Tag: politics

  • ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ರಾಜಕೀಯಕ್ಕೆ

    ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ರಾಜಕೀಯಕ್ಕೆ

    ಉಡುಪಿ: ಮಾಜಿ ಡಿವೈಎಸ್‍ಪಿ ಅನುಪಮಾ ಶೆಣೈ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಈ ಬಗ್ಗೆ ಉಡುಪಿಯ ಉಚ್ಚಿಲದಲ್ಲಿ ಮಾತನಾಡಿದ ಅನುಪಮಾ ಶೆಣೈ, ಹೊಸ ಪಕ್ಷ ಕಟ್ಟುವುದಾಗಿ ತಿಳಿಸಿದ್ದಾರೆ. ರಾಜಕಾರಣದಲ್ಲಿ ಪೊಲೀಸಿಂಗ್ ಮಾಡಬೇಕಿದೆ. ಸಮಾನ ಮನಸ್ಕರೊಂದಿಗೆ ಮಾತುಕತೆ ನಡೆಸಿ ಒಂದು ತಿಂಗಳೊಳಗೆ ಎಲ್ಲರಿಂದ ಅಭಿಪ್ರಾಯ ಪಡೆಯುತ್ತೇನೆ. ತಜ್ಞರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಗಾಂಧೀಜಿಯ ಗ್ರಾಮ ಸ್ವರಾಜ್ಯ ಕನಸು ನನಸು ಮಾಡಬೇಕಿದೆ ಎಂದು ಹೇಳಿದ್ರು.

    ಮೊದಲ ಸುತ್ತಿನ ಮಾತುಕತೆ ನಡೆದಿದೆ. ಬಳ್ಳಾರಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಸಾರ್ವಜನಿಕರು ತಮ್ಮ ಅಭಿಪ್ರಾಯ ನೇರವಾಗಿ ಹಂಚಿಕೊಳ್ಳಬಹುದು ಎಂದು ಪಬ್ಲಿಕ್ ಟಿವಿಗೆ ಅನುಪಮಾ ಶೆಣೈ ಹೇಳಿಕೆ ನೀಡಿದ್ರು.

     

    ರಾಜಕೀಯಕ್ಕೆ ಭ್ರಷ್ಟತೆ ಸಂಪೂರ್ಣ ಆವರಿಸಿಕೊಂಡಿದೆ. ಜನರ ದನಿಯೇ ನಮ್ಮ ಪಕ್ಷದ ಉದ್ದೇಶ. ರಾಜನಾಥ್ ಸಿಂಗ್, ಕೇಜ್ರಿವಾಲ್ ಹಾಗೂ ಉಪೇಂದ್ರ ಅವರನ್ನ ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಮುಖಂಡರ ಜೊತೆಯೂ ಮಾತುಕತೆ ಮಾಡಿದ್ದೇನೆ ಅಂತ ಹೇಳಿದ್ರು.

     

     

  • ರಾಜಕೀಯ ಚರಿತ್ರೆಯ ವಿಶ್ಲೇಷಕ – ನಾಲಿಗೆಯಲ್ಲೇ ಇರುತ್ತೆ ಜನಪ್ರತಿನಿಧಿಗಳ ಡಿಟೇಲ್ಸ್

    ರಾಜಕೀಯ ಚರಿತ್ರೆಯ ವಿಶ್ಲೇಷಕ – ನಾಲಿಗೆಯಲ್ಲೇ ಇರುತ್ತೆ ಜನಪ್ರತಿನಿಧಿಗಳ ಡಿಟೇಲ್ಸ್

    ಕೊಪ್ಪಳ: ಕೆಲವರು ತಮಗೆ ಪರಿಚಯ ಇರುವವರ ಹೆಸರು ಹೇಳಿ ಅಂದರೆ ಮರೆತೋಗಿದೆ ನೆನಪಿಸಿಕೊಳ್ಳಬೇಕು ಎನ್ನುತ್ತಾರೆ. ಆದರೆ ಇಲ್ಲೊಬ್ಬರು 1952 ರಿಂದ ಇಲ್ಲಿವರೆಗೆ ಆಯ್ಕೆಯಾದ ಎಂಎಲ್‍ಎ, ಎಂಎಲ್‍ಸಿ ಮತ್ತು ಎಂಪಿಗಳ ಸಂಪೂರ್ಣ ಮಾಹಿತಿಯನ್ನು ಕೊಡುತ್ತಾರೆ. ಅದೇ ರೀತಿ ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ ಇರುತ್ತೆ. ಇವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ ಆಗಿದ್ದಾರೆ.

    ದುರಗಪ್ಪ ಮ್ಯಾದನೇರಿ ಇವರು ಕೊಪ್ಪಳದ ಗಂಗಾವತಿ ತಾಲೂಕಿನ ಹಂಪಸದುರ್ಗಾದವರು. ದುರಗಪ್ಪ ಓದಿದ್ದು ನಾಲ್ಕನೇ ತರಗತಿ ನಂತರ ವಯಸ್ಕರ ಶಿಕ್ಷಣದ ಮೂಲಕ ಕಲಿತು ದಿನಪತ್ರಿಕೆ ಓದುವ ಹವ್ಯಾಸ ಬೆಳಸಿಕೊಂಡಿದ್ದರು. ಇಂದಿಗೂ ಮ್ಯಾದನೇರಿಗೆ ದಿನಪತ್ರಿಕೆಗಳು ಬರುತ್ತಿರಲಿಲ್ಲ. ಆದರೆ ಇವರು ಪಕ್ಕದ ಗ್ರಾಮಗಳಿಗೆ ಹೋಗಿ ದಿನಪತ್ರಿಕೆ ಓದುತ್ತಿದ್ದರು. ಇವರು ಹೆಚ್ಚಾಗಿ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ.

