Tag: politics

  • ಉಪ್ಪಿ ರಾಜಕಾರಣಕ್ಕೆ ಎಂಟ್ರಿ-ಹೇಗಿರಲಿದೆ ಉಪ್ಪಿ ಪಕ್ಷ? ಇಲ್ಲಿದೆ ಉತ್ತರ

    ಉಪ್ಪಿ ರಾಜಕಾರಣಕ್ಕೆ ಎಂಟ್ರಿ-ಹೇಗಿರಲಿದೆ ಉಪ್ಪಿ ಪಕ್ಷ? ಇಲ್ಲಿದೆ ಉತ್ತರ

    ಬೆಂಗಳೂರು: ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ರಾಜಕಾರಣಕ್ಕೆ ಎಂಟ್ರಿ ಆಗುವುದಾಗಿ ಅಧಿಕೃತವಾಗಿ ಹೇಳಿದ್ದಾರೆ. ಆದರೆ ಉಪ್ಪಿ ಮಾತ್ರ ಯಾವ ರಾಜಕೀಯ ಪಕ್ಷವನ್ನೂ ಸೇರಿಕೊಳ್ಳದೇ ತಮ್ಮದೇ ಆದ ಹೊಸ ಪಕ್ಷವನ್ನು ಕಟ್ಟಿಕೊಳ್ಳುವ ಸಿದ್ಧತೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

    ಇಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪೇಂದ್ರ, ಹೊಸ ಹೊಸ ಐಡಿಯಾಗಳ ಮೂಲಕ ಉಪ್ಪಿ ಪಕ್ಷವನ್ನು ಕಟ್ಟಲಿದ್ದಾರೆ. ಈ ಪಕ್ಷದಲ್ಲಿ ಯಾರು ಬೇಕಾದರೂ ಸೇರಿಕೊಳ್ಳಬಹುದು. ಪಕ್ಷಕ್ಕೆ ಬರುವ ಅಭ್ಯರ್ಥಿಗಳಿಗೆ ಕೆಲವು ಅರ್ಹತೆಗಳನ್ನು ನಿಗದಿ ಮಾಡಲಾಗುತ್ತದೆ. ನಿಮ್ಮಲ್ಲಿರುವ ಹೊಸ ಐಡಿಯಾಗಳ ಕುರಿತು ಮೇಲ್ ಮಾಡಿ. ಹೊಸ ಐಡಿಯಾಗಳಿಗಾಗಿ ಒಂದು ವೇದಿಕೆ ನಿರ್ಮಾಣವಾಗಲಿದೆ ಅಂದ್ರು.

    ಕಾರ್ಮಿಕ ಬೇಕು: ನಮ್ಮ ಪಕ್ಷಕ್ಕೆ ಸೇವೆ ಮಾಡುವವರು ಬೇಕಾಗಿಲ್ಲ. ಸಂಬಳಕ್ಕೆ ಕೆಲಸ ಮಾಡುವ ಪ್ರಾಮಾಣಿಕ ಕಾರ್ಮಿಕರು ಬೇಕು. ಹಾಗಾಗಿ ಇಂದು ನಾನು ಖಾಕಿ ಬಟ್ಟೆಯನ್ನು ಧರಿಸಿದ್ದೇನೆ. ಇಲ್ಲಿ ಯಾರು ಯಾರಿಗೆ ಸೇವೆ ಮಾಡುತ್ತಿಲ್ಲ. ಜನಸಾಮನ್ಯರೇ ಜನನಾಯಕರಿಗೆ ಸಂಬಳ ಕೊಡ್ತಾಯಿದ್ದಾರೆ. ನಾಗರೀಕರು ಕಟ್ಟುವ ತೆರಿಗೆ ಹಣ ಪಾರದರ್ಶಕವಾಗಿ ಬಳಸಬೇಕು. ಇದು ಪ್ರಜಾಕೀಯದ ಮೊದಲ ಉದ್ದೇಶವಾಗಿದೆ ಅಂದ್ರು.

    ನಮ್ಮ ಪ್ರಜಾಕಾರಣಕ್ಕೆ ಈಗಾಗಲೇ ಮೂರು ಮೇಲ್ ಐಡಿಗಳು ಕ್ರಿಯೇಟ್ ಮಾಡಲಾಗಿದೆ. ಇದರಲ್ಲಿ ನಿಮ್ಮಲ್ಲಿರುವ ಹೊಸ ಐಡಿಯಾಗಳನ್ನು ಮೇಲ್ ಮಾಡಬಹುದು ಹಾಗು ನಿಮ್ಮ ಪರಿಚಯವನ್ನು ತಿಳಿಸಬಹುದು. ಹೊಸ ಹೊಸ ಐಡಿಯಾಗಳನ್ನು ಒಂದೆಡೆ ಸಂಗ್ರಹಿಸುವುದೇ ಗ್ರೇಟೆಸ್ಟ್ ಐಡಿಯಾ ಎಂದು ಹೇಳಿದರು.

    ಈ ಕೆಳಗಿನಂತಿವೆ ಹೊಸ ಮೇಲ್ ಐಡಿಗಳು
    1. prajakarana1@gmail.com
    2. prajakarana2@gmail.com
    3. prajakarana3@gmail.com

    ನಮ್ಮ ಪಕ್ಷಕ್ಕೆ ದುಡ್ಡು ಇರುವವರು ಬರಬೇಕೆಂಬ ನಿಯಮವಿಲ್ಲ. ಏನೂ ಇಲ್ಲದವರು ಸಹ ನಮ್ಮ ಪಕ್ಷಕ್ಕೆ ತಮ್ಮ ಕ್ರಿಯೇಟಿವ್ ಐಡಿಯಾ ಗಳ ಮೂಲಕ ಸೇರಿಕೊಳ್ಳಬಹುದು. ಏನೂ ಇಲ್ಲದೇ ಇದ್ರೂ ಎಲ್ಲವನ್ನು ಸಾಧಿಸಬಹದು ಎಂಬ ನಂಬಿಕೆಯ ಮೇಲೆ ನಾನು ರಾಜಕಾರಣಕ್ಕೆ ಬಂದವನನು. ಹಣವನ್ನು ವಿನಿಯೋಗಿಸದೆ ಪಕ್ಷವನ್ನು ಕಟ್ಟುತ್ತೀದ್ದೇನೆ. ಹಾಗಾಗಿ ಎಲ್ಲರಿಗೂ ನನ್ನ ಪಕ್ಷಕ್ಕೆ ಆಹ್ವಾನ ಕೊಡುತ್ತಿದ್ದೇನೆ. ನಾನೊಬ್ಬ ಜನಸಾಮನ್ಯ, ಯಾವ ಕೆಲಸವನ್ನು ಉಚಿತವಾಗಿ ಮಾಡುವುದಿಲ್ಲ. ಅದಕ್ಕಾಗಿ ನನಗೆ ಸಂಬಳ ಸಿಗುತ್ತದೆ. ಸಂಬಳಕ್ಕಾಗಿ ದುಡಿಯುವ ಪ್ರಾಮಣಿಕ ನೌಕರನಾಗಿರುತ್ತೇನೆ ಅಂದ್ರು.

    ಪಕ್ಷಕ್ಕೆ ಇದೂವರೆಗೂ ಯಾವುದೇ ಹೆಸರು ಮತ್ತು ಚಿಹ್ನೆಯನ್ನು ಅಂತಿಮಗೊಳಿಸಿಲ್ಲ. ಇದರ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಸ್ತಿತ್ವದಲ್ಲಿರುವ ಪಕ್ಷಗಳ ನಿಯಮಗಳಿಗೆ ನನ್ನ ನಿಯಮಗಳು ತುಂಬಾ ಭಿನ್ನವಾಗಿವೆ. ಹಾಗಾಗಿ ಯಾವ ಪಕ್ಷವನ್ನೂ ಸೇರಿಕೊಳ್ಳವುದಿಲ್ಲ ಅಂದ್ರು.

