆಂಬಲಿಸುತ್ತೇವೆ ಎಂದು ಸಿಎಂ ಜೊತೆ ಇರೋ ಮಂತ್ರಿಗಳು ಹೇಳುತ್ತಿದ್ದಾರೆ. ಸಿಎಂ ಅವರು ಪರಮೇಶ್ವರ್ ಸಿಎಂ ಮಾಡಿಸೋಕೆ ಪ್ರಯತ್ನ ಮಾಡ್ತಿದ್ದಾರಾ? ನವೆಂಬರ್ ಕ್ರಾಂತಿಗೂ ಸಿಎಂ ಡಿನ್ನರ್ ಮೀಟಿಂಗ್‌ಗೂ ನಿಕಟ ಸಂಬಂಧವಿದೆ. ಈ ಬೆಳವಣಿಗೆ ನೋಡ್ತಿದ್ದರೆ ಏನೋ ದೊಡ್ಡ ವಿಷಯ ಇದೆ ಅಂತ ಜನರು ಅನ್ನಿಸುತ್ತಿದೆ ಅಂತ ತಿಳಿಸಿದರು. ಇದನ್ನೂ ಓದಿ:  ಕುಕ್ಕರ್ ಬ್ರ್ಯಾಂಡ್ ಪ್ರೆಸ್ಟೀಜ್ ಸಂಸ್ಥಾಪಕ ಟಿಟಿ ಜಗನ್ನಾಥನ್ ನಿಧನ

    ಈ ಬಾರಿಯ ದಸರಾ ಜನ ಸಾಮಾನ್ಯರ ದಸರಾ ಆಗಿರಲಿಲ್ಲ. ಕಾಂಗ್ರೆಸ್ ದಸರಾ ಆಗಿತ್ತು. ಈ ಬಾರಿ ದಸರಾ ಸಿದ್ದರಾಮಯ್ಯ, ಮಹದೇವಪ್ಪ ಅವರ ಅವರ ಮನೆ ಮದುವೆ ಸಮಾರಂಭ ನಡೆದ ಹಾಗೆ ಇತ್ತು. ಜನ ಸಾಮಾನ್ಯರು ಕಷ್ಟಪಟ್ಟರೂ ದಸರಾ ನೋಡಲು ಸಾಧ್ಯವಾಗಲಿಲ್ಲ. ಟಿಕೆಟ್ ಕಾಳಸಂತೆಯಲ್ಲಿ ಮಾರಾಟ ಆಗಿತ್ತು. ಸಿದ್ದರಾಮಯ್ಯ, ಮಹದೇವಪ್ಪ ಮೊಮ್ಮಕ್ಕಳ ಕಾರ್ಯಕ್ರಮದ ರೀತಿ ಇತ್ತು ಎಂದು ಹೇಳಿ ಯದುವೀರ್‌ ಒಡೆಯರ್‌ ಹೇಳಿಕೆಯನ್ನು ಸಮರ್ಥಿಸಿದರು.