    ಪ್ರತಿದಿನ ಪತ್ರಿಕೆಗಳಲ್ಲಿ ಬರುವ ರಾಜಕೀಯ ವಿಷಯಗಳ ಬಗ್ಗೆ ಓದುತ್ತಾ ಓದುತ್ತಾ ರಾಜಕೀಯ ರಂಗದ ಕಡೆ ಆಸಕ್ತಿ ಬೆಳೆಸಿಕೊಂಡೆ. ರಾಜ್ಯದ ಯಾವುದೇ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಬಗ್ಗೆ ಮಾಹಿತಿ ಕೇಳಿದರೂ ಥಟ್ ಅಂತ ಉತ್ತರ ಹೇಳುತ್ತೇನೆ. 1952 ರಿಂದ ಇಲ್ಲಿವರೆಗೆ ನಡೆದ ಎಂಎಲ್‍ಎ, ಎಂಎಲ್‍ಸಿ ಮತ್ತು ಎಂಪಿಗಳ ಚುನಾವಣೆಗಳ ಬಗ್ಗೆ ಮಾಹಿತಿ ಕೊಡುತ್ತೇನೆ. ನನಗೆ ರಾಜಕೀಯದ ಬಗ್ಗೆ ಪ್ರೇರಣೆ ನೀಡಿದ ರಾಮಣ್ಣ ಸಾಲಭಾವಿ ಮತ್ತು ಆರ್.ಎಸ್.ಜೋಶಿ ಅವರನ್ನು ಇಂದಿಗೂ ನೆನೆಸಿಕೊಳ್ಳುತ್ತೇನೆ ಎಂದು ದುರಗಪ್ಪ ಅವರು ಹೇಳಿದರು.

    ಒಬ್ಬ ಜನಪ್ರತಿನಿಧಿ ಎಷ್ಟು ಬಾರಿ ಆಯ್ಕೆಯಾಗಿದ್ದಾರೆ, ಎಷ್ಟು ಬಾರಿ ಸೋಲುಂಡಿದ್ದಾರೆ. ಅಭ್ಯರ್ಥಿಯ ಪೂರ್ಣ ಹೆಸರು ಏನು ಅಂತ ಹೇಳ್ತಾರೆ. ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಬಂದರೆ ರಾಜಕೀಯದ ಬಗ್ಗೆ ಮಾಹಿತಿ ಕೇಳಿ ಇವರಿಗೆ ಬಾರಿ ಕರೆಗಳು ಬರುತ್ತಾವೆ. ಅಭ್ಯರ್ಥಿ ಜೊತೆಗೆ ಪಕ್ಷ ಮತ್ತು ಜಾತಿಗಳ ಬಗ್ಗೆಯೂ ಮಾಹಿತಿ ಕೊಡುತ್ತಾರೆ ಎಂದು ದುರಗಪ್ಪ ಅವರ ಸ್ನೇಹಿತ ಈಶಪ್ಪ ತಿಳಿಸಿದರು.

    ಒಂದು ರೀತಿ ರಾಜಕೀಯ ಭಂಡಾರ ಅಂತಲೇ ಕರೆಯಿಸಿಕೊಂಡಿರುವ ದುರಗಪ್ಪ ಅವರು ಗಂಗಾವತಿ ತಾಲೂಕಿನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

  • ಬಿಜೆಪಿ ನಾಯಕರಿಂದ ಧಾರವಾಡದಲ್ಲಿ ದುರ್ಗಾ ದೌಡ್ ಕಾರ್ಯಕ್ರಮ

    ಬಿಜೆಪಿ ನಾಯಕರಿಂದ ಧಾರವಾಡದಲ್ಲಿ ದುರ್ಗಾ ದೌಡ್ ಕಾರ್ಯಕ್ರಮ

    ಧಾರವಾಡ: ದಸರಾ ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಧಾರವಾಡದಲ್ಲಿ ದುರ್ಗಾ ದೌಡ್ ಕಾರ್ಯಕ್ರಮ ನಡೆಸಿದರು. ಸಂಸದ ಪ್ರಹ್ಲಾದ ಜೋಶಿ ಮತ್ತು ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ನಗರದ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸುವ ಮೂಲಕ ದುರ್ಗಾ ದೌಡ್ ಆರಂಭಿಸಿದ ನಾಯಕರು, ಕೈಯಲ್ಲಿ ಖಡ್ಗ ಹಾಗೂ ಬಂದೂಕು ಹಿಡಿದು ನಗರದ ಹಲವೆಡೆ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಸಂಸದ ಜೋಶಿ ರಾಜಕೀಯದಲ್ಲಿ ಯಾರು ದುಷ್ಟ ಶಕ್ತಿಗಳಾಗಿ ಮೆರೆಯುತ್ತಿದ್ದಾರೆ ಅವರಿಗೆ ಸೋಲಾಗಲಿದೆ ಎಂದು ಹೇಳಿದರು.

    ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳಲ್ಲಿ ವ್ಯತ್ಯಾಸವಿಲ್ಲ. ಈ ಎರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದ ಜೋಶಿ, ದೇವೇಗೌಡರ ಹಾಗೂ ಕಾಂಗ್ರೆಸ್‍ನ ಒಳ ಹೊಡೆತಗಳು ಬಹಳಷ್ಟು ಇದ್ದರು ಇದನ್ನ ಮೀರಿ ಕರ್ನಾಟಕದಲ್ಲಿ ಮೋದಿ ನೇತೃತ್ವದಲ್ಲಿ ಸ್ಪಷ್ಟ ಬಹುಮತದಿಂದ ಬಿಜೆಪಿಗೆ ಗೆಲುವು ಸಾಧಿಸಲಿದ್ದು, ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದರು.

  • ರಾಜಕೀಯ ಕಾಲೆಳೆದಾಟಕ್ಕೆ `ಡಿಜಿಟಲ್’ ಟಚ್-ಎಲೆಕ್ಷನ್ ಹೊತ್ತಲ್ಲಿ ಸೋಶಿಯಲ್ ಮೀಡಿಯಾ ವಾರ್!

    ರಾಜಕೀಯ ಕಾಲೆಳೆದಾಟಕ್ಕೆ `ಡಿಜಿಟಲ್’ ಟಚ್-ಎಲೆಕ್ಷನ್ ಹೊತ್ತಲ್ಲಿ ಸೋಶಿಯಲ್ ಮೀಡಿಯಾ ವಾರ್!

    ಬೆಂಗಳೂರು: ಚುನಾವಣೆ ನಿಲ್ಲೋಕೆ ಟಿಕೆಟ್, ಕ್ಷೇತ್ರಕ್ಕಿಂತಲೂ ಈ ಬಾರಿ ರಾಜಕೀಯ ನಾಯಕರ ತಲೆಕೆಡಿಸಿರೋದು ಈ ಇಂಟರ್ ನೆಟ್ ದುನಿಯಾ. ಬುಧವಾರ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವಕವಾಗಿ ಟ್ರೋಲ್ ಮಾಡಲಾಗುತ್ತಿದೆ ಅಂತಾ ದೂರು ಕೊಟ್ಟಿದ್ದಾರೆ. ದೂರು ನೀಡಿದ ಬೆನ್ನಲ್ಲೆ ಸೈಬರ್ ಸಂಸ್ಥೆ ರಾಜಕೀಯ ನಾಯಕರ ಕೈ-ಕಾಲು ಎಳೆಯೋ ನೆಟ್ ಲೋಕದ ಸ್ಪೋಟಕ ಮಾಹಿತಿ ಯನ್ನು ಹೊರಹಾಕಿದೆ.

    ಚುನಾವಣೆ ಹತ್ತಿರ ಬರುತ್ತಿದ್ದಂತೆ ವಾಕ್ಸಮರ, ಆರೋಪ ಪ್ರತ್ಯಾರೋಪದ ಹಣಾಹಣಿ ನಡೆಯುತ್ತದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಅಸ್ತ್ರವಾಗಿದ್ದ ಸಾಮಾಜಿಕ ಜಾಲತಾಣವೇ ಈಗ ಅದರ ಕೆಂಗಣ್ಣಿಗೆ ಗುರಿಯಾಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಟ್ರೋಲ್ ಮಾಡಲಾಗುತ್ತದೆ. ಇಲ್ಲಿದೆ ಮಾಹಿತಿ
    * ರಾಜಕಾರಣಿಗಳ ಹೆಸರಲ್ಲಿ ಫೇಕ್ ಆಕೌಂಟ್ ಕ್ರಿಯೇಟ್ ಮಾಡಲಾಗುತ್ತದೆ. ಆ ಖಾತೆಗಳಲ್ಲಿ ವಿರೋಧಿಗಳ ಇಮೇಜ್‍ಗೆ ಧಕ್ಕೆಯಾಗುವ ಸುದ್ದಿಗಳನ್ನೆಲ್ಲಾ ಶೇರ್ ಮಾಡಲಾಗುತ್ತದೆ.
    * ಫೋಟೋಶಾಪ್ ಮೂಲಕ ವಿರೋಧಿ ನಾಯಕರ ಇಮೇಜ್‍ಗೆ ಧಕ್ಕೆ ತರಲಾಗುತ್ತದೆ
    * ಹಳೆ ಸುದ್ದಿಗಳನ್ನು ಅಥವಾ ಸುದ್ದಿಗಳನ್ನು ಸೃಷ್ಟಿಸಿ ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಹರಿಯಬಿಡಲಾಗುತ್ತಿದೆ. ಇದರಿಂದ ವಿರೋಧಿಗಳ ತೇಜೋವಧೆ ನಡೆಸಲಾಗುತ್ತದೆ.
    * ವಾಟ್ಸಪ್ , ಫೇಸ್‍ಬುಕ್, ಟ್ವಿಟರ್‍ನಲ್ಲಿ ಬಂದಿದ್ದೇ ಪರಮಸತ್ಯ ಎಂದು ನಂಬುವ ಜನರ ಮನಸ್ಥಿತಿಯನ್ನೇ ಲಾಭ ಮಾಡಿಕೊಳ್ಳುವ ಹುನ್ನಾರ.
    * ಬಹುತೇಕ ರಾಜಕೀಯ ನಾಯಕರಿಗೆ ಟ್ವಿಟರ್, ಫೇಸ್‍ಬುಕ್ ಹ್ಯಾಂಡಲ್ ಮಾಡೋದು ಗೊತ್ತಿಲ್ಲ. ಕಂಡವರ ಕೈಗೆ ಸಾಮಾಜಿಕ ಜಾಲತಾಣದ ನಿರ್ವಹಣೆ ಕೊಟ್ಟು ಕೈಸುಟ್ಟುಕೊಂಡು ದೂರು ಕೊಡುತ್ತಿದ್ದಾರೆ.

    ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ರಾಜಕೀಯ ನಾಯಕರ ನಿದ್ದೆ ಕೆಡಿಸಿದೆ. ಯಾವಾಗ ಹೇಗೆ ಟ್ರೋಲ್ ಆಗ್ತಾರೆ ಅಂತ ಅವರಿಗೇ ಗೊತ್ತಿರಲ್ಲ.

     

  • ರಾಜಕೀಯ ಎಂಟ್ರಿ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದು ಹೀಗೆ

    ರಾಜಕೀಯ ಎಂಟ್ರಿ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದು ಹೀಗೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಕೇಳಿ ಬರುತಿತ್ತು. ಇದಕ್ಕೆ ಸ್ವತಃ ದರ್ಶನ್ ಪ್ರತಿಕ್ರಿಯಿಸಿ ಕಂಡ ಕಂಡವರಿಗೆ ಸಲಾಮು ಒಡೆಯುವ ಜಾಯಮಾನ ನನ್ನದಲ್ಲ. ಸಲಾಮು ಸಂಸ್ಕøತಿ ಇರುವ ರಾಜಕಾರಣ ನನಗೆ ಹೊಂದಿಕೆ ಆಗುವುದಿಲ್ಲ. ಹೀಗಾಗಿ ರಾಜಕೀಯಕ್ಕೆ ಸೇರುವ ಆಸಕ್ತಿಯೂ ನನಗಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.

    ಶಾಸಕ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದ ಶೂಟಿಂಗ್ ವೇಳೆ ಪ್ರತಿಕ್ರಿಯಿಸಿದ ಅವರು, ನಾನೊಬ್ಬ ಸಿನಿಮಾ ನಟ, ರಾಜಕೀಯಕ್ಕೆ ಬರುವುದಾಗಿ ಹಬ್ಬಿರುವ ಸುದ್ದಿಗಳು ಸುಳ್ಳು. ಹಾಗೊಂದು ವೇಳೆ ನಾನು ರಾಜಕೀಯಕ್ಕೆ ಹೋಗುವುದೇ ಆದರೆ ಮೊದಲೇ ಬಹಿರಂಗವಾಗಿ ಹೇಳಿಯೇ ಹೋಗುತ್ತೇನೆ. ಗುಟ್ಟಾಗಿ ರಾಜಕೀಯಕ್ಕೆ ಹೋಗುವ ಅಗತ್ಯ ಹಾಗೂ ಅನಿವಾರ್ಯತೆ ನನಗಿಲ್ಲ. ಅಲ್ಲದೆ ಗುಟ್ಟಾಗಿ ರಾಜಕೀಯ ಮಾಡಕ್ಕೂ ಆಗಲ್ಲ ಎಂದು ತಿಳಿಸಿದರು.

    ಇದನ್ನೂ ಓದಿ: ಕಾಂಗ್ರೆಸ್‍ಗೆ ಸೇರ್ಪಡೆಯಾಗ್ತೀರಾ: ಮಾಧ್ಯಮಗಳ ಪ್ರಶ್ನೆಗೆ ದರ್ಶನ್ ತಾಯಿ ಪ್ರತಿಕ್ರಿಯೆ ಹೀಗಿತ್ತು

    ಸದ್ಯಕ್ಕೆ ನನ್ನ ಹೆಸರಿನ ಸುತ್ತ ಏನೇ ರಾಜಕೀಯದ ಮಾತು, ಸುದ್ದಿಗಳು ಕೇಳಿಬಂದರೆ ಅದು ಸುಳ್ಳು. ರಾಜಕಾರಣದಲ್ಲಿರುವವರು ಕಂಡ ಕಂಡವರಿಗೆ ಕೈ ಮುಗಿಯಬೇಕು. ಖಾದಿ ತೊಟ್ಟರೆ ಹೆಜ್ಜೆ ಹೆಜ್ಜೆಗೂ ಸಲಾಮು ಹೊಡೆಯಬೇಕು. ಸಲಾಮು ಹೊಡೆಯದಿದ್ದರೆ ಈ ರಾಜಕೀಯ ಪಡಸಾಲೆಯಲ್ಲಿ ನಾವು ಬಾಳಿಕೆ ಬರಲ್ಲ ಅಂತ ನನಗೆ ಗೊತ್ತು. ಆದರೆ ನನಗೆ ಯಾರ ಮುಂದೆಯೂ ಸಲಾಮು ಮಾಡುವ ಅಭ್ಯಾಸವಿಲ್ಲ. ಅಂಥ ವಾತಾವರಣದಲ್ಲಿ ನಾನು ಬೆಳೆದಿಲ್ಲ ಎಂದು ಪ್ರತಿಕ್ರಿಯಿಸಿದರು.