    ಇಂದು ನಗರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನ ಭೇಟಿಯಾಗ್ತೀರಾ ಎಂಬ ಪ್ರಶ್ನೆಗೆ ನನಗೆ ಗೊತ್ತಿಲ್ಲ ಎಂದು ಹೇಳಿ ಉಪ್ಪಿ ಮುಗಳ್ನಕ್ಕರು. ಜನ ನನ್ನನ್ನು ರಾಜಕೀಯಕಕ್ಕೆ ಕರೆದಿದ್ದಾರೆ. ಮಧ್ಯದಲ್ಲಿ ಕೈ ಬಿಡುವ ಪ್ರಶ್ನೆಯಿಲ್ಲ. ಸದ್ಯ ನಾನು ಕೆಲಸ ಮಾಡುತ್ತೇನೆ. ಭವಿಷ್ಯದಲ್ಲಿ ಏನಾಗುತ್ತೆ ಎಂಬುದು ಗೊತ್ತಿಲ್ಲ ಅಂದ್ರು.

    ಮುಂದೆ ಅಧಿಕಾರಕ್ಕೆ ಬರದೇಯಿದ್ದರೆ ಪಕ್ಷವನ್ನು ಕೈ ಬಿಡ್ತೀರಾ ಎಂಬ ಪ್ರಶ್ನೆಗೆ ಉಪ್ಪಿ ಉತ್ತರಿಸಿ, ನಮ್ಮ ಪಕ್ಷ ನಂಬಿಕೆಯ ಆಧಾರದ ಮೇಲೆ ನಡೆಯುತ್ತಿದೆ ಎನ್ನುವ ವಿಶ್ವಾಸ ನನಗಿದೆ ಅಂದ್ರು.

    ಸಿನಿಮಾದಿಂದ ದೂರ ಉಳಿತಾರಾ ಉಪ್ಪಿ?: ಇಷ್ಟು ದಿನ ನಾನು ಬೇರೊಬ್ಬ ನಿರ್ಮಾಪಕರಿಗೆ ಡೇಟ್ ಕೊಟ್ಟಿದ್ದೆ. ಈಗ ಯಾವುದೇ ಸಿನಿಮಾಗಳಿಗೆ ಸಹಿ ಹಾಕಿಲ್ಲ. ಅಭಿಮಾನಿಗಳು ನನ್ನನ್ನು ಯಾಕೆ ರಿಯಲ್ ಸ್ಟಾರ್ ಅಂತಾ ಕರೆದರೋ ಗೊತ್ತಿಲ್ಲ. ಇಂದು ರಿಯಲ್ ಆಗಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಇದೇ ನನ್ನ 50ನೇ ಸಿನಿಮಾ ಅಗಬಹುದು ಎಂದರು. ಎಲ್ಲಾ ಪಕ್ಷಗಳಿಗೂ ಒಂದು ಡೆಡ್‍ಲೈನ್ ಅಂತಾ ಇರುತ್ತೆ. ಆದ್ರೆ ನಮ್ಮದು ಲೈಫ್ ಲೈನ್ ಪಕ್ಷ ಎಂದು ಹೇಳಿದರು.

     

  • ನಟ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಡಿಕೆಶಿ ಹೀಗಂದ್ರು

    ನಟ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಡಿಕೆಶಿ ಹೀಗಂದ್ರು

    ರಾಯಚೂರು: ನಟ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಸ್ವಾಗತ ಕೋರಿದ್ದಾರೆ. ಉಪೇಂದ್ರ ಅವರು ಬಣ್ಣ ಹಚ್ಚಿ ಸಿನೆಮಾ ಮಾಡ್ತಿದ್ದರು. ಈಗ ಬಣ್ಣ ಹಚ್ಚದೆ ಸಿನೆಮಾದಂತಹ ರಾಜಕೀಯ ಮಾಡಲಿ ಎಂದು ಹೇಳಿದ್ದಾರೆ.

    ರಾಯಚೂರಿನ ಶಕ್ತಿನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಪ್ರತ್ಯೇಕ ಪಕ್ಷ ಕಟ್ಟುವುದಾದರೆ ಜ್ಯಾತ್ಯಾತೀತ ತತ್ವದ ಮೇಲೆ ಎಲ್ಲಾ ವರ್ಗದ ಜಾತಿಯವರನ್ನು ಸೇರಿಸಿಕೊಂಡು ಪಕ್ಷ ನಿರ್ಮಿಸಲಿ. ಜನರ ಸೇವೆ ಮಾಡಲು ಬರುತ್ತಿರುವ ಉಪೇಂದ್ರ ಅವರಿಗೆ ಮನಃಪೂರ್ವಕವಾಗಿ ಸ್ವಾಗತಿಸಿ ಶುಭ ಕೋರುವೆ ಎಂದು ಹೇಳಿದರು.

    ನನ್ನ ವಿರುದ್ಧ ಎಸ್‍ಆರ್ ಹಿರೇಮಠ ಸೇರಿದಂತೆ ಯಾವುದೇ ರಾಜಕೀಯ ನಾಯಕರು ಯಾರಿಗೆ ದೂರು, ಅರ್ಜಿ ನೀಡಲಿ ಅಥವಾ ಹೋರಾಟ ಮಾಡಲಿ ನನ್ನದೇನು ಅಭ್ಯಂತರವಿಲ್ಲ. ಎಲ್ಲರಿಗೂ ಕಾನೂನು ಚೌಕಟ್ಟಿನಲ್ಲಿ ಉತ್ತರಿಸುವೆ ಅಂದ್ರು.

    ಮುಂಬರುವ ಚಳಿಗಾಲ ಮತ್ತು ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಲಿದೆ. ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ವಿದ್ಯುತ್ ಸಮಸ್ಯೆಯಾಗದಂತೆ ಸಾವಿರ ಮೆಗಾವ್ಯಾಟ್ ಖರೀದಿಗೆ ನಿರ್ಧರಿಸಲಾಗಿದೆ ಅಂತ ಹೇಳಿದ್ರು.

    https://www.youtube.com/watch?v=Wk2ZwYMCkXs

     

  • ನಿತೀಶ್ ಕುಮಾರ್‍ಗೆ ಬಿಹಾರ ಬಿಜೆಪಿ ಬೆಂಬಲ

    ನಿತೀಶ್ ಕುಮಾರ್‍ಗೆ ಬಿಹಾರ ಬಿಜೆಪಿ ಬೆಂಬಲ

    ಪಾಟ್ನಾ: ನಿತೀಶ್ ಕುಮಾರ್ ಅವರಿಗೆ ಬಾಹ್ಯ ಬೆಂಬಲ ನೀಡುವುದಾಗಿ ಬಿಹಾರ ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಹೇಳಿದ್ದಾರೆ.

    ಕೇಂದ್ರ ನಾಯಕರು ಮತ್ತು ರಾಜ್ಯದ ನಾಯಕರ ಜೊತೆ ಚರ್ಚೆ ನಡೆಸಿದ ಬಳಿಕ ಸುಶೀಲ್ ಕುಮಾರ್ ಮೋದಿ ಅವರು ಬಿಜೆಪಿಯ ನಿರ್ಧಾರವನ್ನು ತಿಳಿಸಿದ್ದು, ಶೀಘ್ರದಲ್ಲೇ ರಾಜ್ಯಪಾಲರಿಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ನಾವು ಮತ್ತೆ ಚುನಾವಣೆ ಹೋಗಲು ಇಷ್ಟ ಪಡುವುದಿಲ್ಲ. ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಿರುವುದು ನಮಗೆ ಸಂತೋಷ ತಂದಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ನಿತೀಶ್ ನಿರ್ಧಾರವನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದರೆ, ನಿತೀಶ್ ಕುಮಾರ್ ಪ್ರತಿಯಾಗಿ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

    2015ರ ಚುನಾವಣೆಯ ಸಂದರ್ಭದಲ್ಲಿ ಜೆಡಿಯು, ಆರ್‍ಜೆಡಿ, ಕಾಂಗ್ರೆಸ್ ಸೇರಿಕೊಂಡು ಮಹಾಘಟಬಂಧನ್ ಮಾಡಿಕೊಂಡಿತ್ತು. ಪರಿಣಾಮ 243 ಕ್ಷೇತ್ರಗಳ ಪೈಕಿ ಆರ್‍ಜೆಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಇತರರು 12 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣೆಯಲ್ಲಿ ಮಹಾಘಟಬಂಧನ್ ಯಶಸ್ವಿಯಾದ ಕಾರಣ ಎರಡು ಪಕ್ಷಗಳ ಬೆಂಬಲ ಪಡೆದು ನಿತೀಶ್ ಕುಮಾರ್ ಸಿಎಂ ಪಟ್ಟವನ್ನು ಏರಿದ್ದರು.