     

    ಓಟು ಹಾಕಿದ ಜನ ಕೂಡ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇದೆಲ್ಲ ನಮಗೆ ಯಾಕೆ ಬೇಕು ಹೇಳಿ. ರಾಜಕಾರಣ ಅಂದ ಮೇಲೆ ಅದೆಲ್ಲವೂ ಇರುತ್ತದೆ ನಿಜ, ಆದರೂ ನನಗೆ ಅಂತ ವಾತಾವರಣ ಆಗಿ ಬರಲ್ಲ. ಹೀಗಾಗಿ ಸಿನಿಮಾ ಬಿಟ್ಟು ನಾನು ರಾಜಕೀಯ ಸೇರುತ್ತೇನೆ ಎಂಬುದು ಸುಳ್ಳು. ಸದ್ಯಕ್ಕೆ ಸಿನಿಮಾ ಮಾಡಿಕೊಂಡು ಇರುತ್ತೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ?

    https://youtu.be/fwAT9FG_4-g

  • ರಾಜ್ಯಕ್ಕೆ ಬರ್ತಾರಾ ಎಂಐಎಂ ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ- ಯಾವ ಪಕ್ಷಕ್ಕೆ ಕಂಟಕ? ಯಾರಿಗೆ ಲಾಭ?

    ರಾಜ್ಯಕ್ಕೆ ಬರ್ತಾರಾ ಎಂಐಎಂ ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ- ಯಾವ ಪಕ್ಷಕ್ಕೆ ಕಂಟಕ? ಯಾರಿಗೆ ಲಾಭ?

    ಬೆಂಗಳೂರು: ಕರ್ನಾಟಕ ಸದ್ಯ ಚುನಾವಣೆಯ ಹೊಸ್ತಿಲಿನಲ್ಲಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಚುನಾವಣೆಗಾಗಿ ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿವೆ. ಚುನಾವಣಾ ರಂಗ ಕಾವೇರಿತ್ತಲೇ ಸದ್ಯ ಎಂಐಎಂ(ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹದ್-ಉಲ್ ಮುಸ್ಲಿಮೀನ್) ಪಕ್ಷದ ಸಂಸ್ಥಾಪಕ ಅಸಾದುದ್ದೀನ್ ಓವೈಸಿ ಚುನಾವಾಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

    2018ರ ಚುನಾವಣೆಗೆ ರಾಜ್ಯದ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಂಐಎಂ ಸ್ಪರ್ಧೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಓವೈಸಿ ಅವರು ಪ್ರಮುಖವಾಗಿ ನಗರ ಕೇಂದ್ರಿಕೃತ ಪ್ರದೇಶಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೀಳಿಸುವ ಸಾಧ್ಯತೆಗಳಿವೆ. ಕಲಬುರಗಿ, ರಾಯಚೂರು, ಮಂಗಳೂರು, ಕೊಪ್ಪಳ ಮತ್ತು ಬೆಂಗಳೂರಿನ ಶಿವಾಜಿನಗರ, ಶಾಂತಿನಗರ, ಹೆಬ್ಬಾಳ, ಸರ್ವಜ್ಞನಗರ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ.

    ಮಂಗಳೂರು, ಮಂಗಳೂರು ಉತ್ತರ ಕ್ಷೇತ್ರ, ಕಲಬುರಗಿ ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರ, ರಾಯಚೂರು ನಗರ ವಿಧಾನಸಭಾ ಕ್ಷೇತ್ರ, ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರ ಸೇರಿದಂತೆ ನಗರ ಪ್ರದೇಶಗಳ ಮೇಲೆ ಓವೈಸಿ ಕಣ್ಣಿಟ್ಟಿದ್ದಾರೆ.

    ಯಾರಿಗೆ ಲಾಭ: ಉತ್ತರ ಪ್ರದೇಶದ ಚುನಾವಣೆಯಲ್ಲಿ ಎಂಐಎಂ ಪಕ್ಷ ಕಣಕ್ಕಿಳಿದಿತ್ತು. 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಂಐಎಂ ಪಕ್ಷದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಪಿ ವಿರುದ್ಧ ಬಣಗಳ ಆಭ್ಯರ್ಥಿಗಳ ಗೆಲುವಿಗೆ ಎಂಐಎಂ ಬ್ರೇಕ್ ಹಾಕಿತ್ತು. ಎಂಐಎಂ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಕೂದಲೆಳೆಯ ಅಂತರದಲ್ಲಿ ಗೆಲುವನ್ನು ಕಂಡಿತ್ತು.

    ಯಾರಿಗೆ ನಷ್ಟ: ಎಂಐಎಂ ಕರ್ನಾಟಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರೆ ಅಲ್ಪಸಂಖ್ಯಾತ ನಾಯಕರಲ್ಲಿ ಸೋಲಿನ ಭಯ ಕಾಣಿಸಿಕೊಳ್ಳಬಹುದು. ಸಚಿವ ಕೆ.ಜೆ.ಜಾರ್ಜ್, ರೋಷನ್ ಬೇಗ್, ಶಾಸಕರಾದ ಜಮೀರ್ ಅಹಮದ್, ಹ್ಯಾರಿಸ್ ಅವರಿಗೂ ಎಂಐಎಂ ಕಂಟಕವಾಗಬಹುದು ಎಂದು ಹೇಳಲಾಗುತ್ತಿದೆ.

    ಎಂಐಎಂ ಸ್ಪರ್ಧೆಯಿಂದ ಬಿಜೆಪಿ 10ರಿಂದ 15 ಕ್ಷೇತ್ರಗಳಲ್ಲಿ ಸರಳವಾಗಿ ಗೆಲುವನ್ನು ಸಾಧಿಸುತ್ತಾ? ಅಲ್ಪಸಂಖ್ಯಾತ ಮತಗಳು ವಿಭಜನೆಯಾದರೆ ಇದು ಕಾಂಗ್ರೆಸ್ ಗೆ ಭಾರೀ ಹೊಡೆತವಾಗುತ್ತಾ? ಮುಸ್ಲಿಂ ಮತಗಳನ್ನು ಸೆಳೆಯುವಲ್ಲಿ ಓವೈಸಿ ಸಫಲರಾಗ್ತಾರಾ? ಓವೈಸಿ ಹೊಡೆತಕ್ಕೆ ನಲುಗುವವರು ಯಾರು? ಲಾಭ ಪಡೆಯುವರು ಯಾರು? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

  • ಕಾಂಗ್ರೆಸ್‍ಗೆ ಸೇರ್ಪಡೆಯಾಗ್ತೀರಾ: ಮಾಧ್ಯಮಗಳ ಪ್ರಶ್ನೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು

    ಕಾಂಗ್ರೆಸ್‍ಗೆ ಸೇರ್ಪಡೆಯಾಗ್ತೀರಾ: ಮಾಧ್ಯಮಗಳ ಪ್ರಶ್ನೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು

    ಬೆಂಗಳೂರು: ರಾಜಕೀಯ ಸೇರ್ಪಡೆ ಸುದ್ದಿ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದೇ ನಟ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ.

    ನಗರದಲ್ಲಿ `ಲೈಫ್ ಜೊತೆ ಒಂದು ಸೆಲ್ಫೀ’ ಚಿತ್ರದ ಮುಹೂರ್ತ ಕಾರ್ಯಕ್ರಮದದಲ್ಲಿ ದರ್ಶನ್ ಇಂದು ಪಾಲ್ಗೊಂಡಿದ್ದರು. ಈ ವೇಳೆ ಚಿತ್ರ ತಂಡಕ್ಕೆ ದರ್ಶನ್ ಶುಭಾಶಯ ಹೇಳಿದರು.

    ಈ ಸಂದರ್ಭದಲ್ಲಿ ಮಾಧ್ಯಮಗಳು ರಾಜಕೀಯ ಸೇರ್ಪಡೆ ವಿಚಾರದ ಬಗ್ಗೆ ಪ್ರಶ್ನೆ ಕೇಳಲು ಸರ್ ಸರ್ ಎಂದು ಕರೆದಾಗ ದರ್ಶನ್ ಮೌನಕ್ಕೆ ಶರಣಾಗಿ ಮುಂದಕ್ಕೆ ಹೊರಟು ಹೋದರು.

    ಮುಹೂರ್ತ ಕಾರ್ಯಕ್ರಮದಲ್ಲಿ ದರ್ಶನ್‍ತಾಯಿ ಮೀನ ತೂಗುದೀಪ್ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ, ಸದ್ಯಕ್ಕೆ ರಾಜಕೀಯದ ಬಗ್ಗೆ ಪ್ರಸ್ತಾಪವಿಲ್ಲ. ಕಾಂಗ್ರೆಸ್ ಗೆ ಸೇರ್ಪಡೆಯಾಗುವ ವಿಚಾರವೂ ನಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು.

    ಮಗನ ರಾಜಕೀಯ ಸೇರ್ಪಡೆಯ ಬಗ್ಗೆ ನಿಮ್ಮ ಇಚ್ಛೆ ಏನು ಎಂದು ಕೇಳಿದ್ದಕ್ಕೆ, ರಾಜಕೀಯಗೆ ಸೇರ್ಪಡೆಯಾಗುವುದು ಮಗನ ವೈಯಕ್ತಿಕ ವಿಚಾರ. ನನ್ನ ಇಚ್ಛೆ ಏನಿಲ್ಲ ಎಂದು ತಿಳಿಸಿದರು.

    ದರ್ಶನ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಪ್ರತಿಕ್ರಿಯಿಸಿ, ನಟ ದರ್ಶನ್ ಜೊತೆ ಕಾಂಗ್ರೆಸ್‍ನ ಯಾವ ನಾಯಕರು ಚರ್ಚೆ ನಡೆಸಿಲ್ಲ. ದರ್ಶನ್ ಕಾಂಗ್ರೆಸ್ ಸೇರ್ಪಡೆ ವಿಚಾರದಲ್ಲಿ ನಾವ್ಯಾರು ಮಾತುಕತೆ ನಡೆಸಿಲ್ಲ. ದರ್ಶನ್ ಜೊತೆ ನಮ್ಮವರು ಮಾತುಕತೆ ನಡೆಸಿರೋದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.

    ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ನಮ್ಮ ಪಕ್ಷದಲ್ಲಿದ್ದು, ಕೆಪಿಸಿಸಿ ಕಾರ್ಯದರ್ಶಿಯಾಗಿದ್ದಾರೆ. ತಾಯಿ ಜೊತೆ ಅವರು ರಾಜಕೀಯದಲ್ಲಿ ಗುರುತಿಸಿಕೊಂಡರೆ ನಮಗೂ ಖುಷಿ. ದರ್ಶನ್ ಕಾಂಗ್ರೆಸ್ ಸೇರ್ಪಡೆಯಾದ್ರೆ ನಮಗೂ ಸಂತೋಷ ಎಂದು ಹೇಳಿದರು.

    ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ?