    243 ಸ್ಥಾನಗಳ ಪೈಕಿ ಬಹುಮತ ಸಾಬಿತುಪಡಿಸಲು 122 ಶಾಸಕರ ಬೆಂಬಲ ಅಗತ್ಯ. ಹೀಗಾಗಿ ಜೆಡಿಯು(71) ಮತ್ತು ಬಿಜೆಪಿ(53) ಶಾಸಕರು ಒಂದಾದರೆ 124 ಶಾಸಕರ  ಬೆಂಬಲ ಸಿಗುತ್ತದೆ.

    ಲಾಲೂ ಆಟ ನಡೆಯಲ್ಲ: ಆರ್‍ಜೆಡಿ ನಾಯಕರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಆರ್‍ಜೆಡಿ 80, ಕಾಂಗ್ರೆಸ್ 27 ಶಾಸಕರು ಸೇರಿದರೂ 107 ಶಾಸಕರ ಬೆಂಬಲ ಸಿಗುತ್ತದೆ. ಇನ್ನೂ ಇತರೇ 12 ಮಂದಿ ಇವರಿಗೆ ಬೆಂಬಲ ನೀಡಿದರೆ ಒಟ್ಟು ಶಾಸಕರ ಸಂಖ್ಯೆ 119 ಆಗುತ್ತದೆ. ಹೀಗಾಗಿ ಬಹುಮತದ ಮ್ಯಾಜಿಕ್ ಸಂಖ್ಯೆ 122 ತಲುಪಲು ಇನ್ನೂ ಮೂರು ಶಾಸಕರ ಬೆಂಬಲ ಬೇಕಾಗುತ್ತದೆ.

     

  • ಎರಡೇ ವರ್ಷದಲ್ಲೇ ಒಡೆದು ಹೋಯ್ತು ಮಹಾಮೈತ್ರಿ: ಬಿಹಾರದಲ್ಲಿ ಮುಂದೆ ಏನಾಗುತ್ತೆ?

    ಎರಡೇ ವರ್ಷದಲ್ಲೇ ಒಡೆದು ಹೋಯ್ತು ಮಹಾಮೈತ್ರಿ: ಬಿಹಾರದಲ್ಲಿ ಮುಂದೆ ಏನಾಗುತ್ತೆ?

    ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯನ್ನು ಮಣಿಸಲು ಕಾಂಗ್ರೆಸ್ ನಿರ್ಮಾಣ ಮಾಡಿದ್ದ ಮಹಾಘಟಬಂಧನ್ ಎರಡು ವರ್ಷದಲ್ಲೇ ಒಡೆದು ಹೋಗಿದೆ. ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್, ಆರ್‍ಜೆಡಿಗೆ ಬಿಗ್ ಶಾಕ್ ನೀಡಿದ್ದಾರೆ.

    ಭ್ರಷ್ಟಾಚಾರ ಆರೋಪ ಹೊತ್ತ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಲಾಲೂ ಪುತ್ರ ತೇಜಸ್ವಿ ಯಾದವ್ ರಾಜೀನಾಮೆ ನೀಡಬೇಕೆಂದು ನಿತೀಶ್ ಕುಮಾರ್ ಪಟ್ಟು ಹಿಡಿದಿದ್ದರು. ಆದರೆ ಇತ್ತ ಕಡೆ ಲಾಲೂ ನಿತೀಶ್ ಮಾತಿಗೆ ಬೆಲೆ ಕೊಡದೇ ಪುತ್ರನ ಪರ ಬ್ಯಾಟಿಂಗ್ ಮುಂದುವರೆಸುತ್ತಲೇ ಇದ್ದರು. ಭ್ರಷ್ಟಾಚಾರ ಸಹಿಸದ ನನ್ನ ಮಾತಿಗೆ ಬೆಲೆ ನೀಡದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಬುಧವಾರ ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ನೀಡುವ ಮೂಲಕ ಮಹಾಮೈತ್ರಿಯನ್ನು ಬ್ರೇಕಪ್ ಮಾಡಿಕೊಂಡಿದ್ದಾರೆ.

    ಒಂದು ವೇಳೆ ತೇಜಸ್ವಿ ಯಾದವ್ ರಾಜೀನಾಮೆ ನೀಡುತ್ತಿದ್ದರೆ ಮಹಾಘಟಬಂಧನ್ ಮುಂದುವರೆಯುತಿತ್ತೋ ಏನೋ? ಆದರೆ ಈಗ ನಿತೀಶ್ ಕುಮಾರ್ ರಾಜೀನಾಮೆ ನೀಡುವ ಮೂಲಕ ಎಲ್ಲ ರಾಜಕೀಯ ನಾಯಕರಿಗೆ ಶಾಕ್ ನೀಡಿದ್ದಾರೆ. ನಿತೀಶ್ ರಾಜೀನಾಮೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ನಿತೀಶ್ ಕುಮಾರ್ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಮೂಲಕ ಜೆಡಿಯು ಮತ್ತು ಬಿಜೆಪಿ ಮೈತ್ರಿ ಅಧಿಕೃತವಾಗಿ ಘೋಷಣೆಯಾಗದೇ ಇದ್ದರೂ ಮುಂದಿನ ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    2015ರ ಚುನಾವಣೆಯ ಸಂದರ್ಭದಲ್ಲಿ ಜೆಡಿಯು, ಆರ್‍ಜೆಡಿ, ಕಾಂಗ್ರೆಸ್ ಸೇರಿಕೊಂಡು ಮಹಾಘಟಬಂಧನ್ ಮಾಡಿಕೊಂಡಿತ್ತು. ಪರಿಣಾಮ 243 ಕ್ಷೇತ್ರಗಳ ಪೈಕಿ ಆರ್‍ಜೆಡಿ 80, ಜೆಡಿಯು 71, ಬಿಜೆಪಿ 53, ಕಾಂಗ್ರೆಸ್ 27, ಇತರರು 12 ಸ್ಥಾನಗಳಲ್ಲಿ ಜಯಗಳಿಸಿದ್ದರು. ಚುನಾವಣೆಯಲ್ಲಿ ಮಹಾಘಟಬಂಧನ್ ಯಶಸ್ವಿಯಾದ ಕಾರಣ ಎರಡು ಪಕ್ಷಗಳ ಬೆಂಬಲ ಪಡೆದು ನಿತೀಶ್ ಕುಮಾರ್ ಸಿಎಂ ಪಟ್ಟವನ್ನು ಏರಿದ್ದರು.