  • ರಾಜಕೀಯ ಪ್ರವೇಶದ ಬಗ್ಗೆ ಬಿಗ್‍ಬಾಸ್ ಪ್ರಥಮ್ ನ ಮನದಾಳದ ಮಾತು

    ರಾಜಕೀಯ ಪ್ರವೇಶದ ಬಗ್ಗೆ ಬಿಗ್‍ಬಾಸ್ ಪ್ರಥಮ್ ನ ಮನದಾಳದ ಮಾತು

    ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ತಮ್ಮ ಮನಸ್ಸಿನ ಮಾತನ್ನು ಬಿಚ್ಚಿಟಿದ್ದಾರೆ. ಈಗಾಗಲೇ ಎಂಎಲ್‍ಎ ಚಿತ್ರದಲ್ಲಿ ನಿರತರಾಗಿದ್ದು, ಜನ ಆಸೆ ಪಟ್ಟರೆ ಮುಂದಿನ ದಿನಗಳಲ್ಲಿ ಸಮಯ ಸಂದರ್ಭ ನೋಡಿಕೊಂಡು ರಾಜಕೀಯ ಪ್ರವೇಶ ಮಾಡುವುದಾಗಿ ಪ್ರಥಮ್ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಹೇಳಿದ್ದಾರೆ.

    ಬುಧವಾರ ರಾತ್ರಿ ಪಟ್ಟಣದಲ್ಲಿ ಅದ್ಧೂರಿಯಾಗಿ ಗಣೇಶ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಥಮ್ ಧಾರ್ಮಿಕ ಕಾರ್ಯಕ್ರಮಗಳಿಗೆ ಮೊದಲಿನಿಂದಲ್ಲೂ ನಾನು ಭೇಟಿ ನೀಡುತ್ತಿದ್ದೇನೆ. ಹಾಗಾಗಿ ಸಿದ್ಧಿ ಬುದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬಂದಿದ್ದು ಖುಷಿಯಾಗಿದೆ ಎಂದು ಹೇಳಿದ್ರು.

    ಇನ್ನೂ ನನಗೆ ಯಾರು ಅಭಿಮಾನಿಗಳಿಲ್ಲ ಎಲ್ಲಾರು ನನಗೆ ಹಿತೈಷಿಗಳಿದ್ದಾರೆ. ವಿವೇಕಾನಂದ, ವಿಶ್ವೇಶ್ವರಯ್ಯ, ಪುನೀತ್ ರಾಜ್‍ಕುಮಾರ್, ಶಿವರಾಜ್‍ಕುಮಾರ್ ಅಂತಹ ದೊಡ್ಡ ಸಾಧಕರಿಗೆ ಅಭಿಮಾನಿಗಳಿದ್ದಾರೆ. ಈಗಾಗಲೇ ಬಿಗ್ ಬಾಸ್ ಬಳಿಕ ನಾಲ್ಕು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದೇನೆ ಎಂದು ತಿಳಿಸಿದ್ರು.

    ಇನ್ನೂ ಮುಂದಿನ ಚುನಾವಣೆಯಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಕೇಳಿದ ಪ್ರಶ್ನೆಗೆ ರಾಜಕೀಯದ ಬಗ್ಗೆ ಮಾತನಾಡುವುದಕ್ಕೆ ನಿರ್ಧಿಷ್ಟವಾದ ಸಮಯ ಬರುತ್ತೆ ಆಗ ಮಾತನಾಡುತ್ತೇನೆ ಎಂದು ಪ್ರಥಮ್ ಉತ್ತರಿಸಿದ್ದರು. ರವಿ ಕಾಣದನ್ನು ಕವಿ ಕಾಣುತ್ತಾನೆ ಇವರಿಬ್ಬರೂ ಕಾಣದನ್ನು ಮಾಧ್ಯಮದವರು ಕಾಣುತ್ತಾರೆ ನಿಮ್ಮ ಕಣ್ಣು ತಪ್ಪಿಸಿ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಪ್ರಥಮ್ ತಿಳಿಸಿದ್ರು.

    ಮುಂದಿನ ದಿನಗಳಲ್ಲಿ ಜನ ಆಸೆ ಪಟ್ಟರೆ ತೀರ್ಮಾನ ತೆಗೆದುಕೊಳ್ಳುತ್ತೇನೆ, ಅತೀ ಶೀಘ್ರದಲ್ಲೇ ಎಲ್ಲವೂ ಗೊತ್ತಾಗುತ್ತದೆ. ಸದ್ಯಕ್ಕೆ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸುತ್ತೇನೆ ಎಂದು ಹೇಳಿದ್ದರು. ಏನೇ ಆದರೂ ಒಳ್ಳೆ ಹುಡುಗ ಪ್ರಥಮ್ ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶ ಮಾಡುವುದು ಖಚಿತವಾಗಿದೆ.

  • ರಿಯಲ್ ಸ್ಟಾರ್ ಉಪ್ಪಿಯ ರಾಜಕೀಯ ಪಕ್ಷದ ಹೆಸರು ಬಹಿರಂಗ

    ರಿಯಲ್ ಸ್ಟಾರ್ ಉಪ್ಪಿಯ ರಾಜಕೀಯ ಪಕ್ಷದ ಹೆಸರು ಬಹಿರಂಗ

    ಬೆಂಗಳೂರು: ರಾಜಕೀಯಕ್ಕೆ ಬರೋದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಅವ್ರ ಪಾರ್ಟಿ ಹೆಸರೇನು? ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

    ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರ ರಾಜಕೀಯ ಪಕ್ಷದ ಹೆಸರು ಬಯಲಾಗಿದೆ. ಉಪೇಂದ್ರ ಅವರ ಪಕ್ಷದ ಹೆಸರು ಪ್ರಜಾಕಾರಣ ಅಲ್ಲ, ಪ್ರಜಾಕೀಯವೂ ಅಲ್ಲ. ಬದಲಾಗಿ ಉಪ್ಪಿಯ ಪೊಲಿಟಿಕಲ್ ಪಾರ್ಟಿ ಹೆಸರು `ಉತ್ತಮ ಪ್ರಜಾ ಪಾರ್ಟಿ’ ಎಂದು ತಿಳಿದುಬಂದಿದೆ. ಸದಸ್ಯತ್ವ ನೋಂದಣಿ ಅರ್ಜಿಯಲ್ಲಿ ಉಪ್ಪಿ ಪಕ್ಷದ ಹೆಸರು ಬಹಿರಂಗವಾಗಿದೆ.

    ಈಗಾಗಲೇ ತಮ್ಮ ಆಪ್ತರ ಜೊತೆ ಸರಣಿ ಸಭೆ ನಡೆಸುತ್ತಿರುವ ಉಪೇಂದ್ರ, ತಮ್ಮ ಹೊಸ ಪಕ್ಷದ ಸದಸ್ಯತ್ವ ಪಡೆಯಲು ಬಯಸುವವರಿಗೆ ಅರ್ಜಿ ರೆಡಿ ಮಾಡಿದ್ದಾರೆ. ಶೀಘ್ರವೇ ರಾಜ್ಯದ ವಿವಿಧೆಡೆ ಸುತ್ತಾಡಿ ಜನರ ಅಭಿಪ್ರಾಯ ಸಂಗ್ರಹಿಸಲು ಉಪೇಂದ್ರ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

    https://www.youtube.com/watch?v=yA2a-QU2DuI

  • ರಾಜ್ಯ ರಾಜಕಾರಣದಲ್ಲಿ ಪ್ರಜಾಕೀಯದ ಹೊಂಬೆಳಕು-ಐಡಿಯಾಲಜಿ ಬಗ್ಗೆ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಉಪ್ಪಿ ಹೀಗಂದ್ರು

    ರಾಜ್ಯ ರಾಜಕಾರಣದಲ್ಲಿ ಪ್ರಜಾಕೀಯದ ಹೊಂಬೆಳಕು-ಐಡಿಯಾಲಜಿ ಬಗ್ಗೆ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಉಪ್ಪಿ ಹೀಗಂದ್ರು

    ಬೆಂಗಳೂರು: ರಾಜಕೀಯ ವಲಯದಲ್ಲಿರೋ ಕೊಳೆ ತೆಗೆದು ಕಳೆ ತರುವ ಪ್ರಯತ್ನದಲ್ಲಿ ರಿಯಲ್‍ಸ್ಟಾರ್ ಉಪೇಂದ್ರ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಶನಿವಾರ ಪಬ್ಲಿಕ್ ಟಿವಿ ಜೊತೆಗಿನ ಸಂದರ್ಶನದಲ್ಲಿ ತಮ್ಮ ಪ್ರಜಾಕೀಯ ಕಾನ್ಸೆಪ್ಟ್ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ರು.

    ಉಪ್ಪಿ ಐಡಿಯಾಲಜಿಗೆ ಸಾಕ್ಷಿಯಾದ ಅವರ ಅಭಿಮಾನಿಗಳ ಪ್ರಶ್ನೆ, ಗೊಂದಲಕ್ಕೂ ಉತ್ತರಿಸಿದ್ರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಅಲ್ಟಿಮೇಟ್ ಅನ್ನೋದನ್ನ ನಿರೂಪಿಸಲು ಪ್ರತಿಯೊಬ್ಬನೂ ಕಾರ್ಮಿಕನಾಗಿ ದುಡಿದ್ರೆ ಅಷ್ಟೇ ಸಾಕು. ಜನರ ಅಭಿಪ್ರಾಯಗಳಿಗಾಗಿ ಇಮೇಲ್ ಐಡಿ ಕೊಟ್ಟಿದ್ದೀನಿ. ಅವರಿಂದ ಬರೋ ಅಭಿಪ್ರಾಯ, ಸಲಹೆ ಸೂಚನೆಯೇ ಮುಂದಿನ ದಾರಿಯಾಗುತ್ತೆ ಅಂದ್ರು.

    2018ರ ಎಲೆಕ್ಷನ್‍ಗೆ ಅಭ್ಯರ್ಥಿಗಳನ್ನ ನಿಲ್ಲಿಸ್ತೀರಾ ಎಂಬ ಪ್ರಶ್ನೆಗೆ ಸದ್ಯಕ್ಕೆ ನಾನಂತೂ ನಿಲ್ತೀನಿ. ನನ್ ಜೊತೆಗೇ ಬರೋರಿದ್ರೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಅಂತ ಹೇಳಿದ್ರು.

    ಇದನ್ನೂ ಓದಿ: ಉಪ್ಪಿ ರಾಜಕಾರಣಕ್ಕೆ ಎಂಟ್ರಿ-ಹೇಗಿರಲಿದೆ ಉಪ್ಪಿ ಪಕ್ಷ? ಇಲ್ಲಿದೆ ಉತ್ತರ

    https://www.youtube.com/watch?v=bZaGWvf-YS8

    https://www.youtube.com/watch?v=ZO-DYDHeKHM