    ಈಗ ಮಹಾಘಟಬಂಧನ್ ಬ್ರೇಕಪ್ ಆದರೂ ಬಿಜೆಪಿ ಮತ್ತು ಜೆಡಿಯು ಒಂದಾದರೆ ಮತ್ತೆ ನಿತೀಶ್ ಕುಮಾರ್ ಸಿಎಂ ಆಗಲು ಸಾಧ್ಯವಿದೆ. 243 ಸ್ಥಾನಗಳ ಪೈಕಿ ಬಹುಮತ ಸಾಬಿತುಪಡಿಸಲು 122 ಶಾಸಕರ ಬೆಂಬಲ ಅಗತ್ಯ. ಹೀಗಾಗಿ ಜೆಡಿಯು(71) ಮತ್ತು ಬಿಜೆಪಿ(53) ಶಾಸಕರು ಒಂದಾದರೆ 124 ಶಾಸಕರ ಬೆಂಬಲ ಸಿಗುತ್ತದೆ. ಬಿಜೆಪಿಯ ಬಾಹ್ಯ ಬೆಂಬಲ ಪಡೆದು ನಿತೀಶ್ ಕುಮಾರ್ ಮತ್ತೆ ಸಿಎಂ ಆಗಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ಮೂಲಗಳ ಮಾಹಿತಿಯ ಮೇರೆ ಸುದ್ದಿಯನ್ನು ಪ್ರಕಟಿಸಿವೆ

    ಲಾಲೂ ಆಟ ನಡೆಯಲ್ಲ: ಆರ್‍ಜೆಡಿ ನಾಯಕರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಆರ್‍ಜೆಡಿ 80, ಕಾಂಗ್ರೆಸ್ 27 ಶಾಸಕರು ಸೇರಿದರೂ 107 ಶಾಸಕರ ಬೆಂಬಲ ಸಿಗುತ್ತದೆ. ಇನ್ನೂ ಇತರೇ 12 ಮಂದಿ ಇವರಿಗೆ ಬೆಂಬಲ ನೀಡಿದರೆ ಒಟ್ಟು ಶಾಸಕರ ಸಂಖ್ಯೆ 119 ಆಗುತ್ತದೆ. ಹೀಗಾಗಿ ಬಹುಮತದ ಮ್ಯಾಜಿಕ್ ಸಂಖ್ಯೆ 122 ತಲುಪಲು ಇನ್ನೂ ಮೂರು ಶಾಸಕರ ಬೆಂಬಲ ಬೇಕಾಗುತ್ತದೆ.

     

  • ಬಿಎಸ್‍ವೈ ಹಿಂದೆ ಯಾಕೆ ಇರ್ತಿರಾ ಅನ್ನೋ ಪ್ರಶ್ನೆಗೆ ಶೋಭಾ ಉತ್ತರಿಸಿದ್ದು ಹೀಗೆ

    ಬಿಎಸ್‍ವೈ ಹಿಂದೆ ಯಾಕೆ ಇರ್ತಿರಾ ಅನ್ನೋ ಪ್ರಶ್ನೆಗೆ ಶೋಭಾ ಉತ್ತರಿಸಿದ್ದು ಹೀಗೆ

    ಬೆಂಗಳೂರು: ರಾಜಕೀಯದಲ್ಲಿ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಅನ್ನೋದಿಕ್ಕೆ ಬಿಎಸ್ ಯಡಿಯೂರಪ್ಪ ತಾಜಾ ಉದಾಹರಣೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಶನಿವಾರ ನಗರದ ಪುರಭವನದಲ್ಲಿ ಬಸವ ಕ್ರಾಂತಿ ವೇದಿಕೆ ವತಿಯಿಂದ ನಡೆದ ಬಸವಣ್ಣನವರ ಹಾದಿಯಲ್ಲಿ ಜನನಾಯಕರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಎಸ್‍ವೈ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಹೀಗಾಗಿ ನಾವು ಅವರ ಹಿಂದೆ ಇದ್ದೀವಿ ಅಂತಾ ಹೇಳಿದ್ರು.

    ಇಂದ್ರಜಿತ್ ರಾಜಕೀಯಕ್ಕೆ ಎಂಟ್ರಿ?: ಪಿ.ಲಂಕೇಶ್ ಪುತ್ರ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ರಾಜಕೀಯ ಪ್ರವೇಶ ಮಾಡ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಶನಿವಾರ ಅವರಾಡಿದ ಮಾತುಗಳು ರಾಜಕೀಯ ಪ್ರವೇಶದ ಆಸೆಯನ್ನು ಬಹಿರಂಗೊಳಿಸಿದೆ.

    ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಹಾಡಿಹೊಗಳಿದರು. ಇದೇ ಹೊತ್ತಲ್ಲಿ ನಿಮ್ಮ ಹಿಂಬಾಲಕನಾಗಿ ಇರುತ್ತೇನೆ, ನಿಮ್ಮ ಆರ್ಶೀವಾದ ಬೇಕು ಎಂದು ವೇದಿಕೆಯಲ್ಲಿ ಬಿಎಸ್‍ವೈ ಜೊತೆ ಮನವಿ ಮಾಡಿದರು.

  • ಜಂತಕಲ್ ಕೇಸ್: ಆರೋಪ ಸಾಬೀತಾದರೆ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ತೀನಿ: ಎಚ್‍ಡಿಕೆ

    ಜಂತಕಲ್ ಕೇಸ್: ಆರೋಪ ಸಾಬೀತಾದರೆ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ತೀನಿ: ಎಚ್‍ಡಿಕೆ

    ಬೆಂಗಳೂರು: ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡ(ಎಸ್‍ಐಟಿ) ಸುಪ್ರೀಂ ಕೋರ್ಟಿ ಗೆ ಸಲ್ಲಿಸಿದ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನ ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಈ ಕೇಸ್ ಸಾಬೀತಾದರೆ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

    ನಾನು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ನನ್ನ ಹೆಸರಿಗೆ ಕಳಂಕ ತರಲು ಈ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಎಸ್‍ಐಟಿ ಮುಂದೆ ಇಡೀ ದಿನ ಹೋಗಿ ಕುಳಿತುಕೊಳ್ಳುತ್ತೇನೆ. ಏನು ಬೇಕಾದರೂ ವಿಚಾರಣೆ ಮಾಡಿಕೊಳ್ಳಲಿ. ನಾನು ಪ್ರಾಮಾಣಿಕವಾಗಿ ಇರುವುದರಿಂದಲೇ ಧೈರ್ಯವಾಗಿ ಇದ್ದೇನೆ ಎಂದು ತಿಳಿಸಿದರು.

    ರಾಹುಲ್‍ಗೆ ಕ್ರೆಡಿಟ್: ಸಿದ್ದರಾಮಯ್ಯನವರು ಸಾಲ ಮನ್ನಾವನ್ನು ನಾನು ನನ್ನ ಕ್ರೆಡಿಟ್ ಎಂದು ಹೇಳುವುದಿಲ್ಲ. 50 ಸಾವಿರ ರೂ. ವರೆಗಿನ ಸಾಲಮನ್ನಾದ ಕ್ರೆಡಿಟ್ ಅನ್ನು ನಾನು ರಾಹುಲ್ ಗಾಂಧಿ ಅವರಿಗೆ ಕೊಡುತ್ತೇನೆ. ಬಿಎಸ್‍ವೈ ಗೆ ಸಾಲ ಮನ್ನಾದ ಬಗ್ಗೆ ಮಾತಾನಾಡುವ ನೈತಿಕ ಹಕ್ಕಿಲ್ಲ. ಶೆಟ್ಟರ್ ಅವರು ಸಾಲ ಮನ್ನಾ ಮಾಡುವಾಗ ಬಿಎಸ್‍ವೈ ಬಿಜೆಪಿ ಪಕ್ಷ ದಿಂದ ಒಂದು ಕಾಲು ಹೊರಗಡೆ ಇಟ್ಟಿದ್ದರು ಎಂದರು.

    ರೈತರ ದುಡ್ಡು: ಸಾಲ ಮನ್ನಾ ಮಡುವ ಮೂಲಕ ರೈತನ ದುಡ್ಡು ರೈತನಿಗೆ ಕೊಟ್ಟಿದ್ದಾರೆ. ನಾಲ್ಕು ವರ್ಷಗಳಿಂದ ಸಂಗ್ರಹಿರುವ ವ್ಯಾಟ್ ತೆರಿಗೆಯ ಹಣ ಕೊಟ್ಟಿದ್ದಾರೆ. ಸಾಲ ಮನ್ನಾ ಆದೇಶ ಹೊರಬರುವುದಕ್ಕೂ ಒಂದೆರಡು ದಿನ ಮೊದಲು ಬ್ಯಾಂಕಿನವರು ಅನೇಕ ರೈರಿಗೆ ಧಮ್ಕಿ ಹಾಕಿ ಕಟ್ಟಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

    ಬಿಜೆಪಿ ಕೆಲ್ಸ: ಚುನಾವಣೆಯ ಹತ್ತಿರ ಬರುತ್ತಿರುವ ಕಾರಣ ಕಾಂಗ್ರೆಸ್ ಎಂಎಲ್‍ಸಿ ಗೋವಿಂದರಾಜು ಐಟಿ ಡೈರಿಯ ಸುದ್ದಿಗಳು ಹೊರಗಡೆ ಬರುತ್ತಿವೆ. ಸಾಲ ಮನ್ನಾ ವಿಚಾರವನ್ನು ಗಮನ ಬೇರೆಡೆ ಸೆಳೆಯಲು ಬಿಜೆಪಿಯವರು ಈ ತಂತ್ರವನ್ನು ಮಾಡಿಸುತ್ತಿದ್ದಾರೆ ಎಂದು ಎಚ್‍ಡಿಕೆ ಹೇಳಿದರು.

    ಗಂಭೀರವಾಗಿ ತೆಗೆದುಕೊಳ್ಳಬೇಕು: ಮೆಟ್ರೋ ಸ್ಟೇಷನ್ ಗಳಲ್ಲಿ ಹಿಂದಿ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಕ್ಷಣ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಧಿಕಾರಿಗಳಿಗೆ ಸೂಚನೆ ಕೊಟ್ಟು ಕನ್ನಡಕ್ಕೆ ಪ್ರಾಶಸ್ತ್ಯ ನೀಡಲು ಹೇಳಬೇಕು. ಇದು ಹಂತಹಂತವಾಗಿ ಬೇರೆ ಭಾಷೆಗಳನ್ನು ಹೇರುವ ಪ್ರಯತ್ನ ಎಂದು ಎಚ್‍ಡಿಕೆ ಹೇಳಿದರು.

    ಇಬ್ಬರೇ ಸ್ಪರ್ಧೆ: ಪ್ರಜ್ವಲ್ ರೇವಣ್ಣ ಮತ್ತು ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಸುದ್ದಿಗೆ, ನಮ್ಮ ಕುಟುಂಬದಿಂದ ಇಬ್ಬರೇ ಸ್ಪರ್ಧೆ ಎನ್ನುವ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧವಾಗಿದ್ದೇನೆ. ಅವರಿಬ್ಬರೂ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರ ನನ್ನ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಇದನ್ನೂ ಓದಿ:  ಜಂತಕಲ್ ಮೈನಿಂಗ್ ಅಕ್ರಮದಲ್ಲಿ ಕುಮಾರಸ್ವಾಮಿ ಪಾತ್ರ ಇದೆ: ಸುಪ್ರೀಂಗೆ ಎಸ್‍ಐಟಿ

  • ಡಿಸೆಂಬರ್ 12ಕ್ಕೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ?

    ಡಿಸೆಂಬರ್ 12ಕ್ಕೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ?

    ಚೆನ್ನೈ: ಸೂಪರ್‍ಸ್ಟಾರ್ ರಜನಿಕಾಂತ್ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಆಗುವುದು ಪಕ್ಕಾ ಎಂದು ಹಿಂದೂ ಮಕ್ಕಳ ಕಚ್ಚಿ(ಎಚ್‍ಎಂಕೆ) ಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಅರ್ಜುನ್ ಸಂಪತ್ ಹೇಳಿದ್ದಾರೆ.

    ಸೋಮವಾರ ಬೆಳಗ್ಗೆ ಅರ್ಜುನ್ ಸಂಪತ್ ರಜನಿಕಾಂತ್ ಅವರನ್ನು ಪೋಯಸ್ ಗಾರ್ಡನ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿಯಾದ ಬಳಿಕ ಮಾತನಾಡಿದ ಅವರು, ದ್ರಾವಿಡ ಪಕ್ಷಗಳಿಂದ ಮುಕ್ತವಾಗಲು ರಜನಿಕಾಂತ್ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂದು ತಿಳಿಸಿದರು.

    ಕಳೆದ 50 ವರ್ಷಗಳಿಂದ ತಮಿಳುನಾಡು ದ್ರಾವಿಡ ಪಕ್ಷಗಳ ಆಡಳಿತದಿಂದ ನಲುಗಿ ಹೋಗಿದೆ. ಹೀಗಾಗಿ ನಾನು ರಾಜ್ಯದ ಜನರ ಒಳಿತಿಗಾಗಿ ರಾಜಕೀಯ ಪ್ರವೇಶ ಮಾಡಬೇಕೆಂದು ಮನವಿ ಮಾಡಿದೆ ಎಂದು ಅವರು ತಿಳಿಸಿದರು.

    ಮಾತುಕತೆ ವೇಳೆ, ವ್ಯವಸ್ಥೆ ಈಗ ಭ್ರಷ್ಟವಾಗಿದೆ. ಒಂದು ವೇಳೆ ನಾನು ಏನು ಮಾಡದೇ ಇದ್ದರೆ ಅಪರಾಧಿ ಭಾವನೆ ನನ್ನನ್ನು ಕಾಡಲಿದೆ. ಹಿಮಾಲಯದಿಂದ ಹಿಡಿದು ದಕ್ಷಿಣದವರೆಗಿನ ನದಿಗಳ ಜೋಡಣೆ ಮಾಡುವ ಕನಸಿನ ಯೋಜನೆ ಪೂರ್ಣಗೊಳ್ಳಬೇಕಾದರೆ ರಾಜಕೀಯಕ್ಕೆ ಬಂದರೆ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು ಎಂದು ತಿಳಿಸಿದರು.

    ರಾಜಕೀಯ ಅಲ್ಲದೇ ಆಧ್ಯತ್ಮದ ಬಗ್ಗೆ ನಾವು ಚರ್ಚೆ ನಡೆಸಿದ್ವಿ. ತಮಿಳಿನ ಸಂತರಾದ ನಯನಾರ ಮತ್ತು ಆಲ್ವರರ ಬಗ್ಗೆ ಮಾತನಾಡಿದ್ದೇವು. ಸ್ವಾಮಿ ಸಚ್ಚಿದಾನಂದ ಸರಸ್ವತಿ ಮತ್ತು ದಯಾನಂದ ಸರಸ್ವತಿ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನಾನು ದಯಾನಂದರ ಶಿಷ್ಯ ಎಂದು ರಜನಿ ಹೇಳಿದರು ಎಂದರು.

    ಅರ್ಜುನ್ ಸಂಪತ್ ಜೊತೆಗಿನ ಭೇಟಿ ಬಳಿಕ ಈಗ ರಜನಿಕಾಂತ್ ಡಿಸೆಂಬರ್ 12ರ ತಮ್ಮ 67ನೇ ಹುಟ್ಟುಹಬ್ಬದಂದು ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಮೂಲಗಳಿಂದ ಸಿಕ್ಕಿದೆ. ರಜನೀಕಾಂತ್ ಈಗ ಇರುವ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗದೇ ತಮ್ಮದೇ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ. ಕಾಲಾ ರಜನಿ ಅವರ ಕೊನೆಯ ಚಿತ್ರವಾಗಲಿದ್ದು, ಮುಂದಿನ ವರ್ಷದಿಂದ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ರಾಜಕೀಯಕ್ಕೆ ಎಂಟ್ರಿ ಕೊಡ್ತೀರಾ? ಅಭಿಮಾನಿಗಳ ಪ್ರಶ್ನೆಗೆ ರಜನೀಕಾಂತ್ ಉತ್ತರಿಸಿದ್ದು ಹೀಗೆ

    ರಾಜಕೀಯಕ್ಕೆ ಎಂಟ್ರಿ ಕೊಡ್ತೀರಾ? ಅಭಿಮಾನಿಗಳ ಪ್ರಶ್ನೆಗೆ ರಜನೀಕಾಂತ್ ಉತ್ತರಿಸಿದ್ದು ಹೀಗೆ

    ಚೆನ್ನೈ:ಜಯಲಲಿತಾ ನಿಧನರಾದ ಬಳಿಕ ತಮಿಳುನಾಡಿನ ರಾಜಕೀಯ ಹೈಡ್ರಾಮದ ವೇಳೆ ರಜನೀಕಾಂತ್ ರಾಜಕೀಯಕ್ಕೆ ಬರಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈಗ ರಾಜಕೀಯಕ್ಕೆ ಸೇರುವ ಬಗ್ಗೆ ನನ್ನ ನಿಲುವು ಏನು ಎನ್ನುವುದನ್ನು ಅಭಿಮಾನಿಗಳಿಗೆ ಸೂಪರ್ ಸ್ಟಾರ್ ತಿಳಿಸಿದ್ದಾರೆ.

    9 ವರ್ಷಗಳ ಬಳಿಕ ಅಭಿಮಾನಿಗಳ ಜೊತೆ ಸಂವಾದ ನಡೆಸಿದ ರಜನಿಕಾಂತ್ ಸದ್ಯಕ್ಕೆ ರಾಜಕೀಯಕ್ಕೆ ಬರುವುದನ್ನು ಅಲ್ಲಗಳೆದಿದ್ದಾರೆ. ರಾಜಕೀಯ ರಂಗಕ್ಕೆ ಕಾಲಿಡುವ ಬಗ್ಗೆ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತಾನಾಡಿದ ಅವರು, ಭವಿಷ್ಯದಲ್ಲಿ ದೇವರು ಬಯಸಿದ್ರೆ ರಾಜಕೀಯಕ್ಕೆ ಕಾಲಿಡುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

    ಸದ್ಯಕ್ಕೆ ದೇವರು ನಟನಾಗಲು ಸೂಚಿಸಿದ್ದಾರೆ. ಮುಂದೇನಾಗುತ್ತದೆ ಎನ್ನುವುದು ಗೊತ್ತಿಲ್ಲ ಎಂದ ಅವರು ರಾಜಕೀಯ ಪಕ್ಷಗಳಿಗೆ ಸೇರ್ಪಡೆ ವದಂತಿಗಳನ್ನ ಅಲ್ಲಗೆಳೆದು, ಪಕ್ಷಗಳು ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದರು. ಅಷ್ಟೇ ಅಲ್ಲದೇ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    1996ರಲ್ಲಿ ತಮಿಳುನಾಡಿನಲ್ಲಿ ಜಯಲಲಿತಾ ವಿರುದ್ಧ ಪ್ರಚಾರ ನಡೆಸಿದ್ದನ್ನು ರಾಜಕೀಯ ಅಪಘಾತಕ್ಕೆ ಹೋಲಿಸಿದ ಅವರು, 21 ವರ್ಷಗಳ ಹಿಂದೆ ನಾನು ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ್ದು ನನ್ನ ದೊಡ್ಡ ತಪ್ಪು ನಿರ್ಧಾರ. ಈ ಘಟನೆಯಿಂದ ರಾಜಕೀಯ ಪಕ್ಷಗಳನ್ನು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡವು. ಆದರೆ ಈಗ ರಾಜಕೀಯಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದರು.

    ಮದ್ಯಪಾನ ಮಾಡಬೇಡಿ: ನಿಮ್ಮ ಮಕ್ಕಳು ಮತ್ತು ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ. ಧೂಮಪಾನ ಮತ್ತು ಮದ್ಯಪಾನದಿಂದ ನಿಮ್ಮ ಜೀವನವನ್ನು ನೀವು ಹಾಳು ಮಾಡಬೇಡಿ. ಧೂಮಪಾನ ಮತ್ತು ಮದ್ಯಪಾನ ನಿಮ್ಮ ಆರೋಗ್ಯವನ್ನು ಹಾಳು ಮಾತ್ರ ಮಾಡುವುದಿಲ್ಲ ಬದಲಾಗಿ ನಿಮ್ಮ ನಿರ್ಧಾರ ಕೈಗೊಳ್ಳುವ ಸಾಮಥ್ರ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದ ನಾನು ತುಂಬಾ ತೊಂದರೆಯನ್ನು ಅನುಭವಿಸಿದ್ದೇನೆ. ಹೀಗಾಗಿ ನನ್ನ ಸಲಹೆಯನ್ನು ನೀವು ಗಂಭೀರವಾಗಿ ಸ್ವೀಕರಿಸಿ ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದರು.

    ಮೇ 28ರಿಂದ ಪ ರಂಜೀತ್ ಅವರ ನಿರ್ದೇಶನದಲ್ಲಿ ಮುಂದಿನ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದೇನೆ ಎಂದು ರಜನೀಕಾಂತ್ ತಿಳಿಸಿದರು.

  • ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮುಂದೆ ವಾಮಾಚಾರ!

    ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮುಂದೆ ವಾಮಾಚಾರ!

    ಬೆಳಗಾವಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕುವೆಂಪು ನಗರದಲ್ಲಿರುವ ಮನೆ ಮುಂದೆ ವಾಮಾಚಾರ ಮಾಡಲಾಗಿದೆ.

    ಕಳೆದ 2013 ರ ಚುನಾವಣೆಯ ನಂತರ ಹೆಬ್ಬಾಳ್ಕರ್ ಮನೆ ಮುಂಭಾಗದಲ್ಲಿ ನಿರಂತರವಾಗಿ ವಾಮಾಚಾರ ಮಾಡಲಾಗುತ್ತಿದೆ ಎನ್ನಲಾಗಿದೆ. ಮನೆ ಮುಂದೆ, ಕಾರ್ ಕೆಳಗೆ ನಿಂಬೆಹಣ್ಣು, ತೆಂಗಿನಕಾಯಿ, ಮೊಟ್ಟೆ, ಮೆಣಸಿನಕಾಯಿ, ಬೂದುಗುಂಬಳಕಾಯಿ, ಕುಂಕುಮ, ಅರಶಿಣ ಪತ್ತೆಯಾಗಿದೆ.

    ಅಮವಾಸೆ ಮತ್ತು ಹುಣ್ಣಿಮೆ ದಿನಗಳಂದು ವಾಮಾಚಾರ ಹೆಚ್ಚಾಗಿರುತ್ತದೆ. ಮಾಟಮಂತ್ರದಿಂದ ಮಾನಸಿಕ ಹಿಂಸೆ ಆಗುತ್ತಿದೆ. ನಾನು ಮಾಟ ಮಂತ್ರ ನಂಬಲ್ಲ. ಆದರೆ ಮಾಟಮಂತ್ರದಂತಹ ಅನೇಕ ಘಟನೆ ನಡೆದಿವೆ. ನನ್ನ ಕಾರು, ಸಹೋದರ ಚನ್ನಾರಾಜ್ ಕಾರಿಗೆ ಅಪಘಾತಗಳಾಗಿವೆ. ಯಾವ ಸಾಧನೆಗೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.


    ಇದನ್ನೂ ಓದಿ: ಕಲಬುರಗಿ: ವಾಮಾಚಾರಕ್ಕೆ ಹೆದರಿ ಪ್ರತಿಭಟನೆಯಿಂದ ಹಿಂದೆ ಸರಿದ ಗ್ರಾಮಸ್ಥರು

    https://www.youtube.com/watch?v=WmoOtp7rMK4

  • ಎರಡೆಲೆ ಚಿಹ್ನೆಗಾಗಿ ಕೋಟಿ ಡೀಲ್ ಮಾಡ್ದೋನು ಬೆಂಗ್ಳೂರು ಹುಡ್ಗ – ದಕ್ಷಿಣ ಭಾರತದ ರಾಜಕಾರಣಿಗಳೆಲ್ಲಾ ಈತನ ಸಂಬಂಧಿಕರಂತೆ!

    ಎರಡೆಲೆ ಚಿಹ್ನೆಗಾಗಿ ಕೋಟಿ ಡೀಲ್ ಮಾಡ್ದೋನು ಬೆಂಗ್ಳೂರು ಹುಡ್ಗ – ದಕ್ಷಿಣ ಭಾರತದ ರಾಜಕಾರಣಿಗಳೆಲ್ಲಾ ಈತನ ಸಂಬಂಧಿಕರಂತೆ!

    ಮುರುಳೀಧರ್ ಹೆಚ್.ಸಿ.

    ನವದೆಹಲಿ: ಎಐಎಡಿಎಂಕೆಯ ಎರಡೆಲೆ ಚಿಹ್ನೆಗಾಗಿ ಡೀಲ್ ಕುದುರಿಸೋಕೆ ಮುಂದಾದವನು ಬೆಂಗಳೂರಿನ ಯುವಕ. ಮೊದಲಿನಿಂದಲೂ ಈತನಿಗೆ ಹಣದ ಹುಚ್ಚು ವ್ಯಾಮೋಹ, ಕಾರುಗಳೆಂದರೆ ಶೋಕಿ. ಸುಖೇಶ್ ಚಂದ್ರಶೇಖರನ್ ಎಂಬ ಹೆಸರಿನ ಈತ ಮೂಲತಃ ತಮಿಳುನಾಡಿನವನು. ಆದರೆ ಈತ ನೆಲೆಸಿರೋದು ಮಾತ್ರ ಬೆಂಗಳೂರಿನಲ್ಲಿ.

    ಘಟನೆ ಏನು?: ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಲಂಚ ನೀಡಲು ಮುಂದಾಗಿದ್ದ ಆರೋಪದ ಮೇಲೆ ಶಶಿಕಲಾ ಸಂಬಂಧಿ ಟಿಟಿ ದಿನಕರನ್ ವಿರುದ್ಧ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಐಎಡಿಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾದ ದಿನಕರನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆರ್‍ಕೆ ನಗರದ ಉಪಚುನಾವಣೆ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಎರಡು ಬಣದ ನಡುವೆ ಚಿಹ್ನೆಗಾಗಿ ಪೈಪೋಟಿ ಏರ್ಪಟ್ಟಿದ್ದರಿಂದ ಚುನಾವಣಾ ಆಯೋಗ ಪಕ್ಷದ ಎರಡು ಎಲೆಯ ಚಿಹ್ನೆಯನ್ನು ತಡೆಹಿಡಿದಿತ್ತು. ಈ ಚಿಹ್ನೆಗಾಗಿ ದಿನಕರನ್ 50 ಕೋಟಿ ರೂ. ಲಂಚ ಕೊಡಲು ಸಿದ್ಧರಾಗಿದ್ದರು ಎಂದು ವರದಿಯಾಗಿದೆ.

    ಇದಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಸುಖೇಶ್ ಚಂದ್ರಶೇಖರನ್‍ನನ್ನು ಪೊಲೀಸರು ಬಂಧಿಸಿದ್ದು, ಸುಖೇಶ್ ಬಳಿ 1.30 ಕೋಟಿ ರೂ. ಪತ್ತೆಯಾಗಿದೆ. ಇದು ಚುನಾವಣಾ ಆಯೋಗಕ್ಕೆ ನೀಡಲು ಇಟ್ಟುಕೊಂಡಿದ್ದ ಹಣ ಎಂದು ಹೇಳಲಾಗಿದೆ. ಲಂಚ ನೀಡಲು ಮುಂದಾಗಿದ್ದ ಬಗ್ಗೆ ಸುಖೇಶ್ ಒಪ್ಪಿಕೊಂಡಿದ್ದಾನೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ದಿನಕರನ್ ಈ ಆರೋಪಗಳನ್ನ ತಳ್ಳಿ ಹಾಕಿದ್ದು, ಸುಖೇಶ್ ಚಂದ್ರಶೇಖರನ್ ಎಂಬ ಹೆಸರಿನ ಯಾವುದೇ ವ್ಯಕ್ತಿ ನನಗೆ ಗೊತ್ತಿಲ್ಲ. ನಾನು ನನ್ನ ಜೀವನದಲ್ಲೇ ಈ ವ್ಯಕ್ತಿಯ ಜೊತೆ ಮಾತನಾಡಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಬಂಧಿತ ಆರೋಪಿ ಸುಖೇಶ್‍ನಿಂದ ಪೊಲೀಸರು 1.3 ಕೋಟಿ ರೂ. ಹಣ, ಬಿಎಂಡಬ್ಲ್ಯೂ ಹಾಗೂ ಮರ್ಸಿಡಿಸ್ ಕಾರುಗಳನ್ನ ಜಪ್ತಿ ಮಾಡಿದ್ದಾರೆ.

    ತಮಿಳುನಾಡು ಅಂದ್ರೆ ಜಯಲಲಿತಾ, ಜಯಲಲಿತಾ ಅಂದ್ರೆ ತಮಿಳುನಾಡು ಅಂತಿತ್ತು. ಯಾವಾಗ ಜಯಲಲಿತಾ ಸಾವನ್ನಪ್ಪಿದರೋ ಬಳಿಕ ಇಡೀ ತಮಿಳುನಾಡಿನ ರಾಜಕೀಯವೇ ಬುಡಮೇಲು ಆಗಿಬಿಟ್ಟಿತ್ತು. ಇನ್ನು ಆರ್‍ಕೆ ನಗರ ಉಪಚುನಾವಣೆಗೆ ಎರಡೆಲೆಗಾಗಿ ಬಡಿದಾಡಿಕೊಂಡ ಎರಡು ಬಣ ಬೇರೆ ಬೇರೆ ಚಿಹ್ನೆಯನ್ನು ಇಟ್ಟುಕೊಂಡು ಚುನಾವಣೆಗೆ ಇಳಿದ್ರು. ಆದರೆ ಭ್ರಷ್ಟಚಾರದ ಕಾರಣದಿಂದ ಉಪಚುನಾವಣೆಯೇ ಕ್ಯಾನ್ಸಲ್ ಆಗಿಬಿಟ್ಟಿತ್ತು.

    ಎರಡೆಲೆಗೆ 50 ಕೋಟಿ..!: ಇಷ್ಟೆಲ್ಲ ಆದ್ಮೇಲೆ ಎರಡೆಲೆ ಚಿಹ್ನೆಯನ್ನು ಪಡೆದುಕೊಳ್ಳೊದೇ ಪ್ರತಿಷ್ಟೆಯನ್ನಾಗಿ ಮಾಡಿಕೊಂಡ ಎರಡು ಬಣಗಳಲ್ಲಿ ದಿನಕರನ್ ಒಂದು ಹೆಜ್ಜೆ ಮುಂದೆಯೇ ಹೋದಂತಿದೆ… ಎರಡೆಲೆಗಾಗಿ ಚುನಾವಣಾ ಆಯೋಗದ ಅಧಿಕಾರಿಗಳಿಗೆ 50 ಕೋಟಿ ಡೀಲ್ ಮಾತನಾಡೋದಕ್ಕೆ ಹೋಗಿ 1 ಕೋಟಿ ಹಣವನ್ನು ಕೊಡೋದಕ್ಕೆ ಡೀಲ್ ಮಾಡಿಕೊಂಡಿದ್ದರಂತೆ. ಈ ವಿಚಾರ ತಿಳಿದಿದ್ದ ದೆಹಲಿ ಕ್ರೈಂ ಬ್ರಾಂಚ್ ಪೊಲೀಸ್ರು ಸುಖೇಶ್ ಚಂದ್ರಶೇಖರನ್‍ನನ್ನು ಬಂಧಿಸಿದ್ದಾರೆ.

    ದಕ್ಷಿಣದ ರಾಜಕರಾಣಿಗಳೆಲ್ಲಾ ಸಂಬಂಧಿಕರೇ!: ಹಣ ಕೊಡೋದಕ್ಕೆ ಹೋಗಿ ಪೊಲೀಸ್ರ ಕೈಯಲ್ಲಿ ತಗ್ಲಾಕೊಂಡ ಸುಖೇಶ್ ಚಂದ್ರಶೇಖರನ್ ಮೂಲ ಕೆದುಕುತ್ತಾ ಹೋದ್ರೆ ಒಂದು ಫಿಲಂ ಸ್ಟೋರಿಯನ್ನೇ ಮಾಡ್ಬಹುದು. ಚೆನ್ನೈ ಮೂಲದ ಸುಕೇಶ್ ಬೆಂಗಳೂರಿನಲ್ಲೇ ನೆಲೆಸಿ ಸಿಕ್ಕ ಸಿಕ್ಕ ಜನರಿಗೆಲ್ಲಾ ಮೋಸ ಮಾಡಿಕೊಂಡೇ ಜೀವನ ಮಾಡ್ತಾ ಇದ್ದ. ರಾಜಕಾರಣಿಗಳ ಸಂಬಂಧಿ ಅಂತ ಹೇಳಿಕೊಳ್ತಾ ಇದ್ದ ಸುಖೇಶ್, ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದಾಗ ನಾನು ಕುಮಾರಸ್ವಾಮಿ ಸಂಬಂಧಿ ಎಂದು ಬಾಲಾಜಿ ಎಂಬುವವರಿಗೆ ಬರೋಬರಿ 1 ಕೋಟಿಯಷ್ಟು ಉಂಡೆ ನಾಮ ತೀಡಿ ಎಸ್ಕೇಪ್ ಆಗಿದ್ನಂತೆ.

    2009ರಲ್ಲಿಯೇ ಕೋರಮಂಗಲ ಪೊಲೀಸ್ರು 10 ಲಕ್ಷ ಚೀಟಿಂಗ್ ಕೇಸ್‍ನಲ್ಲಿ ಅರೆಸ್ಟ್ ಆಗಿದ್ದ ಸುಖೇಶ್ ಮೋಸ ಮಡೋದಕ್ಕೆ ಶುರು ಮಾಡಿದ್ದೇ ತನ್ನ 17ನೇ ವಯಸ್ಸಿನಲ್ಲಿ. ಟೀನೇಜ್‍ನಲ್ಲಿ ನೋಡಿದ್ದೆಲ್ಲಾ ಬೇಕು ಅಂದುಕೊಳ್ಳುವ ವಯಸ್ಸಿನ ಹುಡ್ಗ ಸಿಕ್ಕ ಸಿಕ್ಕವರನ್ನೆಲ್ಲಾ ಮೋಸ ಮಾಡಬಹುದು ಅಂತ ಸುಲಭವಾಗಿ ತಿಳಿದುಕೊಂಡುಬಿಟ್ಟಿದ್ದ.

    ಜಯಲಲಿತಾ ಸೋದರನ ಮಗ ಅಂತೆ..!, ಕರುಣಾನಿಧಿಯ ಮೊಮ್ಮಗ..!: ಹಾವು ಮುಂಗುಸಿಯಂತೆ ಬಡಿದಾಡಿಕೊಳ್ತಾ ಇದ್ದ ಜಯಲಲಿತಾ ಮತ್ತು ಕರುಣಾನಿಧಿ ಸಂಬಂಧಿ ಅಂತ ಜನರಿಗೆ ಮೋಸ ಮಾಡ್ತಾ ಇದ್ದ. ಒಬ್ಬೊಬ್ಬರ ಬಳಿ ಒಂದೊಂದು ರೀತಿಯಲ್ಲಿ ಹೇಳ್ತಾ ಇದ್ದ ಸುಖೇಶ್ ಚಂದ್ರಶೇಖರನ್ ತಮಿಳುನಾಡಿನಲ್ಲಿಯೇ 100 ಕೋಟಿಗೂ ಮೀರಿದ ವಂಚನೆಯನ್ನು ಮಾಡಿದ್ದಾನೆ. ಪೊಲೀಸ್ರ ಕೈಯಲ್ಲಿ ಸಾಕಷ್ಟು ಬಾರಿ ಸಿಕ್ಕಿಬಿದ್ದಿದ್ದಾನೆ.

    ಕಾರು ಅಂದ್ರೆ ಮೋಜು..!, ಹುಡ್ಗೀರು ಅಂದ್ರೆ ಇವನದ್ದೇ ಕಾರುಬಾರು..!: ತನ್ನ 17ನೇ ವಯಸ್ಸಿನಲ್ಲಿ ಸಿಕ್ಕ ಸಿಕ್ಕವರೆನ್ನೆಲ್ಲಾ ಮೋಸ ಮಾಡಿಕೊಂಡು ಜೀವನ ಮಾಡೋದಕ್ಕೆ ಪ್ರಮುಖ ಕಾರಣವೇ ಅವನ ವಿಲಾಸಿ ಜೀವನ. ಕಾರುಗಳ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಬೆಳಸಿಕೊಂಡಿದ್ದ ಸುಖೇಶ್ ಇಷ್ಟೆಲ್ಲಾ ಮೋಸ ಮಾಡ್ತಾ ಇದ್ದಿದ್ದೇ ತನ್ನ ವಿಲಾಸಿ ಜೀವನಕ್ಕಾಗಿ. ಬಿಎಂಡಬ್ಲೂ, ಆಡಿ ಮುಂತಾದ ಕೋಟಿ ಕೋಟಿ ಮೌಲ್ಯದ ಕಾರುಗಳನ್ನು ಖರೀದಿ ಮಾಡಿ ಮಜಾ ಮಾಡ್ತಿದ್ದ. ಇನ್ನು ಹುಡ್ಗೀರ ಜೊತೆಯಲ್ಲಿ ಮೋಜು ಮಸ್ತಿಯಲ್ಲಿ ಮಾಡಿಕೊಂಡಿದ್ದವನಿಗೆ ಮಾಡಲ್‍ಗಳು ಅಂದ್ರೆ ಭಯಂಕರ ಹುಚ್ಚು.

    ಬಾಡಿಗಾರ್ಡ್ಸ್ ಕೊಟ್ಟು ಕೊಡೋದು ಹಣ ಪೀಕೋದು…!: ಬಾಡಿಗಾರ್ಡ್ಸ ಗಳನ್ನು ಕೊಡೋದಾಗಿ ಹೇಳಿ ರಾಜಕಾರಣಿಗಳ ಜೊತೆಯಲ್ಲಿ ಸ್ನೇಹ ಬೆಳೆಸುತ್ತಿದ್ದ. ಹಾಗೆಯೇ ಇಂಟೀರಿಯರ್ ಡೆಕೊರೇಷನ್ ಮಾಡಿಕೊಡ್ತೀನಿ ಎಂದು ಮನೆಯ ಒಳಗೆ ಎಂಟ್ರಿ ಕೊಡುವ ಈತ ರಾಜಕಾರಣಿಗಳನ್ನು ಪರಿಚಯ ಮಾಡಿಕೊಂಡು ಬಳಿಕ ಅವರ ಡೀಲ್‍ಗಳು ಅವರ ಕೆಲಸವೆಲ್ಲವನ್ನೂ ಮಾಡಿಕೊಡ್ತಾನೆ. ಇದೇ ರೀತಿ ದಿನಕರನ್ ಪರಿಚಯ ಮಾಡಿಕೊಂಡು ಡೀಲ್ ಮಾಡಿದ್ನಂತೆ ಸುಖೇಶ್.

    10 ಪರ್ಸೆಂಟ್ ಡೀಲ್..!: ಎರಡೆಲೆಗಾಗಿ 50 ಕೋಟಿ ಡೀಲ್ ಮಾಡೋದಕ್ಕೆ ಬಂದು ಪೊಲೀಸ್ರ ಕೈಗೆ ಸಿಕ್ಕಿಬಿದ್ದಿರೋ ಸುಖೇಶ್ ಚಂದ್ರಶೇಖರನ್ ದಿನಕರ್ ಜೊತೆಗೆ 10 ಪರ್ಸೆಂಟ್ ಡೀಲ್ ಮಾತನಾಡಿಕೊಂಡಿದ್ದು, ಅದನ್ನು ಕುದುರಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಸದ್ಯ ದಿನಕರನ್ ಕೂಡ ನಾಪತ್ತೆಯಾಗಿದ್ದು ಆತನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.